ಮೇಟಗಳ್ಳಿ ಪೊಲೀಸ್ ಪೇದೆ ರಾಜು ಹಾಗೂ ಪತ್ನಿ ಮೇಲೆ FIR...35 ಲಕ್ಷ ವಂಚನೆ ಆರೋಪ...ಈ ಹಿಂದೆ ಸಸ್ಪೆಂಡ್ ಆಗಿದ್ದ ರಾಜು... ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ಆಮಿಷ ನೀಡಿ 35 ಲಕ್ಷ ವಂಚಿಸಿದ ಆರೋಪದ ಮೇಲೆ ಮೇಟಗಳ್ಳಿ ಪೊಲೀಸ್ ಠಾಣೆ ಪೇದೆ ಪಿ.ಜೆ.ರಾಜು ಹಾಗೂ ಇವರ ಪತ್ನಿ ನಂದಿನಿ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚನೆಗೆ ಒಳಗಾದ ಮಹಾಲಕ್ಷ್ಮಿ,ಮಂಜುಳಾ ಹಾಗೂ ಸಿದ್ದೇಶ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.2022 ರಲ್ಲಿ ಪೇದೆ ರಾಜು ರವರು ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮಹಾಲಕ್ಷ್ಮಿ,ಮಂಜುಳಾ ಹಾಗೂ ಸಿದ್ದೇಶ್ ರವರ ಬಳಿ ಹಂತಹಂತವಾಗಿ 35 ಲಕ್ಷ ಹಣ ಪಡೆದಿದ್ದಾರೆ.ತಾನು ಪೇಪರ್ ಗ್ಲಾಸ್ ಜ್ಯೂಸ್ ಲೋಟ ಫ್ಯಾಕ್ಟರಿ ಇಟ್ಟಿದ್ದೇನೆ ನಿಮ್ಮನ್ನ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆಂದು ಆಮಿಷವೊಡ್ಡ 35 ಲಕ್ಷ ಪಡೆದು ವಂಚಿಸಿದ್ದಾರೆ.ಹಣ ಹಿಂದಿರುಗಿಸುವಂತೆ ಸುಣ್ಣದಕೇರಿ ಮನೆಗೆ ಹೋದಾಗ ಹಣ ಹಿಂದಿರುಗಿಸದೆ ನಾನು ಪೊಲೀಸ್ ಇಲಾಖೆಯಲ್ಲಿದ್ದೇನೆ ಎಂದು ಬೆದರಿಸಿದ್ದಾರೆ.ಅಲ್ಲದೆ ಪತ್ನಿ ನಂದಿನಿ ರವರು ಮಹಾಲಕ್ಷ್ಮಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ.ಈ ಹಿಂದೆ ರಾಜು ಕಳ್ಳತನ ಆರೋಪಿಗಳ ಜೊತೆ ಶಾಮೀಲಾಗಿದ್ದಾರೆಂಬ ಆರೋಪದ ಮೇಲೆ ಸಸ್ಪೆಂಡ್ ಆಗಿದ್ದರು.ನಂತರ ಮೇಟಗಳ್ಳಿ ಠಾಣೆಗೆ ನಿಯೋಜನೆಗೊಂಡಿದ್ದರು.ಇದೀಗ ಮತ್ತೆ ವಂಚನೆ ಪ್ರಕರಣವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.ಇಂತಹ ಸಿಬ್ಬಂದಿಗಳು ಪೊಲೀಸ್ ಇಲಾಖೆಗೆ ಅನಿವಾರ್ಯವೇ...?

- *ಭಾರತ ನಲ್ಲಿ ವೈರಲ್*1
- STOP CONSUMING DRUGS AND SAVE OUR YOUNG GENERATION ITS NECESSARY1
- ಹನೂರು ಶಾಸಕರಾದ ಎಂ ಎಂ. ಆರ್. ಮಂಜುನಾಥ್ ಅವರು ಜಿಲ್ಲಾಧಿಕಾರಿ ಶಿಲ್ಪನಾಗ್ ಜೊತೆಗೂಡಿ ಕೊಳ್ಳೇಗಾಲ ತಾಲೂಕಿನ ನರೀಪುರ -ಸತ್ತೇಗಾಲ ಗ್ರಾಮಗಳ ಮಾರ್ಗ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 948 ರ ರಸ್ತೆ ಕಾಮಗಾರಿ ಹಾಗೂ ಮದ್ಯರಂಗನಾಥ ದೇವಾಲಯ ಜೀರ್ಣೋದ್ದಾರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು, ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಜರುಗುತ್ತಿದೆ, ರಸ್ತೆ ಕಾಮಗಾರಿ ವೈಜ್ಞಾನಿಕವಾಗಿ ನಡೆದಿಲ್ಲ ರಸ್ತೆ ಕಾಮಗಾರಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕಾಮಗಾರಿ ನಡೆಸಿಲ್ಲ ನಾಲ್ಕು ರಸ್ತೆ ಕೂಡುವ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ರಸ್ತೆ ನರೀಪುರ ಮಹದೇಶ್ವರ ಬೆಟ್ಟ ಬೈಪಾಸ್ ಗಳಲ್ಲಿ ಸರ್ಕಲ್ ಹಾಗೂ ಸರ್ವಿಸ್ ರಸ್ತೆಗಳಿಗೆ ಅಂಡರ್ ಪಾಸ್ ಗಳನ್ನು ನಿರ್ಮಿಸಿದೆ ಕಾಮಗಾರಿಗಳನ್ನು ಮುಗಿಸಲಾಗಿದೆ ರಸ್ತೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ ಆದ್ದರಿಂದ ಟೆಂಡರ್ ಪಡೆದ ಕನ್ಸ್ಟ್ರಕ್ಷನ್ ನವರು ಇಂಜಿನಿಯರ್ ಗಳು ಜವಾಬ್ದಾರಿವಹಿಸಿ ಸುರಕ್ಷಿತ ಅಂಡರ್ ಪಾಸ್ ಗಳು ಹಾಗೂ ಸರ್ಕಲ್ ಗಳನ್ನು ನಿರ್ಮಿಸಬೇಕು ಮೂರು ರಸ್ತೆಗಳು ಕೂಡುವ ಕಡೆ ಸರ್ಕಲ್ ಗಳನ್ನು ನಿರ್ಮಿಸಿಲ್ಲ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳಲ್ಲಿ ಡಿವೈಡರ್ ಗಳನ್ನು ನಿರ್ಮಿಸದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗಿದೆ, ಆದ್ದರಿಂದ ಅಪಘಾತ ಸಂಭವಿಸುತ್ತಿವೆ ಆದ್ದರಿಂದ ಇದನ್ನು ತಡೆಗಟ್ಟಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು. ಇದೆ ವೇಳೆ ಸತ್ತೇಗಾಲ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತ ಮುಖಂಡರುಗಳ ಮನವಿಯಂತೆ ಹೆದ್ದಾರಿಗಳಲ್ಲಿ ವಿದ್ಯುತ್ ಲೈಟ್ ಗಳು, ಅಪಘಾತಗಳು ಜರುಗುವ ಸ್ಥಳಗಳಲ್ಲಿ ರೋಡ್ ಹಮ್ಸ್ ನಿರ್ಮಿಸಿ ಕೊಡಲಾಗುವುದು ಮತ್ತು ಈ ಮಾರ್ಗವಾಗಿ ಸ್ಥಳೀಯರ ರಸ್ತೆ ಸಂಚಾರಕ್ಕೆ ಅವಕಾಶವಾಗಲೆಂದು ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ ಸತ್ತೇಗಾಲ ಬೈಪಾಸ್ ಸೇತುವೆಯಿಂದ ಅಂಡರ್ ಪಾಸ್ ರಸ್ತೆ ನಿರ್ಮಿಸಿ ಉಗನಿಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಂಡರ್ ಪಾಸ್ ಸೇತುವೆ ನಿರ್ಮಾಣ ಮಾಡಲಾಗುವುದು. ಮತ್ತು ಹೆದ್ದಾರಿ ಉದ್ದಕ್ಕೂ, ವಿದ್ಯುತ್ ಬಲ್ಪ್ ಗಳನ್ನು ಅಳವಡಿಸಲು ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ಮತ್ತು ಜಿಲ್ಲಾಧಿಕಾರಿ ಶಿಲ್ಪಾನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಲೀಪ್ ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್.ಹೆಚ್ ಚಾರುಲತಾ ಜೈನ್, ವಿಶ್ವ ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಸತ್ತೇಗಾಲದ ಗ್ರಾಮಸ್ಥರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.2
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- ಕೊಳ್ಳೇಗಾಲ ಸುದ್ದಿ ವಾಸವಿ ವಾರ್ಷಿಕೋತ್ಸವ ಕುರಿತು ಕುಮಾರ ಕೃಷ್ಣ ಪತ್ರಿಕಾಗೋಷ್ಠಿ ಕುಮಾರ ಕೃಷ್ಣ ನೇತೃತ್ವದಲ್ಲಿ ವಾಸವಿ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಕುಮಾರ ಕೃಷ್ಣ ಮಾತನಾಡಿ ಅಕಾಡೆಮಿಕ್ ಸಂಸ್ಕೃತಿ ಎಂಬ ಹೆಸರಿನಲ್ಲಿ ವಾರ್ಷಿಕೋತ್ಸವವನ್ನು ನಡೆಸಲಾಗುತ್ತಿದೆ ಕಾರಣ ವಿದ್ಯಾರ್ಥಿಗಳಿಗೆ ಮತ್ತು ಪೋಷಕರುಗಳುಗೆ ಶಿಕ್ಷಣ ಸಂಸ್ಕೃತಿ ಅಕಾಡೆಮಿಕ್ ಬಗ್ಗೆ ತಿಳಿಸಿ ಕೊಡಬೇಕು ಎಂಬ ಕಾರಣದಿನ ಸಂಸ್ಕೃತಿ ಎಂಬ ಹೆಸರಿನಲ್ಲಿ ಕಾಲೇಜು ವಾರ್ಷಿಕೋತ್ಸವವನ್ನು ನಡೆಸಲಾಗುವುದು ದಿನಾಂಕ, 6 ಮತ್ತು 7 ನೇ ತಾರೀಕು ಕಾಲೇಜು ವಾರ್ಷಿಕೋತ್ಸವವನ್ನು ನಡೆಸಲಾಗುವುದು ಮೊದಲ ದಿನದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ. ಆರ್. ಕೃಷ್ಣಮೂರ್ತಿಯವರು ಆಗಮಿಸಲಿದ್ದಾರೆ, ಎರಡನೇ ದಿನ ಮೈಸೂರು ಶ್ರೀ ರಾಮಕೃಷ್ಣ ವಿದ್ಯಾಶಾಲಾ ನಿವೃತ್ತ ಪ್ರಾಂಶುಪಾಲರಾದ ಎಸ್. ಬಾಲಾಜಿಯವರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಕಾರ್ಯಕ್ರಮದ ಮುಖಾಂತರ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಗೆ ತರುವ ಕೆಲಸವನ್ನು ಮಾಡಲಾಗುವುದು, ಎಂದರು ಇದೆ ವೇಳೆ ಕೊಳ್ಳೇಗಾಲ ತಾಲ್ಲೂಕು ನಾಲ್ವರು ಪತ್ರಕರ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳಾಗಿ ಆಯ್ಕೆಯಾಗಿರುವುದು ನಮ್ಮ ತಾಲ್ಲೂಕಿಗೆ ಹೆಮ್ಮೆ ಜಿಲ್ಲಾ ಸಂಘಕ್ಕೆ ಆಯ್ಕೆಯಾಗಿರುವ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದರು ಪತ್ರಿಕಾಗೋಷ್ಠಿಯಲ್ಲಿ ವಾಸವಿ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ವಾಸವಾಂಬ, ಶಾಲೆ ಮುಖ್ಯಶಿಕ್ಷಕರಾದ ಶ್ರೀಮತಿ ಗೀತಾ ದೈಹಿಕ ಶಿಕ್ಷಕರಾದ ನಾಗೇಂದ್ರ ಹಾಗೂ ಇತರರು ಇದ್ದರು1