ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಿಂದ ಪತ್ರಕರ್ತರಿಗೆ ಉಚಿತ ಹೆಲ್ಮೆಟ್ ವಿತರಣೆ ಶಿಡ್ಲಘಟ್ಟ:ರಸ್ತೆ ಅಪಘಾತಗಳನ್ನು ತಡೆದು ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನ ಪತ್ರಕರ್ತರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಉಪನಿರೀಕ್ಷಕಿ ಶ್ಯಾಮಲಾ ಅವರು ತಾಲ್ಲೂಕಿನ ವಿವಿಧ ಮುದ್ರಿತ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸಿ, ರಸ್ತೆ ಸುರಕ್ಷತೆ ಪಾಲನೆಯ ಅಗತ್ಯತೆ ಕುರಿತು ಮಹತ್ವದ ಸಂದೇಶ ನೀಡಿದರು. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಿಂದ ದಿಬ್ಬೂರಹಳ್ಳಿ ಬಸ್ ನಿಲ್ದಾಣದವರೆಗೆ ಪೊಲೀಸ್ ಸಿಬ್ಬಂದಿ ಹಾಗೂ ಪತ್ರಕರ್ತರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಬೈಕ್ ರ್ಯಾಲಿ ನಡೆಸಿದರು. ಈ ವೇಳೆ “ಹೆಲ್ಮೆಟ್ ಧರಿಸಿ – ಜೀವ ರಕ್ಷಿಸಿ”, “ರಸ್ತೆ ನಿಯಮ ಪಾಲನೆ ನಮ್ಮ ಹೊಣೆ” ಎಂಬ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಸ್ಐ ಶ್ಯಾಮಲಾ ಅವರು, ಪತ್ರಕರ್ತರು ದಿನನಿತ್ಯ ಹಗಲು-ರಾತ್ರಿ ಎನ್ನದೆ ಸುದ್ದಿಗಾಗಿ ನಿರಂತರವಾಗಿ ಸಂಚರಿಸಬೇಕಾಗುತ್ತದೆ. ಹೆಚ್ಚಿನವರು ದ್ವಿಚಕ್ರ ವಾಹನಗಳನ್ನೇ ಬಳಸುವ ಕಾರಣ ಅವರ ಸುರಕ್ಷತೆ ಪೊಲೀಸ್ ಇಲಾಖೆಗೆ ಅತ್ಯಂತ ಮುಖ್ಯವಾಗಿದೆ. ಪತ್ರಕರ್ತರ ಜೀವವೂ ನಮಗೆ ಅಮೂಲ್ಯವಾಗಿದೆ ಎಂದು ಹೇಳಿದರು. ಪತ್ರಕರ್ತರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡಬಹುದು. ಜನರು ಪತ್ರಕರ್ತರನ್ನು ಮಾದರಿಯಾಗಿ ತೆಗೆದುಕೊಂಡು ರಸ್ತೆ ನಿಯಮಗಳನ್ನು ಪಾಲಿಸಲು ಪ್ರೇರೇಪಿತರಾಗುತ್ತಾರೆ. ಈ ಉದ್ದೇಶದಿಂದಲೇ ಪತ್ರಕರ್ತರನ್ನು ರಸ್ತೆ ಸುರಕ್ಷತಾ ಜಾಗೃತಿಯ ಪ್ರಮುಖ ಪಾಲುದಾರರನ್ನಾಗಿ ಮಾಡುವ ನಿಟ್ಟಿನಲ್ಲಿ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ಸಪ್ತಾಹವಾಗಿ ಆಚರಿಸಲಾಗುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಜೊತೆಗೆ ಹೆಲ್ಮೆಟ್ ಧರಿಸದೇ, ಚಾಲನಾ ಪರವಾನಗಿ ಹಾಗೂ ಇನ್ಸೂರೆನ್ಸ್ ಇಲ್ಲದೆ ಸಂಚರಿಸುವ ವಾಹನಗಳ ಮೇಲೆ ವಿಶೇಷ ತಪಾಸಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಪೊಲೀಸರ ಭಯದಿಂದಲ್ಲ, ಸ್ವಂತ ಜೀವ ರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಚಾಲನಾ ಪರವಾನಗಿ ಹಾಗೂ ಇನ್ಸೂರೆನ್ಸ್ ಹೊಂದಿರುವುದು ಅವಶ್ಯಕವಾಗಿದ್ದು, ಅಪಘಾತದ ಸಂದರ್ಭದಲ್ಲಿ ಇನ್ಸೂರೆನ್ಸ್ ಆರ್ಥಿಕ ಹೊರೆ ಕಡಿಮೆ ಮಾಡುತ್ತದೆ. ಕುಟುಂಬದ ಭವಿಷ್ಯವನ್ನು ಕಾಪಾಡುವ ಉದ್ದೇಶದಿಂದಲೇ ಈ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.

- ಶಿಡ್ಲಘಟ್ಟ: ಜಯಂತಿಗಳ ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ! ಶಿಡ್ಲಘಟ್ಟ ತಹಶೀಲ್ದಾರ್ ಗಗನ ಸಿಂಧು ಕಟ್ಟುನಿಟ್ಟಿನ ಸೂಚನೆ!1
- ಶ್ರೀನಿವಾಸಪುರ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವಹಿವಾಟು ವಿರೋಧಿಸಿ ಸುದ್ದಿ ಗೋಷ್ಠಿ1
- ಮಾಚಿದೇವರ ಜಯಂತಿ ದಿನವೇ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲು ಶಾಸಕರ ದಿನಾಂಕವನ್ನು ನಿಗದಿಪಡಿಸಿ ಮುಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಲಾಗುವುದು ಎಂದು ಮುಖಂಡ ವಿಜಯ್ ಕುಮಾರ್ ತಿಳಿಸಿದರು .... ಹನೂರು ಪಟ್ಟಣದ ಆರ್ ಎಂ ಸಿ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕದ ಕಮಿಟಿ ಸಭೆ ಹಾಗೂ ಮಾಚಿದೇವರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು . ಜಿಲ್ಲಾ ಕಮಿಟಿ ರಚನೆ ಮಾಡಲು ತಾಲೂಕಿನ ಸಮುದಾಯದ ಜನ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಪದಾಧಿಕಾರಿಗಳ ಬಗ್ಗೆ ಆಯ್ಕೆ ಮಾಡಲು ಸಹಮತವಿದೆ ಜೊತೆಗೆ ಪಟ್ಟಣದಲ್ಲಿ ಫೆಬ್ರವರಿ 1,ರಂದು ಮಾಚಿದೇವರ ಜಯಂತಿ ದಿನವೇ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಶಾಸಕರ ದಿನಾಂಕವನ್ನು ನಿಗದಿಪಡಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು . ಸಮುದಾಯದ ದಶಕಗಳ ಬೇಡಿಕೆ : ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಈ ಹಿಂದೆ ಜನಪ್ರತಿನಿಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೂ ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದ ಸಮುದಾಯ ಭವನಕ್ಕೆ ಶಾಸಕ ಎಂಆರ್ ಮಂಜುನಾಥ್ ಅವರು ಅನುದಾನ ನೀಡಿದ್ದಾರೆ ಅವರ ಉಪಸ್ಥಿತಿಯಲ್ಲಿಯೇ ಭವನ ನಿರ್ಮಾಣ ಮಾಡಲು ದಿನಾಂಕ ನಿಗದಿಪಡಿಸಿ ಹಲವು ವರ್ಷಗಳ ಬೇಡಿಕೆ ಈಡೇರಿಸಲು ತಳ ಸಮುದಾಯಗಳ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುವ ಶಾಸಕರು ಪಟ್ಟಣದಲ್ಲಿ ಉತ್ತಮವಾದ ಸಮುದಾಯ ಭವನ ನಿರ್ಮಾಣ ಮಾಡಲು ಸಮುದಾಯ ಜನತೆಗೆ ಭರವಸೆ ನೀಡಿದ್ದಾರೆ ಹೀಗಾಗಿ ಸರ್ಕಾರದಿಂದ ಸಿಗುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಮುದಾಯ ಭವನ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಪ್ರತಿಯೊಬ್ಬರು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಕೃಷ್ಣಮೂರ್ತಿ ರುದ್ರಣ್ಣ ಮಾದೇವ್ ಕುಮಾರ್ ನಂದೀಶ್ ಶಾಂತರಾಜು ಹಾಗೂ ಜಿಲ್ಲೆಯ ತಾಲೂಕಿನ ವಿವಿಧ ಭಾಗದ ಮುಖಂಡರು ಉಪಸ್ಥಿತರಿದ್ದರು1
- ಶ್ರೀ ಬೈಯಮ್ಮ ತಾಯಿ ಹಾಗೂ ಆಂಜೆನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಾಲಿ ಬಾಲ್ ಹಾಡುವ ಮೂಲಕ ಪಂದ್ಯಾವಳಿಗೆ ಶಾಸಕ ಎಂ.ಆರ್ ಮಂಜುನಾಥ್ ರವರು ಚಾಲನೆ ನೀಡಿದರು. ತಾಲೂಕಿನ ರಾಮಪುರದ ಶ್ರೀ ಬೈಯಮ್ಮ ತಾಯಿ ಹಾಗೂ ಆಂಜೆನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಇಂದಿರಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ರಾಮಪುರದಲ್ಲಿ ಆಯೋಜಿಸಿದ್ದ ವಾಲಿ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು.. ಇದೆ ಸಮಯದಲ್ಲಿ ಮುನೇಶ್, ಕೃಷ್ಣಮೂರ್ತಿ,ಎಸ್ ಕುಮಾರ್, ವಿಶ್ವ , ಶಿವ, ಎಂ.ಆರ್ ಬಾಬು, ಮಾಜಿ ಸೈನಿಕರಾದ ಮಾದೇಶ್, ರಾಜೇಂದ್ರ, ಮುತ್ತುರಾಜಮ್ಮ, ಮೂರ್ತಿ,ಪಾಳ್ಯ ಸೀನಾ,ಚಿನ್ನವೆಂಕಟ್, ವಿಜಯ್ ಕುಮಾರ್, ನಟರಾಜು ಗೌಡ, ಗೋವಿಂದ ಸೇರಿದಂತೆ ಇನ್ನಿತರ ಮುಖಂಡರುಗಳು ಇದ್ದರು..4
- ಮಲ್ಲೂರಹಟ್ಟಿ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಬೀಕರ ಅಪಘಾತ ನಡೆದು ಮಲ್ಲೂರಹಟ್ಟಿ ಗ್ರಾಮದ ಬೈಕ್ ಸವಾರ 19 ವರ್ಷದ ತಿಪ್ಪೇಸ್ವಾಮಿ ಸ್ಥಳದಲ್ಲೆ ಮೃತಪಟ್ಟಿದ್ದು ಇನ್ನೊಬ್ಬ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ1
- ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆ ಹಣ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರಿಂದ ಪ್ರತಿಭಟನೆ: ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಚಳ್ಳಕೆರೆ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಗುದ್ದಾಟಗಳಿಂದಾಗಿ ಭದ್ರಾ ಮೇಲ್ದಂಡೆ ಯೋಜನೆ ವಿಳಂಬವಾಗುತ್ತಿದ್ದು ಮಧ್ಯ ಕರ್ನಾಟಕದ ಚಿತ್ರದುರ್ಗ ತುಮಕೂರು ದಾವಣಗೆರೆ ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಈಗಾಗಲೇ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ಹಣವನ್ನು ಬಜೆಟ್ನಲ್ಲಿ ಘೋಷಣೆ ಮಾಡಿ ಹಲವು ವರ್ಷಗಳ ಕಳೆದರೂ ಸಹ ಇದುವರೆಗೂ ಬಿಡುಗಡೆ ಮಾಡಿಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಈ ಹಣ ಬಿಡುಗಡೆ ಮಾಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಬೆಳೆ ಬೇಯಿಸಿಕೊಂಡು ಕಾಲಹರಣ ಮಾಡಿಕೊಂಡು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಈಗಾಗಲೇ ರೈತ ಸಂಘ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಭೆ ನಡೆಸಿದ್ದು ಮುಂದಿನ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದ ವೇಳೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಎಲ್ಲಾ ರೈತ ಸಂಘಟನೆಗಳ ಸದಸ್ಯರು ಒಗ್ಗಟ್ಟಾಗಿ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಚಿತ್ರದುರ್ಗ ಜಿಲ್ಲೆ, ಬರಪೀಡಿತ ಜಿಲ್ಲೆಯಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು ರಾಜಕೀಯ ಮುಖಂಡರು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ರೈತರನ್ನು ವಲೈಸಲು ಭದ್ರಾ ಮೇಲ್ದಂಡೆ ಯೋಜನೆ ಜಾರಿಯ ಬಗ್ಗೆ ಮಾತನಾಡುತ್ತಾರೆ ಆದರೆ ಇದುವರೆಗೂ ಜಾರಿಗೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಸದರು ಶಾಸಕರು ವಿಫಲರಾಗಿದ್ದಾರೆ ಈ ಭಾಗದ ರೈತರು ಶೇಂಗಾ ತೊಗರಿ ಮೆಕ್ಕೆಜೋಳ ಈರುಳ್ಳಿ ಟೊಮೆಟೊ ಗಳಂತಹ ಬೆಳೆಗಳನ್ನು ಅವಲಂಬಿಸಿದ್ದು ಮಳೆಯ ಅಭಾವದಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಭದ್ರಾ ಮೇಲ್ದಂಡೆ ಯೋಜನೆ ಸಮರ್ಪಕವಾಗಿ ಜಿಲ್ಲೆಯಲ್ಲಿ ಜಾರಿಯಾದರೆ ಜಿಲ್ಲೆಯ ಕೆರೆಗಳು ತುಂಬಿ ರೈತರಿಗೆ ಜೀವನಾಡಿ ಯಾಗುತ್ತವೆ ಇದುವರೆಗೂ ಸುಮಾರು 10.000 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಖರ್ಚಾಗಿದ್ದು ಆದರೂ ಸಹ ಯೋಜನೆ ಪೂರ್ಣಗೊಳ್ಳದೆ ವಿಳಂಬವಾಗುತ್ತಿದೆ ಯೋಜನೆ ವಿಳಂಬವಾದಂತೆಲ್ಲ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿದ್ದು ತ್ವರಿತ ಗತಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ 5300 ಕೋಟಿ ಬಿಡುಗಡೆ ಮಾಡಬೇಕು ಹಾಗೂ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆಗೊಳಿಸಿದರೆ ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಂಡು ರೈತರ ಬಾಳು ಹಸನಾಗುತ್ತದೆ ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ನೀರಾವರಿ ಸಂಘಟನೆಗಳ ಸದಸ್ಯರು ವಿವಿಧ ಸಂಘಟನೆಗಳ ರೈತರು ಒಗ್ಗಟ್ಟಾಗಿ ಹೋರಾಟ ಮಾಡಿ ಜಿಲ್ಲೆಯನ್ನು ಬಂದ್ ಮಾಡುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರೈತ ಮುಖಂಡರು ಉಪಸ್ಥಿತರಿದ್ದರು.1
- *ಭಾರತ ನಲ್ಲಿ ವೈರಲ್*1
- ಲಕ್ಷ್ಮಿಪುರದಲ್ಲಿ ನೂರಾಣಿ ಮಸ್ಜಿದ್ ಭವ್ಯ ಉದ್ಘಾಟನೆ ಸಚಿವ ಜಮೀರ್ ಅಹ್ಮದ್ ಖಾನ್, ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಭಾಗಿ....1