logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಣ್ಣಿನ ಗಣೇಶ ತಯಾರಿಸಿ ಪರಿಸರ ಜಾಗೃತಿ ಮೂಡಿಸಿದ ವಿದ್ಯಾರ್ಥಿನಿ ಎಸ್.ಎಂ. ಸಹನ ಬಳ್ಳಾರಿ : (ಸಿರಿಗೇರಿ ) ಭಕ್ತಿ ಭಾವೈಕ್ಯತೆ ರೂಪದ ಹಬ್ಬ ಗಣೇಶ ಚತುರ್ಥಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ತನ್ನ ನಿಜ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ. ಗಣೇಶ ಹಬ್ಬ ಈಗ ಆಡಂಬರ, ಮಾಲಿನ್ಯ, ಪರಿಸರ ಹಾನಿಗೆ ಕಾರಣವಾಗುತ್ತಿದ್ದು, ಇದರ ಪ್ರತಿಯಾಗಿ ಪರಿಹಾರವಾಗಿ ಪರಿಸರಸ್ನೇಹಿ ಗಣಪತಿ ಹಬ್ಬದ ಆಚರಣೆಯ ಹೊಸ ಪರಂಪರೆ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿರುವುದು ಪರಿಸರಪ್ರಿಯರಿಗೆ ಸಂತೋಷವನ್ನುಂಟುಮಾಡಿದೆ. ಗಣಪತಿಯನ್ನು ಬಣ್ಣಗಳಿಂದ ಚಂದದ ಅಲಂಕರಿಸಿ ಉತ್ಸಾಹದಿಂದ ಆಚರಿಸಲು ಬಯಸುತ್ತಾರೆ ಆದರೆ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮವನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ. ರಾಸಾಯನಿಕ ಬಣ್ಣ ಮತ್ತು ಇತರೆ ವಸ್ತುಗಳಿಂದ ತಯಾರಿಸಿದ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ನೀರಿನ ಮಲಿನವಾಗುತ್ತದೆ ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ಕರಗದೆ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಇದರಲ್ಲಿರುವ ವಿಷದ ಅಂಶವು ಸಸ್ಯ ಮತ್ತು ಜಲ ಚರಗಳ ಮೇಲೆ ಮಾರಕ ಪ್ರಭಾವ ಉಂಟಾಗುತ್ತದೆ. ಇದನ್ನು ಅರಿತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಯುವತಿ ಎಸ್ ಎಂ ಸಹನಾ ಗ್ರಾಮದ ದಾರುಕ ನಗರದಲ್ಲಿ ಕಳೆದ ಆರು ವರ್ಷಗಳಿಂದ ಪಿಒಪಿ ಗಣೇಶ ನಿಲ್ಲಿಸಿ, ಪ್ರತಿ ವರ್ಷ ವಿಭಿನ್ನ ರೀತಿಯಲ್ಲಿ ಸ್ವತಃ ಪರಿಸರಸ್ನೇಹಿ ವಿಭೂತಿ ಗಣೇಶ, ಗಂಧದ ಗಣೇಶ, ಹರಿಶಿನ ಗಣೇಶ, ಕರಿಮಣ್ಣಿನ ಗಣೇಶ, ಕೆಂಪು ಮಣ್ಣಿನ ಗಣೇಶ, ಅಕ್ಕಿ ಹಿಟ್ಟಿನ ಗಣೇಶ, ತಯಾರಿಸಿ ಗ್ರಾಮದ ಓಣಿಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾಳೆ. ಹೀಗೆ ಈ ಸಾರಿ 7ನೇ ವರ್ಷದ ಪರಿಸರ ಸ್ನೇಹಿ ಕುಂಬಾರು ಮಣ್ಣಿನ ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ತಯಾರಿಸಿ ಕುಂಬಾರ್ ಮಣ್ಣನ್ನು ತಂದು ಚೆನ್ನಾಗಿ ಹದ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ಪರಿಸರ ಸ್ನೇಹಿ ವಿಘ್ನ ನಿವಾರಕ ಗಣೇಶನಿಗೆ ಕೊರಳಲ್ಲಿ ಸರ, ಮಡಿವಸ್ತ್ರ, ಕಿರೀಟ, ಕೈಪಟ್ಟಿ, ಗಣೇಶನ ಮೂಶಿಕ ವಾಹನ ಮೋದಕವನ್ನೋಳಗೊಂಡ ಮೂರ್ತಿಯನ್ನು ಮಾಡಿ ತನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಓಣಿಯ ಅಕ್ಕಪಕ್ಕದವರಿಗೆ ಪರಿಸರಸ್ನೇಹಿ ಕುಂಬಾರ ಮಣ್ಣಿನ ಗಣೇಶನನ್ನು ಮಾಡಿ ಉಚಿತವಾಗಿ ವಿತರಿಸಿ ಪಿಓಪಿ ಗಣೇಶ ನಿಲ್ಲಿಸಿ ಇಂತಹ ಪರಿಸರ ಗಣೇಶ ಮೂರ್ತಿ ಮಾಡಿ ಪೂಜಿಸಿ, ಎಂದು ಜಾಗೃತಿ ಹಾಗೂ ಅರಿವು ಮೂಡಿಸುತ್ತಿದ್ದಾಳೆ ಸಿರಿಗೇರಿಯ ಬಿಎಸ್ಸಿ ವಿದ್ಯಾರ್ಥಿ ಎಸ್. ಎಂ. ಸಹನಾಳ ಗಣೇಶ ತಯಾರಿಸುವುದು ಇವರ ವಿಶೇಷತೆಯಾಗಿದೆ. ಇಷ್ಟೇ ಅಲ್ಲದೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಗಣೇಶ ಹಂಚಿಕೆ ಮಾಡಿ ಕಾಲುವೆ, ನದಿ, ಹಳ್ಳ, ಬಾವಿಯಲ್ಲಿ ವಿಸರ್ಜನೆ ಮಾಡದೆ ಒಂದು ಬಕೀಟಿನಲ್ಲಿ ನೀರು ತುಂಬಿಸಿ, ಪೂಜೆ ಸಲ್ಲಿಸಿ ಅದರಲ್ಲಿ ವಿಸರ್ಜನೆ ಮಾಡಿ ಗಣೇಶ ಕರಗಿದ ನಂತರ ಮನೆ ಆವರಣದಲ್ಲಿ ಬೆಳೆದ ಗಿಡಗಳಿಗೆ ಹಾಕಿ ಅಲ್ಲಿಯೂ ಸಹ ಪರಿಸರದ ಕಾಳಜಿಯನ್ನು ತೋರಿಸುತ್ತಿದ್ದಾಳೆ. ಈ ನನ್ನ ಪರಿಸರ ಕಾಳಜಿಗೆ ಮನೆಯವರಲ್ಲದೆ ಸುತ್ತಮುತ್ತಲಿನ ಮನೆಯವರು ಪ್ರೋತ್ಸಾಹಿಸುವುದು ನನ್ನ ಪರಿಸರ ಪ್ರೇಮ ಕಾಳಜಿ ಇನ್ನು ಹೆಚ್ಚು ಮಾಡುತ್ತಿದೆ ಎನ್ನುತ್ತಾ ಪ್ರತಿಯೊಬ್ಬ ಗಣೇಶ ಭಕ್ತರು ಪರಿಸರಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಮಾಡಬೇಕು ಪರಿಸರ ಕಾಪಾಡುವ ಕೆಲಸ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎನ್ನುತ್ತಿದ್ದಾಳೆ ಯುವತಿ ಎಸ್.ಎಮ್. ಸಹನಾ.

1 day ago
user_VISHWA SAMAR NEWS
VISHWA SAMAR NEWS
ಬಳ್ಳಾರಿ, ಬಳ್ಳಾರಿ, ಕರ್ನಾಟಕ•
1 day ago
4bc28db8-aab8-4a69-93c7-bbf9b4139a1a

ಮಣ್ಣಿನ ಗಣೇಶ ತಯಾರಿಸಿ ಪರಿಸರ ಜಾಗೃತಿ ಮೂಡಿಸಿದ ವಿದ್ಯಾರ್ಥಿನಿ ಎಸ್.ಎಂ. ಸಹನ ಬಳ್ಳಾರಿ : (ಸಿರಿಗೇರಿ ) ಭಕ್ತಿ ಭಾವೈಕ್ಯತೆ ರೂಪದ ಹಬ್ಬ ಗಣೇಶ ಚತುರ್ಥಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ತನ್ನ ನಿಜ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ. ಗಣೇಶ ಹಬ್ಬ ಈಗ ಆಡಂಬರ, ಮಾಲಿನ್ಯ, ಪರಿಸರ ಹಾನಿಗೆ ಕಾರಣವಾಗುತ್ತಿದ್ದು, ಇದರ ಪ್ರತಿಯಾಗಿ ಪರಿಹಾರವಾಗಿ ಪರಿಸರಸ್ನೇಹಿ ಗಣಪತಿ ಹಬ್ಬದ ಆಚರಣೆಯ ಹೊಸ ಪರಂಪರೆ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿರುವುದು ಪರಿಸರಪ್ರಿಯರಿಗೆ ಸಂತೋಷವನ್ನುಂಟುಮಾಡಿದೆ. ಗಣಪತಿಯನ್ನು ಬಣ್ಣಗಳಿಂದ ಚಂದದ ಅಲಂಕರಿಸಿ ಉತ್ಸಾಹದಿಂದ ಆಚರಿಸಲು ಬಯಸುತ್ತಾರೆ ಆದರೆ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮವನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ. ರಾಸಾಯನಿಕ ಬಣ್ಣ ಮತ್ತು ಇತರೆ ವಸ್ತುಗಳಿಂದ ತಯಾರಿಸಿದ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ನೀರಿನ ಮಲಿನವಾಗುತ್ತದೆ ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ಕರಗದೆ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಇದರಲ್ಲಿರುವ ವಿಷದ ಅಂಶವು ಸಸ್ಯ ಮತ್ತು ಜಲ ಚರಗಳ ಮೇಲೆ ಮಾರಕ ಪ್ರಭಾವ ಉಂಟಾಗುತ್ತದೆ. ಇದನ್ನು ಅರಿತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಯುವತಿ ಎಸ್ ಎಂ ಸಹನಾ ಗ್ರಾಮದ ದಾರುಕ ನಗರದಲ್ಲಿ ಕಳೆದ ಆರು ವರ್ಷಗಳಿಂದ ಪಿಒಪಿ ಗಣೇಶ ನಿಲ್ಲಿಸಿ, ಪ್ರತಿ ವರ್ಷ ವಿಭಿನ್ನ ರೀತಿಯಲ್ಲಿ ಸ್ವತಃ ಪರಿಸರಸ್ನೇಹಿ ವಿಭೂತಿ ಗಣೇಶ, ಗಂಧದ ಗಣೇಶ, ಹರಿಶಿನ ಗಣೇಶ, ಕರಿಮಣ್ಣಿನ ಗಣೇಶ, ಕೆಂಪು ಮಣ್ಣಿನ ಗಣೇಶ, ಅಕ್ಕಿ ಹಿಟ್ಟಿನ ಗಣೇಶ, ತಯಾರಿಸಿ ಗ್ರಾಮದ ಓಣಿಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾಳೆ. ಹೀಗೆ ಈ ಸಾರಿ 7ನೇ ವರ್ಷದ ಪರಿಸರ ಸ್ನೇಹಿ ಕುಂಬಾರು ಮಣ್ಣಿನ ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ತಯಾರಿಸಿ ಕುಂಬಾರ್ ಮಣ್ಣನ್ನು ತಂದು ಚೆನ್ನಾಗಿ ಹದ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ಪರಿಸರ ಸ್ನೇಹಿ ವಿಘ್ನ ನಿವಾರಕ ಗಣೇಶನಿಗೆ ಕೊರಳಲ್ಲಿ ಸರ, ಮಡಿವಸ್ತ್ರ, ಕಿರೀಟ, ಕೈಪಟ್ಟಿ, ಗಣೇಶನ ಮೂಶಿಕ ವಾಹನ ಮೋದಕವನ್ನೋಳಗೊಂಡ ಮೂರ್ತಿಯನ್ನು ಮಾಡಿ ತನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಓಣಿಯ ಅಕ್ಕಪಕ್ಕದವರಿಗೆ ಪರಿಸರಸ್ನೇಹಿ ಕುಂಬಾರ ಮಣ್ಣಿನ ಗಣೇಶನನ್ನು ಮಾಡಿ ಉಚಿತವಾಗಿ ವಿತರಿಸಿ ಪಿಓಪಿ ಗಣೇಶ ನಿಲ್ಲಿಸಿ ಇಂತಹ ಪರಿಸರ ಗಣೇಶ ಮೂರ್ತಿ ಮಾಡಿ ಪೂಜಿಸಿ, ಎಂದು ಜಾಗೃತಿ ಹಾಗೂ ಅರಿವು ಮೂಡಿಸುತ್ತಿದ್ದಾಳೆ ಸಿರಿಗೇರಿಯ ಬಿಎಸ್ಸಿ ವಿದ್ಯಾರ್ಥಿ ಎಸ್. ಎಂ. ಸಹನಾಳ ಗಣೇಶ ತಯಾರಿಸುವುದು ಇವರ ವಿಶೇಷತೆಯಾಗಿದೆ. ಇಷ್ಟೇ ಅಲ್ಲದೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಗಣೇಶ ಹಂಚಿಕೆ ಮಾಡಿ ಕಾಲುವೆ, ನದಿ, ಹಳ್ಳ, ಬಾವಿಯಲ್ಲಿ ವಿಸರ್ಜನೆ ಮಾಡದೆ ಒಂದು ಬಕೀಟಿನಲ್ಲಿ ನೀರು ತುಂಬಿಸಿ, ಪೂಜೆ ಸಲ್ಲಿಸಿ ಅದರಲ್ಲಿ ವಿಸರ್ಜನೆ ಮಾಡಿ ಗಣೇಶ ಕರಗಿದ ನಂತರ ಮನೆ ಆವರಣದಲ್ಲಿ ಬೆಳೆದ ಗಿಡಗಳಿಗೆ ಹಾಕಿ ಅಲ್ಲಿಯೂ ಸಹ ಪರಿಸರದ ಕಾಳಜಿಯನ್ನು ತೋರಿಸುತ್ತಿದ್ದಾಳೆ. ಈ ನನ್ನ ಪರಿಸರ ಕಾಳಜಿಗೆ ಮನೆಯವರಲ್ಲದೆ ಸುತ್ತಮುತ್ತಲಿನ ಮನೆಯವರು ಪ್ರೋತ್ಸಾಹಿಸುವುದು ನನ್ನ ಪರಿಸರ ಪ್ರೇಮ ಕಾಳಜಿ ಇನ್ನು ಹೆಚ್ಚು ಮಾಡುತ್ತಿದೆ ಎನ್ನುತ್ತಾ ಪ್ರತಿಯೊಬ್ಬ ಗಣೇಶ ಭಕ್ತರು ಪರಿಸರಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಮಾಡಬೇಕು ಪರಿಸರ ಕಾಪಾಡುವ ಕೆಲಸ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎನ್ನುತ್ತಿದ್ದಾಳೆ ಯುವತಿ ಎಸ್.ಎಮ್. ಸಹನಾ.

More news from Karnataka and nearby areas
  • ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಹುಟ್ಟುಹಬ್ಬ ಸಂಭ್ರಮ: ಬಿಮ್ಸ್‌ನಲ್ಲಿ ಅನ್ನದಾನ! ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜಸೇವಕ ಡಿ.ಅಯಾಜ್ ಅಹ್ಮದ್ ನೇತೃತ್ವದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪಾಲಿಕೆ ಮೇಯರ್, ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾಗೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿ ಹಾಗೂ ಉನ್ನತ ಸ್ಥಾನ ದೊರೆಯಲಿ ಎಂದು ಮುಖಂಡರು ಆಶಿಸಿದರು. 📍 ಬಳ್ಳಾರಿ | ASN News24 ಕನ್ನಡ #BNagendra #ಬಿನಾಗೇಂದ್ರ #Ballari #ಬಳ್ಳಾರಿ #BallariNews #ಬಳ್ಳಾರಿನ್ಯೂಸ್ #KarnatakaNews #KannadaNews #Congress #CongressKarnataka #BirthdayCelebration #Annadana #ಅನ್ನದಾನ #BIMS #BallariUpdates #ASNNews24Kannada #KannadaNewsToday #KarnatakaPolitics
    1
    ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಹುಟ್ಟುಹಬ್ಬ ಸಂಭ್ರಮ: ಬಿಮ್ಸ್‌ನಲ್ಲಿ ಅನ್ನದಾನ!
ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜಸೇವಕ ಡಿ.ಅಯಾಜ್ ಅಹ್ಮದ್ ನೇತೃತ್ವದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಸಕರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪಾಲಿಕೆ ಮೇಯರ್, ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಾಗೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿ ಹಾಗೂ ಉನ್ನತ ಸ್ಥಾನ ದೊರೆಯಲಿ ಎಂದು ಮುಖಂಡರು ಆಶಿಸಿದರು.
📍 ಬಳ್ಳಾರಿ | ASN News24 ಕನ್ನಡ
#BNagendra #ಬಿನಾಗೇಂದ್ರ #Ballari #ಬಳ್ಳಾರಿ #BallariNews #ಬಳ್ಳಾರಿನ್ಯೂಸ್ #KarnatakaNews #KannadaNews #Congress #CongressKarnataka #BirthdayCelebration #Annadana #ಅನ್ನದಾನ #BIMS #BallariUpdates #ASNNews24Kannada #KannadaNewsToday #KarnatakaPolitics
    user_AsnNews24Kannada
    AsnNews24Kannada
    Local News Reporter Ballari, Karnataka•
    7 hrs ago
  • ಗೌರಸಮುದ್ರ ಮಾರೆಮ್ಮ ಜಾತ್ರೆಯಲ್ಲಿ ಶಾಸಕರು ಎನ್. ವೈ. ಗೋಪಾಲಕೃಷ್ಣ ಭಾಗಿ .ಗೌರಸಮುದ್ರ ಜಾತ್ರೆಯಲ್ಲಿ ಶಾಸಕ ಎನ್. ವೈ. ಗೋಪಾಲಕೃಷ್ಣ ಭಾಗಿ ಮೊಳಕಾಲ್ಮುರು ಸುದ್ದಿ. ಗೌರಸಮುದ್ರ ಗ್ರಾಮದಲ್ಲಿ ನಡೆಯುತ್ತಿರುವ ಗೌರಸಮುದ್ರ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು, ಮೊಳಕಾಲ್ಮುರು ಕ್ಷೇತ್ರದ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಅವರು ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಾತ್ರೆಯ ಕಾರ್ಯಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಆಯೋಜಕರಿಂದ ಮಾಹಿತಿ ಪಡೆದ ಶಾಸಕರು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ಪರಿಶೀಲಿಸಿದರು. ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ನೆರವು ಹಾಗೂ ಮೆಡಿಕಲ್ ಕಿಟ್‌ಗಳ ಲಭ್ಯತೆ, ಪೊಲೀಸ್ ಭದ್ರತಾ ವ್ಯವಸ್ಥೆ ಮತ್ತು ಜಾತ್ರಾ ಸ್ಥಳದ ಶುಚಿತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು. ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಹಾಗೂ ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಜಾತ್ರೆಯು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿಗಳು ಮತ್ತು ಆಯೋಜಕರು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಶಾಸಕರು ತಿಳಿಸಿದರು. ಜಾತ್ರೆಯಲ್ಲಿ ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗೇಶ್ ರೆಡ್ಡಿ, ಹಿರೇಹಳ್ಳಿ ವಕೀಲರು ಮಲ್ಲೇಶಿ ರಾಂಪುರ ಸಿದ್ದಬಸಪ್ಪ, ಶ್ರೀಕಾಂತ, ಪೊಲೀಸ್ ಇಲಾಖೆ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಧರ್ಶನ ಪಡೆದರು.
    1
    ಗೌರಸಮುದ್ರ ಮಾರೆಮ್ಮ ಜಾತ್ರೆಯಲ್ಲಿ ಶಾಸಕರು ಎನ್. ವೈ. ಗೋಪಾಲಕೃಷ್ಣ ಭಾಗಿ
.ಗೌರಸಮುದ್ರ ಜಾತ್ರೆಯಲ್ಲಿ ಶಾಸಕ ಎನ್. ವೈ. ಗೋಪಾಲಕೃಷ್ಣ ಭಾಗಿ
ಮೊಳಕಾಲ್ಮುರು ಸುದ್ದಿ.
ಗೌರಸಮುದ್ರ ಗ್ರಾಮದಲ್ಲಿ ನಡೆಯುತ್ತಿರುವ ಗೌರಸಮುದ್ರ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು, ಮೊಳಕಾಲ್ಮುರು ಕ್ಷೇತ್ರದ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಅವರು ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಾತ್ರೆಯ ಕಾರ್ಯಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಆಯೋಜಕರಿಂದ ಮಾಹಿತಿ ಪಡೆದ ಶಾಸಕರು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ಪರಿಶೀಲಿಸಿದರು. ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ನೆರವು ಹಾಗೂ ಮೆಡಿಕಲ್ ಕಿಟ್‌ಗಳ ಲಭ್ಯತೆ, ಪೊಲೀಸ್ ಭದ್ರತಾ ವ್ಯವಸ್ಥೆ ಮತ್ತು ಜಾತ್ರಾ ಸ್ಥಳದ ಶುಚಿತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಹಾಗೂ ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.
ಜಾತ್ರೆಯು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿಗಳು ಮತ್ತು ಆಯೋಜಕರು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಶಾಸಕರು ತಿಳಿಸಿದರು.
ಜಾತ್ರೆಯಲ್ಲಿ ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗೇಶ್ ರೆಡ್ಡಿ, ಹಿರೇಹಳ್ಳಿ ವಕೀಲರು ಮಲ್ಲೇಶಿ ರಾಂಪುರ ಸಿದ್ದಬಸಪ್ಪ, ಶ್ರೀಕಾಂತ, ಪೊಲೀಸ್ ಇಲಾಖೆ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಧರ್ಶನ ಪಡೆದರು.
    user_Basavaraj
    Basavaraj
    Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    13 hrs ago
  • ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು
    2
    ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು
    user_ಟಿ.ಉಮೇಶ ಮರ್ಲಾನಹಳ್ಳಿ
    ಟಿ.ಉಮೇಶ ಮರ್ಲಾನಹಳ್ಳಿ
    Local News Reporter ಕಾರಟಗಿ, ಕೊಪ್ಪಳ, ಕರ್ನಾಟಕ•
    15 hrs ago
  • ಕೂಡ್ಲಿಗಿ ಪಪಂ : ಲೋಕಾಯುಕ್ತ ಭೇಟಿ -ಗಂಭೀರ ಪ್ರಕರಣಗಳ ಕಡತಗಳ ಪರಿಶೀಲನೆ - ಪಟ್ಟಣ ಪಂಚಾಯ್ತಿ ಕಚೇರಿಗೆ ಲೋಕಯುಕ್ತ ಎಸ್ಪಿಯವರು ಭೇಟಿ *ಕೂಡ್ಲಿಗಿ ಪಪಂ : ಲೋಕಾಯುಕ್ತ ಭೇಟಿ -ಗಂಭೀರ ಪ್ರಕರಣಗಳ ಕಡತಗಳ ಪರಿಶೀಲನೆ*- ಪಟ್ಟಣ ಪಂಚಾಯ್ತಿ ಕಚೇರಿಗೆ ಲೋಕಯುಕ್ತ ಎಸ್ಪಿಯವರು ಭೇಟಿ ನೀಡಿದ್ದು , ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಖಂಡ ಬಳ್ಳಾರಿ ಲೋಕಾಯುಕ್ತ ಎಸ್ಪಿರವರು , ಇಂದು (ಸೆ 16) ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ಕೆಲ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಲೋಕಾಯುಕ್ತಕ್ಕೆ , ಬಂದಿರುವ ಗಂಭೀರ ಆರೋಪ ಹ‍ಾಗೂ ದೂರಗಳನ್ನಾಧರಿಸಿ. ಪ್ರಲಣಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಕೊಂಡಿದ್ದು , ಸದರಿ ಪ್ರಕರಣಗಳ ಕುರಿತು ಪರಾಮರ್ಶಿಸಿ ಕಡತ ಪರಿಶೀಲಿಸಿದ್ದಾರೆ. ಲೋಕಾಯುಕ್ತ ಎಸ್ಪಿಯವರೊಂದಿಗೆ , ಇಬ್ಬರು ಲೋಕಾ ಡಿವೈಎಸ್ಪಿ ರವರು. ಇಬ್ಬರು ಲೋಕಾ ಸಿಪಿಐ ಹಾಗೂ ಲೋಕಾ ಮುಖ್ಯ ಪೇದೆ ಲೋಕಾ ಪೇದೆಯವರು ಹಾಜರಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕ ಹೋರಾಟಗಾರ , ಎಸ್ಡಿಎಮ್ಸಿ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರರವರು. ಎಸ್ಪಿಯವರನ್ನು ಭೇಟಿಯಾಗಿ ವಸತಿ ಹಂಚಿಕೆಯಲ್ಲಾಗಿರುವ , ಭಾರೀ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸಂಬಂಧಿಸಿದಂತೆ ಪ್ರಕರಣವು , ನ್ಯಾಯಲಯದಲ್ಲಿ ವಿಚಾರ ಹಂತದಲ್ಲಿದ್ದರೂ ಕೂಡ. ಪಪಂ ಅಧಿಕಾರಿ ಹಾಗೂ ತಾಲೂಕಾಡಳಿತ , ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ. ಪಟ್ಟ ವಿತರಣೆ ಮಾಡಿದ್ದಾರೆಂದು ದ‍ಾಖಲುಗಳ ಸಮೇತ ದೂರಿದರು. ವಸತಿ ಹಂಚಿಕೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ , ಮುಖ್ಯ ಕೆಲ ಕಡತಗಳು ಧಾಖಲುಗಳು ಪಪಂ ಕಚೇರಿಯಲ್ಲಿಯೇ ಇಲ್ಲವಾಗಿವೆ. ಕೆಲ ಪ್ರಮುಖ ದಾಖಲೆಗಳು , ನಾಪತ್ತೆಯಾಗಿದ್ದು ಇದರ ಹಿಂದೆ ಭಾರೀ ಹುನ್ನಾರವೇ ನಡೆದಿದೆ ಎಂದು ರಾಘವೇಂದ್ರ ಗಂಭೀರವಾಗಿ ದೂರಿದ್ದಾರೆ. ಮತ್ತು ಸಂಬಂಧಿಸಿದಂತೆ ಪಪಂ ಮುಖ್ಯಾಧಿಕಾರಿ , ಹಾಗೂ ತಾಲೂಕು ಜಿಲ್ಲಾಡಳಿತ ವಿರುದ್ಧ. ಲೋಕಾಯುಕ್ತ ಇಲಾಖಾ ಉನ್ನತಾಧಿಕಾರಿಗಳು , ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡು. ಅವರನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ,ಹೋರಾಟಗಾರ ಗುನ್ನಳ್ಳಿ ರಾಘವೇಂದ್ರ ಲೋಕಾ ಅಧಿಕಾರಿಗೆ ಒತ್ತಾಯಿಸಿದ್ದಾರೆ. ಈ ಸಂದರ್ಭಲ್ಲಿ , ಕೆಲ ಹೋರಾಟಗಾರರು ಹಿರಿಯ ನಾಗರೀಕರು. ಪಟ್ಟಣ ಪಂಚಾಯ್ತಿ ಅಧಿಕಾರಿ ಹಾಗೂ ಸಿಬ್ಬಂದಿಯವರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ ಪಪಂ : ಲೋಕಾಯುಕ್ತ ಭೇಟಿ -ಗಂಭೀರ ಪ್ರಕರಣಗಳ ಕಡತಗಳ ಪರಿಶೀಲನೆ - ಪಟ್ಟಣ ಪಂಚಾಯ್ತಿ ಕಚೇರಿಗೆ ಲೋಕಯುಕ್ತ ಎಸ್ಪಿಯವರು ಭೇಟಿ
*ಕೂಡ್ಲಿಗಿ ಪಪಂ : ಲೋಕಾಯುಕ್ತ ಭೇಟಿ -ಗಂಭೀರ ಪ್ರಕರಣಗಳ ಕಡತಗಳ ಪರಿಶೀಲನೆ*- ಪಟ್ಟಣ ಪಂಚಾಯ್ತಿ ಕಚೇರಿಗೆ ಲೋಕಯುಕ್ತ ಎಸ್ಪಿಯವರು ಭೇಟಿ ನೀಡಿದ್ದು , ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಖಂಡ ಬಳ್ಳಾರಿ ಲೋಕಾಯುಕ್ತ ಎಸ್ಪಿರವರು , ಇಂದು (ಸೆ 16) ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ಕೆಲ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಲೋಕಾಯುಕ್ತಕ್ಕೆ , ಬಂದಿರುವ ಗಂಭೀರ ಆರೋಪ ಹ‍ಾಗೂ ದೂರಗಳನ್ನಾಧರಿಸಿ. ಪ್ರಲಣಗಳ ವಿರುದ್ಧ  ಸ್ವಯಂಪ್ರೇರಿತ ದೂರು ದಾಖಲಿಸಕೊಂಡಿದ್ದು , ಸದರಿ ಪ್ರಕರಣಗಳ ಕುರಿತು ಪರಾಮರ್ಶಿಸಿ ಕಡತ ಪರಿಶೀಲಿಸಿದ್ದಾರೆ. ಲೋಕಾಯುಕ್ತ ಎಸ್ಪಿಯವರೊಂದಿಗೆ , ಇಬ್ಬರು ಲೋಕಾ ಡಿವೈಎಸ್ಪಿ ರವರು. ಇಬ್ಬರು ಲೋಕಾ ಸಿಪಿಐ ಹಾಗೂ ಲೋಕಾ ಮುಖ್ಯ ಪೇದೆ ಲೋಕಾ ಪೇದೆಯವರು ಹಾಜರಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕ ಹೋರಾಟಗಾರ , ಎಸ್ಡಿಎಮ್ಸಿ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರರವರು. ಎಸ್ಪಿಯವರನ್ನು ಭೇಟಿಯಾಗಿ ವಸತಿ ಹಂಚಿಕೆಯಲ್ಲಾಗಿರುವ , ಭಾರೀ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸಂಬಂಧಿಸಿದಂತೆ ಪ್ರಕರಣವು ,  ನ್ಯಾಯಲಯದಲ್ಲಿ ವಿಚಾರ ಹಂತದಲ್ಲಿದ್ದರೂ ಕೂಡ. ಪಪಂ ಅಧಿಕಾರಿ ಹಾಗೂ ತಾಲೂಕಾಡಳಿತ , ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ. ಪಟ್ಟ ವಿತರಣೆ ಮಾಡಿದ್ದಾರೆಂದು ದ‍ಾಖಲುಗಳ ಸಮೇತ ದೂರಿದರು.  ವಸತಿ ಹಂಚಿಕೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ , ಮುಖ್ಯ ಕೆಲ ಕಡತಗಳು ಧಾಖಲುಗಳು ಪಪಂ ಕಚೇರಿಯಲ್ಲಿಯೇ ಇಲ್ಲವಾಗಿವೆ.  ಕೆಲ ಪ್ರಮುಖ ದಾಖಲೆಗಳು , ನಾಪತ್ತೆಯಾಗಿದ್ದು ಇದರ ಹಿಂದೆ ಭಾರೀ ಹುನ್ನಾರವೇ ನಡೆದಿದೆ ಎಂದು ರಾಘವೇಂದ್ರ ಗಂಭೀರವಾಗಿ ದೂರಿದ್ದಾರೆ. ಮತ್ತು ಸಂಬಂಧಿಸಿದಂತೆ ಪಪಂ ಮುಖ್ಯಾಧಿಕಾರಿ ,  ಹಾಗೂ ತಾಲೂಕು ಜಿಲ್ಲಾಡಳಿತ ವಿರುದ್ಧ.  ಲೋಕಾಯುಕ್ತ ಇಲಾಖಾ ಉನ್ನತಾಧಿಕಾರಿಗಳು , ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡು. ಅವರನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ,ಹೋರಾಟಗಾರ ಗುನ್ನಳ್ಳಿ ರಾಘವೇಂದ್ರ ಲೋಕಾ ಅಧಿಕಾರಿಗೆ ಒತ್ತಾಯಿಸಿದ್ದಾರೆ. ಈ ಸಂದರ್ಭಲ್ಲಿ , ಕೆಲ ಹೋರಾಟಗಾರರು ಹಿರಿಯ ನಾಗರೀಕರು. ಪಟ್ಟಣ ಪಂಚಾಯ್ತಿ ಅಧಿಕಾರಿ ಹಾಗೂ ಸಿಬ್ಬಂದಿಯವರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    1 hr ago
  • ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು. ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.
    1
    ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ
ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು.
ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. 
ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ  ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    1 hr ago
  • ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    1
    ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    user_ಹನುಮೇಶ ನಾಯಕ್
    ಹನುಮೇಶ ನಾಯಕ್
    ಮಾಸ್ಕಿ, ರಾಯಚೂರು, ಕರ್ನಾಟಕ•
    9 hrs ago
  • ನಾಳೆ ಅದ್ದೂರಿಯಾಗಿ ನಡೆಯಲಿರುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲು ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಕರೆ. ಕುಷ್ಟಗಿ : ನಾಳೆ ಸೆಪ್ಟೆಂಬರ್ 17 ನಮ್ಮ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಪವಿತ್ರ ಮತ್ತು ಹೆಮ್ಮೆಯ ದಿನ! ನಾಳೆ ನಾವು ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣವೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ಹೇಳಿದರು. 1947ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ನಮ್ಮ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರದ ಜನತೆ ನಿಜಾಮರ ಹಾಗೂ ರಜಾಕಾರರ ಕೌರ್ಯವನ್ನು ಎದುರಿಸಬೇಕಾಯಿತು. ಭಾರತ ಸರ್ಕಾರದ ‘ಆಪರೇಷನ್ ಪೋಲೋ’ ಕಾರ್ಯಾಚರಣೆಯ ಫಲವಾಗಿ, 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ಸ್ವಾತಂತ್ರ್ಯ ದೊರೆಯಿತು. ಈ ಮಹಾನ್ ವಿಮೋಚನೆಗಾಗಿ ಹೋರಾಡಿ, ತ್ಯಾಗ ಮತ್ತು ಬಲಿದಾನ ನೀಡಿದ ಪ್ರತಿಯೊಬ್ಬ ಅಮರ ವೀರರಿಗೂ, ಸ್ವಾತಂತ್ರ್ಯ ಹೋರಾಟಗಾರರಿಗೂ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳು. ನಾಳೆ ಪ್ರತಿಯೊಬ್ಬರೂ ನಮ್ಮ ನಾಡಿನ ಈ ಐತಿಹಾಸಿಕ ದಿನವನ್ನು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ನೋಡದೆ, ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಂದು ಊರಲ್ಲೂ ಅತ್ಯಂತ ಅದ್ಧೂರಿಯಾಗಿ ಆಚರಿಸೋಣ. ಈ ಭಾಗದ ಶಿಕ್ಷಣ, ಉದ್ಯೋಗ, ನೀರಾವರಿ ಹಾಗೂ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ಶ್ರಮಿಸುವ ಸಂಕಲ್ಪ ಮಾಡೋಣ ಎಂದು ಶಾಸಕರು ಕರೆ ನೀಡಿದರು.
    2
    ನಾಳೆ ಅದ್ದೂರಿಯಾಗಿ ನಡೆಯಲಿರುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲು ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಕರೆ.
ಕುಷ್ಟಗಿ : ನಾಳೆ ಸೆಪ್ಟೆಂಬರ್ 17 ನಮ್ಮ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಪವಿತ್ರ ಮತ್ತು ಹೆಮ್ಮೆಯ ದಿನ! ನಾಳೆ ನಾವು ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣವೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ಹೇಳಿದರು. 
1947ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ನಮ್ಮ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರದ ಜನತೆ ನಿಜಾಮರ ಹಾಗೂ ರಜಾಕಾರರ ಕೌರ್ಯವನ್ನು ಎದುರಿಸಬೇಕಾಯಿತು. ಭಾರತ ಸರ್ಕಾರದ ‘ಆಪರೇಷನ್ ಪೋಲೋ’ ಕಾರ್ಯಾಚರಣೆಯ ಫಲವಾಗಿ, 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ಸ್ವಾತಂತ್ರ್ಯ ದೊರೆಯಿತು. 
ಈ ಮಹಾನ್ ವಿಮೋಚನೆಗಾಗಿ ಹೋರಾಡಿ, ತ್ಯಾಗ ಮತ್ತು ಬಲಿದಾನ ನೀಡಿದ ಪ್ರತಿಯೊಬ್ಬ ಅಮರ ವೀರರಿಗೂ, ಸ್ವಾತಂತ್ರ್ಯ ಹೋರಾಟಗಾರರಿಗೂ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳು. 
ನಾಳೆ ಪ್ರತಿಯೊಬ್ಬರೂ ನಮ್ಮ ನಾಡಿನ ಈ ಐತಿಹಾಸಿಕ ದಿನವನ್ನು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ನೋಡದೆ, ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಂದು ಊರಲ್ಲೂ ಅತ್ಯಂತ ಅದ್ಧೂರಿಯಾಗಿ ಆಚರಿಸೋಣ. ಈ ಭಾಗದ ಶಿಕ್ಷಣ, ಉದ್ಯೋಗ, ನೀರಾವರಿ ಹಾಗೂ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ಶ್ರಮಿಸುವ ಸಂಕಲ್ಪ ಮಾಡೋಣ ಎಂದು ಶಾಸಕರು ಕರೆ ನೀಡಿದರು.
    user_Bhimasenrao Kulkarni Kushtagi
    Bhimasenrao Kulkarni Kushtagi
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    13 min ago
  • ಬಳ್ಳಾರಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಂಜೆ ತರಗತಿ! ಗಣೇಶೋತ್ಸವದಂದು ಊಟ–ಪ್ರಸಾದ ವಿತರಣೆ ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಸಂಜೆ ತರಗತಿ ಹಾಗೂ ಊಟ/ತಿಂಡಿ ವ್ಯವಸ್ಥೆ ಮಾಡಲಾಯಿತು. ಗಣೇಶ ಚತುರ್ಥಿ ಅಂಗವಾಗಿ ಟ್ಯೂಷನ್ ಕೇಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಶಾಂತಿ ಮಂತ್ರ ಪಠಣ ನಡೆಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ಪ್ರಸಾದ ವಿತರಿಸಲಾಯಿತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ನಡೆಯುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ನಾಗರಾಜ್ ತಿಳಿಸಿದ್ದಾರೆ. 📍 ಸಂಗನಕಲ್ಲು, ಬಳ್ಳಾರಿ 📅 15-09-2026 ASN NEWS24 ಕನ್ನಡ — ಸುತ್ತಮುತ್ತ ನಡೆಯುವ ಸುದ್ದಿ, ಸಾರ್ವಜನಿಕ ಸಮಸ್ಯೆಗಳು ಮತ್ತು ಜನರ ಧ್ವನಿ. #Ballari #Bellary #Karnataka #KannadaNews #BreakingNews #Education #GovernmentSchool #GovernmentSchoolStudents #FreeEducation #FreeTuition #GaneshChaturthi #GaneshFestival #Ganeshotsav #SocialService #StudentSupport #Sanganakallu #BallariNews #KarnatakaNews #ASNNews24 #ASNNews24Kannada #ಕರ್ನಾಟಕ #ಬಳ್ಳಾರಿ #ಕನ್ನಡಸುದ್ದಿ #ಗಣೇಶೋತ್ಸವ
    1
    ಬಳ್ಳಾರಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಂಜೆ ತರಗತಿ! ಗಣೇಶೋತ್ಸವದಂದು ಊಟ–ಪ್ರಸಾದ ವಿತರಣೆ
ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಸಂಜೆ ತರಗತಿ ಹಾಗೂ ಊಟ/ತಿಂಡಿ ವ್ಯವಸ್ಥೆ ಮಾಡಲಾಯಿತು.
ಗಣೇಶ ಚತುರ್ಥಿ ಅಂಗವಾಗಿ ಟ್ಯೂಷನ್ ಕೇಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಶಾಂತಿ ಮಂತ್ರ ಪಠಣ ನಡೆಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ಪ್ರಸಾದ ವಿತರಿಸಲಾಯಿತು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ನಡೆಯುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ನಾಗರಾಜ್ ತಿಳಿಸಿದ್ದಾರೆ.
📍 ಸಂಗನಕಲ್ಲು, ಬಳ್ಳಾರಿ
📅 15-09-2026
ASN NEWS24 ಕನ್ನಡ — ಸುತ್ತಮುತ್ತ ನಡೆಯುವ ಸುದ್ದಿ, ಸಾರ್ವಜನಿಕ ಸಮಸ್ಯೆಗಳು ಮತ್ತು ಜನರ ಧ್ವನಿ.
#Ballari #Bellary #Karnataka #KannadaNews #BreakingNews #Education #GovernmentSchool #GovernmentSchoolStudents #FreeEducation #FreeTuition #GaneshChaturthi #GaneshFestival #Ganeshotsav #SocialService #StudentSupport #Sanganakallu #BallariNews #KarnatakaNews #ASNNews24 #ASNNews24Kannada #ಕರ್ನಾಟಕ #ಬಳ್ಳಾರಿ #ಕನ್ನಡಸುದ್ದಿ #ಗಣೇಶೋತ್ಸವ
    user_AsnNews24Kannada
    AsnNews24Kannada
    Local News Reporter Ballari, Karnataka•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.