logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೀಳಗಿ ಪಂಚಾಯತ್ ರಾಜ್ ಇಲಾಖೆಯ ಕರ್ಮಕಾಂಡ..ಗೋವಿಂದಪ್ಪನ ಕೈಯಲ್ಲಿ ಎಲ್ಲವೂ ಗೋವಿಂದ.. ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಗರಾಡದಿನ್ನಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಕುರಿತಾಗಿ ಸಾರ್ವಜನಿಕರಿಂದ ಗಂಭೀರ ಆರೋಪಗಳು ಕೇಳಿಬಂದಿವೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಿಳಗಿ ತಾಲೂಕು ಕಚೇರಿಯಿಂದ 2022-23ನೇ ಸಾಲಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು. ಆದರೆ 2026ರಲ್ಲಿ ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಆರಂಭವಾಗಿದ್ದು, ಇದೀಗ ಈ ಕಾಮಗಾರಿ ಅತ್ಯಂತ ಕಳಪೆ ಮಟ್ಟದಲ್ಲಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಎಸ್ಟಿಮೇಟ್ ಕಾಪಿ ಪ್ರಕಾರ ರಸ್ತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಹಳೆಯ ರಸ್ತೆಯ ಮೇಲೆಯೇ ಸರಿಯಾಗಿ ತಯಾರಿ ಮಾಡದೇ ಡಾಂಬರೀಕರಣ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇನ್ನು ಎಸ್ಟಿಮೇಟ್ ಪ್ರಕಾರ ಕಡಿಗಳು ಹಾಕಬೇಕಾದ ಸ್ಥಳಗಳಲ್ಲಿ ಕಡಿಗಳನ್ನು ಹಾಕದೇ ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಹೇಳುವಂತೆ, ಈ ರಸ್ತೆಯ ಡಾಂಬರೀಕರಣದ ಗುಣಮಟ್ಟ ತುಂಬಾ ಕಳಪೆಯಾಗಿದ್ದು, ಕಾಲಿನಿಂದ ತುಳಿದರೂ ಡಾಂಬರು ಕಿತ್ತು ಬರುತ್ತಿದೆ ಎನ್ನಲಾಗಿದೆ. ಈ ಪರಿಸ್ಥಿತಿಯನ್ನು ನೋಡಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದಲ್ಲದೆ, ಈ ಕಾಮಗಾರಿಯಲ್ಲಿ ಅಧಿಕಾರಿಗಳೂ ಮತ್ತು ಗುತ್ತಿಗೆದಾರರೂ ಸೇರಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡಿದೆ. ಸಾರ್ವಜನಿಕರು ಹೇಳುವ ಪ್ರಕಾರ, ಇಂತಹ ಕಳಪೆ ಕಾಮಗಾರಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಸರ್ಕಾರವೇ ಹೊಣೆ ಎಂದು ಅವರು ಆರೋಪಿಸುತ್ತಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳಿಗೆ ಈ ವಿಚಾರ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಯೂ ಇದೀಗ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಈ ರಸ್ತೆ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗರಾಡದಿನ್ನಿ ಗ್ರಾಮದಲ್ಲಿ ನಡೆದಿರುವ ಈ ರಸ್ತೆ ಕಾಮಗಾರಿ ಕುರಿತು ಅಧಿಕಾರಿಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

on 13 March
user_Bhimahejje News
Bhimahejje News
Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
on 13 March
f8125d24-d9ab-436a-b88c-c1690d5a8215

More news from ಕರ್ನಾಟಕ and nearby areas
  • Post by Iranna Tarnal
    1
    Post by Iranna Tarnal
    user_Iranna Tarnal
    Iranna Tarnal
    ನಿಡಗುಂದಿ, ವಿಜಯಪುರ, ಕರ್ನಾಟಕ•
    13 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    9 hrs ago
  • ಇಳಕಲ್ ನಗರದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ವೃತ್ತದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
    1
    ಇಳಕಲ್ ನಗರದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ವೃತ್ತದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    16 hrs ago
  • ಇಳಕಲ್ :ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ ನೇ ವರ್ಷದ ಜಯಂತ್ಯೋತ್ಸವ ಹಾಗೂ ಬಸವ ಜಯಂತಿ ನಿಮಿತ್ಯ ಸತತ ೧೦ ನೇ ವರ್ಷಗಳಿಂದ ಸೇವೆಗೈಯುತ್ತಿರುವ ರಿಯಾಜ್ ಮಕಾಂದಾರ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣ ಎದುರಿಗೆ ತಂಪಾದ ಕುಡಿಯುವ ನೀರಿನ ಅರವಟ್ಟಿಗೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮಂಗಳವಾರ ಉದ್ಘಾಟಿಸಿದರು. ಬೇಸಿಗೆ ಸಮಯದಲ್ಲಿ ಸಾರ್ವಜನಿಕರ ನೀರಿನ ದಾಹವನ್ನು ನೀಗಿಸಲು ರಿಯಾಜ್ ಮಕಾಂನದಾರ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಒಳ್ಳೆಯ ಕಾರ್ಯಎಂದು ಹೇಳಿದರು. ಈ ಸಮಯದಲ್ಲಿ ಮಕಾಂನದಾರ ಕುಟುಂಬಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಹಾಗೂ ಸಾರ್ವಜನಿಕರು ಇದ್ದರು.
    1
    ಇಳಕಲ್ :ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ ನೇ ವರ್ಷದ ಜಯಂತ್ಯೋತ್ಸವ ಹಾಗೂ ಬಸವ ಜಯಂತಿ ನಿಮಿತ್ಯ ಸತತ ೧೦ ನೇ ವರ್ಷಗಳಿಂದ ಸೇವೆಗೈಯುತ್ತಿರುವ ರಿಯಾಜ್ ಮಕಾಂದಾರ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣ ಎದುರಿಗೆ ತಂಪಾದ ಕುಡಿಯುವ ನೀರಿನ ಅರವಟ್ಟಿಗೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮಂಗಳವಾರ ಉದ್ಘಾಟಿಸಿದರು.
ಬೇಸಿಗೆ ಸಮಯದಲ್ಲಿ ಸಾರ್ವಜನಿಕರ ನೀರಿನ ದಾಹವನ್ನು ನೀಗಿಸಲು ರಿಯಾಜ್ ಮಕಾಂನದಾರ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಒಳ್ಳೆಯ ಕಾರ್ಯಎಂದು ಹೇಳಿದರು. 
ಈ ಸಮಯದಲ್ಲಿ ಮಕಾಂನದಾರ ಕುಟುಂಬಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಹಾಗೂ ಸಾರ್ವಜನಿಕರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    16 hrs ago
  • ಮುದ್ದೇಬಿಹಾಳ.. 135 ನೆಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ವಿಜ್ಜರಣೆಮೆಯಿಂದ ಆಚರಿಸಲಾಯಿತ್ತು. ಮುದ್ದೇಬಿಹಾಳದ ಗಣ್ಯ ವ್ಯಕ್ತಿಗಳು ಅಂಬೇಡ್ಕರವರ ಜಯಂತೋತ್ಸವಕ್ಕೆ ಮುಖ್ಯ ಅತಿಥಿ ಸಿ ಎಸ್ ನಾಡಗೌಡ ಮತ್ತು ಎಲ್ಲಾ D S S ಸಂಗದವರು ಹಾಜರ ಇದ್ದರು. ಇಂದಿರಾ ನಗರದ ಮಾಜಿ ಮೆಂಬರ್ ಆದ ಶಿವು ಶಿವಪುರ ಮತ್ತು ಸಿದ್ದು ತಳಹಳ್ಳಿ ಹಾಗೂ ಪೀಲಕಮ್ಮ ನಗರದ ಅಶೋಕ್ ಪಾದಗಟ್ಟಿ ನಾಗೇಶ್ ಭಜಂತ್ರಿ ಈರಣ್ಣ ತಾರನಾಳ ಹನುಮಂತ ಹೊಸಮನಿ ಹರಳಯ್ಯ ಸಮಾಜದ ಅಧ್ಯಕ್ಷರಾದ ಭಗವಂತ ಕಬಾಡೆ ಎಲ್ಲಾ ವ್ಯಕ್ತಿಗಳು ಹಾಜರಿದ್ದರು
    1
    ಮುದ್ದೇಬಿಹಾಳ.. 135 ನೆಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ವಿಜ್ಜರಣೆಮೆಯಿಂದ ಆಚರಿಸಲಾಯಿತ್ತು. ಮುದ್ದೇಬಿಹಾಳದ  ಗಣ್ಯ ವ್ಯಕ್ತಿಗಳು ಅಂಬೇಡ್ಕರವರ ಜಯಂತೋತ್ಸವಕ್ಕೆ ಮುಖ್ಯ ಅತಿಥಿ ಸಿ  ಎಸ್ ನಾಡಗೌಡ ಮತ್ತು ಎಲ್ಲಾ D S S  ಸಂಗದವರು ಹಾಜರ ಇದ್ದರು. ಇಂದಿರಾ ನಗರದ ಮಾಜಿ ಮೆಂಬರ್ ಆದ ಶಿವು    ಶಿವಪುರ ಮತ್ತು ಸಿದ್ದು ತಳಹಳ್ಳಿ ಹಾಗೂ ಪೀಲಕಮ್ಮ ನಗರದ  ಅಶೋಕ್ ಪಾದಗಟ್ಟಿ   ನಾಗೇಶ್ ಭಜಂತ್ರಿ ಈರಣ್ಣ ತಾರನಾಳ ಹನುಮಂತ ಹೊಸಮನಿ  ಹರಳಯ್ಯ ಸಮಾಜದ ಅಧ್ಯಕ್ಷರಾದ ಭಗವಂತ ಕಬಾಡೆ ಎಲ್ಲಾ ವ್ಯಕ್ತಿಗಳು ಹಾಜರಿದ್ದರು
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    19 hrs ago
  • ನಾಗಠಾಣ: ಗುಂಡು ಹಾರಿಸಿ ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದಲ್ಲಿ ಮೊದಲು ಥಾರ್ ವಾಹನಕ್ಕೆ ಟಿಪ್ಪರ್ ಮೂಲಕ ಡಿಕ್ಕಿ ಹೊಡೆದು, ಬಳಿಕ ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ರಾಜು ಕರೆ ಎಂಬುವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಾರಿನ ಬಾಗಿಲು ತೆರೆಯದಿದ್ದಾಗ ಕಲ್ಲು ಎಸೆದು ಹಂತಕರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ರಾಜು ಕರೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 'ಕೆಲವು ದುಷ್ಕರ್ಮಿಗಳು ನನ್ನ ಮಗನ ಮೇಲೆ ಗುಂಡಿನ ದಾಳಿಮಾಡಿ ಹತ್ಯೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ನನ್ನ ಮಗನ ಸಾವಿಗೆ ನ್ಯಾಯ ನೀಡಬೇಕು' ಎಂದು ಕುಟುಂಬಸ್ಥರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
    1
    ನಾಗಠಾಣ: ಗುಂಡು ಹಾರಿಸಿ ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ
ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದಲ್ಲಿ ಮೊದಲು ಥಾರ್ ವಾಹನಕ್ಕೆ ಟಿಪ್ಪರ್ ಮೂಲಕ ಡಿಕ್ಕಿ ಹೊಡೆದು, ಬಳಿಕ ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ರಾಜು ಕರೆ ಎಂಬುವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಾರಿನ ಬಾಗಿಲು ತೆರೆಯದಿದ್ದಾಗ ಕಲ್ಲು ಎಸೆದು ಹಂತಕರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ರಾಜು ಕರೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 'ಕೆಲವು ದುಷ್ಕರ್ಮಿಗಳು ನನ್ನ ಮಗನ ಮೇಲೆ ಗುಂಡಿನ ದಾಳಿಮಾಡಿ ಹತ್ಯೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ನನ್ನ ಮಗನ ಸಾವಿಗೆ ನ್ಯಾಯ ನೀಡಬೇಕು' ಎಂದು ಕುಟುಂಬಸ್ಥರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    7 hrs ago
  • Gadag Jilla snake Raheman
    1
    Gadag Jilla snake Raheman
    user_ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    City Star ಗದಗ, ಗದಗ, ಕರ್ನಾಟಕ•
    9 hrs ago
  • Post by Iranna Tarnal
    1
    Post by Iranna Tarnal
    user_Iranna Tarnal
    Iranna Tarnal
    ನಿಡಗುಂದಿ, ವಿಜಯಪುರ, ಕರ್ನಾಟಕ•
    14 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.