ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪುರೋಹಿತ ಶಾಲೆಯ ಸಾಧನೆ: 19 ಪದಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪುರೋಹಿತ ಶಾಲೆಯ ಸಾಧನೆ: 19 ಪದಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಅಫಜಲಪುರ:ಮೈಸೂರಿನಲ್ಲಿ ಜುಲೈ 25 ಮತ್ತು 26, 2026ರಂದು ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಫಜಲಪುರದ ಪುರೋಹಿತ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅದ್ಭುತ ಸಾಧನೆ ಮಾಡಿ ಒಟ್ಟು 19 ಪದಕಗಳನ್ನು ಗೆದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು 8 ಚಿನ್ನದ ಪದಕ, 8 ಬೆಳ್ಳಿ ಪದಕ ಹಾಗೂ 3 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡು ಒಟ್ಟು 19 ಪದಕಗಳನ್ನು ಗೆದ್ದಿದ್ದಾರೆ. ಈ ಅದ್ವಿತೀಯ ಸಾಧನೆಯ ಮೂಲಕ ಕಲಬುರಗಿ ಜಿಲ್ಲೆ ಪ್ರಥಮ ಸ್ಥಾನ ಪಡೆಯುವಲ್ಲಿ ಪುರೋಹಿತ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಗಳ ಈ ಯಶಸ್ಸಿನ ಹಿಂದೆ ಶಾಲೆಯ ಮುಖ್ಯಗುರುಗಳಾದ ಅರ್ಚನಾ ಪುರೋಹಿತ ಅವರ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಕರಾಟೆ ತರಬೇತುದಾರರಾದ ಮಹಾದೇವಿ ಕೆ. ಪೂಜಾರಿ ಅವರ ಪರಿಶ್ರಮ ಮತ್ತು ಸಮರ್ಪಿತ ತರಬೇತಿ ಪ್ರಮುಖ ಕಾರಣವಾಗಿದೆ ಎಂದು ಪಾಲಕರು ಹಾಗೂ ಶಾಲಾ ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ. ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಪ್ರೇಮಿಗಳು, ಪಾಲಕರು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

- ಹೂ ಮಳೆ ಸುರಿದು ಪೊಲೀಸ್ ಅಧಿಕಾರಿಗೆ ಅದ್ದೂರಿಯಾಗಿ ಬೀಳ್ಕೋಡುಗೆ ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು. ಅಫಜಲಪುರ ತಾಲೂಕಿನ ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ.ಕಮಲು ಅವರಿಗೆ ಠಾಣಾ ಸಿಬ್ಬಂದಿಗಳು ಹೂ ಮಳೆ ಸುರಿದು ಅಭಿನಂದನೆ ಸಲ್ಲಿಸಿ ಅದ್ದೂರಿಯಾಗಿ ಬೀಲಕ್ಕೋಡುಗೆ ಮಾಡಿದರು.1
- ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ1
- ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ1
- ಮಹಾನ್ ಗುರು ಎಚ್ ಟಿ ಕುಲಕರ್ಣಿ ಅವರಿಗೆ ಅನಂತ ಕೋಟಿ ನಮನಗಳು ಎಚ್ ಟಿ ಕುಲಕರ್ಣಿ ಗುರುಗಳ ಅಂತಿಮ ಸಂಸ್ಕಾರ1
- ಸಿಸಿ ರಸ್ತೆ ಕಾಮಾಗಾರಿ ವೇಳೆ ಐತಿಹಾಸಿಕ ಪುರಾತನ ಮೂರ್ತಿ ಪತ್ತೆ* ಸಿಸಿ ರಸ್ತೆ ಕಾಮಗಾರಿ ಮಾಡುವೆ ವೇಳೆಯಲ್ಲಿ ಐರಿಹಾಸಿಕ ಪುರಾತನದ ಮೂರ್ತಿ ಪತ್ತೆಯಾಗಿದ್ದು ಶ್ರೀ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿ ಎಂದು ತಿಳಿದು ಬಂದಿದೆ.ರುಕ್ಮಿಣಿ - ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹೊಲಕುಂದಾ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಾಗಾರಿ ವೇಳೆ ಪತ್ತೆಯಾಗಿದೆ.2.1 ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ , ಎರಡೂ ಕೈಗಳಲ್ಲಿ ಕಮಲ ಹೂವುಗಳು ಹೊಂದಿರುವ ಮೂರ್ತಿಯಾಗಿದ್ದು, ಸಂಧ್ಯಾದೇವಿ, ಛಾಯಾದೇವಿ ಹಾಗೂ ಸಪ್ತ ಅಶ್ವಗಳ ಕೆತ್ತನೆ ಒಳಗೊಂಡಿದೆ. ಸಂಶೋಧಕರ ಪ್ರಾಥಮಿಕ ಅಭಿಪ್ರಾಯದಂತೆ ರಾಷ್ಟ್ರಕೂಟರ ಕಾಲದ ಶಿಲ್ಪ ಎನ್ನುವ ಸಾಧ್ಯತೆ ಇದೆ1
- ಇಂಗನಕಲ: ಶರಣಪ್ಪಾ D ಹಾಲಕಾಯಿ ಸಾಹುಕಾರ ಅವರು ಭಜನಾ ಮಂಡಳಿಗೆ ಪ್ರಸಾದ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ಹಾಲಕಾಯಿ ಉಪಸ್ಥಿತರಿದ್ದರು2
- ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ್‌ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ತಿಳಿಸಿದರು. ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.1
- ಹೋರಾಟವೇ ಜೀವನ – ಕೋಲಿ ಸಮಾಜದ ಧ್ವನಿಯಾಗಿ ಸಂತೋಷ್ ಬೆಣ್ಣೂರು ಅವರ ಪಯಣ1