ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಕಿರುಗಾವಲು ವಿ ವಿ ಕೇಂದ್ರ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಎಂದಿರುವ ಇಇ ಮಳವಳ್ಳಿ : ತಾಲ್ಲೂಕಿನ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ವಿರುವುದರಿಂದ ಸೆಪ್ಟಂಬರ್ 18 ರಂದು ಈ ಕೇಂದ್ರ ವ್ಯಾಪ್ತಿ ಯ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. 18 ರಂದು ಬೆಳಿಗ್ಗೆ 9. ರಿಂದ ಸಾಯಂಕಾಲ 5 ರ ವರೆಗೆ 66/11 ಕೆ ವಿ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕಿರುಗಾಬಲು, ದೊಡ್ಡೇಗೌಡನಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ನೇಣನೂರು, ಸಂಶೆಟ್ಟಿಪುರ, ಚಿಕ್ಕಮುಲಗೂಡು, ಮಿಕ್ಕರೆ, ಕಲ್ಕುಣಿ, ಡೋರನಹಳ್ಳಿ, ಹೆಚ್ ಹೆಚ್ ಕೊಪ್ಪಲು, ಭೀಮನಹಳ್ಳಿ, ಬಂಡೂರು, ಆಲದಹಳ್ಳಿ, ಮೂಗನಕೊಪ್ಪಲು, ಹೂವಿನ ಕೊಪ್ಪಲು, ಹಾಗೂ ಸುತ್ತಮು ತ್ತಲ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಪಟ್ಟಣ ದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಚೆಸ್ಕಾಂನ ಕಾರ್ಯಪಾಲಕ ಇಂಜೀನಿಯರ್ ಟಿ ಪುಟ್ಟಸ್ವಾಮಿ ಅವರು ನೀಡಿ ರುವ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಕಿರುಗಾವಲು ವಿ ವಿ ಕೇಂದ್ರ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಎಂದಿರುವ ಇಇ ಮಳವಳ್ಳಿ : ತಾಲ್ಲೂಕಿನ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ವಿರುವುದರಿಂದ ಸೆಪ್ಟಂಬರ್ 18 ರಂದು ಈ ಕೇಂದ್ರ ವ್ಯಾಪ್ತಿ ಯ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. 18 ರಂದು ಬೆಳಿಗ್ಗೆ 9. ರಿಂದ ಸಾಯಂಕಾಲ 5 ರ ವರೆಗೆ 66/11 ಕೆ ವಿ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕಿರುಗಾಬಲು, ದೊಡ್ಡೇಗೌಡನಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ನೇಣನೂರು, ಸಂಶೆಟ್ಟಿಪುರ, ಚಿಕ್ಕಮುಲಗೂಡು, ಮಿಕ್ಕರೆ, ಕಲ್ಕುಣಿ, ಡೋರನಹಳ್ಳಿ, ಹೆಚ್ ಹೆಚ್ ಕೊಪ್ಪಲು, ಭೀಮನಹಳ್ಳಿ, ಬಂಡೂರು, ಆಲದಹಳ್ಳಿ, ಮೂಗನಕೊಪ್ಪಲು, ಹೂವಿನ ಕೊಪ್ಪಲು, ಹಾಗೂ ಸುತ್ತಮು ತ್ತಲ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಪಟ್ಟಣ ದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಚೆಸ್ಕಾಂನ ಕಾರ್ಯಪಾಲಕ ಇಂಜೀನಿಯರ್ ಟಿ ಪುಟ್ಟಸ್ವಾಮಿ ಅವರು ನೀಡಿ ರುವ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
- ಜಿಲ್ಲಾ ವಕೀಲರ ಸಂಘದಿಂದ ಅದ್ದೂರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ರಾಮನಗರ : ಸ್ವಾತಂತ್ರ್ಯ ಚಳುವಳಿಗೆ ಪ್ರೇರಕ ಶಕ್ತಿಯಾಗಿದ್ದ ಗಣೇಶೋತ್ಸವ ಭಕ್ತಿ, ಬಾಂಧವ್ಯ ಹಾಗೂ ಒಗ್ಗಟ್ಟಿನ ಪ್ರತೀಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಎಂ.ಎಚ್. ಅಣ್ಣಯ್ಯನವರ ತಿಳಿಸಿದರು. ಜಿಲ್ಲಾ ವಕೀಲರ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನ ಮೆರವಣಿಗೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ದೇಶದಾದ್ಯಂತ ಆಚರಣೆ ಮಾಡುತ್ತಿರುವ ಗಣೇಶೋತ್ಸವ ಒಗ್ಗಟ್ಟು ಕೇಂದ್ರಿಕರಿಸುವ, ಸಂಸ್ಕೃತಿ ಸಾರುವ ಉತ್ಸವವಾಗಿದೆ ಎಂದರು. ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿ ಒಗ್ಗಟ್ಟು ಮೂಡಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹರಡುವ ಸಲುವಾಗಿ ಗಣೇಶೋತ್ಸವಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು. ಹಬ್ಬಹರಿದಿನಗಳು ಪ್ರೀತಿ, ವಿಶ್ವಾಸ, ಸಹೋದರತ್ವ ಸಾರುತ್ತದೆ. ಗಣೇಶೋತ್ಸವ ವೈಶಿಷ್ಟ್ಯತೆ ಅರಿತು ಸಾರ್ವಜನಿಕರು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪಯ್ಯ ಮಾತನಾಡಿ, ಗಣೇಶ ಚತುರ್ಥಿ ದೇಶದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ. ಗಣೇಶನನ್ನು ವಿಘ್ನನಿವಾರಕ, ಬುದ್ಧಿವಂತಿಕೆ, ಜ್ಞಾನ ಹಾಗೂ ಸಮೃದ್ಧಿಯ ಸಂಕೇತವಾಗಿ ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬ ಮತ್ತು ಪ್ರತಿಯೊಂದು ದೈವಿಕ ರೂಪವು ನಮಗೆ ಅಮೂಲ್ಯವಾದ ಜೀವನ ಪಾಠಗಳನ್ನು ತಿಳಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾ. ಎಂ.ಪಂಚಾಕ್ಷರಿ, ಪ್ರಧಾನ ಹಿರಿಯ ಸಿವಿಲ್ ಹಾಗೂ ಸಿಜೆಎಂ ನ್ಯಾ.ಲೋಕೇಶ್, ಒಂದನೇ ಅಪರ ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾ.ನಿವೇದಿತ ಟಿ. ಎಂ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ ಪಿ.ಆರ್., ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾ.ಅವಿನಾಶ್ ಚಿಂದು, ಅಪರ ಸಿವಿಲ್ ಹಾಗೂ ಜೆ. ಎಂ.ಎಫ್.ಸಿ. ನ್ಯಾ.ಪುಟ್ಟರಾಜ ಅವರು ಉಪಸ್ಥಿತರಿದ್ದರು. ವಿಸರ್ಜನಾ ಮೆರವಣಿಗೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ವಿ.ಎನ್.ಜಯರಾಮ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಜ್ಯೋತಿ ನಿರ್ದೇಶಕರಾದ ದರ್ಶನ್, ಸಚಿನ್, ಅರುಣ್, ಕಿರಣ್, ಚಂದು, ಸ್ಮಿತಾ, ಲಕ್ಷ್ಮಮ್ಮ ಹಿರಿಯ ವಕೀಲರಾದ ಗೋಪಾಲ್ ಗೌಡ, ಹನುಮಂತರಾಜು, ಶ್ರೀವತ್ಸ, ಶಿವಣ್ಣಗೌಡ, ಅಶೋಕ್, ರಂಗಸ್ವಾಮಿ, ಎಚ್.ಬಿ.ಶಿವಣ್ಣ, ಆರ್.ವಿ.ದೇವರಾಜ್ ಸೇರಿದಂತೆ ಅನೇಕ ವಕೀಲರು ನ್ಯಾಯಾಲಯದ ಸಿಬ್ಬಂದಿಗಳು ಭಾಗಿಯಾಗಿದ್ದರು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಬುಧವಾರ ಗಣೇಶೋತ್ಸವದ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆ ಎಂದಿನಂತೆ ಕೋರ್ಟ್ ಕಲಾಪಗಳಲ್ಲಿ ಭಾಗಿಯಾಗಿದ್ದ ವಕೀಲರು ತಮ್ಮ ದೈನಂದಿನ ಜಂಜಾಟವನ್ನ ಮರೆತು ಮಧ್ಯಾಹ್ನದ ಬಳಿಕ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅಷ್ಟೇ ಅಲ್ಲದೇ ತಮಟೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದರು. ಮಹಿಳಾ ವಕೀಲರು ಹಾಗೂ ಕೋರ್ಟ್‌ನ ಮಹಿಳಾ ಸಿಬ್ಬಂದಿಗಳು, ಪುರುಷ ವಕೀಲರಿಗೆ ತಾವೇನು ಕಮ್ಮಿ ಇಲ್ಲವೆಂಬಂತೆ ಕುಣಿದದ್ದು ವಿಶೇಷವಾಗಿತ್ತು. ಈ ವೇಳೆ ವೀರಗಾಸೆಯ ವೀರಭದ್ರ ಕುಣಿತ ಹಾಗೂ ಪೂಜಾ ಕುಣಿತ ಸಾರ್ವಜನಿಕರ ಗಮನ ಸೆಳೆದವು.1
- ರಾಮಾಪುರ ಸರ್ಕಾರಿ ಶಾಲೆ ಅಸ್ತವ್ಯಸ್ತ: ಮೂಲಭೂತ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿರುವ ಮಕ್ಕಳು; ಶಾಲಾ ಮುಂಭಾಗ ಉಗ್ರ ಹೋರಾಟದ ಎಚ್ಚರಿಕೆ ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಅಭಾವ ಉಂಟಾಗಿದ್ದು, ಶಾಲಾ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ದಿನನಿತ್ಯ ನರಕಸದೃಶ ವಾತಾವರಣದಲ್ಲಿ ಪರದಾಡುವಂತಾಗಿದೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಮುಖ ಸಮಸ್ಯೆಗಳು ಮತ್ತು ಮುಖ್ಯಾಂಶಗಳು ಜಲಾವೃತಗೊಂಡ ಶಾಲೆ: ನೆನ್ನೆ ತಡರಾತ್ರಿ ಸುರಿದ ಭಾರಿ ಮಳೆಯ ಆರ್ಭಟಕ್ಕೆ ಶಾಲೆಯ ಆವರಣ ಹಾಗೂ ತರಗತಿ ಕೊಠಡಿಗಳ ಸುತ್ತಮುತ್ತ ಅಪಾರ ಪ್ರಮಾಣದ ನೀರು ನಿಂತುಕೊಂಡಿದ್ದು, ಇಡೀ ಶಾಲೆ ಜಲಾವೃತಗೊಂಡಿದೆ. ಮೈದಾನವೆಲ್ಲಾ ಕೆಸರು ಗದ್ದೆಯಂತಾಗಿದ್ದು ಮಕ್ಕಳಿಗೆ ಆಟವಾಡಲು ಜಾಗವಿಲ್ಲದಂತಾಗಿದೆ. ಕಳಪೆ ಬಿಸಿಯೂಟ: ಶಾಲೆಯಲ್ಲಿ ದಿನನಿತ್ಯ ಸಿದ್ಧಪಡಿಸುವ ಅಡುಗೆಯಲ್ಲಿ ಹುಳ-ಹುಪ್ಪಟೆಗಳು ಹಾಗೂ ಕಸ-ಕಡ್ಡಿಗಳು ಸಿಗುತ್ತಿದ್ದು, ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಶೌಚಾಲಯದ ಸಮಸ್ಯೆ: ಬಾಲಕಿಯರು ಹಾಗೂ ಶಿಕ್ಷಕಿಯರಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಇದ್ದ ಶೌಚಾಲಯದಲ್ಲೂ ನೀರಿನ ಸೌಲಭ್ಯವಿಲ್ಲದೆ ಹಾಗೂ ನೈರ್ಮಲ್ಯದ ಕೊರತೆಯಿಂದ ದುರ್ನಾತ ಬೀರುತ್ತಿದೆ. ಅಪಾಯಕಾರಿ ಕೊಠಡಿಗಳು: ತರಗತಿ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಪೋಷಕರ ಆಕ್ರೋಶ ಹಾಗೂ ಎಚ್ಚರಿಕೆ "ನಮ್ಮ ಮಕ್ಕಳನ್ನು ನಂಬಿಕೆಯಿಂದ ಸರ್ಕಾರಿ ಶಾಲೆಗೆ ಕಳುಹಿಸುತ್ತೇವೆ. ಆದರೆ ಇಲ್ಲಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ಬೇಸರದ ಸಂಗತಿ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತುರ್ತಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಶಾಲೆಗೆ ಬೀಗ ಜಡಿದು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.4
- All About,Requesting our Hon'ble Minister for #Waqf to hand#AnwarManipaddy and #UpaLokayuta report to #CBI for fair review *ಭಾರತ ನಲ್ಲಿ ವೈರಲ್*1
- ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.. ‘ನಕಲಿ ಹಿಂದುತ್ವವಾದಿ’ ಎಂದು ಘೋಷಣೆ | ಗಡಿಪಾರು ಮಾಡುವಂತೆ ಆಗ್ರಹ ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ನಕಲಿ ಹಿಂದುತ್ವವಾದಿ ಪ್ರತಾಪ್ ಸಿಂಹ’, ‘ಕೋಮುವಾದಿ ಬಿಜೆಪಿ, ಕೋಮುವಾದಿ ಪ್ರತಾಪ್ ಸಿಂಹ’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಟಿ. ನರಸೀಪುರದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಗಣೇಶ ಮೂರ್ತಿ ಹಿಡಿದು, ಪಾದರಕ್ಷೆ ಧರಿಸಿ ಪ್ರತಿಭಟನೆ ನಡೆಸಿರುವುದನ್ನು ಪ್ರಶ್ನಿಸಿದ ಕಾರ್ಯಕರ್ತರು, ಧಾರ್ಮಿಕ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ನಡೆ ಸಮಾಜದಲ್ಲಿ ಅಶಾಂತಿ ಮೂಡಿಸುವುದಲ್ಲದೆ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಪ್ರತಾಪ್ ಸಿಂಹ ಅವರು ದಲಿತರು ಹಾಗೂ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಸೂಚನೆಗಳ ಕುರಿತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರೆ, ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಇತರ ಸಂಘಟನೆಗಳಿಂದಲೂ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.1
- ಹನೂರು: ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ರೈತರಲ್ಲಿ ಸಂತಸ ಮೂಡಿಸಿದೆ. ಬರದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ ಕಾವೇರಿ ನದಿ ಮೂಲದಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಭರ್ತಿಯಾಗಿ ನೀರು ಹೊರಹರಿಯುತ್ತಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಯ 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆಯಿದೆ. ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಸೇರಿದಂತೆ ಹಲವು ಗ್ರಾಮಗಳ ತೋಡುಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುವ ಆಶಾಭಾವನೆ ರೈತರಲ್ಲಿದೆ. ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ, ಸಂಗ್ರಹವಾಗಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಹನೂರು: ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ರೈತರಲ್ಲಿ ಸಂತಸ ಮೂಡಿಸಿದೆ. ಬರದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ ಕಾವೇರಿ ನದಿ ಮೂಲದಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಭರ್ತಿಯಾಗಿ ನೀರು ಹೊರಹರಿಯುತ್ತಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಯ 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆಯಿದೆ. ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಸೇರಿದಂತೆ ಹಲವು ಗ್ರಾಮಗಳ ತೋಡುಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುವ ಆಶಾಭಾವನೆ ರೈತರಲ್ಲಿದೆ. ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ, ಸಂಗ್ರಹವಾಗಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ.2
- ನರೇಂದ್ರಮೋದಿ ಹುಟ್ಟುಹಬ್ಬ:ಬಿಜೆಪಿಯಿಂದ ಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆ ವರದಿ: ಹೊಮ್ಮನಂಜುಂಡನಾಯಕ ನರೇಂದ್ರಮೋದಿ ಹುಟ್ಟುಹಬ್ಬ:ಬಿಜೆಪಿಯಿಂದ ಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆ ದೇಶದ ಅಭಿವೃದ್ಧಿಗೆ ನರೇಂದ್ರಮೋದಿ ಕೊಡುಗೆ ಅಪಾರ :ಸಿ.ಎಸ್.ನಿರಂಜನ್‌ಕುಮಾರ್ ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರಮೋದಿಯವರ 76ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ನಗರಮಂಡಲ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಪೂಜೆ ಸಲ್ಲಿಸಿ, ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು. ನಂತರ ದೇವಸ್ಥಾನ ಮುಂಭಾಗದಲ್ಲಿ ನರೇಂದ್ರಮೋದಿ ಪರ ಜೈಕಾರ ಕೂಗಿ ಆಶೀರ್ವಾದದ ದೀಪ ಬೆಳಗಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರಮೋ ದಿಯವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ, ದೀಪಹಚ್ಚಿ ನರೇಂದ್ರಮೋದಿ ಅವರಿಗೆ ದಿ ರ್ಘಾಯುಷ್ಯ, ಉತ್ತಮ ಆರೋಗ್ಯ ಕರುಣಿಸಿ, ಅವರಿಗೆ ಹೆಚ್ಚಿನ ಶಕ್ತಿಯನ್ನು ಕೊಟ್ಟು, ಅವರ ನವಭಾರತ ನಿರ್ಮಾಣ ಕನಸು ನನಸು ಮಾಡುವಂತಾಗಲಿ ಎಂದು ಪ್ರಾರ್ಥಿಸಲಾಯಿತು ಎಂದರು. ನರೇಂದ್ರಮೋದಿ ಅವರ ನೇತೃತ್ವ ಸರ್ಕಾರದ ಪ್ರಮುಖ ಸಾಧನೆಗಳು ಮತ್ತು ಜನಪರ ಯೋಜನೆಗಳು ದೇಶದ ಆರ್ಥಿಕ, ಸಾಮಾಜಿಕ, ಮೂಲಸೌಕರ್ಯಗಳಲ್ಲಿ ಬದಲಾವಣೆಗಳನ್ನು ತಂದಿದ್ದು, ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದು, ಭಾರತವನ್ನು ವಿದೇಶಿಗರು ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು. ಪ್ರಧಾನಿ ಅವರು ನರೇಂದ್ರಮೋದಿ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸುತ್ತಿದ್ದು, ಅವರ ಕಾರ್ಯಸಾಧನೆಯನ್ನು ಇಡೀ ವಿಶ್ವವೇ ಮೆಚ್ಚುವಂತದ್ದು, ದೇಶದ ಅಭಿವೃದ್ಧಿಗೆ ಎಲ್ಲ ಆಯಾಮಗಳಲ್ಲೂ ದೊಡ್ಡ ಕೊಡುಗೆ ನೀಡಿರುವುದು ಜಗತ್ ಜಾಹೀರಾತು ಆಗಿದೆ. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17ರವರಗೆ ಒಂದು ತಿಂಗಳಕಾಲ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧಕ್ಷ ಜಯಸುಂದರ್, ಮುಖಂಡ ಡಾ. ಎ.ಆರ್.ಬಾಬು, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಚೂಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ನಾರಾಯಣಪ್ರಸಾದ್, ಆರ್.ಸುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಪಿ.ವೃಷಬೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸುಂದರ್‌ರಾಜ್, ನಗರಮಂಡಲ ಅಧ್ಯಕ್ಷ ಶಿವರಾಜ್, ಪ್ರಧಾನ ಕಾರ್ಯದರ್ಶಿ ಕೂಸಣ್ಣ, ಭಾಸ್ಕರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಪ್ರಧಾನ ಕಾರ್ಯದರ್ಶಿ ಪುರುಷೋ ತ್ತಮ, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಬುಲೆಟ್ ಚಂದ್ರು, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಶೈಲಾ, ಮುಖಂಡರಾದ ನಟರಾಜು, ಮೂಡ್ಲುಪುರ ನಂದೀಶ್, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆನಂದ್‌ಭಗೀರಥ, ನಗರ ಮಂಡಲ ಕಾರ್ಯದರ್ಶಿ ಬಂಗಾರನಾಯಕ, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ಎಂ.ಎಸ್.ಚಂದ್ರಶೇಖರ್, ಸುಂದರಪ್ಪ, ಮಹೇಶ್‌ಪಟೇಲ್, ಕೃಷ್ಣ ಇತರರು ಹಾಜರಿದ್ದರು4
- ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಘಟನೆ ಮಳವಳ್ಳಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಬಿ.ಜಿ.ಪುರ ಹೋಬಳಿಯ ಚಿಕ್ಕ ಬಾಗಿಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಗ್ರಾಮದ ನಿವಾಸಿ ಮಹದೇ ವಪ್ಪ ಎಂಬುವರಿಗೆ ಸೇರಿದ ಹಳೆಯ ಮಣ್ಣಿನ ಮನೆಯ ಗೋಡೆ ನಿರಂತರ ಮಳೆಗೆ ನೆನೆದು ಮಂಗಳವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಮನೆಯೊಳಗಿನ ಒಂದು ಭಾಗದಲ್ಲಿ ಕುಟುಂಬದವರು ಮಲಗಿದ್ದ ಕಾರಣ ಭಾರೀ ದುರಂತ ತಪ್ಪಿದೆ. ಮನೆಯೊಳಗಿದ್ದ ಪಾತ್ರೆ- ಎಲೆಕ್ಟ್ರಾನಿಕ್ ಹಾಗೂ ದಿನಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೀಡಾಗಿವೆ. ಹಲವು ದಿನಗಳಿಂದ ತಾಲೂಕಿ ನಾದ್ಯಂತ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆಗೆ ಕಳೆದ ರಾತ್ರಿ ವರುಣ ದಿಡೀರ್ ಆರ್ಭಟಿಸಿದೆ. ಚಿಕ್ಕಬಾಗಿಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯ ಫೋಟೋ ಹಾಗೂ ಹಾನಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಸಂತ್ರಸ್ತ ಮಹದೇವಪ್ಪ ಅವರು ಬಡ ಕುಟುಂಬಕ್ಕೆ ಸೇರಿದ್ದು, ವಾಸಕ್ಕೆ ಬೇರೆ ಸೂರು ಇಲ್ಲದಂತಾಗಿದೆ. ಕೂಡಲೇ ಸೂಕ್ತ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.1
- ಹನೂರು ತಾಲೂಕಿನಲ್ಲಿ ವರುಣ ದೇವನ ಕೃಪೆ: ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ, ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಹನೂರು ತಾಲೂಕಿನಲ್ಲಿ ವರುಣ ದೇವನ ಕೃಪೆ: ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ, ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಚಾಮರಾಜನಗರ:ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ಬಿಸಿಲಿನ ಬೇಗೆ ಹಾಗೂ ಮಳೆಯೇ ಕಾಣದ ಕಾರಣ ತತ್ತರಿಸಿ ಹೋಗಿದ್ದ ಹನೂರು ತಾಲೂಕಿನ ರೈತ ಕುಲಕ್ಕೆ ಮಳೆರಾಯ ಕರುಣೆ ತೋರಿದ್ದಾನೆ. ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ವರುಣನ ಅಬ್ಬರದಿಂದಾಗಿ ದೀರ್ಘಕಾಲದಿಂದ ಮಳೆಯಿಲ್ಲದೆ ಕಂಗೆಟ್ಟು ಹೋಗಿದ್ದ ಜನ-ಜಾನುವಾರುಗಳು ಹಾಗೂ ರೈತರು ನಿಟ್ಟುಸಿರು ಬಿಡುವಂತಾಗಿದೆ. ಕುಡಿಯುವ ನೀರಿಗೂ ಬರೆ, ಬೋರ್‌ವೆಲ್‌ಗಳು ಡ್ರೈ: ತಾಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಕುಸಿದು ಹೋಗಿತ್ತು. ಕೊಳವೆಬಾವಿಗಳಲ್ಲಿ (ಬೋರ್‌ವೆಲ್) ನೀರು ಸಿಗದೆ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಕಣ್ಣೆದುರೇ ಒಣಗಿ ಹೋಗುತ್ತಿವು. ಕುಡಿಯಲು ಕೂಡ ನೀರಿಲ್ಲದೆ ಗ್ರಾಮಸ್ಥರು ಮತ್ತು ಜಾನುವಾರುಗಳು ಪರದಾಡುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈತರ ಕಣ್ಣೀರು ನೋಡಲಾರದಂತ ಸ್ಥಿತಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೆಲೆಸಿತ್ತು. ಮಳೆರಾಯನ ಆಗಮನ - ರೈತರ ಮೊಗದಲ್ಲಿ ನಗು: ಸಕಾಲಕ್ಕೆ ಮಳೆಯಾಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದ ಹತಾಶ ಸ್ಥಿತಿಯಲ್ಲಿದ್ದ ರೈತರಿಗೆ ಈಗ ಸುರಿದಿರುವ ಉತ್ತಮ ಮಳೆ ಸಂಜೀವಿನಿಯಾಗಿ ಪರಿಣಮಿಸಿದೆ. ಒಣಗಿ ಹೋಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದ್ದು, ಗಿಡ-ಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವ ವಿಶ್ವಾಸ ಮೂಡಿದ್ದು, ಬತ್ತಿಹೋಗಿದ್ದ ಬೋರ್‌ವೆಲ್‌ಗಳೂ ಮರುಜೀವ ಪಡೆಯುವ ನಿರೀಕ್ಷೆಯಿದೆ. ಚುರುಕುಗೊಂಡ ಕೃಷಿ ಚಟುವಟಿಕೆಗಳು: ಮಳೆಯ ಅಬ್ಬರದಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ಎಲ್ಲೆಡೆ ನಳನಳಿಸುತ್ತಿರುವ ಹಸಿರು ಕಣ್ಣಿಗೆ ತಂಪು ನೀಡಿದೆ. ಮಳೆಯಿಂದಾಗಿ ರೈತರಲ್ಲಿ ಹೊಸ ಉತ್ಸಾಹ ಮೂಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಭರ್ಜರಿಯಾಗಿ ಚುರುಕುಗೊಂಡಿವೆ. ವರುಣನ ಕೃಪೆಯಿಂದ ಒಟ್ಟಾರೆಯಾಗಿ ಹನೂರು ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.4
- All About,Statement After What let our then Congress Corporater's activities regarding to vacate their private land *ಭಾರತ ನಲ್ಲಿ ವೈರಲ್*1