ಅಳ್ನಾವರ ಸಮೀಪದ ಕಡಬಗಟ್ಟಿ ಗ್ರಾಮದೇವಿ ದೇವಸ್ಥಾನದಲ್ಲಿ ಪಿಂಚಣಿದಾರರ ಅಹವಾಲು ಆಲಿಕೆ ಸಭೆ ನಡೆಯಿತು. ಡಬಗಟ್ಟಿಯಲ್ಲಿ ಪಿಂಚಣಿದಾರರ ಅಹವಾಲು ಆಲಿಕೆ ಸಭೆಕ ಅಳ್ನಾವರ(ಧಾರವಾಡ) :ಏ. ೨೧: ತಾಲ್ಲೂಕಿನ ಕಡಬಗಟ್ಟಿ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಮಂಗಳವಾರ ಪಿಂಚಣಿದಾರರ ಅಹವಾಲು ಆಲಿಕೆ ಸಭೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ದೂರುಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸುವ ಭರವಸೆ ಅಧಿಕಾರಿಗಳು ನೀಡಿದರು. ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಹಲವಾರು ಫಲಾನುಭವಿಗಳಿಗೆ ಕಳೆದ ಕೆಲವು ತಿಂಗಳಿನಿAದ ಮಾಸಾಶನ ಹಣ ಬಾರದಿರುವ ಕುರಿತು ಈಚೆಗೆ ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಶ್ನೆ ಎದ್ದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ಮಾತನಾಡಿದ ಫಲಾನುಭವಿಗಳು, ಮೂನ್ನೂರಕ್ಕೂ ಅಧಿಕ ಪಿಂಚಣಿದಾರರಿಗೆ ಹಣ ಬಾರದೆ ತೊಂದರೆ ಉಂಟಾಗಿದೆ. ಮಾಸಾಶನ ಮರುಪ್ರಾರಂಭಕ್ಕಾಗಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸ್ವೀಕರಿಸಿ, ನೈಜ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಶೀಘ್ರದಲ್ಲೇ ಮಾಸಾಶನ ಮರುಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಗ್ರಾಮದ ಹಿರಿಯರಾದ ಶಿವಾನಂದ ಗೋವಿನಕೊಪ್ಪ ನೇತೃತ್ವದಲ್ಲಿ ಕಡಬಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೂಲಿಕೇರಿ, ಕಡಬಗಟ್ಟಿ, ಕಾಶೇನಟ್ಟಿ ಗ್ರಾಮಗಳ ಫಲಾನುಭವಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ದಾಖಲೆಗಳನ್ನು ಸಲ್ಲಿಸಿದರು. ಉಪತಹಶೀಲ್ದಾರ್ ಮಲ್ಲಿಕಾರ್ಜುನ ಬಿರಾದಾರ, ಕಂದಾಯ ನಿರೀಕ್ಷಕ ಸಂಪತಕುಮಾರ ಗುರುಒಡೆಯರ, ಗ್ರಾಮ ಆಡಳಿತಾಧಿಕಾರಿ ತಯ್ಯಬಾ ಚೌದರಿ, ಪಿಡಿಒ ಆನಂದ ಪಾಟೀಲ ಇದ್ದರು. ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ವಿನಾಯಕ ಕುರುಬರ ಮಾತನಾಡಿ, ಅರ್ಹ ಪಿಂಚಣಿದಾರರಿಗೆ ಸಕಾಲದಲ್ಲಿ ಮಾಸಾಶನ ವಿತರಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಮತ್ತು ನಿಜವಾದ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದAತೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

- ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮ ಇಂದು ಜನಸಾಗರದಿಂದ ತುಂಬಿ ತುಳುಕುತ್ತಿದೆ. ದಶಕದ ಹತ್ತಿರದ ಅವಧಿಯ ನಂತರ ನಡೆಯುತ್ತಿರುವ ಈ ಜಾತ್ರೆಯು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ತುಂಬಿದೆ.1
- ಗುಳೇದಗುಡ್ಡ: ಜಗತ್ತಿನಲ್ಲಿ ತುಂಬಿದ್ದ ಅಜ್ಞಾನ, ಮೂಢನಂಬಿಕೆ, ಕಂದಾಚಾರ, ಜಾತಿಯತೆಯಂತಹ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿದ ಜಗಜ್ಯೋತಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಯನ್ನು ಸಾರಿದವರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕರು ಎಂದು ಸಾಹಿತಿ ರವಿ ಕಂಗಳ ಹೇಳಿದರು. ಅವರು ಸೋಮವಾರ ಪಟ್ಟಣದ ಬಸವ ಕೇಂದ್ರ ವತಿಯಿಂದ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಸಾರಿದ ಕ್ರಾಂತಿ ಪುರುಷ ಬಸವಣ್ಣನವರು. ಕಾಯಕವೇ ಕೈಲಾಸ ಎಂಬ ತತ್ವಬೋಧಿಸಿ, ಸರ್ವಜಾತಿ ಜನಾಂಗಗಳ ಸಮಾನತೆಯ ಕನಸು ಕಂಡು ಕಲ್ಯಾಣದಲ್ಲಿ ಕಟ್ಟಿದ ಅನುಭವ ಮಂಟಪ ಜಗತ್ತಿಗೆ ಸರ್ವಧರ್ಮ ಸಮಾನತೆ ಸಾರುತ್ತಿದೆ ಎಂದರು. ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿ, ನಮ್ಮೆಲ್ಲರ ಮನೆಯೂ ಮಹಾಮನೆಯಾಗವ ಮೂಲಕ ಶರಣ ವಚನ,ತತ್ವಗಳು ಮನೆಮನೆಗೂ ಪಸರಿಸಬೇಕು ಎಂಬ ಉದ್ದೇಶದಿಂದ ಬಸವಕೇಂದ್ರದಿಂದ ಪಟ್ಟಣದಲ್ಲಿ ಪ್ರತಿವಾರವೂ ಒಬ್ಬೊಬ್ಬ ಶರಣರ ಮನೆಯಲ್ಲಿ ಮಹಾಮನೆಕಾರ್ಯಕ್ರಮ ಕಳೆದ 30 ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಮುರಗೇಶ ಶೇಖಾ, ಗೀತಾ ತಿಪ್ಪಾ ಅವರಿಂದ ಸಾಮೂಹಿಕ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿ ದೇವಸ್ಥಾನದ ಶರಣಮ್ಮತಾಯಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಎಚ್.ಎಸ್. ಹುಳಿಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ರವೀಂದ್ರ ಪಟ್ಟಣಶೆಟ್ಟಿ, ರವಿ ಅಂಗಡಿ, ಪ್ರೊ.ಎಸ್.ಐ.ರಾಜನಾಳ, ಪ್ರೊ.ಜಿ.ಜಿ.ಹೂಗಾರ, ಶಿವಾನಂದ ಸಿಂದಗಿ, ಬಸವರಾಜ ಬರಗುಂಡಿ, ಸುರೇಶ ರಾಜನಾಳ, ರಾಚಪ್ಪ ಯಂಡಿಗೇರಿ, ಶಿವಕುಮಾರ ಶಿಪ್ರಿ, ಮಹಾಲಿಂಗಪ್ಪ ಕರನಂದಿ, ಗಿರೀಶ ನೀಲಕಂಠಮಠ, ಬಸವರಾಜ ಗೆದ್ದಲಮರಿ, ಸಂಗಮೇಶ ಯಳಮೇಲಿ, ಮಹಾಂತೇಶ ಸಿಂದಗಿ, ಶ್ರೀದೇವಿ ಶೇಖಾ, ಜಯಶ್ರೀ ಬರಗುಂಡಿ, ಚನ್ನಮ್ಮ ಜವಳಿ, ಸುರೇಖಾ ಗೆದ್ದಲಮರಿ, ನಿರ್ಮಲಾ ಬರಗುಂಡಿ, ಕವಿತಾ ಬರಗುಂಡಿ, ವಿಶಾಲಾಕ್ಷಿ ಗಾಳಿ, ಗಾಯತ್ರಿ ಕಲ್ಯಾಣಿ, ಸುರೇಖಾ ಕಲ್ಯಾಣಿ, ಸೌಮ್ಯಾ ಯಳಮೇಲಿ, ಲಕ್ಷ್ಮೀ ತೊರಲಿ ಮತ್ತಿತರರು ಇದ್ದರು.1
- |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|1
- ಚಿಕ್ಕೋಡಿ:ಸ್ಲೋ ಆಗಿ ರೋಡ್ ಹಂಪ್ ದಾಟುತ್ತಿದ್ದ ಓಮಿನಿ ಕಾರಗೆ ಫಾಸ್ಟ್ ಆಗಿ ಬಂದ ಕೆಎಸ್ ಆರ್ ಟಿಸಿ ಬಸ್ ಹಿಂಬದಿಗೆ ಗುದ್ದಿದ ಘಟನೆ ಚಿಕ್ಕೋಡಿ ಪಟ್ಟಣದ ಇಂದಿರಾನಗರ ಬಳಿ ನಡೆದಿದೆ. ಇವತ್ತು ಬೆಳಗಿನಜಾವ ಈ ಘಟನೆ ನಡೆದಿದೆ.ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಓಮಿನಿ ಕಾರ ಮಾಲಿಕರ ಹಾಗೂ ಕೆಎಸ್ಆರ್ಟಿಸಿ ಚಾಲಕ,ನಿರ್ವಾಹಕ ಮಧ್ಯೆ ಮಾತಿನ ಚಕಮಕಿ ನಡೆಯಿತು.ಬಸ್ ನ ಡಿಕ್ಕಿಯಾದ ಪರಿಣಾಮ ಓಮಿನಿ ಕಾರಿನ ಹಿಂಭಾಗ ನುಜ್ಜುಗುಜ್ಜಾಗಿದೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.4
- Post by @april14news1
- ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ. ನೀರಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು. ಹನುಮನಾಳ ಗ್ರಾಮದ ಬಳಿ ನಡೆದ ಘಟನೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗ್ರಾಮ. ಇಳಕಲ್ ಅಗ್ನಿಶಾಮಕದಳ ಸಿಬ್ಬಂದಿಯಿಂದ ಕಾರ್ಯಾಚರಣೆ. ಶವ ಹೊರಕ್ಕೆ ತೆಗೆದ ಅಗ್ನಿಶಾಮಕ ಸಿಬ್ಬಂದಿ. ವಿನಾಯಕ ಗೊಲ್ಲರ(೧೦),ವಿಜಯ್ ವಾಲಿಕಾರ(೧೫) ಮೃತು ಬಾಲಕರು. ಇಬ್ಬರು ಇಳಕಲ್ ನಗರದ ನಿವಾಸಿಗಳು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ. ಇಳಕಲ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ1
- ಶೈಲಿಯಲ್ಲಿ): "ಕ್ಷಣ ಕ್ಷಣದ ನಿಖರ ಮಾಹಿತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಿಶೇಷ ವರದಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ." ಆಯ್ಕೆ 3 (ಜನಹಿತ ವರದಿಗಾಗಿ): "ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ, ನಾಡಿನ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ನಮ್ಮೊಂದಿಗೆ ಇರಿ."2
- ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ಮನೆಮಾಡಿದೆ. ಬರೋಬ್ಬರಿ 9 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಗ್ರಾಮದ ಆರಾಧ್ಯ ದೈವ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗುತ್ತಿದೆ. ಭಕ್ತಿಯ ಪರಾಕಾಷ್ಠೆ, ಜಾನಪದ ಕಲೆಗಳ ರಂಗು ಮತ್ತು ಸಡಗರದ ನಡುವೆ ದೇವಿಯ ಭವ್ಯ ಮೆರವಣಿಗೆಗೆ ಇಡೀ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ಎಲ್ಲಾ ಜನಾಂಗದವರು ಸೇರಿ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಿದರು1
- Post by @april14news1