*ಕೋಲಾರ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೫ನೇ ಆರಾಧನಾ ಕಾರ್ಯಕ್ರಮಗಳು ಇದೇ ೨೯ ರಿಂದ ೩೧ ರವರೆಗೆ ನಡೆಯಲಿದೆ ಕೋಲಾರ:ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಆ, ೨೯ ರಿಂದ ೩೧ ರವರೆಗೂ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ೩೫೫ ನೇ ವರ್ಷದ ಆರಾಧನಾ ಪಂಚರಾತ್ರೋತ್ಸವ ನಡೆಯಲಿವೆ ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದ ದಿನವನ್ನು ಪ್ರತಿ ವರ್ಷ ಆರಾಧನೆಯನ್ನಾಗಿ ಆಚರಿಸಲಾಗುತ್ತದೆ. ೧೬೭೧ ರಲ್ಲಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದರು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ ಕೂಡಾ ಮೂಲ ಬೃಂದಾವನವಿರುವ ಮಂತ್ರಾಲಯ, ಕೋಲಾರ ಸೇರಿದಂತೆ ಎಲ್ಲಾ ರಾಯರ ಮಠದಲ್ಲಿ ಈ ಆರಾಧನೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಕೋಲಾರದಲ್ಲಿ ಈ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ನಡೆಯಲಿದ್ದು, ಈ ಮೂರು ದಿವಸಗಳ ಕಾಲ ಭಕ್ತರು ಶ್ರೀಮಠಕ್ಕೆ ಆಗಮಿಸಿ ಶ್ರೀ ಗುರುರಾಜರ ದರ್ಶನ, ಸೇವಾ ಸೌಭಾಗ್ಯವನ್ನು ಪಡೆದು ತನು, ಮನ, ಧನಗಳಿಂದ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಗುರುರಾಜರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠದ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- *ದೇವರ ನಿಶ್ಚಯದಂತೆ ನಾವುಗಳು ಕೆಲಸ ಮಾಡಿ ದೇವಾಲಯ ನಿರ್ಮಾಣ ಮಾಡಿದ್ದೇವೆ:ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣಗೌಡ* ಹಲವಾರು ಸಮುದಾಯದ ಜನರು ವಾಸಿಸುವ ಕಮ್ಯೂನಿಟಿಗಳಲ್ಲಿ ದೇವಾಲಯ ನಿರ್ಮಾಣ ಕಷ್ಟ ಸಾಧ್ಯ ಆದರೂ ಪ್ರೆಸ್ಟೀಜ್ ಗ್ಲೆನ್ ವುಡ್ ಕಮ್ಯೂನಟಿಯ ಜನರ ಆಶಯ ಹಾಗೂ ಸಂಕಲ್ಪ ದಂತೆ ಶ್ರೀ ವರಸಿದ್ಧಿ ವಿನಾಯಕ ದೇವಾಲಯವ ನಿರ್ಮಾಣದ ಬಗ್ಗೆ ಎರಡು ವರ್ಷದ ಹಿಂದಿನಿಂದಲೂ ಮಾಡುತ್ತಿದ್ದರೂ ದೇವಾಲಯವ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದ 45 ದಿನಗಳಲ್ಲಿ ಅದರಲ್ಲೂ ಕೇವಲ 30 ದಿನಗಳು ಕೆಲಸ ಮಾಡಿ ಪೂರ್ಣಗೊಳಿಸಿರುವುದು ಗಿನ್ನಿಸ್ ದಾಖಲೆ ಎಂದು ಕೆಲವು ಸ್ನೇಹಿತರು ಹೇಳುತ್ತಿದ್ದರು ಎಂದು ಸಮಾಜ ಸೇವಕರು ಮತ್ತು ಎಲ್ ಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ವಿಜೇತರಾದ ಕರುಣಾಮಯಿ ಲಕ್ಷ್ಮಣಗೌಡರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಬಿದರಹಳ್ಳಿ ಹೋಬಳಿ ಭೂದಿಗೆರೆ ರಸ್ತೆಯ ಮಂಡೂರುಗ್ರಾಮದ ಪ್ರೆಸ್ಟೀಜ್ ಗ್ಲೆನ್ ವುಡ್ ನ ಶ್ರೀ ವರಸಿದ್ಧ ವಿನಾಯಕ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಮಾಡಬೇಕಾದರೂ ನಾವು ನಿಮಿತ್ತ ಮಾತ್ರ ಎಲ್ಲಾ ದೇವರ ಕೃಪೆಯಿಂದ ನಡೆಯುತ್ತದೆ.ದೇವಾಲಯದ ಕೆಲಸ ಹಾಗೂ ಪ್ರತಿಷ್ಠಾಪನೆ ವಿನಾಯಕನ ಕೃಪೆಯಿಂದ ಸಾಂಗವಾಗಿ ನೆರವೇರಿದೆ ಎಂದು ಹೇಳಿದರು. ದೇವತಾ ಕಾರ್ಯದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿರವರು ಭಾಗವಹಿಸಿ ಹಿತವಚನಗಳನ್ನು ತಿಳಿಸಿದರು. ಅವರೊಂದಿಗೆ ಮುಖಂಡರುಗಳಾದ ಕಾಟ್ಮನೂರು ಪಾಪಣ್ಣ,ಕ್ರಾಸ್ ಮಂಜು,,ಜ್ಯೋತಿ ಪುರ ವೇಣು ರವರುಗಳು ಆಗಮಿಸಿ ಶುಭಕೋರಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು. ದೇವಾಲಯ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಶ್ರೀ ವರಸಿದ್ಧಿ ವಿನಾಯಕ ಎಲ್ಲರ ಕಷ್ಟಗಳ ನಿವಾರಣೆ ಮಾಡಲಿ ಹಾಗೂ ಕಲವರ ಮನಸ್ಸುಗಳಲ್ಲಿರುವ ಕಲ್ಮಶಗಳನ್ನು ತೊಳೆದು ಹಾಕಲಿ ಎಂದು ಆಶಿಸಿದರು ಹಾಗೂ ದೇವಾಲಯದ ಶುಚಿತ್ವ ಕಾಪಾಡಿಕೊಂಡು ಮುನ್ನಡಿಸಿಕೊಂಡು ಹೋಗ ಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷರಾದ ಪಿಳ್ಳಪ್ಪ,ಸ್ಥಳೀಯ ನಿವಾಸಿಗಳಾದ ಜನಾರ್ದನ್, ಪರಿಷಿತ್,ನಿಕುನ್,ಚೌಧರಿ,ರಣವೀರ್, ರಂಚಿತ್,ಕೃಷ್ಣಾ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರುಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.3
- ಮುಳಬಾಗಿಲು : ಸೆ 13ರಿಂದ 18ರವರೆಗೆ ಕುರುಡುಮಲೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಹಿನ್ನಲೆ ಪೂರ್ವಭಾವಿ ಸಭೆ.!2
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ.1
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು2
- ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಸಮಾಜ ಸೇವಕ ಸಿಎಂ ಬೈರೇಗೌಡ ರು ಮುತ್ತೈದೆಯರಿಗೆ ಹರಿಶಿನ, ಕುಂಕುಮ, ಸೀರೆ ವಿತರಣೆ1
- ನಂಜನಗೂಡು : ಮಾದಕ ಜಾಲಕ್ಕೆ ಕಡಿವಾಣ ಹಾಕಿ.! ಪೊಲೀಸ್ ಇಲಾಖೆ ವಿರುದ್ಧ ಮಾಜಿ ಶಾಸಕ ಹರ್ಷವರ್ಧನ್ ವಾಗ್ದಾಳಿ.!?2
- ನೇಪಾಳದಲ್ಲಿ ಹಠಾತ್ ಪ್ರವಾಹಕ್ಕೆ ಭೂಕಂಪ, ಹಿಮಕುಸಿತ ಕಾರಣ! 95ಕ್ಕೂ ಹೆಚ್ಚು ಸಾವು, ನದಿಗೆ ನುಗ್ಗಿದ ನೀರು-ಕೆಸರು! ನೇಪಾಳದಲ್ಲಿ ಹಠಾತ್ ಪ್ರವಾಹಕ್ಕೆ ಭೂಕಂಪ, ಹಿಮಕುಸಿತ ಕಾರಣ! 95ಕ್ಕೂ ಹೆಚ್ಚು ಸಾವು, ನದಿಗೆ ನುಗ್ಗಿದ ನೀರು-ಕೆಸರು!1