ಭದ್ರಾವತಿ-ಹಿರಿಯ ಹೋರಾಟಗಾರ ಡಿ.ಸಿ.ಮಾಯಣ್ಣ ರಿಗೆ ಉನ್ನತ ನಾಗರೀಕ ಪ್ರಶಸ್ತಿ ನೀಡಿ ಭದ್ರಾವತಿ: ಹಿರಿಯ ಕಾರ್ಮಿಕ ಮುಖಂಡ ರಾದ ಕಾಮ್ರೇಡ್ ಡಿ.ಸಿ ಮಾಯಣ್ಣನವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉನ್ನತ ನಾಗರೀಕ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಮೂಲಕ ಸೂಕ್ತ ಗೌರವ ನೀಡಬೇಕೆಂದು ಕಾಮ್ರೇಡ್ ಡಿ.ಸಿ ಮಾಯಣ್ಣ ಅಭಿಮಾನಿಗಳ ಸಂಘದ ಪ್ರಧಾನ ಸಂಚಾಲಕ ಬಿ.ಎನ್ ರಾಜು ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ ರಾಜ್ಯ ಮಂಡಳಿ ಸದಸ್ಯ ರಾದ ಮಾಯಣ್ಣನವರ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಇವರು ಬದುಕುಳಿಯುವುದೇ ಕಷ್ಟವಾಗಿತ್ತು. ಅಲ್ಲಿಂದ ಇವರನ್ನು ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಕ್ಷೇತ್ರದ ನಾಗರೀಕರ ಪ್ರೀತಿಯ ಹಾರೈಕೆ, ಪ್ರಾರ್ಥನೆ ಯಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು. ಆಸ್ಪತ್ರೆಯ ಮುಖ್ಯ ಡಾ:ವೈದ್ಯಾಧಿಕಾರಿ ಶಂಕರಪ್ಪ, ತಜ್ಞ ವೈದ್ಯ ಡಾ.ಮಂಜುನಾಥ್, ಸ್ಟಾಫ್ ನರ್ಸ್ ಎಲಿಜಬೆತ್ ಸಾಂಡ್ರರವರು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಮಾಯಣ್ಣನವರ ಆರೋಗ್ಯದ ಬಗ್ಗೆ, ಹೆಚ್ಚಿನ ಕಾಳಜಿವಹಿಸಿ ಹಗಲು-ರಾತ್ರಿ ಪ್ರೀತಿ, ಗೌರವದಿಂದ ಚಿಕಿತ್ಸೆ ನೀಡುತ್ತಿರುವು ದರಿಂದ ವಿಐಎಸ್‌ಎಲ್ ಕಾರ್ಮಿಕರ, ನಿವೃತ್ತ ಕಾರ್ಮಿಕರ, ಗುತ್ತಿಗೆ ಕಾರ್ಮಿಕರ ಹಾಗು ಕ್ಷೇತ್ರದ ಸಮಸ್ತ ನಾಗರೀಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅಲ್ಲದೆ ಮಾಯಣ್ಣನವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸುತ್ತಿರುವ ಜನಪ್ರತಿನಿಧಿ ಗಳಿಗೆ, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರಿಗೆ, ಗಣ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಮಾಯಣ್ಣನವರು ಕಳೆದ 60 ವರ್ಷ ಗಳಿಂದಲೂ ನಿರಂತರವಾಗಿ ಕಾರ್ಮಿಕರ ಮತ್ತು ದೀನ-ದಲಿತರ ಪರವಾಗಿ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಯಾವುದೇ ಫಲಾಪೇಕ್ಷೆ ಪಡೆಯದೆ ನಿರಂತರವಾಗಿ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಇದು ಕ್ಷೇತ್ರದ ಎಲ್ಲಾ ನಾಗರೀಕರಿಗೂ ತಿಳಿದ ವಿಚಾರ ವಾಗಿದೆ. ಇವರ ಸೇವೆಯನ್ನು ಗೌರವಿಸಿ ಇಷ್ಟರಲ್ಲಾಗಲೇ ಕೇಂದ್ರ ಸರ್ಕಾರ ಪದ್ಮ ಶ್ರೀ, ಪದ್ಮ ಭೂಷಣ ಪ್ರಶಸ್ತಿಗಳನ್ನು ನೀಡಬೇಕಾ ಗಿತ್ತು. ಅಲ್ಲದೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಹಾಗೂ ವಿಶ್ವವಿದ್ಯಾ ನಿಲಯಗಳು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಬೇಕಾಗಿತ್ತು. ಆದರೆ ಇವರ ಸೇವೆಯನ್ನು ಇದುವರೆಗೂ ಗುರುತಿಸಿ ಗೌರವಿಸದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ಸಂಬಂಧ ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಹರಿಸಬೇಕೆಂದು ಆಗ್ರಹಿಸಿದರು. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸ ಲಾಗಿದ್ದು, ಜ.9ರ ಸಂಜೆ 4 ಗಂಟೆಗೆ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸಭೆಯನ್ನು ಕರೆಯಲಾಗಿದ್ದು, ಎಲ್ಲಾ ಸಂಘ ಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಡಿ.ಸಿ ಮಾಯಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸೀತಾರಾಮು, ಪಿ.ದೊರೈ, ಟಿ.ಜಿ ಬಸವರಾಜಯ್ಯ, ಲಿಂಗೋಜಿರಾವ್, ಚಂದ್ರಶೇಖರ್, ಸೋಮಣ್ಣ, ವೆಂಕಟೇಶ್ ಮೂರ್ತಿ, ಬಸವರಾಜ ಮತ್ತು ಶೇಖರ್ ಉಪಸ್ಥಿತರಿದ್ದರು.

- ಭೀಕರ ಅಪಘಾತ: ಬಾಲಕಿ ಸೇರಿ ನಾಲ್ವರು ಸ್ವಾಮಿ ಅಯ್ಯಪ್ಪ ಭಕ್ತರು ಸಾವು ತುಮಕೂರಿನ :ಜಿಲ್ಲೆಯ ಕೋರ ಬಳಿ ಶುಕ್ರವಾರ ಬೆಳಗಿನ ವೇಳೆ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ಬಾಲಕಿ ಸೇರಿ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಸಾಕ್ಷಿ (7), ಮಾರುತಪ್ಪ, (45), ವೆಂಕಟೇಶ (30), ಗವಿಸಿದ್ದಪ್ಪ (28)ಮೃತರು. ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿಕೊಂಡು ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.1
- ಹೊಳಲ್ಕೆರೆ ಪಟ್ಟಣದಲ್ಲಿ ಇದೇ ಜನವರಿ 14 ರಂದು ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಶಾಸಕ ಎಂ ಚಂದ್ರಪ್ಪ ತಿಳಿಸಿದ್ದಾರೆ. ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಂ ಚಂದ್ರಪ್ಪ ಅವರು ಮಾತನಾಡಿದ್ದು ಇದೇ 14 ರಂದು ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಮೈದಾನದಲ್ಲಿ ಶ್ರೀ ಗುರು ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎರಡು ದಿನಗಳ ಕಾಲ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ1
- ವಿಬಿ-ಜಿ ರಾಮ್ ಜಿ ಮಸೂದೆ ಕೇಂದ್ರ ಸರಕಾರ ಹಿಂದಕ್ಕೆ ಪಡೆಯದಿದ್ದರೆ ಪ್ರಬಲ ಹೋರಾಟ: ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು 'ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025'ಯನ್ನು ಮಂಡಿಸುವ ಮೊದಲು ಯಾವುದೇ ಚರ್ಚೆಯನ್ನು ನಡೆಸದೇ ತನ್ನ ಬುಲ್ಡೋಜರ್ ಸರ್ವಾಧಿಕಾರ ನೀತಿಯಿಂದ ಮಸೂದೆಯನ್ನು ಪಾಸ್ ಮಾಡಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಮಸೂದೆಯಿಂದ ಗಾಂಧಿ ಹೆಸರನ್ನು ತೆಗೆದು ಹಾಕುವ ಹುನ್ನಾರವನ್ನು ಸರಕಾರ ಮಾಡುತ್ತಾ ಇದೆ. ಜನರು ಇದನ್ನು ಒಪ್ಪುವುದಿಲ್ಲ ಎಂದು ಗೊತ್ತಿದ್ದರೂ ಸಹ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ. ಈ ಮೊದಲಿದ್ದ ಉದ್ಯೋಗ ಖಾತರಿ ಯೋಜನೆಯನ್ನು ಹೊಸ ಕಾನೂನಿನ ಮೂಲಕ ದುರ್ಬಲ ಮಾಡಲಾಗಿದೆ . ಆರ್ ಎಸ್ ಎಸ್, ಬಿಜೆಪಿಗರಿಗೆ ದೇಶದ ಅಭಿವೃದ್ಧಿಗೆ ಮಹತ್ವವನ್ನು ನೀಡುವ ಬದಲು ಈ ಮೊದಲು ಜನರ ಕಲ್ಯಾಣವನ್ನು ಮಾಡುತ್ತಿದ್ದ ಯೋಜನೆಯನ್ನು ನಿಷ್ತ್ರೀಯ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಈ ಕ್ರಮಕ್ಕೆ ಕಾಂಗ್ರೆಸ್ ತೀವ್ರವಾಗಿ ಖಂಡನೆಯನ್ನು ವ್ಯಕ್ತಪಡಿಸುತ್ತಿದೆ. ನರೇಗಾ ಹೋಗಿ ವಿಬಿ-ಜಿ ರಾಮ್ ಜಿ ಎಂದು ಮಾಡಲಾಗಿದ್ದು ಇದರಲ್ಲಿ ರಾಮನ ಹೆಸರನ್ನು ಯಾಕೆ ಸೇರಿಸಲಾಗಿದೆಯೋ ತಿಳಿಯದು ಎಂದು ಪ್ರಶ್ನೆ ಮಾಡಿದರು. ವಿಬಿ-ಜಿ ರಾಮ್ ಜಿ ಯೋಜನೆ ಕೇಂದ್ರ ಸರಕಾರದ್ದು ಆದರೆ ಅದರಲ್ಲಿ ರಾಜ್ಯ ಸರಕಾರದ ಪಾಲು ಹೆಚ್ಚಿಗೆ ಇದೆ. ಆರ್ಥಿಕವಾಗಿ ಬಡವಾದ ದೇಶಗಳಿಗೆ ಅವುಗಳನ್ನು ಭರಿಸುವ ಶಕ್ತಿ ಇದೆಯೇ? ಇದು ಉದ್ಯೋಗ ಗ್ಯಾರಂಟಿ ಯೋಜನೆಯಲ್ಲ ಇದು ಉದ್ಯೋಗ ಬೋಗಸ್ ಯೋಜನೆ ಎಂದು ಅವರು ಕಿಡಿಕಾರಿದರು. ಉತ್ತಮ ಕಾನೂನನ್ನು ಯಾಕೆ ವಿಸರ್ಜನೆ ಮಾಡಲಾಗಿದೆ ಎಂಬುದೇ ತಿಳಿತಾ ಇಲ್ಲ. ಇದು ಪಂಚಾಯತ್ ರಾಜ್ ವ್ಯವಸ್ಥೆಯ ಮೇಲೆ ಚಪ್ಪಡಿ ಕಲ್ಲುಹಾಕಿದ ಹಾಗೆ ಆಗಿದೆ. ಇದರಿಂದ ವಿಕೇಂದ್ರೀಕರಣ ಆಡಳಿತ ಸಂಪೂರ್ಣವಾಗಿ ಹದಗೆಟ್ಟು ಕೇಂದ್ರೀಕರಣ ನೀತಿಗೆ ಅಡಿಪಾಯ ಹಾಕಲಿದೆ ಎಂದರು. ಈ ಮಸೂದೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದರೆ ಕಾಂಗ್ರೆಸ್ ಸರಕಾರ ದೊಡ್ಡ ಮಟ್ಟದ ಹೋರಾಟವನ್ನು ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು . ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ, ಪಕ್ಷದ ಮುಖಂಡರಾದ ಪದ್ಮರಾಜ್ ಪೂಜಾರಿ, ವಿಶ್ವಾಸ್ ಕುಮಾರ್, ವಿನಯ್ ರಾಜ್, ಶುಭೋದಯ ಆಳ್ವ , ಲಾವಣ್ಯ ಬಲ್ಲಾಳ್ ಸಹಿತ ಮುಂತಾದವರು ಉಪಸ್ಥಿತರಿದ್ದರು. ವರದಿ: ಶಂಶೀರ್ ಬುಡೋಳಿ1
- ಆಶಾ ಕಾರ್ಯಕರ್ತರಿಗೂ ಸಹ ವೇತನ ಹೆಚ್ಚಳ ಮಾಡುವಂತೆ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷ. ಡಿ ನಾಗಲಕ್ಷ್ಮಿ ಒತ್ತಾಯ಼.1
- ಮೈಸೂರಿನ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ #onlinetv24x7 #Mysore2
- ಇದು ನನ್ನ ಅನುಭವಕ್ಕೂ ಬಂದಿದೆ, ಕೆರಳದಲ್ಲಿ ಡ್ರೈವ್ ಮಾಡುವಾಗ ನನಗೆ ಪೋಲಿಸರು ಸ್ನೇಹಿತರಂತೆ ವರ್ತಿಸಿದ್ದು ನನ್ನ ಅನುಭವ.1
- *ಭಾರತ ನಲ್ಲಿ ವೈರಲ್*1
- ಸರಕಾರಿ ನೌಕರರ ವತಿಯಿಂದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ. ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸಿಟಿ ವೀರೇಶ್ ಮಾಹಿತಿ ನೀಡಿದ್ದಾರೆ..1