ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ರಾಧಾಕೃಷ್ಣ,ಶಿಕ್ಷಕಿಯರಾದ ನಾಗವೇಣಿ, ಬೀಬಿ ಆಯುಷಾ, ಉಮಾದೇವಿ, ಅಶ್ವಿನಿ, ದೀಪ, ಅನುಶ್ರೀ, ದಿವ್ಯಶ್ರೀ, ನೇತ್ರಾವತಿ, ಸೇರಿದಂತೆ ಇತರೆ ಶಿಕ್ಷಕಿಯರು ಇದ್ದರು.( ಚಿತ್ರ ಇದೆ ಬಳಸಿ ) ಚಿತ್ರ : ಶಾಲೆಯಲ್ಲಿ ಮಕ್ಕಳು ಪರಸ್ಪರ ರಾಕಿಯನ್ನು ಕಟ್ಟುತ್ತಿರುವುದು, ರಕ್ಷಾಬಂಧನ ಕೇವಲ ರಾಖಿಯಲ್ಲ, ಸಂಬಂಧಗಳನ್ನು ಬೆಸೆಯುವ ಪ್ರೀತಿಯ ಬಂಧ: ಕೆ.ಎಸ್.ವಿ. ರಘು ಕೊರಟಗೆರೆ: ರಕ್ಷಾಬಂಧನ ಕೇವಲ ಅಣ್ಣ–ತಂಗಿಯರ ಕೈಗೆ ರಾಖಿ ಕಟ್ಟುವ ಹಬ್ಬವಲ್ಲ. ಇದು ಪ್ರೀತಿ, ವಿಶ್ವಾಸ, ಪರಸ್ಪರ ಗೌರವ, ಜವಾಬ್ದಾರಿ ಹಾಗೂ ಸಾಮಾಜಿಕ ಏಕತೆಯ ಸಂದೇಶ ಸಾರುವ ಭಾರತೀಯ ಸಂಸ್ಕೃತಿಯ ಮಹತ್ವದ ಹಬ್ಬವಾಗಿದೆ ಎಂದು ಕನ್ನಿಕಾ ವಿದ್ಯಾಪೀಠ ಶಾಲೆಯ ಕಾರ್ಯದರ್ಶಿ ಕೆ.ಎಸ್.ವಿ. ರಘು ಹೇಳಿದರು. ಪಟ್ಟಣದ ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ ರಕ್ಷಾಬಂಧನದ ಅಂಗವಾಗಿ ಮಾತನಾಡಿದ ಅವರು, ರಾಖಿಯ ದಾರ ಸಣ್ಣದಾದರೂ ಅದರೊಳಗಿನ ಪ್ರೀತಿ, ವಿಶ್ವಾಸ ಮತ್ತು ಜವಾಬ್ದಾರಿಯ ಭಾವನೆ ಬಹಳ ದೊಡ್ಡದು. ಸಹೋದರ–ಸಹೋದರಿಯರು ಪರಸ್ಪರರ ಕಷ್ಟ–ಸುಖಗಳಲ್ಲಿ ಬೆಂಬಲವಾಗಿ ನಿಂತು, ಒಬ್ಬರ ಗೌರವ, ಸುರಕ್ಷತೆ ಮತ್ತು ಭವಿಷ್ಯವನ್ನು ಕಾಪಾಡುವ ಸಂಕಲ್ಪ ಮಾಡುವುದು ರಕ್ಷಾಬಂಧನದ ನಿಜವಾದ ಆಶಯ ಎಂದರು. ಇಂದಿನ ಮಕ್ಕಳಿಗೆ ರಾಖಿಯ ಮಹತ್ವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅದರ ಹಿಂದಿರುವ ಮೌಲ್ಯಗಳನ್ನು ತಿಳಿಸಬೇಕು. ಹೆಣ್ಣಿಗೆ ಗೌರವ, ಸಮಾನ ಅವಕಾಶ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸುವುದೇ ನಿಜವಾದ ರಕ್ಷಣೆ. ಸಹೋದರ–ಸಹೋದರಿಯರು ಪರಸ್ಪರರ ಕನಸುಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು. ಮುಖ್ಯ ಶಿಕ್ಷಕರ ರಾಘವೇಂದ್ರ ಡಿ.ಎಂ ಮಾತನಾಡಿ ಶ್ರೀಕೃಷ್ಣ–ದ್ರೌಪದಿ ಹಾಗೂ ಇಂದ್ರ–ಶಚಿದೇವಿಯ ಪ್ರಸಂಗಗಳು ರಕ್ಷಣಾ ಸೂತ್ರದ ಮಹತ್ವವನ್ನು ಸಾರುತ್ತವೆ. ರಾಣಿ ಕರ್ಣಾವತಿ–ಹುಮಾಯೂನ್ ಪ್ರಸಂಗವೂ ಜನಪ್ರಿಯ ಪರಂಪರೆಯಲ್ಲಿ ಧರ್ಮ, ಜಾತಿ ಹಾಗೂ ರಾಜಕೀಯ ಗಡಿಗಳನ್ನು ಮೀರಿ ಮಾನವೀಯ ಸಂಬಂಧದ ಸಂಕೇತವಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು. ರಕ್ಷಾಬಂಧನವನ್ನು ಸಾಮಾಜಿಕ ಏಕತೆ ಮತ್ತು ಸಹೋದರತ್ವದ ಸಂಕೇತವಾಗಿ ಆಚರಿಸುವ ಪರಂಪರೆಯೂ ಇದೆ. ಜಾತಿ, ವರ್ಗ, ಭಾಷೆ ಹಾಗೂ ಪ್ರದೇಶದ ಭೇದಗಳನ್ನು ಮೀರಿ ಪರಸ್ಪರ ಗೌರವದಿಂದ ಬದುಕುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮತ್ತು ಸಮಾಜದ ಒಳಿತಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ರಾಧಾಕೃಷ್ಣ,ಶಿಕ್ಷಕಿಯರಾದ ನಾಗವೇಣಿ, ಬೀಬಿ ಆಯುಷಾ, ಉಮಾದೇವಿ, ಅಶ್ವಿನಿ, ದೀಪ, ಅನುಶ್ರೀ, ದಿವ್ಯಶ್ರೀ, ನೇತ್ರಾವತಿ, ಸೇರಿದಂತೆ ಇತರೆ ಶಿಕ್ಷಕಿಯರು ಇದ್ದರು.( ಚಿತ್ರ ಇದೆ ಬಳಸಿ ) ಚಿತ್ರ : ಶಾಲೆಯಲ್ಲಿ ಮಕ್ಕಳು ಪರಸ್ಪರ ರಾಕಿಯನ್ನು ಕಟ್ಟುತ್ತಿರುವುದು,

- ಧನ-ಧಾನ್ಯ ಸಮೃದ್ಧಿಗಾಗಿ ಕಂಬಳಿಪುರ ಕಾಟೇರಮ್ಮ ಸನ್ನಿಧಿಯಲ್ಲಿ ವಿಶೇಷ ಕುಬೇರ ಮಹಾಲಕ್ಷ್ಮೀ ಪೂಜೆ1
- ಇಂದು ಜಿಲ್ಲಾಡಳಿತ ಭವನದಲ್ಲಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆ: ನುಲಿಯ ಚಂದಯ್ಯನವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ, ಕಾಯಕಕ್ಕೆ ಗೌರವ ನೀಡಬೇಕು ಎಂಬ ಸಂದೇಶವನ್ನು ಸಾರಿದರು. ಜೀವನದಲ್ಲಿ ಶ್ರಮ, ಪ್ರಾಮಾಣಿಕತೆ, ಭಕ್ತಿ ಮತ್ತು ಸಮಾನತೆಗೆ ವಿಶೇಷ ಸ್ಥಾನಮಾನ ನೀಡಿದ್ದರು. ಈ ಮಹಾನ್ ಶರಣರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು. ಇಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಹಾಗೂ ತತ್ವಜ್ಞಾನಿ, ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ನುಲಿಯ ಚಂದಯ್ಯನವರು 12ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರು. ಅವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ನುಲಿಯ ಚಂದಯ್ಯನವರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಜಾತಿ-ಭೇದ, ಅಹಂಕಾರ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ನೀಡಿದರು. ಅವರ ವಚನಗಳು ಮತ್ತು ಜೀವನಾದರ್ಶಗಳು ಇಂದಿಗೂ ನಮಗೆ ಸ್ಪೂರ್ತಿಯಾಗಿವೆ ಎಂದರು. ನಾವು ನುಲಿಯ ಚಂದಯ್ಯನವರ ಜೀವನದಿಂದ ಪ್ರಾಮಾಣಿಕವಾಗಿ ದುಡಿಯುವುದು, ಎಲ್ಲರನ್ನು ಸಮಾನವಾಗಿ ಗೌರವಿಸುವುದು ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸುವುದು ಎಂಬ ಗುಣಗಳನ್ನು ಕಲಿಯಬೇಕು ಎಂದು ತಿಳಿಸಿದರು. ಮಹಾನ್ ಸಮಾಜ ಸುಧಾರಕ, ತತ್ವಜ್ಞಾನಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಜಾತಿ ಭೇದ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಎಲ್ಲ ಮನುಷ್ಯರೂ ಸಮಾನರು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಸಾರಿದರು. "ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಮನುಷ್ಯನಿಗೆ" ಎಂಬ ಅವರ ಮಹತ್ವದ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಸಾಧನ ಎಂದು ನಂಬಿದ್ದ ಅವರು, ಜನರಲ್ಲಿ ಶಿಕ್ಷಣ, ಸ್ವಾಭಿಮಾನ, ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಲು ಶ್ರಮಿಸಿದರು. ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ನಮಗೆ ಸದಾ ಸ್ಫೂರ್ತಿಯಾಗಿವೆ. ನಾವು ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜಾತಿ-ಮತ ಭೇದವಿಲ್ಲದೆ ಎಲ್ಲರನ್ನು ಗೌರವಿಸೋಣ. ಶಿಕ್ಷಣ ಪಡೆದು, ಸಮಾಜದ ಒಳಿತಿಗಾಗಿ ಕೆಲಸ ಮಾಡೋಣ ಮತ್ತು ಸಮಾನತೆ ಹಾಗೂ ಸಹೋದರತ್ವವನ್ನು ಬೆಳೆಸೋಣ ಎಂದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಚಂದ್ರಣ್ಣ ಮಾತನಾಡಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನದ ಆದರ್ಶ, ಅವರ ಸೇವೆಯನ್ನು ಸ್ಮರಿಸಿದರು. ಸಮಾಜದಲ್ಲಿ ಅವರ ಆದರ್ಶ ತತ್ವಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಬಿ. ಕೃಷ್ಣಪ್ಪ ಮಾತನಾಡಿ ನುಲಿಯ ಚಂದಯ್ಯ ಅವರು ಹಗ್ಗ ಒಸೆದು ಸಂತೆಯಲ್ಲಿ ಮಾರಿ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಕಾಯಕ ನಿಷ್ಠೆಗೆ ಮಹತ್ವವನ್ನು ನೀಡಿದ್ದರು ಎಂದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಎಂಬ ಸಂದೇಶವನ್ನು ಸಾರಿದ್ದಾರೆ. ಅವರ ತತ್ವ ಆದರ್ಶಗಳು ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ ಎಂದರು. ಕಾರ್ಯಕ್ರಮದಲ್ಲಿ ಕೊರಮ ಜನಾಂಗ ಸಂಘದ ಉಪಾಧ್ಯಕ್ಷ ಚೆನ್ನಕೇಶವ, ಮಾಜಿ ಅಧ್ಯಕ್ಷ ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕಲ್ಪನ ಆರ್, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.3
- ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ1
- ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಚಿವ ನಾಗೇಂದ್ರ ಬಿಜೆಪಿ ಪಾದಯಾತ್ರೆ ವಿಚಾರ. ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ. ದೇವನಹಳ್ಲಿ ಏರ್ಪೋರ್ಟ್. ಬಿಜೆಪಿ ಪಾದಯಾತ್ರೆ ವಿಚಾರ. ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ. ಇದೆಲ್ಲಾ ಒಂದು ಕುತಂತ್ರದಿಂದ ಮಾಡಿರುವತಂದ್ದು. ನಾನು ದಲಿತನೇ ನಾನು. ಈ ಮನುವಾದಿಗಳ ಹತ್ತಿರ ಜಗಳ ಆಡಬೇಕು ಅಂದರೆ ದಲಿತರ ಪರವಾಗಿ ಇವತ್ತಲ್ಲಾ ಅನಾದಿಕಾಲದಿಂದಲೂ ಬಂದಿದೆ. ಏರ್ಪೋರ್ಟ್ ನಲ್ಲಿ ಸಚಿವ ನಾಗೇಂದ್ರ ಹೇಳಿಕೆ2
- ಸುದ್ದಿಗೊಷ್ಠಿ ಮದ್ಯೆ ಕಣ್ಣೀರಾಕಿದ ಸಚಿವ ನಾಗೇಂದ್ರ... ಕಣ್ಣೀರಾಕಿ ರಾಜೀನಾಮೆ ಘೋಷಿಸಿದ ನಾಗೇಂದ್ರ. ಶಾಸಕ ಸ್ಥಾನಕ್ಕೂ ರಾಜೀನಾಮೆ ನಿಡ್ತಿನಿ...!? ಬೆಂಗಳೂರು, ಆ.28: ವಿಧಾನಸೌಧದಲ್ಲಿ ಸಚಿವರಾದ ಬಿ. ನಾಗೇಂದ್ರ, ಅಜಯ್ ಸಿಂಗ್, ರಿಜ್ವಾನ್ ಅರ್ಷದ್, ನಾಸೀರ್ ಅಹಮದ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರ ಜಂಟಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಬಿ. ನಾಗೇಂದ್ರ, ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ ವಿಪಕ್ಷದವರು ಸದನವನ್ನೇ ನಡೆಯಲು ಬಿಡಲಿಲ್ಲ ಎಂದು ಆರೋಪಿಸಿದರು. “ವಿಪಕ್ಷದವರು ಮನುಸ್ಮೃತಿಯನ್ನು ಜಾರಿಗೆ ತರಲು ಹೊರಟಿದ್ದಾರೆ. ಅವರಿಗೆ ಇದು ಯಾವ ಕಾಲ ಎಂಬುದು ಗೊತ್ತಿಲ್ಲ. ಇದು ಸಂವಿಧಾನದ ಕಾಲ, ಬಾಬಾಸಾಹೇಬರ ಕಾಲ” ಎಂದು ಹೇಳಿದರು. ರಾಮಾಯಣದ ಉತ್ತರಕಾಂಡದಲ್ಲಿನ ಶಂಬೂಕನ ಪ್ರಸಂಗವನ್ನು ಉಲ್ಲೇಖಿಸಿದ ನಾಗೇಂದ್ರ, ಇಂದಿನ ಯುಗದಲ್ಲಿ ಶಂಬೂಕನ ಹತ್ಯೆಯಾಗಲು ಸಾಧ್ಯವಿಲ್ಲ. ಸಂವಿಧಾನ ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಿದೆ ಎಂದರು. “ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೆಪಿಎಸ್‌ಸಿ ಹಗರಣದ ಕುರಿತು ಚರ್ಚೆ ಮಾಡಬಹುದಿತ್ತು. ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಬಹುದಿತ್ತು. ನಾವು ಎಲ್ಲದಕ್ಕೂ ಅವಕಾಶ ನೀಡುತ್ತಿದ್ದೆವು. ಆದರೆ ಯಾವುದೇ ಆಧಾರವಿಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ನಾಗೇಂದ್ರ ಆರೋಪಿಸಿದರು. 2024ರಲ್ಲೇ ರಾಜೀನಾಮೆ ನೀಡಿದ್ದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾಗೇಂದ್ರ, 2024ರಲ್ಲೇ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು. “ನಂತರ ಎಸ್‌ಐಟಿ, ಸಿಐಡಿ ತನಿಖೆ ಎದುರಿಸಿದ್ದೇನೆ. ಕೇಂದ್ರದ ಇಡಿಯಿಂದ ನನ್ನನ್ನು ಬಂಧಿಸಲಾಗಿತ್ತು. ಜೈಲಿಗೂ ಹೋಗಿ ಬಂದಿದ್ದೇನೆ. ಎರಡು ಬಾರಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಮೊದಲ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರಿರಲಿಲ್ಲ. ಎರಡನೇ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಸೇರಿಸಲಾಗಿದೆ” ಎಂದು ಹೇಳಿದರು. ತಾವು ಸಂವಿಧಾನಕ್ಕೆ ಗೌರವ ನೀಡುವುದಾಗಿ ತಿಳಿಸಿದ ನಾಗೇಂದ್ರ, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. “ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ” “ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಕೇವಲ ಸಚಿವನಾಗಿದ್ದೆ. ನಾನು ನೋಟ್‌ಶೀಟ್ ಹಾಕಿದ್ದೇನಾ? ಎಲ್ಲಾದರೂ ಸಹಿ ಹಾಕಿದ್ದೇನಾ? ನಾನು ಇದರಲ್ಲಿ ಭಾಗಿಯಾಗಿದ್ದೇನಾ?” ಎಂದು ಪ್ರಶ್ನಿಸಿದರು. ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣ ವಾಪಸ್ ಆಗಿದೆ ಎಂದು ಹೇಳಿದ ಅವರು, “ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಾರ ಅಧೀನದಲ್ಲಿದೆ? ನಿರ್ಮಲಾ ಸೀತಾರಾಮನ್ ಅವರ ಅಧೀನದಲ್ಲಿರುವ ಬ್ಯಾಂಕ್ ಅಲ್ಲವೇ? ಹಾಗಾದರೆ ಅವರ ಮೇಲೆ ಏಕೆ ತನಿಖೆ ನಡೆಯುತ್ತಿಲ್ಲ? ನಾನು ದಲಿತ ಎಂಬ ಕಾರಣಕ್ಕೆ ನನ್ನ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ?” ಎಂದು ಪ್ರಶ್ನಿಸಿದರು. ಈ ವೇಳೆ ನಾಗೇಂದ್ರ ಭಾವುಕರಾಗಿ ಮಾತನಾಡಿದರು. ಕಣ್ಣೀರು ಹಾಕಿದ ಅವರು ಟಿಶ್ಯೂ ಬಳಸಿ ಕಣ್ಣೊರೆಸಿಕೊಂಡರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಘೋಷಣೆ ಮುಖ್ಯಮಂತ್ರಿ, ಪಕ್ಷದ ವರಿಷ್ಠರಿಗೆ ಮುಜುಗರವಾಗಬಾರದು ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದರು. “ಈಗ ನಾನು ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನನಗೆ ಆಗಿರುವ ಅನ್ಯಾಯವನ್ನು ನಾನು ಹೇಳುತ್ತೇನೆ. ಬನ್ನಿ ಅಖಾಡಕ್ಕೆ ಹೋಗೋಣ, ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು. ಬಳ್ಳಾರಿ ಬಿಜೆಪಿ ನಾಯಕರಾದ ಬಿ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ರಾಮುಲಣ್ಣ, ನೀ ಬಾರಣ್ಣ, ನೀನೇ ಬಾ. ನನ್ನ ಸವಾಲು ಸ್ವೀಕರಿಸು. ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು. “ನನ್ನ ಮೇಲೆ ಇಡಿ, ಸಿಬಿಐ ಬಿಡಬಹುದು. ಆದರೆ ನಿಮ್ಮ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ. ನಾನು ಆರೋಪ ಮುಕ್ತನಾಗಿ ಹೊರಬರುವ ವಿಶ್ವಾಸವಿದೆ” ಎಂದು ನಾಗೇಂದ್ರ ಹೇಳಿದರು. ಬಳ್ಳಾರಿ ಜನರು ಈಗಾಗಲೇ ಬಿಜೆಪಿ ನಾಯಕರಿಗೆ ಎರಡು ಬಾರಿ ಛೀಮಾರಿ ಹಾಕಿದ್ದಾರೆ. ನೀವು ಚಲಾವಣೆಯಲ್ಲಿಲ್ಲದ ನಾಣ್ಯಗಳಾಗಿದ್ದೀರಿ ಎಂದು ಟೀಕಿಸಿದ ಅವರು, ತಮ್ಮ ವಿರುದ್ಧದ ಆರೋಪಗಳಿಗೆ ಜನತಾ ನ್ಯಾಯಾಲಯದಲ್ಲೇ ಉತ್ತರ ನೀಡುವುದಾಗಿ ಹೇಳಿದರು. ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಹರಿಪ್ರಸಾದ್ ಸೇರಿದಂತೆ ತಮ್ಮ ಪರ ನಿಂತ ಎಲ್ಲ ನಾಯಕರನ್ನು ಸ್ಮರಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಅವರಿಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.1
- ಇಂದು ನಡೆದ ಸರಣಿ ಅಪಘಾತ , ದಿನೇ ದಿನೇ ಹೆಚ್ಚಾಗುತ್ತಿದೆ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು. ಇಂದು ಯಲಹಂಕದ ಏರ್ಪೋರ್ಟ್ ರಸ್ತೆಯ ಬಳಿ ನಡೆದ ಸರಣಿ ಅಪಘಾತ, ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಈ ಘಟನೆ ನಡೆದಿದ್ದು ಸದ್ಯಕ್ಕೆ ಯಾರ ಪ್ರಾಣಿಗೂ ಹಾನಿಯಾಗಲಿಲ್ಲ ಆದರೆ ಗಾಡಿಗಳು ಮಾತ್ರ ಜಕಮ್ ಗೊಂಡಿವೆ1
- ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ದೊಡ್ಡ ಮಟ್ಟದ ಶಬ್ದ ಎರಡು ಕಾರುಗಳ ನಡುವೆ ಬೀಕರ ಅಪಘಾತ ಗೋಡೆಕೆರೆ ಗೇಟ್ ಬಳಿ ಭೀಕರ ಅಪಘಾತ: ನಾಲ್ವರು ಸಾವು, ಮೂವರಿಗೆ ಗಾಯ ಚಿಕ್ಕನಾಯಕನಹಳ್ಳಿ: ತಾಲೂಕಿನ ಗೋಡೆಕೆರೆ ಗೇಟ್ ಬಳಿ ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಕೆ.ಬಿ. ಕ್ರಾಸ್ ಕಡೆಯಿಂದ ಚಿಕ್ಕನಾಯಕನಹಳ್ಳಿ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಪಟ್ಟಣದ ನಿವಾಸಿಗಳಾದ ಅನಿಲ್ (31) ಹಾಗೂ ವಿವೇಕ್ (32) ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಅನಿಲ್ ಹಾಗೂ ವಿವೇಕ್ ಮೃತಪಟ್ಟಿದ್ದಾರೆ. ಇದೇ ಕಾರಿನಲ್ಲಿದ್ದ ನಿಶಾನಿ ಅನಿಲ್ (31) ಅವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಲಾಗಿದೆ. ಮತ್ತೊಂದು ಕಾರು ಚಿಕ್ಕನಾಯಕನಹಳ್ಳಿಯ ತಾತಯ್ಯನವರ ದರ್ಗಾಕ್ಕೆ ಭೇಟಿ ನೀಡಿ ತುರುವೇಕೆರೆ ಕಡೆಗೆ ತೆರಳುತ್ತಿತ್ತು. ಈ ಕಾರಿನಲ್ಲಿ 3 ವರ್ಷದ ಹೆಣ್ಣು ಮಗು ಅನಾಫಾತಿಮ ಹಾಗೂ ಚಾಲಕ ದಾವೂದ್ (45) ಸೇರಿದಂತೆ ಪ್ರಯಾಣಿಕರು ಇದ್ದರು. ಅಪಘಾತದಲ್ಲಿ ಅನಾಫಾತಿಮ ಹಾಗೂ ಚಾಲಕ ದಾವೂದ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ನಾಲ್ವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.1
- ಚಿಕ್ಕನಾಯಕನಹಳ್ಳಿ ಎರಡು ಕಾರುಗಳ ನಡುವೆ ಬೀಗರ ಅಪಘಾತ ನಾಲ್ಕು ಸಾವು ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಗೆರೆ ಬಳಿ 2 ಕಾರುಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದು ಇನ್ನೂ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ ಭೀಕರ ಅಪಘಾತಕ್ಕೆ ಇಡಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ತುರುವೇಕೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.1