logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ ನೆರವೇರಿಸಿದರು ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮ ಕಾರ್ಯಕ್ರಮ. ಮೊಳಕಾಲ್ಮೂರು ಸುದ್ದಿ ಕೋನಸಾಗರ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಬುದುವಾರ ಬೆಳಗಿನ ಜಾವ ಸಾಯಿ ಕಾಕಡ ಆರತಿ, ಭಕ್ತರ ಕೈಯಿಂದ ಸ್ವಾಮಿಯ ದೊಡ್ಡ ವಿಗ್ರಹಕ್ಕೆ ಕ್ಷೀರಭಿಷೇಕ, ಸಾಯಿ ವೃತ, ವಿಷ್ಣು ಸಹಸ್ರನಾಮ ಪಠಣೆ, ಮಧ್ಯಾಹ್ನ ಆರತಿ ನಂತರ ಗುರುಗಳಿಂದ ಆಶೀರ್ವಚನ ನಡೆಯಿತು, ಪ್ರಸಾದ ವಿನಿಯೋಗ ಅನ್ನಸಂತಪಣೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ಸಾಯಿ ಸಂಧ್ಯಾ ಆರತಿ ಪ್ರಸಾದ ವಿನಿಯೋಗ ಸಾಯಿ ಭಕ್ತಿಗೀತೆಗಳ ಭಜನಾ ಕಾರ್ಯಕ್ರಮಗಳು ನಂತರ ಸಂಜೆ ವೇಳೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಿಲ್ವಾ ಅರ್ಚನೆ ವಿವಿಧ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ಸ್ವಾಮಿಯ ಮೂರ್ತಿಯನ್ನು ಹೂಗಳಿಂದ ಆಕರ್ಷಿಕವಾಗಿ ಅಲಂಕಾರಗೊಂಡಿತ್ತು. ಈ ಸಂದರ್ಭದಲ್ಲಿ ಬ್ರಹ್ಮಗಿರಿ ಬೆಟ್ಟದ ಸೋಮೇಶ್ವರ ಸ್ವಾಮೀಜಿ, ರಾಂಪುರ ರುದ್ರಾಕ್ಷಿಮಠದ ವೀರಭದ್ರಯ್ಯ ಸ್ವಾಮೀಜಿ, ದೇವಸ್ಥಾನ ಸಮಿತಿಯ ಎಂ ಎಸ್ ಪ್ರಸನ್ನ ಕುಮಾರ್, ಎಂ ಎಸ್ ಮಾರ್ಕಂಡಯ್ಯ, ಎಂ ಜಿ ರಾಘವೇಂದ್ರ, ಅಭಿಷೇಕ್ ರಾಮ ತುಳಿಸಿ, ಎಂ ಎಸ್ ಮಂಜುನಾಥ ಎನ್ ವಿ ರಾಜಶೇಖರ್, ಎಂಕೆ ಶ್ರೀವತ್ತ, ಸುರೇಶ್, ಎಂ ಪಿ ಭೀಮರಾಜು, ರಾಜಶೇಖರ್, ವೆಂಕಟೇಶ್ ಎಂಎಸ್ ರವೀಂದ್ರನಾಥ್, ಸೂರ್ಯನಾರಾಯಣ, ಇನ್ನು ಹಲವರು ಉಪಸ್ಥಿತರಿದ್ದರು.

14 hrs ago
user_Basavaraj
Basavaraj
Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
14 hrs ago
864a6203-3c9c-4e97-9fd1-00410c95d31e

ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ ನೆರವೇರಿಸಿದರು ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮ ಕಾರ್ಯಕ್ರಮ. ಮೊಳಕಾಲ್ಮೂರು ಸುದ್ದಿ ಕೋನಸಾಗರ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಬುದುವಾರ ಬೆಳಗಿನ ಜಾವ ಸಾಯಿ ಕಾಕಡ ಆರತಿ, ಭಕ್ತರ ಕೈಯಿಂದ ಸ್ವಾಮಿಯ ದೊಡ್ಡ ವಿಗ್ರಹಕ್ಕೆ ಕ್ಷೀರಭಿಷೇಕ, ಸಾಯಿ ವೃತ, ವಿಷ್ಣು ಸಹಸ್ರನಾಮ ಪಠಣೆ, ಮಧ್ಯಾಹ್ನ ಆರತಿ ನಂತರ ಗುರುಗಳಿಂದ ಆಶೀರ್ವಚನ ನಡೆಯಿತು, ಪ್ರಸಾದ ವಿನಿಯೋಗ ಅನ್ನಸಂತಪಣೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ಸಾಯಿ ಸಂಧ್ಯಾ ಆರತಿ ಪ್ರಸಾದ ವಿನಿಯೋಗ ಸಾಯಿ ಭಕ್ತಿಗೀತೆಗಳ ಭಜನಾ ಕಾರ್ಯಕ್ರಮಗಳು ನಂತರ ಸಂಜೆ ವೇಳೆಗೆ ಊರಿನ

9b10f710-dee6-4e28-9568-d299ee53548d

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಿಲ್ವಾ ಅರ್ಚನೆ ವಿವಿಧ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ಸ್ವಾಮಿಯ ಮೂರ್ತಿಯನ್ನು ಹೂಗಳಿಂದ ಆಕರ್ಷಿಕವಾಗಿ ಅಲಂಕಾರಗೊಂಡಿತ್ತು. ಈ ಸಂದರ್ಭದಲ್ಲಿ ಬ್ರಹ್ಮಗಿರಿ ಬೆಟ್ಟದ ಸೋಮೇಶ್ವರ ಸ್ವಾಮೀಜಿ, ರಾಂಪುರ ರುದ್ರಾಕ್ಷಿಮಠದ ವೀರಭದ್ರಯ್ಯ ಸ್ವಾಮೀಜಿ, ದೇವಸ್ಥಾನ ಸಮಿತಿಯ ಎಂ ಎಸ್ ಪ್ರಸನ್ನ ಕುಮಾರ್, ಎಂ ಎಸ್ ಮಾರ್ಕಂಡಯ್ಯ, ಎಂ ಜಿ ರಾಘವೇಂದ್ರ, ಅಭಿಷೇಕ್ ರಾಮ ತುಳಿಸಿ, ಎಂ ಎಸ್ ಮಂಜುನಾಥ ಎನ್ ವಿ ರಾಜಶೇಖರ್, ಎಂಕೆ ಶ್ರೀವತ್ತ, ಸುರೇಶ್, ಎಂ ಪಿ ಭೀಮರಾಜು, ರಾಜಶೇಖರ್, ವೆಂಕಟೇಶ್ ಎಂಎಸ್ ರವೀಂದ್ರನಾಥ್, ಸೂರ್ಯನಾರಾಯಣ, ಇನ್ನು ಹಲವರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". "ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". ಚಳ್ಳಕೆರೆ:-ನಗರದ ಹೊರವಲಯದ ಅಜ್ಜನಗುಡಿ ಸಮೀಪದ ನನ್ನಿವಾಳದ ಕಟ್ಟೆಮನೆಯ ಮುತ್ಯಾಗಾರ ದೇವರ ಎತ್ತುಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ವತಿಯಿಂದ ಗೋಪೂಜೆ, ಬಾಳೆಹಣ್ಣು,ರಾಗಿಹುಲ್ಲು ವಿತರಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರ ಎತ್ತುಗಳ ಸಂರಕ್ಷಕರಾದ ಪೂಜಾರಿ ಓಬಯ್ಯ, ಪಾಲಯ್ಯ, ಸಿದ್ದೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ.ವಿದ್ಯಾ, ಖಜಾಂಚಿ ಕವಿತಾ ನಾಗೇಶ್,ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಮೀರಾ ರಮೇಶ್,ಸುಮಾ, ನಾಗಶ್ರೀ,ಹೀನಾ ಸೇರಿದಂತೆ ದೇವರ ಎತ್ತುಗಳ ಕಿಲಾರಿಗಳು ಮತ್ತು ಆರಾಧಕರು ಉಪಸ್ಥಿತರಿದ್ದರು.
    1
    ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". 
"ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ".                    ಚಳ್ಳಕೆರೆ:-ನಗರದ ಹೊರವಲಯದ ಅಜ್ಜನಗುಡಿ ಸಮೀಪದ ನನ್ನಿವಾಳದ ಕಟ್ಟೆಮನೆಯ ಮುತ್ಯಾಗಾರ ದೇವರ ಎತ್ತುಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ವತಿಯಿಂದ ಗೋಪೂಜೆ, ಬಾಳೆಹಣ್ಣು,ರಾಗಿಹುಲ್ಲು ವಿತರಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿದರು.                    ಈ ಸಂದರ್ಭದಲ್ಲಿ  ದೇವರ ಎತ್ತುಗಳ ಸಂರಕ್ಷಕರಾದ ಪೂಜಾರಿ ಓಬಯ್ಯ, ಪಾಲಯ್ಯ, ಸಿದ್ದೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.                   ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ.ವಿದ್ಯಾ, ಖಜಾಂಚಿ ಕವಿತಾ ನಾಗೇಶ್,ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಮೀರಾ ರಮೇಶ್,ಸುಮಾ, ನಾಗಶ್ರೀ,ಹೀನಾ ಸೇರಿದಂತೆ ದೇವರ ಎತ್ತುಗಳ ಕಿಲಾರಿಗಳು ಮತ್ತು ಆರಾಧಕರು ಉಪಸ್ಥಿತರಿದ್ದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    46 min ago
  • ಯಾವುದೇ ಕಾರಣಕ್ಕೂ ಬಂದ್‌ ಬೇಡ, ಅದರಿಂದ ಪರಿಹಾರ ಸಿಗಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಬೆಂಗಳೂರು, ಜುಲೈ 31: ರಾಜ್ಯದಲ್ಲಿ ಕಾವೇರಿ ಜಲ ವಿವಾದ ಮತ್ತೆ ಕಾವು ಪಡೆದುಕೊಂಡಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ ಆದೇಶವನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಕುರಿತು ಶಾಸನಸೌಧದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಂದ್ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆ "ಯಾವುದೇ ಕಾರಣಕ್ಕೂ ಬಂದ್‌ ಬೇಡ, ಬಂದ್‌ನಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ" ಎಂದು ಸಿಎಂ ಸ್ಪಷ್ಟಪಡಿಸಿದರು. ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ ಅವರು, "CWMA ಸಭೆಗೆ ರಾಜ್ಯದ ಪರವಾಗಿ ಮೂವರು ಹಿರಿಯ ಅಧಿಕಾರಿಗಳು ಹಾಜರಾಗಿದ್ದರು. ಎಸಿಎಸ್‌ ಗೌರವ್ ಗುಪ್ತಾ ಅವರು ರಾಜ್ಯದ ಪರ ಬಲವಾದ ವಾದ ಮಂಡಿಸಿ, ನೀರು ಬಿಡುಗಡೆಗೆ ಕಾಲಾವಕಾಶ ಕೋರಿದ್ದರು. ಆದರೆ ಪ್ರಾಧಿಕಾರವು 4.5 ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ" ಎಂದು ವಿವರಿಸಿದರು. ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತರಕ್ಷಣೆಗೆ ಬದ್ಧ ರಾಜ್ಯದ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟವನ್ನು ವಿವರಿಸಿದ ಸಿಎಂ: ಹಾರಂಗಿ: ಶೇ. 95 ಕಬಿನಿ: ಶೇ. 83 ಹೇಮಾವತಿ: ಶೇ. 67 ಕೆಆರ್‌ಎಸ್: ಶೇ. 36 "ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದ್ದು, ಕುಡಿಯುವ ನೀರು ಹಾಗೂ ರೈತರ ಹಿತವನ್ನು ಕಾಪಾಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಹಿಂದೆಯೂ ಶಾಸಕರ ಸಭೆ ಕರೆದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈಗಲೂ ರಾಜ್ಯದ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆ" ಎಂದು ಅವರು ಭರವಸೆ ನೀಡಿದರು. ತಮಿಳುನಾಡು ಸಿಎಂ ಭೇಟಿ ಮುಂದೂಡುವಂತೆ ಮನವಿ ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್‌ ಅವರು ಕರ್ನಾಟಕಕ್ಕೆ ಆಗಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ತಮಿಳುನಾಡು ಮುಖ್ಯ ಕಾರ್ಯದರ್ಶಿಯವರಿಂದ ಬಂದಿದ್ದ ಪತ್ರದ ಹಿನ್ನೆಲೆಯಲ್ಲಿ ನಾನು ಸ್ವತಃ ತಮಿಳುನಾಡು ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪ್ರಸ್ತುತ ಕಾವೇರಿ ವಿಚಾರವಾಗಿ ವಾತಾವರಣ ಸರಿಯಿಲ್ಲದ ಕಾರಣ, ಆಗಸ್ಟ್ 3ರ ಭೇಟಿಯನ್ನು ಮುಂದೂಡಿ ಬೇರೊಂದು ದಿನ ಬರುವಂತೆ ಕೋರಿದ್ದೇನೆ. ಉಭಯ ರಾಜ್ಯಗಳ ಸೌಹಾರ್ದತೆಗೆ ಧಕ್ಕೆಯಾಗದಂತೆ ಈ ವಿವಾದವನ್ನು ಬಗೆಹರಿಸಬೇಕಿದೆ" ಎಂದು ತಿಳಿಸಿದರು.
    1
    ಯಾವುದೇ ಕಾರಣಕ್ಕೂ ಬಂದ್‌ ಬೇಡ, ಅದರಿಂದ ಪರಿಹಾರ ಸಿಗಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ
ಬೆಂಗಳೂರು, ಜುಲೈ 31: ರಾಜ್ಯದಲ್ಲಿ ಕಾವೇರಿ ಜಲ ವಿವಾದ ಮತ್ತೆ ಕಾವು ಪಡೆದುಕೊಂಡಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ ಆದೇಶವನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಕುರಿತು ಶಾಸನಸೌಧದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಂದ್ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆ
"ಯಾವುದೇ ಕಾರಣಕ್ಕೂ ಬಂದ್‌ ಬೇಡ, ಬಂದ್‌ನಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ" ಎಂದು ಸಿಎಂ ಸ್ಪಷ್ಟಪಡಿಸಿದರು.
ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ ಅವರು, "CWMA ಸಭೆಗೆ ರಾಜ್ಯದ ಪರವಾಗಿ ಮೂವರು ಹಿರಿಯ ಅಧಿಕಾರಿಗಳು ಹಾಜರಾಗಿದ್ದರು. ಎಸಿಎಸ್‌ ಗೌರವ್ ಗುಪ್ತಾ ಅವರು ರಾಜ್ಯದ ಪರ ಬಲವಾದ ವಾದ ಮಂಡಿಸಿ, ನೀರು ಬಿಡುಗಡೆಗೆ ಕಾಲಾವಕಾಶ ಕೋರಿದ್ದರು. ಆದರೆ ಪ್ರಾಧಿಕಾರವು 4.5 ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ" ಎಂದು ವಿವರಿಸಿದರು.
ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತರಕ್ಷಣೆಗೆ ಬದ್ಧ
ರಾಜ್ಯದ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟವನ್ನು ವಿವರಿಸಿದ ಸಿಎಂ:
ಹಾರಂಗಿ: ಶೇ. 95
ಕಬಿನಿ: ಶೇ. 83
ಹೇಮಾವತಿ: ಶೇ. 67
ಕೆಆರ್‌ಎಸ್: ಶೇ. 36
"ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದ್ದು, ಕುಡಿಯುವ ನೀರು ಹಾಗೂ ರೈತರ ಹಿತವನ್ನು ಕಾಪಾಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಹಿಂದೆಯೂ ಶಾಸಕರ ಸಭೆ ಕರೆದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈಗಲೂ ರಾಜ್ಯದ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆ" ಎಂದು ಅವರು ಭರವಸೆ ನೀಡಿದರು.
ತಮಿಳುನಾಡು ಸಿಎಂ ಭೇಟಿ ಮುಂದೂಡುವಂತೆ ಮನವಿ
ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್‌ ಅವರು ಕರ್ನಾಟಕಕ್ಕೆ ಆಗಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ತಮಿಳುನಾಡು ಮುಖ್ಯ ಕಾರ್ಯದರ್ಶಿಯವರಿಂದ ಬಂದಿದ್ದ ಪತ್ರದ ಹಿನ್ನೆಲೆಯಲ್ಲಿ ನಾನು ಸ್ವತಃ ತಮಿಳುನಾಡು ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪ್ರಸ್ತುತ ಕಾವೇರಿ ವಿಚಾರವಾಗಿ ವಾತಾವರಣ ಸರಿಯಿಲ್ಲದ ಕಾರಣ, ಆಗಸ್ಟ್ 3ರ ಭೇಟಿಯನ್ನು ಮುಂದೂಡಿ ಬೇರೊಂದು ದಿನ ಬರುವಂತೆ ಕೋರಿದ್ದೇನೆ. ಉಭಯ ರಾಜ್ಯಗಳ ಸೌಹಾರ್ದತೆಗೆ ಧಕ್ಕೆಯಾಗದಂತೆ ಈ ವಿವಾದವನ್ನು ಬಗೆಹರಿಸಬೇಕಿದೆ" ಎಂದು ತಿಳಿಸಿದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    14 hrs ago
  • ತುಮಕೂರು-ಶ್ರೀ ನೀಲಕಂಠೇರಶ್ವ ಸ್ವಾಮಿ ಪತ್ತಿನ ಸಹಕಾರ ಸಂಘದ 25ನೇ ರಜತ ಮಹೋತ್ಸವ #onlinetv24x7 #ಸೌಹಾರ್ದಸಂಘಗಳು #tumkur
    1
    ತುಮಕೂರು-ಶ್ರೀ ನೀಲಕಂಠೇರಶ್ವ ಸ್ವಾಮಿ ಪತ್ತಿನ ಸಹಕಾರ ಸಂಘದ 25ನೇ ರಜತ ಮಹೋತ್ಸವ #onlinetv24x7 #ಸೌಹಾರ್ದಸಂಘಗಳು #tumkur
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    11 hrs ago
  • ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    4
    ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    2 hrs ago
  • We are authorised distributor for Karnataka for Yodha agricultural equipments ಯೋಧ ರೋಟವೇಟರ್, ಯೋಧ ಮೆಕ್ಕೆ ಜೋಳ ಥ್ರೆಶರ್, ಯೋಧ ಮಲ್ಟಿ ಕ್ರಾಪ್ ಥ್ರೆಷರ್, ಯೋಧ ಮಲ್ಚರ್, ಯೋಧ ರಿವರ್ಸಿಬಲ್ ಪ್ಲೋವ್ ಮತ್ತು ಯೋಧಾ ರೋಟರಿ ಡಿಸ್ಕ್ ಹ್ಯಾರೋ ನಾವು ಕರ್ನಾಟಕ ರಾಜ್ಯದ ಕೃಷಿ ಉಪಕರಣಗಳ ವಿತರಕರು ಶ್ರೀ ಶಿವಬಸವ ಆಗ್ರೋ ಕೇರ್ ಹಾವೇರಿ ಸಂಪರ್ಕಿಸಿ: 7483066169 ಲೊಕೇಶನ್: ಇಂಡಸ್ಟ್ರಿಯಲ್ಲಿ ಏರಿಯಾ, near, TMAE ಕಾಲೇಜ್, ಹುಬ್ಬಳ್ಳಿ ರೋಡ್, ಹಾವೇರಿ. 581110 Yodha Rotavator, yodha maize thresher, yodha multi crop thresher, yodha mulcher, yodha reversible plough and Yodha rotary disc Harrow We are authorised distributor for karnataka Shri shivabasava agro care Haveri Contact us: 7483066169 Location: Industrial area, near, TMAE college, Hubli road, Haveri 581110
    1
    We are authorised distributor for Karnataka for Yodha agricultural equipments 
ಯೋಧ ರೋಟವೇಟರ್, ಯೋಧ ಮೆಕ್ಕೆ ಜೋಳ ಥ್ರೆಶರ್, ಯೋಧ ಮಲ್ಟಿ ಕ್ರಾಪ್ ಥ್ರೆಷರ್, ಯೋಧ ಮಲ್ಚರ್, ಯೋಧ ರಿವರ್ಸಿಬಲ್ ಪ್ಲೋವ್ ಮತ್ತು ಯೋಧಾ ರೋಟರಿ ಡಿಸ್ಕ್ ಹ್ಯಾರೋ
ನಾವು ಕರ್ನಾಟಕ ರಾಜ್ಯದ ಕೃಷಿ ಉಪಕರಣಗಳ ವಿತರಕರು ಶ್ರೀ ಶಿವಬಸವ ಆಗ್ರೋ ಕೇರ್ ಹಾವೇರಿ
ಸಂಪರ್ಕಿಸಿ: 7483066169
ಲೊಕೇಶನ್: ಇಂಡಸ್ಟ್ರಿಯಲ್ಲಿ ಏರಿಯಾ, near, TMAE ಕಾಲೇಜ್, ಹುಬ್ಬಳ್ಳಿ ರೋಡ್, ಹಾವೇರಿ. 581110
Yodha Rotavator, yodha maize thresher, yodha multi crop thresher, yodha mulcher, yodha reversible plough and Yodha rotary disc Harrow
We are authorised distributor for karnataka
Shri shivabasava agro care Haveri
Contact us: 7483066169
Location: Industrial area, near, TMAE college, Hubli road, Haveri 581110
    user_Karthik Didagur
    Karthik Didagur
    Agricultural Product Wholesaler ಹಾವೇರಿ, ಹಾವೇರಿ, ಕರ್ನಾಟಕ•
    12 hrs ago
  • ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ_ವಿಜಯನಗರ ಜಿಲ್ಲೆ ಕೂಡ್ಲಿಗಿ *ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಜುಲೈ 31ರಂದು , ಉಪ ಆರೋಗ್ಯಕೇಂದ್ರದಲ್ಲಿ ಡಿ ದರ್ಜೆ ನೌಕರರಾದ RNK ನಿಜಲಿಂಗಪ್ಪರವರಿಗೆ. ವಯೋ ನಿವೃತ್ತಿ ಹೊಂದಿದ RNK ನಿಜಲಿಂಗಪ್ಪರವರನ್ನು , ಆರೋಗ್ಯ ಸಿಬ್ಬಂದಿ ಹ‍ಾಗೂ ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು , ಅವರನ್ನು ಸನ್ಮಾನಿಸಿ ಗೌರವ ಪೂರ್ವಕವಾಗಿ ಬಿಳ್ಕೊಟ್ಟರು. ಮೂಲತಃ ಕೊಟ್ಟೂರು ರಾಂಪುರ ಗ್ರಾಮದವರಾದ , ನಿಜಲಿಂಗಪ್ಪರವರು. ಕಳೆದ ಮೂರು ದಶಕಗಳ ಹಿಂದೆಯೇ , ಬಳ್ಳಾರಿಯ ರೇಷ್ಮೆ ಇಲಾಖೆಯಲ್ಲಿ. ಮಾಸಿಕ ಭತ್ಯೆ ಹೊರಗುತ್ತಿಗೆ ಆಧಾರದಂತೆ , ಹತ್ತು ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಕರ್ಥವ್ಯೆ ನಿರ್ವಹಿಸಿದ್ದರು. ತದನಂತರ ಆರೊಗ್ಯ ಇಲಾಖೆಯಲ್ಲಿ ಕೆಲ ವರ್ಷಗಳ ಕಾಲ , ಹೊರಗುತ್ತಿಗೆ ಡಿ ದರ್ಜೆ ನೌಕರಾಗಿ ಕರ್ಥವ್ಯ ನಿರ್ವಹಿಸಿದರು. ನಂತರ ವಷ್ಠೆ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ , ಖಾಯಂ ನೌಕರರಾಗಿ ಗುರುತಿಸಿಕೊಂಡು ಮೂರುವರೆ ದಶಕಗಳ ಕಾಲ ಡಿ ದರ್ಜೆ ನೌಕರರಾರಿ ಕರ್ಥವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದಾರೆ. ನಿಜಲಿಂಪ್ಪರವರು ಚಿಕ್ಕಜೋಗಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ , 1998 ರಿಂದ ಸೇವೆ ಆರಂಭಿಸಿ ಜುಲೈ 31 2026 ರವರೆಗೆ. ಅಂದರೆ ಸತತ 34 ವರ್ಷಗಳ ಕಾಲ , ಚಿಕ್ಕಜೋಗಿಹಳ್ಳಿ ಉಪ ಆರೋಗ್ಯಕೇಂದ್ರದಲ್ಲಿ ಸೇವೆ ಸಲ್ಪಿಸಿದ್ದಾರೆ. 31 7 2026ರಂದು , ಅವರು ವಯೋ ನಿವೃತ್ತಿ ಹೊಂದಿರುತ್ತಾರೆ. ಅವರ ಸಾರ್ಥಕ ಸೇವೆ ಹಾಗೂ ಸನ್ನಡತೆ ಮೆಚ್ಚಿದ , ಆರೋಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು. ಮತ್ತು ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ , ವಿವಿದ ಸಂಘಟನೆಗಳ ಪದಾಧಿಕಾರಿಗಳು. ನಿಜಲಿಂಗಪ್ಪರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ , ಅಭಿಮಾನದಿಂದ ಹಾರೈಸಿ ಸರಳ ಬೀಳ್ಕೊಡುಗೆ ಸಮಾರಂಭದ ಮೂಲಕ ಬೀಳ್ಕೊಟ್ಟಿದ್ದಾರೆ. ಡಾ ॥ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಮಹಮದ್ ಸಾಧಿಕ್ ರವರು ಮಾತನಾಡಿ , ನಿಜಲಿಂಗಪ್ಪರವರು ಸಜ್ಜನ ಪ್ರಾಮಾಣಿಕ ನೌಕರರಾಗಿದ್ದರು. ಅವರು ಕಿಂಚಿತ್ತು ಯಾವುದೇ ದೋಷರೋಪಗಳಿಲ್ಲದೆ , ನಿಷ್ಕಳಂಕದಿಂದ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದು. ನಿಜಲಿಂಗಪ್ಪರವರ ಸಾರ್ಥಕ ಸೇವೆಗಾಗಿ , ಅವರನ್ನು ಅವರ ಮಡದಿಯೊಡಗೂಡಿ ತಾವು ಗೌರವಿಸಿ ಸನ್ಮ‍ಾನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅವರಿಗೆ ಮುಂದಿನ ಆರೋಗ್ಯ ಆಯಸ್ಸು ಸುಖಮಯವಾಗಿರಲೆಂದು , ತಾವು ದೇವರಲ್ಲಿ ಕೋರುವುದಾಗಿ ಅವರು ತಿಳಿಸಿದ್ದಾರೆ. ವಿಷ್ಣು ಸೇನಾ ಸಮಿತಿ ಮುಖಂಡರಾದ ಜನನಾಯಕ ಕುರಿಹಟ್ಟಿ ಓಬಣ್ಣ , ಮಲಿಯಪ್ಪ , ರಾಜು ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು. ಮತ್ತು ಆರೊಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದು. ನಿಜಲಿಂಗಪ್ಪರವರಿಗೆ ನಿವೃತ್ತಿ ಜೀವನ , ಸುಖಮಯವಾಗಿರಲೆಂದು ಶುಭ ಹಾರೈಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    3
    ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ -  ಬೀಳ್ಕೊಡುಗೆ_ವಿಜಯನಗರ ಜಿಲ್ಲೆ ಕೂಡ್ಲಿಗಿ
*ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ -  ಬೀಳ್ಕೊಡುಗೆ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಜುಲೈ 31ರಂದು , ಉಪ ಆರೋಗ್ಯಕೇಂದ್ರದಲ್ಲಿ ಡಿ ದರ್ಜೆ ನೌಕರರಾದ RNK ನಿಜಲಿಂಗಪ್ಪರವರಿಗೆ. ವಯೋ ನಿವೃತ್ತಿ ಹೊಂದಿದ RNK ನಿಜಲಿಂಗಪ್ಪರವರನ್ನು , ಆರೋಗ್ಯ ಸಿಬ್ಬಂದಿ ಹ‍ಾಗೂ ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು , ಅವರನ್ನು ಸನ್ಮಾನಿಸಿ ಗೌರವ ಪೂರ್ವಕವಾಗಿ  ಬಿಳ್ಕೊಟ್ಟರು. ಮೂಲತಃ ಕೊಟ್ಟೂರು ರಾಂಪುರ ಗ್ರಾಮದವರಾದ , ನಿಜಲಿಂಗಪ್ಪರವರು. ಕಳೆದ ಮೂರು ದಶಕಗಳ ಹಿಂದೆಯೇ , ಬಳ್ಳಾರಿಯ ರೇಷ್ಮೆ ಇಲಾಖೆಯಲ್ಲಿ. ಮಾಸಿಕ ಭತ್ಯೆ ಹೊರಗುತ್ತಿಗೆ  ಆಧಾರದಂತೆ , ಹತ್ತು ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಕರ್ಥವ್ಯೆ ನಿರ್ವಹಿಸಿದ್ದರು. ತದನಂತರ ಆರೊಗ್ಯ ಇಲಾಖೆಯಲ್ಲಿ ಕೆಲ ವರ್ಷಗಳ ಕಾಲ , ಹೊರಗುತ್ತಿಗೆ ಡಿ ದರ್ಜೆ ನೌಕರಾಗಿ ಕರ್ಥವ್ಯ ನಿರ್ವಹಿಸಿದರು. ನಂತರ ವಷ್ಠೆ  ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ,  ಖಾಯಂ ನೌಕರರಾಗಿ ಗುರುತಿಸಿಕೊಂಡು ಮೂರುವರೆ ದಶಕಗಳ ಕಾಲ ಡಿ ದರ್ಜೆ ನೌಕರರಾರಿ ಕರ್ಥವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದಾರೆ. ನಿಜಲಿಂಪ್ಪರವರು ಚಿಕ್ಕಜೋಗಳ್ಳಿಯ  ಸಮುದಾಯ ಆರೋಗ್ಯ ಕೇಂದ್ರದಲ್ಲಿ , 1998 ರಿಂದ ಸೇವೆ ಆರಂಭಿಸಿ ಜುಲೈ 31 2026 ರವರೆಗೆ. ಅಂದರೆ ಸತತ 34 ವರ್ಷಗಳ ಕಾಲ , ಚಿಕ್ಕಜೋಗಿಹಳ್ಳಿ ಉಪ ಆರೋಗ್ಯಕೇಂದ್ರದಲ್ಲಿ ಸೇವೆ ಸಲ್ಪಿಸಿದ್ದಾರೆ.  31 7 2026ರಂದು ,  ಅವರು ವಯೋ ನಿವೃತ್ತಿ ಹೊಂದಿರುತ್ತಾರೆ. ಅವರ ಸಾರ್ಥಕ ಸೇವೆ ಹಾಗೂ ಸನ್ನಡತೆ ಮೆಚ್ಚಿದ , ಆರೋಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು. ಮತ್ತು ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ , ವಿವಿದ ಸಂಘಟನೆಗಳ ಪದಾಧಿಕಾರಿಗಳು. ನಿಜಲಿಂಗಪ್ಪರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ , ಅಭಿಮಾನದಿಂದ ಹಾರೈಸಿ ಸರಳ ಬೀಳ್ಕೊಡುಗೆ ಸಮಾರಂಭದ ಮೂಲಕ ಬೀಳ್ಕೊಟ್ಟಿದ್ದಾರೆ.  ಡಾ ॥ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಮಹಮದ್ ಸಾಧಿಕ್ ರವರು ಮಾತನಾಡಿ , ನಿಜಲಿಂಗಪ್ಪರವರು ಸಜ್ಜನ ಪ್ರಾಮಾಣಿಕ ನೌಕರರಾಗಿದ್ದರು. ಅವರು ಕಿಂಚಿತ್ತು ಯಾವುದೇ ದೋಷರೋಪಗಳಿಲ್ಲದೆ , ನಿಷ್ಕಳಂಕದಿಂದ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದು. ನಿಜಲಿಂಗಪ್ಪರವರ ಸಾರ್ಥಕ ಸೇವೆಗಾಗಿ , ಅವರನ್ನು ಅವರ ಮಡದಿಯೊಡಗೂಡಿ ತಾವು ಗೌರವಿಸಿ ಸನ್ಮ‍ಾನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅವರಿಗೆ ಮುಂದಿನ ಆರೋಗ್ಯ ಆಯಸ್ಸು ಸುಖಮಯವಾಗಿರಲೆಂದು , ತಾವು ದೇವರಲ್ಲಿ ಕೋರುವುದಾಗಿ ಅವರು ತಿಳಿಸಿದ್ದಾರೆ. ವಿಷ್ಣು ಸೇನಾ ಸಮಿತಿ ಮುಖಂಡರಾದ ಜನನಾಯಕ ಕುರಿಹಟ್ಟಿ ಓಬಣ್ಣ , ಮಲಿಯಪ್ಪ , ರಾಜು  ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು  ಸದಸ್ಯರು. ಮತ್ತು ಆರೊಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದು. ನಿಜಲಿಂಗಪ್ಪರವರಿಗೆ ನಿವೃತ್ತಿ ಜೀವನ , ಸುಖಮಯವಾಗಿರಲೆಂದು ಶುಭ ಹಾರೈಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    10 hrs ago
  • ವಿದ್ಯಾರ್ಥಿ ನಿಲಯಗಳ ಮುಂದೆ ಇರುವ ಪೆಟ್ಟಿಗೆ ಅಂಗಡಿಗಳಲ್ಲಿ ಎಗ್ಗ್ ರೈಸ್ ಜೊತೆಗೆ ಸಿಗುತ್ತೆ ಗುಟ್ಕಾ, ಸಿಗರೇಟ್ ಹಾಗೂ ವಿವಿಧ ತಂಬಾಕು ಉತ್ಪನ್ನ ಗಳು, ಇದು ವಿದ್ಯಾರ್ಥಿಗಳಿಗೆ ಬೇಕಾ?. ಇಲ್ಲಿ ಮಾರಾಟ ಮಾಡುವುದು ಸರಿನಾ. ಶಾಲೆ–ವಸತಿ ನಿಲಯಗಳ ಸುತ್ತ ತಂಬಾಕು ದಂಧೆ: ಅಧಿಕಾರಿಗಳ ಕಣ್ಣೆದುರೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ! ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ, ಆದರ್ಶ ಶಾಲೆ, ಮೊರಾರ್ಜಿ ವಸತಿ ಶಾಲೆ, ಸರ್ಕಾರಿ ಐಟಿಐ ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ಸುತ್ತಮುತ್ತ ಅಕ್ರಮ ಪೆಟ್ಟಿಗೆ ಅಂಗಡಿಗಳ ಹಾವಳಿ ಮಿತಿ ಮೀರಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಂಗಡಿಗಳಲ್ಲಿ ಎಗ್ಗ್ ರೈಸ್ ಜೊತೆಗೆ ಗುಟ್ಕಾ, ಸಿಗರೇಟ್ ಹಾಗೂ ವಿವಿಧ ತಂಬಾಕು ಉತ್ಪನ್ನಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ತಂಬಾಕು ವ್ಯಸನದತ್ತ ಆಕರ್ಷಿತರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುವಂತೆ, ಆದರ್ಶ ಶಾಲೆಯ ವಿದ್ಯಾರ್ಥಿಯೊಬ್ಬನ ತಂದೆ ಪೊಲೀಸ್ ಇಲಾಖೆಗೆ ದೂರು ನೀಡಿದ ಬಳಿಕ ತಮ್ಮ ಮಗನನ್ನು ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ಸೇರಿಸಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಈ ಹಿಂದೆ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ್ದರೂ, ಕೆಲವೇ ದಿನಗಳಲ್ಲಿ ಮತ್ತೆ ತಂಬಾಕು ಉತ್ಪನ್ನಗಳ ಮಾರಾಟ ಆರಂಭವಾಗಿದೆ ಎನ್ನಲಾಗಿದೆ. ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಹಾಗೂ ಸಾರ್ವಜನಿಕ ಸ್ಥಳಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದರೂ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪಗಳಿವೆ. ಇದನ್ನು ಕಂಡೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಅಕ್ರಮ ಅಂಗಡಿಗಳನ್ನು ಶಾಶ್ವತವಾಗಿ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
    1
    ವಿದ್ಯಾರ್ಥಿ ನಿಲಯಗಳ ಮುಂದೆ ಇರುವ ಪೆಟ್ಟಿಗೆ ಅಂಗಡಿಗಳಲ್ಲಿ  ಎಗ್ಗ್ ರೈಸ್ ಜೊತೆಗೆ ಸಿಗುತ್ತೆ ಗುಟ್ಕಾ, ಸಿಗರೇಟ್ ಹಾಗೂ ವಿವಿಧ ತಂಬಾಕು ಉತ್ಪನ್ನ ಗಳು, ಇದು ವಿದ್ಯಾರ್ಥಿಗಳಿಗೆ ಬೇಕಾ?. ಇಲ್ಲಿ ಮಾರಾಟ ಮಾಡುವುದು ಸರಿನಾ.
ಶಾಲೆ–ವಸತಿ ನಿಲಯಗಳ ಸುತ್ತ ತಂಬಾಕು ದಂಧೆ: ಅಧಿಕಾರಿಗಳ ಕಣ್ಣೆದುರೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ!
ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ, ಆದರ್ಶ ಶಾಲೆ, ಮೊರಾರ್ಜಿ ವಸತಿ ಶಾಲೆ, ಸರ್ಕಾರಿ ಐಟಿಐ ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ಸುತ್ತಮುತ್ತ ಅಕ್ರಮ ಪೆಟ್ಟಿಗೆ ಅಂಗಡಿಗಳ ಹಾವಳಿ ಮಿತಿ ಮೀರಿದೆ ಎಂಬ ಆರೋಪ ಕೇಳಿಬಂದಿದೆ. 
ಈ ಅಂಗಡಿಗಳಲ್ಲಿ ಎಗ್ಗ್ ರೈಸ್ ಜೊತೆಗೆ ಗುಟ್ಕಾ, ಸಿಗರೇಟ್ ಹಾಗೂ ವಿವಿಧ ತಂಬಾಕು ಉತ್ಪನ್ನಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ತಂಬಾಕು ವ್ಯಸನದತ್ತ ಆಕರ್ಷಿತರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುವಂತೆ, ಆದರ್ಶ ಶಾಲೆಯ ವಿದ್ಯಾರ್ಥಿಯೊಬ್ಬನ ತಂದೆ ಪೊಲೀಸ್ ಇಲಾಖೆಗೆ ದೂರು ನೀಡಿದ ಬಳಿಕ ತಮ್ಮ ಮಗನನ್ನು ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ಸೇರಿಸಿರುವ ಘಟನೆ ಕೂಡ ಬೆಳಕಿಗೆ ಬಂದಿದೆ.
ಈ ಹಿಂದೆ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ್ದರೂ, ಕೆಲವೇ ದಿನಗಳಲ್ಲಿ ಮತ್ತೆ ತಂಬಾಕು ಉತ್ಪನ್ನಗಳ ಮಾರಾಟ ಆರಂಭವಾಗಿದೆ ಎನ್ನಲಾಗಿದೆ. ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಹಾಗೂ ಸಾರ್ವಜನಿಕ ಸ್ಥಳಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದರೂ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪಗಳಿವೆ.
ಇದನ್ನು ಕಂಡೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಅಕ್ರಮ ಅಂಗಡಿಗಳನ್ನು ಶಾಶ್ವತವಾಗಿ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    20 hrs ago
  • Post by YSRmedia vijayanagaraupsates
    1
    Post by YSRmedia vijayanagaraupsates
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.