ಶಿವಮೊಗ್ಗ-ಪ್ರೇಮ ವೈಫಲ್ಯಕ್ಕೆ ನೊಂದು ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದ ಯುವತಿಯ ರಕ್ಷಣೆ ಶಿವಮೊಗ್ಗ: ಜಿಲ್ಲೆಯ ಕಾರ್ಗಲ್ ಬಳಿ ಪ್ರೇಮ ವೈಫಲ್ಯದಿಂದ ಮನನೊಂದು ಯುವತಿ ಯೊಬ್ಬಳು ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದಾರೆ. ಜಿಲ್ಲೆಯ ಸಾಗರ ತಾಲೂಕು ಕಾರ್ಗಲ್ ಸಮೀಪದ ಬಿದರೂರು ಚಾನೆಲ್ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಯುವತಿ ತುಮಕೂರು ಮೂಲದವರು ಎಂದು ತಿಳಿದು ಬಂದಿದ್ದು, ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಮೀನು ಹಿಡಿಯುತ್ತಿದ್ದ ಸಾರ್ವಜನಿಕರು ಯುವತಿಯ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿ ಕಾರ್ಗಲ್ ಪೊಲೀಸ್ ಠಾಣೆ ಮತ್ತು ಇಅರ್‌ಎಸ್‌ಎಸ್ 112ಗೆ ಕರೆ ಮಾಡಿದರು. ಪೊಲೀಸರು ಬರುವ ಸಮಯದಲ್ಲೇ ಯುವತಿ ನಾಲೆಗೆ ಹಾರಿದ್ದಾಳೆ. ಯುವತಿ ನಾಲೆಗೆ ಜಿಗಿಯುತ್ತಿದ್ದಂತೆ ಇಆರ್‌ವಿ ಅಧಿಕಾರಿ ಎಚ್.ಸಿ.ಅಣ್ಣಪ್ಪ ಚಾಲಕ ರಾಘವೇಂದ್ರ, ಕಾರ್ಗಲ್ ಪೊಲೀಸ್ ಠಾಣೆಯ ಸಂದೀಪ್ ಮತ್ತು ಪುರುಷೋತ್ತಮ್ ಕೂಡಲೇ ರಕ್ಷಣಾ ಕಾರ್ಯಕ್ಕೆ ಇಳಿದಿದ್ದಾರೆ. ನಾಲೆಯಿಂದ ಯುವತಿಯನ್ನು ನೀರಿನಿಂದ ರಕ್ಷಿಸಿ, ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಪೊಲೀಸರ ವಿಚಾರಣೆಯಲ್ಲಿ ಯುವತಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ್ದು ತಿಳಿದುಬಂದಿದೆ. ಪೊಲೀಸರು ಯುವತಿಯ ಪಾಲಕರನ್ನು ಸಂಪರ್ಕಿಸಿ ವಿಷಯ ತಿಳಿಸಿದರು ಮತ್ತು ಆಕೆಯನ್ನು ಕರೆದೊಯ್ಯಲು ಸೂಚಿಸಿದರು. ಸದ್ಯ ಯುವತಿಯನ್ನು ಸಾಗರ ಪಟ್ಟಣದ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದೆ. ಯುವತಿಯನ್ನು ರಕ್ಷಿಸಿದ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ನಿಖಿಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕರು ಮಾಹಿತಿ ನೀಡಿದ್ದರಿಂದ ಯುವತಿಯ ಪ್ರಾಣ ಉಳಿದಿದೆ. ಪೊಲೀಸರು ಯುವತಿ ಗುರುತನ್ನು ರಹಸ್ಯವಾಗಿರಿಸಿದ್ದಾರೆ.
ಶಿವಮೊಗ್ಗ-ಪ್ರೇಮ ವೈಫಲ್ಯಕ್ಕೆ ನೊಂದು ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದ ಯುವತಿಯ ರಕ್ಷಣೆ ಶಿವಮೊಗ್ಗ: ಜಿಲ್ಲೆಯ ಕಾರ್ಗಲ್ ಬಳಿ ಪ್ರೇಮ ವೈಫಲ್ಯದಿಂದ ಮನನೊಂದು ಯುವತಿ ಯೊಬ್ಬಳು ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದಾರೆ. ಜಿಲ್ಲೆಯ ಸಾಗರ ತಾಲೂಕು ಕಾರ್ಗಲ್ ಸಮೀಪದ ಬಿದರೂರು ಚಾನೆಲ್ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಯುವತಿ ತುಮಕೂರು ಮೂಲದವರು ಎಂದು ತಿಳಿದು ಬಂದಿದ್ದು, ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಮೀನು ಹಿಡಿಯುತ್ತಿದ್ದ ಸಾರ್ವಜನಿಕರು ಯುವತಿಯ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿ ಕಾರ್ಗಲ್ ಪೊಲೀಸ್ ಠಾಣೆ ಮತ್ತು ಇಅರ್‌ಎಸ್‌ಎಸ್ 112ಗೆ ಕರೆ ಮಾಡಿದರು. ಪೊಲೀಸರು ಬರುವ ಸಮಯದಲ್ಲೇ
ಯುವತಿ ನಾಲೆಗೆ ಹಾರಿದ್ದಾಳೆ. ಯುವತಿ ನಾಲೆಗೆ ಜಿಗಿಯುತ್ತಿದ್ದಂತೆ ಇಆರ್‌ವಿ ಅಧಿಕಾರಿ ಎಚ್.ಸಿ.ಅಣ್ಣಪ್ಪ ಚಾಲಕ ರಾಘವೇಂದ್ರ, ಕಾರ್ಗಲ್ ಪೊಲೀಸ್ ಠಾಣೆಯ ಸಂದೀಪ್ ಮತ್ತು ಪುರುಷೋತ್ತಮ್ ಕೂಡಲೇ ರಕ್ಷಣಾ ಕಾರ್ಯಕ್ಕೆ ಇಳಿದಿದ್ದಾರೆ. ನಾಲೆಯಿಂದ ಯುವತಿಯನ್ನು ನೀರಿನಿಂದ ರಕ್ಷಿಸಿ, ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಪೊಲೀಸರ ವಿಚಾರಣೆಯಲ್ಲಿ ಯುವತಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ್ದು ತಿಳಿದುಬಂದಿದೆ. ಪೊಲೀಸರು ಯುವತಿಯ ಪಾಲಕರನ್ನು ಸಂಪರ್ಕಿಸಿ ವಿಷಯ ತಿಳಿಸಿದರು ಮತ್ತು ಆಕೆಯನ್ನು ಕರೆದೊಯ್ಯಲು ಸೂಚಿಸಿದರು. ಸದ್ಯ ಯುವತಿಯನ್ನು ಸಾಗರ ಪಟ್ಟಣದ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದೆ. ಯುವತಿಯನ್ನು ರಕ್ಷಿಸಿದ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ನಿಖಿಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕರು ಮಾಹಿತಿ ನೀಡಿದ್ದರಿಂದ ಯುವತಿಯ ಪ್ರಾಣ ಉಳಿದಿದೆ. ಪೊಲೀಸರು ಯುವತಿ ಗುರುತನ್ನು ರಹಸ್ಯವಾಗಿರಿಸಿದ್ದಾರೆ.
- ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಕಸ್ತೂರಿ ರಂಗನ್ ಸಮಿತಿ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿಧಾನಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿರುವುದರಿಂದ ಈ ವರದಿಯ ಜಾರಿಗೆ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರಕ್ಕೆ ಅಧಿಕೃತವಾಗಿ ಮಾಹಿತಿ ನೀಡಿದ್ದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗ ಮತ್ತೆ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸಿ, ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ. ಇದು ಖಂಡನೀಯ. ಈ ಕರಡು ಅಧಿಸೂಚನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಈ ವಿಷಯದ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ಅರಣ್ಯ ಸಚಿವರಾದ ಶ್ರೀ ರಾಮಲಿಂಗರೆಡ್ಡಿಯವರು ಸಹ ವಿಧಾನಸಭೆಯಲ್ಲಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಕಸ್ತೂರಿ ರಂಗನ್ ಸಮಿತಿ ವರದಿ ಹೇಳಿರುವಂತೆಯೇ ಕರ್ನಾಟಕದ ರಾಜ್ಯದ 1,576 ಗ್ರಾಮ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಈ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಪ್ರಸ್ತಾವಿತ ಪಟ್ಟಿಯಲ್ಲಿವೆ. ಜನವಸತಿ ಪ್ರದೇಶ, ಕೃಷಿ ಭೂಮಿ ಇರುವ ಪ್ರದೇಶವನ್ನೂ ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಗುರುತಿಸಿರುವುದರಿಂದ ಮಲೆನಾಡಿನ ರೈತರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಆದರೆ ಸರ್ಕಾರ ಈ ವರದಿಯ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಕರಡು ಅಧಿಸೂಚನೆಯನ್ನು ವಿರೋಧಿಸಲಿದೆ. ಹೀಗಾಗಿ ಮಲೆನಾಡಿನ ಜನರು ಆತಂಕ ಪಡುವ ಅಗತ್ಯ ಇಲ್ಲ. ಮಲೆನಾಡಿನ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ. ಈ ವಿಚಾರವನ್ನು ಈಗಾಗಲೇ ನಮ್ಮ ಪಕ್ಷದ ಹಿರಿಯ ನಾಯಕರಾದ ಶ್ರೀ ಆರ್.ವಿ. ದೇಶಪಾಂಡೆ, ಶಾಸಕ ಮಿತ್ರರಾದ ಶ್ರೀ ಭೀಮಣ್ಣ ಟಿ. ನಾಯಕ್, ಶ್ರೀ ಟಿ.ಡಿ. ರಾಜೇಗೌಡ, ಶ್ರೀ ಎಚ್. ಡಿ. ತಮ್ಮಯ್ಯ ಹಾಗೂ ಶ್ರೀ ಎ.ಎಸ್. ಪೊನ್ನಣ್ಣ ಅವರು ಸದನದ ಒಳಗೂ ಮತ್ತು ಹೊರಗೆ ಪ್ರಸ್ತಾಪಿಸಿ ಚರ್ಚಿಸಿದ್ದಾರೆ. ಸರ್ಕಾರ ಈ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದೆ. ವಿಪಕ್ಷ ನಾಯಕರು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸುವುದಕ್ಕೆ ಬದಲಾಗಿ ಗೊಂದಲ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಅನಗತ್ಯವಾಗಿ ಮಲೆನಾಡು ಭಾಗದ ರೈತರಲ್ಲಿ ಆತಂಕ ಸೃಷ್ಟಿಸುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅತ್ಯಂತ ಮಹತ್ವದ ಈ ವಿಷಯದ ಕುರಿತು ಚರ್ಚೆಗೆ ಮುಂದಾಗುವ ಬದಲು ಗದ್ದಲ ನಡೆಸಿ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಿಚಾರವಾಗಿ ನಾನು ವೈಯಕ್ತಿಕವಾಗಿಯೂ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಈ ಕರಡು ಅಧಿಸೂಚನೆಯನ್ನು ವಿರೋಧಿಸುವ ತೀರ್ಮಾನ ಪ್ರಕಟಿಸಿದ್ದಾರೆ. ರೈತರ ಜೊತೆ ನಿಲ್ಲುವುದಾಗಿ ಅಭಯ ನೀಡಿದ್ದಾರೆ. ಹೀಗಾಗಿ ಮಲೆನಾಡಿನ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರೈತರು ಯಾವುದೇ ಆತಂಕ ಪಡಬಾರದು. ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಸದಾ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತವರು. ಅವರ ಆಶಯಗಳನ್ನು ಎತ್ತಿಹಿಡಿಯುವುದೇ ನನ್ನ ಗುರಿ. ಅವರ ಮಾರ್ಗದಲ್ಲಿಯೇ ನಾನು ನಡೆಯುತ್ತಿದ್ದೇನೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ.1
- ನಮ್ಮ ಚನ್ನಗಿರಿ ತಾಲ್ಲೂಕು ತುಮಕೊಸ್ ಅಧ್ಯಕ್ಷರು ಸಗಾರಪೇಟೆಯಲ್ಲಿ ನೂತನ ವಾಗಿ ಸೂಪರ್ ಮಾರ್ಕೆಟ್ ಉದ್ಘಾಟನೆ ನೆರವೇರಿಸಿದರು.1
- ಭದ್ರಾ ನೀರು ಹರಿಸದ ರಾಜ್ಯ ಸರ್ಕಾರದ ವಿರುದ್ಧ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲು ಆಗ್ರಹಿಸಿ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇನ್ನೂ ಬಿಜೆಪಿ ಪಕ್ಷ ಹಾಗೂ ಜೆ ಡಿ ಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದ್ದು ಹೊಸದುರ್ಗ ಬಿಜೆಪಿ ಮುಖಂಡರು ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಎಂ ಎಲ್ ಸಿ ಕೆ ಎಸ್ ನವೀನ್ ಅವರು ಸಹ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎಸ್ ಲಿಂಗಮೂರ್ತಿ ಅವರು ಅಹ ಆಗಮಿಸಿ ಬಿಸಿಲನ್ನೂ ಸಹ ಲೆಕ್ಕಿಸದೆ ಪ್ರತಿಭಟನೆ ನೇತೃತ್ವ ವಹಿಸಿದ್ದು ಹುಳಿಯಾರು ರಸ್ತೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ಹೊರ ಹಾಕಿದ್ದು ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಆಗ್ರಹ ಮಾಡಿದರು. ತಕ್ಷಣವೇ ಹೊಸದುರ್ಗ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡಿ ಕುಡಿಯುವ ನೀರಿನ ಯೋಜನೆಯನ್ನ ಶೀಘ್ರ ಜಾರಿಗೊಳಿಸಲು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದರು. ಇದೇ ವೇಳೆ ಎಸ್ ಲಿಂಮೂರ್ತಿ ಅವರು ಮಾತನಾಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರ ಈ ಬರದ ನಾಡು ಹೊಸದುರ್ಗಕ್ಕೆ ನೀರು ಕೊಡುವ ಬರವಸೆ ಇಟ್ಟಿದ್ದು ಬರವಸೆ ಹುಸಿಯಾಗಿದೆ. ಮೂರು ವರ್ಷಗಳು ಕಳೆದರು ಸಹ ಸರ್ಕಾರ ನೀರು ಹರಿಸುವ ಬಗ್ಗೆ ಸುಳ್ಳು ಬರವಸೆಯನ್ನ ಕೊಡುತ್ತಾ ಬಂದಿದೆ. ಈ ತಾಲ್ಲೂಕಿನ ಶಾಸಕರು ಕೂಡ ಬೆಂಬಲ ಕೋರಿದ್ದು ಕೈ ಜೋಡಿಸಿದ್ದೆವು. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮಾನವೀಯತೆಯಿಂದ ಬೆಂಬಲ ಕೊಟ್ಟಿದ್ದೇವೆ. ಕಳೆದ ಆರೆಂಟು ತಿಂಗಳಾದರು ಸಹ ಸ್ಥಳೀಯ ಶಾಸಕರು ನೀರು ಕೊಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನೀರಿಗಾಗಿ ಹೋರಾಟ ಮಾಡುವ ಸಮಯ ಬಂದಿದ್ದು ಈ ಮೂಲಕ ಸರ್ಕಾರದ ಕಣ್ಣನ್ನ ತೆರಯಬೇಕಿದೆ. ನಮ್ಮ ಸರ್ಕಾರದ ಅವದಿಯಲ್ಲಿ ಅರವತ್ತರಷ್ಟು ಹಣ ಮೀಸಲಿಟ್ಟು ಕೆಲಸ ಆಗಿದ್ದು ಈ ಸರ್ಕಾರ ಬಂದ ನಂತರ ಇಪ್ಪತ್ತರಷ್ಟು ಸಹ ಹಣ ಬಿಡುಗಡೆ ಮಾಡಿಲ್ಲ ಎಂದು ಲಿಂಗಮೂರ್ತಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಗಾಲ ಬಂದಿದ್ದರು ಸಹ ಸರ್ಕಾರ ಜವಾಬ್ದಾರಿ ತೋರದೆ ಅನ್ಯಾಯ ಮಾಡಿದೆ. ಕೇವಲ ಮಂತ್ರಿ ಸ್ಥಾನಕ್ಕಾಗಿ ಹೊಡೆದಾಟ ನಡೆಸುತ್ತಿದ್ದು ಬರಗಾಲದಿಂದ ಕಂಗೆಟ್ಟ ಜನರಿಗೆ ನೀರು ಕೊಡುವ ಕೆಲಸ ಮಾಡದೆ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡದೆ ಇದ್ದು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಎಸ್ ಲಿಂಗಮೂರ್ತಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.1
- ಕೋಟೆ ನಾಡು ಚಿತ್ರದುರ್ಗದಲ್ಲಿ ರಾಕಿಂಗ್ ಸ್ಟಾರ್ ಯಶು ಅಭಿಮಾನಿಗಳ ಸಂಭ್ರಮ1
- ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಶಿಗ್ಗಾವಿ: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ, ಅಪವಿತ್ರಗೊಳಿಸಿದ ಘಟನೆಯನ್ನು ಖಂಡಿಸಿ ಪ್ರಮೋದ್ ಮುತಾಲಿಕ್ ಹಾಗೂ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಬಂದ ಕರೆಗೆ ಸಾರ್ವಜನಿಕರು ಹಾಗೂ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಭಕ್ತಾದಿಗಳ ಮನಸ್ಸಿನಲ್ಲಿ ಆತಂಕ ಉಂಟಾಗಿದ್ದು, ಶಾಂತಿಯುತವಾಗಿ ಬಂದ್ ಆಚರಿಸುವ ಮೂಲಕ, ಆರೋಪಿಗೆ ಕಠಿಣಾತಿ ಕಠೀಣ ಶಿಕ್ಷೆ ಯಾಗಲೇಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಪರಾಧಿಗೆ ರಕ್ಷಣೆ ನೀಡುವ ಹುನ್ನಾರ ನಡೆದರೆ ಮತ್ತು ತಾಲೂಕಿನಲ್ಲಿ ಅವನಿಗೆ ನೀಡಿರುವ ಸೌಲತ್ತುಗಳನ್ನು ಹಿಂಪಡೆದು ಗಡಿಪಾರು ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರಹರಿ ಕಟ್ಟಿ ಮಾತನಾಡಿ, ಘಟನೆಗೆ ಸಂಬಂಧವಿಲ್ಲದ ಸಣ್ಣ ಹುಡುಗರು, ಬಿಜೆಪಿ ನಾಯಕರು ಸೇರಿದಂತೆ ಇತರರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ನಮ್ಮ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಪೊಲೀಸರ ಮೂಲ ಪ್ರಯತ್ನಿಸಲಾಗಿದ್ದು ತೀವ್ರ ಖಂಡನೀಯ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರೇಣಕನಗೌಡ ಪಾಟೀಲ, ಅನೀಲ ಸಾತಣ್ಣನವರ ಸೇರಿದಂತೆ ಇತರರಿದ್ದರು.4
- ಉತ್ತಮ ಗುಣಮಟ್ಟದ ಆಹಾರ ಸೇವಿಸಿ ಕಿಡ್ನಿ(ಮೂತ್ರಪಿಂಡ)ಖಾಯಿಲೆಯಿಂದ ದೂರವಿರಿ : ಡಾ.ಪ್ರಮೋದ್ ಕುಮಾರ್ ಜಗಳೂರು.25 ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂತ್ರಪಿಂಡ ಖಾಯಿಲೆಗೆ ಸಂಬಂಧಿಸಿದ ವೈಧ್ಯ ರೋಗಿಗಳ ಡೈಯಾಲೀಸಿಸ್ ಕೇಂದ್ರಕ್ಕೆ ಇತ್ತಿಚೇಗೆ ಭೇಟಿ ನೀಡಿ ಕಿಡ್ನಿ ವೈಪಲ್ಯ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಕೇಂದ್ರ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು ಸಿಬ್ಬಂದಿಗಳು ಸಹ ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದು ರೋಗಿಗಳು ಸಹ ಇವರ ಜೊತೆ ಸಹಕಾರ ನೀಡುವುದರಿಂದ ಯಾವುದೇ ತೊಂದೆರೆಯಿಲ್ಲ ಎಂದರು. ಜಿಲ್ಲೆಯಾದ್ಯಂತ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಲಿ ಖಾಸಗಿ ಕಂಪನಿಯಿಂದ ನಡೆಯುತ್ತಿರುವ ಡಯಾಲೀಸ್ ಕೇಂದ್ರಗಳು ನಡೆಯುತ್ತಿವೆ ನಾವು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು. ಕಿಡ್ನಿ ವೈಫ್ಯಲ್ಯಕ್ಜೆ ಮುಖ್ಯ ಲಕ್ಷಣಗಳು :ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಇರುವಾಗ ಬೆನ್ನು, ಪಾರ್ಶ್ವ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಮತ್ತು ಅಲೆ ಅಲೆಯಾದ ನೋವು ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣವಾಗಿದೆ ಎಂದರು. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಉಪ್ಪು ಮತ್ತು ಖನಿಜಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ. ಈ ಕಲ್ಲುಗಳು ಸಾಮಾನ್ಯವಾಗಿ ಮೂತ್ರನಾಳವನ್ನು ಚಲಿಸಿದಾಗ ಅಥವಾ ಅಡ್ಡಿಪಡಿಸಿದಾಗ ಅಪಾರ ನೋವನ್ನು ಉಂಟುಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಭಿನ್ನವಾಗಿರುತ್ತವೆ. ಕೆಲವು ಕಲ್ಲುಗಳು ಕೆಲವು ಮಿಮೀ ಗಾತ್ರದಲ್ಲಿರಬಹುದು, ಇನ್ನು ಕೆಲವು ಇಂಚುಗಳಷ್ಟು ಬೆಳೆಯಬಹುದು. ಕಿಡ್ನಿ ಕಲ್ಲುಗಳು ಸಾಕಷ್ಟು ಸಮಾನವಾಗಿ ಹರಡುತ್ತವೆ ಮತ್ತು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. ಕಿಡ್ನಿ ಕಲ್ಲುಗಳನ್ನು ನಾಲ್ಕು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು- ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲುಗಳು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು ಲಕ್ಷಣಗಳು ಎದ್ದು ಕಾಣುತ್ತವೆಂದರು. ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು ಮೂತ್ರಪಿಂಡದ ಕಲ್ಲಿನ ನೋವು - ಇದನ್ನು ಮೂತ್ರಪಿಂಡದ ಕೊಲಿಕ್ ಎಂದೂ ಕರೆಯುತ್ತಾರೆ - ಇದು ಊಹಿಸಬಹುದಾದ ಅತ್ಯಂತ ತೀವ್ರವಾದ ನೋವಿನ ವಿಧಗಳಲ್ಲಿ ಒಂದಾಗಿದೆ ಎಂದರು. ಮೂತ್ರಪಿಂಡದ ಕಲ್ಲಿನ ನೋವು ಹೆಚ್ಚಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಕಲ್ಲು ಚಲಿಸಿದಂತೆ ನೋವು ಸ್ಥಳ ಮತ್ತು ತೀವ್ರತೆಯನ್ನು ಬದಲಾಯಿಸುತ್ತದೆ. ನೋವು ಆಗಾಗ್ಗೆ ಅಲೆಗಳಲ್ಲಿ ಬಂದು ಹೋಗುತ್ತದೆ, ಮೂತ್ರನಾಳವು ಕಲ್ಲನ್ನು ಹೊರಗೆ ತಳ್ಳಲು ಪ್ರಯತ್ನಿಸುವಾಗ ಸಂಕುಚಿತಗೊಳ್ಳುವುದರಿಂದ ಇದು ಇನ್ನಷ್ಟು ಹದಗೆಡುತ್ತದೆ. ಪ್ರತಿಯೊಂದು ಅಲೆಯು ಕೆಲವು ನಿಮಿಷಗಳ ಕಾಲ ಇರುತ್ತದೆ, ಕಣ್ಮರೆಯಾಗಬಹುದು ಮತ್ತು ನಂತರ ಮತ್ತೆ ಬರಬಹುದು ಎಂದರು.2
- ಹೇಮಾವತಿ ನೀರಿಗಾಗಿ ಆ. 29 ಕ್ಕೆ ಸೋಮಲಾಪುರದ ಕಟ್ಟಿ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ರೈತರ ಬೃಹತ್ ಸಭೆ ಹೇಮಾವತಿ ನೀರಿಗಾಗಿ ಆ. 29 ಕ್ಕೆ ಸೋಮಲಾಪುರದ ಕಟ್ಟಿ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ರೈತರ ಬೃಹತ್ ಸಭೆ --------------------- ಚಿಕ್ಕನಾಯಕನಹಳ್ಳಿ: ತಾಲೂಕಿನ 26 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರು ಹರಿಸುವ ಯೋಜನೆ ಮಂಜೂರಾಗಿ ದಶಕ ಕಳೆದರೂ, ಕಾಮಗಾರಿ ಪೂರ್ಣಗೊಳ್ಳದೆ ಇರುವುದನ್ನು ಖಂಡಿಸಿ ಹಾಗೂ ಬಾಕಿ ಉಳಿದ ಕೆರೆಗಳಿಗೆ ತಕ್ಷಣ ನೀರು ಹರಿಸಲು ಆಗ್ರಹಿಸಿ ಬೃಹತ್ ರೈತರ ಸಭೆಯು ಆಗಸ್ಟ್ 29 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಸೋಮಲಾಪುರದ ಕಟ್ಟಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಸರ್ಕಾರವು 2013 ರಲ್ಲೇ ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಮಂಜೂರಾತಿ ನೀಡಿದ್ದರೂ, ಇದುವರೆಗೆ ಶೆಟ್ಟೀಕೆರೆ, ಸಾಸಲು, ದಬ್ಬೇಘಟ್ಟ, ಮೇಲನಹಳ್ಳಿ ಮತ್ತು ನವಿಲೆ ಕೆರೆಗಳಿಗೆ ಮಾತ್ರ ನೀರು ತಲುಪಿಸಲಾಗಿದೆ. ಆದರೆ, ಸಾಸಲು ಪೆಮ್ಮಲದೇವರಹಳ್ಳಿ ಕೆರೆಯಿಂದ ಗೋಪಾಲನಹಳ್ಳಿ, ಪಟ್ಟದದೇವರಕೆರೆ, ಹಾಲ್ಯುರಿಕೆರೆ, ಮಾದಿಹಳ್ಳಿ, ನೆಲಕೆರೆ, ಮಂಚಸಂದ್ರ, ಬೆನಕನಕಟ್ಟೆ ಹಾಗೂ ಕುಮೂರು ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಮಾಡದೆ ನಿರ್ಲಕ್ಷಿಸಲಾಗಿದೆ ಎಂದು ಸಮಗ್ರ ನೀರಾವರಿ ಅಭಿವೃದ್ಧಿ ಸಮಿತಿ ಆರೋಪಿಸಿದೆ. ಬರದಿಂದ ತತ್ತರಿಸಿದ ಗ್ರಾಮಗಳು: ಈ ಭಾಗದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತಗೊಂಡಿದ್ದು, ಕುಡಿಯುವ ನೀರಿಗೂ ತೊಂದರೆಯಾಗಿದೆ. ಸರಿಯಾದ ನೀರಿಲ್ಲದೆ ಜನ ಮತ್ತು ಜಾನುವಾರುಗಳು ಕಷ್ಟಪಡುತ್ತಿದ್ದು, ಸತತ ಹಲವು ವರ್ಷಗಳಿಂದ ಈ ಭಾಗದ ಜನರು ಭೀಕರ ಬರಗಾಲದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸಭೆಯಲ್ಲಿ ಅಧಿಕಾರಿ ಭಾಗಿ: ರೈತರ ಸಂಕಟವನ್ನು ಹೋಗಲಾಡಿಸಲು ನೀರಾವರಿ ಇಲಾಖೆ ಹಾಗೂ ಕಾಲುವೆ ಕಾಮಗಾರಿ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯ ದಿನದಂದೇ ಅಧಿಕಾರಿಗಳೊಂದಿಗೆ ಸ್ಥಳ ತಪಾಸಣೆ ನಡೆಸಿ, ಉಳಿದಿರುವ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಿ ನಾಲೆಯಲ್ಲಿ ನೀರು ಹರಿಸುವಂತೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಈ ರೈತ ಹೋರಾಟದ ಸಭೆಗೆ ತಾಲೂಕಿನ ರೈತರು, ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸಬೇಕಾಗಿ ಸಮಗ್ರ ನೀರಾವರಿ ಅಭಿವೃದ್ಧಿ ಸಮಿತಿಯು ವಿನಂತಿಸಿದೆ. ಸಭೆಯ ವಿವರ: ದಿನಾಂಕ: 29-08-2026, ಶನಿವಾರ ಸಮಯ: ಬೆಳಿಗ್ಗೆ 11:00 ಗಂಟೆಗೆ ಸ್ಥಳ: ಸೋಮಲಾಪುರ ಶ್ರೀ ಕಟ್ಟಿ ರಂಗನಾಥಸ್ವಾಮಿ ದೇವಾಲಯ (ಶೆಟ್ಟೀಕೆರೆ, ತಿಪಟೂರು ರಸ್ತೆ)1
- ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು1