ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿ ಜನಾರ್ಪಣೆ ಸೌಹಾರ್ದ ಕೆಡಿಸುವ ಯತ್ನ–ಎಚ್ಚರಿಕೆ ಅಗತ್ಯ: ಕುಂ.ವೀ ಹೊಸಪೇಟೆ: ದೇಶದಲ್ಲಿ ಕಳೆದ 11 ವರ್ಷಗಳಿಂದ ಸೌಹಾರ್ದ ಕೆಡಿಸುವ ಯತ್ನ ನಡೆಯುತ್ತಿದೆ. ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿ, ಅದನ್ನು ಲಾಭಕ್ಕೆ ಬಳಸಿಕೊಳ್ಳುವ ಯತ್ನವೂ ನಿರಂತರ ಸಾಗಿದೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ (ಕುಂ.ವೀ) ಹೇಳಿದರು. ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸೌಹಾರ್ದ ಕರ್ನಾಟಕ ಹೊಸಪೇಟೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ..’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ವಿವಿಧ ಜನಾಂಗ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಜಗತ್ತಿನಲ್ಲಿ ಆರಂಭವಾದುದು 1914ರ ಸಮಯದಲ್ಲಿ. ಜರ್ಮನಿಯಲ್ಲಿ ಯಹೂದಿಗಳನ್ನು ವಿನಾ ಕಾರಣ ನಿಂದಿಸುವ, ಶಿಕ್ಷುಸುವ ಕೆಲಸ ನಡೆಯಿತು. ಅದೇ ವಾತಾವರಣ ನಮ್ಮ ದೇಶದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿದೆ. ಮುಸ್ಲಿಮವರನ್ನು ವಿನಾ ಕಾರಣ ದ್ವೇಷಿಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಕುಂ.ವೀ ವಿವರಿಸಿದರು. ಇಲ್ಲಿನವರಿಂದಲೇ ಕೊಳ್ಳೆ: ‘ವಿಜಯನಗರ ಇತಿಹಾಸವನ್ನೇ ತೆಗೆದುಕೊಂಡರೂ, ಇಲ್ಲಿ ಸಹ ಮುಸ್ಲಿಮರಿಂದ ವಿಜಯನಗರ ಸಾಮ್ರಾಜ್ಯ ಕೊಳ್ಳೆ ಹೊಡೆಯಲ್ಪಟ್ಟಿತು ಎಂದೇ ಬಿಂಬಿಸಲಾಗಿದೆ. ವಾಸ್ತವವಾಗಿ ವಿಜಯನಗರದ ಕೊನೆಯ ದೊರೆ ರಾಮರಾಯ ಯುದ್ಧದಲ್ಲಿ ಸೋತದ್ದು ಬಹಳ ದೂರದಲ್ಲಿ, ಆದರೆ ತಕ್ಷಣ ಹಂಪಿ ಭಾಗದಲ್ಲಿ ಕೊಳ್ಳೆ ಹೊಡೆಯುವ ಕೆಲಸ ನಡೆಯಿತು. ಇದನ್ನು ಯಾರು ಮಾಡಿದ್ದು ಎಂದು ಊಹಿಸುವುದು ಕಷ್ವವಲ್ಲ, ಇಲ್ಲಿ ಇದ್ದ ಹಿಂದೂಗಳೇ ರಾಜರ ಮೇಲಿನ ದ್ವೇಷದಿಂದ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದರು’ ಎಂದು ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ವಿಜಯನಗದ ಇತಿಹಾಸ ಗಮನಿಸಿದರೆ ಇಲ್ಲಿ ರಚನೆಯಾದ ಸಾಹಿತ್ಯಗಳಲ್ಲಿ ರಾಜರನ್ನು ಹೊಗಳುವ, ಅವರ ಸಾಧನೆ ತಿಳಿಸುವ ಅಂಶ ಕಾಣಿಸುವುದಿಲ್ಲ, ಬದಲಿಗೆ ಇಲ್ಲಿನ ಜಾನಪದ ಸಾಹಿತ್ಯಗಳಲ್ಲಿ ಕುಮಾರರಾಮ, ಪಾಳೆಗಾರರು, ಜನಸಾಮಾನ್ಯರನ್ನು ಹೊಗಳುವ ಪರಿಪಾಠ ಕಾಣಿಸುತ್ತದೆ. ರಾಜರಿಂದ ಜನರಿಗೆ, ಜನಸಾಮಾನ್ಯರಿಗೆ ನೆಮ್ಮದಿ ಇರಲಲ್ಲ ಎಂಬುದನ್ನು ಇದು ಸೂಚಿಸುತ್ತದೆ, ಇದರ ಫಲವಾಗಿಯೇ ರಾಜ್ಯ ಪತನವಾದಾಗ ಕೊಳ್ಳೆ ಹೊಡೆದು ಸೇಡು ತೀರಿಸಿಕೊಳ್ಳುವ ಕೆಲಸ ಇಲ್ಲಿ ನಡೆದಂತೆ ಕಾಣಿಸುತ್ತದೆ ಎಂದು ಅವರು ವಿವರಿಸಿದರು. ಸಾಹಿತ್ಯದ ಮೂಲವೇ ಸೌಹಾರ್ದ: ಸೌಹಾರ್ದತೆ ಎಂಬುದು ಈ ದೇಶದ ಮೂಲಭೂತ ಗುಣ. ಹಲವು ಹಳಗನ್ನಡ, ನಡುಗನ್ನಡ ಸಾಹಿತ್ಯ ಕೃತಿಗಳಲ್ಲಿ ಇದನ್ನೇ ಪ್ರಧಾನವಾಗಿ ಪರಿಗಣಿಸಲಾಗಿದೆ. ವಚನ ಸಾಹಿತ್ಯದ ಆಶಯವೂ ಇದೇ ಆಗಿದೆ. ಇನ್ನೊಂದು ಧರ್ಮವನ್ನು, ವಿಚಾರಗಳನ್ನು ಗೌರವಿಸು ಎಂದೇ ಎಲ್ಲಾ ದಾರ್ಶನಿಕರೂ, ಸಾಹಿತಿಗಳೂ ಹೇಳಿದ್ದಾರೆ. ಆದರೆ ನಾವು ಈ ಮೂಲ ತತ್ವವನ್ನೂ ಕಳೆದ 11 ವರ್ಷಗಳಿಂದ ಮರೆತಂತೆ ವರ್ತಿಸುತ್ತಿದ್ದೇವೆ ಎಂದು ಕುಂ.ವೀ ವಿಷಾದ ವ್ಯಕ್ತಪಡಿಸಿದರು. ದೇಶದ 700 ವರ್ಷದ ಇತಿಹಾಸದಲ್ಲಿ ಸುಮಾರು 300 ವರ್ಷಗಳಷ್ಟು ಅವಧಿಯನ್ನು ಅನಕ್ಷರಸ್ಥ ಮುಸ್ಲಿಂ ದೊರೆಗಳೇ ಆಳಿದ್ದಾರೆ. ಆದರೆ ಮತಾಂತರ, ಧರ್ಮದ್ವೇಷದಂತಹ ಉದಾಹರಣೆಗಳು ಹೆಚ್ಚೇನೂ ಸಿಗುವುದಿಲ್ಲ. ಹಿಂದೂಗಳಲ್ಲೇ ಹಲವು ಪಂಗಡಗಳು ಬಲಾತ್ಕಾರದಿಂದ ಮತಾಂತರ ಮಾಡಿಸಿಕೊಂಡ ನಿದರ್ಶನವೂ ಇದೆ. ಹೀಗಾಗಿ ಒಂದು ನಿರ್ದಿಷ್ಟ ಧರ್ಮವನ್ನೇ ಗುರಿಯಾಗಿಸಿ ಅವರಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ಹೇಳುವುದು ಸರಿಯಲ್ಲ ಎಂದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳಷ್ಟು ಮುಸ್ಲಿಮರು ಬಲಿದಾನ ಮಾಡಿದ್ದಾರೆ ಎಂದ ಅವರು, ತಾವು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುವ ಸಂಘಟನೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇಲ್ಲ ಎಂದರು. ಕಲಿತವರಿಂದಲೇ ತೊಂದರೆ: ‘ಸೌಹಾರ್ದ ಭಾರತ’ ಕೃತಿಯ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ, ಇಂದು ದೇಶದಲ್ಲಿ ವಿದ್ಯೆ ಕಲಿತವರಿಂದಲೇ ಅಧಿಕ ಅಪಾಯ ಎದುರಾಗಿದೆ ಎಂದರು. ಕನ್ನಡ ಸಾಹಿತ್ಯದಲ್ಲಿ ಸೌಹಾರ್ದತೆ ಬಿಟ್ಟರೆ ಇನ್ನೊಂದು ಮಾತಿಲ್ಲ. ಕೂಡಿ ಬಾಳಬೇಕು ಎಂದೇ ಎಲ್ಲರೂ ಹೇಳಿದ್ದಾರೆ. ಪಂಪನಿಂದ ಹಿಡಿದು ವಚನಕಾರರು, ಕುವೆಂಪು ತನಕ ಎಲ್ಲರದೂ ಇದೇ ಆಶಯವಾಗಿದೆ. ಅಕ್ಷರ ಕಲಿತರವಿಗೆ ಇದನ್ನು ಮತ್ತೆ ತಿಳಿಹೇಳುವ ಅಗತ್ಯ ಎದುರಾಗಿದೆ ಎಂದು ಅವರು ಹೇಳಿದರು. ಗಾಂಧಿ, ವಿವೇಕಾನಂದರ ಹಲವು ವಿಚಾರಗಳನ್ನು ಎತ್ತಿಕೊಂಡ ಬರಗೂರು ಅವರು ತಮ್ಮ ಕೃತಿಯಲ್ಲಿ ಸೌಹಾರ್ದತೆಯ ಅಗತ್ಯವನ್ನು ತಿಳಿಸಿದ್ದಾರೆ, ಈ ಕೃತಿಯನ್ನು ಶಾಲಾ, ಕಾಲೇಜುಗಳಲ್ಲಿ ಹಂಚಿ, ಯುವಜನಾಂಗದವರಿಗೆ ಸೌಹಾರ್ದದ ಬಗ್ಗೆ ಮನವರಿಕೆ ಮಾಡುವ ಅಗತ್ಯ ಇದೆ ಎಂದರು. ದ್ವೇಷ ಸರಿಯಲ್ಲ: ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ ಮಾತನಾಡಿ, ಧರ್ಮಗಳ ಸಾರ ಕೂಡಿ ಬಾಳುವುದೇ ಹೊರತು ದ್ವೇಷ ಸಾಧಿಸುವುದಲ್ಲ, ಆದರೆ ಇಂದು ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳಲ್ಲಿ ಗುಂಪುಗಳು ರಚನೆಗೊಂಡು ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಪತ್ರಕರ್ತರಿಗೆ ಹಲವು ಸಂಘಟನೆಗಳ ಜತೆಗೆ ಸೌಹಾರ್ದತೆ ಇರುವ ಕಾರಣಕ್ಕೆ ಇಂತಹ ಕಾರ್ಯಕ್ರಮ ಸಂಘಟಿಸುವುದು ಸಾಧ್ಯವಾಯಿತು ಎಂದರು. ರಂಗ ಕಲಾವಿದೆ ನಾಗರತ್ನಮ್ಮ, ವಕೀಲ ಗುಜ್ಜಲ್ ನಾಗರಾಜ ಮಾತನಾಡಿದರು. ಸೌಹಾರ್ದ ಕರ್ನಾಟಕದ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯದ 23 ಜಿಲ್ಲೆಗಳಲ್ಲಿ ‘ಸೌಹಾರ್ದ ಭಾರತ’ ಕೃತಿ ಜನಾರ್ಪಣೆ ಏಕಕಾಲದಲ್ಲಿ ನಡೆದಿದೆ ಎಂದರು. ಕೆ.ಲಕ್ಷ್ಮಣ್‌ಗೆ ಸನ್ಮಾನ: ಮಾಧ್ಯಮ ಪ್ರಶಸ್ತಿಗೆ ಪಾತ್ರರಾಗಿರುವ ನಗರದ ಹಿರಿಯ ಪತ್ರಕರ್ತ, ‘ಸಂಯುಕ್ತ ಕರ್ನಾಟಕ’ದ ಜಿಲ್ಲಾ ವರದಿಗಾರ ಕೆ.ಲಕ್ಷ್ಮಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಡಿಎಚ್‌ಎಸ್ ಮುಖಂಡ ಎಂ.ಜಂಬಯ್ಯ ನಾಯಕ, ಸಂಘದ ಉಪಾಧ್ಯಕ್ಷ ಸಿ.ಕೆ.ನಾಗರಾಜ, ಕಾರ್ಯದರ್ಶಿಗಳಾದ ಸುರೇಶ್ ಚವ್ಹಾಣ್ ಇತರರು ಇದ್ದರು. ಬಿ.ಮಹೇಶ್ ನಿರೂಪಿಸಿದರು. ಉಮಾಮಹೇಶ್ವರ ವಂದಿಸಿದರು.
ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿ ಜನಾರ್ಪಣೆ ಸೌಹಾರ್ದ ಕೆಡಿಸುವ ಯತ್ನ–ಎಚ್ಚರಿಕೆ ಅಗತ್ಯ: ಕುಂ.ವೀ ಹೊಸಪೇಟೆ: ದೇಶದಲ್ಲಿ ಕಳೆದ 11 ವರ್ಷಗಳಿಂದ ಸೌಹಾರ್ದ ಕೆಡಿಸುವ ಯತ್ನ ನಡೆಯುತ್ತಿದೆ. ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿ, ಅದನ್ನು ಲಾಭಕ್ಕೆ ಬಳಸಿಕೊಳ್ಳುವ ಯತ್ನವೂ ನಿರಂತರ ಸಾಗಿದೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ (ಕುಂ.ವೀ) ಹೇಳಿದರು. ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸೌಹಾರ್ದ ಕರ್ನಾಟಕ ಹೊಸಪೇಟೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ..’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ವಿವಿಧ ಜನಾಂಗ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಜಗತ್ತಿನಲ್ಲಿ ಆರಂಭವಾದುದು 1914ರ ಸಮಯದಲ್ಲಿ. ಜರ್ಮನಿಯಲ್ಲಿ ಯಹೂದಿಗಳನ್ನು ವಿನಾ ಕಾರಣ ನಿಂದಿಸುವ, ಶಿಕ್ಷುಸುವ ಕೆಲಸ ನಡೆಯಿತು. ಅದೇ ವಾತಾವರಣ ನಮ್ಮ ದೇಶದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿದೆ. ಮುಸ್ಲಿಮವರನ್ನು ವಿನಾ ಕಾರಣ ದ್ವೇಷಿಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಕುಂ.ವೀ ವಿವರಿಸಿದರು. ಇಲ್ಲಿನವರಿಂದಲೇ ಕೊಳ್ಳೆ: ‘ವಿಜಯನಗರ ಇತಿಹಾಸವನ್ನೇ ತೆಗೆದುಕೊಂಡರೂ, ಇಲ್ಲಿ ಸಹ ಮುಸ್ಲಿಮರಿಂದ ವಿಜಯನಗರ ಸಾಮ್ರಾಜ್ಯ ಕೊಳ್ಳೆ ಹೊಡೆಯಲ್ಪಟ್ಟಿತು ಎಂದೇ ಬಿಂಬಿಸಲಾಗಿದೆ. ವಾಸ್ತವವಾಗಿ ವಿಜಯನಗರದ ಕೊನೆಯ ದೊರೆ ರಾಮರಾಯ ಯುದ್ಧದಲ್ಲಿ ಸೋತದ್ದು ಬಹಳ ದೂರದಲ್ಲಿ, ಆದರೆ ತಕ್ಷಣ ಹಂಪಿ ಭಾಗದಲ್ಲಿ ಕೊಳ್ಳೆ ಹೊಡೆಯುವ ಕೆಲಸ ನಡೆಯಿತು. ಇದನ್ನು ಯಾರು ಮಾಡಿದ್ದು ಎಂದು ಊಹಿಸುವುದು ಕಷ್ವವಲ್ಲ, ಇಲ್ಲಿ ಇದ್ದ ಹಿಂದೂಗಳೇ ರಾಜರ ಮೇಲಿನ ದ್ವೇಷದಿಂದ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದರು’ ಎಂದು ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ವಿಜಯನಗದ ಇತಿಹಾಸ ಗಮನಿಸಿದರೆ ಇಲ್ಲಿ ರಚನೆಯಾದ ಸಾಹಿತ್ಯಗಳಲ್ಲಿ ರಾಜರನ್ನು ಹೊಗಳುವ, ಅವರ ಸಾಧನೆ ತಿಳಿಸುವ ಅಂಶ
ಕಾಣಿಸುವುದಿಲ್ಲ, ಬದಲಿಗೆ ಇಲ್ಲಿನ ಜಾನಪದ ಸಾಹಿತ್ಯಗಳಲ್ಲಿ ಕುಮಾರರಾಮ, ಪಾಳೆಗಾರರು, ಜನಸಾಮಾನ್ಯರನ್ನು ಹೊಗಳುವ ಪರಿಪಾಠ ಕಾಣಿಸುತ್ತದೆ. ರಾಜರಿಂದ ಜನರಿಗೆ, ಜನಸಾಮಾನ್ಯರಿಗೆ ನೆಮ್ಮದಿ ಇರಲಲ್ಲ ಎಂಬುದನ್ನು ಇದು ಸೂಚಿಸುತ್ತದೆ, ಇದರ ಫಲವಾಗಿಯೇ ರಾಜ್ಯ ಪತನವಾದಾಗ ಕೊಳ್ಳೆ ಹೊಡೆದು ಸೇಡು ತೀರಿಸಿಕೊಳ್ಳುವ ಕೆಲಸ ಇಲ್ಲಿ ನಡೆದಂತೆ ಕಾಣಿಸುತ್ತದೆ ಎಂದು ಅವರು ವಿವರಿಸಿದರು. ಸಾಹಿತ್ಯದ ಮೂಲವೇ ಸೌಹಾರ್ದ: ಸೌಹಾರ್ದತೆ ಎಂಬುದು ಈ ದೇಶದ ಮೂಲಭೂತ ಗುಣ. ಹಲವು ಹಳಗನ್ನಡ, ನಡುಗನ್ನಡ ಸಾಹಿತ್ಯ ಕೃತಿಗಳಲ್ಲಿ ಇದನ್ನೇ ಪ್ರಧಾನವಾಗಿ ಪರಿಗಣಿಸಲಾಗಿದೆ. ವಚನ ಸಾಹಿತ್ಯದ ಆಶಯವೂ ಇದೇ ಆಗಿದೆ. ಇನ್ನೊಂದು ಧರ್ಮವನ್ನು, ವಿಚಾರಗಳನ್ನು ಗೌರವಿಸು ಎಂದೇ ಎಲ್ಲಾ ದಾರ್ಶನಿಕರೂ, ಸಾಹಿತಿಗಳೂ ಹೇಳಿದ್ದಾರೆ. ಆದರೆ ನಾವು ಈ ಮೂಲ ತತ್ವವನ್ನೂ ಕಳೆದ 11 ವರ್ಷಗಳಿಂದ ಮರೆತಂತೆ ವರ್ತಿಸುತ್ತಿದ್ದೇವೆ ಎಂದು ಕುಂ.ವೀ ವಿಷಾದ ವ್ಯಕ್ತಪಡಿಸಿದರು. ದೇಶದ 700 ವರ್ಷದ ಇತಿಹಾಸದಲ್ಲಿ ಸುಮಾರು 300 ವರ್ಷಗಳಷ್ಟು ಅವಧಿಯನ್ನು ಅನಕ್ಷರಸ್ಥ ಮುಸ್ಲಿಂ ದೊರೆಗಳೇ ಆಳಿದ್ದಾರೆ. ಆದರೆ ಮತಾಂತರ, ಧರ್ಮದ್ವೇಷದಂತಹ ಉದಾಹರಣೆಗಳು ಹೆಚ್ಚೇನೂ ಸಿಗುವುದಿಲ್ಲ. ಹಿಂದೂಗಳಲ್ಲೇ ಹಲವು ಪಂಗಡಗಳು ಬಲಾತ್ಕಾರದಿಂದ ಮತಾಂತರ ಮಾಡಿಸಿಕೊಂಡ ನಿದರ್ಶನವೂ ಇದೆ. ಹೀಗಾಗಿ ಒಂದು ನಿರ್ದಿಷ್ಟ ಧರ್ಮವನ್ನೇ ಗುರಿಯಾಗಿಸಿ ಅವರಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ಹೇಳುವುದು ಸರಿಯಲ್ಲ ಎಂದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳಷ್ಟು ಮುಸ್ಲಿಮರು ಬಲಿದಾನ ಮಾಡಿದ್ದಾರೆ ಎಂದ ಅವರು, ತಾವು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುವ ಸಂಘಟನೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇಲ್ಲ ಎಂದರು. ಕಲಿತವರಿಂದಲೇ ತೊಂದರೆ: ‘ಸೌಹಾರ್ದ ಭಾರತ’ ಕೃತಿಯ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ, ಇಂದು ದೇಶದಲ್ಲಿ ವಿದ್ಯೆ ಕಲಿತವರಿಂದಲೇ ಅಧಿಕ ಅಪಾಯ ಎದುರಾಗಿದೆ ಎಂದರು. ಕನ್ನಡ ಸಾಹಿತ್ಯದಲ್ಲಿ ಸೌಹಾರ್ದತೆ ಬಿಟ್ಟರೆ ಇನ್ನೊಂದು ಮಾತಿಲ್ಲ. ಕೂಡಿ
ಬಾಳಬೇಕು ಎಂದೇ ಎಲ್ಲರೂ ಹೇಳಿದ್ದಾರೆ. ಪಂಪನಿಂದ ಹಿಡಿದು ವಚನಕಾರರು, ಕುವೆಂಪು ತನಕ ಎಲ್ಲರದೂ ಇದೇ ಆಶಯವಾಗಿದೆ. ಅಕ್ಷರ ಕಲಿತರವಿಗೆ ಇದನ್ನು ಮತ್ತೆ ತಿಳಿಹೇಳುವ ಅಗತ್ಯ ಎದುರಾಗಿದೆ ಎಂದು ಅವರು ಹೇಳಿದರು. ಗಾಂಧಿ, ವಿವೇಕಾನಂದರ ಹಲವು ವಿಚಾರಗಳನ್ನು ಎತ್ತಿಕೊಂಡ ಬರಗೂರು ಅವರು ತಮ್ಮ ಕೃತಿಯಲ್ಲಿ ಸೌಹಾರ್ದತೆಯ ಅಗತ್ಯವನ್ನು ತಿಳಿಸಿದ್ದಾರೆ, ಈ ಕೃತಿಯನ್ನು ಶಾಲಾ, ಕಾಲೇಜುಗಳಲ್ಲಿ ಹಂಚಿ, ಯುವಜನಾಂಗದವರಿಗೆ ಸೌಹಾರ್ದದ ಬಗ್ಗೆ ಮನವರಿಕೆ ಮಾಡುವ ಅಗತ್ಯ ಇದೆ ಎಂದರು. ದ್ವೇಷ ಸರಿಯಲ್ಲ: ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ ಮಾತನಾಡಿ, ಧರ್ಮಗಳ ಸಾರ ಕೂಡಿ ಬಾಳುವುದೇ ಹೊರತು ದ್ವೇಷ ಸಾಧಿಸುವುದಲ್ಲ, ಆದರೆ ಇಂದು ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳಲ್ಲಿ ಗುಂಪುಗಳು ರಚನೆಗೊಂಡು ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಪತ್ರಕರ್ತರಿಗೆ ಹಲವು ಸಂಘಟನೆಗಳ ಜತೆಗೆ ಸೌಹಾರ್ದತೆ ಇರುವ ಕಾರಣಕ್ಕೆ ಇಂತಹ ಕಾರ್ಯಕ್ರಮ ಸಂಘಟಿಸುವುದು ಸಾಧ್ಯವಾಯಿತು ಎಂದರು. ರಂಗ ಕಲಾವಿದೆ ನಾಗರತ್ನಮ್ಮ, ವಕೀಲ ಗುಜ್ಜಲ್ ನಾಗರಾಜ ಮಾತನಾಡಿದರು. ಸೌಹಾರ್ದ ಕರ್ನಾಟಕದ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯದ 23 ಜಿಲ್ಲೆಗಳಲ್ಲಿ ‘ಸೌಹಾರ್ದ ಭಾರತ’ ಕೃತಿ ಜನಾರ್ಪಣೆ ಏಕಕಾಲದಲ್ಲಿ ನಡೆದಿದೆ ಎಂದರು. ಕೆ.ಲಕ್ಷ್ಮಣ್‌ಗೆ ಸನ್ಮಾನ: ಮಾಧ್ಯಮ ಪ್ರಶಸ್ತಿಗೆ ಪಾತ್ರರಾಗಿರುವ ನಗರದ ಹಿರಿಯ ಪತ್ರಕರ್ತ, ‘ಸಂಯುಕ್ತ ಕರ್ನಾಟಕ’ದ ಜಿಲ್ಲಾ ವರದಿಗಾರ ಕೆ.ಲಕ್ಷ್ಮಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಡಿಎಚ್‌ಎಸ್ ಮುಖಂಡ ಎಂ.ಜಂಬಯ್ಯ ನಾಯಕ, ಸಂಘದ ಉಪಾಧ್ಯಕ್ಷ ಸಿ.ಕೆ.ನಾಗರಾಜ, ಕಾರ್ಯದರ್ಶಿಗಳಾದ ಸುರೇಶ್ ಚವ್ಹಾಣ್ ಇತರರು ಇದ್ದರು. ಬಿ.ಮಹೇಶ್ ನಿರೂಪಿಸಿದರು. ಉಮಾಮಹೇಶ್ವರ ವಂದಿಸಿದರು.
- ಶಿಡ್ಲಘಟ್ಟ ತಾಲೂಕಿನ ಕಾಚಹಳ್ಳಿ ಅಂಕತಟ್ಟಿ ಗ್ರಾಮಗಳಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ ಬೂದು ನೀರು ನಿರ್ವಹಣಾ ಘಟಕಕ್ಕೆ ಲೋಕಾರ್ಪಣೆ2
- ಯತ್ತಂಬಾಡಿ ಪ್ರಾಥಮಿಕ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆ ಮಾಡುವ ಗುರಿ ನಮ್ಮದು , ಉದ್ಯಮಿ ಹೇಮಂತ್. ಹಲಗೂರು:- ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಿದ್ದೇವೆ .ಯತ್ತಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿಲ್ಲೆ ಯಲ್ಲೇ ಅಲ್ಲ ರಾಜ್ಯದಲ್ಲೇ ನಾನು ಮತ್ತು ನಮ್ಮ ಸ್ನೇಹಿತರು ಸೇರಿ ಮಾದರಿ ಶಾಲೆಯನ್ನಾಗಿ ಮಾಡುವ ಗುರಿಯನ್ನಾಗಿ ಇಟ್ಟುಕೊಂಡಿದ್ದೇವೆ .ಎಂದು ಬೆಂಗಳೂರಿನ ಉದ್ಯಮಿ ಹೇಮಂತ್ ತಿಳಿಸಿದರು. ಸಮೀಪದ ಯತ್ತಂಬಾಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಎಂಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಈಗ ಸರ್ಕಾರಿ ಶಾಲೆ ಎಂದರೆ ಅದು ಸರ್ಕಾರಕ್ಕೆ ಸೇರಿದ ಶಾಲೆ, ಸರ್ಕಾರ ಎಂದರೆ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ ,ಜೆಡಿಎಸ್ ಸರ್ಕಾರ ಎಂಬ ಭಾವನೆ ಇದೆ. ಇದನ್ನೆಲ್ಲಾ ಹೊರತುಪಡಿಸಿ ಈ ಶಾಲೆ ನಮ್ಮ ಶಾಲೆ ,ನಮ್ಮೆಲ್ಲರ ಶಾಲೆ ಎಂಬ ಗೌರವ ನಮ್ಮಲ್ಲಿ ಬೆಳೆಯಬೇಕು. ಜಯರಾಮು ರವರ ಮೂಲಕ ನಾವು ಈ ಊರಿಗೆ ಕಾಲಿಟ್ಟಿದ್ದೇವೆ ಈ ಊರಿಗೂ ನಮಗೂ ಒಂದು ಋಣಾನುಬಂಧ ಬೆಳೆದಿದೆ .ಈ ಶಾಲೆಯಲ್ಲಿ ನಮಗೊಂದು ಸ್ಥಾನ ಸಿಕ್ಕಿದೆ ಅದು ಉಳಿಯಬೇಕಿದ್ದರೆ ಈ ಶಾಲೆ ಅತ್ಯುನ್ನತ ಮಟ್ಟಕ್ಕೆ ತಲುಪಬೇಕಾದರೆ ಏನೇನುಅಗತ್ಯವಿದೆ ಅದನ್ನೆಲ್ಲ ನಾವು ಪೂರೈಸಲು ಸಿದ್ಧರಿದ್ದೇವೆ. ನಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಟ್ಟುಈ ಶಾಲೆಯನ್ನು ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆಯಾಗಿಮಾಡಲು ನನ್ನ ಸ್ನೇಹಿತರ ಸಹಕಾರ ಇದೆ ಎಂಬ ಭಾವನೆಯಿಂದ ಮಾತು ಕೊಡುತ್ತೇನೆ. ಪೋಷಕರೆ ನಿಮ್ಮ ಸಹಕಾರ ನಿಮ್ಮ ಮಕ್ಕಳಿಗೆ ಇರಲಿ, ಗುರುಗಳಿಗೂ ಇರಲಿ ಈ ಮಕ್ಕಳನ್ನು ಉನ್ನತ ಮಟ್ಟದಲ್ಲಿ ನೋಡಲು ಬಯಸುತ್ತೇವೆ. ಇತರ ಶಾಲೆಗಳಿಗೂ ಇದು ಒಂದು ಮಾದರಿ ಶಾಲೆ ಆಗಬೇಕು ಹಾಗೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮತ್ತೋರ್ವ ಉದ್ದಮಿ, ಜಯ ರಾಮು ಮಾತನಾಡುತ್ತಾ, ಹಳ್ಳಿಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ ,ಅಂತಹ ಸಂದರ್ಭದಲ್ಲಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬಸಂಕ್ರಾಂತಿ ಹಬ್ಬದ ವಾತಾವರಣವನ್ನು ಸೃಷ್ಟಿಸಿ ನಮ್ಮ ಕಣ್ಮನ ತುಂಬಿಸಿದ ಇಲ್ಲಿಯ ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಹಳ್ಳಿಯ ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಿ ಪಟ್ಟಣಗಳಲ್ಲಿ ಉದ್ಯೋಗ ನಿಮಿತ್ತ ಒತ್ತಡದ ಜೀವನ ನಡೆಸುತ್ತಿರುವ ನನ್ನ ಕುಟುಂಬದವರು ಮತ್ತು ಸಹೋದ್ಯೋಗಿಗಳನ್ನು ಕರೆತಂದು ಇಲ್ಲಿ ಸಮಯ ಕಳೆದದ್ದಕ್ಕೆ ಅವರಿಗೂ ಧನ್ಯವಾದಗಳು. ದೂರದ ಬೆಟ್ಟ ನುಣ್ಣಗೆ ಎಂದು ಪೋಷಕರು ತಮ್ಮ ಮಕ್ಕಳನ್ನು ಹಳ್ಳಿ ಶಾಲೆ ಬಿಟ್ಟು ಪಟ್ಟಣದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಹಳ್ಳಿ ಶಾಲೆಗಳು ಮುಚ್ಚಲ್ಪಡುತ್ತಿವೆ ಆದುದರಿಂದ ನಾವು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸೋಣ ಎಂದರು. ಶಾಲೆಯ ಮೈದಾನದಲ್ಲಿ ನಿರ್ಮಿಸಲ್ಪಟ್ಟ ಧಾನ್ಯಗಳ ಒಕ್ಕಣೆಯ ಕಣ, ಹೂವಿನಿಂದ ಅಲಂಕರಿಸಿದಧಾನ್ಯಗಳ ರಾಶಿ, ರಟ್ಟಿನಲ್ಲಿ ನಿರ್ಮಿಸಲಾದ ಹಳ್ಳಿಮನೆ, ನೀರು ಸೇದುವ ಬಾವಿ, ಎತ್ತಿನ ಬಂಡಿ ,ಒಣ ಹುಲ್ಲಿನ ಮೆದೆ, ಮೊರಗಳಲ್ಲಿ ತುಂಬಿಟ್ಟ ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಹೆಂಗಸು ಮತ್ತುಗಂಡಸಿನ ಚಿತ್ರವನ್ನು ಬಿಡಿಸಿರುವ ಮಡಿಕೆಗಳು, ಪಕ್ಷಿಗಳಿಂದ ಧಾನ್ಯವನ್ನು ಸಂರಕ್ಷಿಸಲು ಹೊಲಗಳಲ್ಲಿರಿಸುವ ಬೆದರು ಬೊಂಬೆಗಳು,ಎಳ್ಳು ಬೆಲ್ಲ ಕೊಬ್ಬರಿ ಮಿಶ್ರಣ, ಪೂಜಾ ಸಾಮಗ್ರಿಗಳು ಒಟ್ಟಾರೆ ಶಾಲೆಯ ಆವರಣ ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತಿತ್ತು. ಇದೇ ಸಂದರ್ಭದಲ್ಲಿ ಯತ್ತಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ, ಪುಟ್ಟಸ್ವಾಮಾಚಾರಿ, ಸಿ ಆರ್. ಪಿ .ಶಿಕ್ಷಕ ರೇವಣ್ಣ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಜಯರಾಮು ಶಿವಕುಮಾರ್, ವೀರಣ್ಣ, ಹೇಮಂತ್ ಮತ್ತು ಇತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಸೇರದಂತೆ ಶಿಕ್ಷಕ ವೃಂದ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಮೇಶ್, ಉಪಾಧ್ಯಕ್ಷರಾದ ಸೋಮಶೇಖರ್, ಶಿವಲಿಂಗೇಗೌಡ, ಕೆಂಚೇಗೌಡ, ಕೆಂಪೇಗೌಡ, ಕೆಂಪರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು. ಯತ್ತಂಬಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು.1
- ಕಾಂಗ್ರೆಸ್ ಪಕ್ಷದ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್. ಭಾಸ್ಕರ್ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ1
- ಪೋಷಕರು ತಮ್ಮ ಮಕ್ಕಳು ಭವಿಷ್ಯತ್ತನಲ್ಲಿ ಏನಾಗಬೇಕು ಎಂಬ ನಿರ್ಣಯ ಮಕ್ಕಳಿಗೆ ಬಿಡಿ:- ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಬಾಗೇಪಲ್ಲಿ:- ಆಸ್ತಿ–ಅಂತಸ್ತು ಮನುಷ್ಯರನ್ನು ಉತ್ತಮರನ್ನಾಗಿಸಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಬ್ಲೂಮ್ಸ್ ಇಂಟರ್ನ್ಯಾಷನಲ್ ಶಾಲೆಯ ಅದ್ಯಕ್ಷ ಹಾಗೂ ಸಂಸ್ಥಾಪಕ ವಿ.ಗೋವಿಂದರಾಜಲು ಹಾಗೂ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ ಅವರು ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡಿ ಸಾವಿರಾರು ಮಂದಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಯಶಸ್ಸು ಕಂಡಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಹೇಳಿದರು. ಪಟ್ಟಣದ ಹೊರವಲಯದ ಶನಿವಾರ ಏರ್ಪಡಿಸಿದ್ದ ಕಾರಕೂರು ಬ್ಲೂಮ್ಸ್ ಇಂಟರ್ನ್ಯಾಷನಲ್ ಶಾಲಾ ವಾರ್ಷಿಕೋತ್ಸವ ಹಾಗೂ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾರು ಶಿಕ್ಷಣವನ್ನು ಯಶಸ್ವಿಯಾಗಿ ಪಡೆದು ಉನ್ನತ ಶಿಕ್ಷಣ ಪಡೆಯುತ್ತಾರೋ ಅವರಿಗೆ ಉತ್ತಮ ಭವಿಷ್ಯವಿದೆ. ಶಿಕ್ಷಣ ಸಂಸ್ಥೆ ನಿರ್ವಹಣೆ ಕಠಿಣವಾಗಿರುವ ಸಂದರ್ಭದಲ್ಲಿ ಉತ್ತಮ ಶಿಕ್ಷಕರ ತಂಡದೊಂದಿಗೆ ಸಂಸ್ಕಾರಯುತ ಮೌಲ್ಯದೊಂದಿಗೆ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದರು. ಮಕ್ಕಳು ತಮ್ಮ ಜೀವನದ ಭವಿಷ್ಯತ್ ನಲ್ಲಿ ಯಾವು ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೋ, ಏನನ್ನು ಮಾಡಲು ಇಷ್ಟಪಡುತ್ತಾರೋ ಪೋಷಕರು ಮಕ್ಕಳ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಪೋಷಕರಿಗೆ ತಮ್ಮ ಮಕ್ಕಳು ಒಬ್ಬ ಒಳ್ಳೆಯ ಡಾಕ್ಟರ್ ಆಗಬೇಕು, ಇಂಜನಿಯರ್ ಆಗಬೇಕು, ವಿಜ್ಞಾನಿ ಆಗಬೇಕು, ಅನ್ನುವ ಆಸೆ ಇರುತ್ತದೆ ಆದರೆ ಮಕ್ಕಳೇ ಭವಿಷ್ಯತ್ತನಲ್ಲಿ ಏನಾಗಬೇಕು ಎಂಬ ನಿರ್ಣಯ ಮಕ್ಕಳಿಗೆ ಬಿಡಬೇಕು ಎಂದು ಹೇಳಿದರು.3
- ಹನೂರು: ಕರ್ನಾಟಕದ ನಯಾಗರ ಎಂದೇ ಖ್ಯಾತಿ ಪಡೆದಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತಕ್ಕೆ ಭಾನುವಾರ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರ ದಂಡೇ ಹರಿದುಬಂದಿತ್ತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರು ಕಲ್ಲುಬಂಡೆಗಳ ನಡುವೆ ವೇಗವಾಗಿ ಹರಿಯುವ ಕಾವೇರಿ ನದಿಯ ರುದ್ರ–ರಮಣೀಯ ದೃಶ್ಯವನ್ನು ಸವಿದರು. ಜಲಪಾತ ವೀಕ್ಷಣೆ ಬಳಿಕ ಸ್ಥಳೀಯ ಮೀನು ಖಾದ್ಯಗಳನ್ನು ಸವಿಯಲು ಜನಸಂದಣಿ ಕಂಡುಬಂದಿತು. ಈ ವೇಳೆ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನದಿಯ ಅಪಾಯಕರ ಪ್ರದೇಶಗಳಿಗೆ ತೆರಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.1
- ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ 1. 1 ಮೆಗಾ ವ್ಯಾಟ್ ಸೋಲಾರ್ ಘಟಕವನ್ನು ಶಾಸಕ ಎಂ.ಆರ್ ಮಂಜುನಾಥ್ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ಮಲೆ ಮಹದೇಶ್ವರ ಪ್ರಾಧಿಕಾರಕ್ಕೆ ಅನುಕೂಲವಾಗುವ ನಟ್ಟಿನಲ್ಲಿ ಸುಮಾರು ರೂ 8.50ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 1.1 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯವುಳ್ಳ ಸೋಲಾರ್ ಪ್ಲಾಂಟ್ ಗೆ ಇಂದು ಚಾಲನೆಯನ್ನು ನೀಡಿದ್ದು ಇದರಿಂದ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ವ್ಯಾಪ್ತಿಗೆ ದಿನದ 24 ಗಂಟೆಯೂ ಸಹ ವಿದ್ಯುತ್ ಸಂಪರ್ಕ ಸಿಗಲಿದ್ದು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಎಂಆರ್ ಮಂಜುನಾಥ್ ರವರು ತಿಳಿಸಿದರು. 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಇದೇ ತಿಂಗಳ ಅಂತ್ಯದೊಳಗೆ ಈ ಕಾಮಗಾರಿಯನ್ನು ಸಂಪೂರ್ಣ ಮುಗಿಸಿ ಸಾರ್ವಜನಿಕರ ಅನುಕೂಲ ಕಲ್ಪಿಸುವಂತೆ ಸೂಚನೆ ನೀಡಿದರು. ವಜ್ರ ಮಲೆ ಭವನಕ್ಕೆ ಪೀಠೋಪಕರಣಗಳ ಸಾಮಗ್ರಿಗಳನ್ನು ಶಾಸಕ ಎಂಆರ್ ಮಂಜುನಾಥ್ ಪರಿಸರ ನಡೆಸಿ ಗುಣಮಟ್ಟ ಉಳ್ಳಂತಹ ಸಾಮಗ್ರಿಗಳನ್ನು ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು ... ಮಲೆ ಮಹದೆಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಮಾಸ್ಟರ್ ಪ್ಲಾನ್ ಆವರಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದರು. ಇತ್ತೀಚಿನ ದಿನಗಳಲ್ಲಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತಿದ್ದು, ಭಕ್ತರಿಗೆ ಮೂಲಬುತ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಮಾಸ್ಟರ್ ಪ್ಲಾನ್ ಆವರಣವನ್ನು ಅಭಿವೃದ್ದಿ ಪಡಿಸಬೇಕು. ಇದಲ್ಲದೆ ಬೆಟ್ಟದ ಸುತ್ತಮುತ್ತಲಿನ ವರವಲಯದ ಭಾಗಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ತಾಕಿತು ಮಾಡಿದರು. ಈಗಾಗಲೆ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೆಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ನಂತರ ದೇವಸ್ಥಾನದ ಒಳ ಪ್ರಾಂಗಣ, ಹೊರ ಪ್ರಾಂಗಣದ ಸುತ್ತಲೂ ಉತ್ಸವ ಕೌಂಟರ್, ರಥಗಳನ್ನು ನಿಲ್ಲಿಸುವ ಸ್ಥಳ, ಆನೆ ಶೆಡ್ಡು, ಲಗ್ಗೇಜ್ ಅಂಡ್ ಸ್ಲಿಪ್ಪರ್ ಕೌಂಟರ್ಗಳ ಸ್ಥಳ ಪರಿಶೀಲನೆ ಮಾಡಿ, ಹಾಗೂ ಭಕ್ತಾದಿಗಳು ಸರಾಗವಾಗಿ ವಾಹನಗಳಲ್ಲಿ ಓಡಾಡಲು ರಸ್ತೆ ಅಗಲೀಕರಣ ರಿಂಗ್ ರೋಡ್ ನಿರ್ಮಾಣ ಹಾಗೂ ಇಂಟರ್ನಲ್ ರೋಡ್ ಗಳ ಸ್ಥಳ ಪರಿಶೀಲನೆ ಹಾಗೂ ನೂತನ ದಾಸೋಹ ಭವನದ ಬಗೆಯೂ ಚರ್ಚಿಸಲಾಯಿತು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಈ ನಿಟ್ಟಿನಲ್ಲಿ ಆಧುನಿಕತೆಯಿಂದ ಕುಡಿದ ಸೊಸಜ್ಜಿತ ದಾಸೋಹ ಭವನವನ್ನು ನಿರ್ಮಿಸಲು ಈಗಾಗಲೇ ಉದ್ದೇಶಸಲಾಗಿದ್ದು ಟೆಂಡರ್ ಅಂತದಲ್ಲಿದೆ ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಿಸಿ ದಾಸೋಹ ಭವನ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲದೆ ಭಕ್ತರು ಸುಗಮವಾಗಿ ತೆರಳಿ ದೇವರ ದರ್ಶನ ಪಡೆಯಲು ಉದ್ದೇಶಿಸಿರುವ ಸಾರಥಿ ಸಾಲಿನ ಸಂಕೀರ್ಣಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಇದೇ ವೇಳೆ ಶಾಸಕರು ಸೂಚಿಸಿದರು. ಇದೇ ಸಮಯದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎ.ಇ ರಘು ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಎಇಇ ಚಿನ್ನಣ್ಣ, ಇಂಜಿನಿಯರ್ ಸಂತೋಷ್ ಇಂಜಿನಿಯರ್ ಸಂತೋಷ್, ಸೇಲ್ವಗಣಪತಿ,ವಿಸ್ತಾರ ಕನ್ಸಲ್ಟೆಂಟ್ಸ್, ಎಲ್ ಎಲ್ ಪಿ ಗಳಾದ ಶ್ರೀಧರ್,ಮನೋಜ್, ಕೃಷ್ಣನ್,ಮುಖಂಡರುಗಳಾದ ಚಿನ್ನವೆಂಕಟ, ಡಿಕೆ ರಾಜು, ಗೋವಿಂದ ವಿಜಯ್ ಕುಮಾರ್, ಎಸ್.ಆರ್ ಮಹದೇವ್ ಸುರೇಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.3
- Post by AAJ KI DASTAK NEWS KARNATAKA1
- ಶ್ರೀನಿವಾಸಪುರ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವಹಿವಾಟು ವಿರೋಧಿಸಿ ಸುದ್ದಿ ಗೋಷ್ಠಿ1