ಸೇಂಗಾ ಬೆಳೆಗೆ ವಿಮೆ ಕೊಡಿಸಲು ಸರ್ಕಾರದ ಜೊತೆ ಮಾತನಾಡುವದಾಗಿ ಶಾಸಕ ಟಿ. ರಘುಮೂರ್ತಿ ಭವಸೆ. ಸಿಎಲ್ ಕೆ: ಮಾ.21 ಸುದ್ದಿ.5 ವಿಜಯವಾಣಿ ಸುದ್ದಿಜಾಲ ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಶೇಂಗಾ ಬೆಳೆ ನಷ್ಟದ ರೈತರಿಗೆ ಬೆಳೆ ವಿಮೆ ಬಿಡುಗಡೆಗೆ ಸರ್ಕಾರದ ಹಂತದಲ್ಲಿ ಮಾತನಾಡುವುದಾಗಿ ಶಾಸಕ ಟಿ.ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಶನಿವಾರ ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದ ವೇಳೆ ಮಾತನಾಡಿದರು. ಮಳೆ ಕೊರತೆಯಿಂದ ಬೆಳೆ ನಷ್ಟ ಅದ ಕೂಡಲೇ ಪ್ರತಿ ಹಂತದಲ್ಲಿ ಹೋರಾಟ ಮಾಡಿದ ಫಲವಾಗಿ ತೊಗರಿ ಬೆಳೆಗಾರರಿಗೆ ಇದೇ ಮೊದಲ ಬಾರಿಗೆ ಮಧ್ಯಂತರ ಬೆಳೆ ನಷ್ಟದ ವಿಮೆ ಹಣ ಬಿಡುಗಡೆ ಆಗಿದೆ. ಅದೇರೀತಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಶೇಂಗಾ ಬೆಳೆ ನಷ್ಟದ ವರದಿ ಆಧರಿಸಿ ವಿಮೆ ಬಿಡುಗಡೆಗೆ ಕೃಷಿ ಸಚಿವರ ಬಳಿ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದರು. ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ. ಶಿವಲಿಂಗಪ್ಪ ಮಾತನಾಡಿ, ವಿಮಾ ಕಂಪನಿಗಳು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ಪ್ರಸಕ್ತ ವರ್ಷದ ಬೆಳೆ ಹಾನಿಗೆ ವಿಮೆ ಕೊಡುವುದಾಗಿ, ಕಂತು ಕಟ್ಡಿಸಿಕೊಂಡು ಹಿಂದಿನ ಏಳು ವರ್ಷಗಳ ಬೆಳೆಯ ಸರಾಸರಿ ಇಳುವರಿಗೆ ತಾಳೆ ಮಾಡುವುದರಿಂದ ರೈತರಿಗೆ ಮೋಸವಾಗುತ್ತಿದೆ. ಈ ನಿಯಮ ಬದಲಾಗಬೇಕು. ಬಯಲು ಸೀಮೆಯಲ್ಲಿ ಮಳೆ ನಂಬಿಕೊಂಡು ಕೃಷಿ ಮಾಡುವುದು ಕಷ್ಟ ಇದೆ. ಶಾಸಕರ ನೆರವಿನಿಂದ ಕೃಷಿ ಸಚಿವರು ಮತ್ತು ಇಲಾಖೆ ಆಯುಕ್ತರನ್ನು ಭೇಟಿ ಮಾಡಿ, ಹೋರಾಟ ನಡೆಸಿದ ಫಲವಾಗಿ, 3,850 ರೈತರಿಗೆ ಮಧ್ಯಂತರ ಬೆಳೆ ವಿಮೆ ಸಿಕ್ಕಿದೆ. ಬಹುತೇಕ ಶೇಂಗಾ ಬೆಳೆ ಕಳೆದುಕೊಂಡ ರೈತರಿಗೆ ವಿಮೆ ಬಿಡುಗಡೆ ಮಾಡಿಸಲು ಶಾಸಕರು ಶ್ರಮಿಸಬೇಕು ಎಂದು ಮನವಿ ಮಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಮಂಜುನಾಥ್, ಪ್ರಗತಿ ಪರ ರೈತ ಆರ್.ಎ. ದಯಾನಂದ ಮೂರ್ತಿ ಮಾತನಾಡಿದರು. ಈ ವೇಳೆ. ಭರತೇಶ್ ರೆಡ್ಡಿ, ವೀರಣ್ಣ, ಧನಂಜಯ ರೆಡ್ಡಿ, ಸಂದೀಪ್, ಸಿದ್ದೇಶ್ವರ ರೆಡ್ಡಿ ಇದ್ದರು.

- Sharanppa Sharanppaಹಾಸನ, ಹಾಸನ, ಕರ್ನಾಟಕsunda.mulak.etabekuon 23 March
- Sharanppa Sharanppaಹಾಸನ, ಹಾಸನ, ಕರ್ನಾಟಕedar.list.hakion 23 March
- ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ.... ಚಳ್ಳಕೆರೆ: ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಸ್ಟ್ರೀಟ್ ಡಾಗ್ಸ್‌ಗೆ ಆಹಾರ ನೀಡಲು ಚಳ್ಳಕೆರೆ ನಗರದದಲ್ಲಿ 20 ಸ್ಥಳಗಳನ್ನು ‘ಫೀಡಿಂಗ್ ಸ್ಪಾಟ್’ಗಳ ಗುರುತಿಸಲಾಗಿದ್ದು ಈಗಾಗಲೆ 9 ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ ಮಾಡಲಗಿದೆ ಎಂದು ಪೌರಯುಕ್ತೆ ಡಾ.ನಾಗವೇಣಿ (ಕೆ.ಎ.ಎಸ್)ತಿಳಿಸಿದ್ದಾರೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾನವ ಮತ್ತು ಸಮುದಾಯ ಪ್ರಾಣಿಗಳ ನಡುವೆ ಸಹ ಕಾಳ ದ ಗೆ ವೃದ್ಧಿಸಲು ಮತ್ತು ಸಂಘರ್ಷ ಕಡಿಮೆಗೊಳಿಸಲು ಬೀದಿ/ಸಮುದಾಯ ನಾಯಿಗಳಿಗೆ ಆಹಾರ ನೀಡುವ ಕಾರ್ಯವು ಮಹತ್ತರವಾಗಿದೆ. ಈ ರೀತಿ ವ್ಯವಸ್ಥಿತವಾಗಿ ಆಹಾರ ಒದಗಿಸುವುದರಿಂದ ಶ್ವಾನಗಳ ಹಸಿವು ನೀಗಿಸುವ ಮೂಲಕ ಅವುಗಳ ಕ್ರೂರಸ್ವಭಾವ ಮತ್ತು ಕಚ್ಚುವ ಪ್ರವೃತ್ತಿಯನ್ನು ಕಡಿಮೆಗೊಳಿಸಬಹುದಾಗಿದೆ. ಜತೆಗೆ ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಹಾಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ . ಫೀಡಿಂಗ್ ಸ್ಪಾಟ್‌ಗಳನ್ನು ಗುರುತಿಸಿರುವ ರಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ ನಾಗರಿಕರಿಗೆ ಮಾಹಿತಿ ಒದಗಿಸಲಾಗಿದೆ . ಯೋಜನೆ ಕೇವಲ ಪ್ರಾಣಿಗಳ ಕಲ್ಯಾಣಕ್ಕೆ ಮಾತ್ರವಲ್ಲ, ನಗರದಲ್ಲಿ ಮಾನವ-ಪ್ರಾಣಿ ಸಹಬಾಳ್ವೆಯತ್ತ ಒತ್ತು ನೀಡುತ್ತದೆ. ಬೀದಿ ನಾಯಿಗಳ ಸಮರ್ಥ ನಿರ್ವಹಣೆ ಮತ್ತು ನಿಯಂತ್ರಿತ ಬೆಳವಣಿಗೆ, ರಸ್ತೆ ಅಪಘಾತಗಳು ಮತ್ತು ಜನತೆ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಸಹಾಯಕ ಮಾಡುತ್ತದೆ. ಜೊತೆಗೆ, ಸಾರ್ವಜನಿಕರಲ್ಲಿ ಪ್ರಾಣಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಪ್ರೇರಣೆಯಾಗಿದೆ. ಜನ ವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ನಾಯಿಗಳು ಇರುವಂತಹ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಆಹಾರವನ್ನು ತಂದು ಇಲ್ಲಿ ಹಾಕುವುದರ ಮೂಲಕ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು..1
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕ್ರೈಸ್ತಭಾಂಧವರಿಂದ ಇಂದು ನಗರದ ಡಾ:ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರನ್ ಫಾರ್ ಜೀಸಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರು ರೈಟ್ ರೆವೆರೆಂಡ್ ಡಾ: ಜೋಸೆಫ್ ಅರಮಚ್ಚಾದತ್ ರವರು ವಿದ್ಯುಕ್ತ ವಾಗಿ ಚಾಲನೆ ನೀಡಿ ಮಾತನಾಡಿ, ಯೇಸು ಕ್ರಿಸ್ತನ ಮಾನವ ಕುಲಕ್ಕೆ ಮಾಡಿದ ತ್ಯಾಗದ ಬಲಿದಾನವನ್ನು ಸ್ಮರಿಸಿದರು. ರನ್ ಫಾರ್ ಜೀಸಸ್ ಮೆರವಣಿಗೆ ಯಲ್ಲಿ ಯೇಸುಕ್ರಿಸ್ತನ ತ್ಯಾಗ, ಬಲಿದಾನ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರದರ್ಶಿಸ ಲಾಯಿತು. ಕಾರ್ಯಕ್ರಮಕ್ಕೂ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಮೆರವಣಿಗೆ ಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ನೇತೃತ್ವದಲ್ಲಿ ನಡೆಯಿತು. ನಗರಸಭಾ ಸದಸ್ಯ ಜಾರ್ಜ್, ವಿಲ್ಸನ್ ಬಾಬು, ಸೂಡ ಸದಸ್ಯ ಫ್ರಾನ್ಸಿಸ್, ಆಶ್ರಯ ಸಮಿತಿ ಸದಸ್ಯ ವೆಂಕಟೇಶ್ ಇಮಾನು ವೇಲ್, ಎಂ.ಜಿ ರಾಮಚಂದ್ರ, ಮೋಸಸ್ ರೋಷಯ್ಯ, ಪಾಸ್ಟರ್ ಗಳಾದ ರೇಮಂಡ್, ಅಂತೋಣಿ ಪ್ರಕಾಶ್ ಸೇರಿದಂತೆ ಸಾವಿರಾರು ಕ್ರೈಸ್ತ ಭಕ್ತರು ಭಾಗವಹಿಸಿದ್ದರು. ಮೆರವಣಿಗೆ ಹಾಲಪ್ಪ ಸರ್ಕಲ್, ಮಾಧವ ಚಾರ್ ಸರ್ಕಲ್, ರಂಗಪ್ಪ ಸರ್ಕಲ್, ಮೂಲಕ ಕನಕ ಮಂಟಪ ಮೈದಾನದಲ್ಲಿ ಮುಕ್ತಾಯ ಗೊಂಡಿತು. ಮಧ್ಯಪ್ರಾಕ್ಷದ ಯುದ್ಧಗಳು ನಿಲ್ಲುವಂತೆ ಎಲ್ಲಾ ವೃತಗಳಲ್ಲಿ ಸಮಾಧಾನಕ್ಕಾಗಿ ಪಾಸ್ಟರ್ ಗಳಿಂದ ಪ್ರಾರ್ಥಿಸಲಾಯಿತು.1
- 👉 AEE ವೀರೇಶ್ ಮೇಲೆ ದಾಳಿ ಆರೋಪ 💥 📍 “ಸಲಾಂ ಬಳ್ಳಾರಿ” ಕಾರ್ಯಕ್ರಮದ ವೇಳೆ 👉 ಮಾತಿನ ಚಕಮಕಿ 🔥 👉 ನಂತರ ಹಲ್ಲೆ ನಡೆದಿದೆಯಂತೆ 😮 🗣️ ಶಾಸಕ ನಾರಾ ಭರತ್ ರೆಡ್ಡಿ: 👉 “ಅಧಿಕಾರಿಗಳ ಮೇಲೆ ಹಲ್ಲೆ ತಪ್ಪು” 👉 “ಪೂರ್ಣ ಮಾಹಿತಿ ಪಡೆದು ನ್ಯಾಯ ಕೊಡುತ್ತೇವೆ” ⚖️ 🗣️ ನೌಕರರ ಸಂಘ ಅಧ್ಯಕ್ಷ ಗೋವಿಂದ ಬಾಬು: 👉 “ಇದು ದುರ್ಘಟನೆ ಸಂಗತಿ” 👉 “ಅಧಿಕಾರಿಗಳಿಗೆ ಭದ್ರತೆ ಅಗತ್ಯ” ಅಧಿಕಾರಿಗಳ ಸುರಕ್ಷತೆ ಬಗ್ಗೆ ಚರ್ಚೆ ಹೆಚ್ಚಾಗಿದೆ ರಾಜಕೀಯವಾಗಿ ಪ್ರಕರಣಕ್ಕೆ ಮಹತ್ವ ಬಂದಿದೆ1
- ಸೂರ್ಯನ ಬಿಸಿಲಿನ ತಾಪಕ್ಕೆ ನೀರನ್ನು ಅರಸಿ ಬಂದ ನಾಯಿಗೆ. ನೀರುಣಿಸಿ ಮಾನವೀಯತೆ ಮೆರೆದ ಮಾನವ ನೀರನ್ನು ಅರಸಿ ಬಂದ ನಾಯಿಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬರು ನಾಯಿ ಯ ಬಾಯಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಮನೆಯ ಮುಂದೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿ ನ ವ್ಯವಸ್ಥೆ ಮಾಡಬೇಕಾಗಿರುವುದು ಮಾನವ ಧರ್ಮ ದಯವಿಟ್ಟು ಪ್ರಾಣಿ ಪಕ್ಷಿಗಳಿಗೆ ನಿಮ್ಮ ಮನೆ ಹಾಗೂ ಊರಿನಲ್ಲಿ ಕುಡಿಯುವುದಕ್ಕೆ ವ್ಯವಸ್ಥೆ ಮಾಡಿ .1
- ಕಡೂರು:ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ(26) ನೇಣಿಗೆ ಶರಣಾದವ. ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ. ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ. ಮದುವೆ ವಿಚಾರದಲ್ಲಿ ಮಾನಸಿಕವಾಗಿ ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- Post by Mayur TV Hangal YouTube c1
- Snake rauf 99164034481
- Post by Suresh Belagere1