logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯ ಹುಂಡಿ ಎಣಿಕೆ: 82 ಲಕ್ಷ ರೂ. ಕಾಣಿಕೆ, ಆದಾಯದಲ್ಲಿ ಕುಸಿತ ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಈ ಬಾರಿ ಆದಾಯದಲ್ಲಿ ಕುಸಿತ ಕಂಡಿದೆ. ದೇವಾಲಯದ ದಾಸೋಹ ಭವನದಲ್ಲಿ ನಡೆದ ಎಣಿಕೆ ವೇಳೆ ಒಂದೇ ತಿಂಗಳಲ್ಲಿ ಒಟ್ಟು ₹82,30,313 ನಗದು ಸಂಗ್ರಹವಾಗಿದೆ. ದೇವಾಲಯದ ಎಲ್ಲಾ ಹುಂಡಿಗಳನ್ನು ದೇವಸ್ಥಾನದ ಸಿಬ್ಬಂದಿ ಹಾಗೂ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಗಳ ಸಮ್ಮುಖದಲ್ಲಿ ತೆರೆಯಲಾಗಿದ್ದು, ಸಂಗ್ರಹವಾದ ಕಾಣಿಕೆ ಮೊತ್ತವನ್ನು ಲೆಕ್ಕ ಹಾಕಲಾಯಿತು. ಈ ವೇಳೆ 19 ಗ್ರಾಂ ಚಿನ್ನ ಮತ್ತು 990 ಗ್ರಾಂ ಬೆಳ್ಳಿ ಸಹ ದೊರೆತಿದೆ. ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳೂ ಗಮನ ಸೆಳೆದವು. ಅಮೆರಿಕಾ (1), ಆಸ್ಟ್ರೇಲಿಯಾ (3), ಇಂಗ್ಲೆಂಡ್ ಪೌಂಡ್ (2), ಅರಬ್ ದೇಶ (1), ಭೂತಾನ್ (3), ಮಲೇಶಿಯಾ (1) ಸೇರಿದಂತೆ ಒಟ್ಟು 47 ವಿದೇಶಿ ಕರೆನ್ಸಿಗಳು ಕಾಣಿಕೆಯಾಗಿ ಬಂದಿವೆ. ಇಂಗ್ಲೆಂಡ್ ಕಾಯಿನ್ ಪೌಂಡ್-1 (34) ಹಾಗೂ ಪೌಂಡ್-2 (1) ನಾಣ್ಯಗಳೂ ದೊರೆತಿವೆ. ದೇಶ-ವಿದೇಶಗಳಿಂದ ಭಕ್ತರು ನಂಜುಂಡನಿಗೆ ಕಾಣಿಕೆ ಸಲ್ಲಿಸುತ್ತಿರುವುದು ಈ ಎಣಿಕೆಯಲ್ಲಿ ಸ್ಪಷ್ಟವಾಗಿದೆ. ಕುಸಿತ ಕಂಡ ಆದಾಯ ಪ್ರತಿ ತಿಂಗಳೂ ನಂಜುಂಡೇಶ್ವರನ ಹುಂಡಿ ಎಣಿಕೆಯಲ್ಲಿ ಆದಾಯ ಸಾಮಾನ್ಯವಾಗಿ ಕೋಟಿ ರೂ. ದಾಟುತ್ತಿದ್ದರೆ, ವಿಶೇಷ ತಿಂಗಳಲ್ಲಿ 1 ರಿಂದ 2 ಕೋಟಿ ರೂ.ವರೆಗೆ ಸಂಗ್ರಹವಾಗುತ್ತಿದ್ದುದಾಗಿ ದೇವಾಲಯ ಮೂಲಗಳು ತಿಳಿಸಿವೆ. ಆದರೆ ಈ ಬಾರಿ ₹82 ಲಕ್ಷ ಮಾತ್ರ ಸಂಗ್ರಹವಾಗಿರುವುದು ಗಮನಾರ್ಹವಾಗಿದೆ. ಭಕ್ತರ ಸಂಖ್ಯೆ, ಹಬ್ಬ-ಜಾತ್ರೆಗಳ ಅವಧಿ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳ ಪ್ರಮಾಣ ಇತ್ಯಾದಿ ಅಂಶಗಳು ಆದಾಯದ ಮೇಲೆ ಪ್ರಭಾವ ಬೀರುವುದಾಗಿ ಹೇಳಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಮತ್ತೆ ಆದಾಯ ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

15 hrs ago
user_ಹೊಂಗಿರಣ ನ್ಯೂಸ್
ಹೊಂಗಿರಣ ನ್ಯೂಸ್
Nanjangud, Mysuru•
15 hrs ago

ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯ ಹುಂಡಿ ಎಣಿಕೆ: 82 ಲಕ್ಷ ರೂ. ಕಾಣಿಕೆ, ಆದಾಯದಲ್ಲಿ ಕುಸಿತ ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಈ ಬಾರಿ ಆದಾಯದಲ್ಲಿ ಕುಸಿತ ಕಂಡಿದೆ. ದೇವಾಲಯದ ದಾಸೋಹ ಭವನದಲ್ಲಿ ನಡೆದ ಎಣಿಕೆ ವೇಳೆ ಒಂದೇ ತಿಂಗಳಲ್ಲಿ ಒಟ್ಟು ₹82,30,313 ನಗದು ಸಂಗ್ರಹವಾಗಿದೆ. ದೇವಾಲಯದ ಎಲ್ಲಾ ಹುಂಡಿಗಳನ್ನು ದೇವಸ್ಥಾನದ ಸಿಬ್ಬಂದಿ ಹಾಗೂ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಗಳ ಸಮ್ಮುಖದಲ್ಲಿ ತೆರೆಯಲಾಗಿದ್ದು, ಸಂಗ್ರಹವಾದ ಕಾಣಿಕೆ ಮೊತ್ತವನ್ನು ಲೆಕ್ಕ ಹಾಕಲಾಯಿತು. ಈ ವೇಳೆ 19 ಗ್ರಾಂ ಚಿನ್ನ ಮತ್ತು 990 ಗ್ರಾಂ ಬೆಳ್ಳಿ ಸಹ ದೊರೆತಿದೆ. ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳೂ ಗಮನ ಸೆಳೆದವು. ಅಮೆರಿಕಾ (1), ಆಸ್ಟ್ರೇಲಿಯಾ (3), ಇಂಗ್ಲೆಂಡ್ ಪೌಂಡ್ (2), ಅರಬ್ ದೇಶ (1), ಭೂತಾನ್ (3), ಮಲೇಶಿಯಾ (1) ಸೇರಿದಂತೆ ಒಟ್ಟು 47 ವಿದೇಶಿ ಕರೆನ್ಸಿಗಳು ಕಾಣಿಕೆಯಾಗಿ ಬಂದಿವೆ. ಇಂಗ್ಲೆಂಡ್ ಕಾಯಿನ್ ಪೌಂಡ್-1 (34) ಹಾಗೂ ಪೌಂಡ್-2 (1) ನಾಣ್ಯಗಳೂ ದೊರೆತಿವೆ. ದೇಶ-ವಿದೇಶಗಳಿಂದ ಭಕ್ತರು ನಂಜುಂಡನಿಗೆ ಕಾಣಿಕೆ ಸಲ್ಲಿಸುತ್ತಿರುವುದು ಈ ಎಣಿಕೆಯಲ್ಲಿ ಸ್ಪಷ್ಟವಾಗಿದೆ. ಕುಸಿತ ಕಂಡ ಆದಾಯ ಪ್ರತಿ ತಿಂಗಳೂ ನಂಜುಂಡೇಶ್ವರನ ಹುಂಡಿ ಎಣಿಕೆಯಲ್ಲಿ ಆದಾಯ ಸಾಮಾನ್ಯವಾಗಿ ಕೋಟಿ ರೂ. ದಾಟುತ್ತಿದ್ದರೆ, ವಿಶೇಷ ತಿಂಗಳಲ್ಲಿ 1 ರಿಂದ 2 ಕೋಟಿ ರೂ.ವರೆಗೆ ಸಂಗ್ರಹವಾಗುತ್ತಿದ್ದುದಾಗಿ ದೇವಾಲಯ ಮೂಲಗಳು ತಿಳಿಸಿವೆ. ಆದರೆ ಈ ಬಾರಿ ₹82 ಲಕ್ಷ ಮಾತ್ರ ಸಂಗ್ರಹವಾಗಿರುವುದು ಗಮನಾರ್ಹವಾಗಿದೆ. ಭಕ್ತರ ಸಂಖ್ಯೆ, ಹಬ್ಬ-ಜಾತ್ರೆಗಳ ಅವಧಿ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳ ಪ್ರಮಾಣ ಇತ್ಯಾದಿ ಅಂಶಗಳು ಆದಾಯದ ಮೇಲೆ ಪ್ರಭಾವ ಬೀರುವುದಾಗಿ ಹೇಳಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಮತ್ತೆ ಆದಾಯ ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

More news from Karnataka and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    20 hrs ago
  • ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡಂಚಿನಲ್ಲಿರುವ ತುಳಸಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶ್ರೀ ರೂಪ ಸೋಮವಾರ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ಶಾಲಾ ಶಿಕ್ಷಕರು ಜಿಲ್ಲಾಧಿಕಾರಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪನೆಗಾಗಿ ಮನವಿ ಸಲ್ಲಿಸಿದರು. ಹನೂರು ಶೈಕ್ಷಣಿಕ ವಲಯದ ಮಲೆಮಹದೇಶ್ವರ ಬೆಟ್ಟ ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಈ ಶಾಲೆಯಲ್ಲಿ ಪ್ರಥಮದಿಂದ ಏಳನೇ ತರಗತಿವರೆಗೆ ಒಟ್ಟು 58 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2004-05ರಲ್ಲಿ ನಿರ್ಮಾಣಗೊಂಡ ನಾಲ್ಕು ಕೊಠಡಿಗಳು ಈಗ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಶಿಕ್ಷಕರು ವಿವರಿಸಿದರು. ನೂತನ ಶಾಲಾ ಕಟ್ಟಡ ನಿರ್ಮಾಣ, ದುರಸ್ತಿಗೊಂಡಿರುವ ಅಡಿಗೆ ಕೊಠಡಿಗೆ ಪರ್ಯಾಯ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರ್‌ವೆಲ್ ಕೊರೆಯುವಿಕೆ ಹಾಗೂ ಕಾಡಂಚಿನ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲು ಹೊಸ ಕೊಠಡಿ ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಶಾಲೆಗೆ ಅಗತ್ಯವಿರುವ ಇತರ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವಂತೆ ಕೂಡ ವಿನಂತಿಸಿದರು. ಜಿಲ್ಲಾಧಿಕಾರಿಗಳ ಭರವಸೆ: ತುಳಸಿಕೆರೆ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ರೂಪ, ಶಾಲೆಯ ಅಗತ್ಯತೆಗಳನ್ನು ಗಮನಿಸಿ, ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಶಿಕ್ಷಣದ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಡಿಸಿಎಫ್ ಭಾಸ್ಕರ್, ರೈತ ಮುಖಂಡ ಹೊನ್ನೂರು ಪ್ರಕಾಶ್, ಕರಿಯಪ್ಪ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
    2
    ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡಂಚಿನಲ್ಲಿರುವ ತುಳಸಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶ್ರೀ ರೂಪ ಸೋಮವಾರ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಶಾಲಾ ಶಿಕ್ಷಕರು ಜಿಲ್ಲಾಧಿಕಾರಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪನೆಗಾಗಿ ಮನವಿ ಸಲ್ಲಿಸಿದರು. ಹನೂರು ಶೈಕ್ಷಣಿಕ ವಲಯದ ಮಲೆಮಹದೇಶ್ವರ ಬೆಟ್ಟ ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಈ ಶಾಲೆಯಲ್ಲಿ ಪ್ರಥಮದಿಂದ ಏಳನೇ ತರಗತಿವರೆಗೆ ಒಟ್ಟು 58 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2004-05ರಲ್ಲಿ ನಿರ್ಮಾಣಗೊಂಡ ನಾಲ್ಕು ಕೊಠಡಿಗಳು ಈಗ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಶಿಕ್ಷಕರು ವಿವರಿಸಿದರು.
ನೂತನ ಶಾಲಾ ಕಟ್ಟಡ ನಿರ್ಮಾಣ, ದುರಸ್ತಿಗೊಂಡಿರುವ ಅಡಿಗೆ ಕೊಠಡಿಗೆ ಪರ್ಯಾಯ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರ್‌ವೆಲ್ ಕೊರೆಯುವಿಕೆ ಹಾಗೂ ಕಾಡಂಚಿನ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲು ಹೊಸ ಕೊಠಡಿ ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಶಾಲೆಗೆ ಅಗತ್ಯವಿರುವ ಇತರ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವಂತೆ ಕೂಡ ವಿನಂತಿಸಿದರು.
ಜಿಲ್ಲಾಧಿಕಾರಿಗಳ ಭರವಸೆ:
ತುಳಸಿಕೆರೆ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ರೂಪ, ಶಾಲೆಯ ಅಗತ್ಯತೆಗಳನ್ನು ಗಮನಿಸಿ, ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಶಿಕ್ಷಣದ ಬಗ್ಗೆ ವಿಚಾರಿಸಿದರು.
ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಡಿಸಿಎಫ್ ಭಾಸ್ಕರ್, ರೈತ ಮುಖಂಡ ಹೊನ್ನೂರು ಪ್ರಕಾಶ್, ಕರಿಯಪ್ಪ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    19 hrs ago
  • ಮ್ಯಾರಥಾನ್ ವೇಳೆ ಪಿಎಸ್ಸೈ ನಾಸೀರ್ ಹುಸೇನ್ ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಇವರು ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ
    1
    ಮ್ಯಾರಥಾನ್ ವೇಳೆ ಪಿಎಸ್ಸೈ ನಾಸೀರ್ ಹುಸೇನ್ ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಇವರು ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • Post by ಗಿರೀಶ್ B
    2
    Post by ಗಿರೀಶ್ B
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    4 hrs ago
  • ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸದೃಶ್ಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಭದ್ರತಾ ಕಾರಣಗಳಿಂದಾಗಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿ ಬಳ್ಳಾರಿಯ ಪ್ರವಾಸಿಗರು: ದುಬೈಗೆ ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಶಾಸಕರಿಂದ ವಿಡಿಯೋ ಸಂದೇಶ: ಈ ಪರಿಸ್ಥಿತಿಯ ನಡುವೆಯೇ ಶಾಸಕ ಭರತ್ ರೆಡ್ಡಿ ಅವರು ದುಬೈನಿಂದ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಾವು, ತಮ್ಮ ಕುಟುಂಬಸ್ಥರು ಹಾಗೂ ಬಳ್ಳಾರಿಯ ಸುಮಾರು 35ಕ್ಕೂ ಹೆಚ್ಚು ನಿವಾಸಿಗಳು ಸದ್ಯಕ್ಕೆ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಶೀಘ್ರದಲ್ಲೇ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ.
    1
    ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ:
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸದೃಶ್ಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಭದ್ರತಾ ಕಾರಣಗಳಿಂದಾಗಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಕಷ್ಟದಲ್ಲಿ ಬಳ್ಳಾರಿಯ ಪ್ರವಾಸಿಗರು:
ದುಬೈಗೆ ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಶಾಸಕರಿಂದ ವಿಡಿಯೋ ಸಂದೇಶ:
ಈ ಪರಿಸ್ಥಿತಿಯ ನಡುವೆಯೇ ಶಾಸಕ ಭರತ್ ರೆಡ್ಡಿ ಅವರು ದುಬೈನಿಂದ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಾವು, ತಮ್ಮ ಕುಟುಂಬಸ್ಥರು ಹಾಗೂ ಬಳ್ಳಾರಿಯ ಸುಮಾರು 35ಕ್ಕೂ ಹೆಚ್ಚು ನಿವಾಸಿಗಳು ಸದ್ಯಕ್ಕೆ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಶೀಘ್ರದಲ್ಲೇ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ.
    user_Anil
    Anil
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    15 hrs ago
  • KOLAR KI.AWAAZ KOUSAR NEWS i request to please help. And city saininagar, Kolar. Call arjalapa hospital. Patient. Request to oppression
    1
    KOLAR KI.AWAAZ KOUSAR NEWS i request to please help. And city saininagar, Kolar. Call arjalapa hospital. Patient. Request to oppression
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    23 hrs ago
  • ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಬಿರೇಶ್ವರ ದೇವಸ್ಥಾನದ ಜಾತ್ರೆ ಮಹೋತ್ಸವವು ಭಕ್ತಿ ಭಾವ ಹಾಗೂ ಸಾಂಸ್ಕೃತಿಕ ಸಂಭ್ರಮದಲ್ಲಿ ಜರುಗಿತು. ಗ್ರಾಮದ ಪ್ರಸಿದ್ಧ ಬಿರೇಶ್ವರ ದೇವಸ್ಥಾನ ಮುಳ್ಳೂರುದಲ್ಲಿ ಜಾತ್ರೆ ಅಂಗವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಗಣಹೋಮ, ಅಭಿಷೇಕ, ಅಲಂಕಾರ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿದರು. ದೇವಸ್ಥಾನವನ್ನು ಹೂವಿನ ಅಲಂಕಾರ ಮತ್ತು ದೀಪಾಲಂಕಾರಗಳಿಂದ ಸಿಂಗರಿಸಲಾಗಿದ್ದು, ಭಕ್ತರ ದಂಡು ದಿನವಿಡೀ ಹರಿದುಬಂತು. ಮೂರು ವರ್ಷ ಒಮ್ಮೆ ನಡೆಯುವ ಜಾತ್ರೆ ಇದಾಗಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಬೀರೇಶ್ವರ ವೀರ ಕುಣಿತ ಸೇವೆ ಸಂಜೆ ವೇಳೆ ಜರುಗಿತು. ಸಂಪ್ರದಾಯಬದ್ಧ ವೇಷಭೂಷಣ ತೊಟ್ಟ ಯುವಕರು ದೋಲು, ತಾಳ, ಶಂಖನಾದಗಳೊಂದಿಗೆ ವೀರ ಕುಣಿತ ಪ್ರದರ್ಶಿಸಿದರು. ದೇವರ ಶೌರ್ಯ ಮತ್ತು ರಕ್ಷಣಾತ್ಮಕ ಸ್ವರೂಪವನ್ನು ಪ್ರತಿಬಿಂಬಿಸುವ ಈ ಕುಣಿತ ಭಕ್ತರಲ್ಲಿ ಭಕ್ತಿ ಹಾಗೂ ಉತ್ಸಾಹವನ್ನು ಹೆಚ್ಚಿಸಿತು. ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಜಾತ್ರೆ ಪ್ರಯುಕ್ತ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರ ಸೌಲಭ್ಯಕ್ಕಾಗಿ ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಮುಳ್ಳೂರು ಗ್ರಾಮದಲ್ಲಿ ನಡೆದ ಬಿರೇಶ್ವರ ಜಾತ್ರೆ ಮಹೋತ್ಸವ ಭಕ್ತಿ, ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವಂತೆ ಯಶಸ್ವಿಯಾಗಿ ನೆರವೇರಿತು.
    1
    ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಬಿರೇಶ್ವರ ದೇವಸ್ಥಾನದ ಜಾತ್ರೆ ಮಹೋತ್ಸವವು ಭಕ್ತಿ ಭಾವ ಹಾಗೂ ಸಾಂಸ್ಕೃತಿಕ ಸಂಭ್ರಮದಲ್ಲಿ ಜರುಗಿತು. ಗ್ರಾಮದ ಪ್ರಸಿದ್ಧ ಬಿರೇಶ್ವರ ದೇವಸ್ಥಾನ ಮುಳ್ಳೂರುದಲ್ಲಿ ಜಾತ್ರೆ ಅಂಗವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಗಣಹೋಮ, ಅಭಿಷೇಕ, ಅಲಂಕಾರ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿದರು. ದೇವಸ್ಥಾನವನ್ನು ಹೂವಿನ ಅಲಂಕಾರ ಮತ್ತು ದೀಪಾಲಂಕಾರಗಳಿಂದ ಸಿಂಗರಿಸಲಾಗಿದ್ದು, ಭಕ್ತರ ದಂಡು ದಿನವಿಡೀ ಹರಿದುಬಂತು. ಮೂರು ವರ್ಷ ಒಮ್ಮೆ ನಡೆಯುವ ಜಾತ್ರೆ ಇದಾಗಿದೆ.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಬೀರೇಶ್ವರ ವೀರ ಕುಣಿತ ಸೇವೆ ಸಂಜೆ ವೇಳೆ ಜರುಗಿತು. ಸಂಪ್ರದಾಯಬದ್ಧ ವೇಷಭೂಷಣ ತೊಟ್ಟ ಯುವಕರು ದೋಲು, ತಾಳ, ಶಂಖನಾದಗಳೊಂದಿಗೆ ವೀರ ಕುಣಿತ ಪ್ರದರ್ಶಿಸಿದರು. ದೇವರ ಶೌರ್ಯ ಮತ್ತು ರಕ್ಷಣಾತ್ಮಕ ಸ್ವರೂಪವನ್ನು ಪ್ರತಿಬಿಂಬಿಸುವ ಈ ಕುಣಿತ ಭಕ್ತರಲ್ಲಿ ಭಕ್ತಿ ಹಾಗೂ ಉತ್ಸಾಹವನ್ನು ಹೆಚ್ಚಿಸಿತು. ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.
ಜಾತ್ರೆ ಪ್ರಯುಕ್ತ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರ ಸೌಲಭ್ಯಕ್ಕಾಗಿ ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು.
ಒಟ್ಟಾರೆ ಮುಳ್ಳೂರು ಗ್ರಾಮದಲ್ಲಿ ನಡೆದ ಬಿರೇಶ್ವರ ಜಾತ್ರೆ ಮಹೋತ್ಸವ ಭಕ್ತಿ, ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವಂತೆ ಯಶಸ್ವಿಯಾಗಿ ನೆರವೇರಿತು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Nanjangud, Mysuru•
    15 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    21 hrs ago
  • ಮಲ್ಲಿಕಾರ್ಜುನ ಮುತ್ಯಾ ಎಂಬ ಸ್ವಯಂ ಘೋಷಿತ ...ಮಾನವ ಭಕ್ತರನ್ನು ಆಶೀರ್ವದಿಸುವ ನೆಪದಲ್ಲಿ ಅಸಹ್ಯವಾಗಿ ತುಟಿಗಳಿಗೆ ಚುಂಬಿಸುವ ಮೂಲಕ ಶೋಷಣೆ ಮಾಡಿದ್ದಾನೆ, ಈತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಕೂಡಲೇ ತಲೆಮರೆಸಿಕೊಂಡಿದ್ದಾನೆ.
    1
    ಮಲ್ಲಿಕಾರ್ಜುನ ಮುತ್ಯಾ ಎಂಬ ಸ್ವಯಂ ಘೋಷಿತ ...ಮಾನವ ಭಕ್ತರನ್ನು ಆಶೀರ್ವದಿಸುವ ನೆಪದಲ್ಲಿ ಅಸಹ್ಯವಾಗಿ ತುಟಿಗಳಿಗೆ ಚುಂಬಿಸುವ ಮೂಲಕ ಶೋಷಣೆ ಮಾಡಿದ್ದಾನೆ, ಈತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಕೂಡಲೇ ತಲೆಮರೆಸಿಕೊಂಡಿದ್ದಾನೆ.
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.