ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ : ಮಾಫಿ ಸಾಕ್ಷಿಯಾಗಲು ಯತ್ನಿಸಿದ್ದ 14ನೇ ಆರೋಪಿ ಪ್ರದೋಷ್ ಕಳ್ಳಾಟ ಬಯಲು! ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಾಫಿ ಸಾಕ್ಷಿಯಾಗಿ ಅಪರಾಧ ಪ್ರಕರಣದಿಂದ ಪಾರಾಗಲು ಯತ್ನಿಸುತ್ತಿದ್ದ ೧೪ನೇ ಆರೋಪಿ ಪ್ರದೋಷ್‌ನ ಕಳ್ಳಾಟ ಬಯಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ತಮ್ಮವರೊಂದಿಗೆ ಮಾತನಾಡಲು ಮೊಬೈಲ್ ನಂಬರ್‌ಗಳನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆ ಇದೆ. ಈ ನಂಬರ್‌ಗಳನ್ನು ನಮೂದು ಮಾಡಿಕೊಳ್ಳುವ ಜವಾಬ್ದಾರಿಯನ್ನು ಜೈಲು ಸಿಬ್ಬಂದಿ ಮೌನೇಶ್. ಹೆಚ್. ಕೋರಿ ಎಂಬವರಿಗೆ ವಹಿಸಲಾಗಿತ್ತು. ಆದರೆ, ಆರೋಪಿ ಪ್ರದೋಷ್ ಬೇರೆ ಖೈದಿಯ ಹೆಸರಿನಲ್ಲಿ ನಂಬರ್ ಪಡೆದಿದ್ದು, ಈ ನಂಬರ್ ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಂಪೂರ್ಣ ಸಹಾಯ ಮಾಡಿದ್ದಾರೆ.ಅಲ್ಲದೆ, ವಕೀಲರ ನಂಬರ್ ಎಂದು ಸುಳ್ಳಾಗಿ ನಮೂದಿಸಿ, ವಾಸ್ತವದಲ್ಲಿ ತನ್ನ ಪತ್ನಿಯ ಜೊತೆ ಪ್ರದೋಷ್ ಮಾತನಾಡುತ್ತಿರುವುದು ತನಿಖೆಯಿಂದ ಇದೀಗ ಬೆಳಕಿಗೆ ಬಂದಿದೆ. ಸದ್ಯ ಈ ಅಕ್ರಮಕ್ಕೆ ಸಾಥ್ ನೀಡಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ಮೌನೇಶ್ ಹಾಗೂ ಆರೋಪಿ ಪ್ರದೋಷ್ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ : ಮಾಫಿ ಸಾಕ್ಷಿಯಾಗಲು ಯತ್ನಿಸಿದ್ದ 14ನೇ ಆರೋಪಿ ಪ್ರದೋಷ್ ಕಳ್ಳಾಟ ಬಯಲು! ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಾಫಿ ಸಾಕ್ಷಿಯಾಗಿ ಅಪರಾಧ ಪ್ರಕರಣದಿಂದ ಪಾರಾಗಲು ಯತ್ನಿಸುತ್ತಿದ್ದ ೧೪ನೇ ಆರೋಪಿ ಪ್ರದೋಷ್‌ನ ಕಳ್ಳಾಟ ಬಯಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ತಮ್ಮವರೊಂದಿಗೆ ಮಾತನಾಡಲು ಮೊಬೈಲ್ ನಂಬರ್‌ಗಳನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆ ಇದೆ. ಈ ನಂಬರ್‌ಗಳನ್ನು ನಮೂದು ಮಾಡಿಕೊಳ್ಳುವ ಜವಾಬ್ದಾರಿಯನ್ನು ಜೈಲು ಸಿಬ್ಬಂದಿ ಮೌನೇಶ್. ಹೆಚ್. ಕೋರಿ ಎಂಬವರಿಗೆ ವಹಿಸಲಾಗಿತ್ತು. ಆದರೆ, ಆರೋಪಿ ಪ್ರದೋಷ್ ಬೇರೆ ಖೈದಿಯ ಹೆಸರಿನಲ್ಲಿ ನಂಬರ್ ಪಡೆದಿದ್ದು, ಈ ನಂಬರ್ ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಂಪೂರ್ಣ ಸಹಾಯ ಮಾಡಿದ್ದಾರೆ.ಅಲ್ಲದೆ, ವಕೀಲರ ನಂಬರ್ ಎಂದು ಸುಳ್ಳಾಗಿ ನಮೂದಿಸಿ, ವಾಸ್ತವದಲ್ಲಿ ತನ್ನ ಪತ್ನಿಯ ಜೊತೆ ಪ್ರದೋಷ್ ಮಾತನಾಡುತ್ತಿರುವುದು ತನಿಖೆಯಿಂದ ಇದೀಗ ಬೆಳಕಿಗೆ ಬಂದಿದೆ. ಸದ್ಯ ಈ ಅಕ್ರಮಕ್ಕೆ ಸಾಥ್ ನೀಡಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ಮೌನೇಶ್ ಹಾಗೂ ಆರೋಪಿ ಪ್ರದೋಷ್ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.
- ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು. ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು. ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು. ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು. 3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು. ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್ (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು. *ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.1
- ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು2
- ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ. ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.1
- *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಬಳ್ಳಾರಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಂಜೆ ತರಗತಿ! ಗಣೇಶೋತ್ಸವದಂದು ಊಟ–ಪ್ರಸಾದ ವಿತರಣೆ ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಸಂಜೆ ತರಗತಿ ಹಾಗೂ ಊಟ/ತಿಂಡಿ ವ್ಯವಸ್ಥೆ ಮಾಡಲಾಯಿತು. ಗಣೇಶ ಚತುರ್ಥಿ ಅಂಗವಾಗಿ ಟ್ಯೂಷನ್ ಕೇಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಶಾಂತಿ ಮಂತ್ರ ಪಠಣ ನಡೆಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ಪ್ರಸಾದ ವಿತರಿಸಲಾಯಿತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ನಡೆಯುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ನಾಗರಾಜ್ ತಿಳಿಸಿದ್ದಾರೆ. 📍 ಸಂಗನಕಲ್ಲು, ಬಳ್ಳಾರಿ 📅 15-09-2026 ASN NEWS24 ಕನ್ನಡ — ಸುತ್ತಮುತ್ತ ನಡೆಯುವ ಸುದ್ದಿ, ಸಾರ್ವಜನಿಕ ಸಮಸ್ಯೆಗಳು ಮತ್ತು ಜನರ ಧ್ವನಿ. #Ballari #Bellary #Karnataka #KannadaNews #BreakingNews #Education #GovernmentSchool #GovernmentSchoolStudents #FreeEducation #FreeTuition #GaneshChaturthi #GaneshFestival #Ganeshotsav #SocialService #StudentSupport #Sanganakallu #BallariNews #KarnatakaNews #ASNNews24 #ASNNews24Kannada #ಕರ್ನಾಟಕ #ಬಳ್ಳಾರಿ #ಕನ್ನಡಸುದ್ದಿ #ಗಣೇಶೋತ್ಸವ1
- *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!* ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ. ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. *ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ: ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ. ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ. ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.2
- ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ನಮಸ್ಕಾರ ಬಂಧುಗಳೇ... ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಬೀದಿ ಬೀದಿಗಳಲ್ಲಿ ವಿಘ್ನನಿವಾರಕನ ಜಯಘೋಷ ಮೊಳಗುತ್ತಿದೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 'ಹುಡಿಯದ ಓಣಿ'ಯಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ಇಡೀ ನಾಡಿನ ಗಮನ ಸೆಳೆಯುವಂತಿದೆ, ಪ್ರತಿಯೊಬ್ಬರ ಮನ ಮುಟ್ಟುವಂತಿದೆ! ಹೌದು, ಇಲ್ಲಿ ಒಂದೆಡೆ ಅಲ್ಲಾಹನ ಪ್ರಾರ್ಥನೆ ನಡೆಯುವ ಮಸೀದಿ ಇದ್ದರೆ... ಅದೇ ಮಸೀದಿಯ ಅಂಗಳದ ಪಕ್ಕದಲ್ಲೇ ಸಿದ್ದಿವಿನಾಯಕ ವಿರಾಜಮಾನನಾಗಿದ್ದಾನೆ! ವಿಶೇಷ ಎಂದರೆ, ಯಾವುದೇ ಜಾತಿ-ಧರ್ಮದ ಹಂಗಿಲ್ಲದೆ, ಇಲ್ಲಿನ ಮುಸ್ಲಿಂ ಸಮುದಾಯದ ಪುಟ್ಟ ಮಕ್ಕಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಮ್ಮ ಕೈಯಾರೆ ಕಾಯಿ ಒಡೆದು, ಪೂಜೆ ಸಲ್ಲಿಸಿ, ಪ್ರಸಾದ ಹಂಚಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಅತ್ಯಂತ ಖುಷಿಯ ವಿಷಯ ಎಂದರೆ... ಇಲ್ಲಿನ ಮಕ್ಕಳು ಕೇವಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿಲ್ಲ, ಬದಲಾಗಿ ಅತ್ಯಂತ ಪ್ರೀತಿಯಿಂದ ಈ ಮೂರ್ತಿಗೆ 'ಹುಡಿಯದ ಓಣಿಯ ಸಾಮ್ರಾಟ್' ಎಂದೇ ನಾಮಕರಣ ಮಾಡಿದ್ದಾರೆ! ಸಾಮ್ರಾಟ್ ಎಂಬ ಹೆಸರಿನಲ್ಲಿ ಗಣಪತಿಯನ್ನು ನೆನೆಯುತ್ತಿರುವ ಈ ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದೇ' ಎನ್ನುವ ಭ್ರಾತೃತ್ವದ ಸದ್ಭಾವನೆ ಆಳವಾಗಿ ಬೇರೂರಿದೆ. ಧರ್ಮಗಳ ಹೆಸರಿನಲ್ಲಿ ಕಹಿ ವಾತಾವರಣ ಸೃಷ್ಟಿಯಾಗುವ ಈ ದಿನಗಳಲ್ಲಿ, ಮುಂಡರಗಿಯ ಈ ಪುಟ್ಟ ಮಕ್ಕಳು ಇಡೀ ಸಮಾಜಕ್ಕೇ ಪ್ರೀತಿ ಮತ್ತು ಸೌಹಾರ್ದತೆಯ ದೊಡ್ಡ ಪಾಠ ಹೇಳಿಕೊಡುತ್ತಿದ್ದಾರೆ. ಶರೀಫ-ಶಿವಯೋಗಿಗಳು ನಡೆದ ಸೌಹಾರ್ದತೆಯ ನೆಲದಲ್ಲಿ, ಮುಂಡರಗಿಯ ಹುಡಿಯದ ಓಣಿಯ ಈ ಪುಟ್ಟ ಮಕ್ಕಳ ನಡೆ ಇಡೀ ನಾಡಿಗೆ ಭಾವೈಕ್ಯತೆಯ ಹೊಸ ಬೆಳಕನ್ನು ತೋರುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಈ ಮಕ್ಕಳ ಪ್ರೀತಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಸಾಷ್ಟಾಂಗ ನಮನಗಳು1
- ಕಾರಟಗಿಯ ಸ್ಥಳೀಯ ಕಲಾವಿದರಿಂದ ಗಣೇಶ ಚತುರ್ಥಿ ಅಂಗವಾಗಿ ಜನಪದ ಸಂಭ್ರಮ ಕಾರ್ಯಕ್ರಮ4