Shuru
Apke Nagar Ki App…
ಬೆಳೆ ಸಮೀಕ್ಷೆಯಲ್ಲಿ ನಡೆಯುವ ಕಳ್ಳಾಟಕ್ಕೆ ಬ್ರೇಕ್ ಹಾಕಲು ಇಸ್ರೋ ಸಹಾಯ ಮಾಡಲಿದೆ. ಬೆಳೆ ಸಮೀಕ್ಷೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಳ್ಳಾಟ ಅಥವಾ ಅಕ್ರಮ ನಡೆಯದಂತೆ ತಡೆಯಲು ಇಸ್ರೋ ನೆರವು ನೀಡುತ್ತಿದೆ.
Rajkumar M
ಬೆಳೆ ಸಮೀಕ್ಷೆಯಲ್ಲಿ ನಡೆಯುವ ಕಳ್ಳಾಟಕ್ಕೆ ಬ್ರೇಕ್ ಹಾಕಲು ಇಸ್ರೋ ಸಹಾಯ ಮಾಡಲಿದೆ. ಬೆಳೆ ಸಮೀಕ್ಷೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಳ್ಳಾಟ ಅಥವಾ ಅಕ್ರಮ ನಡೆಯದಂತೆ ತಡೆಯಲು ಇಸ್ರೋ ನೆರವು ನೀಡುತ್ತಿದೆ.
More news from ಕರ್ನಾಟಕ and nearby areas
- ಕಲಬುರಗಿ ಜಿಲ್ಲೆಯ ಆಳಂದ್‌ನಲ್ಲಿ ರವಿವಾರವೂ ಸಹ ಬಿಎಲ್‌ಒ (BLO)ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಭಾಗದ ಬಿಎಲ್‌ಒ ಅವರನ್ನು ಭೇಟಿ ಮಾಡಿ, ನಿಗದಿತ ಫಾರ್ಮ್ ಭರ್ತಿ ಮಾಡಿ ಅವರಿಗೆ ಸಲ್ಲಿಸಬೇಕಾಗಿ ತಿಳಿಸಲಾಗಿದೆ.1
- ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ದಂಡೋತಿ ಮುರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ತೀವ್ರ ಅವ್ಯವಸ್ಥೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ವಸತಿ ನಿಲಯದಲ್ಲಿನ ಕಳಪೆ ನಿರ್ವಹಣೆಯಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಮಕ್ಕಳ ಅಳಲು ಇದೀಗ ಬಹಿರಂಗವಾಗಿದೆ.1
- ಸುರಪುರದ ಸುಕ್ಷೇತ್ರ ತಿಂಥಣಿಯಲ್ಲಿರುವ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಭಕ್ತರು ಮಳೆರಾಯನ ಕೃಪೆಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ನಂಬಿ ಬಂದ ಭಕ್ತರಿಗೆ ಸದಾಕಾಲವೂ ಮೌನವಾಗಿಯೇ ಆಶೀರ್ವದಿಸುವ ಶ್ರೀ ಮೌನೇಶ್ವರನ ಸನ್ನಿಧಿಯಲ್ಲಿ ಈ ಪ್ರಾರ್ಥನೆ ನೆರವೇರಿದೆ.1
- ಬೀದರ್ ನಗರದಲ್ಲಿ ಸಭ್ಯತೆ ಮರೆತ ಮಾಜಿ ಸಿಎಂ ಎಚ್‌ಡಿ ಕುಮಾರ್ ಸ್ವಾಮಿ ಅವರಿಗೆ ಸಚಿವ ಈಶ್ವರ ಖಂಡ್ರೆ ಅವರು ತಿರುಗೇಟು ನೀಡಿದ್ದಾರೆ.1
- ಕಾಳಗಿ ತಾಲೂಕಿನವರೇ ಆದ, ಪೂರ್ಣಾವಧಿಗೆ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣಪ್ಪ ಕಮಕನೂರ ಅವರಿಗೆ ಜುಲೈ 19ರಂದು ಅವರ ತವರೂರಿನ ತಾಲೂಕು ಕೋಲಿ ಸಮಾಜದ ವತಿಯಿಂದ ಅದ್ದೂರಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ತಾಲೂಕಾಧ್ಯಕ್ಷ ಜಗನ್ನಾಥ ತೇಲಿ ಈ ಮಾಹಿತಿ ನೀಡಿದ್ದಾರೆ. ಜುಲೈ 19ರಂದು ಬೆಳಗ್ಗೆ 10 ಗಂಟೆಗೆ ಕಾಳಗಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ಡೊಳ್ಳು ಮತ್ತು ಹಲಗೆ ವಾದ್ಯಗಳೊಂದಿಗೆ ತೆರೆದ ವಾಹನದಲ್ಲಿ ತಿಪ್ಪಣಪ್ಪ ಕಮಕನೂರ ಅವರ ಅದ್ದೂರಿ ಮೆರವಣಿಗೆ ನಡೆಯಲಿದ್ದು, ಬಳಿಕ ನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ಅಭಿನಂದನಾ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ರಟಕಲ್ ಗೌರಿಗುಡ್ಡದ ಸಿದ್ಧಶಿವಯೋಗಿ ಶರಣರು, ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ರಟಕಲ್ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ನೀಲಕಂಠ ಮಹಾಸ್ವಾಮಿಗಳು ಹಾಗೂ ಕಾಳಗಿಯ ನೀಲಕಂಠ ಮರಿದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಕಾಳಗಿ, ಮುಖಂಡ ರವಿರಾಜ ಕೊರವಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 85ರಷ್ಟು ಅಂಕ ಪಡೆದ ತಾಲೂಕಿನ ಕೋಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಜರುಗಲಿದ್ದು, ಅರ್ಹ ವಿದ್ಯಾರ್ಥಿಗಳು ದಾಖಲೆಗಳೊಂದಿಗೆ ಜುಲೈ 16ರ ಒಳಗೆ ಗುಂಡಪ್ಪ ಕರೆಮನೊರ (9741681146) ಅಥವಾ ರಾಘವೇಂದ್ರ ಹಲಚೇರಾ (9731155080) ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಕೋಲಿ ಸಮಾಜದ ಯುವ ಘಟಕ ತಾಲೂಕಾಧ್ಯಕ್ಷ ಪ್ರವೀಣ ನಾಮದಾರ, ಮುಖಂಡರಾದ ಭೀಮರಾವ ಮಾಲಿಪಾಟೀಲ, ಮಲ್ಲಪ್ಪ ದಿಗ್ಗಾಂವ, ಸಿದ್ದು ಕೇಶ್ವರ, ಮಾರುತಿ ನೈಕೋಡಿ, ಜಯರಾಜ ಮುದಿರಾಜ, ಶಿವಕುಮಾರ್ ಕಮಕನೂರ, ಮಲ್ಲಿಕಾರ್ಜುನ ಮರಗುತ್ತಿ, ಪ್ರಸಾದ ರಟಕಲ್, ರಾಹುಲ್ ಚಿತ್ತಾಪೂರ, ನೀಲಕಂಠಪ್ಪ ಮಾಸ್ತಾರ, ಮಹೇಶ ಗೋಟೂರ, ಶರಣು ಬಂಕಲಗಿ, ರಾಘವೇಂದ್ರ ಬೆಳಗುಂಪಿ, ಪವಾನ ನಾಮದಾರ, ದತ್ತು ಸಾವಳಗಿ, ಭಾಗೇಶ ಕೋಡ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- ಯಾವ ಖಂಡ್ರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರಿಗೆ ಈಶ್ವರ್ ಖಂಡ್ರೆ ಅವರು ಖಡಕ್ ಕೌಂಟರ್ ನೀಡಿದ್ದಾರೆ. ಕುಮಾರಸ್ವಾಮಿ ಅವರ ಈ ಪ್ರಶ್ನೆಗೆ ಈಶ್ವರ್ ಖಂಡ್ರೆ ಅತ್ಯಂತ ಖಡಕ್ ಆಗಿಯೇ ತಿರುಗೇಟು ನೀಡುವ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.1
- ಕಲಬುರಗಿ ಜಿಲ್ಲೆಯ ಸೇಡಂ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಪಿಎಸ್ಐ ಉಪೇಂದ್ರಕುಮಾರ ಅವರು ಮುಂದಾಗಿದ್ದು, ಪಟ್ಟಣದ ಗಲ್ಲಿ ಗಲ್ಲಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯವು ಅತ್ಯಂತ ಜೋರಾಗಿ ನಡೆದಿದೆ. ಪಟ್ಟಣದ ಮುಖ್ಯ ರಸ್ತೆಗಳು ಸೇರಿದಂತೆ ರೆಹಮತನಗರ, ವೆಂಕಟೇಶ ನಗರ, ವಿದ್ಯಾನಗರ, ದೊಡ್ಡ ಅಗಸಿ ಹಾಗೂ ಸಣ್ಣ ಅಗಸಿ ಪ್ರದೇಶಗಳಲ್ಲಿ ಈ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಕಳ್ಳತನ, ಅಪಘಾತ, ದೌರ್ಜನ್ಯ ಹಾಗೂ ಸಂಚಾರದ ಮೇಲೆ ಹದ್ದಿನ ಕಣ್ಣಿಡಲು ಪೊಲೀಸರು ಸಜ್ಜಾಗುತ್ತಿದ್ದು, ಇದಕ್ಕಾಗಿ ಪಟ್ಟಣದಾದ್ಯಂತ ಒಟ್ಟು 80 ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸೇಡಂ ಇತಿಹಾಸದಲ್ಲೇ ಇದೊಂದು ಹೊಸ ಪ್ರಯೋಗವಾಗಿದ್ದು, ಪ್ರತಿಯೊಂದು ಗಲ್ಲಿ ಗಲ್ಲಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.1
- ಕಲಬುರಗಿಯಲ್ಲಿ ಬಸವರಾಜ ಚಿನ್ನಮಳ್ಳಿ ಅವರು ಆರ್.ಎಸ್.ಎಸ್. ಸಂಘಟನೆಯನ್ನು ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.1