'ನೀ ಬಾಂಗ್ಲಾದೇಶದವನಾ' ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ಹಲ್ಲೆ: ಜೈ ಶ್ರೀರಾಮ್ ಹೇಳುವಂತೆ ಒತ್ತಾಯ ಕಡಲನಗರಿ ಮಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯನನ್ನೇ ಬಾಂಗ್ಲಾದೇಶದವನು ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ತಂಡವೊಂದು ಹಲ್ಲೆ ಮಾಡಿದೆ. ಅಂದಹಾಗೇ ಈ ಘಟನೆ ಮಂಗಳೂರಿನ ಕಾವೂರು ಠಾಣೆ ವ್ಯಾಪ್ತಿಯ ಕೂಳೂರು ಚರ್ಚ್ ಬಳಿ ನಡೆದಿದ್ದು ಘಟನೆ ಸಂಬಂಧಿಸಿ ನಾಲ್ವರು ಯುವಕರ ಮೇಲೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್ ದಾಸ್ ಎಂಬುವವರನ್ನು ಬಂಧಿಸಲಾಗಿದೆ. ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಎಂಬಾತ ಕಳೆದ 10-15 ವರ್ಷಗಳಿಂದ ಮಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದು ತನ್ನ ಇನ್ನೊಬ್ಬ ಗೆಳೆಯನ ಜೊತೆಗೆ ಕುಳೂರಿನಲ್ಲಿ ನೆಲೆಸಿದ್ದ. ಈತನಿಗೆ ಸ್ಥಳೀಯರಾದ ನಾಲ್ವರು ಆರೋಪಿಗಳು ಕಳೆದ 5-6 ತಿಂಗಳಿನಿಂದ “ನೀನು ಬಾಂಗ್ಲಾದೇಶದ ಪ್ರಜೆ" ಎಂದು ಹೇಳಿ ಹಲ್ಲೆ ನಡೆಸುತ್ತಿದ್ದರು. ಅಲ್ಲದೆ ಜೈ ಶ್ರೀರಾಮ್ ಕೂಗುವಂತೆ ಈ ನಾಲ್ವರು ಒತ್ತಾಯಿಸಿದರು ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾನೆ. ತಾನು ಜಾರ್ಖಂಡ್ ಮೂಲದವನೆಂದು ತಿಳಿಸಿದರೂ ಆರೋಪಿಗಳು ಕೇಳದೆ, ದಾಖಲೆಗಳನ್ನು ಒದಗಿಸುವಂತೆ ಒತ್ತಡ ಹೇರುತ್ತ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ನಿನ್ನೆ ಭಾನುವಾರ ಸಂಜೆ ಮತ್ತೆ ದಿಲ್‌ಜಾನ್ ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದು ತಲೆಗೆ ಪೆಟ್ಟು ಬಿದ್ದು ರಕ್ತ ಬಂದಿದೆ. ಈ ವೇಳೆ, ಸ್ಥಳೀಯ ಹಿಂದೂ ಮಹಿಳೆಯರು ರಕ್ಷಿಸಿ ಹೊಡೆಯದಂತೆ ತಡೆದಿದ್ದಾರೆ. ಇನ್ನು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ . 03/2026 600: 126(2), 352, 351(3), 353, 109, 118(1) 3(5) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು ರವರು, ಪೊಲೀಸ್ ಉಪ-ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಹಾಸ್ ಸನೀಲ್ ಹೆಚ್.ಸಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ರಿಯಾಜ್, ನಾಗರಾಜ್, ಹನುಮಂತ ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿದೆ.
'ನೀ ಬಾಂಗ್ಲಾದೇಶದವನಾ' ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ಹಲ್ಲೆ: ಜೈ ಶ್ರೀರಾಮ್ ಹೇಳುವಂತೆ ಒತ್ತಾಯ ಕಡಲನಗರಿ ಮಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯನನ್ನೇ ಬಾಂಗ್ಲಾದೇಶದವನು ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ತಂಡವೊಂದು ಹಲ್ಲೆ ಮಾಡಿದೆ. ಅಂದಹಾಗೇ ಈ ಘಟನೆ ಮಂಗಳೂರಿನ ಕಾವೂರು ಠಾಣೆ ವ್ಯಾಪ್ತಿಯ ಕೂಳೂರು ಚರ್ಚ್ ಬಳಿ ನಡೆದಿದ್ದು ಘಟನೆ ಸಂಬಂಧಿಸಿ ನಾಲ್ವರು ಯುವಕರ ಮೇಲೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕೂಳೂರು ನಿವಾಸಿಗಳಾದ
ಸಾಗರ್, ಧನುಷ್, ಲಾಲು ಯಾನೆ ರತೀಶ್ ದಾಸ್ ಎಂಬುವವರನ್ನು ಬಂಧಿಸಲಾಗಿದೆ. ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಎಂಬಾತ ಕಳೆದ 10-15 ವರ್ಷಗಳಿಂದ ಮಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದು ತನ್ನ ಇನ್ನೊಬ್ಬ ಗೆಳೆಯನ ಜೊತೆಗೆ ಕುಳೂರಿನಲ್ಲಿ ನೆಲೆಸಿದ್ದ. ಈತನಿಗೆ ಸ್ಥಳೀಯರಾದ ನಾಲ್ವರು ಆರೋಪಿಗಳು ಕಳೆದ 5-6 ತಿಂಗಳಿನಿಂದ “ನೀನು ಬಾಂಗ್ಲಾದೇಶದ ಪ್ರಜೆ" ಎಂದು ಹೇಳಿ ಹಲ್ಲೆ ನಡೆಸುತ್ತಿದ್ದರು. ಅಲ್ಲದೆ ಜೈ ಶ್ರೀರಾಮ್ ಕೂಗುವಂತೆ ಈ ನಾಲ್ವರು ಒತ್ತಾಯಿಸಿದರು ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾನೆ. ತಾನು
ಜಾರ್ಖಂಡ್ ಮೂಲದವನೆಂದು ತಿಳಿಸಿದರೂ ಆರೋಪಿಗಳು ಕೇಳದೆ, ದಾಖಲೆಗಳನ್ನು ಒದಗಿಸುವಂತೆ ಒತ್ತಡ ಹೇರುತ್ತ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ನಿನ್ನೆ ಭಾನುವಾರ ಸಂಜೆ ಮತ್ತೆ ದಿಲ್‌ಜಾನ್ ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದು ತಲೆಗೆ ಪೆಟ್ಟು ಬಿದ್ದು ರಕ್ತ ಬಂದಿದೆ. ಈ ವೇಳೆ, ಸ್ಥಳೀಯ ಹಿಂದೂ ಮಹಿಳೆಯರು ರಕ್ಷಿಸಿ ಹೊಡೆಯದಂತೆ ತಡೆದಿದ್ದಾರೆ. ಇನ್ನು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ . 03/2026 600: 126(2), 352, 351(3), 353,
109, 118(1) 3(5) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು ರವರು, ಪೊಲೀಸ್ ಉಪ-ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಹಾಸ್ ಸನೀಲ್ ಹೆಚ್.ಸಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ರಿಯಾಜ್, ನಾಗರಾಜ್, ಹನುಮಂತ ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿದೆ.
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ: 11 ವರ್ಷಗಳ ನಂತರ ಜ.15 ರಿಂದ ಜ. 23ರವರೆಗೆ ಕಲ್ಕುಣಿ ಗ್ರಾಮದ ಐತಿಹಾಸಿಕ ಸಪ್ತ ಮಾತೃಕಿಯರ ದೊಡ್ಡ ಜಾತ್ರಾ ಮಹೋತ್ಸವ ಮಳವಳ್ಳಿ :ತಾಲ್ಲೂಕಿನ ಕಲ್ಕುಣಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಹಾಶಕ್ತಿ ಮಂಚದ ಕಾಳಿಕಾಂಭ ಸಪ್ತ ಮಾತೃಕೆಯರ ದೊಡ್ಡ ಜಾತ್ರಾ ಮಹೋತ್ಸವ ಜ 15 ರಿಂದ ಜ.23 ರವರೆಗೆ ಲಕ್ಷಾಂತರ ಜನಸ್ತೋ ಮದ ನಡುವೆ ಬಹು ವಿಜೃಂಭಣೆ ಯಿಂದ ಜರುಗಲಿದೆ. ಈ ಸಂಬಂಧ ಕಲ್ಕುಣಿ ಗ್ರಾಮದ ಸೊಸೈಟಿ ಆವರಣದಲ್ಲಿ ಶ್ರೀ ಮಂಚದ ಕಾಳಿಕಾಂಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್ ನಂಜೇಗೌಡ ಮತ್ತು ಆಡಳಿತ ಮಂಡಳಿಯ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಹಬ್ಬದ ಆಚರಣೆ ಕುರಿತ ಪ್ರಮುಖ ಅಂಶಗ ಳನ್ನು ವಿವರಿಸಿದರು . ಈ ಸಂದರ್ಭದಲ್ಲಿ ಮಾಜಿ ಟಿಎಪಿಸಿ ಎಂಎಸ್ ಅಧ್ಯಕ್ಷರು ಆದ ಕೆ ಜೆ ದೇವರಾಜು ಅವರುಗಳು ಶ್ರೀ ಮಂಚದ ಕಾಳಿಕಾಂಭ, ಶ್ರೀ ವಿಜಯನಗರೇಶ್ವರಿ, ಶ್ರೀ ಹಿರಿಯ ಮಂಚದ ಕಾಳಿಕಾಂಭ, ಶ್ರೀ ಮನೆಯಮ್ಮ, ಶ್ರೀ ಬೆಟ್ಟದ ಅರಸಮ್ಮ, ಶ್ರೀ ಕನ್ನಕಡ್ಡಯ್ಯ, ಶ್ರೀ ಮುಖದ ದೇವರು, ಶ್ರೀ ಮೂಗದೇವಮ್ಮ, ಶ್ರೀ ಪಟ್ಟಲ ದಮ್ಮ ಸೇರಿದಂತೆ ಸಪ್ತ ಮಾತೃಕೆ ಯರ ಆರಾಧನೆಯ ಐತಿಹಾಸಿಕ ಹಬ್ಬ ಇದಾಗಿದೆ ಕಲ್ಕುಣಿ, ದೊಡ್ಡೇ ಗೌಡನ ಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ಪುಟ್ಟೇಗೌಡನ ಕೊಪ್ಪಲು, ಚಿಕ್ಕಕಲ್ಕುಣಿ ಹಾಗೂ ಇನ್ನಿತರ ಗ್ರಾಮಸ್ಥರು ಸೇರಿ ಆಚರಿಸುವ ಬಹುಕಟ್ಟುಪಾಡು ಗಳನ್ನು ಒಳಗೊಂಡ ಬಹು ಸಾಂಪ್ರದಾಯಿಕ ಹಬ್ಬ ಇದಾಗಿದೆ ಎಂದು ತಿಳಿಸಿದರು. ಪ್ರತೀ 5 ವರ್ಷ 7 ವರ್ಷ 9 ವರ್ಷಗಳಿಗೊಮ್ಮೆ ಈ ಹಬ್ಬ ನಡೆಯುತ್ತಿತ್ತಾದರೂ ಕರೋನದಿಂದಾಗಿ 11 ವರ್ಷದ ನಂತರ ಈ ಹಬ್ಬ ನಡೆಯುತ್ತಿದೆ. ಗ್ರಾಮದ ಹೊರವಲಯದ ವೀಳ್ಯದೆಲೆ ತೋಟವೊಂದರ ಭೂಮಾಂತ ಗರ್ಭದಲ್ಲಿ ನೆಲೆಗೊಂಡಿರುವ ಶ್ರೀ ಮಂಚದ ಕಾಳಿಕಾಂಭ ಮಹಾತಾ ಯಿಯ ವಿಗ್ರಹವನ್ನು ಜನವರಿ 15 ರಂದು ಮಧ್ಯರಾತ್ರಿ ಹೊರತೆಗೆದು ನಿಶ್ಯಬ್ದ ಸ್ಥಿತಿಯಲ್ಲಿ ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸುವು ದರೊಂದಿಗೆ ಹಬ್ಬದ ಪ್ರಮುಖ ಘಟ್ಟ ಆರಂಭವಾಗಲಿದೆ ಎಂದು ಅವರು ವಿವರಿಸಿದರು. 8 ದಿನಗಳ ಕಾಲ ದೇವತೆಯರ ಉತ್ಸವ ಹೆಬ್ಬಾರೆಗಳ ಮೆರವಣಿಗೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ ಎಂದು ತಿಳಿಸಿದ ಅವರು 20 ರಂದು ಮಂಗಳವಾರ ಬಲಿ ಬೀಳುವುದರೊಂದಿ ಹಬ್ಬದ ಪ್ರಮುಖ ಅತ್ಯಾಕರ್ಷಕ ಗಟ್ಟ ಜರುಗಲಿದೆ .ಅಂದು ರಾತ್ರಿ 11.30 ರ ಸುಮಾರಿಗೆ ಮನೆಯಮ್ಮ ಲಕ್ಷ್ಮಿ ದೇವಮ್ಮ ದೇವಸ್ಥಾನದಲ್ಲಿ ಅರ್ಚಕರು ಬಲಿ ಬೀಳಲಿದ್ದು ಬಲಿಯನ್ನು ಚಾವಡಿ ಮುಂಭಾಗ ಪವಡಿಸಿರುವ ಶ್ರೀ ಮಂಚದ ಕಾಳಿಕಾಂಭ ದೇವಿಯ ಮುಂದೆ ತಂದು ಇಟ್ಟು ಮುಖದ ದೇವರು ಅದರ ಸುತ್ತ ಕುಣಿಯು ವುದು ಹಬ್ಬದ ಪ್ರಮುಖ ಹಂತವಾ ಗಿದೆ ಎಂದು ವಿವರಿಸಿದರು. ಇದಲ್ಲದೆ ಜನವರಿ 23 ರಂದು ಬೆಳಿಗ್ಗೆ ಗ್ರಾಮದ ದೊಡ್ಡ ಕೆರೆಯಲ್ಲಿ ಸಪ್ತಮಾತೃಕೆಯರ ತೆಪ್ಪೋತ್ಸವ ನಡೆಯಲಿದ್ದು ಜನವರಿ 25 ರಂದು ಮದ್ಯ ರಾತ್ರಿ ಶ್ರೀ ಮಂಚದ ಕಾಳಿಕಾಂಭ ದೇವಿಯನ್ನು ಮತ್ತೆ ಭೂಮಾಂತ ರ್ಗಕ್ಕೆ ಸೇರಿಸುವುದರೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ ಎಂದು ವಿವರಿಸಿದರು. ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಈ ಹಬ್ಬಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಯಾವುದೇ ಲೋಪವಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಪಿ ಎಂ ನರೇಂದ್ರಸ್ವಾಮಿ ಈಗಾಗಲೇ ಸೂಚಿಸಿದ್ದಾರೆ ಎಂದು ದೇವರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಾದನಾಯಕ, ಪರಮೇಶ್, ಮಾದೇವು, ಸೋಮಶೇಖರ್, ಚಂದನ್, ಮಲ್ಲಯ್ಯಪ್ಪ ಹಾಜರಿದ್ದರು.1
- ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಟಣದಲ್ಲಿನ ಹೋಟೆಲ್ ಗಳು, ಡಾಬಾಗಳು ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ತಳ್ಳುವ ಗಾಡಿಗಳವರಿಗೆ ಪೊಲೀಸ್ ಹಾಗೂ ಪಟ್ಟಣ ಪಂಚಾಯತ್ ಸಿಬ್ಬಂದಿಗಳೊಂದಿಗೆ ಅಧಿಕಾರಿಗಳು ಅಧಿಕಾರಿ ಡಾಕ್ಟರ್ ಜಿ .ಎಚ್. ಗಿರೀಶ್ ಅವರು ಭೇಟಿ ನೀಡಿ ಸ್ವಚ್ಛತೆ ,ಶುಚಿತ್ವ ,,ಶುದ್ಧ ಕುಡಿವ ನೀರಿನ ಬಗ್ಗೆ ಹಾಗೂ ಆಹಾರಗಳಿಗೆ ಬಳಸುವ ನಿಷೇಧಿತ ಕಲರ್ ಮತ್ತು ಪ್ಲಾಸ್ಟಿಕ್ ಗಳು ಹಾಗೂ ಎಫ್ ಎಸ್ ಎಸ್ ಎ ಐ ಲೈಸೆನ್ಸ್ ಪರಿಶೀಲಿಸಿ ನೋಟಿಸ್ ನೀಡಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿ ನಾಗರಾಜ್, ಆರೋಗ್ಯ ಇಲಾಖೆಯ ಜಿ.ಟಿ .ಕುಮಾರ್ ಹಿರಿಯ ಆಹಾರ ಆರೋಗ್ಯ ನಿರೀಕ್ಷಣಾಧಿಕಾರಿಗಳಿದ್ದರು.3
- ಹನೂರು: ತಾಲ್ಲೂಕಿನ ಮಹದೇಶ್ವರಬೆಟ್ಟ ರಸ್ತೆಯ ಕೋಣನಕೆರೆಯ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸುಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಂತಹ ಪ್ರಸಂಗ ಜರುಗಿದೆ ಕೊಣನಕೆರೆ ಗ್ರಾಮದ ಹತ್ತಿರ ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಯಲ್ಲಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ನಂ ಕೆಎ10 ಎಫ್ 0509 ಬಸ್ ಹಾಗೂ ಕೆಎ 09 ಜೆಎಸ್ 3871 ದ್ವಿ ಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ರಾಮೇಗೌಡನ ಹಳ್ಳಿ ಗ್ರಾಮದ ಶಿವಪ್ಪ ಬಿನ್ ರಾಜು (35) ಸತ್ತಿ ಬಿನ್ ಮಾದೇವ (36)ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಕೂಡಲೆ ಸ್ಥಳಕ್ಕೆ ರಾಮಪುರ ಠಾಣೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.1
- ಬೆಳಗಾವಿ ಬ್ರೇಕಿಂಗ್ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವಕ್ಕೆ ಮಳೆ ಅಡ್ಡಿ. ತೆಲೆ ಮೇಲೆ ಕುರ್ಚಿ ಹಿಡಿದುಕ್ಕೊಂಡು ಕಾರ್ಯಕ್ರಮ ವೀಕ್ಷಿಸಿದ ಸಾರ್ವಜನಿಕರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೋಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಸವ. ಸಂಗೊಳ್ಳಿ ರಾಯಣ್ಣ ಉತ್ಸವ ಹಿನ್ನಲೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದ ಜಿಲ್ಲಾಡಳಿತ. ಕಾರ್ಯಕ್ರಮ ವೇಳೆ ಮಳೆರಾಯನ ಆಗಮನ. ಮಳೆ ಬರುತ್ತಿದ್ದಂತೆಯೇ ತಲೆ ಮೇಲೆ ಕುರ್ಚಿ ಹಿಡಿದು ನಿಂತ ಸಾರ್ವಜನಿಕರು. ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರ ಪರದಾಟ.4
- ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಅಂತರರಾಜ್ಯ ಕಳ್ಳಿಯನ್ನು ಬಂಧಿಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು!1
- *ಭಾರತ ನಲ್ಲಿ ವೈರಲ್*1
- ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಸನಿಹದಲ್ಲಿರುವ ತೊಳಸಿಕೆರೆ ಗ್ರಾಮದ ದುಮ್ಮತಂಬಡಿ ಅವರಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಅರಣ್ಯ ಪ್ರದೇಶದಿಂದ ಬಂದ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಹುಲಿ ದಾಳಿ ವಿಚಾರ ತಿಳಿಯುತ್ತಿ ದ್ದಂತೆ ಸ್ಥಳೀಯ ಅರಣ್ಯಾ ಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ, ಹುಲಿ ತಿಂದು ಬಿಟ್ಟಿರುವ ಹಸುವಿನ ಕಳೇಬರವನ್ನು ಪರಿಶೀಲಿಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಮ.ಬೆಟ್ಟ ಸನಿಹದಲ್ಲಿರುವ ಗ್ರಾಮದ ನಿವಾಸಿಗಳು ಹುಲಿ ದಾಳಿಯಿಂದ ಭೀತಿಗೊಂಡಿದ್ದು, ಬೇರೆ ಕಡೆಯಿಂದ ಹುಲಿಯನ್ನು ತಂದು ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದರಿಂದ ಹುಲಿ ಹಸುವನ್ನು ಕೊಂದು ತಿಂದಿದೆ. ಶೀಘ್ರದಲ್ಲಿ ಹುಲಿಯನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದರು1
- ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದಲ್ಲಿರುವ ಇನಾಮದಾರ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇದೇ ಜನವರಿ 07, 2026 ರಂದು ಬಾಯರ್ ಸ್ಪೋಟವಾಗಿ ಭೀಕರ ಅಪಘಾತ ಸಂಭವಿಸಿದ್ದು. ಈ ಘಟನೆಯಲ್ಲಿ 08 ಜನ ಅಮಾಯಕ ಕಾರ್ಮಿಕರು ಪ್ರಾಣ ಕಳೆದುಕೊಂಡಿರುತ್ತಾರೆ. ಈ ಘಟನೆ ಸಂಪೂರ್ಣ ಜಿಲ್ಲೆಯ ಜನರನ್ನು ದಃಖ ಹಾಗೂ ಆಘಾತಕ್ಕೆ ಒಳಪಡಿಸಿದೆ. ಮೃತರು ತಮ್ಮ ಕುಟುಂಬಗಳ ಏಕೈಕ ಆಧಾರಸ್ತಂಭರಾಗಿದ್ದು, ಅವರ ಅಕಾಲಿಕ ಮರಣದಿಂದ ಕುಟುಂಬಗಳು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಆಘಾತವು ಕಾರ್ಖಾನೆಯ ನಿರ್ಲಕ್ಷ್ಯ, ಸುರಕ್ಷತಾ ಕ್ರಮಗಳ ಕೊರತೆ ಹಾಗೂ ತಾಂತ್ರಿಕ ಲೋಪದಿಂದ ಸಂಭವಿಸಿರುವ ಸಾಧ್ಯತೆ ಇದ್ದು, ಈ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಂತ ಅಗತ್ಯವಾಗಿದೆ. ಆದುದರಿಂದ, ಮಾನ್ಯರು ದಯವಿಟ್ಟು ಈ ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ: ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ 10 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ಪರಿಹಾರ ಘೋಷಿಸಿ ವಿತರಿಸಬೇಕು. ಇನಾಮದಾರ ಶುಗರ್ ಕಾರ್ಖಾನೆಯ ವಿರುದ್ಧ ಕಾನೂನಬದ್ದ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಕಾರ್ಖಾನೆಯ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಮೃತ ಕುಟುಂಬಗಳ ಒಬ್ಬ ಸದಸ್ಯರಿಗೆ ಉದ್ಯೋಗ ಅಥವಾ ದೀರ್ಘಕಾಲೀನ ನೆರವು ಒದಗಿಸುವ ಕುರಿತು ಸರ್ಕಾರದಿಂದ ಕ್ರಮ ಕೈಗೊಳ್ಳಬೇಕು. ಮಾನ್ಯರು ಈ ಗಂಭೀರ ವಿಷಯವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ, ನ್ಯಾಯ ಒದಗಿಸಬೇಕೆಂದು ನಾವು ಹೃತ್ತೂರ್ವಕವಾಗಿ ವಿನಂತಿಸುತ್ತೇವೆ.3