Shuru
Apke Nagar Ki App…
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಏಳು ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬಿಳಿಗಿರಿರಂಗನ ಬೆಟ್ಟದ ಸರ್ಕಲ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಈ ಬೆಂಕಿ ವ್ಯಾಪಿಸಿದ್ದು, ಏಳು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಂಗಡಿಗಳಲ್ಲಿ ಅನಿಲ ಸಿಲಿಂಡರ್‌ಗಳು ಇದ್ದ ಕಾರಣ ಬೆಂಕಿಯನ್ನು ತಕ್ಷಣ ನಂದಿಸಲು ಸಾಧ್ಯವಾಗಲಿಲ್ಲ. ಜೊತೆಗೆ ರಾತ್ರಿ ಸಮಯದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದ್ದರಿಂದ ನೀರು ತರಲು ಸಾಧ್ಯವಾಗದೆ, ಬೆಂಕಿ ಇನ್ನಷ್ಟು ವ್ಯಾಪಿಸಲು ಕಾರಣವಾಯಿತು. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹನೂರು ನ್ಯೂಸ್ ಅಡ್ಡ
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಏಳು ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬಿಳಿಗಿರಿರಂಗನ ಬೆಟ್ಟದ ಸರ್ಕಲ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಈ ಬೆಂಕಿ ವ್ಯಾಪಿಸಿದ್ದು, ಏಳು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಂಗಡಿಗಳಲ್ಲಿ ಅನಿಲ ಸಿಲಿಂಡರ್‌ಗಳು ಇದ್ದ ಕಾರಣ ಬೆಂಕಿಯನ್ನು ತಕ್ಷಣ ನಂದಿಸಲು ಸಾಧ್ಯವಾಗಲಿಲ್ಲ. ಜೊತೆಗೆ ರಾತ್ರಿ ಸಮಯದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದ್ದರಿಂದ ನೀರು ತರಲು ಸಾಧ್ಯವಾಗದೆ, ಬೆಂಕಿ ಇನ್ನಷ್ಟು ವ್ಯಾಪಿಸಲು ಕಾರಣವಾಯಿತು. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಜನವರಿ 16 ರಂದು ಟೈ ಮಂಗಳೂರು ವತಿಯಿಂದ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ರಾಷ್ಟ್ರೀಯ ಸ್ಟಾರ್ಟಪ್ ದಿನವಾದ ಜ. 16 ರಂದು ಮಂಗಳೂರಿನಲ್ಲಿ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ಟೈಕಾನ್ ಮಂಗಳೂರು 2026, ಡಾ. ಟಿ ಎಂ ಏ ಪೈ ಕನ್ವೆನ್ನನ್ ಸೆಂಟರ್ ನಲ್ಲಿ ಜರುಗಲಿದೆ ಎಂದು ಟೈ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ರೋಹಿತ್ ಭಟ್ ತಿಳಿಸಿದ್ದಾರೆ. ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಪ್ರತಿನಿಧಿಗಳು, 50ಕ್ಕೂ ಅಧಿಕ ಹೂಡಿಕೆದಾರರು , 40ಕ್ಕೂ ಅಧಿಕ ಆಹ್ವಾನಿತ ಗಣ್ಯರು , 30ಕ್ಕೂ ಅಧಿಕ ಸ್ಟಾರ್ಟಪ್ ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದರು . ಟೈ ಎಂದು ಪ್ರಖ್ಯಾತವಾಗಿರುವ ಅಂತಾರಾಷ್ಟ್ರೀಯ ಉದ್ಯಮ ಉತ್ತೇಜನ ಸಂಸ್ಥೆ ದಿ ಇಂಡಸ್ ಎಂಟಪ್ರ್ರನರ್ಸ್ ಇದರ ಮಂಗಳೂರು ಚಾಪ್ಟರ್, ಟೈಕಾನ್ ಮಂಗಳೂರು 2026ನ್ನು ಆಯೋಜಿಸುತ್ತಿದ್ದು ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (KDEM) ಹಾಗೂ ಸಿಲಿಕಾನ್ ಬೀಚ್ ಪ್ರೋಗ್ರಾಮ್ ಇದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು . ಕರಾವಳಿ ಕರ್ನಾಟಕವು ಸೃಜನಶೀಲ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಜಗತ್ತಿಗೆ ತೋರಿಸುವ ಕಾರ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಇದು ಹೊಂದಿದೆ ಎಂದರು . ಕಾರ್ಯಕ್ರಮದಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ - ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ , ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ , ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಎಸ್. ಕೃಷ್ಣನ್ , ಕರ್ನಾಟಕ ಸರಕಾರದ ಮಾಹಿತಿ - ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಮಂಜುಳಾ ಮುಖ್ಯ ಗಣ್ಯರಾಗಿ ಭಾಗವಹಿಸಲಿರುವರು ಎಂದರು . ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಆಕ್ಸೆಲ್ ಇಂಡಿಯಾ ಪಾಲುದಾರ ಪದ್ಮಶ್ರೀ ಪ್ರಶಾಂತ್ ಪ್ರಕಾಶ್, ಟೈಇ ಜಾಗತಿಕ ಅಧ್ಯಕ್ಷ ಮುರಳಿ ಬುಕ್ಕಾಪಟ್ಟಣಂ, ತ್ರೀ ವನ್ ಫೋರ್ ಕ್ಯಾಪಿಟಲ್ ಅಧ್ಯಕ್ಷ ಮೋಹನ್ ದಾಸ್ ಪೈ, ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ನಟ-ಉದ್ಯಮಿ ಸುನೀಲ್ ಶೆಟ್ಟಿ, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮತ್ತು ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಸಂಪನ್ಮೂಲ ವ್ಯಕ್ತಿಗಳಾಗಿ ಸೇರಿಕೊಳ್ಳಲಿದ್ದಾರೆ ಎಂದರು . ಪತ್ರಿಕಾಗೋಷ್ಠಿಯಲ್ಲಿ ಟೈಕಾನ್ ಮಂಗಳೂರು 2026 ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ರಾವ್ ಆರೂರ್ , ಯುನಿಫೈ ಸಿ ಎಕ್ಸ್ ನ ಚೀಫ್ ಪೀಪಲ್ ಸರ್ವೀಸಸ್ ಆಫೀಸರ್ ಶ್ಯಾಮ್ ಪ್ರಸಾದ್ ಹೆಬ್ಬಾರ್, ಕರುಣಾ ಇಂಫ್ರಾ ನಿರ್ದೇಶಕ ಸುದೇಶ್ ಕರುಣಾಕರನ್, ಯುನಿಕೋರ್ಟ್ ಕೋ ಫೌಂಡರ್ ಆ್ಯಂಡ್ ಸಿಇಒ ಪ್ರಶಾಂತ್ ಶೆಣೈ ಉಪಸ್ಥಿತರಿದ್ದರು. ವರದಿ: ಶಂಶೀರ್ ಬುಡೋಳಿ1
- ಚಳ್ಳಕೆರೆ: ಸರಕಾರ ಕ್ವಿಂಟಾಲ್‌ಗೆ 8 ಸಾವಿರಂತೆ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದ್ದು,ಚಳ್ಳಕೆರೆ ತಾಲೂಕಿನಲ್ಲಿ ಈವರೆಗೆ ೧೨೧೦ (1210)ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ಜಿ.ಎಸ್.ಸುರೇಶ್ ತಿಳಿಸಿದ್ದಾರೆ. ನಗರದ ಎಪಿಎಂಸಿ ಯಾರ್ಡ್ನಲ್ಲಿ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವಾಗ ಪರಿಶೀಲನೆ ನಡೆಸಿ ಮಾತನಾಡಿ, ತಾಲೂಕಿನಲ್ಲಿ ೯೬೦೦ (9600)ಎಕರೆಯಲ್ಲಿ ತೊಗರಿ ಬಿತ್ತನೆಯಾಗಿದ್ದು, ಡಿ.17 ರಿಂದ ಮಾ:6 /3/2026 ವರೆಗೆ ಸುಮಾರು 90 ದಿನಗಳ ಕಾಲ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎಂದು ತಿಳಿಸಿದರು. ಚಳ್ಳಕೆರೆ ತಾಲೂಕಿನಲ್ಲಿ ನಾಲ್ಕು ತೊಗರಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು,ಎಪಿಎಂಸಿ ಯಾರ್ಡ್ನಲ್ಲಿ ಚಲುಮೆರುದ್ರಸ್ವಾಮಿ ಹಾಲಿಗೊಂಡನಹಳ್ಳಿ ರೈತ ಉತ್ಪಾದಕರ ಸಂಘದಿAದ ೪೦೮, ರಾಮಜೋಗಿಹಳ್ಳಿ ಸಹಕಾರ ಸಂಘದಲ್ಲಿ 370 ಚಿಕ್ಕಮಧುರೆ ಸಹಕಾರ ಸಂಘದಿಂದ 340 ಹಾಗೂ ಮೀರಾಸಾಬಿಹಳ್ಳಿ ನೋಂದಣಿ ಕೇಂದ್ರದಲ್ಲಿ 92 ಹೀಗೆ ೧೨೧೦(1210) ರೈತರು ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದು,ಉಳಿದ ಎಲ್ಲ ರೈತರು ನೋಂದಣಿ ಮಾಡಿಕೊಂಡು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಒಬ್ಬ ರೈತನಿಂದ ಎಕರೆಗೆ 4 ಕ್ವಿಂಟಾಲ್‌ನಂತೆ 8 ಸಾವಿರಂತೆ ತೊಗರಿ ಖರೀದಿ ಮಾಡಲಾಗುವುದು.ಇದಕ್ಕಾಗಿ ರೈತರು ಎಫ್‌ಐಡಿ ನಂಬರ್,ಆಧಾರ್ ಕಾರ್ಡ್,ಪಹಣಿ ದಾಖಲೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು ಚಳ್ಳಕೆರೆ: ಸರಕಾರ ಕ್ವಿಂಟಾಲ್‌ಗೆ 8 ಸಾವಿರಂತೆ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದ್ದು,ಚಳ್ಳಕೆರೆ ತಾಲೂಕಿನಲ್ಲಿ ಈವರೆಗೆ ೧೨೧೦ (1210)ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ಜಿ.ಎಸ್.ಸುರೇಶ್ ತಿಳಿಸಿದ್ದಾರೆ. ನಗರದ ಎಪಿಎಂಸಿ ಯಾರ್ಡ್ನಲ್ಲಿ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವಾಗ ಪರಿಶೀಲನೆ ನಡೆಸಿ ಮಾತನಾಡಿ, ತಾಲೂಕಿನಲ್ಲಿ ೯೬೦೦ (9600)ಎಕರೆಯಲ್ಲಿ ತೊಗರಿ ಬಿತ್ತನೆಯಾಗಿದ್ದು, ಡಿ.17 ರಿಂದ ಮಾ:6 /3/2026 ವರೆಗೆ ಸುಮಾರು 90 ದಿನಗಳ ಕಾಲ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎಂದು ತಿಳಿಸಿದರು. ಚಳ್ಳಕೆರೆ ತಾಲೂಕಿನಲ್ಲಿ ನಾಲ್ಕು ತೊಗರಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು,ಎಪಿಎಂಸಿ ಯಾರ್ಡ್ನಲ್ಲಿ ಚಲುಮೆರುದ್ರಸ್ವಾಮಿ ಹಾಲಿಗೊಂಡನಹಳ್ಳಿ ರೈತ ಉತ್ಪಾದಕರ ಸಂಘದಿAದ ೪೦೮, ರಾಮಜೋಗಿಹಳ್ಳಿ ಸಹಕಾರ ಸಂಘದಲ್ಲಿ 370 ಚಿಕ್ಕಮಧುರೆ ಸಹಕಾರ ಸಂಘದಿಂದ 340 ಹಾಗೂ ಮೀರಾಸಾಬಿಹಳ್ಳಿ ನೋಂದಣಿ ಕೇಂದ್ರದಲ್ಲಿ 92 ಹೀಗೆ ೧೨೧೦(1210) ರೈತರು ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದು,ಉಳಿದ ಎಲ್ಲ ರೈತರು ನೋಂದಣಿ ಮಾಡಿಕೊಂಡು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಒಬ್ಬ ರೈತನಿಂದ ಎಕರೆಗೆ 4 ಕ್ವಿಂಟಾಲ್‌ನಂತೆ 8 ಸಾವಿರಂತೆ ತೊಗರಿ ಖರೀದಿ ಮಾಡಲಾಗುವುದು.ಇದಕ್ಕಾಗಿ ರೈತರು ಎಫ್‌ಐಡಿ ನಂಬರ್,ಆಧಾರ್ ಕಾರ್ಡ್,ಪಹಣಿ ದಾಖಲೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು ಚಳ್ಳಕೆರೆ: ಸರಕಾರ ಕ್ವಿಂಟಾಲ್‌ಗೆ 8 ಸಾವಿರಂತೆ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದ್ದು,ಚಳ್ಳಕೆರೆ ತಾಲೂಕಿನಲ್ಲಿ ಈವರೆಗೆ ೧೨೧೦ (1210)ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ಜಿ.ಎಸ್.ಸುರೇಶ್ ತಿಳಿಸಿದ್ದಾರೆ. ನಗರದ ಎಪಿಎಂಸಿ ಯಾರ್ಡ್ನಲ್ಲಿ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವಾಗ ಪರಿಶೀಲನೆ ನಡೆಸಿ ಮಾತನಾಡಿ, ತಾಲೂಕಿನಲ್ಲಿ ೯೬೦೦ (9600)ಎಕರೆಯಲ್ಲಿ ತೊಗರಿ ಬಿತ್ತನೆಯಾಗಿದ್ದು, ಡಿ.17 ರಿಂದ ಮಾ:6 /3/2026 ವರೆಗೆ ಸುಮಾರು 90 ದಿನಗಳ ಕಾಲ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎಂದು ತಿಳಿಸಿದರು. ಚಳ್ಳಕೆರೆ ತಾಲೂಕಿನಲ್ಲಿ ನಾಲ್ಕು ತೊಗರಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು,ಎಪಿಎಂಸಿ ಯಾರ್ಡ್ನಲ್ಲಿ ಚಲುಮೆರುದ್ರಸ್ವಾಮಿ ಹಾಲಿಗೊಂಡನಹಳ್ಳಿ ರೈತ ಉತ್ಪಾದಕರ ಸಂಘದಿAದ ೪೦೮, ರಾಮಜೋಗಿಹಳ್ಳಿ ಸಹಕಾರ ಸಂಘದಲ್ಲಿ 370 ಚಿಕ್ಕಮಧುರೆ ಸಹಕಾರ ಸಂಘದಿಂದ 340 ಹಾಗೂ ಮೀರಾಸಾಬಿಹಳ್ಳಿ ನೋಂದಣಿ ಕೇಂದ್ರದಲ್ಲಿ 92 ಹೀಗೆ ೧೨೧೦(1210) ರೈತರು ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದು,ಉಳಿದ ಎಲ್ಲ ರೈತರು ನೋಂದಣಿ ಮಾಡಿಕೊಂಡು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಒಬ್ಬ ರೈತನಿಂದ ಎಕರೆಗೆ 4 ಕ್ವಿಂಟಾಲ್‌ನಂತೆ 8 ಸಾವಿರಂತೆ ತೊಗರಿ ಖರೀದಿ ಮಾಡಲಾಗುವುದು.ಇದಕ್ಕಾಗಿ ರೈತರು ಎಫ್‌ಐಡಿ ನಂಬರ್,ಆಧಾರ್ ಕಾರ್ಡ್,ಪಹಣಿ ದಾಖಲೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು ಚಳ್ಳಕೆರೆ: ಸರಕಾರ ಕ್ವಿಂಟಾಲ್‌ಗೆ 8 ಸಾವಿರಂತೆ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದ್ದು,ಚಳ್ಳಕೆರೆ ತಾಲೂಕಿನಲ್ಲಿ ಈವರೆಗೆ ೧೨೧೦ (1210)ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ಜಿ.ಎಸ್.ಸುರೇಶ್ ತಿಳಿಸಿದ್ದಾರೆ. ನಗರದ ಎಪಿಎಂಸಿ ಯಾರ್ಡ್ನಲ್ಲಿ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವಾಗ ಪರಿಶೀಲನೆ ನಡೆಸಿ ಮಾತನಾಡಿ, ತಾಲೂಕಿನಲ್ಲಿ ೯೬೦೦ (9600)ಎಕರೆಯಲ್ಲಿ ತೊಗರಿ ಬಿತ್ತನೆಯಾಗಿದ್ದು, ಡಿ.17 ರಿಂದ ಮಾ:6 /3/2026 ವರೆಗೆ ಸುಮಾರು 90 ದಿನಗಳ ಕಾಲ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎಂದು ತಿಳಿಸಿದರು. ಚಳ್ಳಕೆರೆ ತಾಲೂಕಿನಲ್ಲಿ ನಾಲ್ಕು ತೊಗರಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು,ಎಪಿಎಂಸಿ ಯಾರ್ಡ್ನಲ್ಲಿ ಚಲುಮೆರುದ್ರಸ್ವಾಮಿ ಹಾಲಿಗೊಂಡನಹಳ್ಳಿ ರೈತ ಉತ್ಪಾದಕರ ಸಂಘದಿAದ ೪೦೮, ರಾಮಜೋಗಿಹಳ್ಳಿ ಸಹಕಾರ ಸಂಘದಲ್ಲಿ 370 ಚಿಕ್ಕಮಧುರೆ ಸಹಕಾರ ಸಂಘದಿಂದ 340 ಹಾಗೂ ಮೀರಾಸಾಬಿಹಳ್ಳಿ ನೋಂದಣಿ ಕೇಂದ್ರದಲ್ಲಿ 92 ಹೀಗೆ ೧೨೧೦(1210) ರೈತರು ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದು,ಉಳಿದ ಎಲ್ಲ ರೈತರು ನೋಂದಣಿ ಮಾಡಿಕೊಂಡು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಒಬ್ಬ ರೈತನಿಂದ ಎಕರೆಗೆ 4 ಕ್ವಿಂಟಾಲ್‌ನಂತೆ 8 ಸಾವಿರಂತೆ ತೊಗರಿ ಖರೀದಿ ಮಾಡಲಾಗುವುದು.ಇದಕ್ಕಾಗಿ ರೈತರು ಎಫ್‌ಐಡಿ ನಂಬರ್,ಆಧಾರ್ ಕಾರ್ಡ್,ಪಹಣಿ ದಾಖಲೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು .1
- ಹೊಳಲ್ಕೆರೆ ಪಟ್ಟಣದಲ್ಲಿ ಇದೇ ಜನವರಿ 14 ರಂದು ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಶಾಸಕ ಎಂ ಚಂದ್ರಪ್ಪ ತಿಳಿಸಿದ್ದಾರೆ. ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಂ ಚಂದ್ರಪ್ಪ ಅವರು ಮಾತನಾಡಿದ್ದು ಇದೇ 14 ರಂದು ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಮೈದಾನದಲ್ಲಿ ಶ್ರೀ ಗುರು ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎರಡು ದಿನಗಳ ಕಾಲ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ1
- ಮೈಸೂರಿನ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ #onlinetv24x7 #Mysore2
- ಈ ಹಾಡು ನಿಮಗೆ ನೆನಪಿದೆಯಾ?1
- ಹನೂರು: ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಉಂಟಾಗಿ, ಪೊಲೀಸ್ ಪೇದೆಯೊಬ್ಬರ ಪುತ್ರನಿಂದ ಜಿಲ್ಲಾ ಬುಡಕಟ್ಟು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾದ ಘಟನೆ ಖಂಡಿಸಿ, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಡಕಟ್ಟು ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಲೋಕನಹಳ್ಳಿ ಹೋಬಳಿಯ ಬೂದಿಪಡಗ ಗ್ರಾಮದಲ್ಲಿ ಕಳೆದ ಎರಡು–ಮೂರು ವರ್ಷಗಳಿಂದ ಅಕ್ರಮವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ ಎನ್ನಲಾಗಿದ್ದು, ಇದರಿಂದ ಗ್ರಾಮದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ವಿವಿಧ ಸಮುದಾಯದ ಯಜಮಾನರು ಸಭೆ ನಡೆಸಿ, ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ತೀಟೆ ಜಗಳದ ವೇಳೆ, ಬೂದಿಪಡಗ ಗ್ರಾಮದ ಪೊಲೀಸ್ ಪೇದೆಯೊಬ್ಬರ ಪುತ್ರ ಕಿಶೋರ್ ಎಂಬಾತನು, ಗ್ರಾಮದ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಬುಡಕಟ್ಟು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡ ಅವರ ಮನೆಗೆ ನುಗ್ಗಿ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ರಂಗೇಗೌಡ ಅವರು ಹನೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದರು. ಆದರೆ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಬೇಸತ್ತ ಬುಡಕಟ್ಟು ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಬುಡಕಟ್ಟು ಕಾರ್ಯದರ್ಶಿ ಮಾದೇಗೌಡ, ಆಧಿವಾಡಿ ಪೋಡುಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಿ, ನಮ್ಮ ಅದ್ಯಕ್ಷರ ಮೇಲೆ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಕುಟುಂಬದವರಿಂದಲೇ ಕಾನೂನು ಉಲ್ಲಂಘನೆ ನಡೆಯುತ್ತಿರುವುದು ಖಂಡನೀಯ ಎಂದು ಹೇಳಿದರು.1
- *ಭಾರತ ನಲ್ಲಿ ವೈರಲ್*1
- ಭೀಕರ ಅಪಘಾತ: ಬಾಲಕಿ ಸೇರಿ ನಾಲ್ವರು ಸ್ವಾಮಿ ಅಯ್ಯಪ್ಪ ಭಕ್ತರು ಸಾವು ತುಮಕೂರಿನ :ಜಿಲ್ಲೆಯ ಕೋರ ಬಳಿ ಶುಕ್ರವಾರ ಬೆಳಗಿನ ವೇಳೆ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ಬಾಲಕಿ ಸೇರಿ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಸಾಕ್ಷಿ (7), ಮಾರುತಪ್ಪ, (45), ವೆಂಕಟೇಶ (30), ಗವಿಸಿದ್ದಪ್ಪ (28)ಮೃತರು. ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿಕೊಂಡು ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.1