ದಲಿತ ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಿರುವುದು ಮತ್ತು ದಲಿತ ಮಹಿಳೆಯರಿಗೆ ರಕ್ಷಣೆಯಲ್ಲಿನ ತಾತ್ಸಾರ ಹುಣಸೂರು: ಸರ್ಕಾರಗಳು ದಲಿತ ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಿರುವುದು ಮತ್ತು ದಲಿತ ಮಹಿಳೆಯರಿಗೆ ರಕ್ಷಣೆಯಲ್ಲಿನ ತಾತ್ಸಾರ ಮನೋಭಾವ ಬೇಸರ ತರಿಸಿದೆ ಎಂದು ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಪ್ರಸಕ್ತ ಸರ್ಕಾರಗಳು ದಲಿತರ ಅಭಿವೃದ್ಧಿಯನ್ನು ಕಡೆಗಣಿಸಿರುವುದಲ್ಲದೆ ರಕ್ಷಣೆಯಲ್ಲೂ ತಾತ್ಸಾರ ಮನೋಭಾವ ಹೊಂದಿರುವುದರಿಂದಲೇ ಇಂದು ರಾಜ್ಯದಲ್ಲಿ ದಲಿತರ ಹಾಗೂ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಏರುಗತಿಯಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವರದಿಯಂತೆ ಪ್ರತಿ ದಿನ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ವರ್ಷಕ್ಕೆ ಕನಿಷ್ಠ 2000 ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದೆ. ದಲಿತ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕಾನೂನುಗಳಿದ್ದರೂ ಪರಿಣಾಮಕಾರಿ ಜಾರಿ ಇಲ್ಲದ ಕಾರಣ ಇಳಿಕೆಯಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಅಪರಾಧ ಪ್ರಕರಣಗಳ ವಿರುದ್ಧ ನಾವು ಗಂಭೀರ ಹೋರಾಟವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಆತಂಕದ ಸಂದರ್ಭದಲ್ಲಿ ನಮಗೆ ಆದರ್ಶವೇ ನಮಗೆ ಸಂವಿಧಾನ ನೀಡಿದ ಡಾ.ಅಂಬೇಡ್ಕರ್. ಅವರ ಚಿಂತನೆಯ ಮಾರ್ಗದಲ್ಲಿ ನಾವೆಲ್ಲರೂ ಒಗ್ಗೂಡುವುದಾಗಿದೆ. ಡಾ.ಅಂಬೇಡ್ಕರ್ ಸ್ವಾತಂತ್ರ್ಯ ನಂತರದಲ್ಲಿ ಹಿಂದೂ ಕೋಡ್ ಬಿಲ್ ಮಂಡಿಸುವ ಮೂಲಕ ದೇಶದ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ತಂದುಕೊಡಲು ಮುಂದಾಗಿದ್ದರು. ಅಂಬೇಡ್ಕರ್ ವಿಮೋಚನೆಯ ಬೆಳಕಿನಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟವನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸಮಾವೇಶದಲ್ಲಿ ಮಹಿಳಾ ಮುಖಂಡರಾದ ಅವ್ವಿ, ಸಾಕಮ್ಮ, ಬಸಂತಿ, ಚೌಮಿ, ವೈಜಯಂತಿ, ಸೀಮಾ, ಮಾಲಾ ದೇವಾನಿ, ಸಾಜಿನಿ, ಪ್ರಿಯಾಂಕಾ, ನಯನಾ ಹೇಮಾ, ವಿದ್ಯಾಶ್ರೀ ಇತರರು ಇದ್ದರು.
ದಲಿತ ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಿರುವುದು ಮತ್ತು ದಲಿತ ಮಹಿಳೆಯರಿಗೆ ರಕ್ಷಣೆಯಲ್ಲಿನ ತಾತ್ಸಾರ ಹುಣಸೂರು: ಸರ್ಕಾರಗಳು ದಲಿತ ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಿರುವುದು ಮತ್ತು ದಲಿತ ಮಹಿಳೆಯರಿಗೆ ರಕ್ಷಣೆಯಲ್ಲಿನ ತಾತ್ಸಾರ ಮನೋಭಾವ ಬೇಸರ ತರಿಸಿದೆ ಎಂದು ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಪ್ರಸಕ್ತ ಸರ್ಕಾರಗಳು ದಲಿತರ ಅಭಿವೃದ್ಧಿಯನ್ನು ಕಡೆಗಣಿಸಿರುವುದಲ್ಲದೆ ರಕ್ಷಣೆಯಲ್ಲೂ ತಾತ್ಸಾರ ಮನೋಭಾವ ಹೊಂದಿರುವುದರಿಂದಲೇ ಇಂದು ರಾಜ್ಯದಲ್ಲಿ ದಲಿತರ ಹಾಗೂ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಏರುಗತಿಯಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವರದಿಯಂತೆ ಪ್ರತಿ ದಿನ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ವರ್ಷಕ್ಕೆ ಕನಿಷ್ಠ 2000 ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದೆ. ದಲಿತ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕಾನೂನುಗಳಿದ್ದರೂ ಪರಿಣಾಮಕಾರಿ ಜಾರಿ ಇಲ್ಲದ ಕಾರಣ ಇಳಿಕೆಯಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಅಪರಾಧ ಪ್ರಕರಣಗಳ ವಿರುದ್ಧ ನಾವು ಗಂಭೀರ ಹೋರಾಟವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಆತಂಕದ ಸಂದರ್ಭದಲ್ಲಿ ನಮಗೆ ಆದರ್ಶವೇ ನಮಗೆ ಸಂವಿಧಾನ ನೀಡಿದ ಡಾ.ಅಂಬೇಡ್ಕರ್. ಅವರ ಚಿಂತನೆಯ ಮಾರ್ಗದಲ್ಲಿ ನಾವೆಲ್ಲರೂ ಒಗ್ಗೂಡುವುದಾಗಿದೆ. ಡಾ.ಅಂಬೇಡ್ಕರ್ ಸ್ವಾತಂತ್ರ್ಯ ನಂತರದಲ್ಲಿ ಹಿಂದೂ ಕೋಡ್ ಬಿಲ್ ಮಂಡಿಸುವ ಮೂಲಕ ದೇಶದ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ತಂದುಕೊಡಲು ಮುಂದಾಗಿದ್ದರು. ಅಂಬೇಡ್ಕರ್ ವಿಮೋಚನೆಯ ಬೆಳಕಿನಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟವನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸಮಾವೇಶದಲ್ಲಿ ಮಹಿಳಾ ಮುಖಂಡರಾದ ಅವ್ವಿ, ಸಾಕಮ್ಮ, ಬಸಂತಿ, ಚೌಮಿ, ವೈಜಯಂತಿ, ಸೀಮಾ, ಮಾಲಾ ದೇವಾನಿ, ಸಾಜಿನಿ, ಪ್ರಿಯಾಂಕಾ, ನಯನಾ ಹೇಮಾ, ವಿದ್ಯಾಶ್ರೀ ಇತರರು ಇದ್ದರು.
- All About,How our community in the name of #Qaum is being used by politicians for their own selfish interests *ಭಾರತ ನಲ್ಲಿ ವೈರಲ್*1
- ಕೊಡಗಿನಲ್ಲಿ ಧಾರಾಕಾರ ಮಳೆ, ತುಂಬಿ ಹರಿಯುತ್ತಿರುವ ಕಾವೇರಿ ನದಿ ಕೊಡಗು ಜಿಲ್ಲೆಯಲ್ಲಿ ಮಾಘ ಮಳೆಯ ರಭಸ ಜೋರಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾಗಮಂಡಲದಲ್ಲಿ ಕಾವೇರಿ ನದಿ ತುಂಬಿದ್ದು ಪವಿತ್ರ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ.1
- ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್,ರೈತಮುಖಂಡರಿಂದ ಕಡಿಮೆ ಆರ್ ಎಸ್ ಮುತ್ತಿಗೆ,ಬಂಧನ ಬಿಡುಗಡೆ ಮಂಡ್ಯ- ಶ್ರೀರಂಗಪಟ್ಟಣದ ಕೆ. ರ್ ಎಸ್ ಆಣೆಕಟ್ಟೆಯಿಂದ ನೀರು ಹರಿಸುತ್ತದೆ ಇರುವುದನ್ನ ಖಂಡಿಸಿ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಕೆಆರ್ ಎಸ್ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ತಮಿಳು ನಾಡು ಏಜೆಂಟ್ ನಂತೆ ವರ್ತಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ ಕೂಗಿ ಕೂಡಲೇ ತಮಿಳುನಾಡಿಗೆ ನೀರು ನಿಲ್ಲಿಸುವಂತೆ ಸರ್ಕಾರಕ್ಕೆ ಆಗ್ರಹಮಾಡಿದ್ರು, ರಾಜ್ಯಸರ್ಕಾರದ ವಿರುದ್ದ ದಿಕ್ಕಾರ ಕೂಗಿದ್ರು. ರಾಜ್ಯಹಾಗೂ ಕೇಂದ್ರ ಸರ್ಕಾದ ವಿರುದ್ದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ರು, ಪ್ರತಿಭನಾ ಕಾರರನ್ನು ಪೊಲೀಸ್ ಬಂದಿಸಿದರು, ಕನ್ನಡ ಹೋರಾಟಗಾರರು ವಾಟಾಳ್ ನಾಗರು ಮತ್ತು ರೈತ ಹೋರಾಟಗಾರ ರಾಜ್ಯಾಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೆಗೌಡ ಮತ್ತಿತರರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು..1
- ಮಳವಳ್ಳಿಯಲ್ಲಿ ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಮೈಸೂರು ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಸಂಯೋಜಕರಾದ ಬಲರಾಮ್ ಚಾಲನೆ ಮಳವಳ್ಳಿ;ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ--ಸಂಯೋಜಕ ಬಲರಾಂ ಹೇಳಿಕೆ ಮಳವಳ್ಳಿ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಅಪಾರವಾಗಿದೆ ಎಂದು ಮೈಸೂರು ಕೊಡಗು ಸೌಹರ್ಧ ಸಹಕಾರಿ ಒಕ್ಕೂಟದ ವಿಭಾಗದ ಸಂಯೋಜಕ ಎನ್.ಬಲರಾಂ ಹೇಳಿದರು. ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅವರಣದಲ್ಲಿ ಮಾಮರ ಸೌಹರ್ಧ ಸಹಕಾರಿ ಸಂಘ ಅಯೋಜಿಸಿದ್ದ ಪ್ರಥಮ ವರ್ಷದ ಸರ್ವ ಸದಸ್ಯರ ಸಭೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಘಗಳ ಮೂಲ ಉದ್ದೇಶವೇ ಸದಸ್ಯರಿಗೆ ಮೂಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದರು. ಮಾಮರ ಸೌಹರ್ದ ಸಹಕಾರ ಸಂಘ ಅರಂಭದ ವರ್ಷದಲ್ಲೆ ಉತ್ತಮ ಪ್ರಗತಿಯತ್ತ ಸಾಗಿದೆ,೧ ಕೋಟಿ ವಹಿವಾಟು ನಡೆಸಿರುವುದು,೫೦ ಲಕ್ಷಕ್ಕೂ ಮೂಲ ಬಂಡವಾಳ ಹೊಂದಿರುವುದು ಸೇರಿದಂತೆ ಸಂಘದ ಪಾರದರ್ಶಕ ಅರ್ಥಿಕ ವರದಿ ಭವಿಷ್ಯದಲ್ಲಿ ಉನ್ನತ ಸ್ಥಾನದ ಪಡೆಯಲಿದೆ ಎಂದ ಅವರು ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂಘಕ್ಕೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು,ಸಂಘದ ಸೌಲಭ್ಯಗಳನ್ನು ಪಡೆಯುವುದಲ್ಲದೇ ಅಕ್ಕಪಕ್ಕದ ಜನರಿಗೂ ಸೌಲಭ್ಯ ಕೊಡಿಸುವತ್ತ ಮುಂದಾಗುವAತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಲೆಕಪರಿಶೋಧಕರಾದ ರಾಜೇಶ್ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕವಿತಾ ಶ್ರೀಕಂಠಸ್ವಾಮಿ ಹಾಗೂ ಕು.ಕುಸುಮ ಸಂಘದ ವಾರ್ಷಿಕ ಲೆಕ್ಕ ಪರಿಶೋಧನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಸAಘದ ಸೌಲಭ್ಯಗಳ ಬಗ್ಗೆ ಸಂಘದ ಅಪಾಧ್ಯಕ್ಷರಾದ ಗುರುಮೂರ್ತಿ ಮಾಹಿತಿ ನೀಡಿದರು.ಸಂಘದ ಸೇವೆಗಳ ಕುರಿತು ನಿರ್ದೇಶಕ ಶಿವಕುಮಾರ್ ಮಾತನಾಡಿದರು.ಮುಖ್ಯ ಕಾರ್ಯನಿರ್ವಹಣಾಧಿಕಶಾರಿ ಪೂರ್ಣಿಮ ಸಂಘ ಬೆಳೆದು ಬಂದ ಹಾದಿಯ ಕುರಿತು ವರದಿ ಮಂಡಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಸಂಘದ ಅರಂಭ ಹಾಗೂ ಮುಂಗಡ ವರ್ಷದ ಯೋಜನೆಗಳು ಬಗ್ಗೆ ಸಭೆಯಲ್ಲಿ ಮಂಡಿಸಿದರು. ಬಾಕ್ಸ್ ಸುದ್ದಿ: ಹೋಸ ಯೋಜನೆಗಳ ಅನುಷ್ಠಾನ್ಕಕೆ ಅನುಮೋಧನೆ: ಸಹಕಾರ ಸಂಘದಿAದ ಸೂಪರ್ ಮಾರ್ಕೆಟ್ ಅರಂಭ,ಹಲಗೂರಿನಲ್ಲಿ ಹೊಸ ಉಪ ಶಾಖೆ ತೆರಯುವುದು,ಬಂಕ್ ಉದ್ಯಮ ಸೇರಿದಂತೆ ಸಹಕಾರ ಸಂಘದ ಪ್ರಗತಿಗೆ ಕೈಗೊಳ್ಳಬೇಕಾದ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಲೆಕ್ಕ ಪರಿಶೋಧಕರ ನಿಯೋಜನೆ.ಹೊಸ ಕಛೇರಿ ತೆರೆಯುವುದು,ಸಾಮಾನ್ಯ ಸೇವಾ ಕೇಂದ್ರದ ಸೇವೆಗಳನ್ನು ಸದಸ್ಯರ ಮನೆಗೆ ನೀಡುವುದು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋಧನೆ ಪಡೆಯಲಾಯಿತು. ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ವೃತ್ತಿ ಪರ ನಿರ್ದೇಶಕರಾಗಿ ಅಯ್ಕಯಾಗಿದ್ದ ಬೆಳಕವಾಡಿ ಚೇತನ್ ಹಾಗೂ ರೇಷ್ಮೆ ಕೃಷಿಕ ಮೂಗನಕೊಪ್ಪಲು ತ್ಯಾಗರಾಜುರವರನ್ನು ಅಭಿನಂಧಿಸಿ ಆಢಳಿತ ಮಂಡಳಿಗೆ ಬರಮಾಡಿಕೊಳ್ಳಲಾಯಿತು. ಸಭೆಯಲ್ಲಿ ಸಂಯೋಜಕ ಬಲರಾಂ,ಲೆಕ್ಕ ಪರಿಶೋಧಕರಾದ ರಾಜೆಶ್.ಪಿ ಹಾಗೂ ಹಿರಿಯ ಸದಸ್ಯರು ಹಾಗೂ ಶಿಕ್ಷಣ ತಜ್ಞೆ ಶಾಂತ ಬಸವರಾಜು,ವೈದ್ಯರಾದ ಗೀರೀಶ್,ಪತ್ರಬರಹಗಾರ ಸದಾಶಿವಮೂರ್ತಿ,ಬಸವೇಶ್ ಮೂರ್ತಿ,ನಿವೃತ್ತ ಉಪ ತಹಶೀಲ್ದಾರ್ ಶಿವಮೂರ್ತಿಯವರನ್ನು ಅಭಿನಂಧಿಸಲಾಯಿತು. ಸಭೆಗೂ ಮುನ್ನ ಶ್ರೀ ವೀರಭದ್ರೇಶ್ವರಸ್ವಾಮಿಗೆ ಸಂಘದವತಿಯಿAದ ವಿಶೇಷ ಪೂಜೆ ಸಲ್ಲಿಸಲಾಯಿತು,ಅರ್ಚಕರಾದ ಮಲ್ಲಯ್ಯನವರು ದೇವರಿಗೆ ಪೂಜೆ ಸಲ್ಲಿಸಿ ಅಗಮಿಸಿದ ಜನರಿಗೆ ಮಹಾಮಂಗಳಾರತಿ ನೀಡಿ ಪ್ರಸಾದ ನೀಡಿದರು. ಸಭೆಯಲ್ಲಿ ಅಢಳಿತ ಮಂಡಳಿಯ ನಿರ್ದೇಶಕರಾದ ಎಸ್ ನಾಗಭೂಷಣಾರಾದ್ಯ,ಎನ್.ಮಂಟ್ಯೆಸ್ವಾಮಿ,ಕವಿತ.ಎಸ್,ಮಾನಸ.ಪಿ,ಗAಗಾಧರ್,ವ್ಯವಸ್ಥಾಪಕಿ ರಮ್ಯ,ಸೇವಾ ಪ್ರತಿನಿಧಿ ಕುಸುಮ,ಸಿಇಓ ಪೂರ್ಣಿಮಾ, ಪಿಗ್ಮಿ ಸಂಗ್ರಾಹಕ ಸುಬ್ರಮಣ್ಯ ಎಂ.ಅರ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.1
- ನೊಂದ ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘಟನೆ ಉದ್ದೇಶ : ಡಿ.ಸಿದ್ದಪ್ಪ ನೊಂದ ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘಟನೆ ಉದ್ದೇಶ : ಡಿ.ಸಿದ್ದಪ್ಪ ವರದಿ: ಹೊಮ್ಮನಂಜುಂಡನಾಯಕ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆ ಚಾಮರಾಜನಗರ ಜಿಲ್ಲಾ ನೂತನ ಅಧ್ಯಕ್ಷರಾಗಿ ಸಿ.ಶೇಖರ್ ಮಸಣಾಪುರ ಚಾಮರಾಜನಗರ: ನೊಂದ ಶೋಷಿತ ನಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಉದ್ದೇಶವಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಿ.ಸಿದ್ಧಪ್ಪ ದೇವಅರಸನಹಳ್ಳಿ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರ ವಿತರಿಸಿ ಮಾತನಾಡಿದರು. ರಾಜ್ಯಾದ್ಯಂತ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅರ್ಹರಿಗೆ ಸರ್ಕಾರದ ಸೌಕರ್ಯಗಳನ್ನು ಸರಿಯಾಗಿ ತಲುಪುತ್ತಿಲ್ಲ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ. ಆಗಾಗಿ ನೊಂದ ಶೋಷಿತ ಸಮುದಾಯಗಳ ಪರ ನಿಲ್ಲಬೇಕು. ಅವರಿಗೆ ಸರ್ಕಾರ ಸವಲತ್ತುಗಳನ್ನು ತಲುಪಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದು, ಗಡಿಜಿಲ್ಲೆಯಲ್ಲಿ ಚಾಮರಾಜನಗರದಲ್ಲಿ ಮೊಟ್ಟಮೊದಲಿಗೆ ಜಿಲ್ಲಾ ಸಮಿತಿ ರಚನೆ ಮಾಡಿ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದ್ದು, ನೂತನ ಪದಾಧಿಕಾರಿಗಳು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಘಟನೆಯನ್ನು ಬಲಪಡಿಸುವಂತೆ ಸಲಹೆ ನೀಡಿದರು. ನೂತನ ಪದಾಧಿಕಾರಿಗಳು : ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಚಾಮರಾಜನಗರ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ. ಶೇಖರ್ ಮಸನಾಪುರ, ಗೌರವಾಧ್ಯಕ್ಷರಾಗಿ ಬಸವಣ್ಣ ಮಸಣಾ ಪುರ, ನಿರ್ದೇಶಕರಾಗಿ ಶಶಿಕುಮಾರ್ ಬೇಡರಪುರ, ಚಂದಯ್ಯ, ನಾಗರಾಜು ನಂಜುಂಡಸ್ವಾಮಿ, ಜಯಸ್ವಾಮಿ, ರಂಗಸ್ವಾಮಿ ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಜ್ಯೋತಿ ರಾಮಸಮುದ್ರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಿ ನೇಮಕಾತಿ ಆದೇಶಪತ್ರ ವಿತರಿಸಲಾಯಿತು. ಸಭೆಯಲ್ಲಿ ರಾಜ್ಯಾ ಗೌರವಾಧ್ಯಕ್ಷ ಮಹೇಶ್ ಕೋಚನಹಳ್ಳಿ, ರಾಜ್ಯಾಧ್ಯಕ್ಷ ಡಿ.ಸಿದ್ದಪ್ಪ ದೇವಅರಸನಹಳ್ಳಿ, ರಾಜ್ಯ ಕಾರ್ಯದರ್ಶಿ ಗುರುಸ್ವಾಮಿ ಕೆ.ಎಸ್. ಕೆರಹಳ್ಳಿ, ರಾಜ್ಯ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ದೊಡ್ಡ ಕಾಯಮ್ಮ, ಕಮಲ, ಖಜಾಂಚಿ ಮಾದಯ್ಯ ಸಂಘಟನಾ ಕಾರ್ಯದರ್ಶಿ ಎನ್.ಶಿವಕುಮಾರ್, ಸಂಚಾಲಕ ಸಿದ್ದರಾಜು ನಿರ್ದೇಶಕ ಪ್ರಕಾಶ್. ಮರಿಸ್ವಾಮಿ, ಹಾಜರಿದ್ದರು.4
- ತಾಲ್ಲೂಕಿನ ಗುಳ್ಳಗಟ್ಟ ಗ್ರಾಮದ ಕಾಂಗ್ರೆಸ್ ಮುಖಂಡ ಶಿವರುದ್ರ ಅವರ ಕೊಲೆ ಪ್ರಕರಣದ ಆರೋಪಿ ಬಂಧಿಸಿದ ಗ್ರಾಮಾಂತರ ಠಾಣೆ ಪೊಲೀಸರು ಮಳವಳ್ಳಿ : ಕಳೆದ ಒಂದು ತಿಂಗಳ ಹಿಂದೆ ಮಳವಳ್ಳಿ ತಾಲ್ಲೂಕಿನ ಗುಳ್ಳಗಟ್ಟ ಗ್ರಾಮದಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡ ಶಿವರುದ್ರ ಅವರ ಕೊಲೆ ಪ್ರಕರಣಕ್ಕೆ ಸಂಬಂದಿಸಿ ದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಗುಳ್ಳಗಟ್ಟ ಗ್ರಾಮದ ವಾಸಿ ಲೇ ರಾಜಣ್ಣ ಎಂಬುವರ ಮಗನಾದ 42 ವರ್ಷದ ಮಹೇಶ ಎಂಬಾತನೇ ಬಂಧಿತ ಆರೋಪಿಯಾಗಿದ್ದು ಕಳೆದ ಜುಲೈ 24 ರಂದು ಈ ಘಟನೆ ನಡೆದಿತ್ತು . ಅಂದು ಸಂಜೆ 6.30 ರ ಸಮಯದಲ್ಲಿ ತಮ್ಮ ಜಮೀ ನಿನ ಬಳಿ ವಾಕಿಂಗ್ ಮುಗಿಸಿ ಮನೆಕಡೆ ಸ್ಕೂಟರ್ ನಲ್ಲಿ ಹೊರಟಿದ್ದ 57 ವರ್ಷದ ಶಿವರುದ್ರ ಅವರನ್ನು ಅಡ್ಡಗಟ್ಟಿ ದ ಮಹೇಶ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಸ್ಕೂಟರ್ ಸಮೇತ ಶವವನ್ನು ಹಳ್ಳಕ್ಕೆ ತಳ್ಳಿ ಪರಾರಿಯಾಗಿದ್ದಾನೆ ಎಂದು ಮೃತನ ಮಗ ಡಾ ವಿನಯ್ ಪೊಲೀಸರಿಗೆ ನೀಡಿ ರುವ ದೂರಿನಲ್ಲಿ ಆರೋಪಿಸಿ ದ್ದರು ಟಿ ಸಿ ಯಿಂದ ವಿದ್ಯುತ್ ಸಂಪರ್ಕ ಪಡೆಯುವ ವಿಚಾರ ವಾಗಿ ಉಂಟಾಗಿದ್ದ ವೈಷಮ್ಯವೇ ಈ ಕೊಲೆಗೆ ಕಾರಣವೆಂದು ದೂರಿನಲ್ಲಿ ತಿಳಿಸಲಾಗಿತ್ತು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಆರೋಪಿ ಬಂಧನ ಕ್ಕಾಗಿ ಜಿಲ್ಲಾ ಎಸ್ಪಿ ಡಾ. ಶೋಭಾ ರಾಣಿ ಅವರು ವಿಶೇಷ ತಂಡ ರಚಿಸಿದ್ದರು. ಅಂದಿನಿಂದಲೂ ವಿವಿಧ ಸ್ಥಳಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕಾಗಿ ಡಿ ವೈ ಎಸ್ಪಿ ಯಶವಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂ ತರ ಠಾಣಾ ಪೊಲೀಸರು ಶೋಧ ಕಾರ್ಯ ಕೈಗೊಂಡಿ ದ್ದರು. ಮಂಡ್ಯ ತಾಲ್ಲೂಕು ಚಂದಗಾಲು ಬಳಿಯ ವಡ್ಡರ ಹಳ್ಳಿ ಗ್ರಾಮದ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಸಾಯಂಕಾಲ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಬಸವರಾಜು, ಎಎಸ್ ಐ ಸಿದ್ದರಾಜು, ಸಿಬ್ಬಂದಿಗಳಾದ ನಾಗೇಂದ್ರ, ಸುರೇಶ, ದೇವರಾಜು ಅವರನ್ನು ಒಳಗೊಂಡ ತಂಡ ಆರೋಪಿ ಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೋಮವಾರ ಸಾಯಂಕಾಲ 5.30 ರ ಸಮಯದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.1
- ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಬ್ಲಾಕ್ ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಎಂ.ಆರ್. ಮಂಜುನಾಥ್: ರೈತ ಸಂಘದಿಂದ ಧನ್ಯವಾದ ಹನೂರು: ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಡಿ ಗ್ರಾಮದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಅಭಾವವನ್ನು ಆಲಿಸಿ, ತಕ್ಷಣವೇ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲು ಕ್ರಮ ಕೈಗೊಂಡ ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್. ಮಂಜುನಾಥ್ ಅವರಿಗೆ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ, ರೈತ ಸಂಘದ ಮುಖಂಡರು ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಹಾಗೂ ರೈತ ಮುಖಂಡರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರು, ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸಲು ಇಂದು ಬೋರ್‌ವೆಲ್ ವಾಹನವನ್ನು ಕಳುಹಿಸಿಕೊಟ್ಟಿದ್ದರು. ಗ್ರಾಮದಲ್ಲಿ ಕೈಗೊಂಡ ಬೋರ್‌ವೆಲ್ ಕೊರೆತದ ಸಂದರ್ಭದಲ್ಲಿ ಸುಮಾರು ಎರಡು ಇಂಚು ಉತ್ತಮ ಪ್ರಮಾಣದ ನೀರು ಬಿದ್ದಿದ್ದು, ಗ್ರಾಮಸ್ಥರಲ್ಲಿ ಮತ್ತು ರೈತರ ಮುಖಂಡರಲ್ಲಿ ಸಂತಸ ಮೂಡಿಸಿದೆ. ಹಲವು ದಿನಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದ್ದು, ಶಾಸಕರ ಶೀಘ್ರ ಸ್ಪಂದನೆ ಮತ್ತು ಜನಪರ ಕಾಳಜಿಗೆ ರೈತ ಸಂಘದ ತಾಲೂಕು ಹಾಗೂ ಗ್ರಾಮ ಮಟ್ಟದ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.1
- All About,Mismanagement/Misappropriation of Funds/Violations of elections all in the #DistrictWaqfAdvisoryCommittee #Mysuru *ಭಾರತ ನಲ್ಲಿ ವೈರಲ್*1