ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಉತ್ಸವದ ಕರಪತ್ರ ಬಿಡುಗಡೆ ಭಾಲ್ಕಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಸಮಿತಿ ವತಿಯಿಂದ ಆಗಸ್ಟ್ 15ರಂದು ನಡೆಯಲಿರುವ ಸಂಗೊಳ್ಳಿ ರಾಯಣ್ಣ ಜಯಂತಿ ಉತ್ಸವದ ಕರಪತ್ರ ಬಿಡುಗಡೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಕರಪತ್ರ ಬಿಡುಗಡೆ ಕಾರ್ಯಕ್ರಮವು ಭಾಲ್ಕಿ ನಗರದ ಕನಕ ಭವನದಲ್ಲಿ ಜರುಗಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ, ಶೌರ್ಯ ಹಾಗೂ ರಾಷ್ಟ್ರಭಕ್ತಿಯನ್ನು ಸ್ಮರಿಸಿ ಸಮಿತಿಯ ಪದಾಧಿಕಾರಿಗಳು ಮಾತನಾಡಿದರು. ಉತ್ಸವ ಸಮಿತಿಯ ಅಧ್ಯಕ್ಷರಾದ ಲೋಕೇಶ ಘೋದೆ, ಬಾಲಾಜಿ ಖೇಡಕರ, ಕೆ ಡಿ ಗಣೇಶ, ಬಾಲಾಜಿ ಜಬಾಡೆ ಮತ್ತಿತರರು ಈ ಕರಪತ್ರ ಬಿಡುಗಡೆ ಮಾಡಿ,ಮಾತನಾಡಿ “ರಾಯಣ್ಣನವರ ಹೋರಾಟವು ನಮ್ಮ ನಾಡಿನ ಸ್ವಾತಂತ್ರ್ಯದ ಶ್ರೇಷ್ಠ ಇತಿಹಾಸ ಇದೆ. ಈ ಜಯಂತಿಯು ಯುವಜನತೆಗೆ, ಸಮಾಜಕ್ಕೆ ಪ್ರೇರಣೆಯ ನಿದರ್ಶನವಾಗಬೇಕು. ಆಗಸ್ಟ್ 15ರಂದು ಈ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು,” ಅದರ ಪೂರ್ವಭಾವಿಯಾಗಿ ಆಗಸ್ಟ್ 12 ರಂದು ಬೊಮ್ಮಗೊಂಡೇಶ್ವರ ವೃತ್ತದಿಂದ ಕನಕ ಭವನದವರೆಗೆ ಬೃಹತ ಬೈಕ ರ್ಯಾಲಿ ನಡೆಯಲಿದ್ದು ಭಾಲ್ಕಿ ತಾಲೂಕಿನ ಎಲ್ಲ ಸಮಾಜದ ಯುವಕರು,ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊಂಡಿರುತ್ತಾರೆ. ಈ ವರ್ಷದ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಂಗೊಳ್ಳಿ ರಾಯಣ್ಣನವರ ಜೀವನ ಕುರಿತ ಉಪನ್ಯಾಸ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆಗಳು ಇತ್ಯಾದಿಗಳನ್ನು ನಡೆಸುವ ಯೋಜನೆ ಇದೆ ಎಂದು ಸಂಘಟಕರು ತಿಳಿಸಿದರು. ಈ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಯಲ್ಲಾಲಿಂಗ, ದೇವಿದಾಸ ಮೇತ್ರೆ, ಚಂದ್ರಕಾಂತ ತಳವಾಡೆ,ಮಹೇಶ ಘೋದೆ, ಸೂರ್ಯಕಾಂತ, ರಾಜಕುಮಾರ, ವಿಜಯಕುಮಾರ, ಮನೋಜ, ಭೀಮಣ್ಣ, ಪರಮೇಶ್ವರ,ಕಿರಣ,ಬಾಲಾಜಿ ತೇಗಪುರೆ, ಮಲ್ಲಿಕಾರ್ಜುನ,ಸಮಾಜದ ಮುಖಂಡರುಗಳು,ಗಣ್ಯರು, ಯುವ ನಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಜಯಂತಿಯ ಯಶಸ್ಸಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

- ಆ ಭಗವಂತ ಇಟ್ಟಂಗೆ ಇರಬೇಕು ಇದೆ ಜೀವನ 🙏1
- ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಭಜಂತ್ರಿ ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 93803537101
- ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ್ ರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಶಿಗ್ಗಾವಿ: ಇಂದು ಗುಣಮಟ್ಟದ ಶಿಕ್ಷಣ ಕೊಡುವುದು ಬಹಳಷ್ಟು ಮುಖ್ಯವಾಗಿದೆ. ನಮ್ಮ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವಾರು ಶೈಕ್ಷಣಿಕ, ಉದ್ಯೋಗದ ಕ್ರಾಂತಿ ಮಾಡಿದ್ದೇನೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಡಾ. ಎಫ್.ಜಿ ಪಾಟೀಲ್ ಇವರಿಂದ ಏರ್ಪಡಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದ ಶಿಗ್ಗಾವಿ-ಸವಣೂರ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವ ಉದ್ಘಾಟಿಸಿ ಮಾತನಾಡಿ ಅವರು ನಾನು ಶಾಸಕನಾದಾಗ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಬಹಳಷ್ಟು ಇತ್ತು. ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ 150ಕ್ಕೂ ಹೆಚ್ಚು ಶಿಕ್ಷಕರನ್ನು ಕೊಡಲಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನ ಓದಿದಾಗ ಉದ್ಯೋಗ ಬೇಗ ಪಡೆಯಬಹುದು, ಗ್ರಾಮೀಣ ಭಾಗದೆ ಮಕ್ಕಳಿಗೆ ಯಾವುದೇ ಪ್ರತಿಭೆ ಕಡಿಮೆ ಇಲ್ಲ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶಗಳು ಕಡಿಮೆ ಇದೆ. ಸಾಧಿಸುವ ಛಲದ ಮೇಲೆ ಅವಕಾಶಗಳು ಹುಡುಕಿ ಬರುತ್ತವೆ. ಆಲೋಚನೆಗಳು ಎಲ್ಲರಲ್ಲಿಯೂ ಬರಬೇಕು ಎಂದರು.ಶಾಲೆಗೆ ಸುಣ್ಣ ಬಣ್ಣ ಹಚ್ಚಲು ಸರಕಾರದ ಇಂದು ಹಣವಿಲ್ಲ. ಬಹಳಷ್ಟು ಕಷ್ಟದಲ್ಲಿದ್ದೇವೆ. ನನ್ನ ಕಾರ್ಯ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಡಾ.ಎಫ್.ಜಿ. ಪಾಟೀಲ ಅವರು ತಾವು ಪಟ್ಟ ಕಷ್ಟ ನಮ್ಮ ವಿದ್ಯಾರ್ಥಿಗಳು ಪಡಬಾರದು ಎಂಬ ಉದ್ದೇಶದಿಂದ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ವ್ಯಕ್ತಿತ್ವದಲ್ಲಿಯೇ ಪ್ರವೃತ್ತಿ ಇದೆ ಎಂದು ಬಣ್ಣಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಕುನ್ನೂರ ಮಾತನಾಡಿ, ಶಿಕ್ಷಣಕ್ಕೆ ಪ್ರಾಶಸ್ತ್ರ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆದರಣೀಯ ಕಾರ್ಯವಾಗಿದೆ. ಶಿಕ್ಷಣವೇ ಶಕ್ತಿ, ಶಿಕ್ಷಣವಿಲ್ಲದೇ ಯಾವ ಸಾಧನೆಯೂ ಸಾಧ್ಯವಿಲ್ಲ. ಮಾಡುವ ಪುರಸ್ಕಾರಗಳು ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು ಎಂದರು. ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಗ್ಗಾವಿ ಪಟ್ಟಣದಲ್ಲಿ ಡಾ. ಎಫ್.ಜಿ. ಪಾಟೀಲ್ ಇವರಿಂದ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಜುನೇಡ್‌ನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಪುರಸ್ಕಾರ ಆಯೋಜನೆ ಮಾಡಲಾಗಿದೆ. ಎಲ್ಲರೂ ಓದಬೇಕು, ಪ್ರಶಸ್ತಿಗಳು ಮತ್ತೊಬ್ಬರಿಗೆ ಪ್ರೇರಣೆಯಾಗುತ್ತವೆ ಎಂಬ ಸಾಮಾನ್ಯ ಉದ್ದೇಶ ಇದರಲ್ಲಿದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳ ಸಾಧನೆ ಹೆಚ್ಚಾಗಬೇಕು ಎಂಬ ಉದ್ದೇಶವಿದೆ. ಕಷ್ಟುಪಟ್ಟು ಶಿಕ್ಷಣ ಪಡೆದವು ಆದರೆ ಇಂದಿನ ಮಕ್ಕಳು ಆ ಕಷ್ಟ ಪಡಬಾರದು ಎಂಬ ಉದ್ದೇಶವಿತ್ತು. ಹೀಗಾಗಿ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಡಾ. ಎಸ್.ಎಸ್. ದೇಸಾಯಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರ ದೇವಣ್ಣ ಚಾಕಲಬ್ಬಿ, ಮಲ್ಲಪ್ಪ ರಾಮಗೇರಿ, ಬಸನಗೌಡ ಮೇಗಳಮನಿ, ನಿಂಗನಗೌಡ ಪಾಟೀಲ, ಡಾ. ಪ್ರಭುಗೌಡ ಪಾಟೀಲ ಸೇರಿದಂತೆ ಅಭಿಮಾನಿಗಳು, ವಿದ್ಯಾರ್ಥಿಗಳು ಇದ್ದರು. ಮಲ್ಲಿಕಾರ್ಜುನ ಹಡಪದ ಕಾರ್ಯಕ್ರಮ ನಿರ್ವಹಿಸಿದರು.4
- two wheelers avali1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1