ಜನಗಣತಿ ವೇಳೆ ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಬಾಗೇಪಲ್ಲಿ:- ಚೇಳೂರು ತಾಲೂಕಿನ ಜನಗಣತಿ ವೇಳೆ ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ನಿಖರ ಮಾಹಿತಿಗಳನ್ನು ಪಡೆಯಬೇಕು ಎಂದು ಗಣತಿಯ ಉಸ್ತುವಾರಿ ಅಧಿಕಾರಿಯೂ ಆದ ತಹಸೀಲ್ದಾರ್ ಕುಮಾರಿ ಬಿ.ಕೆ.ಶ್ವೇತಾ ಹೇಳಿದರು. ಅವರು ಚೇಳೂರಿನ ಕೆ.ಪಿ.ಎಸ್ ಶಾಲೆಯಲ್ಲಿ 2027 ರ ಭಾರತ ಜನಗಣತಿ ತರಬೇತಿ ಕಾರ್ಯಾಗಾರದಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸೂಕ್ತ ಮಾಹಿತಿ ನೀಡಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ತರಬೇತಿಯನ್ನು ತಪ್ಪದೆ 3 ದಿವಸಗಳ ಕಾಲ ಪಡೆಯಲೇಬೇಕು. ಗಣತಿದಾರರಿಗೆ ಕಾಲಕಾಲಕ್ಕೆ ನಿಖರ ಮಾಹಿತಿಗಳನ್ನ ನೀಡಲಾಗುವುದು. ಮನೆಗಳಿಗೆ ನಂಬರ್ ಕೊಡದಿದ್ದರೆ ತಾವೇ ನಂಬರ್ ಕೊಡಬೇಕು ಎಂದರು. ತರಬೇತಿ ಎಂಬುದು ಪ್ರತಿಯೊಬ್ಬ ಮನುಷ್ಯನ ಪ್ರಬುದ್ಧತೆಗೆ ಕನ್ನಡಿ ಹಿಡಿಯುತ್ತದೆ. ಸರಿಯಾದ ತರಬೇತಿ ದೊರಕದಿದ್ದಾಗ ಅಥವಾ ಸರಿಯಾಗಿ ಅರ್ಥ್ಯೆಸಿಕೊಳ್ಳದಿದ್ದಾಗ ನಾವು ಪರಿಪೂರ್ಣತೆ ಸಾಧಿಸಲಾಗದು. ಆದ್ದರಿಂದ ಒಂದೊಂದು ತಂಡಕ್ಕೂ 3 ದಿನಗಳಂತೆ 9 ದಿನಗಳ ಕಾಲ ತರಬೇತಿ ನೀಡಲಾಗುವುದು. ತರಬೇತಿ ಕಾರ್ಯಾಗಾರದಲ್ಲಿ ತಪ್ಪದೆ ಭಾಗವಹಿಸಿ ಮನೆಗಣತಿ ಹಾಗೂ ಜನಗಣತಿ ಕಾರ್ಯದ ಆಧಾರ ಸ್ಥಂಭಗಳಾಗಬೇಕು. ಜನಸಂಖ್ಯೆ ಆಧಾರದ ಮೇಲೆ ದೇಶದ ಪ್ರತಿಯೊಂದು ಕುಟುಂಬಕ್ಕೂ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವ ಕೀರ್ತಿ ಗಣತಿದಾರರು, ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಗಣತಿದಾರರು, ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
ಜನಗಣತಿ ವೇಳೆ ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಬಾಗೇಪಲ್ಲಿ:- ಚೇಳೂರು ತಾಲೂಕಿನ ಜನಗಣತಿ ವೇಳೆ ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ನಿಖರ ಮಾಹಿತಿಗಳನ್ನು ಪಡೆಯಬೇಕು ಎಂದು ಗಣತಿಯ ಉಸ್ತುವಾರಿ ಅಧಿಕಾರಿಯೂ ಆದ ತಹಸೀಲ್ದಾರ್ ಕುಮಾರಿ ಬಿ.ಕೆ.ಶ್ವೇತಾ ಹೇಳಿದರು. ಅವರು ಚೇಳೂರಿನ ಕೆ.ಪಿ.ಎಸ್ ಶಾಲೆಯಲ್ಲಿ 2027 ರ ಭಾರತ ಜನಗಣತಿ
ತರಬೇತಿ ಕಾರ್ಯಾಗಾರದಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸೂಕ್ತ ಮಾಹಿತಿ ನೀಡಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ತರಬೇತಿಯನ್ನು ತಪ್ಪದೆ 3 ದಿವಸಗಳ ಕಾಲ ಪಡೆಯಲೇಬೇಕು. ಗಣತಿದಾರರಿಗೆ ಕಾಲಕಾಲಕ್ಕೆ ನಿಖರ ಮಾಹಿತಿಗಳನ್ನ ನೀಡಲಾಗುವುದು. ಮನೆಗಳಿಗೆ ನಂಬರ್ ಕೊಡದಿದ್ದರೆ ತಾವೇ ನಂಬರ್ ಕೊಡಬೇಕು ಎಂದರು. ತರಬೇತಿ ಎಂಬುದು
ಪ್ರತಿಯೊಬ್ಬ ಮನುಷ್ಯನ ಪ್ರಬುದ್ಧತೆಗೆ ಕನ್ನಡಿ ಹಿಡಿಯುತ್ತದೆ. ಸರಿಯಾದ ತರಬೇತಿ ದೊರಕದಿದ್ದಾಗ ಅಥವಾ ಸರಿಯಾಗಿ ಅರ್ಥ್ಯೆಸಿಕೊಳ್ಳದಿದ್ದಾಗ ನಾವು ಪರಿಪೂರ್ಣತೆ ಸಾಧಿಸಲಾಗದು. ಆದ್ದರಿಂದ ಒಂದೊಂದು ತಂಡಕ್ಕೂ 3 ದಿನಗಳಂತೆ 9 ದಿನಗಳ ಕಾಲ ತರಬೇತಿ ನೀಡಲಾಗುವುದು. ತರಬೇತಿ ಕಾರ್ಯಾಗಾರದಲ್ಲಿ ತಪ್ಪದೆ ಭಾಗವಹಿಸಿ ಮನೆಗಣತಿ ಹಾಗೂ
ಜನಗಣತಿ ಕಾರ್ಯದ ಆಧಾರ ಸ್ಥಂಭಗಳಾಗಬೇಕು. ಜನಸಂಖ್ಯೆ ಆಧಾರದ ಮೇಲೆ ದೇಶದ ಪ್ರತಿಯೊಂದು ಕುಟುಂಬಕ್ಕೂ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವ ಕೀರ್ತಿ ಗಣತಿದಾರರು, ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಗಣತಿದಾರರು, ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
- ಬಾಬು ಜಗಜೀವನರಾಂ ಜಯಂತಿ: ಸಮಾನತೆಗೆ ಶ್ರಮಿಸಿದ್ದ ರಾಜಕೀಯ ಮುತ್ಸದ್ದಿ :-ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ:-ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರು ಸತತ ಮೂವತ್ತು ವರ್ಷಗಳು ಸಂಪುಟ ದರ್ಜೆ ಸಚಿವರಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು. ಅವರು ಪಟ್ಟಣದ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ,ಜಿಲ್ಲಾ ಪಂಚಾಯತಿ, ಪುರಸಭೆ, ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬು ಜಗಜೀವನರಾಂ ಚಿತ್ರಪಟಕ್ಕೆ ಪುಷ್ಪ ನಮನ ಹಾಗೂ ದೀಪಾ ಬೆಳಗಿಸಿ ಮಾತನಾಡಿದರು. ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರು ಜನರ ಒಳಿತಾಗಿ ಕ್ರಾಂತಿಕಾರಿ ನಿಲುವು ಮತ್ತು ಅಭಿವೃದ್ಧಿಗಾಗಿ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕ ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಾಗ ಮಾತ್ರ ಒಳ್ಳೆಯ ಉದ್ಯೋಗ ಅಧಿಕಾರ ಪಡೆಯಲು ಸಾಧ್ಯವಿದೆ. ಎಲ್ಲಾ ಸಮಾಜದವರು ಒಗ್ಗೂಡಿ ಇಂತಹ ಮಹಾನ್ ವ್ಯಕ್ತಿಗಳ ಜೀವನ ಕುರಿತು ಅರಿತುಕೊಳ್ಳಬೇಕು. ಅವರ ಸಾಧನೆ ಇಂದಿನ ಜನಾಂಗಕ್ಕೆ ಪ್ರೇರಣೆ ಆಗಬೇಕು’ ಎಂದರು. ತಹಸೀಲ್ದಾರ್ ಮನೀಷಾ ಮಹೇಶ ಪತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು’ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಬಿಇಓ ಎನ್ ವೆಂಕಟೇಶಪ್ಪ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆ.ರಾಮಚಂದ್ರ, ಕೈಗಾರಿಕಾ ವಿಸ್ತರ್ಣಾಧಿಕಾರಿಗಳಾದ ಮೆಹಬೂಬ್ ಬಾಷಾ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಜಿ.ಸಿ. ಮಂಜುಳಾ ಆರ್.ಹನುಮಂತ ರೆಡ್ಡಿ, ತೋಟಗಾರಿಕೆ ಇಲಾಖೆ ಲಲಿತ, ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್,ಮಾಜಿ ತಾಲ್ಲೂಕು ಪಂಚಾಯತಿ ಮಾಜಿ ಅದ್ಯಕ್ಷ ಕೆ.ಆರ್.ನರೇಂದ್ರ ಬಾಬು,ಎಪಿಎಂಸಿ ನಾಮ ನಿರ್ಧೇಶಕ ನಾರಾಯಣ ಸ್ವಾಮಿ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.2
- Post by Venu Gopal1
- ನೆಲಮಂಗಲ SSLC ಪರೀಕ್ಷೆ ಫಲಿತಾಂಶಕ್ಕೂ ಮೊದಲೇ ಯುವತಿ ಆತ್ಮಹತ್ಯೆ ಪರೀಕ್ಷೆಯಲ್ಲಿ ಫೇಲಾಗುವ ಭಯದಲ್ಲಿ ಯುವತಿ ಆತ್ಮಹತ್ಯೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ಘಟನೆ ಅನು(16) ಆತ್ಮಹತ್ಯೆ ಮಾಡಿಕೊಂಡ ಯುವತಿ ಗೋವಿಂದರಾಜು-ಪುಷ್ಪಲತಾ ದಂಪತಿಗಳ ಪುತ್ರಿ ಅನು ಮನೆಯ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಪರೀಕ್ಷೆ ವಿಷಯದಲ್ಲಿ ಮನನೊಂದಿದ್ದ ಯುವತಿ ಪೋಷಕರು ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.2
- ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪತನ ರೋಜರ್ನಹಳ್ಳಿ ಗೇಟ್ ಸಮೀಪ ಘಟನೆ – ಸ್ಥಳೀಯರಲ್ಲಿ ಆತಂಕ...1
- KOLAR KI.AWAAZ KOUSAR NEWS1
- ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಸಂತೆಯಲ್ಲಿ ಬುಧವಾರ ಮತಾಂತರಕ್ಕೆ ಯತ್ನಿಸಲಾಗಿದೆ ಎಂಬ ಶಂಕೆಯ ಹಿನ್ನೆಲೆ ಗೊಂದಲದ ಘಟನೆ ನಡೆದಿದೆ. ಭದ್ರಾವತಿ ಮೂಲದ ಇಬ್ಬರು ವ್ಯಕ್ತಿಗಳು ಪುಸ್ತಕಗಳನ್ನು ಹಂಚುತ್ತಿದ್ದರು ಎಂದು ಸ್ಥಳೀಯರು ಪ್ರಶ್ನಿಸಿದ ವೇಳೆ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಯಿತು ಎಂದು ವರದಿಯಾಗಿದೆ. ಬಳಿಕ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ವೇಳೆ ಕೆಲವರು ವಾಹನದಲ್ಲಿ ಸ್ಥಳದಿಂದ ತೆರಳಲು ಯತ್ನಿಸಿದರೆಂಬ ಮಾಹಿತಿಯೂ ಲಭ್ಯವಾಗಿದೆ. ಪ್ರಕರಣವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸುತ್ತಿದ್ದಾರೆ.1
- Dr ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ MLA ಕೂತ್ತೂರು ಮಂಜುನಾಥ್ mlc ಅನಿಲ್ ಕುಮಾರ್ ಭಾಗವಹಿಸಿದರು1
- ಹೊಸಕೋಟೆ ರಾಮೇಶ್ವರಸ್ವಾಮಿ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಭೈರತಿ ಬಸವರಾಜ್ ಸಂಕಲ್ಪ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಿದ್ದೇನೆ ಎಂದ ಬಸವರಾಜ್. ಇನ್ನೂ ಎರಡು ವರ್ಷಗಳ ಕಾಲ ವಿರೋಧ ಪಕ್ಷದಲ್ಲ ನಾವು ಇರಬೇಕು. ಮುಂದಿನ ದಿನಗಳಲ್ಲಿ ಜನರ ಆಶೀರ್ವಾದವನ್ನ ಕೇಳ್ತಿದ್ದೀವಿ. ಜನರ ನ್ಯಾಯಾಲಯಕ್ಕೆ ಬಿಡ್ತೀವಿ, ಜನರು ತೀರ್ಮಾನ ಮಾಡ್ತಾರೆ. ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೀತಿದೆ. ಅಲ್ಲಿನ ಮತದಾರ ದೇವರುಗಳಲ್ಲಿ ಒಳ್ಳೆ ತೀರ್ಮಾನ ಮಾಡಿ ಅಂತ ಕೇಳಿಕೊಳ್ತಿದ್ದೀನಿ. ಈ ಹಿಂದೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಜಾತ್ರಾ ಮಹೋತ್ಸವದಿಂದ ಚುನಾವಣೆಯಲ್ಲಿ ಭಾಗವಹಿಸಲು ಆಗಿಲ್ಲ. ಎಲ್ಲಾ ವಿಧಾನಸಭೆ ಕ್ಷೇತ್ರ ಜನತೆ ಬಳಿ ನನ್ನದೇ ಶಕ್ತಿಯನ್ನ ನಾನು ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಗಳಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತೆ. ಬಿಜೆಪಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪಕ್ಷದ ಎಲ್ಲಾ ನಾಯಕರು ಇಗ್ಗೂಡಿ ಪಕ್ಷ ಅಧಿಕಾರಕ್ಕೆ ತರ್ತೀವಿ. ಭಾರತೀಯ ಜನತಾ ಪಕ್ಷವನ್ನ ಅಧಿಕಾರಕ್ಕೆ ತರವು ಸಂಕಲ್ಪ ಮಾಡ್ತೀವಿ. ಹೊಸಕೋಟೆಯ ತಾವರೆಕೆರೆ ಜಾತ್ರಾ ಮಹೋತ್ಸವದಲ್ಲಿ ಭೈರತಿ ಬಸವರಾಜು ಹೇಳಿಕೆ. .....................1