logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೇಶ್ವರ ಗ್ರಾಮದಲ್ಲಿ ನರಕ ಸದೃಶ ಬದುಕು: ಎಲ್ಲೆಂದರಲ್ಲಿ ಹರಿಯುವ ಚರಂಡಿ ನೀರು, ಹದಗೆಟ್ಟ ರಸ್ತೆಗಳು ಗುರುಮಠಕಲ್: ತಾಲೂಕಿನ ಕೇಶ್ವರ ಗ್ರಾಮದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ಗ್ರಾಮಸ್ಥರು ನರಕ ಸದೃಶ ಜೀವನ ನಡೆಸುವಂತಾಗಿದೆ. ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಗುಂಡಿ ಬಿದ್ದಿದ್ದು, ಚರಂಡಿ ನೀರು ಎಲ್ಲೆಂದರಲ್ಲಿ ಹರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗಬ್ಬೆದ್ದು ನಾರುತ್ತಿರುವ ಚರಂಡಿಗಳು ಗ್ರಾಮದ ಪ್ರಮುಖ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳು ಹೂಳು ತುಂಬಿ ಬಂದ್ ಆಗಿವೆ. ಇತ್ತೀಚೆಗೆ ಗ್ರಾಮ ಪಂಚಾಯಿತಿಯಿಂದ ಚರಂಡಿ ಸ್ವಚ್ಛಗೊಳಿಸುವ ನೆಪದಲ್ಲಿ ತೆಗೆದ ಹೂಳನ್ನು ರಸ್ತೆಯ ಮೇಲೆಯೇ ಬಿಡಲಾಗಿದೆ. ಇದರಿಂದಾಗಿ ಮಳೆ ಬಂದಾಗ ಹೂಳು ಮತ್ತೆ ಚರಂಡಿಗೆ ಸೇರುತ್ತಿದ್ದು, ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನಿಲ್ಲುತ್ತಿದೆ. ಇದರಿಂದ ಗ್ರಾಮದಲ್ಲಿ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಗುಂಡಿ ಬಿದ್ದ ರಸ್ತೆಗಳು - ವಾಹನ ಸವಾರರ ಪರದಾಟ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಸಂಚಾರ ಅಸಾಧ್ಯವಾಗಿದೆ. ರಸ್ತೆಗಳ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ಬೈಕ್ ಸವಾರರು ಅಪ್ಪಿತಪ್ಪಿ ಬಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿದೆ.  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಿಲ್ಲ.ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಕೇಶ್ವರ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆ ದುರಸ್ತಿ ಮತ್ತು ಚರಂಡಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಗ್ರಾಮಸ್ಥರಾದ ಶಾಂತಮ್ಮ ಗಾಳ, ಶ್ರೀನಿವಾಸ್ ಗಾಳ, ನಮ್ಮ ಗ್ರಾಮದಲ್ಲಿ ಓಡಾಡಲು ದಾರಿಯಿಲ್ಲದಂತಾಗಿದೆ. ಚರಂಡಿ ನೀರು ಮನೆಯ ಮುಂದೆ ನಿಲ್ಲುತ್ತಿದೆ. ಹೂಳು ತೆಗೆದು ರಸ್ತೆಯಲ್ಲೇ ಬಿಟ್ಟಿರುವುದರಿಂದ ಮಕ್ಕಳು, ವೃದ್ಧರು ಓಡಾಡಲು ಭಯಪಡುತ್ತಿದ್ದಾರೆ. ಕೂಡಲೇ ರಸ್ತೆ ಮತ್ತು ಚರಂಡಿ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ." --- ಸಾಮಾಜಿಕ ಹೋರಾಟಗಾರ ಅಶೋಕ್ ರೆಡ್ಡಿ

23 hrs ago
user_Dayanand hm
Dayanand hm
Salesperson ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
23 hrs ago

ಕೇಶ್ವರ ಗ್ರಾಮದಲ್ಲಿ ನರಕ ಸದೃಶ ಬದುಕು: ಎಲ್ಲೆಂದರಲ್ಲಿ ಹರಿಯುವ ಚರಂಡಿ ನೀರು, ಹದಗೆಟ್ಟ ರಸ್ತೆಗಳು ಗುರುಮಠಕಲ್: ತಾಲೂಕಿನ ಕೇಶ್ವರ ಗ್ರಾಮದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ಗ್ರಾಮಸ್ಥರು ನರಕ ಸದೃಶ ಜೀವನ ನಡೆಸುವಂತಾಗಿದೆ. ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಗುಂಡಿ ಬಿದ್ದಿದ್ದು, ಚರಂಡಿ ನೀರು ಎಲ್ಲೆಂದರಲ್ಲಿ ಹರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗಬ್ಬೆದ್ದು ನಾರುತ್ತಿರುವ ಚರಂಡಿಗಳು ಗ್ರಾಮದ ಪ್ರಮುಖ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳು ಹೂಳು ತುಂಬಿ ಬಂದ್ ಆಗಿವೆ. ಇತ್ತೀಚೆಗೆ ಗ್ರಾಮ ಪಂಚಾಯಿತಿಯಿಂದ ಚರಂಡಿ ಸ್ವಚ್ಛಗೊಳಿಸುವ ನೆಪದಲ್ಲಿ ತೆಗೆದ ಹೂಳನ್ನು ರಸ್ತೆಯ ಮೇಲೆಯೇ ಬಿಡಲಾಗಿದೆ. ಇದರಿಂದಾಗಿ ಮಳೆ ಬಂದಾಗ ಹೂಳು ಮತ್ತೆ ಚರಂಡಿಗೆ ಸೇರುತ್ತಿದ್ದು, ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನಿಲ್ಲುತ್ತಿದೆ. ಇದರಿಂದ ಗ್ರಾಮದಲ್ಲಿ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಗುಂಡಿ ಬಿದ್ದ ರಸ್ತೆಗಳು - ವಾಹನ ಸವಾರರ ಪರದಾಟ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಸಂಚಾರ ಅಸಾಧ್ಯವಾಗಿದೆ. ರಸ್ತೆಗಳ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ಬೈಕ್ ಸವಾರರು ಅಪ್ಪಿತಪ್ಪಿ ಬಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿದೆ.  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಿಲ್ಲ.ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಕೇಶ್ವರ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆ ದುರಸ್ತಿ ಮತ್ತು ಚರಂಡಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಗ್ರಾಮಸ್ಥರಾದ ಶಾಂತಮ್ಮ ಗಾಳ, ಶ್ರೀನಿವಾಸ್ ಗಾಳ, ನಮ್ಮ ಗ್ರಾಮದಲ್ಲಿ ಓಡಾಡಲು ದಾರಿಯಿಲ್ಲದಂತಾಗಿದೆ. ಚರಂಡಿ ನೀರು ಮನೆಯ ಮುಂದೆ ನಿಲ್ಲುತ್ತಿದೆ. ಹೂಳು ತೆಗೆದು ರಸ್ತೆಯಲ್ಲೇ ಬಿಟ್ಟಿರುವುದರಿಂದ ಮಕ್ಕಳು, ವೃದ್ಧರು ಓಡಾಡಲು ಭಯಪಡುತ್ತಿದ್ದಾರೆ. ಕೂಡಲೇ ರಸ್ತೆ ಮತ್ತು ಚರಂಡಿ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ." --- ಸಾಮಾಜಿಕ ಹೋರಾಟಗಾರ ಅಶೋಕ್ ರೆಡ್ಡಿ

More news from ಕರ್ನಾಟಕ and nearby areas
  • ಬಾಗಲಕೋಟೆ ಉಪಚುನಾವಣೆಯ ನಿಮಿತ್ಯ ಬಂಜಾರ ಸಮುದಾಯದ 50 ಕ್ಕೂ ಹೆಚ್ಚು ತಾಯಂದಿರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರ ಕಾರ್ಯವನ್ನು ಮೆಚ್ಚಿ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು... ಈ ಸಂದರ್ಭದಲ್ಲಿ ಅಮಿನಗಡ ಪಟ್ಟಣದ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು...
    2
    ಬಾಗಲಕೋಟೆ ಉಪಚುನಾವಣೆಯ ನಿಮಿತ್ಯ 
ಬಂಜಾರ ಸಮುದಾಯದ 50 ಕ್ಕೂ ಹೆಚ್ಚು ತಾಯಂದಿರು ಕಾಂಗ್ರೆಸ್  ಪಕ್ಷವನ್ನು ತೊರೆದು ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರ ಕಾರ್ಯವನ್ನು ಮೆಚ್ಚಿ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು... ಈ ಸಂದರ್ಭದಲ್ಲಿ ಅಮಿನಗಡ ಪಟ್ಟಣದ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು...
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    10 hrs ago
  • ಮಾಜಿ ಸಚಿವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಇಳಕಲ್ ನಗರದಲ್ಲಿ ಸ್ವಾಗತಿಸಿದರು. ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.
    1
    ಮಾಜಿ ಸಚಿವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಇಳಕಲ್ ನಗರದಲ್ಲಿ ಸ್ವಾಗತಿಸಿದರು.  ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    12 hrs ago
  • ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ‌ ಜನ ಸೇರ್ತಾರೆ ಎಂದು ಹೇಳಿದರು
    1
    ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ‌ ಜನ ಸೇರ್ತಾರೆ
ಎಂದು ಹೇಳಿದರು
    user_Siddarth ilkal
    Siddarth ilkal
    Local News Reporter Ilkal, Bagalkote•
    14 hrs ago
  • ಗುಳೇದಗುಡ್ಡ : ಏ.7 ರಂದು ನಡೆಯಲಿರುವ ಕೂಡಲಸಂಗಮದ ಶ್ರೀ ಸಂಗಮೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ನಡೆಯಲಿರುವ ಹುಚ್ಚಯ್ಯ ರಥದ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆ ಭಜನೆಯೊಂದಿಗೆ ನಗರದ ರೇವಣಸಿದ್ದಪ್ಪ ದೇವರಮನಿ ಅವರ ಮನೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೂಡಲಸಂಗಮಕ್ಕೆ ಶನಿವಾರ ಪಾದಯಾತ್ರೆಯ ಮೂಲಕ ತೆರಳಿತು. ಇದಕ್ಕೂ ಮೊದಲು ಕಳಸಕ್ಕೆ ಅಭಿಷೇಕ, ಪೂಜೆ ನಡೆಯಿತು. ಮೆರವಣಿಗೆಯಲ್ಲಿ ರೇವಣಸಿದ್ದಪ್ಪ ದೇವರಮನಿ, ಮುತ್ತಣ್ಣ ದೇವರಮನಿ, ವೀರುಪಾಕ್ಷ ದೇವರಮನಿ, ಈರಪ್ಪ ಗಡ್ಡಿ, ಶಿವಪ್ಪ ಶ್ಯಾವಿ, ಶೇಖರಪ್ಪ ರಂಜನಗಿ, ಬಿ.ಎನ್.ಪಾಗಿ, ಶರಣಪ್ಪ ಖಂಡಿ, ಈರಪ್ಪ ಬೆಟಗೇರಿ, ಮಹಾಗುಂಡಪ್ಪ ದೇವರಮನಿ, ಶ್ರೀನಿವಾಸ ರಂಜನಗಿ, ಸಂಗಮೇಶ ರಂಜನಗಿ, ಮಹೇಶ ಶ್ಯಾವಿ, ಈರಪ್ಪ ಗಂಜಾಳ, ಈರಣ್ಣ ಸುರಪುರ, ವಿಜಯ ಕಣವಿ, ಮೇಘರಾಜ ಸುರಪುರ, ಬಸವರಾಜ ಬುದರಿ, ಪ್ರಭುಕುಮಾರ ಬುದರಿ, ಬಸಪ್ಪ ಕೊಪ್ಪದ, ಅಮರೇಶ ಗೊಡನ್ನವರ, ಅಶ್ವೀನಿ ದೇವರಮನಿ, ಕೂಡ್ಲೆವ್ವ ರಂಜನಗಿ, ಗಿರಿಜಾ ರಂಜನಗಿ, ಅನ್ನವ್ವ ರಂಜನಗಿ, ಸಂಗಮ್ಮ ಕುಂಟೋಜಿ, ನೀಲಮ್ಮ ಕಲಕೇರಿ, ಶೋಭಾ ಹದ್ಲಿ ಮತ್ತಿತರರು ಇದ್ದರು.
    3
    ಗುಳೇದಗುಡ್ಡ : ಏ.7 ರಂದು ನಡೆಯಲಿರುವ ಕೂಡಲಸಂಗಮದ ಶ್ರೀ ಸಂಗಮೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ನಡೆಯಲಿರುವ ಹುಚ್ಚಯ್ಯ ರಥದ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆ ಭಜನೆಯೊಂದಿಗೆ ನಗರದ ರೇವಣಸಿದ್ದಪ್ಪ ದೇವರಮನಿ ಅವರ ಮನೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೂಡಲಸಂಗಮಕ್ಕೆ ಶನಿವಾರ ಪಾದಯಾತ್ರೆಯ ಮೂಲಕ ತೆರಳಿತು. ಇದಕ್ಕೂ ಮೊದಲು ಕಳಸಕ್ಕೆ ಅಭಿಷೇಕ, ಪೂಜೆ ನಡೆಯಿತು.
ಮೆರವಣಿಗೆಯಲ್ಲಿ ರೇವಣಸಿದ್ದಪ್ಪ  ದೇವರಮನಿ, ಮುತ್ತಣ್ಣ ದೇವರಮನಿ, ವೀರುಪಾಕ್ಷ ದೇವರಮನಿ, 
ಈರಪ್ಪ ಗಡ್ಡಿ, ಶಿವಪ್ಪ ಶ್ಯಾವಿ, ಶೇಖರಪ್ಪ ರಂಜನಗಿ, ಬಿ.ಎನ್.ಪಾಗಿ, ಶರಣಪ್ಪ ಖಂಡಿ, ಈರಪ್ಪ ಬೆಟಗೇರಿ, ಮಹಾಗುಂಡಪ್ಪ ದೇವರಮನಿ, ಶ್ರೀನಿವಾಸ ರಂಜನಗಿ, ಸಂಗಮೇಶ ರಂಜನಗಿ, ಮಹೇಶ ಶ್ಯಾವಿ, ಈರಪ್ಪ ಗಂಜಾಳ, ಈರಣ್ಣ ಸುರಪುರ, ವಿಜಯ ಕಣವಿ, ಮೇಘರಾಜ ಸುರಪುರ, ಬಸವರಾಜ ಬುದರಿ, ಪ್ರಭುಕುಮಾರ ಬುದರಿ, ಬಸಪ್ಪ ಕೊಪ್ಪದ, ಅಮರೇಶ ಗೊಡನ್ನವರ, ಅಶ್ವೀನಿ ದೇವರಮನಿ, ಕೂಡ್ಲೆವ್ವ ರಂಜನಗಿ, ಗಿರಿಜಾ ರಂಜನಗಿ, ಅನ್ನವ್ವ ರಂಜನಗಿ, ಸಂಗಮ್ಮ ಕುಂಟೋಜಿ, ನೀಲಮ್ಮ ಕಲಕೇರಿ, ಶೋಭಾ ಹದ್ಲಿ ಮತ್ತಿತರರು ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    8 hrs ago
  • 👉 AEE ವೀರೇಶ್ ಮೇಲೆ ದಾಳಿ ಆರೋಪ 💥 📍 “ಸಲಾಂ ಬಳ್ಳಾರಿ” ಕಾರ್ಯಕ್ರಮದ ವೇಳೆ 👉 ಮಾತಿನ ಚಕಮಕಿ 🔥 👉 ನಂತರ ಹಲ್ಲೆ ನಡೆದಿದೆಯಂತೆ 😮 🗣️ ಶಾಸಕ ನಾರಾ ಭರತ್ ರೆಡ್ಡಿ: 👉 “ಅಧಿಕಾರಿಗಳ ಮೇಲೆ ಹಲ್ಲೆ ತಪ್ಪು” 👉 “ಪೂರ್ಣ ಮಾಹಿತಿ ಪಡೆದು ನ್ಯಾಯ ಕೊಡುತ್ತೇವೆ” ⚖️ 🗣️ ನೌಕರರ ಸಂಘ ಅಧ್ಯಕ್ಷ ಗೋವಿಂದ ಬಾಬು: 👉 “ಇದು ದುರ್ಘಟನೆ ಸಂಗತಿ” 👉 “ಅಧಿಕಾರಿಗಳಿಗೆ ಭದ್ರತೆ ಅಗತ್ಯ” ಅಧಿಕಾರಿಗಳ ಸುರಕ್ಷತೆ ಬಗ್ಗೆ ಚರ್ಚೆ ಹೆಚ್ಚಾಗಿದೆ ರಾಜಕೀಯವಾಗಿ ಪ್ರಕರಣಕ್ಕೆ ಮಹತ್ವ ಬಂದಿದೆ
    1
    👉 AEE ವೀರೇಶ್ ಮೇಲೆ ದಾಳಿ ಆರೋಪ 💥
📍 “ಸಲಾಂ ಬಳ್ಳಾರಿ” ಕಾರ್ಯಕ್ರಮದ ವೇಳೆ
👉 ಮಾತಿನ ಚಕಮಕಿ 🔥
👉 ನಂತರ ಹಲ್ಲೆ ನಡೆದಿದೆಯಂತೆ 😮
🗣️ ಶಾಸಕ ನಾರಾ ಭರತ್ ರೆಡ್ಡಿ:
👉 “ಅಧಿಕಾರಿಗಳ ಮೇಲೆ ಹಲ್ಲೆ ತಪ್ಪು”
👉 “ಪೂರ್ಣ ಮಾಹಿತಿ ಪಡೆದು ನ್ಯಾಯ ಕೊಡುತ್ತೇವೆ” ⚖️
🗣️ ನೌಕರರ ಸಂಘ ಅಧ್ಯಕ್ಷ ಗೋವಿಂದ ಬಾಬು:
👉 “ಇದು ದುರ್ಘಟನೆ ಸಂಗತಿ”
👉 “ಅಧಿಕಾರಿಗಳಿಗೆ ಭದ್ರತೆ ಅಗತ್ಯ”
ಅಧಿಕಾರಿಗಳ ಸುರಕ್ಷತೆ ಬಗ್ಗೆ ಚರ್ಚೆ ಹೆಚ್ಚಾಗಿದೆ
ರಾಜಕೀಯವಾಗಿ ಪ್ರಕರಣಕ್ಕೆ ಮಹತ್ವ ಬಂದಿದೆ
    user_ASN News24Kannada
    ASN News24Kannada
    Newsagent Ballari, Karnataka•
    15 hrs ago
  • ರಾಜ್ಯದಲ್ಲಿ ಭಾರೀ ಬಿಸಿಗಾಳಿ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಏಪ್ರಿಲ್ 29 ರಿಂದ ಮೇ 12 ರವರೆಗೆ ತಾಪಮಾನವು 45°C ರಿಂದ 55°C ವರೆಗೆ ಏರಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅತ್ಯಾವಶ್ಯಕವಲ್ಲದ ಹೊರಗಿನ ಚಟುವಟಿಕೆಗಳನ್ನು ತಪ್ಪಿಸಿ. ಮುಖ್ಯ ಎಚ್ಚರಿಕೆಗಳು: ಉಸಿರಾಟ ತೊಂದರೆ / ತಲೆ ಸುತ್ತು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕಾರಿನಲ್ಲಿ ಲೈಟರ್, ಬ್ಯಾಟರಿ, ಪಾನೀಯಗಳು ಇಡಬೇಡಿ ಗ್ಯಾಸ್ ಸಿಲಿಂಡರ್ ಬಿಸಿಲಿನಲ್ಲಿ ಇರಿಸಬೇಡಿ ಸಾಕಷ್ಟು ನೀರು, ಮಜ್ಜಿಗೆ, ತಂಪು ಪಾನೀಯಗಳನ್ನು ಸೇವಿಸಿ ಹೆಚ್ಚುವರಿ ಎಚ್ಚರಿಕೆ: ಬಿಸಿಯಿಂದ ಹಾವು-ಚೇಳುಗಳು ಮನೆಗೆ ಬರಬಹುದಾದ ಸಾಧ್ಯತೆ ಇದೆ — ಜಾಗರೂಕರಾಗಿರಿ AC ಅನ್ನು 24–25°C ನಲ್ಲಿ ಇರಿಸಿ ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ ಈ ಮಾಹಿತಿ ಬಹಳ ಮುಖ್ಯ! ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಕ್ಷಣ ಹಂಚಿಕೊಳ್ಳಿ
    1
    ರಾಜ್ಯದಲ್ಲಿ ಭಾರೀ ಬಿಸಿಗಾಳಿ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.
ಏಪ್ರಿಲ್ 29 ರಿಂದ ಮೇ 12 ರವರೆಗೆ ತಾಪಮಾನವು 45°C ರಿಂದ 55°C ವರೆಗೆ ಏರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ
ಅತ್ಯಾವಶ್ಯಕವಲ್ಲದ ಹೊರಗಿನ ಚಟುವಟಿಕೆಗಳನ್ನು ತಪ್ಪಿಸಿ.
ಮುಖ್ಯ ಎಚ್ಚರಿಕೆಗಳು:
ಉಸಿರಾಟ ತೊಂದರೆ / ತಲೆ ಸುತ್ತು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಕಾರಿನಲ್ಲಿ ಲೈಟರ್, ಬ್ಯಾಟರಿ, ಪಾನೀಯಗಳು ಇಡಬೇಡಿ
ಗ್ಯಾಸ್ ಸಿಲಿಂಡರ್ ಬಿಸಿಲಿನಲ್ಲಿ ಇರಿಸಬೇಡಿ
ಸಾಕಷ್ಟು ನೀರು, ಮಜ್ಜಿಗೆ, ತಂಪು ಪಾನೀಯಗಳನ್ನು ಸೇವಿಸಿ
ಹೆಚ್ಚುವರಿ ಎಚ್ಚರಿಕೆ:
ಬಿಸಿಯಿಂದ ಹಾವು-ಚೇಳುಗಳು ಮನೆಗೆ ಬರಬಹುದಾದ ಸಾಧ್ಯತೆ ಇದೆ — ಜಾಗರೂಕರಾಗಿರಿ
AC ಅನ್ನು 24–25°C ನಲ್ಲಿ ಇರಿಸಿ
ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ
ಈ ಮಾಹಿತಿ ಬಹಳ ಮುಖ್ಯ!
ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಕ್ಷಣ ಹಂಚಿಕೊಳ್ಳಿ
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    19 hrs ago
  • ಇಳಕಲ್ಲ : ಗ್ಯಾಸ್ ಸಿಲಿಂಡರಗಾಗಿ ೧ ಮೀಟರ್ ಉದಕ್ಕೂ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ನಗರದ ಎಚ್.ಪಿ.ಗ್ಯಾಸ್ ಗೋಡಾನ್ ಮುಂದೆ ಶನಿವಾರ ಕಂಡು ಬಂದಿತು. ಅಮೇರಿಕಾ , ಇರಾನ್ , ಇಸ್ರೇಲ್ ದೇಶದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವದ್ದರಿAದ ರಾಜ್ಯದ ಜನರು ಹೈರಾಣಾಗಿದ್ದಾರೆ. ಎಲ್‌ಪಿಜಿ ಗ್ಯಾಸ್ ಅಭಾವದಿಂದಾಗಿ ಜನರು ಗ್ಯಾಸ್ ಗೋಡಾನ್ ಹತ್ತಿರ ದಿನನಿತ್ಯ ಸುಡುವ ಬಿಸಲಿನಲ್ಲಿ ನಿಂತು ಗ್ಯಾಸ್ ಗಾಗಿ ಕಾಯುತ್ತಿರುವ ಸನ್ನಿವೇಶ ನೋಡಿದರೇ ಹೃದಯ ಚುರು ಎನ್ನುತ್ತಿದೆ, ಸುಡುವ ಬಿಸಿನಲಿನಲ್ಲಿಯೇ ವಯೋವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರು ಒಂದು ದಿನದ ಕೆಲಸವನ್ನು ಬಿಟ್ಟು ಸಿಲಿಂಡರ್ ಗಾಗಿಯೇ ಒಂದು ದಿನ ಕಾಯ್ದು ತೆಗೆದುಕೊಂಡು ಹೋಗುವಂತಹÀ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಹೊಡೆತದಿಂದ ಮುಚ್ಚುತ್ತಿರುವ ಹೋಟೆಲ್: ನಗರದಲ್ಲಿನ ದೊಡ್ಡ ದೊಡ್ಡ ಹೋಟೆಲ್‌ಗಳಿಗು ಗ್ಯಾಸ್ ಬಿಸಿ ತಟ್ಟಿದ್ದರಿಂದ ಕೆಲವೊಂದಿಷ್ಟು ಹೋಟೇಲ್‌ಗಳಲ್ಲಿ ತಿಂಡಿಗಳು ಸಿಗುತ್ತಿಲ್ಲ, ಕೆಲವೊಂದಿಷ್ಟು ಹೋಟೆಲ್ ಗಳು ಬಂದಾದರೇ, ಇನ್ನೋ ಕೆಲವೊಂದಿಷ್ಟು ಹೋಟೆಲನಲ್ಲಿ ಗ್ಯಾಸ್ ತೆಗೆದು ಸೌದ ಒಲೆಯಿಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ. * ಇಂತಹ ಸುಡುವ ಬಿಸಲಿನಲ್ಲಿಯೇ ಗ್ಯಾಸ್ ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಗ್ಯಾಸ್ ಏಜೆನ್ಸಿ ಮಾಲೀಕರು ಅಥವಾ ಸಿಬ್ಬಂದಿ ವರ್ಗದವರು ಮಾಡಿಲ್ಲ - ಮಹಾಂತೇಶ ವಕಲಕುಂಟಿ, ಕರವೇ ಗೌರವಾಧ್ಯಕ್ಷ ಇಳಕಲ್ಲ.
    1
    ಇಳಕಲ್ಲ : ಗ್ಯಾಸ್ ಸಿಲಿಂಡರಗಾಗಿ ೧ ಮೀಟರ್ ಉದಕ್ಕೂ  ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ನಗರದ ಎಚ್.ಪಿ.ಗ್ಯಾಸ್ ಗೋಡಾನ್ ಮುಂದೆ ಶನಿವಾರ ಕಂಡು ಬಂದಿತು. 
ಅಮೇರಿಕಾ , ಇರಾನ್ , ಇಸ್ರೇಲ್ ದೇಶದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವದ್ದರಿAದ ರಾಜ್ಯದ ಜನರು ಹೈರಾಣಾಗಿದ್ದಾರೆ. 
ಎಲ್‌ಪಿಜಿ ಗ್ಯಾಸ್ ಅಭಾವದಿಂದಾಗಿ ಜನರು ಗ್ಯಾಸ್ ಗೋಡಾನ್ ಹತ್ತಿರ ದಿನನಿತ್ಯ ಸುಡುವ ಬಿಸಲಿನಲ್ಲಿ ನಿಂತು ಗ್ಯಾಸ್ ಗಾಗಿ ಕಾಯುತ್ತಿರುವ ಸನ್ನಿವೇಶ ನೋಡಿದರೇ ಹೃದಯ ಚುರು ಎನ್ನುತ್ತಿದೆ, ಸುಡುವ ಬಿಸಿನಲಿನಲ್ಲಿಯೇ ವಯೋವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರು ಒಂದು ದಿನದ ಕೆಲಸವನ್ನು ಬಿಟ್ಟು ಸಿಲಿಂಡರ್ ಗಾಗಿಯೇ ಒಂದು ದಿನ ಕಾಯ್ದು ತೆಗೆದುಕೊಂಡು ಹೋಗುವಂತಹÀ ಪರಿಸ್ಥಿತಿ ನಿರ್ಮಾಣವಾಗಿದೆ. 
ಗ್ಯಾಸ್ ಹೊಡೆತದಿಂದ ಮುಚ್ಚುತ್ತಿರುವ ಹೋಟೆಲ್: ನಗರದಲ್ಲಿನ ದೊಡ್ಡ ದೊಡ್ಡ ಹೋಟೆಲ್‌ಗಳಿಗು ಗ್ಯಾಸ್ ಬಿಸಿ ತಟ್ಟಿದ್ದರಿಂದ ಕೆಲವೊಂದಿಷ್ಟು ಹೋಟೇಲ್‌ಗಳಲ್ಲಿ ತಿಂಡಿಗಳು ಸಿಗುತ್ತಿಲ್ಲ, ಕೆಲವೊಂದಿಷ್ಟು ಹೋಟೆಲ್ ಗಳು ಬಂದಾದರೇ, ಇನ್ನೋ ಕೆಲವೊಂದಿಷ್ಟು ಹೋಟೆಲನಲ್ಲಿ ಗ್ಯಾಸ್ ತೆಗೆದು ಸೌದ ಒಲೆಯಿಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ. 
* ಇಂತಹ ಸುಡುವ ಬಿಸಲಿನಲ್ಲಿಯೇ ಗ್ಯಾಸ್ ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಗ್ಯಾಸ್ ಏಜೆನ್ಸಿ ಮಾಲೀಕರು ಅಥವಾ ಸಿಬ್ಬಂದಿ ವರ್ಗದವರು ಮಾಡಿಲ್ಲ - ಮಹಾಂತೇಶ ವಕಲಕುಂಟಿ, ಕರವೇ ಗೌರವಾಧ್ಯಕ್ಷ ಇಳಕಲ್ಲ.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    11 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    5 hrs ago
  • Snake rauf 9916403448
    1
    Snake rauf 9916403448
    user_ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    Animal rescue service ಗದಗ, ಗದಗ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.