ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೊನೆಯ ಸಭೆ ನಡೆಸಿದ ಲಕ್ಷ್ಮೀ ಮಹಾದೇವ ರಾಠೋಡ. ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸಭೆ ಶುಕ್ರವಾರ ನಡೆಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಮಹಾದೇವ ರಾಠೋಡ ಅವರ ಒಂದು ವರ್ಷದ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷೆಯಾಗಿ ಇದು ಕೊನೆಯ ಸಭೆಯಾಗಿತ್ತು. ಸಭೆಯಲ್ಲಿ ಮಾತನಾಡಿದ ಲಕ್ಷ್ಮೀ ಮಹಾದೇವ ರಾಠೋಡ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ತ್ರಿಚಕ್ರ ವಾಹನಗಳ ವಿತರಣೆ, ನೇರ ಸಾಲ ಸಹಾಯ ಯೋಜನೆ, ಉದ್ಯಾನವನಗಳ ಸ್ವಚ್ಛತಾ ಕಾರ್ಯ ಸೇರಿದಂತೆ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಈ ಎಲ್ಲ ಕಾರ್ಯಗಳ ಯಶಸ್ಸಿಗೆ ಮಾಜಿ ಶಾಸಕ ಅನಿಲ್ ಬೆನಕೆ, ಶಾಸಕ ಅಭಯ್ ಪಾಟೀಲ, ಮಹಾಪೌರ-ಉಪ ಮಹಾಪೌರ, ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ನೀಡಿದ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಪೌರ ಕಾರ್ಮಿಕರ ಕಲ್ಯಾಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬೆಳಗಿನ ಉಪಹಾರದ ವ್ಯವಸ್ಥೆ, ವೇತನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು, ಮಳೆಗಾಲದಲ್ಲಿ ಸಮವಸ್ತ್ರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮುಂದಿನ ಅವಧಿಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ದೊರೆತರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಲಕ್ಷ್ಮೀ ಮಹಾದೇವ ರಾಠೋಡ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕ್ಕರ್, ಉಪಮೇಯರ್ ಹಣಮಂತ ಕೊಂಗಾಲಿ ಹಾಗೂ ಸದಸ್ಯರಾದ ನೀತಿನ್ ಜಾಧವ್, ರೂಪಾ ಚಿಕ್ಕಲದಿನ್ನಿ, ಅಭಿಜೀತ್ ಜವಳಕರ, ರೇಖಾ ಹುಗಾರ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

- ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ. ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ.1
- ಬ್ರೇಕಿಂಗ್ ನ್ಯೂಸ್: ಬಸ್ ಚಾಲಕನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಕಪ್ಪು ಹಣ ಹಾಗೂ ಚಿನ್ನ ಪತ್ತೆ! 35 ಚೀಲಗಳಲ್ಲಿ ತುಂಬಿಟ್ಟಿದ್ದ 20 ಕೋಟಿ ರೂಪಾಯಿ ನಗದು ಮತ್ತು 15 ಕೆಜಿ ಬಂಗಾರ ವಶ. ನಗದು ಎಣಿಕೆಗೆ 5 ನೋಟು ಎಣಿಕೆ ಯಂತ್ರಗಳು ಹಾಗೂ 5 ದೊಡ್ಡ ಕಬ್ಬಿಣದ ಪೆಟ್ಟಿಗೆಗಳ ಬಳಕೆ. ಬ್ರೇಕಿಂಗ್ ನ್ಯೂಸ್: ಬಸ್ ಚಾಲಕನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಕಪ್ಪು ಹಣ ಹಾಗೂ ಚಿನ್ನ ಪತ್ತೆ! 35 ಚೀಲಗಳಲ್ಲಿ ತುಂಬಿಟ್ಟಿದ್ದ 20 ಕೋಟಿ ರೂಪಾಯಿ ನಗದು ಮತ್ತು 15 ಕೆಜಿ ಬಂಗಾರ ವಶ. ನಗದು ಎಣಿಕೆಗೆ 5 ನೋಟು ಎಣಿಕೆ ಯಂತ್ರಗಳು ಹಾಗೂ 5 ದೊಡ್ಡ ಕಬ್ಬಿಣದ ಪೆಟ್ಟಿಗೆಗಳ ಬಳಕೆ. ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿ ಬೆಳಕಿಗೆ ಬಂದ ಅಕ್ರಮ ಕಲ್ಲು ಗಣಿಗಾರಿಕೆ ದಂಧೆ. ದೇಶದಲ್ಲಿ ಭ್ರಷ್ಟಾಚಾರದ ಕಥೆಗಳು ಬಯಲಾದಾಗಲೆಲ್ಲಾ ಜನರಿಗೆ ಅಚ್ಚರಿಯಾಗುತ್ತದೆ. ಆದರೆ, ಪಶ್ಚಿಮ ಬಂಗಾಳದಿಂದ ವರದಿಯಾಗಿರುವ ಈ ಘಟನೆ ನಿಜಕ್ಕೂ ಎಲ್ಲರನ್ನೂ ದಂಗುಬಡಿಸಿದೆ. ಕೇವಲ ಒಬ್ಬ ಮಾಜಿ ಸರ್ಕಾರಿ ಬಸ್ ಚಾಲಕನ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಮತ್ತು ಕೆಜಿಗಟ್ಟಲೆ ಚಿನ್ನ ಸಿಕ್ಕಿದ್ದು, ಇದರ ಹಿಂದೆ ದೊಡ್ಡ ಕಪ್ಪು ದಂಧೆಯೇ ಇದೆ. ವರದಿ ಇಲ್ಲಿದೆ ನೋಡಿ. ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯಲ್ಲಿ ಭ್ರಷ್ಟಾಚಾರದ ಮಗ್ಗಿಯೊಂದು ಬೆಚ್ಚಿಬೀಳಿಸುವ ರೀತಿಯಲ್ಲಿ ಹೊರಬಂದಿದೆ. ಕಲ್ಲು ವ್ಯಾಪಾರಿ ಟುಲು ಮಂಡಲ್ ಅವರ ಭಾವ ಹಾಗೂ ಮಾಜಿ ಸರ್ಕಾರಿ ಬಸ್ ಚಾಲಕನಾಗಿರುವ ಮೀನಾರ್ ಮಂಡಲ್ ಎಂಬುವವರ ಮನೆಯ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ರಹಸ್ಯ ಮಾಹ1
- ಮತ್ತಿಘಟ್ಟ ಜಲಪಾತ (Mattighatta Falls / Hasehalla Falls) ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಸಮೀಪದ ಕಡಿಮೆ ಜನರಿಗೆ ಪರಿಚಿತವಾದ ಸುಂದರ ಜಲಪಾತವಾಗಿದೆ. 📍 ಸ್ಥಳ: ಮತ್ತಿಘಟ್ಟ/ಹೆಗ್ಗರಣೆ ಗ್ರಾಮದ ಸಮೀಪ, ಸಿರ್ಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ. 📏 ಎತ್ತರ: ಸುಮಾರು 116 ಮೀಟರ್ (381 ಅಡಿ) 🏞️ ನದಿ: ಅಘನಾಶಿನಿ ನದಿ 🌧️ ಭೇಟಿಗೆ ಉತ್ತಮ ಸಮಯ: ಜುಲೈ–ನವೆಂಬರ್ 🚗 ಸಿರ್ಸಿಯಿಂದ ದೂರ: ಸುಮಾರು 35 ಕಿಮೀ ಈ ಪ್ರದೇಶವು ದಟ್ಟ ಅರಣ್ಯ, ಬೆಟ್ಟಗಳು ಮತ್ತು ಪ್ರಕೃತಿ ಸೌಂದರ್ಯದಿಂದ ಪ್ರಸಿದ್ಧವಾಗಿದೆ. 📍 ಮತ್ತಿಘಟ್ಟ ಜಲಪಾತ (Mattighatta Falls):ಅಲ್ಲಿಂದ ಸ್ಥಳೀಯ ರಸ್ತೆಯ ಮೂಲಕ ಜಲಪಾತದ ಪ್ರವೇಶ ಕೊನೆಯ ಭಾಗದಲ್ಲಿ ಸುಮಾರು 500 ಮೀ.–1 ಕಿ.ಮೀ. ನಡೆದು ಜಲಪಾತವನ್ನು ತಲುಪಬಹುದು. ಗಮನಿಸಿ: ಮಳೆಗಾಲದಲ್ಲಿ ರಸ್ತೆ ಜಾರುವ ಸಾಧ್ಯತೆ ಇರುವುದರಿಂದ ಸ್ಥಳೀಯರ ಮಾರ್ಗದರ್ಶನ ಪಡೆದು ಹೋಗುವುದು ಉತ್ತಮ.1
- ರೈತ ಆತ್ಮಹತ್ಯೆ, ಉಪತಹಶೀಲ್ದಾರ ಕಛೇರಿ ಎದುರು ಪರಿಹಾರಕ್ಕಾಗಿ ರೈತರ ಪ್ರತಿಭಟನೆ. ರೈತನ ಕುಟುಂಬಕ್ಕೆ ಪರಿಹಾರಕ್ಕಾಗಿ ರೈತರ ಪ್ರತಿಭಟನೆ ಶಿಗ್ಗಾವಿ : ತಾಲೂಕಿನ ಹೋತನಹಳ್ಳಿ ಗ್ರಾಮದ ರೈತ ಮಲ್ಲೇಶಪ್ಪ ತಳವಾರ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿ 10 ತಿಂಗಳು ಕಳೆದರು ಸರ್ಕಾರದಿಂದ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ. ತಕ್ಷಣ ಮೇಲಾಧಿಕಾರಿಗಳು ಪರಿಶೀಲಿಸಿ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಂಕಾಪುರ ಉಪತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕುಟುಂಬಕ್ಕೆ ಆಸರೆಯಾದ ರೈತ ಸಾಲಕ್ಕೆ ಸಿಲುಕಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ, ಮಕ್ಕಳು ಬದುಕು ಸಾಗಿಸುವುದು ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಈ ವರೆಗೆ ಯಾವುದೇ ವರದಿ ಕಳುಹಿಸಿಲ್ಲ. ಅಧಿಕಾರಿಗಳ ನಿರ್ಲಕ್ಷತೆಯಿಂದ ಬಡ ಕುಟುಂಬಕ್ಕೆ ಪರಿಹಾರ ಮಂಜುರಾತಿ ವಿಳಂಬವಾಗಿದೆ. ಹೀಗಾಗಿ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಉಪತಹಶೀಲ್ದಾರ್ ಕಚೇರಿ ಬೀಗ ಹಾಕಿದ ಹಿನ್ನೆಲೆಯಲ್ಲಿ ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ ಹಾಗೂ ಸಿಬ್ಬಂದಿ ಹೂರಗೆ ಉಳಿಯಬೇಕಾಯಿತು. ಸುತ್ತಲಿನ ಗ್ರಾಮಗಳ ಸಾರ್ವಜನಿಕರು ತಮ್ಮ ದಾಖಲಾತಿ ಪಡೆಯಲು ಬಂದು ಮರಳಿ ಹೋಗಬೇಕಾಯಿತು. ಕೆಲವರು ಕಾದು ಬೇಸರಗೊಂಡರು. ಎಸ್.ಐ.ಆರ್ ಮಾಡುವ ನೌಕರರು ಸಹ ಕಾಯ್ದು ಕುಳಿತು ಮರಳಿ ಹೋದರು. ಹೀಗಾಗಿ ಕೆಲಸ ಕಾರ್ಯಗಳಿಗೆ ಅಡೆತಡೆಯಾಯಿತು. ಆದರೂ ರೈತರು ಮೇಲಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಕೃಷಿ ಅಧಿಕಾರಿ ಶಿವಕುಮಾರ ಶಿಡೇನೂರ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಸ್ಪಂದಿಸಿ ತಕ್ಷಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇನೆ. ರೈತನ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಲಾಗುತ್ತದೆ ಎಂದಾಗಿ ಪ್ರತಿಭಟನೆ ಹಿಂದರು. ರೈತ ಮುಖಂಡರಾದ ಶಶಿಧರ ಹೊಣ್ಣನ್ನವರ , ಶಿವಾನಂದ ತೊಂಡೂರ, ಉಮೇಶ ಗುಳೇದ, ಚಂದ್ರಣ್ಣ ಬೆಳವತ್ತಿ, ಶಂಕ್ರಣ್ಣ ಗಂಗಣ್ಣವರ, ಬಾಪುಗೌಡ ಪಾಟೀಲ, ದೇವಣ್ಣ ಹಳವಳ್ಳಿ, ಶಂಭಣ್ಣ ಕುರಗೋಡಿ, ಬಸವರಾಜ ನಾರಾಯಣಪುರ, ಚಂದ್ರಣ್ಣ ತಳವಾರ, ಮೃತ ರೈತನ ಪತ್ನಿ ಕವಿತಾ ಅವರ ಕುಟುಂಬದ ಸದಸ್ಯರು, ವಿವಿಧ ಗ್ರಾಮಗಳ ರೈತರು ಇದ್ದರು.1
- ಈಗಾಗಲೇ ನೀರಿಗೆ ಹಾಹಾಕಾರ ಶುರುವಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಾವೇರಿ ವಿವಾದದಲ್ಲಿ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ನಾಡಿನ ಹಿತ ಕಾಯುವುದು ಸಿಎಂ ಡಿ. ಕೆ. ಶಿವಕುಮಾರ್ ಅವರ ಆದ್ಯ ಕರ್ತವ್ಯವಾಗಬೇಕು. ಶ್ರೀ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು #CongressFailsKarnataka #ರೈತವಿರೋಧಿಕಾಂಗ್ರೆಸ್1
- ಮುಧೋಳ: ಎದುರಿಗೆ ಬರುತ್ತಿದ್ದ ಕಾರ್ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಪಕ್ಕಕ್ಕೆ ವಾಲಿದ ಪರಿಣಾಮ ಮೂವರು ಗಾಯ ಮುಧೋಳ: ಎದುರಿಗೆ ಬರುತ್ತಿದ್ದ ಕಾರ್ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಪಕ್ಕಕ್ಕೆ ವಾಲಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಮುಗಳಖೋಡ ಸಮೀಪ ಮುಧೋಳದಿಂದ ಮುಗಳಖೋಡಕ್ಕೆ ಬಸ್ ತೆರಳುವಾಗ ಈ ಘಟನೆ ನಡೆದಿದೆ. ಬಸ್‌ನಲ್ಲಿ ಅಂದಾಜು 40 ಜನ ಪ್ರಯಾಣಿಕರಿದ್ದರು. ಘಟನೆಯಲ್ಲಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಮಹಾಲಿಂಗಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿಪಿಐ ಎಂ.ನಾಗರಡ್ಡಿ ಭೇಟಿ ನೀಡಿ ನೀಡಿದರು.1