logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಾರ್ ಮುಂದೆ ಎರಡು ಗುಂಪುಗಳ ಗಲಾಟೆ ಸಣ್ಣ ವಿಚಾರಕ್ಕೆ ರಸ್ತೆಯಲ್ಲೇ ಹೊಡೆದಾಟ ನೆಲಮಂಗಲ ಸಮೀಪದ ಬಾಗಲಗುಂಟೆಯ ಜೈಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡುತ್ತಿದ್ದ ಬಲರಾಮ ಮತ್ತು ಯತೀಶ್ ಅವರ ತಂಡಗಳ ನಡುವೆ ಸಣ್ಣ ವಿಷಯಕ್ಕೆ ಆರಂಭವಾದ ಕಿರಿಕ್ ಮೊದಲು ಬಾರ್ ಒಳಗೆ ಶುರುವಾಗಿ, ನಂತರ ಹೊರಗೆ ಬಂದು ರಸ್ತೆಯಲ್ಲೇ ಹೊಡೆದಾಟದ ಹಂತಕ್ಕೆ ತಲುಪಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ

3 hrs ago
user_Veega News Kannada
Veega News Kannada
Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
3 hrs ago

ಬಾರ್ ಮುಂದೆ ಎರಡು ಗುಂಪುಗಳ ಗಲಾಟೆ ಸಣ್ಣ ವಿಚಾರಕ್ಕೆ ರಸ್ತೆಯಲ್ಲೇ ಹೊಡೆದಾಟ ನೆಲಮಂಗಲ ಸಮೀಪದ ಬಾಗಲಗುಂಟೆಯ ಜೈಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡುತ್ತಿದ್ದ ಬಲರಾಮ ಮತ್ತು ಯತೀಶ್ ಅವರ ತಂಡಗಳ ನಡುವೆ ಸಣ್ಣ ವಿಷಯಕ್ಕೆ ಆರಂಭವಾದ ಕಿರಿಕ್ ಮೊದಲು ಬಾರ್ ಒಳಗೆ ಶುರುವಾಗಿ, ನಂತರ ಹೊರಗೆ ಬಂದು ರಸ್ತೆಯಲ್ಲೇ ಹೊಡೆದಾಟದ ಹಂತಕ್ಕೆ ತಲುಪಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ

More news from ಕರ್ನಾಟಕ and nearby areas
  • ಅರಹಳ್ಳಿ ಸೊಸೈಟಿ ಅಧ್ಯಕ್ಷರಾಗಿ ಕಣ್ಣೂರು ಮಂಜುನಾಥ್ ಉಪಾಧ್ಯಕ್ಷರಾಗಿ ನೂರುಲ್ಲಾ ಆವಿರೋಧ ಆಯ್ಕೆ.
    1
    ಅರಹಳ್ಳಿ ಸೊಸೈಟಿ ಅಧ್ಯಕ್ಷರಾಗಿ ಕಣ್ಣೂರು ಮಂಜುನಾಥ್ ಉಪಾಧ್ಯಕ್ಷರಾಗಿ ನೂರುಲ್ಲಾ ಆವಿರೋಧ ಆಯ್ಕೆ.
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    5 hrs ago
  • kolar niyamath bi amma ka uras manaya gaya
    1
    kolar niyamath bi amma ka uras manaya gaya
    user_True news kolar Ayub Pasha
    True news kolar Ayub Pasha
    Local News Reporter ಕೋಲಾರ, ಕೋಲಾರ, ಕರ್ನಾಟಕ•
    15 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    16 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    16 hrs ago
  • ಕರ್ನಾಟಕ ರಾಜ್ಯದ ರಾಜ್ಯಪಾಲರನ್ನು ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು
    1
    ಕರ್ನಾಟಕ ರಾಜ್ಯದ ರಾಜ್ಯಪಾಲರನ್ನು ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು
    user_E ಮಾಹಿತಿ ನಿಮಗಾಗಿ
    E ಮಾಹಿತಿ ನಿಮಗಾಗಿ
    ತುಮಕೂರು, ತುಮಕೂರು, ಕರ್ನಾಟಕ•
    9 hrs ago
  • ಅ.ನಾ. ಹರೀಶ್ ಟೀಕೆಗಳಿಗೆ ಅಂಕಿ-ಅಂಶಗಳ ಸಮೇತ ಉತ್ತರ ಆಧಾರರಹಿತ ಆರೋಪಗಳಿಗೆ ಗಂಗಾಧರ್ ತೀವ್ರ ವಿರೋಧ ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಲು ಎಚ್ಚರಿಕೆ..
    1
    ಅ.ನಾ. ಹರೀಶ್ ಟೀಕೆಗಳಿಗೆ ಅಂಕಿ-ಅಂಶಗಳ ಸಮೇತ ಉತ್ತರ ಆಧಾರರಹಿತ ಆರೋಪಗಳಿಗೆ ಗಂಗಾಧರ್ ತೀವ್ರ ವಿರೋಧ ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಲು ಎಚ್ಚರಿಕೆ..
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    16 hrs ago
  • ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಸಿಗರತ್ತ ಗಾಂಭೀರ್ಯದಿಂದ ನೋಡುತ್ತಾ ನಿಧಾನವಾಗಿ ಸಾಗಿದ ಹುಲಿಯ ದೃಶ್ಯ ಸಫಾರಿ ಪ್ರಿಯರಿಗೆ ರೋಮಾಂಚನಕಾರಿ ಅನುಭವ ನೀಡಿದೆ. ಕಬಿನಿಯ ನೈಸರ್ಗಿಕ ಸೌಂದರ್ಯದ ನಡುವೆ ಕಾಣಿಸಿಕೊಂಡ ಈ ಅಪರೂಪದ ಕ್ಷಣ ಪ್ರಕೃತಿ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾಡಿನ ರಾಜನ ಗಾಂಭೀರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದು, ಕಬಿನಿ ಸಫಾರಿಯ ವಿಶೇಷತೆಯನ್ನು ಮತ್ತೊಮ್ಮೆ ನೆನಪಿಸಿದೆ.
    1
    ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಸಿಗರತ್ತ ಗಾಂಭೀರ್ಯದಿಂದ ನೋಡುತ್ತಾ ನಿಧಾನವಾಗಿ ಸಾಗಿದ ಹುಲಿಯ ದೃಶ್ಯ ಸಫಾರಿ ಪ್ರಿಯರಿಗೆ ರೋಮಾಂಚನಕಾರಿ ಅನುಭವ ನೀಡಿದೆ. ಕಬಿನಿಯ ನೈಸರ್ಗಿಕ ಸೌಂದರ್ಯದ ನಡುವೆ ಕಾಣಿಸಿಕೊಂಡ ಈ ಅಪರೂಪದ ಕ್ಷಣ ಪ್ರಕೃತಿ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾಡಿನ ರಾಜನ ಗಾಂಭೀರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದು, ಕಬಿನಿ ಸಫಾರಿಯ ವಿಶೇಷತೆಯನ್ನು ಮತ್ತೊಮ್ಮೆ ನೆನಪಿಸಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ಅರಹಳ್ಳಿ ಸೊಸೈಟಿಯ ನೂತನ ಅಧ್ಯಕ್ಷರಾಗಿ ಕೋಡಿ ಕಣ್ಣೂರು ಮಂಜುನಾಥ್ ಆಯ್ಕೆ ಕೋಲಾರ: ತಾಲೂಕಿನ ಅರಹಳ್ಳಿ ಸೊಸೈಟಿಯ ನೂತನ ಅಧ್ಯಕ್ಷರಾಗಿ ಕೋಡಿ ಕಣ್ಣೂರು ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ನೂರುಲ್ಲಾ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿ, ಸೊಸೈಟಿಯಲ್ಲಿ ಪಾರದರ್ಶಕ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ಷೇರುದಾರರನ್ನು ಇನ್ನು ಹೆಚ್ಚು ಮಾಡಬೇಕು. ಜೊತೆಯಲ್ಲಿ ರೈತರ ಹಾಗೂ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು. ತೀವ್ರ ಹಣಾಹಣಿ ಸೃಷ್ಟಿಸಿದ್ದ ಅರಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷವು 12 ನಿರ್ದೇಶಕ ಸ್ಥಾನಗಳನ್ನು ಗೆಲ್ಲುವ ಮೂಲಕ ನಮ್ಮ ಶಕ್ತಿಯನ್ನು ತೋರಿಸಲಾಗಿದೆ. ಇದೇ ರೀತಿ ಒಗ್ಗಟ್ಟಿನಿಂದ ಸಂಘಟನೆ ಮಾಡುವ ಮೂಲಕ ಮುಂಬರುವ ಪ್ರತಿಯೊಂದು ಚುನಾವಣೆಯಲ್ಲೂ ಜಯಗಳಿಸಿ, ಜನರ ಸೇವೆ ಮಾಡಲು ಮುಂದಾಗಬೇಕು ಎಂದು ಹೇಳಿದರು. ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನನ್ನ ಗೆಲುವಿಗೆ ಕಾರಣಕರ್ತರಾದ ಮಾಜಿ ಶಾಸಕ ಆರ್ ವರ್ತೂರ್ ಪ್ರಕಾಶ್, ಬೆಗ್ಲಿ ಸೂರ್ಯ ಪ್ರಕಾಶ್ ಸಿಎಂಆರ್ ಶ್ರೀನಾಥ್ ಮತ್ತು ಸೊಸೈಟಿ ನಿರ್ದೇಶಕರುಗಳಿಗೆ ಕೃತಜ್ಞತೆ ತಿಳಿಸಿದ ಅವರು, ಈಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಾನು ಮುಂದಿನ ದಿನಗಳಲ್ಲಿ ರೈತರಿಗೆ, ಜನಸಾಮಾನ್ಯರ ಆರ್ಥಿಕ ಸಬಲೀಕರಣಗೊಳಿಸಲು ಸಹಕಾರ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು. ಚುನಾವಣೆ ಅಧಿಕಾರಿಗಳಾಗಿ ಮುಳಬಾಗಿಲು ತಾಲೂಕು CDO ಬಿ ಆರ್ ಶಿವಶಂಕರ್ ಕಾರ್ಯ ನಿರ್ವಹಿಸಿದರು. ಸಂಘದ CEO ಹರೀಶ್ ಇದ್ದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಬಂಕ್ ಮಂಜುನಾಥ್, ಪುಸ್ತಿ ನಾರಾಯಣಸ್ವಾಮಿ, ಅರಹಳ್ಳಿ ಸೊಸೈಟಿ ನಿರ್ದೇಶಕರು, ಮಾಜಿ ಅಧ್ಯಕ್ಷ ಭಗವಂತಪ್ಪ, ಕಣ್ಣೂರು ರಾಜಣ್ಣ, ಅರಹಳ್ಳಿ ಸೊಸೈಟಿ ಸಿಬ್ಬಂದಿಗಳು, ಇತರರು ಇದ್ದರು.
    4
    ಅರಹಳ್ಳಿ ಸೊಸೈಟಿಯ ನೂತನ ಅಧ್ಯಕ್ಷರಾಗಿ ಕೋಡಿ ಕಣ್ಣೂರು ಮಂಜುನಾಥ್ ಆಯ್ಕೆ 
ಕೋಲಾರ: ತಾಲೂಕಿನ ಅರಹಳ್ಳಿ ಸೊಸೈಟಿಯ ನೂತನ ಅಧ್ಯಕ್ಷರಾಗಿ ಕೋಡಿ ಕಣ್ಣೂರು ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ನೂರುಲ್ಲಾ ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿ, ಸೊಸೈಟಿಯಲ್ಲಿ ಪಾರದರ್ಶಕ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ಷೇರುದಾರರನ್ನು ಇನ್ನು ಹೆಚ್ಚು ಮಾಡಬೇಕು. ಜೊತೆಯಲ್ಲಿ ರೈತರ ಹಾಗೂ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ತೀವ್ರ ಹಣಾಹಣಿ ಸೃಷ್ಟಿಸಿದ್ದ ಅರಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷವು 12 ನಿರ್ದೇಶಕ ಸ್ಥಾನಗಳನ್ನು ಗೆಲ್ಲುವ ಮೂಲಕ ನಮ್ಮ ಶಕ್ತಿಯನ್ನು ತೋರಿಸಲಾಗಿದೆ. ಇದೇ ರೀತಿ ಒಗ್ಗಟ್ಟಿನಿಂದ ಸಂಘಟನೆ ಮಾಡುವ ಮೂಲಕ ಮುಂಬರುವ ಪ್ರತಿಯೊಂದು ಚುನಾವಣೆಯಲ್ಲೂ ಜಯಗಳಿಸಿ, ಜನರ ಸೇವೆ ಮಾಡಲು ಮುಂದಾಗಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನನ್ನ ಗೆಲುವಿಗೆ ಕಾರಣಕರ್ತರಾದ ಮಾಜಿ ಶಾಸಕ ಆರ್ ವರ್ತೂರ್ ಪ್ರಕಾಶ್, ಬೆಗ್ಲಿ ಸೂರ್ಯ ಪ್ರಕಾಶ್ ಸಿಎಂಆರ್ ಶ್ರೀನಾಥ್ ಮತ್ತು ಸೊಸೈಟಿ ನಿರ್ದೇಶಕರುಗಳಿಗೆ ಕೃತಜ್ಞತೆ ತಿಳಿಸಿದ ಅವರು,  ಈಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಾನು ಮುಂದಿನ ದಿನಗಳಲ್ಲಿ ರೈತರಿಗೆ, ಜನಸಾಮಾನ್ಯರ ಆರ್ಥಿಕ ಸಬಲೀಕರಣಗೊಳಿಸಲು ಸಹಕಾರ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು.
ಚುನಾವಣೆ ಅಧಿಕಾರಿಗಳಾಗಿ ಮುಳಬಾಗಿಲು ತಾಲೂಕು CDO ಬಿ ಆರ್ ಶಿವಶಂಕರ್ ಕಾರ್ಯ ನಿರ್ವಹಿಸಿದರು. ಸಂಘದ CEO ಹರೀಶ್ ಇದ್ದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಬಂಕ್ ಮಂಜುನಾಥ್, ಪುಸ್ತಿ ನಾರಾಯಣಸ್ವಾಮಿ, ಅರಹಳ್ಳಿ ಸೊಸೈಟಿ ನಿರ್ದೇಶಕರು, ಮಾಜಿ ಅಧ್ಯಕ್ಷ ಭಗವಂತಪ್ಪ, ಕಣ್ಣೂರು ರಾಜಣ್ಣ, ಅರಹಳ್ಳಿ ಸೊಸೈಟಿ ಸಿಬ್ಬಂದಿಗಳು, ಇತರರು ಇದ್ದರು.
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    10 hrs ago
  • ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ 15ಸಾವಿರ ಹೆಲ್ಮೆಟ್‌ಗಳ ವಿತರಣೆ-ಎನ್‌ಡಿಎ.ಮುಖಂಡ ಹರಿನಾಥರೆಡ್ಡಿ ಬಾಗೇಪಲ್ಲಿ:ಏಪ್ರಿಲ್ 14ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕಸಬಾ ಹೋಬಳಿ ನಾಲ್ಕು ಗ್ರಾಪಂ ವ್ಯಾಪ್ತಿಯ ದ್ವಿಚಕ್ರ ವಾಹನ ಸವಾರಿದಾರರಿಗೆ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ವತಿಯಿಂದ 15ಸಾವಿರ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಎನ್‌ಡಿಎ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಹರಿನಾಥರೆಡ್ಡಿ ತಿಳಿಸಿದರು. ಅವರು ಬುಧುವಾರ ಪಟ್ಟಣದ ಹೊರವಲಯದ ರಾಷ್ಟೀಯ ಹೆದ್ದಾರಿಯಲ್ಲಿ ತಮ್ಮ ಫಾರಂಹೌಸ್ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು ಗುಡಿಬಂಡೆ,ಚೇಳೂರು ಹಾಗೂ ಬಾಗೇಪಲ್ಲಿ ತಾಲೂಕುಗಳ 28 ಗ್ರಾಪಂಗಳ ವ್ಯಾಪ್ತಿಯ ದ್ವಿಚಕ್ರ ವಾಹನ ಸವಾರಿದಾರರಿಗೆ ಈಗಾಗಲೇ 42ಸಾವಿರ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಗಿದೆ.ಏಪ್ರಿಲ್ 14ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಲೋಕಸಭೆ ಸದಸ್ಯ ಡಾ.ಕೆ.ಸುದಾಕರ್ ಭಾಗವಹಿಸಲಿದ್ದು ಅಂದು ಕಸಬಾ ಹೋಬಳಿ ನಾಲ್ಕು ಗ್ರಾಪಂಗಳ ದ್ವಿಚಕ್ರ ವಾಹನ ಸವಾರಿದಾರರಿಗೆ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಗುವುದು ಪಟ್ಟಣದ ವ್ಯಾಪ್ತಿಯ ದೇವರಗುಡಿಪಲ್ಲಿ,ಪರಗೋಡು,ಘಂಟಂವಾರಿಪಲ್ಲಿ,ಯಲ್ಲಂಪ ಲ್ಲಿ ಗ್ರಾಪಂ ವ್ಯಾಪ್ತಿಯ ದ್ವಿಚಕ್ರ ವಾಹನಗಳ ಸವಾರಿದಾರರಿಗೆ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಗುವುದು ಈ ಕಾರ್ಯಕ್ರಮದಲ್ಲಿ ಸುಮಾರು 20ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಹೆಲ್ಮೆಟ್ ವಿತರಣೆ ಮಾಡುವ ಕಾರ್ಯಕ್ರಮ ನನ್ನ ಟ್ರಸ್ಟ್ವತಿಯಿಂದ ಸುಮಾರು 6ತಿಂಗಳ ಹಿಂದೆಯೇ ವಿತರಣೆ ಮಾಡುವ ಕಾರ್ಯಕ್ರಮ ಹಂತ ಹಂತವಾಗಿ ನಡೆಯುತ್ತಿದೆ.ಈ ಕಾರ್ಯಕ್ರಮವೂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು ಉದ್ದೇಶಿಸಲಾಗಿದ್ದು ಅಧಿಕಾರಿಗಳ ಅನುಮತಿ ಕೇಳಲಾಗಿದೆ ಒಂದು ವೇಳೆ ರಾಜಕೀಯ ಒತ್ತಡಗಳಿಗೆ ಮಣಿದು ಅಧಿಕಾರಿಗಳು ತಾಲೂಕು ಕ್ರೀಡಾಂಗಣದಲ್ಲಿ ಸಭೆ ನಡೆಸಲು ಅನುಮತಿ ನೀಡದೆ ಇದ್ದಲ್ಲಿ ಮತ್ತೊಂದು ಕಡೆ ಸಭೆ ಆಯೋಜನೆ ಮಾಡಲು ಸಿದ್ದತೆ ನಡೆಸಲಾಗಿದೆ.ಹೆಲ್ಮೆಟ್ ಕಡ್ಡಾಯವಾಗಿ ಧರಿಸಿಕೊಂಡು ದ್ವಿಚಕ್ರ ವಾಹನ ಸವಾರಿ ಮಾಡುವುದರಿಂದ ಅಪಘಾತಗಳು ನಡೆದರೆ ಸಾವಿನಿಂದ ತಪ್ಪಿಸಿಕೊಳ್ಳಬಹುದು ಹೆಲ್ಮೆಟ್ ಧರಿಸದೆ ಅನೇಕ ಸವಾರಿದಾರರು ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದರಿಂದ ಅನೇಕ ಸವಾರಿದಾರರು ಮೃತಪಟ್ಟು ತಮ್ಮ ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ.ಆದ್ದರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡಿ ಎಂದು ಕರೆ ನೀಡಿದರು. ಪೂರ್ವಬಾವಿ ಸಭೆಯಲ್ಲಿ ಎಪಿಎಂಎಂಸಿ ಮಾಜಿ ಅಧ್ಯಕ್ಷ ವಿ.ವೆಂಕಟಶಿವಾರೆಡ್ಡಿ,ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ,ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಕೆ.ಟಿ.ವಿರಾಂಜನೇಯ,ಪುರಸಭೆ ಮಾಜಿ ಸದಸ್ಯ ಆ.ನಾ.ಮೂರ್ತಿ,ಎನ್‌ಡಿಎ ಮುಖಂಡ ಎಸ್.ಆರ್.ಲಕ್ಷೀನಾರಾಯಣ,ತಾಪಂ ಮಾಜಿ ಸದಸ್ಯ ಗೋಪಾಲಕೃಷ್ಣ,ಮಾದಿಗ ದಂಡೋರ ಅಧ್ಯಕ್ಷ ಶಿವಪ್ಪ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಮತ್ತು ಮುಖಂಡರಾದ ಮಂಜುನಾಥ್,ಶ್ರೀನಿವಾಸ,ಬೈರೆಡ್ಡಿ,ಗೂಳೂರು ಲಕ್ಷೀನಾರಾಯಣ ಮತ್ತಿತರರು ಇದ್ದರು.
    1
    ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ 15ಸಾವಿರ 
ಹೆಲ್ಮೆಟ್‌ಗಳ ವಿತರಣೆ-ಎನ್‌ಡಿಎ.ಮುಖಂಡ ಹರಿನಾಥರೆಡ್ಡಿ
ಬಾಗೇಪಲ್ಲಿ:ಏಪ್ರಿಲ್ 14ರಂದು ನಡೆಯಲಿರುವ 
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕಸಬಾ 
ಹೋಬಳಿ ನಾಲ್ಕು ಗ್ರಾಪಂ ವ್ಯಾಪ್ತಿಯ ದ್ವಿಚಕ್ರ ವಾಹನ 
ಸವಾರಿದಾರರಿಗೆ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ವತಿಯಿಂದ 15ಸಾವಿರ 
ಹೆಲ್ಮೆಟ್‌ಗಳನ್ನು ವಿತರಣೆ ಮಾಡಲು ಉದ್ದೇಶಿಸಲಾಗಿದೆ 
ಎಂದು ಎನ್‌ಡಿಎ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ 
ಹರಿನಾಥರೆಡ್ಡಿ ತಿಳಿಸಿದರು.
ಅವರು ಬುಧುವಾರ ಪಟ್ಟಣದ ಹೊರವಲಯದ ರಾಷ್ಟೀಯ 
ಹೆದ್ದಾರಿಯಲ್ಲಿ ತಮ್ಮ ಫಾರಂಹೌಸ್ ಆವರಣದಲ್ಲಿ 
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ 
ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು 
ಗುಡಿಬಂಡೆ,ಚೇಳೂರು ಹಾಗೂ ಬಾಗೇಪಲ್ಲಿ ತಾಲೂಕುಗಳ 
28 ಗ್ರಾಪಂಗಳ ವ್ಯಾಪ್ತಿಯ ದ್ವಿಚಕ್ರ ವಾಹನ ಸವಾರಿದಾರರಿಗೆ 
ಈಗಾಗಲೇ 42ಸಾವಿರ ಹೆಲ್ಮೆಟ್‌ಗಳನ್ನು ವಿತರಣೆ 
ಮಾಡಲಾಗಿದೆ.ಏಪ್ರಿಲ್ 14ರಂದು ನಡೆಯಲಿರುವ 
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ 
ಲೋಕಸಭೆ ಸದಸ್ಯ ಡಾ.ಕೆ.ಸುದಾಕರ್ ಭಾಗವಹಿಸಲಿದ್ದು 
ಅಂದು ಕಸಬಾ ಹೋಬಳಿ ನಾಲ್ಕು ಗ್ರಾಪಂಗಳ ದ್ವಿಚಕ್ರ 
ವಾಹನ ಸವಾರಿದಾರರಿಗೆ ಹೆಲ್ಮೆಟ್‌ಗಳನ್ನು ವಿತರಣೆ 
ಮಾಡಲಾಗುವುದು ಪಟ್ಟಣದ ವ್ಯಾಪ್ತಿಯ 
ದೇವರಗುಡಿಪಲ್ಲಿ,ಪರಗೋಡು,ಘಂಟಂವಾರಿಪಲ್ಲಿ,ಯಲ್ಲಂಪ
ಲ್ಲಿ ಗ್ರಾಪಂ ವ್ಯಾಪ್ತಿಯ ದ್ವಿಚಕ್ರ ವಾಹನಗಳ ಸವಾರಿದಾರರಿಗೆ 
ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಗುವುದು ಈ 
ಕಾರ್ಯಕ್ರಮದಲ್ಲಿ ಸುಮಾರು 20ಸಾವಿರ ಜನರು 
ಭಾಗವಹಿಸುವ ನಿರೀಕ್ಷೆ ಇದ್ದು ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ 
ಮಾಡಲಾಗುವುದು ಹೆಲ್ಮೆಟ್ ವಿತರಣೆ ಮಾಡುವ
ಕಾರ್ಯಕ್ರಮ ನನ್ನ ಟ್ರಸ್ಟ್ವತಿಯಿಂದ ಸುಮಾರು 
6ತಿಂಗಳ ಹಿಂದೆಯೇ ವಿತರಣೆ ಮಾಡುವ ಕಾರ್ಯಕ್ರಮ 
ಹಂತ ಹಂತವಾಗಿ ನಡೆಯುತ್ತಿದೆ.ಈ ಕಾರ್ಯಕ್ರಮವೂ 
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು 
ಉದ್ದೇಶಿಸಲಾಗಿದ್ದು ಅಧಿಕಾರಿಗಳ ಅನುಮತಿ ಕೇಳಲಾಗಿದೆ 
ಒಂದು ವೇಳೆ ರಾಜಕೀಯ ಒತ್ತಡಗಳಿಗೆ ಮಣಿದು 
ಅಧಿಕಾರಿಗಳು ತಾಲೂಕು ಕ್ರೀಡಾಂಗಣದಲ್ಲಿ ಸಭೆ ನಡೆಸಲು 
ಅನುಮತಿ ನೀಡದೆ ಇದ್ದಲ್ಲಿ ಮತ್ತೊಂದು ಕಡೆ ಸಭೆ 
ಆಯೋಜನೆ ಮಾಡಲು ಸಿದ್ದತೆ ನಡೆಸಲಾಗಿದೆ.ಹೆಲ್ಮೆಟ್ 
ಕಡ್ಡಾಯವಾಗಿ ಧರಿಸಿಕೊಂಡು ದ್ವಿಚಕ್ರ ವಾಹನ ಸವಾರಿ 
ಮಾಡುವುದರಿಂದ ಅಪಘಾತಗಳು ನಡೆದರೆ ಸಾವಿನಿಂದ 
ತಪ್ಪಿಸಿಕೊಳ್ಳಬಹುದು ಹೆಲ್ಮೆಟ್ ಧರಿಸದೆ ಅನೇಕ 
ಸವಾರಿದಾರರು ದ್ವಿಚಕ್ರ ವಾಹನವನ್ನು ಚಾಲನೆ 
ಮಾಡುವುದರಿಂದ ಅನೇಕ ಸವಾರಿದಾರರು ಮೃತಪಟ್ಟು 
ತಮ್ಮ ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ.ಆದ್ದರಿಂದ 
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡಿ 
ಎಂದು ಕರೆ ನೀಡಿದರು.
ಪೂರ್ವಬಾವಿ ಸಭೆಯಲ್ಲಿ ಎಪಿಎಂಎಂಸಿ ಮಾಜಿ ಅಧ್ಯಕ್ಷ 
ವಿ.ವೆಂಕಟಶಿವಾರೆಡ್ಡಿ,ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ 
ಸಂಘದ ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ,ನ್ಯಾಷನಲ್ 
ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ 
ಕೆ.ಟಿ.ವಿರಾಂಜನೇಯ,ಪುರಸಭೆ ಮಾಜಿ ಸದಸ್ಯ 
ಆ.ನಾ.ಮೂರ್ತಿ,ಎನ್‌ಡಿಎ ಮುಖಂಡ 
ಎಸ್.ಆರ್.ಲಕ್ಷೀನಾರಾಯಣ,ತಾಪಂ ಮಾಜಿ ಸದಸ್ಯ 
ಗೋಪಾಲಕೃಷ್ಣ,ಮಾದಿಗ ದಂಡೋರ ಅಧ್ಯಕ್ಷ 
ಶಿವಪ್ಪ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ 
ಮತ್ತು ಮುಖಂಡರಾದ 
ಮಂಜುನಾಥ್,ಶ್ರೀನಿವಾಸ,ಬೈರೆಡ್ಡಿ,ಗೂಳೂರು 
ಲಕ್ಷೀನಾರಾಯಣ ಮತ್ತಿತರರು ಇದ್ದರು.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.