ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು, ನಿವೃತ್ತ ನೌಕರರಿಗೆ ಸನ್ಮಾನ ಶಿಕಾರಿಪುರ. ಸಹೃದಯ ನೌಕರರ ಟ್ರಸ್ಟ್ (ರಿ,) ಬಿಳವಾಣಿ ಗ್ರಾಮದ ನೌಕರರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದು ಮುಖ್ಯೋಪಾಧ್ಯಾಯ ಗಣಪತಿ ಹಚ್.ಜಿ. ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಹೃದಯ ನೌಕರರ ಟ್ರಸ್ಟ್ ನ ಅಧ್ಯಕ್ಷ ಕೆ.ಎಚ್ .ಪುಟ್ಟಪ್ಪ ಬಿಳವಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಮದ ನೌಕರರೆಲ್ಲರೂ ಸಂಘಟಿತರಾಗಿ ಸಹೃದಯ ನೌಕರರ ಟ್ರಸ್ಟ್ ಅನ್ನು ಸ್ಥಾಪನೆ ಮಾಡಿಕೊಂಡಿದ್ದು, ಪ್ರತಿ ವರ್ಷವೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ವನಮಹೋತ್ಸವ, ಆರೋಗ್ಯ ತಪಾಸಣೆ, ಶಾಲೆಗಳಿಗೆ ಬಣ್ಣ, ಕ್ರೀಡಾ ಚಟುವಟಿಕೆಗಳಿಗೆ ಪುರಸ್ಕಾರ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ದ್ವಿತೀಯ ವರ್ಷದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ, ಕ್ರೀಡಾ ಸಾಧಕರಿಗೆ ಸನ್ಮಾನ, ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ಇನ್ನಿತರ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆಂದು ಅಧ್ಯಕ್ಷ ಕೆ.ಎಚ್. ಪುಟ್ಟಪ್ಪ ಬಿಳವಾಣಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಎಸ್. ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿರುವರು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಭಾಗವಹಿಸುವರು. ಟ್ರಸ್ಟ್ ನ ಗೌರವಾಧ್ಯಕ್ಷ ಬಸವರಾಜ ಎಸ್, ಪ್ರಧಾನ ಕಾರ್ಯದರ್ಶಿ ರಾಜಪ್ಪ ಎನ್, ಉಪಾಧ್ಯಕ್ಷರಾದ ಡಾ. ವಿರುಪಾಕ್ಷಪ್ಪ ವೈ.ಕೆ, ಅರುಣ್ ಕುಮಾರ್ ಎನ್ .ಪಿ, ಖಜಾಂಚಿ ದಿಡ್ಡಪ್ಪ ಜೆ.ಎಚ್, ಸದಸ್ಯರಾದ ತಮ್ಮಣ್ಣಪ್ಪ ಕೆ.ಬಿ, ಯಲ್ಲಮ್ಮ ಕೆ.ಬಿ, ವೀರೇಶ್ ಏನ್, ಕೆ.ಎಚ್. ಮಾರುತಪ್ಪ, ಡಾ. ರಾಮಪ್ಪ ಕೆ.ಬಿ, ಹೂವಪ್ಪ ಕೆ.ವಿ. ಸೋಮಶೇಖರ್ ಎಸ್, ಜಗದೀಶ್ ಕೆ.ಎನ್, ಜಿತೇಂದ್ರ ಸ್ವಾಮಿ, ಮಾಲತೇಶ ಟಿ. ರಾಜಶೇಖರ ಎನ್. ಪಿ. ಇತರ ಸದಸ್ಯರು ಭಾಗವಹಿಸಲಿದ್ದಾರೆ.

- ಶಿವಮೊಗ್ಗ: ನಗರದಲ್ಲಿ ಜೀವ ತೆಗೆಯುತ್ತಿರುವ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ ಮಾಡುತ್ತಿವೆ. ಒಂದು ಕಡೆ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಶಿವಮೊಗ್ಗದ ಹಂಪ್ ಗಳನ್ನು ಹುಡುಕಿ ಪರಿಶೀಲಿಸುತ್ತಿ ದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಎಸ್ ಪಿ ನಿಖಿಲ್ ಬಿ. ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸಿಬ್ಬಂದಿ ಗಳೊಂದಿಗೆ ಅವೈಜ್ಞಾನಿಕ ಹಂಪ್ ಗಳ ಹುಡುಕಾಟ ಆರಂಭಿಸಿ ಸ್ಥಳ ಪರಿಶೀಲಿಸಿ, ಸರಿ ಪಡಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿಸುವ ಉದ್ದೇಶದಿಂದ ಹಾಕಲಾದ ಹಂಪ್ ಗಳೇ ಜನರ ಜೀವಗಳ ಜೊತೆ ಆಟವಾಡಲಾರಂಭಿಸಿದ್ದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಒಂದೆರಡು ಕಡೆ ಪ್ರಮುಖ ಜಾಗಗಳಲ್ಲಿ ಹಂಪ್ ಗಳನ್ನು ಹಾಕಲು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿದಾಗ ಕೆಲವು ಕಡೆ ಜನರೇ ಒತ್ತಡ ಮಾಡಿ ಹಲವು ಕಡೆ ಹಂಪ್ ಗಳನ್ನು ಹಾಕಿಸಿಕೊಂಡಿದ್ದರು. ಅಪಘಾತ ಸಂಭವಿಸಿದ ರಸ್ತೆಗಳಲ್ಲಿರುವ ಹಂಪ್ ಗಳ ಬಳಿ ಎರಡೂ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಅವುಗಳನ್ನು ತೆಗೆಸುವ ಅಥವಾ ಸರಿ ಮಾಡುವ ಕೆಲಸ ತಕ್ಷಣದಿಂದ ಮಾಡುತ್ತಿರುವುದರಿಂದ ಬಹಳಷ್ಟು ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ.1
- ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ನಿನ್ನೆಯಿಂದ ನಡೆಯುತ್ತಿದ್ದು ಎರಡನೇ ದಿನವಾದ ಇಂದು ಬುಧವಾರದ ಶ್ರೀ ದೇವಿಯ ಅಲಂಕಾರ ಮತ್ತು ಪೂಜೆ2
- ಭದ್ರಾವತಿ ತಾಲ್ಲೂಕು ಬಂಜಾರ ಸಂಘ ಹಾಗೂ ಸಮಾಜದ ವತಿಯಿಂದ ಅದ್ದೂರಿಯಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ1
- ದಾವಣಗೆರೆ : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆ ಭಾವನೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ದಾವಣಗೆರೆ ನಗರದಲ್ಲಿ ಎಸ್ಪಿ ಶೇಖರ್ ಹೆಚ್ ಟಿ ಐಪಿಎಸ್ ರವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಫಥ ಸಂಚಲನವು ನಗರದ ಹೊಂಡದ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತ, ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತಕ್ಕೆ ಮುಕ್ತಾಯವಾಗಿತು. ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತದಲ್ಲಿ ಸಮಾಪ್ತಿಯಾಯಿತು. ಪೊಲೀಸ್ ಪಥ ಸಂಚಲನದಲ್ಲಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ರವರು, ಪೊಲೀಸ್ ನಿರೀಕ್ಷಕರಾದ ಶ್ರೀ ವಸಂತ್, ಶ್ರೀ ಸುನೀಲ್ ಕುಮಾರ್, ಶ್ರೀಮತಿ ಶಿಲ್ಪಾ, ಶ್ರೀ ನಂಜುಂಡಸ್ವಾಮಿ, ಶ್ರೀ ಮಂಜುನಾಥ ಕುಪ್ಪೇಲೂರು, ಪಿ ಎಸ್ ಐ ರವರಾದ ಶ್ರೀ ರವಿನಾಯ್ಕ, ಶ್ರೀ ಸಚಿನ್, ಶ್ರೀ ಮತಿ ಶಕುಂತಲಾ ಇತರರು, ಆರ್ ಎ ಎಫ್ ತಂಡದ ಪೊಲೀಸ್ ನಿರೀಕ್ಷಕರಾದ ಶ್ರೀ ರಾಜು ಹಾಗೂ ಸಿಬ್ಬಂದಿಗಳು, ನಗರ ಪೊಲೀಸ್ ಹಾಗೂ ಡಿ ಎ ಆರ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ರಾಜು4
- ಹಾವೇರಿ ಜಿಲ್ಲೆ, ಸವಣೂರು ತಾಲೂಕ್ ಮಾದಾಪುರ ಗ್ರಾಮದ ಲಾಲ್ ಸಾಬ ಉಡೆದ ಎಂಬುವರಿಗೆ ಸೇರಿದ ಗುಡಿಸಲು 5 ಕೆಜಿ ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಪರಿಣಾಮ , ಗುಡಿಸಿಲಲ್ಲಿ ಇದ್ದ ಮೆಕ್ಕೆಜೋಳದ ಪಟ್ಟಿ ಗುಡಿಸಲಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಬಸ್ಮ ಮನೆ ಇಲ್ಲದೆ ಬೀದಿಗೆ ಬಂದ ಕುಟುಂಬ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೀದಿಗೆ ಬಂದ ಕುಟುಂಬಕ್ಕೆ ಆಸರೆ ನೀಡಬೇಕೆಂದು ನಮ್ಮ ಕಳಕಳಿ,4
- ಭಂದುಗಳೇ. 🙏 ದಿನಾಂಕ 18-2-26ರಂದು 5:30 ಸಮಯ ದಂದು ಹೊಳಲ್ಕೆರೆ -ದಾವಣಗೆರೆ ಮುಖ್ಯ ರಸ್ತೆ ಚಿಕ್ಕಜಾಜೂರು ರೈಲ್ವೆ ಗೇಟ್ ಹತ್ತಿರ ಪೊಲೀಸ್ ರವರು ವಾಹನ ನಿಲ್ಲಿಸಿ ಫೈನ್ ಹಾಕುತ್ತಿದ್ದಾರೆ ಆದರೆ ಇಲ್ಲಿ ಗಮನಿಸಬಹುದು ಎಷ್ಟು ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದಾರೆ ಹಾಗೂ ಎಷ್ಟು ಇತರೆ ವಾಹನ ಹೋಗುತ್ತಿದವೇ ಪೋಲೀಸ್ ಅಧಿಕಾರಿಗಳು ಕೇವಲ ಹೊರ ಜಿಲ್ಲೆಯ ವಾಹನ ನಿಲ್ಲಿಸಿ ಫೈನ್ ಹಾಕುವುದು ಎಷ್ಟು ಸರಿ. ಜೈ ಕೆ ಆರ್ ಎಸ್4
- ಬೆಳಗಾವಿ ನಗರದ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬಲು ಜೋರಾಗಿ ನಡೆಯುತ್ತಿರುವ ಮಟಕಾ ದಂಧೆ ಕಡಿವಾಣ ಯಾವಾಗ1
- ಬೀಡಾಡಿ ದನಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕರು. ಬೀಡಾಡಿ ದನಗಳನ್ನ ಹಿಡಿದು ಗೋಶಾಲೆಗೆ ಬಿಡಲು ಮುಂದಾದ ನಗರಸಭೆ.. ಚಳ್ಳಕೆರೆ ನಗರದ ತರಕಾರಿ ಮಾರುಕಟ್ಟೆ ಮುಖ್ಯರಸ್ತೆ ಸೇರಿದಂತೆ ನಗರದ ತುಂಬೆಲ್ಲಾ ಸಾರ್ವಜನಿಕರಿಗೆ ಉಪಟಲ ನೀಡುತ್ತಿದ್ದ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬೀಡಲು ನಗರಸಭೆ ಮುಂದಾಗಿದೆ. ನಗರಸಭೆ ಪ್ರಭಾರ ಪೌರಯಯಕರಾದ ಡಾ.ನಾಗವೇಣಿ (ಕೆಎಎಸ್) ಇವರ ಸೂಚನೆ ಮೇರೆಗೆ ನಗರಸಭೆ ಇಂಜಿನಿಯರ್ ನರೇಂದ್ರಬಾಬು ಆರೋಗ್ಯ ನಿರೀಕ್ಷಕರಾದ ಗೀತಾ, ಗಣೇಶ್ ಹಾಗೂ ಸಾಗರ್ ಇವರ ನೇತೃತ್ವದಲ್ಲಿ ಚಳ್ಳಕೆರೆ ಪಶು ಸಂಗೋಪನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಇಂದು ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾಗಿದ್ದಾರೆ.. ಇದೆ ತಿಂಗಳು 24 ನೇ ತಾರೀಖಿನ ವರೆಗೆ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲಾಗುವುದು ಬೀಡಾಡಿದನಗಳ ಮಾಲೀಕರು ಹೆಚ್ಚೆತ್ತುಕೊಂಡು ತಮ್ಮ ಜಾನುವಾರುಗಳನ್ನ ಬೀದಿಗೆ ಬೀಡದಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಬೀದಿದನಗಳನ್ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಬಾರಿ ಪೌರಯುಕ್ತೆ ಡಾ.ನಾಗವೇಣಿ ಎಚ್ಚರಿಕೆ ನೀಡಿದ್ದಾರೆ..1