logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನ, ದೊಡ್ಡಹುಣಸೆ ಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತೋಶ್ರೀ ರುದ್ರಮ್ಮ ರೇವಣಸಿದ್ದಯ್ಯ ಕಲ್ಮಠ ಅವರ 80ನೇ ವರ್ಷದ ಅಮೃತ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಮಾತನಾಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರ ಮಹಾ ಸಂಸ್ಥಾನಮಠದ ಶ್ರೀ ಮ.ನಿ.ಪ್ರ ಜಗದ್ಗುರು ಡಾ.ಗುರುಶಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಶಿರಹಟ್ಟಿ-ಬಾಲೇಹೊಸೂರಿನ ಶ್ರೀ ಫಕೀರೇಶ್ವರ ಸಂಸ್ಥಾನಮಠದ ಶ್ರೀ ಮ.ನಿ.ಪ್ರ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಶ್ರೀ ಮ.ನಿ.ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಆಥಣಿಯ ಮೋಟಗಿಮಠದ ಶ್ರೀ ಮ.ನಿ.ಪ್ರ. ಪ್ರಭುಚನ್ನಬಸವ ಮಹಾಸ್ವಾಮಿಗಳು ಮತ್ತು ಗಂಗಾವತಿ ಕಲ್ಮಠದ ಶ್ರೀ ಮ.ನಿ.ಪ್ರ. ಡಾ. ಕೊಟ್ಟೂರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಇವರೊಂದಿಗೆ ಸವಣೂರ ದೊಡ್ಡಹುಣಸೇ ಕಲ್ಮಠದ ಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು, ಅಗಡಿ ಅಕ್ಕಿಮಠದ ಶ್ರೀ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು, ಶಿಗ್ಗಾಂವ ವಿರಕ್ತಮಠದ ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಮ.ನಿ.ಪ್ರ. ಬಸವಶಾಂತಲಿಂಗ ಮಹಾಸ್ವಾಮಿಗಳು, ಸವಣೂರ ಅಡವಿಸ್ವಾಮಿಮಠದ ಶ್ರೀ ಮ.ನಿ.ಪ್ರ ಕುಮಾರ ಮಹಾಸ್ವಾಮಿಗಳು ಹಾಗೂ ಹತ್ತಿಮತ್ತೂರ ವಿರಕ್ತಮಠದ ಶ್ರೀ ಮ.ನಿ.ಪ್ರ ನಿಜಗುಣ ಶಿವಯೋಗಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

1 hr ago
user_H M ಹರಕುಣಿ
H M ಹರಕುಣಿ
Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
1 hr ago
3b0e34cb-a8eb-447f-aed1-2fa4ed9cb67f

ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನ, ದೊಡ್ಡಹುಣಸೆ ಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತೋಶ್ರೀ ರುದ್ರಮ್ಮ ರೇವಣಸಿದ್ದಯ್ಯ ಕಲ್ಮಠ ಅವರ 80ನೇ ವರ್ಷದ ಅಮೃತ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಮಾತನಾಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರ ಮಹಾ ಸಂಸ್ಥಾನಮಠದ ಶ್ರೀ ಮ.ನಿ.ಪ್ರ

4cf4833b-27d6-45fe-ab6c-8330ac10d7e8

ಜಗದ್ಗುರು ಡಾ.ಗುರುಶಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಶಿರಹಟ್ಟಿ-ಬಾಲೇಹೊಸೂರಿನ ಶ್ರೀ ಫಕೀರೇಶ್ವರ ಸಂಸ್ಥಾನಮಠದ ಶ್ರೀ ಮ.ನಿ.ಪ್ರ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಶ್ರೀ ಮ.ನಿ.ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಆಥಣಿಯ ಮೋಟಗಿಮಠದ ಶ್ರೀ ಮ.ನಿ.ಪ್ರ. ಪ್ರಭುಚನ್ನಬಸವ ಮಹಾಸ್ವಾಮಿಗಳು ಮತ್ತು ಗಂಗಾವತಿ ಕಲ್ಮಠದ ಶ್ರೀ ಮ.ನಿ.ಪ್ರ. ಡಾ. ಕೊಟ್ಟೂರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಇವರೊಂದಿಗೆ ಸವಣೂರ ದೊಡ್ಡಹುಣಸೇ

8ca701f6-7146-4247-aaeb-6be6fbe2c98c

ಕಲ್ಮಠದ ಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು, ಅಗಡಿ ಅಕ್ಕಿಮಠದ ಶ್ರೀ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು, ಶಿಗ್ಗಾಂವ ವಿರಕ್ತಮಠದ ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಮ.ನಿ.ಪ್ರ. ಬಸವಶಾಂತಲಿಂಗ ಮಹಾಸ್ವಾಮಿಗಳು, ಸವಣೂರ ಅಡವಿಸ್ವಾಮಿಮಠದ ಶ್ರೀ ಮ.ನಿ.ಪ್ರ ಕುಮಾರ ಮಹಾಸ್ವಾಮಿಗಳು ಹಾಗೂ ಹತ್ತಿಮತ್ತೂರ ವಿರಕ್ತಮಠದ ಶ್ರೀ ಮ.ನಿ.ಪ್ರ ನಿಜಗುಣ ಶಿವಯೋಗಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರ ನೆನಪಿನಲ್ಲಿ ಮೈಸೂರಿನಲ್ಲಿ ಸುಸಜ್ಜಿತ ಸ್ಮಾರಕವೊಂದನ್ನು ನಿರ್ಮಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ತಮ್ಮ ಹಾಡುಗಳು ಮತ್ತು ಸಂಗೀತದ ಮೂಲಕ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಇರಲಿದ್ದಾರೆ ಎಂದು ಸ್ಮರಿಸಿದರು. ಎಸ್. ಜಾನಕಿ ಅವರ ಸಾಧನೆಯನ್ನು ಕೊಂಡಾಡಿದ ಬೊಮ್ಮಾಯಿ, ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸೇವೆ ಸಲ್ಲಿಸಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳಿದರು. ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೆ ಧ್ವನಿ ಬದಲಾಯಿಸುವ ಅದ್ಭುತ ಶಕ್ತಿ ಹೊಂದಿದ್ದ ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು ಎಂದರು. ಅಲ್ಲದೆ, ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯಬೇಕೆಂಬ ಮತ್ತು ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂಬ ಜಾನಕಿ ಅವರ ಇಚ್ಛೆಯು ಅವರಿಗೆ ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು. ಮೈಸೂರಿನಲ್ಲಿ ನಿರ್ಮಿಸಬೇಕಾದ ಸ್ಮಾರಕದಲ್ಲಿ ಜಾನಕಿ ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರ ಹಾಡುವ ಶೈಲಿಯ ಬಗ್ಗೆ ಸಂಶೋಧನೆ ನಡೆಸಲು ಅವಕಾಶ ಮತ್ತು ಸಂಗೀತ ಕಲಿಯುವ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು. ಇದೇ ವೇಳೆ, ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಾಧಕ-ಬಾಧಕಗಳ ಚರ್ಚೆ ಸಹಜವಾಗಿದ್ದು, ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿಯೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    1
    ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರ ನೆನಪಿನಲ್ಲಿ ಮೈಸೂರಿನಲ್ಲಿ ಸುಸಜ್ಜಿತ ಸ್ಮಾರಕವೊಂದನ್ನು ನಿರ್ಮಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ತಮ್ಮ ಹಾಡುಗಳು ಮತ್ತು ಸಂಗೀತದ ಮೂಲಕ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಇರಲಿದ್ದಾರೆ ಎಂದು ಸ್ಮರಿಸಿದರು.

ಎಸ್. ಜಾನಕಿ ಅವರ ಸಾಧನೆಯನ್ನು ಕೊಂಡಾಡಿದ ಬೊಮ್ಮಾಯಿ, ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸೇವೆ ಸಲ್ಲಿಸಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳಿದರು. ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೆ ಧ್ವನಿ ಬದಲಾಯಿಸುವ ಅದ್ಭುತ ಶಕ್ತಿ ಹೊಂದಿದ್ದ ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು ಎಂದರು. ಅಲ್ಲದೆ, ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯಬೇಕೆಂಬ ಮತ್ತು ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂಬ ಜಾನಕಿ ಅವರ ಇಚ್ಛೆಯು ಅವರಿಗೆ ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.

ಮೈಸೂರಿನಲ್ಲಿ ನಿರ್ಮಿಸಬೇಕಾದ ಸ್ಮಾರಕದಲ್ಲಿ ಜಾನಕಿ ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರ ಹಾಡುವ ಶೈಲಿಯ ಬಗ್ಗೆ ಸಂಶೋಧನೆ ನಡೆಸಲು ಅವಕಾಶ ಮತ್ತು ಸಂಗೀತ ಕಲಿಯುವ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು. ಇದೇ ವೇಳೆ, ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಾಧಕ-ಬಾಧಕಗಳ ಚರ್ಚೆ ಸಹಜವಾಗಿದ್ದು, ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿಯೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
  • ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ದೇಶ ಪ್ರೇಮಿಗಳಿಗೆ ಅಕೌಂಟ್ ಇರಬೇಕಲ್ವಾ ಎಂದು ಪ್ರಶ್ನಿಸಿ ತೀವ್ರವಾಗಿ ಕಿಡಿಕಾರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರಹಾಕಿರುವ ಅವರು, ದೇಶಪ್ರೇಮಿಗಳ ಅಕೌಂಟ್ ಕುರಿತಾಗಿ ನೇರ ಪ್ರಶ್ನೆಯನ್ನು ಎತ್ತುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    1
    ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ದೇಶ ಪ್ರೇಮಿಗಳಿಗೆ ಅಕೌಂಟ್ ಇರಬೇಕಲ್ವಾ ಎಂದು ಪ್ರಶ್ನಿಸಿ ತೀವ್ರವಾಗಿ ಕಿಡಿಕಾರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರಹಾಕಿರುವ ಅವರು, ದೇಶಪ್ರೇಮಿಗಳ ಅಕೌಂಟ್ ಕುರಿತಾಗಿ ನೇರ ಪ್ರಶ್ನೆಯನ್ನು ಎತ್ತುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ ಪಾಟೀಲ ಅವರು, ಜಿ.ಬಿ.ಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರವು ಕುಂಟು ನೆಪ ಹೇಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದ್ದರೂ ಸಹ, ಸರ್ಕಾರವು ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಎಸ್.ಐ.ಆರ್ ಎಂಬ ಕುಂಟು ನೆಪವನ್ನು ಹೇಳಿ ಅರ್ಜಿ ಸಲ್ಲಿಸಿದೆ ಎಂದು ಅವರು ದೂರಿದ್ದಾರೆ. ಪ್ರತಿಯೊಂದಕ್ಕೂ ಎಸ್.ಐ.ಆರ್ ಎನ್ನುವುದು ಸೂಕ್ತವಲ್ಲ ಮತ್ತು ಬಹುತೇಕ ಕಾಂಗ್ರೆಸ್ ಮುಖಂಡರಿಗೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿ.ಬಿ.ಎ ಚುನಾವಣೆ ನಡೆದಿಲ್ಲ ಎಂದಾಕ್ಷಣ ಈ ಸರ್ಕಾರವೂ ಅದನ್ನು ನಡೆಸಬಾರದೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು, ಇನ್ನು ಆರು ತಿಂಗಳು ಇರುವಾಗಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು. ನಮಗೆ ಇರುವುದೇ ನಾಲ್ಕೂವರೆ ವರ್ಷಗಳ ಅಧಿಕಾರ ಅವಧಿಯಾಗಿದ್ದು, ಈ ಅವಧಿಯಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
    1
    ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ ಪಾಟೀಲ ಅವರು, ಜಿ.ಬಿ.ಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರವು ಕುಂಟು ನೆಪ ಹೇಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದ್ದರೂ ಸಹ, ಸರ್ಕಾರವು ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಎಸ್.ಐ.ಆರ್ ಎಂಬ ಕುಂಟು ನೆಪವನ್ನು ಹೇಳಿ ಅರ್ಜಿ ಸಲ್ಲಿಸಿದೆ ಎಂದು ಅವರು ದೂರಿದ್ದಾರೆ.

ಪ್ರತಿಯೊಂದಕ್ಕೂ ಎಸ್.ಐ.ಆರ್ ಎನ್ನುವುದು ಸೂಕ್ತವಲ್ಲ ಮತ್ತು ಬಹುತೇಕ ಕಾಂಗ್ರೆಸ್ ಮುಖಂಡರಿಗೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿ.ಬಿ.ಎ ಚುನಾವಣೆ ನಡೆದಿಲ್ಲ ಎಂದಾಕ್ಷಣ ಈ ಸರ್ಕಾರವೂ ಅದನ್ನು ನಡೆಸಬಾರದೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು, ಇನ್ನು ಆರು ತಿಂಗಳು ಇರುವಾಗಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು. ನಮಗೆ ಇರುವುದೇ ನಾಲ್ಕೂವರೆ ವರ್ಷಗಳ ಅಧಿಕಾರ ಅವಧಿಯಾಗಿದ್ದು, ಈ ಅವಧಿಯಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    20 hrs ago
  • ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರವಾಗಿದೆ. ಆದರೆ ಕುಕನೂರು ಪಟ್ಟಣದಲ್ಲಿರುವ ಅವರದೇ ಹೆಸರಿನ ಗಾಂಧಿನಗರಕ್ಕೆ ಇಂದಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ 12ನೇ ವಾರ್ಡ್‌ನ ಗಾಂಧಿನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಕಸಕಡ್ಡಿಗಳೆಲ್ಲ ಮನೆಗಳ ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದರಿಂದಾಗಿ ನಿವಾಸಿಗಳು ಮೂಗು ಮುಚ್ಚಿಕೊಂಡು ವಾಸಿಸುವಂತಾಗಿದ್ದು, ವಿವಿಧ ರೋಗರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ಚರಂಡಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ದಾರಿ ಕಲ್ಪಿಸಿಕೊಡುವಂತೆ 12ನೇ ವಾರ್ಡಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ಗಾಂಧಿನಗರಕ್ಕೆ ಸ್ವಾತಂತ್ರ್ಯ ಸಿಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ವತಿಯಿಂದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದರೂ, ತಾಲೂಕು ಕೇಂದ್ರವಾದ ಪಟ್ಟಣದಲ್ಲಿಯೇ ಇಂತಹ ದುಸ್ಥಿತಿ ಇದೆ ಎಂದರೆ ಇನ್ನು ಹಳ್ಳಿಗಳ ಪಾಡೇನು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ವಚ್ಛತೆಯ ಕೊರತೆಯ ಜೊತೆಗೆ ಗಾಂಧಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದ್ದು, ಸರಿಯಾದ ಸಮಯಕ್ಕೆ ನೀರು ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ ಮತ ಬ್ಯಾಂಕ್‌ಗಾಗಿ ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ತಮ್ಮ ಮತಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಿರಬೇಕು ಎಂದು ವಾರ್ಡಿನ ನಿವಾಸಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಈ ವರದಿಯನ್ನಾದರೂ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನು ಮುಂದಾದರೂ ಗಾಂಧಿನಗರಕ್ಕೆ ಸ್ವಚ್ಛತೆಯ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ವರದಿ: ಚನ್ನಯ್ಯ ಹಿರೇಮಠ, ಕುಕನೂರು)
    4
    ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರವಾಗಿದೆ. ಆದರೆ ಕುಕನೂರು ಪಟ್ಟಣದಲ್ಲಿರುವ ಅವರದೇ ಹೆಸರಿನ ಗಾಂಧಿನಗರಕ್ಕೆ ಇಂದಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ 12ನೇ ವಾರ್ಡ್‌ನ ಗಾಂಧಿನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಕಸಕಡ್ಡಿಗಳೆಲ್ಲ ಮನೆಗಳ ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದರಿಂದಾಗಿ ನಿವಾಸಿಗಳು ಮೂಗು ಮುಚ್ಚಿಕೊಂಡು ವಾಸಿಸುವಂತಾಗಿದ್ದು, ವಿವಿಧ ರೋಗರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ.

ಚರಂಡಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ದಾರಿ ಕಲ್ಪಿಸಿಕೊಡುವಂತೆ 12ನೇ ವಾರ್ಡಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ಗಾಂಧಿನಗರಕ್ಕೆ ಸ್ವಾತಂತ್ರ್ಯ ಸಿಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ವತಿಯಿಂದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದರೂ, ತಾಲೂಕು ಕೇಂದ್ರವಾದ ಪಟ್ಟಣದಲ್ಲಿಯೇ ಇಂತಹ ದುಸ್ಥಿತಿ ಇದೆ ಎಂದರೆ ಇನ್ನು ಹಳ್ಳಿಗಳ ಪಾಡೇನು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸ್ವಚ್ಛತೆಯ ಕೊರತೆಯ ಜೊತೆಗೆ ಗಾಂಧಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದ್ದು, ಸರಿಯಾದ ಸಮಯಕ್ಕೆ ನೀರು ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ ಮತ ಬ್ಯಾಂಕ್‌ಗಾಗಿ ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ತಮ್ಮ ಮತಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಿರಬೇಕು ಎಂದು ವಾರ್ಡಿನ ನಿವಾಸಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಈ ವರದಿಯನ್ನಾದರೂ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನು ಮುಂದಾದರೂ ಗಾಂಧಿನಗರಕ್ಕೆ ಸ್ವಚ್ಛತೆಯ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ವರದಿ: ಚನ್ನಯ್ಯ ಹಿರೇಮಠ, ಕುಕನೂರು)
    user_ಚನ್ನಯ್ಯ ಹಿರೇಮಠ ಕುಕನೂರು
    ಚನ್ನಯ್ಯ ಹಿರೇಮಠ ಕುಕನೂರು
    ಕೊಪ್ಪಳ, ಕೊಪ್ಪಳ, ಕರ್ನಾಟಕ•
    1 hr ago
  • ಭಾರತೀಯ ಸಂಗೀತ ಲೋಕದ ಅಮೂಲ್ಯ ರತ್ನ, ಗಾನ ಕೋಗಿಲೆ ಡಾಕ್ಟರ್ ಎಸ್. ಜಾನಕಿ ಅಮ್ಮ ಅವರ ಅಂತಿಮ ದರ್ಶನ ಪಡೆದು ಹಲವಾರು ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದು, ಈ ವೇಳೆ ಸಮಾಜಮುಖಿ ವ್ಯಕ್ತಿತ್ವ ಹಾಗೂ ಯುವ ಉದ್ಯಮಿ ಜಿಮ್ ರವಿ ಅವರೂ ಸಹ ಆಗಮಿಸಿ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಸಂಗೀತ ಲೋಕಕ್ಕೆ ಜಾನಕಿ ಅಮ್ಮ ಅವರು ನೀಡಿದ ಅಪಾರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಜಿಮ್ ರವಿ ಅವರು, ಅವರ ಅಗಲಿಕೆಯು ಇಡೀ ದೇಶದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    1
    ಭಾರತೀಯ ಸಂಗೀತ ಲೋಕದ ಅಮೂಲ್ಯ ರತ್ನ, ಗಾನ ಕೋಗಿಲೆ ಡಾಕ್ಟರ್ ಎಸ್. ಜಾನಕಿ ಅಮ್ಮ ಅವರ ಅಂತಿಮ ದರ್ಶನ ಪಡೆದು ಹಲವಾರು ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದು, ಈ ವೇಳೆ ಸಮಾಜಮುಖಿ ವ್ಯಕ್ತಿತ್ವ ಹಾಗೂ ಯುವ ಉದ್ಯಮಿ ಜಿಮ್ ರವಿ ಅವರೂ ಸಹ ಆಗಮಿಸಿ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಸಂಗೀತ ಲೋಕಕ್ಕೆ ಜಾನಕಿ ಅಮ್ಮ ಅವರು ನೀಡಿದ ಅಪಾರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಜಿಮ್ ರವಿ ಅವರು, ಅವರ ಅಗಲಿಕೆಯು ಇಡೀ ದೇಶದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    user_SANDEEP U. L
    SANDEEP U. L
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    1 hr ago
  • ಪಂಚಕರ್ಮ ಚಿಕಿತ್ಸೆಯು ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ಅಂಬಿಕಾ ಸ್ವಾಮೀಜಿ ಅವರು ಡಾ. ಜೆ. ಬಿ. ಮಾನೆ ಅವರೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ.
    2
    ಪಂಚಕರ್ಮ ಚಿಕಿತ್ಸೆಯು ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ಅಂಬಿಕಾ ಸ್ವಾಮೀಜಿ ಅವರು ಡಾ. ಜೆ. ಬಿ. ಮಾನೆ ಅವರೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ.
    user_SAMATA NEWS KANNADA 1
    SAMATA NEWS KANNADA 1
    Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
    3 hrs ago
  • ಶಿವಮೊಗ್ಗ ಜಿಲ್ಲೆಯ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ 21 ವರ್ಷದ ಸಚಿನ್ ಎಂಬ ಯುವಕ, ಮಾಂಸಾಹಾರ ಸೇವಿಸುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಏಪ್ರಿಲ್ 17, 2026ರಂದು ರಾತ್ರಿ ಈ ಪಾರ್ಟಿ ನಡೆದಿದ್ದು, ಊಟದ ನಂತರ ಸಚಿನ್ ನಿರ್ಮಾಣ ಹಂತದ ಮನೆಯೊಂದರ ಬಳಿ ತೆರಳಿದ್ದನು. ಮರುದಿನ ಮುಂಜಾನೆ ಆತ ಅಲ್ಲಿ ಶವವಾಗಿ ಪತ್ತೆಯಾಗಿದ್ದನು. ಮರಣೋತ್ತರ ಪರೀಕ್ಷೆಯ ನಂತರ, ಆತನ ಗಂಟಲಿನಲ್ಲಿ ಆಹಾರದ ಮೂಳೆ ಸಿಲುಕಿಕೊಂಡಿದ್ದೇ ಸಾವಿಗೆ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಸೇವಿಸುವಾಗ ನಿಧಾನವಾಗಿ, ಚೆನ್ನಾಗಿ ಅಗಿದು ತಿನ್ನಬೇಕು ಮತ್ತು ಮೂಳೆ ಇರುವ ಆಹಾರವನ್ನು ತಿನ್ನುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಎಚ್ಚರಿಸಲಾಗಿದೆ.
    1
    ಶಿವಮೊಗ್ಗ ಜಿಲ್ಲೆಯ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ 21 ವರ್ಷದ ಸಚಿನ್ ಎಂಬ ಯುವಕ, ಮಾಂಸಾಹಾರ ಸೇವಿಸುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಏಪ್ರಿಲ್ 17, 2026ರಂದು ರಾತ್ರಿ ಈ ಪಾರ್ಟಿ ನಡೆದಿದ್ದು, ಊಟದ ನಂತರ ಸಚಿನ್ ನಿರ್ಮಾಣ ಹಂತದ ಮನೆಯೊಂದರ ಬಳಿ ತೆರಳಿದ್ದನು. ಮರುದಿನ ಮುಂಜಾನೆ ಆತ ಅಲ್ಲಿ ಶವವಾಗಿ ಪತ್ತೆಯಾಗಿದ್ದನು.

ಮರಣೋತ್ತರ ಪರೀಕ್ಷೆಯ ನಂತರ, ಆತನ ಗಂಟಲಿನಲ್ಲಿ ಆಹಾರದ ಮೂಳೆ ಸಿಲುಕಿಕೊಂಡಿದ್ದೇ ಸಾವಿಗೆ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಸೇವಿಸುವಾಗ ನಿಧಾನವಾಗಿ, ಚೆನ್ನಾಗಿ ಅಗಿದು ತಿನ್ನಬೇಕು ಮತ್ತು ಮೂಳೆ ಇರುವ ಆಹಾರವನ್ನು ತಿನ್ನುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಎಚ್ಚರಿಸಲಾಗಿದೆ.
    user_ತೀರ್ಥಹಳ್ಳಿ ಲೈವ್ (Thirthahalli
    ತೀರ್ಥಹಳ್ಳಿ ಲೈವ್ (Thirthahalli
    Teacher ಕೊಪ್ಪಳ, ಕೊಪ್ಪಳ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.