“ಸೇವೆಯೇ ನಿಜವಾದ ಗೌರವ”: ಮಹದೇವಪ್ಪ ಜನ್ಮದಿನದಲ್ಲಿ ಅಪ್ಪಟ್ಟ ಅಭಿಮಾನಿ ಗುರುದೇವ್ ಸಂದೇಶ ಹನೂರು: ಸಮಾಜ ಸೇವೆಯ ಮೂಲಕ ಜನಮನ ಗೆದ್ದಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅವರ ಅಭಿಮಾನಿ ಗುರುದೇವ್ ಅವರ ನೇತೃತ್ವದಲ್ಲಿ ಕೌದಳ್ಳಿ ಗ್ರಾಮದ ವೃದ್ಧಾಶ್ರಮದಲ್ಲಿರುವ ವಯೋವೃದ್ಧರಿಗೆ ಹಾಗೂ ರಾಮಪುರ ಸಮುದಾಯ ಆರೋಗ್ಯ ಕೇಂದ್ರದ ಹೊರರೋಗಿಗಳಿಗೆ ಹಣ್ಣು ಹಂಪಲು, ಸಸ್ಯಾಹಾರ ಮತ್ತು ಮಾಂಸಾಹಾರ ಉಪಹಾರಗಳನ್ನು ವಿತರಿಸಿ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗುರುದೇವ್ (ಎಸ್‌ಸಿ ವಿಭಾಗ), “ನಾಯಕನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕಿಂತ ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದು ಮುಖ್ಯ. ಅದೇ ನಮ್ಮ ನಿಜವಾದ ಗೌರವ,” ಎಂದು ಹೇಳಿದರು. ಈ ಕಾರ್ಯದಿಂದ ಸ್ಥಳೀಯರಲ್ಲಿ ಸಂತೋಷ ಮೂಡಿದ್ದು, ಇಂತಹ ಸೇವಾ ಚಟುವಟಿಕೆಗಳು ಸಮಾಜದಲ್ಲಿ ಸಹಾನುಭೂತಿ ಮತ್ತು ಸಹಕಾರ ಮನೋಭಾವವನ್ನು ಹೆಚ್ಚಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

- ಹನೂರು :ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಜೋಡಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ. ಕಾಡೋಲ ಗ್ರಾಮದ ರೋಹಿತ್ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಬೆಟ್ಟದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆಯ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.1
- ಹನೂರು :ಬಿರು ಬಿಸಿಲ ನಡೆವೆ ವಾಹನ ಸವಾರನೊಬ್ಬ ಚಾಮರಾಜನಗರದಲ್ಲಿ ಹೆಲ್ಮೆಟ್ ಬದಲು ತಲೆಗೆ ಸೊಪ್ಪಿನ ಮೊರೆ ಹೋದ ಬೈಕ್ ಸವಾರ. ವಿಡಿಯೋ ವೈರಲ್ ಬೇಸಿಗೆಯಲ್ಲಿ ತಾಪಮಾನವು ಗಣನೀಯವಾಗಿ ಏರುತ್ತದೆ. ಕೆರೆ, ಕುಂಟೆ ಮತ್ತು ನದಿಗಳು ಬತ್ತಿ ಹೋಗುತ್ತವೆ. ಕುಡಿಯುವ ನೀರಿಗೆ ಅಭಾವ ಉಂಟಾಗುತ್ತದೆ. ಪ್ರಾಣಿ-ಪಕ್ಷಿಗಳು ಬಾಯಾರಿಕೆಯಿಂದ ನೀರಿಗಾಗಿ ಅಲೆಯುತ್ತವೆ. ಮಾನವರು ಬೆವರಿನಿಂದ ದಣಿದು ಹೋಗುತ್ತಾರೆ. ಬಿಸಿಲ ಗಾಳಿಯು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಮತ್ತು ಜೀವನಶೈಲಿ: ಈ ಕಾಲದಲ್ಲಿ ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ಹೆಚ್ಚು ನೀರು ಕುಡಿಯುವುದು ಅವಶ್ಯಕ.1
- ಕುಡಿಯೋ ನೀರಿಗಾಗಿ ಅಹಾಕಾರ ಉಂಟಾಗಿ ಟ್ಯಾಂಕರ್ ಮೂಲಕ ಗ್ರಾಮಕ್ಕೆ ಕುಡಿಯೋ ನೀರಿನ ವ್ಯವಸ್ಥೆ ಮಾಡಲಾಗುತ್ತಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನೆಡೆದಿದೆ. ಗ್ರಾಮಕ್ಕೆ ನೀರಿನ ಸಂಪರ್ಕ ಕಲ್ಪಿಸೋ ಪೈಪ್ ಲೈನ್ ದುರಸ್ತಿ ಮಾಡಿಸದ ಹಿನ್ನಲೆ ಸೂಳೆ ಕೆರೆಯಿಂದ ಸಿಂಗರಮಾರನಹಳ್ಳಿಗೆ ಕುಡಿಯೋ ನೀರಿಗೆ ವ್ಯವಸ್ಥೆ ಸ್ಥಗಿತವಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೂಡ ಇದ್ದರೂ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಪಿಡಿಓ ಮಂಜುಳಾ ಹಾಗೂ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.2
- *ಭಾರತ ನಲ್ಲಿ ವೈರಲ್*1
- Mohammed Nalapad ಅವರು ತಮ್ಮ ಮೇಲೆ ನಡೆದ Enforcement Directorate (ED) ದಾಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ಇದನ್ನು ರಾಜಕೀಯ ಪ್ರೇರಿತ ಸಂಚು ಎಂದು ಆರೋಪಿಸಿದ್ದಾರೆ ⚠️ 👉 2021ರ FIR ನಂತರ ಈಗ ದಾಳಿ ಏಕೆ? ಎಂದು ಪ್ರಶ್ನೆ 👉 ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದ ನಲಪಾಡ್ 👉 ಕುಟುಂಬದ ಆತಂಕದ ಬಗ್ಗೆ ಭಾವುಕರಾಗಿ ಪ್ರತಿಕ್ರಿಯೆ 👉 ಶ್ರೀಕಿ ಪರಿಚಯವಿದೆ, ಆದರೆ ವೈಯಕ್ತಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲ ಎಂದ ಸ್ಪಷ್ಟನೆ “ನಾನು ಯಾವುದೇ ತಪ್ಪು ಮಾಡಿಲ್ಲ, ಸತ್ಯಮೇವ ಜಯತೇ” ಎಂದು ತಮ್ಮ ಮಾತು ಮುಗಿಸಿದರು.1
- ಅನುಮಾನಾಸ್ಪದ ಸಾವು: ಪತಿ ವಿರುದ್ಧ ದೂರು ದಾವಣಗೆರೆಯಲ್ಲಿ ಮಹಿಳೆ ಮೃತ್ಯು, ತನಿಖೆ ಆರಂಭ1
- KOLAR KI.AWAAZ KOUSAR NEWS1
- “ಸೇವೆಯೇ ನಿಜವಾದ ಗೌರವ”: ಮಹದೇವಪ್ಪ ಜನ್ಮದಿನದಲ್ಲಿ ಅಪ್ಪಟ್ಟ ಅಭಿಮಾನಿ ಗುರುದೇವ್ ಸಂದೇಶ1