ಚಿತ್ರದುರ್ಗದಲ್ಲಿ ಗಿರೀಶ್ ಮಟ್ಟಣ್ಣವರ್ ಸ್ಫೋಟಕ ಹೇಳಿಕೆ: ನಿಗೂಢ ಸಾವುಗಳ ಹಿಂದೆ ಅಡಗಿದೆಯಾ ದೊಡ್ಡ ಷಡ್ಯಂತ್ರ ಚಿತ್ರದುರ್ಗ:"ನಾವು ಸತ್ಯಕ್ಕಾಗಿ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ, ಪ್ರಶ್ನೆ ಮಾಡುವವರ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ತೇಜೋವಧೆ ಮಾಡುವ ಕೆಟ್ಟ ಸಂಸ್ಕೃತಿ ರಾಜ್ಯದಲ್ಲಿ ನಡೆಯುತ್ತಿದೆ. ದಾವಣಗೆರೆಯ ಅಕ್ರಮ ಮೀಟರ್ ಬಡ್ಡಿ ದಂಧೆಯ ವಿರುದ್ಧ ನಾವು ಧ್ವನಿ ಎತ್ತಿದಾಗ ನಮಗೆ ತೀವ್ರ ಅವಮಾನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ ಕಾಮೆಂಟ್‌ಗಳ ಮೂಲಕ ನಿಂದಿಸಲಾಯಿತು. ರಮಾ ನಾಗರಾಜ್ ಅವರು ಮೊದಲಿನಿಂದಲೂ ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದವರು ಮತ್ತು ಓಬವ್ವನ ನಾಡಾದ ಚಿತ್ರದುರ್ಗದ ಮಣ್ಣಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಇಡೀ ಗೊಂದಲದ ಜಾಲದಲ್ಲಿ ರಮಾ ನಾಗರಾಜ್ ಮತ್ತು ನಟ ಪ್ರಕಾಶ್ ರಾಜ್ ಅವರು ಅನಗತ್ಯವಾಗಿ ಎಳೆದು ತರಲಾಗಿದೆಯೇ ಹೊರತು, ಅವರು ಈ ಯಾವುದೇ ನೆಗೆಟಿವ್ ವಿಷಯಗಳ ಭಾಗವಾಗಿಲ್ಲ. ಪ್ರಕಾಶ್ ರಾಜ್ ಅವರು ಹಿರಿಯ ನಟರು ಮಾತ್ರವಲ್ಲದೆ, ಸದಾ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವವರು. ಅವರು ಈ ಹಿಂದೆ 'ಕಾಕ್ರೋಚ್ ಪಾರ್ಟಿ' ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ, ಮೂಲ ವಿಷಯವನ್ನು ಡೈವರ್ಟ್ ಮಾಡಲು ಕೆಲವು ಕೆಟ್ಟ ಹಿತಾಸಕ್ತಿಗಳು ಹೊಂಚು ಹಾಕಿ ಷಡ್ಯಂತ್ರ ರೂಪಿಸುತ್ತಿವೆ," ಎಂದು ಗಿರೀಶ್ ಮಟ್ಟಣ್ಣವರ್ ಆಕ್ರೋಶ ಹೊರಹಾಕಿದ್ದಾರೆ. ಮುಚ್ಚಿಹಾಕಲ್ಪಟ್ಟ ಸತ್ಯಗಳು "ರಾಜ್ಯದಲ್ಲಿ ಭೀಕರ ಮತ್ತು ನಿಗೂಢ ಘಟನೆಗಳು ನಡೆಯುತ್ತಿದ್ದರೂ ಅವುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಒಂದೇ ದಿನದಲ್ಲಿ ಆರು ಜನ ನಿಗೂಢವಾಗಿ ಸಾವನ್ನಪ್ಪುತ್ತಾರೆ ಮತ್ತು ಅದೇ ದಿನ ಯಾವುದೇ ಸುದ್ದಿಯಾಗದಂತೆ ಅವರನ್ನು ಹೂತು ಹಾಕಲಾಗುತ್ತದೆ. ಇಂತಹ ಗಂಭೀರ ವಿಷಯಗಳ ಕಡೆಗೆ ಸಾರ್ವಜನಿಕ ಗಮನ ಹರಿದಂತೆ ಮಾಡಲು ಬೇರೆ ಬೇರೆ ವಿವಾದಗಳನ್ನು ಸೃಷ್ಟಿಸಿ ಡೈವರ್ಟ್ ಮಾಡಲಾಗುತ್ತಿದೆ. ಆದರೆ ನೆನಪಿರಲಿ, ಸತ್ಯಕ್ಕೆ ಯಾವತ್ತಿದ್ದರೂ ನ್ಯಾಯ ಸಿಕ್ಕೇ ಸಿಗುತ್ತದೆ. ಚಿನ್ನಯ್ಯ ಎಂಬುವವರು ಹಾಕಿದ್ದ ಅರ್ಜಿಯನ್ನು (ಪಿಟೀಷನ್) ನ್ಯಾಯಾಲಯವು ರದ್ದುಗೊಳಿಸಿದೆ. ಆ ಜಾಗದಲ್ಲಿ ಏನೂ ಸಿಕ್ಕಿಲ್ಲ, ಯಾವುದೇ ಅಕ್ರಮ ನಡೆದಿಲ್ಲ ಎಂದು ಕೆಲವರು ಈಗ ಕಟ್ಟುಕಥೆಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ವಾಸ್ತವವೇ ಬೇರೆ ಇದೆ. ಈಗ ಪತ್ತೆಯಾಗಿರುವ ಅಸ್ಥಿಪಂಜರ ಹಾಗೂ ಶವಗಳಿಗೆ DNA ಮ್ಯಾಚ್ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಕೇವಲ ಪುರುಷರ ಶವಗಳು ಮಾತ್ರ ಸಿಗುತ್ತಿವೆ ಎಂದು ಸುಳ್ಳು ಮಾಹಿತಿ ಪ್ರಸಾರ ಮಾಡಲಾಗುತ್ತಿತ್ತು, ಆದರೆ ಈಗ ಮಹಿಳೆಯರ ಶವಗಳೂ ಸಹ ಪತ್ತೆಯಾಗುತ್ತಿವೆ. ಆದಿಶೇಷ ಎಫ್‌ಎಸ್‌ಎಲ್ (FSL) ವರದಿಯಲ್ಲಿ ಮೃತದೇಹಗಳ ಬುರುಡೆ, ಕೈ ಮತ್ತು ಮೂಳೆಗಳು ಸಿಕ್ಕಿರುವುದು ಸಾಬೀತಾಗಿದೆ. ಇದು ನಾನಾಗಿ ಸೃಷ್ಟಿಸುತ್ತಿರುವ ಕಥೆಯಲ್ಲ, ಸ್ವತಃ ವಿಧಿವಿಜ್ಞಾನ ಪ್ರಯೋಗಾಲಯ (FSL) ನೀಡಿರುವ ಅಧಿಕೃತ ವರದಿ. 22 ವರ್ಷದ ತರುಣನೊಬ್ಬನ ತಲೆಯ ಒಳಗಡೆ ಕೈ ಮತ್ತು ಮೂಳೆಗಳು ಪತ್ತೆಯಾಗಿವೆ ಎಂದರೆ ಇದು ಸ್ಪಷ್ಟವಾಗಿ ಕೊಲೆಯಲ್ಲವೇ? ಕಾಣೆಯಾದವರ ಬಗ್ಗೆ ದೂರು ಕೊಟ್ಟವರ ಮತ್ತು DNA ಮ್ಯಾಚಿಂಗ್ ಆಗಿರುವ ಮೂವರು ಸಂತ್ರಸ್ತರೇ ಇದಕ್ಕೆ ಸಾಕ್ಷಿ ನುಡಿಯುತ್ತಿದ್ದಾರೆ. ಆದರೂ ಕೆಲವರು ಇದನ್ನು 'ಬುರಡೆ ಗ್ಯಾಂಗ್' ಮತ್ತು ಕೇವಲ ಒಂದು ಷಡ್ಯಂತ್ರ ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ," ಎಂದು ಮಟ್ಟಣ್ಣವರ್ ವರದಿಗಳ ಸಮೇತ ಪ್ರಶ್ನಿಸಿದ್ದಾರೆ. ಸರ್ಕಾರದ ನಡೆ ಹಾಗೂ ತನಿಖಾ ವರದಿಗಳ ಗೌಪ್ಯತೆ ಕುರಿತು ಪ್ರಶ್ನೆ "ನಮ್ಮ ಮೇಲೆ ಯಾವುದೇ ಕಾನೂನಾತ್ಮಕ ಕೇಸ್ ದಾಖಲಾಗಿಲ್ಲ ಮತ್ತು ನಾವು ಯಾವುದೇ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆಸಿಲ್ಲ. ರಾಜ್ಯದಲ್ಲಿ ಎಷ್ಟು ಜನ ನಿಗೂಢವಾಗಿ ಮಿಸ್ಸಿಂಗ್ (ಕಾಣೆಯಾಗಿದ್ದಾರೆ) ಆಗಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ಸ್ಪಷ್ಟ ದಾಖಲೆಗಳಿದ್ದು, ಅವುಗಳನ್ನು ಬಿಡುಗಡೆ ಮಾಡಲು ನಾವು ಸಿದ್ಧರಿದ್ದೇವೆ. ಎರಡು ವರ್ಷದ ಹೆಣ್ಣು ಮಗು ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ ಎಂದು ವರದಿ ತಯಾರಿಸಲಾಗಿದೆ. ಹಾಗೆಯೇ, ಮುಡಿ ಕೊಟ್ಟ 10 ವರ್ಷದ ಸಣ್ಣ ಹೆಣ್ಣು ಮಗಳು ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ನಾವು ಸಮಾಜದಲ್ಲಿ ನಡೆಯುತ್ತಿರುವ ಈ ಅನ್ಯಾಯಗಳನ್ನು ಪ್ರಶ್ನೆ ಮಾಡುತ್ತಿದ್ದೇವೆಯೇ ಹೊರತು, ಯಾರನ್ನೂ ಅಪಮಾನಿಸುವ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿಲ್ಲ. ಸಾರ್ವಜನಿಕ ವಲಯದಲ್ಲಿ ಎದ್ದಿರುವ ಹಲವು ಪ್ರಶ್ನೆಗಳಿಗೆ ಸಂಬಂಧಿಸಿದಂತೆ SIT (ವಿಶೇಷ ತನಿಖಾ ತಂಡ) ವರದಿ ಎಲ್ಲಿದೆ ಎಂದು ಮಹಿಳಾ ಹೋರಾಟಗಾರ್ತಿಯೊಬ್ಬರು ಕೇಳಿದ್ದಾರೆ. ಆ ವರದಿಯನ್ನು ಮಹಿಳಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿದ್ದು, ಸಾರ್ವಜನಿಕರು ಅಥವಾ ಸಂಬಂಧಪಟ್ಟವರು ಮಹಿಳಾ ಆಯೋಗದಿಂದ ಅದನ್ನು ಪಡೆದುಕೊಳ್ಳಬಹುದು. ಆದರೆ, ಇಷ್ಟೊಂದು ಸೂಕ್ಷ್ಮ ಹಾಗೂ ಗಂಭೀರವಾಗಿರುವ ತನಿಖಾ ವರದಿಯನ್ನು ಸರ್ಕಾರ ಏಕೆ ಜನರಿಂದ ಮುಚ್ಚಿಟ್ಟುಕೊಂಡಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಈ ಇಡೀ ಪ್ರಕರಣಕ್ಕೆ ರಾಜ್ಯ ಸರ್ಕಾರ ಮತ್ತು ಗೃಹ ಸಚಿವರೇ ನೇರವಾಗಿ ಉತ್ತರಿಸಬೇಕು. ನಮ್ಮನ್ನು ಕೇವಲ 'ಬುರುಡೇ ಗ್ಯಾಂಗ್' ಎಂದು ಕರೆದು, ಇಡೀ ಹೋರಾಟವನ್ನು ಹತ್ತಿಕ್ಕಲು ನಾವು ಬಿಡುವುದಿಲ್ಲ. ನೇತ್ರಾವತಿ ಎನ್ನುವುದು ಸಣ್ಣ ಕೆರೆಯಲ್ಲ, ಅದೊಂದು ವಿಶಾಲವಾದ ನದಿ. ಅಲ್ಲಿ ಏನಾದರೂ ಬಿದ್ದರೆ ಅಥವಾ ಎಸೆದರೆ ಕಿಲೋಮೀಟರ್‌ಗಳಷ್ಟು ದೂರದವರೆಗೆ ಶವಗಳು ತೇಲಿಕೊಂಡು ಹೋಗುತ್ತವೆ. ಅಲ್ಲಿ ಅಪ್ಪ ಮತ್ತು ಮಗಳಿಬ್ಬರ ಮೃತದೇಹಗಳು ಸಿಕ್ಕಿದ್ದರೂ, ಅದನ್ನು ಕೇವಲ 'ಅನಾಥ ಶವ'ಗಳೆಂದು ದಾಖಲಿಸಿ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಇಂತಹ ಗಂಭೀರ ಲೋಪಗಳನ್ನು ಸರ್ಕಾರ ಏಕೆ ಮುಚ್ಚಿಡುತ್ತಿದೆ? ಮಹಿಳಾ ಆಯೋಗದವರು ಈ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಚೌಧರಿ ಅವರು ತನಿಖೆಯ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಏಕೆ ಹಿಂಜರಿಯುತ್ತಿದ್ದಾರೆ? ಹಿಂದೆ ಉಗ್ರಪ್ಪ ಅವರ ವರದಿಯನ್ನು ಮುಚ್ಚಿಟ್ಟಂತೆ, ಈ ವರದಿಯನ್ನು ಮೂಲೆಗೆ ತಳ್ಳಲು ನಾವು ಬಿಡುವುದಿಲ್ಲ. ಈ ಸತ್ಯದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಾವು ದೆಹಲಿಯವರೆಗೂ ಹೋಗಿ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ. ತನಿಖೆಯ ಹೆಸರಿನಲ್ಲಿ ಎಷ್ಟೋ ಸುಳ್ಳುಗಳನ್ನು ಬರೆದು ಪ್ರಕರಣದ ದಿಕ್ಕು ತಪ್ಪಿಸಲಾಗಿದೆ, ಇನ್ನಾದರೂ ಸರ್ಕಾರ ಸತ್ಯವನ್ನು ಮುಚ್ಚಿಡದೇ ತನಿಖಾ ವರದಿಗಳನ್ನು ಅಧಿಕೃತವಾಗಿ ರಿಲೀಸ್ ಮಾಡಬೇಕು "ಸುಳ್ಳುಗಳ ಸರಣಿಯಿಂದ ಸತ್ಯವನ್ನು ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ SIT ವರದಿಯನ್ನು ಬಹಿರಂಗಪಡಿಸಬೇಕು." ಎಂದು ಗಿರೀಶ್ ಮಟ್ಟಣ್ಣವರ್ ಒತ್ತಾಯಿಸಿದರು. 'ರಾಷ್ಟ್ರ ರಕ್ಷಣಾ ಪಡೆ' ಹೆಸರಿನಲ್ಲಿ ಅಕ್ರಮ ದಂಧೆ ಆರೋಪ ಸಂಘಟನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗಿರೀಶ್, ರಾಜ್ಯಾದ್ಯಂತ 'ರಾಷ್ಟ್ರ ರಕ್ಷಣಾ ಪಡೆ' ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಹಾವಳಿ ಎಬ್ಬಿಸುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಅವರ ಟೀಮ್ ದೇಶಭಕ್ತಿಯ ಮುಖವಾಡ ಧರಿಸಿ ಬ್ಲಾಕ್‌ಮೇಲ್ ಮಾಡುವ ಮೂಲಕ ದೊಡ್ಡ ಮಟ್ಟದ ವಸೂಲಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಹಾಗೂ ಗಿಳಿಯಾರ್ ಅವರಂತಹ ವ್ಯಕ್ತಿಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಕಲ್ಬುರ್ಗಿಯಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ, ಅದು ಸ್ವತಃ ಗೃಹ ಸಚಿವರ ತವರು ಜಿಲ್ಲೆಯಲ್ಲೇ ನಡೆದಿರುವುದು ದುರ್ದೈವ. ಅಷ್ಟಕ್ಕೂ ಈ ರಕ್ಷಣಾ ಪಡೆ ಎನ್ನುವುದು ಯಾವುದೋ ಅಧಿಕೃತ ಸಂಸ್ಥೆಯೇ? ಇವರು ಸರ್ಕಾರದಿಂದ ಅಥವಾ ಕಾನೂನಿನಿಂದ ಏನಾದರೂ ಪರ್ಮಿಷನ್ ತಗೊಂಡಿದ್ದಾರಾ? ನಾವು ಸಮಾಜದಲ್ಲಿ ಇವರು ಮಾಡುತ್ತಿರುವ ತಪ್ಪುಗಳನ್ನು ಪ್ರಶ್ನೆ ಮಾಡಿದರೆ, ನಮಗೆ 'ಪಾಕಿಸ್ತಾನಿ ಫಂಡ್', 'ಚೈನಾ ಫಂಡ್' ಬರುತ್ತಿದೆ ಎಂದು ಸುಳ್ಳು ಆಪಾದನೆ ಹೊರಿಸುತ್ತಾರೆ. ಇವರು ಮಾತ್ರ ದೇಶದಲ್ಲಿರುವ ಮಹಾನ್ ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ಇವರು ಪೂಜಾ ಸಾಮಗ್ರಿಗಳನ್ನು ಮಾರುವ 'ಗ್ರಂಥಿಕೆ ಅಂಗಡಿ' ಎಂದು ಬೋರ್ಡ್ ಹಾಕಿ ಒಳಗಡೆ ಕಾನೂನುಬಾಹಿರವಾಗಿ ಮಾಂಸ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಅವರ ಗ್ಯಾಂಗ್ ಸಮಾಜದ ಸಾಕಷ್ಟು ಹೆಣ್ಣು ಮಕ್ಕಳಿಗೆ ಮೋಸ ಮಾಡಿ ಅನ್ಯಾಯ ಎಸಗುತ್ತಿದ್ದಾರೆ. ಸಮಾಜದ ಶಾಂತಿ ಕದಡುತ್ತಿರುವ ಇವರೆಲ್ಲ ಯಾರು? ಇವರ ವಿರುದ್ಧ ಸರ್ಕಾರ ಮತ್ತು ಪೊಲೀಸ್ ಇಲಾಖೆ ಏಕೆ ಇದುವರೆಗೂ ಕಠಿಣ ಕ್ರಮ ಕೈಗೊಂಡಿಲ್ಲ? ಗೋ ರಕ್ಷಣೆಯ ಪವಿತ್ರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ಬಿಸಿನೆಸ್ ಮತ್ತು ದಂಧೆ ಮಾಡುತ್ತಿರುವ ಇವರ ವಿರುದ್ಧ ಗೃಹ ಸಚಿವರು ಕೂಡಲೇ ಕಾನೂನು ಕ್ರಮ ಜರುಗಿಸಬೇಕು," ಎಂದು ಆಗ್ರಹಿಸಿದರು. ಸೌಜನ್ಯ ಕೊಲೆ ಪ್ರಕರಣಕ್ಕೆ ಮರುಜೀವ ನೀಡಲು ಒತ್ತಾಯ "ವರ್ಷಗಳ ಹಿಂದೆ ನಡೆದ ಸೌಜನ್ಯ ಕೊಲೆ ಪ್ರಕರಣದ ನ್ಯಾಯಕ್ಕಾಗಿ ನಟ ಯಶ್, ಐಶ್ವರ್ಯ ರೈ, ದುನಿಯಾ ವಿಜಯ್ ಸೇರಿದಂತೆ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನ ಹಲವು ಗಣ್ಯರು ಪ್ರಕರಣ ನಡೆದ ಆರಂಭದಲ್ಲೇ ಟ್ವೀಟ್ ಮಾಡಿ ಧ್ವನಿ ಎತ್ತಿದ್ದರು. ಆದರೆ, ಈಗ ಹಠಾತ್ತನೆ ಈ ಪ್ರಕರಣದೊಳಗೆ ಪ್ರಕಾಶ್ ರಾಜ್ ಹಾಗೂ ರಮಾ ನಾಗರಾಜ್ ಅವರ ಹೆಸರನ್ನು ತೇಲಿಬಿಟ್ಟಿರುವುದು ಹೇಗೆ? ದೆಹಲಿಯಲ್ಲಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೋರಿ ಮತ್ತೆ ಹೋರಾಟ ಕಾವೇರುತ್ತಿರುವ ಸರಿಯಾದ ಸಮಯದಲ್ಲೇ ಈ ಇಬ್ಬರ ಹೆಸರುಗಳನ್ನು ವಿವಾದಕ್ಕೆ ಎಳೆದು ತಂದು ಇಡೀ ವಿಷಯವನ್ನು ಹಳ್ಳ ಹಿಡಿಸಲು ಷಡ್ಯಂತ್ರ ಹೂಡಲಾಗಿದೆ. ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಲು ಸುಪ್ರೀಂ ಕೋರ್ಟ್ ಈಗಾಗಲೇ ಮಹತ್ವದ ಸೂಚನೆ ನೀಡಿದೆ. ಸ್ವತಃ ಈ ಹಿಂದಿನ ತನಿಖಾಧಿಕಾರಿಗಳೇ 'ಬಂಗಲೇ ಗುಡ್ಡ' ಪ್ರದೇಶದಲ್ಲಿ ನಡೆದಿರುವ ಅಕ್ರಮ ಹಾಗೂ ನಿಗೂಢ ಸಂಗತಿಗಳ ಬಗ್ಗೆ ಸಂಪೂರ್ಣವಾಗಿ ಬರೆದಿದ್ದಾರೆ. ಆದ್ದರಿಂದ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಕೂಡಲೇ ಹೊಸದಾಗಿ ಸಮರ್ಥ ಅಧಿಕಾರಿಗಳನ್ನೊಳಗೊಂಡ SIT ರಚನೆ ಮಾಡಿ, ಸೌಜನ್ಯ ಆತ್ಮಕ್ಕೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಕನಿಷ್ಠ ಇಷ್ಟೆಲ್ಲಾ ಬೆಳವಣಿಗೆಗಳ ಆದ ಮೇಲಾದರೂ ನಮಗೆ ಯಾವುದೇ ವಿದೇಶಿ ಫಂಡ್ (ಫಾರಿನ್ ಫಂಡ್) ಬಂದಿಲ್ಲ ಎನ್ನುವ ಸತ್ಯ ವಿರೋಧಿಗಳಿಗೆ ತಿಳಿಯುವಂತಾಗಿದೆ. ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ ಎಂದು ಹೇಳಿ ಮುಚ್ಚಿಹಾಕಲು ಯತ್ನಿಸಿದವರಿಗೆ ಈಗ ಪ್ರಕರಣ ಮತ್ತೆ ಜೀವ ಪಡೆದುಕೊಂಡಿರುವುದು ನಡುಕ ಹುಟ್ಟಿಸಿದೆ. ಸರ್ಕಾರ ಇನ್ನಾದರೂ ವಿಳಂಬ ಮಾಡದೆ ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಬೇಕು," ಎಂದು ಮಟ್ಟಣ್ಣವರ್ ಸರ್ಕಾರಕ್ಕೆ ಬಲವಾಗಿ ಮನವಿ ಮಾಡಿದರು.

- ಹಳ್ಳದ ನೀರಲ್ಲಿ ಮೀನು-ಜಲಚರ ಮಾರಣಹೋಮ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ ಉಮೇಶ ಕೆ. ಮುದ್ನಾಳ್ ಆರೋಪ" 'ಬಾಡಿಯಾಳ ಹಳ್ಳಕ್ಕೆ ಕಡೇಚೂರ ಕೈಗಾರಿಕ ಪ್ರದೇಶದಿಂದ ವಿಷಪೂರಿತ ದ್ರವ ಸಂಗ್ರಹಣೆ' " ಕಲ್ಯಾಣ ವಾರ್ತೆ -ಸೈದಾಪೂರ ಯಾದಗಿರಿ ತಾಲೂಕಿನ ಕಡೇಚೂರ ಕೈಗಾರಿಕ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರ್‌ಗಳಿಂದ ವಿಷಕಾರಿತ ದ್ರವ ಪದಾರ್ಥಗಳು ಚರಂಡಿ ಮುಖಾಂತರ ಹರಿದು ಬಂದು ಬಾಡಿಯಾಳ ಗ್ರಾಮದ ಹಳ್ಳದದಿಂದ ಗೂಡೂರ ಹಳ್ಳದ ಮುಖಾಂತರ ಭೀಮಾನದಿಗೆ ಸೇರುವ ಈ ಹಳ್ಳದಲ್ಲಿ ವಾರದಿಂದೇ ಮೀನುಗಳ ಸತ್ತು ಗಬ್ಬೆದ್ದು ನಾರುತ್ತಿದ್ದು ಈ ದುರವಾಸನೆ ದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಜನ ಜಾನುವಾರು ಬದುಕುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಬೆಳಿಗ್ಗೆ ಬಾಡಿಯಾಳ ಗ್ರಾಮಸ್ಥರು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ತಿಳಿಸಿದಾಗ ತಕ್ಷಣ ಸ್ಪಂದಿಸಿ ಬಾಡಿಯಾಳ ಗ್ರಾಮಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ಕಾಲ್ನೆಡಿಗೆ ಮುಖಾಂತರ ಹಳ್ಳದ ಕಡೆ ಸಂಚಾರ ಮಾಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ವಾರದಿಂದೆ ಈ ಹಳ್ಳದಲ್ಲಿ ಮೀನು ಮತ್ತು ಜಲಚರಗಳು ಸತ್ತು ಕೊಳೆತು ದುರಗಂಧದ ವಾಸನೆ ಹೆಚ್ಚಾದರು ಸಂಬAಧಪಟ್ಟ ಅಧಿಕಾರಿಗಳು ಇಲ್ಲಿ ವರೆಗೆ ಸ್ಥಳಕ್ಕೆ ಬೇಟಿ ನೀಡುವುದಾಗÀಲಿ ಸಮಸ್ಯೆ ಬಗ್ಗೆ ಗ್ರಾಮಸ್ಥರ ಬಗ್ಗೆ ಚರ್ಚಿಸುದಾಗಲಿ ಜನ ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಲಿ ಮಾಡದಿರುವುದು ದುರದುಷ್ಟಕರ ಸಂಗತಿ ಎಂದು ದೂರರಿದ್ದರು. ಈ ಭಾಗದ ಹಳ್ಳಕ್ಕೆ ಅಂಟಿಕೊಂಡಿರುವ ಗ್ರಾಮಗಳ ಜನ ಜಾನುವಾರುಗಳಿಗೆ ಆರೋಗ್ಯದ ಮೇಲೆ ಏನಾದೂರ ಏರುಪೇರು ಆದರೆ ಅದಕ್ಕೆ ಜಿಲ್ಲಾಡಳಿತ ಸರ್ಕಾರ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ. ಈ ಹಳ್ಳದ ನೀರು ಜನ ಜಾನುವಾರುಗಳಿಗೆ ದಿನ ನಿತ್ಯ ಕುಡಿಯಲು ಮತ್ತು ಜಮೀನಲ್ಲಿ ಬೆಳೆಗಳಿಗೆ ನೀರು ಉಣಿಸಲು ಈ ಹಳ್ಳದ ನೀರನ್ನೆ ಬಳಕೆ ಮಾಡುತ್ತಿದ್ದರು. ಆದರೆ ಕಡೇಚೂರ ಫ್ಯಾಕ್ಟರಿ ಪ್ರಾರಂಭವಾದಂದಿನಿಂದ ಮಳೆ ಬಂದರೆ ಸಾಕು ಚರಂಡಿ ಮುಖಾಂತರ ದ್ರವ ಪದಾರ್ಥಗಳು ಹರಿದು ಬಂದು ಈ ಹಳ್ಳಕ್ಕೆ ಸೇರಿ ವಿಷಪೂರಿತ ನೀರಾಗಿ ಮಾರ್ಪಟ್ಟು ಜನ ಜಾನುವಾರು ಕುಡಿಯಲು ಆಗದೆ ಈ ಹಳ್ಳ ಇದ್ದರು ಇಲ್ಲದಂತಾಗಿದೆ ಆದ ಕಾರಣ ಸ್ಥಳದಲ್ಲೇ ಮಿನಿ ಬ್ರಿಜ್ ಕಂ ಬ್ಯಾರೇಜಿನ ಮೇಲೆ ದೀಢೀರ್ ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಜಿಲ್ಲಾಡತಕ್ಕೆ ವಾರದ ಗಡವು ನೀಡಿ ಯಾದಗಿರಿ ರಾಯಚೂರು ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. *ಬಾಡಿಯಾಳ ಗ್ರಾಮದ ಹಳ್ಳಕ್ಕೆ 2013ರಲ್ಲಿ ಅಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ ನಂತರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅದನ್ನು ನಿರ್ವಹಣೆ ಮಾಡದೇ ದಿವ್ಯ ನಿರ್ಲಕ್ಷವಹಿಸಿ ಸ್ಥಳಕ್ಕೆ ಬೇಟಿ ನೀಡಿದೇ ರೈತರಿಗೆ ಜಾಗೃತಿ ಮೂಡಿಸಿದೇ ಕಳ್ಳಾಟ ಆಡುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮೇಲೆ ಜಿಲ್ಲಾಧಿಕಾರಿಗಳು ಕಾನೂನಿನ ಕಠಿಣ ಕ್ರಮ ಜರುಗಿಸಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು*- ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಇದೇ ಸಂಧರ್ಬದಲ್ಲಿ ವಿಶ್ವನಾಥ್ ಗಂಟೆ ಬಾಡಿಯಲ್ . ಮಲ್ಲೇಶಿ, ಗೋವಿಂದ ಡಾಕ್ಟರ್ ಶಾಂತವೀರ ಮಕ್ಥಲ್. ವೆಂಕಟೇಶ್ ಕಾವಲಿ ತಿಮ್ಮಾಜಿ .ಬಸವರಾಜ್ ಚನ್ನು ಕಳೂರ್. ಕೊತ್ತಪಲ್ಲಿ ಶಿವು ಬಾಯ್ಲ್. ದೇವೋಗಂಟಿ .ದೇವಪುತ್ರ ತಿಮ್ಮೊಜಿ. ಶರಣಪ್ಪ ಜಿನ್ಕೆರಿ ಹಣಮಂತರಾಯ ತಿಮ್ಮಾಜಿ ಶಿವಶಂಕರ ತಿಮೋಜಿ ಕಾವಲಿ ಎಲ್ಲಪ್ಪ . ರಾಮಣ್ಣ ಗೂಡೂರ್. ಶಿವಪುತ್ರ ತಿಮೋಜಿ .ಕಾಶೀನಾಥ್. ದೇವು ಚಂದಾಪುರ್ ರಾಮಣ್ಣ .ಸೂಗಪ್ಪ ಬೈನ್ ಯಂಕಪ್ಪ ತಿಮ್ಮ ಜಿ. ಯಂಕಪ್ಪ ಚಂದಾಪುರ್ ಸಿದ್ದಪ್ಪ ಶಿವಪುರ ಬನ್ನಪಾನೂರ್. ಅಶೋಕ್ ಗಣಪುರ್. ಮಂಜುನಾಥ್ ಕಾವಲಿ. ಬಸವರಾಜ್ ಕವಲಿ. ಭೀಮು ಗುಡೇಬಲ್ಲೂರ್ ಅಯ್ಯಪ್ಪ ಇರ್ಜನ್ ಬಸವರಾಜ ಇರ್ಜನ್ ಬನ್ನಪ್ಪ ನೀಡುಗುಂದಿ ಖಾಜಾ ಹುಸೇನ್ ಪೊಂಗಲ್. ಚಂದ್ರಮಣ್ಣ. ದೇವಪ್ಪ. ಬಸಪ್ಪ ಜಾನಕಿ ಗಟ್ಟಿಗರ್ ಮಲ್ಲಪ್ಪ ಜಾನಕ. ಮಲ್ಲೇಶ್ ಗಡಾದ್.ರಾಮಣ್ಣ ಅಂಗಡಿ. ಗೋಪಾಲ ಹೊಸ್ಮನಿ. ದೇವಪುತ್ರ ಗುಡೇಬಲ್ಲೂರು . ಹಣಮಂತ ಹಿರಿಜನ್ ಸೇರಿದಂತೆ ಅನೇಕ ರೈತರು ಇದ್ದರು.1
- ಬಾಡಿಯಾಳ ಹಳ್ಳಕ್ಕೆ ಕಡೇಚೂರ ಕೈಗಾರಿಕ ಪ್ರದೇಶದಿಂದ ವಿಷಪೂರಿತ ದ್ರವದಿಂದ ಹಳ್ಳದ ನೀರಲ್ಲಿ ಮೀನು-ಜಲಚರ ಮಾರಣಹೋಮ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪ ಜನ ಜಾನುವಾರುಗಳಿಗೆ ಈ ಹಳ್ಳದ ನೀರು ಬಳಕೆ ಆಗುವಂತೆ ಮಾಡಲು ಬ್ರಿಜ್ ಕಂ ಬ್ಯಾರೇಜ್ ಮೇಲೆ ಕುಳಿತು ರೈತರ ಸಮ್ಮುಖದಲ್ಲೇ ದೀಢಿರ್ ಪ್ರತಿಭಟನೆ ಮೂಲಕ ಜಿಲ್ಲಾಡಳಿತಕ್ಕೆ ವಾರದ ಗಡುವು ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ! ಸೈದಾಪೂರ : ಯಾದಗಿರಿ ತಾಲೂಕಿನ ಕಡೇಚೂರ ಕೈಗಾರಿಕ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರ್‌ಗಳಿಂದ ವಿಷಕಾರಿತ ದ್ರವ ಪದಾರ್ಥಗಳು ಚರಂಡಿ ಮುಖಾಂತರ ಹರಿದು ಬಂದು ಬಾಡಿಯಾಳ ಗ್ರಾಮದ ಹಳ್ಳದದಿಂದ ಗೂಡೂರ ಹಳ್ಳದ ಮುಖಾಂತರ ಭೀಮಾನದಿಗೆ ಸೇರುವ ಈ ಹಳ್ಳದಲ್ಲಿ ವಾರದಿಂದೇ ಮೀನುಗಳ ಸತ್ತು ಗಬ್ಬೆದ್ದು ನಾರುತ್ತಿದ್ದು ಈ ದುರವಾಸನೆ ದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಜನ ಜಾನುವಾರು ಬದುಕುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದು ಶನಿವಾರ ಬೆಳಿಗ್ಗೆ ಬಾಡಿಯಾಳ ಗ್ರಾಮಸ್ಥರು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ತಿಳಿಸಿದಾಗ ತಕ್ಷಣ ಸ್ಪಂದಿಸಿ ಬಾಡಿಯಾಳ ಗ್ರಾಮಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ಕಾಲ್ನೆಡಿಗೆ ಮುಖಾಂತರ ಹಳ್ಳದ ಕಡೆ ಸಂಚಾರ ಮಾಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ವಾರದಿಂದೆ ಈ ಹಳ್ಳದಲ್ಲಿ ಮೀನು ಮತ್ತು ಜಲಚರಗಳು ಸತ್ತು ಕೊಳೆತು ದುರಗಂಧದ ವಾಸನೆ ಹೆಚ್ಚಾದರು ಸಂಬAಧಪಟ್ಟ ಅಧಿಕಾರಿಗಳು ಇಲ್ಲಿ ವರೆಗೆ ಸ್ಥಳಕ್ಕೆ ಬೇಟಿ ನೀಡುವುದಾಗÀಲಿ ಸಮಸ್ಯೆ ಬಗ್ಗೆ ಗ್ರಾಮಸ್ಥರ ಬಗ್ಗೆ ಚರ್ಚಿಸುದಾಗಲಿ ಜನ ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಲಿ ಮಾಡದಿರುವುದು ದುರದುಷ್ಟಕರ ಸಂಗತಿ ಎಂದು ದೂರರಿದ್ದರು. ಈ ಹಳ್ಳದ ನೀರು ಜನ ಜಾನುವಾರುಗಳಿಗೆ ದಿನ ನಿತ್ಯ ಕುಡಿಯಲು ಮತ್ತು ಜಮೀನಲ್ಲಿ ಬೆಳೆಗಳಿಗೆ ನೀರು ಉಣಿಸಲು ಈ ಹಳ್ಳದ ನೀರನ್ನೆ ಬಳಕೆ ಮಾಡುತ್ತಿದ್ದರು. ಆದರೆ ಕಡೇಚೂರ ಫ್ಯಾಕ್ಟರ್ ಪ್ರಾರಂಭವಾದದಿAದ ಮಳೆ ಬಂದರೆ ಸಾಕು ಚರಂಡಿ ಮುಖಾಂತರ ದ್ರವ ಪದಾರ್ಥಗಳು ಹರಿದು ಬಂದು ಈ ಹಳ್ಳಕ್ಕೆ ಸೇರಿ ವಿಷಪೂರಿತ ನೀರಾಗಿ ಮಾರ್ಪಟ್ಟು ಜನ ಜಾನುವಾರು ಕುಡಿಯಲು ಆಗದೆ ಈ ಹಳ್ಳ ಇದ್ದರು ಇಲ್ಲದಂತಾಗಿದೆ ಆದ ಕಾರಣ ಸ್ಥಳದಲ್ಲೇ ಮಿನಿ ಬ್ರಿಜ್ ಕಂ ಬ್ಯಾರೇಜಿನ ಮೇಲೆ ದೀಢೀರ್ ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಜಿಲ್ಲಾಡತಕ್ಕೆ ವಾರದ ಗಡವು ನೀಡಿ ಯಾದಗಿರಿ ರಾಯಚೂರು ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಕೊಟ್ : ಬಾಡಿಯಾಳ ಗ್ರಾಮದ ಹಳ್ಳಕ್ಕೆ 2013ರಲ್ಲಿ ಅಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ ನಂತರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅದನ್ನು ನಿರ್ವಹಣೆ ಮಾಡದೇ ದಿವ್ಯ ನಿರ್ಲಕ್ಷವಹಿಸಿ ಸ್ಥಳಕ್ಕೆ ಬೇಟಿ ನೀಡಿದೇ ರೈತರಿಗೆ ಜಾಗೃತಿ ಮೂಡಿಸಿದೇ ಕಳ್ಳಾಟ ಆಡುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮೇಲೆ ಜಿಲ್ಲಾಧಿಕಾರಿಗಳು ಕಾನೂನಿನ ಕಠಿಣ ಕ್ರಮ ಜರುಗಿಸಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಇದೇ ಸಂಧರ್ಬದಲ್ಲಿ ವಿಶ್ವನಾಥ್ ಗಂಟೆ ಬಾಡಿಯಲ್ . ಮಲ್ಲೇಶಿ, ಗೋವಿಂದ ಡಾಕ್ಟರ್ ಶಾಂತವೀರ ಮಕ್ಥಲ್. ವೆಂಕಟೇಶ್ ಕಾವಲಿ ತಿಮ್ಮಾಜಿ .ಬಸವರಾಜ್ ಚನ್ನು ಕಳೂರ್. ಕೊತ್ತಪಲ್ಲಿ ಶಿವು ಬಾಯ್ಲ್. ದೇವೋಗಂಟಿ .ದೇವಪುತ್ರ ತಿಮ್ಮೊಜಿ. ಶರಣಪ್ಪ ಜಿನ್ಕೆರಿ ಹಣಮಂತರಾಯ ತಿಮ್ಮಾಜಿ ಶಿವಶಂಕರ ತಿಮೋಜಿ ಕಾವಲಿ ಎಲ್ಲಪ್ಪ . ರಾಮಣ್ಣ ಗೂಡೂರ್. ಶಿವಪುತ್ರ ತಿಮೋಜಿ .ಕಾಶೀನಾಥ್. ದೇವು ಚಂದಾಪುರ್ ರಾಮಣ್ಣ .ಸೂಗಪ್ಪ ಬೈನ್ ಯಂಕಪ್ಪ ತಿಮ್ಮ ಜಿ. ಯಂಕಪ್ಪ ಚಂದಾಪುರ್ ಸಿದ್ದಪ್ಪ ಶಿವಪುರ ಬನ್ನಪಾನೂರ್. ಅಶೋಕ್ ಗಣಪುರ್. ಮಂಜುನಾಥ್ ಕಾವಲಿ. ಬಸವರಾಜ್ ಕವಲಿ. ಭೀಮು ಗುಡೇಬಲ್ಲೂರ್ ಅಯ್ಯಪ್ಪ ಇರ್ಜನ್ ಬಸವರಾಜ ಇರ್ಜನ್ ಬನ್ನಪ್ಪ ನೀಡುಗುಂದಿ ಖಾಜಾ ಹುಸೇನ್ ಪೊಂಗಲ್. ಚಂದ್ರಮಣ್ಣ. ದೇವಪ್ಪ. ಬಸಪ್ಪ ಜಾನಕಿ ಗಟ್ಟಿಗರ್ ಮಲ್ಲಪ್ಪ ಜಾನಕ. ಮಲ್ಲೇಶ್ ಗಡಾದ್.ರಾಮಣ್ಣ ಅಂಗಡಿ. ಗೋಪಾಲ ಹೊಸ್ಮನಿ. ದೇವಪುತ್ರ ಗುಡೇಬಲ್ಲೂರು . ಹಣಮಂತ ಹಿರಿಜನ್ ಸೇರಿದಂತೆ ಅನೇಕ ರೈತರು ಇದ್ದರು4
- ಗುರುಮಠಕಲ್ ಪಟ್ಟಣದ ಎಸ್ ಎಂ ಆರ್ ಆರ್ ಕಲ್ಯಾಣ ಮಂಟಪದಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಡಿವೈಎಸ್ಪಿ ಸುರೇಶ ಎಂ ನಾಯಕ್ ಉದ್ಘಾಟಿಸಿದರು. ಮಾದಕ ವ್ಯಸನಕ್ಕೆ 'ಬೇಡ ಬೋ'; ಉತ್ತಮ ಸ್ನೇಹವೇ ಉಜ್ವಲ ಭವಿಷ್ಯದ ದಾರಿ ಬೇಡ ಬೋ' ಸಂದೇಶದೊಂದಿಗೆ ವ್ಯಸನದ ವಿರುದ್ಧ ಪೊಲೀಸರ ಜಾಗೃತಿ ಸಮರ ಗುರುಮಠಕಲ್: ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು, ಮದ್ಯಪಾನ ಸೇರಿದಂತೆ ಯಾವುದೇ ಮಾದಕ ವಸ್ತುಗಳ ವ್ಯಸನಕ್ಕೆ ಯುವಕರು ಹಾಗೂ ವಿದ್ಯಾರ್ಥಿಗಳು ಎಂದಿಗೂ ಬಲಿಯಾಗಬಾರದು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಯಾದಗಿರಿ ಡಿವೈಎಸ್ಪಿ ಸುರೇಶ ಎಂ. ಕರೆ ನೀಡಿದರು. ಪಟ್ಟಣದ ಎಸ್‌ಎಂಆರ್ ಕಲ್ಯಾಣ ಮಂಟಪದಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ 'ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ' ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಹಾಗೂ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಉತ್ತಮ ಸ್ನೇಹ ಬಳಗವೇ ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಪೋಷಕರು ಮತ್ತು ಕುಟುಂಬದವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ. ಸ್ನೇಹಿತರಲ್ಲಿ ಯಾರಾದರೂ ಮಾದಕ ವ್ಯಸನಕ್ಕೆ ಒಳಗಾಗಿದ್ದರೆ ಅವರಿಗೆ 'ಬೇಡ ಬೋ' ಎಂದು ಮನವರಿಕೆ ಮಾಡಿಕೊಡಿ. ಅವರ ದುಶ್ಚಟಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬೇಡಿ. ಅಕ್ರಮ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ನಾಗಭೂಷಣ ಶೆಟ್ಟಿ ಮಾತನಾಡಿ, ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ಆರಂಭವಾಗುವ ಮಾದಕ ವಸ್ತುಗಳ ಸೇವನೆಯು ಬಳಿಕ ಗಂಭೀರ ವ್ಯಸನವಾಗಿ ಪರಿಣಮಿಸುತ್ತದೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುವುದರ ಜೊತೆಗೆ ನೆನಪಿನ ಶಕ್ತಿ ಕುಂದುತ್ತದೆ, ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ, ಆತಂಕ, ಖಿನ್ನತೆ, ಕೋಪ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಸಿಯುತ್ತದೆ ಎಂದು ಎಚ್ಚರಿಸಿದರು. ಮಾದಕ ವ್ಯಸನವು ವ್ಯಕ್ತಿಯ ಬದುಕಷ್ಟೇ ಅಲ್ಲದೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಗೌರವಕ್ಕೂ ಧಕ್ಕೆ ತರುತ್ತದೆ. ಶಿಕ್ಷಣ ಮಧ್ಯದಲ್ಲೇ ನಿಲ್ಲುವುದು, ಉದ್ಯೋಗಾವಕಾಶ ಕಳೆದುಕೊಳ್ಳುವುದು ಹಾಗೂ ಅಪರಾಧ ಚಟುವಟಿಕೆಗಳತ್ತ ಆಕರ್ಷಿತರಾಗುವ ಅಪಾಯವೂ ಹೆಚ್ಚುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಕ್ರೀಡೆ, ಯೋಗ, ಓದು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ವ್ಯಸನಗಳಿಂದ ದೂರವಿರಬಹುದು. ಸಾರ್ವಜನಿಕರು ತಮ್ಮ ಸುತ್ತಮುತ್ತ ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ನರಸಿಂಹ ಸ್ವಾಮಿ, ವೈದ್ಯಾಧಿಕಾರಿ ಡಾ. ನೀಲಾಂಬಿಕ, ರಾಜ್ಯಮಟ್ಟದ ತರಬೇತುದಾರ ಹಣಮಂತರಾವ್ ಗೊಂಗಲೆ, ಸಿಪಿಐ ದೌಲತ್ ಎನ್. ಕುರಿ, ಶಿಕ್ಷಣ ಸಂಯೋಜಕ ರವೀಂದ್ರ ಉಪಸ್ಥಿತರಿದ್ದರು. ಉಪನ್ಯಾಸಕಿ ಜ್ಯೋತಿಲತಾ ತಡಬಿಡಿಮಠ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಬಾಕ್ಸ್: ೦೧ ಬೇಡ ಬೋ' ಅಭಿಯಾನಕ್ಕೆ ಪೊಲೀಸರ ಒತ್ತು ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ 'ಬೇಡ ಬೋ – ವ್ಯಸನ ಬೇಡ' ಅಭಿಯಾನಕ್ಕೆ ವಿಶೇಷ ಒತ್ತು ನೀಡಲಾಯಿತು. ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು, ಇ-ಸಿಗರೇಟ್ ಸೇರಿದಂತೆ ಎಲ್ಲ ರೀತಿಯ ಮಾದಕ ವ್ಯಸನಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸ್ನೇಹಿತರ ಒತ್ತಡಕ್ಕೆ ಮಣಿಯದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಲಾಯಿತು. ವ್ಯಸನ ಬೇಡ. ಆರೋಗ್ಯಕರ ಜೀವನವೇ ನಮ್ಮ ಗುರಿ ಎಂಬ ಸಂದೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕೋಟ್: ೦೧ ಸ್ನೇಹಿತರ ಒತ್ತಡಕ್ಕೆ ಮಣಿದು ವ್ಯಸನದ ದಾರಿ ಹಿಡಿಯಬೇಡಿ "ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು ಸೇರಿದಂತೆ ಯಾವುದೇ ಮಾದಕ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು.ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. – – ಸುರೇಶ ಎಂ., ಡಿವೈಎಸ್ಪಿ, ಯಾದಗಿರಿ4
- ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗ: ತಾಲೂಕಿನ ನಗರಗುಂಡ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಬೆನ್ನಲ್ಲೇ, ಇದೀಗ ದೇವದುರ್ಗ ಪಟ್ಟಣದ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಗುಡ್ಡ ಪ್ರದೇಶದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಕಳೆದ ಕೆಲ ದಿನಗಳಿಂದ ತಾಲೂಕಿನ ವಿವಿಧೆಡೆ ಚಿರತೆಗಳ ಓಡಾಟದ ಕುರಿತು ವರದಿಯಾಗುತ್ತಿದ್ದು, ಇದೀಗ ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಚಲನವಲನ ಹಾಗೂ ಜಾಡು ಪತ್ತೆಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಮೂಲಕ ನಿಗಾ ವಹಿಸುತ್ತಿದ್ದು, ಗುಡ್ಡ ಪ್ರದೇಶದಲ್ಲಿ ಚಿರತೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ತಾಲೂಕಿನ ವಿವಿಧೆಡೆ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ವಲಸೆ ಬಂದಿರುವ ಚಿರತೆಗಳಾಗಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಗುಡ್ಡ ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಚಿರತೆ ಕಂಡುಬಂದಲ್ಲಿ ಅದರ ಸಮೀಪಕ್ಕೆ ತೆರಳದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.2
- ಇಂಗನಕಲ: ಶರಣಪ್ಪಾ D ಹಾಲಕಾಯಿ ಸಾಹುಕಾರ ಅವರು ಭಜನಾ ಮಂಡಳಿಗೆ ಪ್ರಸಾದ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ಹಾಲಕಾಯಿ ಉಪಸ್ಥಿತರಿದ್ದರು2
- ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ ದಿನಾಂಕ: 31-07-2026 ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 📰 ಜಾಲಹಳ್ಳಿ–ದೇವದುರ್ಗ ಬ್ರೇಕಿಂಗ್ ನ್ಯೂಸ್ ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ ದಿನಾಂಕ: 31-07-2026 ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಣವೇ ಭವಿಷ್ಯದ ಬುನಾದಿ ವಿಶೇಷ ಉಪನ್ಯಾಸ ನೀಡಿದ ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ ಅವರು, "ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಸಮಯದ ಸದ್ಬಳಕೆ ಮಾಡಿಕೊಂಡು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಕಾಲೇಜು, ಪೋಷಕರು ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು" ಎಂದು ಕರೆ ನೀಡಿದರು ಮುಖ್ಯ ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶ್ರೀ ಸಿದ್ದನಗೌಡ ಮಾಲಿ ಪಾಟೀಲ (ಬಾಗೂರು) ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಗತ್ಯ. ಪೋಷಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದು, ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಅವರ ಹೆಸರು ತರಬೇಕು ಎಂದರು. ನಿವೃತ್ತ ಪ್ರಾಚಾರ್ಯ ಶ್ರೀ ಉಮೇಶ್ ಹೆಸರೂರು ಅವರು, ಮಾತನಾಡಿ ಕಠಿಣ ಪರಿಶ್ರಮ ಮತ್ತು ಗುರಿಯೊಂದಿಗೆ ವ್ಯಾಸಂಗ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು. --_----------------- ಬಾಕ್ಸ್ ನಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್ ಅವರು, ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅವರು ಹೇಳಿದ ಸಂದೇಶ ಎಲ್ಲರ ಗಮನ ಸೆಳೆಯಿತು: «"ಮೊಬೈಲ್ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ನೋಡು, ನಾನು ನಿನಗೆ ತಲೆ ತಗ್ಗಿಸುವಂತೆ ಮಾಡುತ್ತೇನೆ. ಪುಸ್ತಕ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ಓದು, ನಾನು ನಿನಗೆ ತಲೆ ಎತ್ತುವಂತೆ ಮಾಡುತ್ತೇನೆ."»ಪುಸ್ತಕ ಓದುವದು ಕಡೆ ಹೆಚ್ಚು ಗಮನ ಹರಿಸಿ ಎಂದು ಹೇಳಿದರು ----------------===- ಬಾಕ್ಸ್ ನಲ್ಲಿ ಅಧ್ಯಕ್ಷೀಯ ಭಾಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಮಾತನಾಡಿ, ಜಾಲಹಳ್ಳಿ ಕಾಲೇಜು ಇಂದು ಉತ್ತಮ ಮಟ್ಟಕ್ಕೆ ಬೆಳೆಯಲು ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು ಅವರ ಸೇವೆ ಮತ್ತು ದೂರದೃಷ್ಟಿಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. 2006ರಲ್ಲಿ ಆರಂಭವಾದ ಕಾಲೇಜಿನ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು. ------------------- ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಅವರು, ಮಾತನಾಡಿ ಜಾಲಹಳ್ಳಿ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಅಧಿಕಾರಿಗಳಾಗಿದ್ದಾರೆ. ನೂತನ ವಿದ್ಯಾರ್ಥಿಗಳು ಕೂಡ ಅದೇ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಪ್ರೋತ್ಸಾಹಿಸಿದರು. ಪತ್ರಕರ್ತ ಶ್ರೀ ಮೌನೇಶ್ ಜಾಲಹಳ್ಳಿ ಅವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ಕರೆ ನೀಡಿದರು. ಭೂದಾನಿಗಳು ಹಾಗೂ ಸಾಧಕರಿಗೆ ಸನ್ಮಾನ ಕಾಲೇಜಿಗೆ ಜಾಗವನ್ನು ದಾನವಾಗಿ ನೀಡಿದ ಉದಾರ ಮನಸ್ಸಿನ ಶ್ರೀ ಅಮರೇಶ ತಂದೆ ನೀಲಕಂಠಪ್ಪ ಮೆಣಸಿನಕಾಯಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಇದೆ ವೇಳೆ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಅವರಿಗೆ ಸನ್ಮಾನ ಮಾಡಲಾಯಿತು, ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು)ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು. - ಶ್ರೀದೇವಿ ಶರಣಪ್ಪ (ಜಾಲಹಳ್ಳಿ) – 564 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ. ರಾಜ್ಯಶಾಸ್ತ್ರದಲ್ಲಿ 99/100 ಹಾಗೂ ಸಮಾಜಶಾಸ್ತ್ರದಲ್ಲಿ 99/100 ಅಂಕ ಗಳಿಸಿದ್ದರು. ಕಾಲೇಜಿನಿಂದ ₹1,500 ಹಾಗೂ ನಿವೃತ್ತ ಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹3,000 ನಗದು ಬಹುಮಾನ ನೀಡಿ ಗೌರವಿಸಲಾಯಿತು. - ಪವಿತ್ರಾ ಬಸವರಾಜ್ ಬಂಡಿ (ಜಾಲಹಳ್ಳಿ) – ಕಾಲೇಜಿಗೆ ದ್ವಿತೀಯ ಸ್ಥಾನ. ಕನ್ನಡ ವಿಷಯದಲ್ಲಿ 100/100 ಅಂಕ ಗಳಿಸಿದ್ದು, ಕಾಲೇಜು ಹಾಗೂ ನಿವೃತ್ತಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹2,000 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. - ಪೂರ್ಣಿಮಾ (ಜಾಲಹಳ್ಳಿ) – 544 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಇದರ ಜೊತೆಗೆ ಸಂಸ್ಕೃತ ವಿಭಾಗ ಹಾಗೂ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂತನ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಉಪಸ್ಥಿತಿ ಕಾರ್ಯಕ್ರಮದಲ್ಲಿಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು) ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ . ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯಗುರು ನಿಂಗಪ್ಪ, ಇಂಗ್ಲಿಷ್ ಉಪನ್ಯಾಸಕ ಶೇಖರ್, ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಬಾಬುಮಿಯಾ ಟೇಲರ್, ಹಿರಿಯ ಉಪನ್ಯಾಸಕರಾದ ವಿರೂಪಣ್ಣ, ಬಸವರಾಜ್, ಪ್ರಕಾಶ್, ಚನ್ನಬಸವ, ಬಸವರಾಜ್ ಸೋಮನಂಬರಡಿ, ಹನುಮೇಶ್, ಪೂರ್ಣಿಮಾ ಮೇಡಂ ಸೇರಿದಂತೆ ಉಪನ್ಯಾಸಕ ವೃಂದ, ಸಿಬ್ಬಂದಿ, ಗಣ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಉಪನ್ಯಾಸಕ ಬಸವರಾಜ್ ರಸ್ತಾಪುರ್ ಅವರು ನೆರವೇರಿಸಿದರು. ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ4
- ಕುರುಕುಂದದ ಆಗ್ರೋ ಕೇಂದ್ರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ ಯಾದಗಿರಿ, ಆ. 1: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರುಕುಂದ ಗ್ರಾಮದ ದಂಡಗುಂಡ ಬಸವೇಶ್ವರ ಆಗ್ರೋ ಕೇಂದ್ರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಿಸ್ತು ಕ್ರಮ ಕೈಗೊಂಡು ಅಂಗಡಿ ಪರವಾನಗಿಯನ್ನು (ಲೈಸೆನ್ಸ್) ರದ್ದುಪಡಿಸುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದೆ. ಆಗ್ರೋ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳನ್ನು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಅಲ್ಲದೆ, "ಬೇಕಿದ್ದರೆ ಖರೀದಿಸಿ, ಇಲ್ಲದಿದ್ದರೆ ಹೋಗಿ" ಎಂದು ಹೇಳುತ್ತಾ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದೆ. ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು, ಶಹಾಪುರ ಅವರು ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ. ಒಂದು ವೇಳೆ ಅಧಿಕಾರಿಗಳು ಈ ವಿಷಯವನ್ನು ನಿರ್ಲಕ್ಷಿಸಿದರೆ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ಕುರುಕುಂದದ ಆಗ್ರೋ ಕೇಂದ್ರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ ಯಾದಗಿರಿ, ಆ. 1: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರುಕುಂದ ಗ್ರಾಮದ ದಂಡಗುಂಡ ಬಸವೇಶ್ವರ ಆಗ್ರೋ ಕೇಂದ್ರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಿಸ್ತು ಕ್ರಮ ಕೈಗೊಂಡು ಅಂಗಡಿ ಪರವಾನಗಿಯನ್ನು (ಲೈಸೆನ್ಸ್) ರದ್ದುಪಡಿಸುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದೆ. ಆಗ್ರೋ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳನ್ನು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಅಲ್ಲದೆ, "ಬೇಕಿದ್ದರೆ ಖರೀದಿಸಿ, ಇಲ್ಲದಿದ್ದರೆ ಹೋಗಿ" ಎಂದು ಹೇಳುತ್ತಾ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದೆ. ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು, ಶಹಾಪುರ ಅವರು ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ. ಒಂದು ವೇಳೆ ಅಧಿಕಾರಿಗಳು ಈ ವಿಷಯವನ್ನು ನಿರ್ಲಕ್ಷಿಸಿದರೆ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.1
- ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ! ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ! ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.1