ರಕ್ತದಾನದಿಂದ ಮೂವರ ಜೀವ ಉಳಿಸಲು ಸಾಧ್ಯ: ಡಾ. ಸುಷ್ಮಾ ರೊಟ್ಟಿ ಬೆಳಗಾವಿ:ರಕ್ತದಾನ ಮಹಾದಾನ. ಒಬ್ಬ ವ್ಯಕ್ತಿ ಮಾಡುವ ಒಂದು ಯುನಿಟ್ ರಕ್ತದಾನದಿಂದ ಕನಿಷ್ಠ ಮೂರು ಜನರ ಜೀವ ಉಳಿಸಲು ಸಾಧ್ಯ ಎಂದು ಸರಕಾರಿ ಬಿಮ್ಸ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಸುಷ್ಮಾ ರೊಟ್ಟಿ ಹೇಳಿದರು. ನಗರದ ಗಣೇಶಪುರದ ಬ್ರಹ್ಮಕುಮಾರೀಸ್ ಸೇವಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ 19ನೇ ಸ್ಮೃತಿ ದಿನದ ಅಂಗವಾಗಿ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಬಿಮ್ಸ್ ಸಂಯುಕ್ತಾಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು. 18 ರಿಂದ 55 ವರ್ಷದೊಳಗಿನ, 12ಕ್ಕಿಂತ ಹೆಚ್ಚು ಹಿಮೋಗ್ಲೋಬಿನ್ ಹೊಂದಿರುವ ಆರೋಗ್ಯವಂತರು ರಕ್ತದಾನ ಮಾಡಬಹುದು. ರಕ್ತದಾನದಿಂದ ದಾನಿಯ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಬದಲಿಗೆ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ವೃದ್ಧಿಸುತ್ತದೆ. ಅಗತ್ಯವಿರುವವರಿಗೆ ಜೀವದಾನ ಮಾಡಿದ ಪುಣ್ಯವೂ ದೊರೆಯುತ್ತದೆ. ರಕ್ತದಾನದ ಬಗ್ಗೆ ಇರುವ ಭಯ, ಅನುಮಾನಗಳು ಅನಾವಶ್ಯಕ ಎಂದು ಅವರು ತಿಳಿಸಿದರು. ರಾಜಯೋಗಿನಿ ಬಿ.ಕೆ. ಸುಲೋಚನಾ ಮಾತನಾಡಿ, ಆಗಸ್ಟ್ 25 ರಂದು ದಾದಿ ಪ್ರಕಾಶಮಣಿ ಅವರು ದೇಹ ತ್ಯಜಿಸಿದ ದಿನವನ್ನು ವಿಶ್ವ ಬಂಧುತ್ವ ದಿನವಾಗಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ದೇಶಾದ್ಯಂತ ಬ್ರಹ್ಮಕುಮಾರೀಸ್ ಸಂಸ್ಥೆಯ ಸಮಾಜ ಸೇವಾ ವಿಭಾಗದಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವ ಪರಮಾತ್ಮನ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಈ ಆಧ್ಯಾತ್ಮಿಕ ಚಳುವಳಿಯನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದರು. ರಾಜಯೋಗಿ ಬಾಬು ಮಾನೆ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ರಾಜಯೋಗವೇ ಒಂದು ಪರಿಣಾಮಕಾರಿ ಔಷಧಿ. ಧ್ಯಾನ ಮತ್ತು ರಾಜಯೋಗದಿಂದ ಸಂಪೂರ್ಣ ಆರೋಗ್ಯ ಸಾಧ್ಯ ಎಂದು ಹೇಳಿದರು. ಶಿಬಿರದಲ್ಲಿ ಹಲವು ಸಹೃದಯಿ ದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಕುಮಾರಿ ಮನಿಷಾ ಅವರು ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಬಿ.ಕೆ. ಸವಿತಾ, ಕುಮಾರಿ ವಂದನಾ, ಬಿ.ಕೆ. ನಾರಾಯಣ, ಬಿ.ಕೆ. ತಿಪ್ಪಣ್ಣ, ಬಿ.ಕೆ. ವಿಜಯ, ಬಿಕೆ ಪ್ರಕಾಶ್, ಬಿಕೆ ಯುವರಾಜ, ಬಿಕೆ ಶ್ರೀಕಾಂತ್, ಬಿಕೆ ಅಜಿತ್,ಬಿಕೆ ರಾಜು, ರೋಹಣ ಡಿ.ಪ್ರವೀಣ ಗವಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಕ್ತದಾನದಿಂದ ಮೂವರ ಜೀವ ಉಳಿಸಲು ಸಾಧ್ಯ: ಡಾ. ಸುಷ್ಮಾ ರೊಟ್ಟಿ ಬೆಳಗಾವಿ:ರಕ್ತದಾನ ಮಹಾದಾನ. ಒಬ್ಬ ವ್ಯಕ್ತಿ ಮಾಡುವ ಒಂದು ಯುನಿಟ್ ರಕ್ತದಾನದಿಂದ ಕನಿಷ್ಠ ಮೂರು ಜನರ ಜೀವ ಉಳಿಸಲು ಸಾಧ್ಯ ಎಂದು ಸರಕಾರಿ ಬಿಮ್ಸ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಸುಷ್ಮಾ ರೊಟ್ಟಿ ಹೇಳಿದರು. ನಗರದ ಗಣೇಶಪುರದ ಬ್ರಹ್ಮಕುಮಾರೀಸ್ ಸೇವಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ 19ನೇ ಸ್ಮೃತಿ ದಿನದ ಅಂಗವಾಗಿ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಬಿಮ್ಸ್ ಸಂಯುಕ್ತಾಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು. 18 ರಿಂದ 55 ವರ್ಷದೊಳಗಿನ, 12ಕ್ಕಿಂತ ಹೆಚ್ಚು ಹಿಮೋಗ್ಲೋಬಿನ್ ಹೊಂದಿರುವ ಆರೋಗ್ಯವಂತರು ರಕ್ತದಾನ ಮಾಡಬಹುದು. ರಕ್ತದಾನದಿಂದ ದಾನಿಯ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಬದಲಿಗೆ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ವೃದ್ಧಿಸುತ್ತದೆ. ಅಗತ್ಯವಿರುವವರಿಗೆ ಜೀವದಾನ ಮಾಡಿದ ಪುಣ್ಯವೂ ದೊರೆಯುತ್ತದೆ. ರಕ್ತದಾನದ ಬಗ್ಗೆ ಇರುವ ಭಯ, ಅನುಮಾನಗಳು ಅನಾವಶ್ಯಕ ಎಂದು ಅವರು ತಿಳಿಸಿದರು. ರಾಜಯೋಗಿನಿ ಬಿ.ಕೆ. ಸುಲೋಚನಾ ಮಾತನಾಡಿ,
ಆಗಸ್ಟ್ 25 ರಂದು ದಾದಿ ಪ್ರಕಾಶಮಣಿ ಅವರು ದೇಹ ತ್ಯಜಿಸಿದ ದಿನವನ್ನು ವಿಶ್ವ ಬಂಧುತ್ವ ದಿನವಾಗಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ದೇಶಾದ್ಯಂತ ಬ್ರಹ್ಮಕುಮಾರೀಸ್ ಸಂಸ್ಥೆಯ ಸಮಾಜ ಸೇವಾ ವಿಭಾಗದಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವ ಪರಮಾತ್ಮನ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಈ ಆಧ್ಯಾತ್ಮಿಕ ಚಳುವಳಿಯನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದರು. ರಾಜಯೋಗಿ ಬಾಬು ಮಾನೆ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ರಾಜಯೋಗವೇ ಒಂದು ಪರಿಣಾಮಕಾರಿ ಔಷಧಿ. ಧ್ಯಾನ ಮತ್ತು ರಾಜಯೋಗದಿಂದ ಸಂಪೂರ್ಣ ಆರೋಗ್ಯ ಸಾಧ್ಯ ಎಂದು ಹೇಳಿದರು. ಶಿಬಿರದಲ್ಲಿ ಹಲವು ಸಹೃದಯಿ ದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಕುಮಾರಿ ಮನಿಷಾ ಅವರು ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಬಿ.ಕೆ. ಸವಿತಾ, ಕುಮಾರಿ ವಂದನಾ, ಬಿ.ಕೆ. ನಾರಾಯಣ, ಬಿ.ಕೆ. ತಿಪ್ಪಣ್ಣ, ಬಿ.ಕೆ. ವಿಜಯ, ಬಿಕೆ ಪ್ರಕಾಶ್, ಬಿಕೆ ಯುವರಾಜ, ಬಿಕೆ ಶ್ರೀಕಾಂತ್, ಬಿಕೆ ಅಜಿತ್,ಬಿಕೆ ರಾಜು, ರೋಹಣ ಡಿ.ಪ್ರವೀಣ ಗವಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ1
- ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಈದ್ ಮಿಲಾದ್ ಮೆರವಣಿಗೆ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಎಸ್‌ಪಿ ಸಿದ್ದಾರ್ಥ ಗೋಯಲ್1
- ಮುಂದಿನ ತಿಂಗಳ ಮೊದಲ ಶನಿವಾರ ಲೋಕಾಪುರದಲ್ಲಿ ಪ್ರಜಾಸೇವಾ ಆಂದೋಲನ ಮುಧೋಳ : ಸರ್ಕಾರದ ಮಟ್ಟದಲ್ಲಿ ನೂತನವಾಗಿ ಕಾರ್ಯರಂಭಗೊಂಡಿರುವ ಪ್ರಜಾಸೇವಾ ಇಲಾಖೆಯಿಂದ ಸೆ.5ರಂದು ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಆರಂಭಗೊಳ್ಳಲಿದೆ ಎಂದು ತಹಶಿಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಶನಿವಾರ ಆಯ್ದ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಮೊದಲ ಹಾಗೂ ಎರಡನೇ ಶನಿವಾರ ಸಚಿವರು ಆಂದೋಲನ ಹಮ್ಮಿಕೊಳ್ಳುವ ಗ್ರಾಮವನ್ನು ಆಯ್ಕೆ ಮಾಡುತ್ತಾರೆ. ಎರಡು ಹಾಗೂ ಮೂರನೇ ಶನಿವಾರ ಶಾಸಕರಯ ಸ್ಥಳ ಆಯ್ಕೆ ಮಾಡಲಿದ್ದಾರೆ ಎಂದರು. ಆಂದೋಲನದ ವೇಳೆ ಸರ್ಕಾರವೇ ಜನರ ಬಳಿ ತೆರಳಿ ಅವರ ಕುಂದುಕೊರತೆ ಆಲಿಸಿ ಪರಿಹಾರ ಕಲ್ಪಿಸಲಿದೆ ಎಂದರು. ಮುಧೋಳ ತಾಲೂಕಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಪ್ರಜಾ ಸೇವಾ ಆಂದೋಲನದ ಸ್ಥಳಗಳನ್ನು ನಿಗಿದಿ ಮಾಡಲಾಗಿದೆ ಎಂದು ತಿಳಿಸಿದ ಅವರು, ಮೊದಲ ಶನಿವಾರ ಲೋಕಾಪುರ, ಎರಡನೇ ಶನುವಾರ ಮುಧೋಳ, ಮೂರನೇ ಶನಿವಾರ ಬೆಳಗಲಿ ಹಾಗೂ ಕೊನೆಯ ಶನಿವಾರ ಮಂಟೂರ ಗ್ರಾಮದಲ್ಲಿ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.1
- ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.1
- 🇮🇳⚖️ RESERVATION DEBATE RETURNS TO THE NATIONAL SPOTLIGHT A fresh debate surrounding reservation has reignited an important question: should reservation benefits continue unchanged across generations when some families within eligible communities have achieved significant educational and professional advancement? The discussion has gained attention following observations and legal developments concerning the distribution of reservation benefits. Supporters of reform argue that affirmative action should ensure that those who remain most disadvantaged receive meaningful opportunities. At the same time, reservation for Scheduled Castes and Scheduled Tribes is closely connected to historical discrimination, social exclusion and representation—not simply family income or economic status. The Supreme Court’s 2024 ruling on sub-classification within Scheduled Castes has added another important dimension to the debate. The bigger question is: 👉 How can reservation continue to address historical injustice? 👉 How can benefits reach those who remain genuinely disadvantaged? 👉 Should there be stronger mechanisms to ensure wider distribution of benefits? India’s reservation debate is ultimately a debate about equality, justice, representation and opportunity. 🇮🇳⚖️ What is your opinion? Comment below. 👇 #Reservation #SupremeCourt #SocialJustice #ReservationDebate #ConstitutionOfIndia #SCSTReservation #Equality #ViralNewsKannada 🇮🇳⚖️ RESERVATION DEBATE RETURNS TO THE NATIONAL SPOTLIGHT A fresh debate surrounding reservation has reignited an important question: should reservation benefits continue unchanged across generations when some families within eligible communities have achieved significant educational and professional advancement? The discussion has gained attention following observations and legal developments concerning the distribution of reservation benefits. Supporters of reform argue that affirmative action should ensure that those who remain most disadvantaged receive meaningful opportunities. At the same time, reservation for Scheduled Castes and Scheduled Tribes is closely connected to historical discrimination, social exclusion and representation—not simply family income or economic status. The Supreme Court’s 2024 ruling on sub-classification within Scheduled Castes has added another important dimension to the debate. The bigger question is: 👉 How can reservation continue to address historical injustice? 👉 How can benefits reach those who remain genuinely disadvantaged? 👉 Should there be stronger mechanisms to ensure wider distribution of benefits? India’s reservation debate is ultimately a debate about equality, justice, representation and opportunity. 🇮🇳⚖️ What is your opinion? Comment below. 👇 #Reservation #SupremeCourt #SocialJustice #ReservationDebate #ConstitutionOfIndia #SCSTReservation #Equality #ViralNewsKannada1
- ಬೆಳಗಾವಿಯ ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ. S I R ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಕುರಿತು ಡಿಸಿ ಪತ್ರಿಕಾಗೋಷ್ಠಿ1
- ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಶ್ರೀ ಸ. ಸ. ಮಾ. ಪ್ರ. ಪ್ರೌಢಶಾಲೆ ಬೆಂಡವಾಡ ಶಾಲಾ ಆವರಣದಲ್ಲಿ ಜರುಗಿದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಎಮ್. ಕೊಟಬಾಗಿ ವಹಿಸಿದ್ದರು, ಹಾಗೂ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿನೋಭಾ ಬೆನ್ನಾಳೆ, ಶ್ರೀ ಎಸ್.ಎಸ್.ಜಗದಾಳೆ ಹಾಗೂ ಬೆಂಡವಾಡ ಗ್ರಾಮದ ರಾಜಕೀಯ ದುರಿಣರಾದ ಶ್ರೀ ಸುರೇಶ ಚೌಗಲೆ, ಶ್ರೀ ರೇವಣು ದುಪದಾಳೆ, ಶ್ರೀ ಸಿದ್ದಾರೂಢ ಪಾತ್ರೋಟ, ಶ್ರೀ ಲಕ್ಷ್ಮಣ ಸಾರಾಪೂರೆ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀ ಆರ್ ಎಸ್ ಬೆನ್ನಾಳೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಂಡವಾಡ ಗ್ರಾಮದ ರಾಜಕೀಯ ಯುವ ದುರಿಣರು ಆದ ಶ್ರೀ ಸಿದ್ದಾರೂಢ ಪಾತ್ರೋಟ ಹಾಗೂ ಶ್ರೀ ಲಕ್ಷ್ಮಣ ಸಾರಾಪೂರೆ ಇವರುಗಳು ಶಾಲೆಯ ಆಟದ ಮೈದಾನ ಅಭಿವೃದ್ದಿಗಾಗಿ ರೂ. 50,000/- ಗಳನ್ನು ದೇಣಿಗೆ ನೀಡುವುದಾಗಿ ಆಶ್ವಾಸನೆ ನೀಡಿದರು. ಗಣ್ಯರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು. ಸಹಶಿಕ್ಷಕರಾದ ಶ್ರೀ ಪಿ.ವಾಯ್.ಪಾತ್ರೋಟ ಸ್ವಾಗತಿಸಿದರು ಹಾಗೂ ಶ್ರೀಮತಿ ಆರ್.ಎ.ಚೌಗುಲೆ ನಿರೂಪಿಸಿದರು4
- ಜಮಖಂಡಿಯಲ್ಲಿ ಗ್ಯಾಸ್ ಲೀಕ್; ಬೆಂಕಿ ಅವಘಡ! 🔴 ೬೭ ವರ್ಷದ ವೃದ್ಧೆಗೆ ಸಣ್ಣಪುಟ್ಟ ಸುಟ್ಟ ಗಾಯ 🔴 ಅಗ್ನಿಶಾಮಕ ದಳದಿಂದ ಸಮಯಕ್ಕೆ ಸರಿಯಾಗಿ ರಕ್ಷಣೆ 🔴 ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ1