logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚೆನ್ನೈ: ತಮಿಳುನಾಡಿನಲ್ಲಿ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ TVK ಪಕ್ಷು ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮಹತ್ವದ ನಿರ್ಧಾರ ಕೈಗೊಂಡಿದೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಿದ್ದ ಬರೋಬ್ಬರಿ 7246 ಕೋಟಿ ವೆಚ್ಚದ 46 ಯೋಜನೆಗಳನ್ನು ವಿಜಯ್ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದ ಮೂಲಕ ದೇವಸ್ಥಾನಗಳ ನಿಧಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಜನೆಗಳಿಗೆ ಬ್ರೇಕ್ ಹಾಕಲಾಗಿದ್ದು, ಇನ್ನು ಮುಂದೆ ದೇವಾಲಯದ ಹಣವನ್ನು ಕೇವಲ ಧಾರ್ಮಿಕ ಮತ್ತು ಪವಿತ್ರ ಕಾರ್ಯಗಳಿಗೆ ಮಾತ್ರ ಬಳಸಬೇಕೆಂದು ಸ್ಪಷ್ಟಪಡಿಸಲಾಗಿದೆ. ಈ ಕ್ರಮ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಕಳೆದ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳ ನಿಧಿಯನ್ನು ಬಳಸಿಕೊಂಡು ಕಲ್ಯಾಣ ಮಂಟಪಗಳು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಈ ಯೋಜನೆಗಳು ದೇವಸ್ಥಾನಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಈ ಯೋಜನೆಗಳಿಗೆ ನೀಡಲಾಗಿದ್ದ ಆಡಳಿತಾತ್ಮಕ ಅನುಮೋದನೆಯನ್ನು ಸಂಪೂರ್ಣವಾಗಿ ಹಿಂಪಡೆದಿದೆ. ರದ್ದುಗೊಂಡಿರುವ ಯೋಜನೆಗಳಲ್ಲಿ, 115 ಕೋಟಿ ವೆಚ್ಚದ 29 ಕಲ್ಯಾಣ ಮಂಟಪಗಳ ನಿರ್ಮಾಣ ಹಾಗೂ 130 ಕೋಟಿ ವೆಚ್ಚದ 17 ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಯೋಜನೆಗಳು ಸೇರಿವೆ, ಒಟ್ಟು 245 ಕೋಟಿ ರೂಪಾಯಿಗಳ ಯೋಜನೆಗಳನ್ನು ರದ್ದುಪಡಿಸಲಾಗಿದೆ. ಈ ನಿರ್ಧಾರದಿಂದ ಕೋಟ್ಯಂತರ ರೂಪಾಯಿಗಳ ದೇವಾಲಯದ ನಿಧಿಯ ದುರುಪಯೋಗವನ್ನು ತಡೆಯಲಾಗಿದೆ. ಮದ್ರಾಸ್ ಹೈಕೋರ್ಟ್‌ನ ನಿರ್ದೇಶನಗಳ ಬೆನ್ನಲ್ಲೇ ಎಚ್ಚೆತ್ತಿರುವ ವಿಜಯ್ ಸರ್ಕಾರ, ದೇವಸ್ಥಾನಗಳ ಚರ ಮತ್ತು ಸ್ಥಿರ ಆಸ್ತಿಗಳು ಹಾಗೂ ಆದಾಯವನ್ನು ಕೇವಲ ಧಾರ್ಮಿಕ ಮತ್ತು ಪವಿತ್ರ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದು ಸ್ಪಷ್ಟಪಡಿಸಿದೆ. ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದ ದೇವಸ್ಥಾನದ ಕೋಟ್ಯಂತರ ರೂಪಾಯಿ ನಿಧಿಯನ್ನು ಇನ್ಮುಂದೆ ಕೇವಲ ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಭಕ್ತರ ಅನುಕೂಲಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲಾಗಿದೆ. ಈ ಕುರಿತು ತಮಿಳುನಾಡು ಸರ್ಕಾರ, "ದೇವಸ್ಥಾನದ ಆಸ್ತಿ ಮತ್ತು ನಿಧಿಯನ್ನು ಕೇವಲ ಪವಿತ್ರ ಉದ್ದೇಶಗಳಿಗೆ ಮಾತ್ರ ಬಳಸಲಾಗುವುದು. ಯಾವುದೇ ದುರುಪಯೋಗಕ್ಕೆ ಇಲ್ಲಿ ಆಸ್ಪದವಿಲ್ಲ" ಎಂದು ಘೋಷಿಸಿದೆ. ಹಿಂದೂ ಸಂಘಟನೆಗಳು ದೀರ್ಘಕಾಲದಿಂದ ನಡೆಸುತ್ತಿದ್ದ ಹೋರಾಟ ಮತ್ತು ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ವಿಜಯ್ ಸರ್ಕಾರ ಕೈಗೊಂಡಿರುವ ಈ "ಮಾಸ್ ಹೀರೊ" ಶೈಲಿಯ ಆಡಳಿತಾತ್ಮಕ ಬದಲಾವಣೆ ಸದ್ಯ ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

4 hrs ago
user_R News Kannada
R News Kannada
Local News Reporter ಬೆಳಗಾವಿ, ಬೆಳಗಾವಿ, ಕರ್ನಾಟಕ•
4 hrs ago
de8e7d3b-ad0d-437e-93bc-8f5b30d5fbdd

ಚೆನ್ನೈ: ತಮಿಳುನಾಡಿನಲ್ಲಿ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ TVK ಪಕ್ಷು ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮಹತ್ವದ ನಿರ್ಧಾರ ಕೈಗೊಂಡಿದೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಿದ್ದ ಬರೋಬ್ಬರಿ 7246 ಕೋಟಿ ವೆಚ್ಚದ 46 ಯೋಜನೆಗಳನ್ನು ವಿಜಯ್ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದ ಮೂಲಕ ದೇವಸ್ಥಾನಗಳ ನಿಧಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಜನೆಗಳಿಗೆ ಬ್ರೇಕ್ ಹಾಕಲಾಗಿದ್ದು, ಇನ್ನು ಮುಂದೆ ದೇವಾಲಯದ ಹಣವನ್ನು ಕೇವಲ ಧಾರ್ಮಿಕ ಮತ್ತು ಪವಿತ್ರ ಕಾರ್ಯಗಳಿಗೆ ಮಾತ್ರ ಬಳಸಬೇಕೆಂದು ಸ್ಪಷ್ಟಪಡಿಸಲಾಗಿದೆ. ಈ ಕ್ರಮ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಕಳೆದ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳ ನಿಧಿಯನ್ನು ಬಳಸಿಕೊಂಡು ಕಲ್ಯಾಣ ಮಂಟಪಗಳು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಈ ಯೋಜನೆಗಳು ದೇವಸ್ಥಾನಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಈ ಯೋಜನೆಗಳಿಗೆ ನೀಡಲಾಗಿದ್ದ ಆಡಳಿತಾತ್ಮಕ ಅನುಮೋದನೆಯನ್ನು ಸಂಪೂರ್ಣವಾಗಿ ಹಿಂಪಡೆದಿದೆ. ರದ್ದುಗೊಂಡಿರುವ ಯೋಜನೆಗಳಲ್ಲಿ, 115 ಕೋಟಿ ವೆಚ್ಚದ 29 ಕಲ್ಯಾಣ ಮಂಟಪಗಳ ನಿರ್ಮಾಣ ಹಾಗೂ 130 ಕೋಟಿ ವೆಚ್ಚದ 17 ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಯೋಜನೆಗಳು ಸೇರಿವೆ, ಒಟ್ಟು 245 ಕೋಟಿ ರೂಪಾಯಿಗಳ ಯೋಜನೆಗಳನ್ನು ರದ್ದುಪಡಿಸಲಾಗಿದೆ. ಈ ನಿರ್ಧಾರದಿಂದ ಕೋಟ್ಯಂತರ ರೂಪಾಯಿಗಳ ದೇವಾಲಯದ ನಿಧಿಯ ದುರುಪಯೋಗವನ್ನು ತಡೆಯಲಾಗಿದೆ. ಮದ್ರಾಸ್ ಹೈಕೋರ್ಟ್‌ನ ನಿರ್ದೇಶನಗಳ ಬೆನ್ನಲ್ಲೇ ಎಚ್ಚೆತ್ತಿರುವ ವಿಜಯ್ ಸರ್ಕಾರ, ದೇವಸ್ಥಾನಗಳ ಚರ ಮತ್ತು ಸ್ಥಿರ ಆಸ್ತಿಗಳು ಹಾಗೂ ಆದಾಯವನ್ನು ಕೇವಲ ಧಾರ್ಮಿಕ ಮತ್ತು ಪವಿತ್ರ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದು ಸ್ಪಷ್ಟಪಡಿಸಿದೆ. ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದ ದೇವಸ್ಥಾನದ ಕೋಟ್ಯಂತರ ರೂಪಾಯಿ ನಿಧಿಯನ್ನು ಇನ್ಮುಂದೆ ಕೇವಲ ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಭಕ್ತರ ಅನುಕೂಲಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲಾಗಿದೆ. ಈ ಕುರಿತು ತಮಿಳುನಾಡು ಸರ್ಕಾರ, "ದೇವಸ್ಥಾನದ ಆಸ್ತಿ ಮತ್ತು ನಿಧಿಯನ್ನು ಕೇವಲ ಪವಿತ್ರ ಉದ್ದೇಶಗಳಿಗೆ ಮಾತ್ರ ಬಳಸಲಾಗುವುದು. ಯಾವುದೇ ದುರುಪಯೋಗಕ್ಕೆ ಇಲ್ಲಿ ಆಸ್ಪದವಿಲ್ಲ" ಎಂದು ಘೋಷಿಸಿದೆ. ಹಿಂದೂ ಸಂಘಟನೆಗಳು ದೀರ್ಘಕಾಲದಿಂದ ನಡೆಸುತ್ತಿದ್ದ ಹೋರಾಟ ಮತ್ತು ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ವಿಜಯ್ ಸರ್ಕಾರ ಕೈಗೊಂಡಿರುವ ಈ "ಮಾಸ್ ಹೀರೊ" ಶೈಲಿಯ ಆಡಳಿತಾತ್ಮಕ ಬದಲಾವಣೆ ಸದ್ಯ ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

More news from ಕರ್ನಾಟಕ and nearby areas
  • ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ. ಮೃತ ಯುವಕನನ್ನು ಮುಧೋಳದ ಪವನಚುಕ್ಕಿ ನಿವಾಸಿ, 20 ವರ್ಷದ ನವೀನ್ ಹಣಮಂತ ಗೊರ್ಕ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಬಾದಾಮಿಯಿಂದ ಇಚಲಕರಂಜಿಗೆ ಹೊರಟಿದ್ದ ಬಸ್ ಮತ್ತು ಬೈಕ್ ನಡುವೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಪರಿಣಾಮವಾಗಿ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣವನ್ನು ಮುಧೋಳ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
    1
    ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ. ಮೃತ ಯುವಕನನ್ನು ಮುಧೋಳದ ಪವನಚುಕ್ಕಿ ನಿವಾಸಿ, 20 ವರ್ಷದ ನವೀನ್ ಹಣಮಂತ ಗೊರ್ಕ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಬಾದಾಮಿಯಿಂದ ಇಚಲಕರಂಜಿಗೆ ಹೊರಟಿದ್ದ ಬಸ್ ಮತ್ತು ಬೈಕ್ ನಡುವೆ ನಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಪರಿಣಾಮವಾಗಿ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣವನ್ನು ಮುಧೋಳ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    8 hrs ago
  • ಬೆಂಗಳೂರಿನಲ್ಲಿರುವ ನೀಟ್ ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿನಿಯರು ಕಣ್ಣೀರಿಟ್ಟ ಘಟನೆ ವರದಿಯಾಗಿದೆ. ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಲವಾರು ವಿದ್ಯಾರ್ಥಿನಿಯರು ದುಃಖಿತರಾಗಿ ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ.
    1
    ಬೆಂಗಳೂರಿನಲ್ಲಿರುವ ನೀಟ್ ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿನಿಯರು ಕಣ್ಣೀರಿಟ್ಟ ಘಟನೆ ವರದಿಯಾಗಿದೆ. ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಲವಾರು ವಿದ್ಯಾರ್ಥಿನಿಯರು ದುಃಖಿತರಾಗಿ ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
  • ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಸಿದ್ದರಾಮಯ್ಯ ಅವರು ಮನವಿಯೊಂದನ್ನು ಮಾಡಿದ್ದಾರೆ. ತಮ್ಮನ್ನು ಕಾರ್ಯಕ್ರಮಗಳಲ್ಲಿ ಕೊನೆಯ ಭಾಷಣಕಾರರನ್ನಾಗಿ ಮಾಡಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
    1
    ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಸಿದ್ದರಾಮಯ್ಯ ಅವರು ಮನವಿಯೊಂದನ್ನು ಮಾಡಿದ್ದಾರೆ. ತಮ್ಮನ್ನು ಕಾರ್ಯಕ್ರಮಗಳಲ್ಲಿ ಕೊನೆಯ ಭಾಷಣಕಾರರನ್ನಾಗಿ ಮಾಡಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    5 hrs ago
  • ಶಿಗ್ಗಾವಿ ಪಟ್ಟಣದಲ್ಲಿ ಪುಟ್ಟರಾಜ ಗವಾಯಿ ಸೌಹಾರ್ದ ಸಹಕಾರಿ ಶಾಖೆಯ ನೂತನ ಬಾಡಿಗೆ ಕಟ್ಟಡ ಸ್ಥಳಾಂತರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ, ಶಾಖೆಯ ಮೂರನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಶ್ರೀ ರುದ್ರಮುನಿ ಹೀರೆಮಠ ಸ್ವಾಮಿಜಿಗಳು ಹಾಗೂ ಸಹಕಾರಿಯ ಅಧ್ಯಕ್ಷರಾದ ಹನುಮಂತಪ್ಪ ಯು.ವಿ. ತಮ್ಮ ದಂಪತಿಗಳೊಂದಿಗೆ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಸುಭಾಸ್‌ಗೌಡ ಪಾಟೀಲ, ಕುಮಾರಿ ಪ್ರತಿಕ್ಷಾ ಗೌಳಿ, ನಿರ್ದೇಶಕರಾದ ರಾಜಶೇಖರ ಶೆಟ್ಟರ್, ಬಸಯ್ಯ ಈಳಿಗೇರ, ನಿರ್ಮಲಾ ಈಳಿಗೇರ, ರೇಖಾ ವಡ್ಡರ್, ಸಿ.ಪಿ.ಐ. ಅನಿಲ್ ರಾಠೋಡ, ಶಿವಾನಂದ ಮ್ಯಾಗೇರಿ, ಉಮೇಶ್ ಗೌಳಿ, ಸಿ.ಡಿ. ಯತ್ನಳ್ಳಿ, ನಾಗಪ್ಪ ಬೆಂತೂರ, ವಿನೋದಾ ಪಾಟೀಲ, ಭರಮಜ್ಜ ನವಲಗುಂದ, ರಮೇಶ್ ಹರಿಜನ, ಶಾಖೆಯ ವ್ಯವಸ್ಥಾಪಕರಾದ ಅಶೋಕ್ ಹೋಳಲ ಹಾಗೂ ಎಲ್ಲ ಸಿಬ್ಬಂದಿ ವರ್ಗ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
    2
    ಶಿಗ್ಗಾವಿ ಪಟ್ಟಣದಲ್ಲಿ ಪುಟ್ಟರಾಜ ಗವಾಯಿ ಸೌಹಾರ್ದ ಸಹಕಾರಿ ಶಾಖೆಯ ನೂತನ ಬಾಡಿಗೆ ಕಟ್ಟಡ ಸ್ಥಳಾಂತರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ, ಶಾಖೆಯ ಮೂರನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭವನ್ನೂ ಆಯೋಜಿಸಲಾಗಿತ್ತು.

ಶ್ರೀ ರುದ್ರಮುನಿ ಹೀರೆಮಠ ಸ್ವಾಮಿಜಿಗಳು ಹಾಗೂ ಸಹಕಾರಿಯ ಅಧ್ಯಕ್ಷರಾದ ಹನುಮಂತಪ್ಪ ಯು.ವಿ. ತಮ್ಮ ದಂಪತಿಗಳೊಂದಿಗೆ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಸುಭಾಸ್‌ಗೌಡ ಪಾಟೀಲ, ಕುಮಾರಿ ಪ್ರತಿಕ್ಷಾ ಗೌಳಿ, ನಿರ್ದೇಶಕರಾದ ರಾಜಶೇಖರ ಶೆಟ್ಟರ್, ಬಸಯ್ಯ ಈಳಿಗೇರ, ನಿರ್ಮಲಾ ಈಳಿಗೇರ, ರೇಖಾ ವಡ್ಡರ್, ಸಿ.ಪಿ.ಐ. ಅನಿಲ್ ರಾಠೋಡ, ಶಿವಾನಂದ ಮ್ಯಾಗೇರಿ, ಉಮೇಶ್ ಗೌಳಿ, ಸಿ.ಡಿ. ಯತ್ನಳ್ಳಿ, ನಾಗಪ್ಪ ಬೆಂತೂರ, ವಿನೋದಾ ಪಾಟೀಲ, ಭರಮಜ್ಜ ನವಲಗುಂದ, ರಮೇಶ್ ಹರಿಜನ, ಶಾಖೆಯ ವ್ಯವಸ್ಥಾಪಕರಾದ ಅಶೋಕ್ ಹೋಳಲ ಹಾಗೂ ಎಲ್ಲ ಸಿಬ್ಬಂದಿ ವರ್ಗ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    20 hrs ago
  • ಗದಗ ಜಿಲ್ಲೆಯ ಕದಡಿ ಗ್ರಾಮದ ಮಲ್ಲಯ್ಯಜ್ಜನ ಕಟ್ಟೆ ಹತ್ತಿರ ಶನಿವಾರ ಬೆಳಿಗ್ಗೆ ಜನದಟ್ಟಣೆಯಿರುವ ವಸತಿ ಪ್ರದೇಶದಲ್ಲಿ ಬೃಹತ್ ನಾಗರ ಹಾವೊಂದು ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿದೆ. ಹಾವು ಸಳ ಸಳನೆ ಬರುತ್ತಿರುವುದನ್ನು ಕಂಡ ಸಾರ್ವಜನಿಕರು ಭಯಭೀತರಾಗಿ ಕೆಲ ಹೊತ್ತು ನಿಂತು ನೋಡುತ್ತಿದ್ದರು. ಈ ವೇಳೆ, ಕೆಲವರು ಇದು ದೇವರ ಹಾವಿರಬಹುದೇ ಎಂದು ಪರಸ್ಪರ ಚರ್ಚಿಸತೊಡಗಿದರು. ತಕ್ಷಣವೇ ಅಲ್ಲಿಯೇ ಇದ್ದವರು ಒಬ್ಬ ಹಾವು ಹಿಡಿಯುವ ವ್ಯಕ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಧಾವಿಸಿದ ಉರಗ ರಕ್ಷಕರು, ಮಣ್ಣಿನ ಗೋಡೆಯಲ್ಲಿ ಅಡಗಿಕೊಂಡಿದ್ದ ಹಾವನ್ನು ಹೊರಗೆಳೆದು ಜೀವಂತವಾಗಿ ಸೆರೆ ಹಿಡಿದು ನಂತರ ಅದನ್ನು ಹೊರ ವಲಯದಲ್ಲಿ ಬಿಟ್ಟು ಹೋಗಿದ್ದಾರೆ. ಈ ಪ್ರಸಂಗ ಗ್ರಾಮಸ್ಥರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉರಗ ರಕ್ಷಕರು, ಎಲ್ಲಿಯೇ ಹಾವು ಕಂಡರೂ ಯಾರೂ ಅವುಗಳನ್ನು ಬಡಿಯಬಾರದು, ಬದಲಿಗೆ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಯವರಿಗೆ ತಿಳಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಈ ಘಟನೆ ನಡೆದಾಗ ಗ್ರಾಮಸ್ಥರಾದ ಅಜ್ಜು ರಾಜೇಖಾನ್, ಪ್ರಕಾಶ ಕಮ್ಮಾರ, ಪ್ರವೀಣ ಚೋಳಪ್ಪನವರ, ನಬಿಸಾಬ ರಾಜೇಖಾನ ಸೇರಿದಂತೆ ಇತರರು ಉಪಸ್ಥಿತರಿದ್ದರು.
    2
    ಗದಗ ಜಿಲ್ಲೆಯ ಕದಡಿ ಗ್ರಾಮದ ಮಲ್ಲಯ್ಯಜ್ಜನ ಕಟ್ಟೆ ಹತ್ತಿರ ಶನಿವಾರ ಬೆಳಿಗ್ಗೆ ಜನದಟ್ಟಣೆಯಿರುವ ವಸತಿ ಪ್ರದೇಶದಲ್ಲಿ ಬೃಹತ್ ನಾಗರ ಹಾವೊಂದು ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿದೆ. ಹಾವು ಸಳ ಸಳನೆ ಬರುತ್ತಿರುವುದನ್ನು ಕಂಡ ಸಾರ್ವಜನಿಕರು ಭಯಭೀತರಾಗಿ ಕೆಲ ಹೊತ್ತು ನಿಂತು ನೋಡುತ್ತಿದ್ದರು. ಈ ವೇಳೆ, ಕೆಲವರು ಇದು ದೇವರ ಹಾವಿರಬಹುದೇ ಎಂದು ಪರಸ್ಪರ ಚರ್ಚಿಸತೊಡಗಿದರು.

ತಕ್ಷಣವೇ ಅಲ್ಲಿಯೇ ಇದ್ದವರು ಒಬ್ಬ ಹಾವು ಹಿಡಿಯುವ ವ್ಯಕ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಧಾವಿಸಿದ ಉರಗ ರಕ್ಷಕರು, ಮಣ್ಣಿನ ಗೋಡೆಯಲ್ಲಿ ಅಡಗಿಕೊಂಡಿದ್ದ ಹಾವನ್ನು ಹೊರಗೆಳೆದು ಜೀವಂತವಾಗಿ ಸೆರೆ ಹಿಡಿದು ನಂತರ ಅದನ್ನು ಹೊರ ವಲಯದಲ್ಲಿ ಬಿಟ್ಟು ಹೋಗಿದ್ದಾರೆ. ಈ ಪ್ರಸಂಗ ಗ್ರಾಮಸ್ಥರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉರಗ ರಕ್ಷಕರು, ಎಲ್ಲಿಯೇ ಹಾವು ಕಂಡರೂ ಯಾರೂ ಅವುಗಳನ್ನು ಬಡಿಯಬಾರದು, ಬದಲಿಗೆ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಯವರಿಗೆ ತಿಳಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಈ ಘಟನೆ ನಡೆದಾಗ ಗ್ರಾಮಸ್ಥರಾದ ಅಜ್ಜು ರಾಜೇಖಾನ್, ಪ್ರಕಾಶ ಕಮ್ಮಾರ, ಪ್ರವೀಣ ಚೋಳಪ್ಪನವರ, ನಬಿಸಾಬ ರಾಜೇಖಾನ ಸೇರಿದಂತೆ ಇತರರು ಉಪಸ್ಥಿತರಿದ್ದರು.
    user_ಪ್ರಕಾಶ ಗುದ್ನೇಪ್ಪನವರ.
    ಪ್ರಕಾಶ ಗುದ್ನೇಪ್ಪನವರ.
    Local News Reporter ಗದಗ, ಗದಗ, ಕರ್ನಾಟಕ•
    15 hrs ago
  • ಹುಕ್ಕೇರಿ ನಮಗೆ ಪಟ್ಟದ ರಾಣಿ ಇದ್ದ ಹಾಗೆ ಇದ್ದರೆ, ಯಮಕನಮರಡಿ ಪ್ರೀತಿಯ ರಾಣಿ ಇದ್ದ ಹಾಗೆ ಎಂದು ಬಣ್ಣಿಸಲಾಗಿದೆ.
    1
    ಹುಕ್ಕೇರಿ ನಮಗೆ ಪಟ್ಟದ ರಾಣಿ ಇದ್ದ ಹಾಗೆ ಇದ್ದರೆ, ಯಮಕನಮರಡಿ ಪ್ರೀತಿಯ ರಾಣಿ ಇದ್ದ ಹಾಗೆ ಎಂದು ಬಣ್ಣಿಸಲಾಗಿದೆ.
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    21 hrs ago
  • ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಭಾಗದಲ್ಲಿ ಜೆ.ಕೆ. ಸಿಮೆಂಟ್ಸ್ ಕಾರ್ಖಾನೆಯ ಅಕ್ರಮ ಗಣಿಗಾರಿಕೆ ಮತ್ತು ವಿಸ್ತರಣಾ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ, ನಿಂಗಾಪುರ, ಹಲಕಿ, ಬೊಮ್ಮನಬುದ್ನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸೋಮವಾರಕ್ಕೆ ಎಂಟನೇ ದಿನಕ್ಕೆ ತಲುಪಿದೆ. ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ, ಪ್ರಭಾವ ಬಳಸಿ ದಲ್ಲಾಳಿಗಳ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, “ನಮ್ಮ ಭೂಮಿ ನಮ್ಮ ಹಕ್ಕು, ಕಾರ್ಖಾನೆ ಬೇಡವೇ ಬೇಡ” ಎಂದು ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳ ವರ್ತನೆ ವಿರುದ್ಧವೂ ರೈತರು ತೀವ್ರ ವಾಗ್ವಾದ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ರೈತ ಮುಖಂಡ ಶಾಂತೇಶ ಹಂಪಿಹೊಳಿ, ತಾವು ವಿದ್ಯಾವಂತರಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾರ್ಖಾನೆಯು ನಕಲಿ ದಾಖಲೆ ಸೃಷ್ಟಿಸಿ, ಸಾರ್ವಜನಿಕ ವಿಚಾರಣೆಯ ಹೆಸರಿನಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸಿ, ಉತ್ಪಾದನಾ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಲು ಅನುಮತಿ ಪಡೆದಿದೆ ಎಂಬುದು ರೈತರ ಗಂಭೀರ ಆರೋಪವಾಗಿದೆ. ಅತಿಯಾದ ಗಣಿಗಾರಿಕೆ ಮತ್ತು ಸಂಪನ್ಮೂಲಗಳ ದುರ್ಬಳಕೆಯಿಂದ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮ ವಿಸ್ತರಣೆಯನ್ನು ತಡೆಯುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಶಂಕರಗೌಡ ಹಿರೇಗೌಡರ, ಸುರೇಶ ಕಿವುಡಿ, ಶೈಲು ಹಂಪಿಹೊಳಿ, ರಂಗಪ್ಪ ತುಳಶಿಗೇರಿ, ಗಣಪತಿ ಹಂಪಿಹೊಳಿ, ಸುನಿಲ್ ನಾವಿ, ಹನುಮಂತ ಕಿವುಡಿ ಸೇರಿದಂತೆ ಇತರ ಅನೇಕರು ಉಪಸ್ಥಿತರಿದ್ದರು.
    1
    ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಭಾಗದಲ್ಲಿ ಜೆ.ಕೆ. ಸಿಮೆಂಟ್ಸ್ ಕಾರ್ಖಾನೆಯ ಅಕ್ರಮ ಗಣಿಗಾರಿಕೆ ಮತ್ತು ವಿಸ್ತರಣಾ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ, ನಿಂಗಾಪುರ, ಹಲಕಿ, ಬೊಮ್ಮನಬುದ್ನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸೋಮವಾರಕ್ಕೆ ಎಂಟನೇ ದಿನಕ್ಕೆ ತಲುಪಿದೆ.

ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ, ಪ್ರಭಾವ ಬಳಸಿ ದಲ್ಲಾಳಿಗಳ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, “ನಮ್ಮ ಭೂಮಿ ನಮ್ಮ ಹಕ್ಕು, ಕಾರ್ಖಾನೆ ಬೇಡವೇ ಬೇಡ” ಎಂದು ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳ ವರ್ತನೆ ವಿರುದ್ಧವೂ ರೈತರು ತೀವ್ರ ವಾಗ್ವಾದ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ರೈತ ಮುಖಂಡ ಶಾಂತೇಶ ಹಂಪಿಹೊಳಿ, ತಾವು ವಿದ್ಯಾವಂತರಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರ್ಖಾನೆಯು ನಕಲಿ ದಾಖಲೆ ಸೃಷ್ಟಿಸಿ, ಸಾರ್ವಜನಿಕ ವಿಚಾರಣೆಯ ಹೆಸರಿನಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸಿ, ಉತ್ಪಾದನಾ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಲು ಅನುಮತಿ ಪಡೆದಿದೆ ಎಂಬುದು ರೈತರ ಗಂಭೀರ ಆರೋಪವಾಗಿದೆ. ಅತಿಯಾದ ಗಣಿಗಾರಿಕೆ ಮತ್ತು ಸಂಪನ್ಮೂಲಗಳ ದುರ್ಬಳಕೆಯಿಂದ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮ ವಿಸ್ತರಣೆಯನ್ನು ತಡೆಯುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಶಂಕರಗೌಡ ಹಿರೇಗೌಡರ, ಸುರೇಶ ಕಿವುಡಿ, ಶೈಲು ಹಂಪಿಹೊಳಿ, ರಂಗಪ್ಪ ತುಳಶಿಗೇರಿ, ಗಣಪತಿ ಹಂಪಿಹೊಳಿ, ಸುನಿಲ್ ನಾವಿ, ಹನುಮಂತ ಕಿವುಡಿ ಸೇರಿದಂತೆ ಇತರ ಅನೇಕರು ಉಪಸ್ಥಿತರಿದ್ದರು.
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    18 hrs ago
  • ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸೋಮವಾರ ಶಾಸಕ ಅಶೋಕ ಮನಗೂಳಿ ಅವರು ಸಂಸದ ರಮೇಶ್ ಜಿಗಜಿನಗಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮ್ಮ ಮತಕ್ಷೇತ್ರವಾದ ಸಿಂದಗಿಗೆ ಸಂಸದ ಜಿಗಜಿನಗಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದ ಮನಗೂಳಿ, ಜಿಗಜಿನಗಿ ಅವರು ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ತಾನು ಇಷ್ಟು ಅನುದಾನ ನೀಡಿದ್ದೇನೆ ಎಂದು ಹೇಳಿಕೊಳ್ಳುವ ಬದಲು, ನೀಡಿದ ಅನುದಾನದ ಬಗ್ಗೆ ಸಂಸದರು ನಿಖರ ಮಾಹಿತಿ ನೀಡುವಂತೆ ಶಾಸಕ ಮನಗೂಳಿ ಒತ್ತಾಯಿಸಿದ್ದಾರೆ.
    1
    ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸೋಮವಾರ ಶಾಸಕ ಅಶೋಕ ಮನಗೂಳಿ ಅವರು ಸಂಸದ ರಮೇಶ್ ಜಿಗಜಿನಗಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮ್ಮ ಮತಕ್ಷೇತ್ರವಾದ ಸಿಂದಗಿಗೆ ಸಂಸದ ಜಿಗಜಿನಗಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದ ಮನಗೂಳಿ, ಜಿಗಜಿನಗಿ ಅವರು ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ತಾನು ಇಷ್ಟು ಅನುದಾನ ನೀಡಿದ್ದೇನೆ ಎಂದು ಹೇಳಿಕೊಳ್ಳುವ ಬದಲು, ನೀಡಿದ ಅನುದಾನದ ಬಗ್ಗೆ ಸಂಸದರು ನಿಖರ ಮಾಹಿತಿ ನೀಡುವಂತೆ ಶಾಸಕ ಮನಗೂಳಿ ಒತ್ತಾಯಿಸಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    1 hr ago
  • ಬಾದಾಮಿ ತಾಲೂಕಿನ ಕೆರೂರ್ ಪೊಲೀಸ್ ಠಾಣಾ ವ್ಯಾಪ್ತಿಯ ನರನೂರ ತಾಂಡಾ ಗ್ರಾಮದಲ್ಲಿ ಎಂಟನೇ ತರಗತಿ ಓದುತ್ತಿರುವ ಪ್ರಜ್ವಲ್ ಕುಮಾರ್ ಚವಾಣ್ ಎಂಬ ಅನಾಥ ವಿದ್ಯಾರ್ಥಿಯ ಮೇಲೆ ಭೀಕರ ಹಲ್ಲೆ ನಡೆದಿದೆ. ಕ್ರಿಕೆಟ್ ಆಡುವ ಸಂದರ್ಭದಲ್ಲಿ ಚಂಡು ಓರ್ವ ಅಜ್ಜಿಗೆ ತಗುಲಿದ ಕಾರಣ, ಆ ಅಜ್ಜಿಯ ಕುಟುಂಬಸ್ಥರು ವಿದ್ಯಾರ್ಥಿಯನ್ನು ಕಟ್ಟಿ ಹಾಕಿ ಚಪ್ಪಲಿ ಮತ್ತು ಕೈಗಳಿಂದ ಹಲ್ಲೆ ಮಾಡಿದ್ದಾರೆ. ಮೂಲಗಳ ಪ್ರಕಾರ, ಈ ಮಗು ತಂದೆ-ತಾಯಿ ಇಲ್ಲದ ಅನಾಥನಾಗಿದ್ದಾನೆ. ಈ ಹಲ್ಲೆಯಿಂದ ಗಾಯಗೊಂಡ ಮಗು ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಪೋಷಕರು ಈ ಘಟನೆಯ ಬಗ್ಗೆ ತಕ್ಷಣ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಸೂಕ್ತ ದೂರು ಸಲ್ಲಿಸುವಂತೆ ಆಗ್ರಹಿಸಿದ್ದಾರೆ.
    3
    ಬಾದಾಮಿ ತಾಲೂಕಿನ ಕೆರೂರ್ ಪೊಲೀಸ್ ಠಾಣಾ ವ್ಯಾಪ್ತಿಯ ನರನೂರ ತಾಂಡಾ ಗ್ರಾಮದಲ್ಲಿ ಎಂಟನೇ ತರಗತಿ ಓದುತ್ತಿರುವ ಪ್ರಜ್ವಲ್ ಕುಮಾರ್ ಚವಾಣ್ ಎಂಬ ಅನಾಥ ವಿದ್ಯಾರ್ಥಿಯ ಮೇಲೆ ಭೀಕರ ಹಲ್ಲೆ ನಡೆದಿದೆ. ಕ್ರಿಕೆಟ್ ಆಡುವ ಸಂದರ್ಭದಲ್ಲಿ ಚಂಡು ಓರ್ವ ಅಜ್ಜಿಗೆ ತಗುಲಿದ ಕಾರಣ, ಆ ಅಜ್ಜಿಯ ಕುಟುಂಬಸ್ಥರು ವಿದ್ಯಾರ್ಥಿಯನ್ನು ಕಟ್ಟಿ ಹಾಕಿ ಚಪ್ಪಲಿ ಮತ್ತು ಕೈಗಳಿಂದ ಹಲ್ಲೆ ಮಾಡಿದ್ದಾರೆ. ಮೂಲಗಳ ಪ್ರಕಾರ, ಈ ಮಗು ತಂದೆ-ತಾಯಿ ಇಲ್ಲದ ಅನಾಥನಾಗಿದ್ದಾನೆ.

ಈ ಹಲ್ಲೆಯಿಂದ ಗಾಯಗೊಂಡ ಮಗು ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಪೋಷಕರು ಈ ಘಟನೆಯ ಬಗ್ಗೆ ತಕ್ಷಣ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಸೂಕ್ತ ದೂರು ಸಲ್ಲಿಸುವಂತೆ ಆಗ್ರಹಿಸಿದ್ದಾರೆ.
    user_ಮುತ್ತಣ್ಣ ಯರಗೊಪ್ಪ, ಬಾದಾಮಿ
    ಮುತ್ತಣ್ಣ ಯರಗೊಪ್ಪ, ಬಾದಾಮಿ
    Local News Reporter ಬಾದಾಮಿ, ಬಾಗಲಕೋಟೆ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.