Shuru
Apke Nagar Ki App…
ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ@citynextnews2473 https://youtube.com/shorts/ySQ7PjSr6mQ?si=k1oU70EXQEupVy4r
Yusuf Bepari
ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ@citynextnews2473 https://youtube.com/shorts/ySQ7PjSr6mQ?si=k1oU70EXQEupVy4r
More news from ಕರ್ನಾಟಕ and nearby areas
- ಬೀಳಗಿ:ಮನುಷ್ಯನಾದವನು ಜೀವನದಲ್ಲಿ ಏನನ್ನಾದರು ಪಡೆದುಕೊಳ್ಳಬೇಕು ಎಂದರೆ ಅದನ್ನು ಧರ್ಮದಿಂದ ಪಡೆಯಬೇಕು ಎಂದು ಷ.ಬ. ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶ್ರೀ ಕಲ್ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೀಳಗಿ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಬೀಳಗಿ,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಬೀಳಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪ,ಪೂ ಧರ್ಮಾಧಿಕಾರಿಗಳಾದ ಡಾ:ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನಗಳು ನೀಡಿದ ಅವರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕತೆಯ ಕುರಿತು ಉಪನ್ಯಾಸ ನೀಡಿರುವ ಜ್ಞಾನಾನಂದ ಸ್ವಾಮಿಗಳು ಧರ್ಮದಿಂದ ನಡೆದುಕೊಂಡಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಮನುಷ್ಯನ ನಡೆಗಳನ್ನು ತಿದ್ದಿಕೊಳ್ಳುಬೇಕು ಎಂದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಬ್ರಾಯ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮವು ಒಂದು,ಇದಲ್ಲದೆ ಯೋಜನೆಯು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ ಎಂದು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಬೆಳಿಗ್ಗೆ 07:30 ರಿಂದ 11:00 ಘಂಟೆ ವರೆಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.1
- ಯಶಸ್ವಿಯಾಗಿ ಜರುಗಿದ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಕಾರ್ಯಕ್ರಮ1
- ಇಡೀ ರಾಜ್ಯದಲ್ಲಿ ಅಥಣಿ ವಿಭಾಗದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ ಸೂಕ್ತ ಕ್ರಮ ಕೈಗೊಳ್ಳಬೇಕು : ಬೆಳಗಾವಿ ಎಸ್.ಪಿ ಕೆ. ರಾಮರಾಜನ್. ಅಥಣಿ: ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಯಾರಿಗಾದರೂ ಅಪಘಾತ ಮಾಡಿ ಘಟನೆಯಲ್ಲಿ ಸಾವುಗಳು ಸಂಭವಿಸಿದರೆ ಅಂತಹ ವಾಹನ ಚಾಲಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರ ನಡುವೆ ಉತ್ತಮ ಸಂವಹನ ಮಾನವೀಯ ಭದ್ರತೆಗಾಗಿ ಅತ್ಯಂತ ಮುಖ್ಯ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಕೆ ರಾಮರಾಜನ್ ಹೇಳಿದರು. ಅಥಣಿ ಪೊಲೀಸ್ ಉಪವಿಭಾಗದ ವ್ಯಾಪ್ತಿಯಲ್ಲಿ ರವಿವಾರ ನಿಯೋಜಿತ ಭೇಟಿ ನೀಡಿದ ನೂತನವಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಹಾರೂಗೇರಿ, ಐಗಳಿ ಪೊಲೀಸ್ ಠಾಣೆಗಳಿಗೆ ಠಾಣೆಗಳಲ್ಲಿ ಇರುವ ವಾಸ್ತವ ಸ್ಥಿತಿಗತಿ, ವ್ಯವಸ್ಥೆ, ಸಾರ್ವಜನಿಕರೊಂದಿಗೆ ಪೊಲೀಸರ ನಡುವಳಿಕೆ, ಹಲವು ಕಡತಗಳನ್ನು ಪರಿಶೀಲನೆ ನಡೆಸಿ ಪೊಲೀಸ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಎಸ್.ಪಿ ಕೆ ರಾಮರಾಜನ್ ಕಾನೂನು ಎಲ್ಲರಿಗೂ ಸಮಾನ ಯಾರೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ ಯಾವುದೇ ರಾಜಿ ಸಂಧಾನ ಮಾಡದೆ ದೂರಿನ ಅನ್ವಯ ಎಫ್ ಐ ಆರ್ ದಾಖಲಿಸಬೇಕು. ಇಡೀ ರಾಜ್ಯದಲ್ಲಿ ಅಥಣಿ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ ಅವುಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರ ಯಾವುದೇ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಅಕ್ರಮ ಮಧ್ಯ ಮಾರಾಟಗಾರರ ವಿರುದ್ಧ ಕೇಸ್ ದಾಖಲು ಮಾಡಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಗಳು ಕಂಡುಬರುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸಬೇಕು, ಹಣದ ಆಸೆಗಾಗಿ ವಂಚಕರ ಬಲೆಗೆ ಬೀಳಬಾರದು ಅಂತಹ ಯಾವುದೇ ಸಂದೇಹ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಅಥಣಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಜೊತೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿರುವ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇರುವುದು ಕಂಡು ಬಂದಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಥಣಿಗೆ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆ ಬೇಡಿಕೆ ಇದ್ದು, ಈ ಕುರಿತು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಹೇಳಿದರು. ಈ ವೇಳೆ ಅಥಣಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ, ಅಥಣಿ ಪೊಲೀಸ್ ಉಪ ವಿಭಾಗದ ಪಿಎಸ್‌ಐ, ಎ ಎಸ್ ಐ, ಎಲ್ಲ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.2
- ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಹೊಸ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು . ಇದೇ ವೇಳೆ ಗ್ರಾಮದ ಮುಖಂಡರಾದ ಕೆ ಟಿ ರಾಮಾಂಜನೇಯ ಮತ್ತು ಕುಟುಂಬದವರು ಗೊಲ್ಲರಹಟ್ಟಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ತಟ್ಟೆ ನೋಟಗಳನ್ನು ಕೊಡುಗೆಯಾಗಿ ನೀಡಿದರು . ಮುಖ್ಯ ಶಿಕ್ಷಕ ಕೆ ಟಿ ತಿಪ್ಪೇಶ್ ಮಾತನಾಡದೆ ಸ್ವಾಮಿ ವಿವೇಕಾನಂದರು, ಚಿಕಾಗೋದಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ಸಾರಿದರು ಎಂದು ತಿಳಿಸಿದರು . ಮುಖಂಡ ಕೆ ಟಿ ಸೋಮಶೇಖರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಸ್ತು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಉತ್ಪಾದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.. ಇದೇ ವೇಳೆ ಮುಖಂಡರಾದ ಕೆ.ಟಿ ಕರೆ ಗೌಡ ,ಕೆಎ ಮಧು ,ಬಿ ಪರಮೇಶ್ವರಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಹಾಂತೇಶ್ ,ಉಪಾಧ್ಯಕ್ಷ ಶಿಲ್ಪ ಶ್ರೀ ,ಸದಸ್ಯರಾದ ಗುರುಸ್ವಾಮಿ, ಗಿರೀಶ್ ,ವಿರೂಪಾಕ್ಷಪ್ಪ ,ಮಂಜುಳಮ್ಮ ,ದಿನೇಶ್ ,ಉಮೇಶ್ ,ನೇತ್ರಮ್ಮ, ಗಂಗಮ್ಮ, ಎಸ್ ಮಧು ,ಕಾವ್ಯ ,ಶಿಕ್ಷಕರಾದ ತಿಪ್ಪೇಸ್ವಾಮಿ ಯೋಗೇಶ್ ,ಅನಿತಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಕ್ಯಾತಮ್ಮ ಇತರರಿದ್ದರು2
- ಗದಗ ನ್ಯೂಸ್ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ. ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ.. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ. ನಿಧಿ ನೋಡಲು ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ. ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ.. ನಿಧಿಯನ್ನು ವಶಕ್ಕೆ ಪೋಲೀಸರು ವಶಕ್ಕೆ ಪಡೆದಿದ್ದಾರೆ..1
- ಸಾಧನೆಗೈದ ರೈತರನ್ನು ಸರಕಾರ ಗುರುತಿಸಲಿ: ಉಮೇಶ ಕೆ. ಮುದ್ನಾಳ್ ಎಲ್ಲಾ ಸವಲತ್ತುಗಳಿದ್ದರೂ ಕೃಷಿ ಎಂದರೆ ಮೂಗು ಮುರಿಯುವ ಜನರ ನಡುವೆ ಬರದ ನಾಡಿನಲ್ಲಿ ಬಂಗಾರದಂತ ಕಲ್ಲಂಗಡಿ ಬೆಳೆದು ಜನ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ. ಹೌದು ಯಾದಗಿರಿ ತಾಲೂಕಿನ ಮುಂಡರಗಿ (ಅಶೋಕ ನಗರ) ತಾಂಡಾದ ಮಲ್ಲು ಎನ್ನುವ ರೈತ ನೀರಿನ ಕೊರತೆ ಇರುವ ಭೂಮಿಯಲ್ಲಿ ಫಲವತ್ತಾದ ಕಲ್ಲಂಗಡಿ ಬೆಳೆ ಬೆಳೆದಿದ್ದಾನೆ. ಪ್ರತಿ ಎಕರೆಗೆ ೩೦ ಟನ್ ನಷ್ಟು ಕಲ್ಲಂಗಡಿ ಫಸಲು ಬೆಳೆದು ಸಾಧನೆಗೈದ ರೈತನನ್ನು ಗುರುತಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಸನ್ಮಾನಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವು ರೈತರು ಕಲ್ಲಂಗಡಿ ಬೆಳೆದು ಬಿಸಿಲಿನ ಹೊಡೆತಕ್ಕೆ ಕೈ ಸುಟ್ಟುಕೊಂಡಿದ್ದಾರೆ. ನೀರಿನ ಮೂಲಗಳು ಬತ್ತಿ ಹೋಗಿರಿವುದರಿಂದ ಸಾಕಷ್ಟು ರೈತರು ಅಪಾರ ಪ್ರಮಾಣದ ಹಾನಿಗೊಳಗಾಗಿದ್ದಾರೆ. ಆದರೆ ಮುಂಡರಗಿ ಅಶೋಕ ನಗರದ ತಾಂಡಾದ ರೈತ ಜಮೀನು ಮತ್ತು ನೀರು ಲೀಸ್ ಪಡೆದು ಯಾವುದೇ ಕೊರತೆ ಎದುರಾಗದ ಹಾಗೇ ಕಾಪಾಡಿಕೊಂಡು ಅಧಿಕ ಲಾಭ ಗಳಿಸಿದ್ದಾರೆ. ಇಂಥವರು ರೈತರಿಗೆ ಪ್ರೇರಣೆಯಾಗಲಿ. ಕಾರಣ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇವರ ಜಮೀನಿಗೆ ಭೇಟಿ ನೀಡಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು. ಸಂದರ್ಬದಲ್ಲಿ ಮಹೇಶ, ಪವನ, ಮಲ್ಲೇಶ, ಶಂಕರ, ಸುರೇಶ, ಮಾನಸಿಂಗ, ಶಂಕ್ರಹರಿಚಂದ ರಾಜುಹರಿಚಂದ, ಶಾಣಿಬಾಯಿ, ಲಾಲಸಿಂಗ್, ಗೋವಿಂದ, ನಂದು, ಸುಬಾಸ್, ಚಂದು, ಕುರೇಶ, ದಾವಜಿ, ಸೇರಿದಂತೆ ಅನೇಕು ಇದ್ದರು.2
- ಪ್ರಧಾನಿ ಮೋದಿ ಅವರ ವಿರುದ್ಧ ಅಸಂಬದ್ಧ ಪದ ಬಳಕೆ ಕ್ರಮಕ್ಕೆ ಆಗ್ರಹ ಅಥಣಿ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಅಸಂಬದ್ದ ಪದ ಬಳಕೆ ಮಾಡಿರುವ ಅಥಣಿ ವ್ಯಾಪಾರಿ ವಿರುದ್ಧ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ SP ಅವರಿಗೆ ಅಥಣಿ ಬಿಜೆಪಿ ವತಿಯಿಂದ ಅಥಣಿ ಪಟ್ಟಣಕ್ಕೆ ಆಗಮಿಸಿದ ಬೆಳಗಾವಿ ಜಿಲ್ಹಾ ಪೊಲೀಸ್ ವರಿಷ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.1
- 20 ಅಡಿ ಎತ್ತರದ ಬಾರೆ ನಿರ್ಮಾಣದ ಗುಡಿ ಹತ್ತಿ ಕಳಸ ಕಿತ್ತ ವೀರಗಾಗರು ರೋಮಾಂಚನಗೊಳಿಸಿದ ಬಾರೆಕಳ್ಳೆ ಹತ್ತುವ ಸಹಸದ ದೃಶ್ಯ.. ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿಯ ಜಾತ್ರೆ...ಕೇತೆಲಿಂಗನ ಪರೀಷೆ...1
- ಹೈಯಾಳಲಿಂಗೇಶ್ವರ ದೇವಸ್ಥಾನದ ದೇವರ ಹುಂಡಿ ಕಳ್ಳತನಕ್ಕೆ ಯತ್ನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೈಯಾಳಲಿಂಗೇಶ್ವರ ಗ್ರಾಮದ ಹೈಯಾಳಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಹುಂಡಿಯನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ. ಬೈಕ್‌ನಲ್ಲಿ ಬಂದ ನಾಲ್ವರು ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಲು ಪ್ರಯತ್ನಿಸಿದ್ದಾರೆ. ಈ ಘಟನೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.1