ಅಖಿಲ ಕರ್ನಾಟಕ ರೈತ ಸಂಘಟನೆ ತಾಲ್ಲೂಕು ಘಟಕ:ಸಮರ್ಪಕ ವಿದ್ಯುತ್ ಸರಬರಾಜಿಗೆ ಒತ್ತಾಯಿಸಿ ಪ್ರತಿಭಟನೆ ಬಾಗೇಪಲ್ಲಿ:- ಗ್ರಾಮೀಣ ಭಾಗದ ಕೃಷಿ ಮತ್ತು ತರಕಾರಿ ಬೆಳೆಗಳಿಗೆ ನೀರು ಹರಿಸಲು ಅಗತ್ಯವಿರುವಷ್ಟು ವೋಲ್ಟೇಜ್ ಸಹಿತ ಹಾಗೂ ಬೆಳಗ್ಗೆ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘಟನೆ (ಎಕೆಆರ್‌ಎಸ್) ತಾಲ್ಲೂಕು ಘಟಕ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು. ಸೂಕ್ತ ವಿದ್ಯುತ್ ನಿರ್ವಹಣೆ ಮಾಡದ ಬೆಸ್ಕಾಂ ವಿರುದ್ಧ ಪ್ರತಿಭಟನಕಾರರು ಧಿಕ್ಕಾರ ಕೂಗಿದರು. ಎಕೆ.ಆರ್.ಎಸ್. ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಬೇಸಿಗೆ ಆರಂಭ ಆಗಿದೆ. ಶೇ 95ರಷ್ಟು ರೈತರು ಬೆಳೆಗಳನ್ನೇ ನಂಬಿದ್ದು, ಮಧ್ಯಾಹ್ನದ ನಂತರ ನೀರು ಹರಿಸಲು ಸಾಧ್ಯವಿಲ್ಲ. ಹನಿ ನೀರಾವರಿ ಪೈಪ್‌ಗಳಲ್ಲಿನ ನೀರಿನ ತಾಪ ಶೇ 60 ಡಿಗ್ರಿ ಸೆಲ್ಸಿಯಸ್ ಮುಟ್ಟಿರುತ್ತದೆ.ಪೈಪುಗಳು ಬಿಸಿಲು ಕಾದು ಒಂದು ಗಂಟೆ ಕಾಲ ಬಿಸಿ ನೀರು ಹರಿಯುತ್ತದೆ ಇಂಥ ನೀರು ಬಿಡುವುದರಿಂದ ಬೆಳೆಗಳ ಬೇರು ಸಾಯುತ್ತಿವೆ ಎಂದು ಹೇಳಿದರು. ಆದ್ದರಿಂದ ವಿದ್ಯುತ್ ಬೆಳಗಿನ ಸಮಯದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು. ನೀರಾವರಿಗೆ ವಿದ್ಯುತ್ ಅನ್ನು ಬೆಳಗ್ಗೆ 5 ಗಂಟೆಯಿಂದ 12 ಗಂಟೆವರೆಗೆ ನಿರಂತರವಾಗಿ ಸರಬರಾಜು ಮಾಡಬೇಕು. ವಿದ್ಯುತ್ ವೋಲ್ಟೇಜ್ ಅನ್ನು ಸಮರ್ಪಕ ರೀತಿಯಲ್ಲಿಡಬೇಕು. ಟ್ರಾನ್ಸ್‌ಫಾರ್ಮರ್ ಅಳವಡಿಕೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಇತರ ತೊಂದರೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ವೇಣುಗೋಪಾಲ್ ಪ್ರತಿಭಟನಕಾರರ ಮನವಿ ಸ್ವೀಕರಿಸಿದರು. ಹಂತಹಂತದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ, ಪ್ರತಿಭಟನಕಾರರು ಪ್ರತಿಭಟನೆ ವಾಪಸ್ ಪಡೆದರು. ಪ್ರತಿಭಟನೆಯಲ್ಲಿ ಎಕೆಆರ್‌ಎಸ್‌ನ ಹೇಮಚಂದ್ರ, ಎ.ಎನ್.ಶ್ರೀರಾಮರೆಡ್ಡಿ, ಜಯಪ್ರಕಾಶರೆಡ್ಡಿ, ಮಹಮದ್ ಎಸ್.ನೂರುಲ್ಲಾ, ನಿಜಾಮುದ್ದೀನ್, ಆಂಜನೇಯರೆಡ್ಡಿ, ರಾಮಾಂಜಿ, ಶ್ರೀನಿವಾಸ್, ವಿಶ್ವನಾಥರೆಡ್ಡಿ, ಶ್ರೀನಿವಾಸನಾಯಕ್, ಬಿ.ನರಸಿಂಹಪ್ಪ, ಜೀವಿಕಾ ನಾರಾಯಣಸ್ವಾಮಿ, ಮದ್ದಿರೆಡ್ಡಿ, ವೆಂಕಟರಾಮರೆಡ್ಡಿ, ವೆಂಕಟಶಿವಪ್ಪ, ಜಿ.ವಿ.ಸುರೇಶ್, ಮದ್ದೇಲೇಟಿರೆಡ್ಡಿ ಇದ್ದರು.

- Post by Naveedpasha1
- ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಸಾವು ಚನ್ನಗಿರಿಯ ದುರಂತಕ್ಕೆ ಗ್ರಾಮದಲ್ಲಿ ಶೋಕ1
- Mohammed Nalapad ಅವರು ತಮ್ಮ ಮೇಲೆ ನಡೆದ Enforcement Directorate (ED) ದಾಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ಇದನ್ನು ರಾಜಕೀಯ ಪ್ರೇರಿತ ಸಂಚು ಎಂದು ಆರೋಪಿಸಿದ್ದಾರೆ ⚠️ 👉 2021ರ FIR ನಂತರ ಈಗ ದಾಳಿ ಏಕೆ? ಎಂದು ಪ್ರಶ್ನೆ 👉 ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದ ನಲಪಾಡ್ 👉 ಕುಟುಂಬದ ಆತಂಕದ ಬಗ್ಗೆ ಭಾವುಕರಾಗಿ ಪ್ರತಿಕ್ರಿಯೆ 👉 ಶ್ರೀಕಿ ಪರಿಚಯವಿದೆ, ಆದರೆ ವೈಯಕ್ತಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲ ಎಂದ ಸ್ಪಷ್ಟನೆ “ನಾನು ಯಾವುದೇ ತಪ್ಪು ಮಾಡಿಲ್ಲ, ಸತ್ಯಮೇವ ಜಯತೇ” ಎಂದು ತಮ್ಮ ಮಾತು ಮುಗಿಸಿದರು.1
- 🚩🚩🚩🚩3
- Post by Suresh Belagere1
- ಹೊಳಲ್ಕೆರೆ ಪಟ್ಟಣದಲ್ಲಿ ಶ್ರೀ ಬಸವ ಜಯಂತಿ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೊಳಲ್ಕೆರೆ ಪಟ್ಟಣ ಶಾಖೆ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಟ್ರ್ಯಾಕ್ಟರ್ ನಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಲಾಯಿತು.1
- ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಸಂಜೆ ವೇಳೆ ಏಕಾಏಕಿ ಸುರಿದ ಗಾಳಿ ಸಹಿತ ಭಾರೀ ಮಳೆಯ ಅಬ್ಬರಕ್ಕೆ ಗ್ರಾಮದಲ್ಲಿ ಅಸ್ತವ್ಯಸ್ತ ಪರಿಸ್ಥಿತಿ ಉಂಟಾಗಿದೆ. ಬಿರುಗಾಳಿ ಮತ್ತು ಮಳೆಯ ತೀವ್ರತೆಗೆ ಹೊರಾಂಗಣದಲ್ಲಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ತಾತ್ಕಾಲಿಕ ವ್ಯವಸ್ಥೆಗಳು ಹಾನಿಗೊಳಗಾಗಿವೆ. ಗಾಳಿಯ ವೇಗದಿಂದ ಕೆಲವು ಮರದ ಕೊಂಬೆಗಳು ಮುರಿದು ಬಿದ್ದು, ವಿದ್ಯುತ್ ಸರಬರಾಜು ಕೂಡ ವ್ಯತ್ಯಯಗೊಂಡಿದೆ. ಕೆಲಕಾಲ ಗ್ರಾಮಸ್ಥರು ಆತಂಕಕ್ಕೊಳಗಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮಳೆ ಶಾಂತವಾದ ಬಳಿಕ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.1
- ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ 24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ.1
- Post by Suresh Belagere1