logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕ್ಯಾಂಪ್‌ನ 'ಕ್ಯಾಪ್ಟನ್‌' ಅಭಿಮನ್ಯು ಆನೆಗೆ ದಸರಾ ಗಜಪಯಣದಲ್ಲಿ ಬುಧವಾರ ಗೌರವಯುತ ಬೀಳ್ಕೊಡುಗೆ ಮೈಸೂರು: 60 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ದಸರಾ ಅಂಬಾರಿ ಹೊರುವುದರಿಂದ ನಿವೃತ್ತಿಗೊಳಿಸಲಾದ ಮತ್ತಿಗೋಡು ಕ್ಯಾಂಪ್‌ನ 'ಕ್ಯಾಪ್ಟನ್‌' ಅಭಿಮನ್ಯು ಆನೆಗೆ ದಸರಾ ಗಜಪಯಣದಲ್ಲಿ ಬುಧವಾರ ಗೌರವಯುತ ಬೀಳ್ಕೊಡುಗೆ ನೀಡಲಾಯಿತು.ಕಳೆದ 26 ವರ್ಷಗಳಿಂದ ದಸರಾದಲ್ಲಿ ಕ್ಯಾಪ್ಟನ್‌ ಅಭಿಮನ್ಯು ಆನೆ ಭಾಗಿಯಾಗಿತ್ತು. ಈ ಬಾರಿ ನಿವೃತ್ತಿಯಾಗಿದೆ. ಹೀಗಾಗಿ ಅಭಿಮನ್ಯುವಿಗೆ ಪೂಜೆ ಸಲ್ಲಿಸಿ ಭಾವುಕ ಬೀಳ್ಕೊಡುಗೆ ನೀಡಲಾಯಿತು. ಅಭಿಮನ್ಯುವನ್ನು ಸಿಂಗರಿಸಿ ಕರೆ ತಂದು ಅರಣ್ಯ ಇಲಾಖೆ ಸಿಬ್ಬಂದಿಯು ಹೂವಿನ ಮಳೆಗರೆದರು. ಈ ವೇಳೆ ನೆರೆದಿದ್ದವರ ಕಣ್ಣಲಿಗಳು ತುಂಬಿ ಬಂದವು. ಅಭಿಮನ್ಯು ಮಾವುತ ವಸಂತ್‌ ಆನೆ ಮೇಲಿಂದಲೇ ಭಾವುಕರಾದರು. ಬಳಿಕ ಮಾವುತ ಮತ್ತು ಕಾವಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದ ಬಳಿಕ ಅಭಿಮನ್ಯು ಲಾರಿಯಲ್ಲಿ ಕ್ಯಾಂಪ್‌ಗೆ ಮರಳಿತು. ನಿಶಾನೆ ಆನೆಯಾಗಿ ಅಭಿಮನ್ಯುವನ್ನು ಕರೆತರುವ ಬಗ್ಗೆ ಇನ್ನೂ ಅಂತಿಮ ಆಗಿಲ್ಲ. ಸಾಧ್ಯತೆಗಳನ್ನು ನೋಡಿಕೊಂಡು ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಸುಗ್ರೀವ ಬದಲು ಶ್ರೀಕಂಠ: ನಾಳೆಯಿಂದಲೇ ತಾಲೀಮು ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿಯಲ್ಲಿ ಬಳಿ ಬುಧವಾರ ಸಂಭ್ರಮದ ಚಾಲನೆ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಗಣ್ಯರು ಅಲಂಕೃತಗೊಂಡು ನಿಂತಿದ್ದ ಗಜಪಡೆಗೆ ದೀಪ ಬೆಳಗಿ, ಪುಷ್ಪಾರ್ಚನೆ ನೆರವೇರಿಸಿ ಗಜಪಯಣಕ್ಕೆ ಚಾಲನೆ ನೀಡಿದರು. ಮೊದಲ ತಂಡದಲ್ಲಿ 7 ಗಂಡು ಹಾಗೂ 2 ಹೆಣ್ಣಾನೆಗಳಿವೆ. ಸುಗ್ರೀವ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿರುವುದರಿಂದ 2ನೇ ತಂಡದಲ್ಲಿದ್ದ ಶ್ರೀಕಂಠನನ್ನು ಮೊದಲ ತಂಡದಲ್ಲಿ ಕರೆತರಲಾಯಿತು. ಸಂಜೆ ವೇಳೆಗೆ ಆನೆಗಳು ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಆಗಮಿಸಿ ವಾಸ್ತವ್ಯ ಹೂಡಿತು. ಆ.28ರಂದು ಬೆಳಗ್ಗೆ ಆನೆಗಳ ತಂಡ ಅರಮನೆ ಆವರಣ ಪ್ರವೇಶಿಸಲಿವೆ. ಅಂದೇ ಆನೆಗಳ ಭಾರ ತೂಕ ಮಾಡಲಾಗುತ್ತದೆ ಮತ್ತು ತಾಲೀಮು ಆರಂಭವಾಗಲಿದೆ ಎಂದು ಡಿಸಿಎಫ್‌ ಪ್ರಭುಗೌಡ ಪ್ರಕಟಿಸಿದರು.

5 hrs ago
user_Ravikumar
Ravikumar
Local News Reporter ಹುಣಸೂರು, ಮೈಸೂರು, ಕರ್ನಾಟಕ•
5 hrs ago
ecf7afce-66bd-4876-83b1-e2129d001d03

ಕ್ಯಾಂಪ್‌ನ 'ಕ್ಯಾಪ್ಟನ್‌' ಅಭಿಮನ್ಯು ಆನೆಗೆ ದಸರಾ ಗಜಪಯಣದಲ್ಲಿ ಬುಧವಾರ ಗೌರವಯುತ ಬೀಳ್ಕೊಡುಗೆ ಮೈಸೂರು: 60 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ದಸರಾ ಅಂಬಾರಿ ಹೊರುವುದರಿಂದ ನಿವೃತ್ತಿಗೊಳಿಸಲಾದ ಮತ್ತಿಗೋಡು ಕ್ಯಾಂಪ್‌ನ 'ಕ್ಯಾಪ್ಟನ್‌' ಅಭಿಮನ್ಯು ಆನೆಗೆ ದಸರಾ ಗಜಪಯಣದಲ್ಲಿ ಬುಧವಾರ ಗೌರವಯುತ ಬೀಳ್ಕೊಡುಗೆ ನೀಡಲಾಯಿತು.ಕಳೆದ 26 ವರ್ಷಗಳಿಂದ ದಸರಾದಲ್ಲಿ ಕ್ಯಾಪ್ಟನ್‌ ಅಭಿಮನ್ಯು ಆನೆ ಭಾಗಿಯಾಗಿತ್ತು. ಈ ಬಾರಿ ನಿವೃತ್ತಿಯಾಗಿದೆ. ಹೀಗಾಗಿ ಅಭಿಮನ್ಯುವಿಗೆ ಪೂಜೆ ಸಲ್ಲಿಸಿ ಭಾವುಕ ಬೀಳ್ಕೊಡುಗೆ ನೀಡಲಾಯಿತು. ಅಭಿಮನ್ಯುವನ್ನು ಸಿಂಗರಿಸಿ ಕರೆ ತಂದು ಅರಣ್ಯ ಇಲಾಖೆ ಸಿಬ್ಬಂದಿಯು ಹೂವಿನ ಮಳೆಗರೆದರು. ಈ ವೇಳೆ ನೆರೆದಿದ್ದವರ ಕಣ್ಣಲಿಗಳು ತುಂಬಿ ಬಂದವು. ಅಭಿಮನ್ಯು ಮಾವುತ ವಸಂತ್‌ ಆನೆ ಮೇಲಿಂದಲೇ ಭಾವುಕರಾದರು. ಬಳಿಕ ಮಾವುತ ಮತ್ತು ಕಾವಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದ ಬಳಿಕ ಅಭಿಮನ್ಯು ಲಾರಿಯಲ್ಲಿ ಕ್ಯಾಂಪ್‌ಗೆ ಮರಳಿತು. ನಿಶಾನೆ ಆನೆಯಾಗಿ ಅಭಿಮನ್ಯುವನ್ನು ಕರೆತರುವ ಬಗ್ಗೆ ಇನ್ನೂ ಅಂತಿಮ ಆಗಿಲ್ಲ. ಸಾಧ್ಯತೆಗಳನ್ನು ನೋಡಿಕೊಂಡು ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಸುಗ್ರೀವ ಬದಲು ಶ್ರೀಕಂಠ: ನಾಳೆಯಿಂದಲೇ ತಾಲೀಮು ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿಯಲ್ಲಿ ಬಳಿ ಬುಧವಾರ ಸಂಭ್ರಮದ ಚಾಲನೆ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಗಣ್ಯರು ಅಲಂಕೃತಗೊಂಡು ನಿಂತಿದ್ದ ಗಜಪಡೆಗೆ ದೀಪ ಬೆಳಗಿ, ಪುಷ್ಪಾರ್ಚನೆ ನೆರವೇರಿಸಿ ಗಜಪಯಣಕ್ಕೆ ಚಾಲನೆ ನೀಡಿದರು. ಮೊದಲ ತಂಡದಲ್ಲಿ 7 ಗಂಡು ಹಾಗೂ 2 ಹೆಣ್ಣಾನೆಗಳಿವೆ. ಸುಗ್ರೀವ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿರುವುದರಿಂದ 2ನೇ ತಂಡದಲ್ಲಿದ್ದ ಶ್ರೀಕಂಠನನ್ನು ಮೊದಲ ತಂಡದಲ್ಲಿ ಕರೆತರಲಾಯಿತು. ಸಂಜೆ ವೇಳೆಗೆ ಆನೆಗಳು ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಆಗಮಿಸಿ ವಾಸ್ತವ್ಯ ಹೂಡಿತು. ಆ.28ರಂದು ಬೆಳಗ್ಗೆ ಆನೆಗಳ ತಂಡ ಅರಮನೆ ಆವರಣ ಪ್ರವೇಶಿಸಲಿವೆ. ಅಂದೇ ಆನೆಗಳ ಭಾರ ತೂಕ ಮಾಡಲಾಗುತ್ತದೆ ಮತ್ತು ತಾಲೀಮು ಆರಂಭವಾಗಲಿದೆ ಎಂದು ಡಿಸಿಎಫ್‌ ಪ್ರಭುಗೌಡ ಪ್ರಕಟಿಸಿದರು.

More news from ಕರ್ನಾಟಕ and nearby areas
  • All About,Misappropriation of funds by highly influential person in #Hyderabad *ಭಾರತ ನಲ್ಲಿ ವೈರಲ್*
    1
    All About,Misappropriation of funds by highly influential person in #Hyderabad 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ಈ ಬಾರಿ ಕಂಬಳ ನಡೆಯುವುದು ಖಚಿತ : ಖುದ್ದು ಸಿಎಂ ಸೂಚನೆ ನೀಡಿದ್ದಾರೆ ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಬಳ ನಡೆಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಅದೇ ಸ್ಥಳದಲ್ಲಿ ಕಂಬಳ ಆಯೋಜಿಸಲಾಗುವುದು ಎಂದರು. ಕಂಬಳ ನಡೆಸುವಂತೆ ಮುಖ್ಯಮಂತ್ರಿ ಅವರೂ ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ನಡೆಯುವುದು ಖಚಿತ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
    1
    ಈ ಬಾರಿ ಕಂಬಳ ನಡೆಯುವುದು ಖಚಿತ : ಖುದ್ದು ಸಿಎಂ ಸೂಚನೆ ನೀಡಿದ್ದಾರೆ
ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಬಳ ನಡೆಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಅದೇ ಸ್ಥಳದಲ್ಲಿ ಕಂಬಳ ಆಯೋಜಿಸಲಾಗುವುದು ಎಂದರು.
ಕಂಬಳ ನಡೆಸುವಂತೆ ಮುಖ್ಯಮಂತ್ರಿ ಅವರೂ ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ನಡೆಯುವುದು ಖಚಿತ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    17 hrs ago
  • ಮೈಕ್ರೋ ಗ್ರೀನ್‌ ಬೆಳೆದು ತಿಂಗಳಿಗೆ ₹50 ಸಾವಿರ ಸಂಪಾದನೆ; ವಿನಯ್‌ರ ವಿನೂತನ ಕೃಷಿ ಮಾದರಿ ಮೈಸೂರು: ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಯುವಕರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಸಾಲಿನಲ್ಲಿ ನಂಜನಗೂಡು ನಗರದ ಎಂಬಿಎ ಪದವೀಧರ ವಿನಯ್ ಅವರು ಮೈಸೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೈಕ್ರೋ ಗ್ರೀನ್‌ ಕೃಷಿಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶಭರಿತ ಬೆಳೆಗಳನ್ನು ಉತ್ಪಾದಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ. ವಿನಯ್ ಅವರು ಸುಮಾರು ₹8 ಲಕ್ಷ ವೆಚ್ಚದಲ್ಲಿ ಮೈಕ್ರೋ ಗ್ರೀನ್‌ ಬೆಳೆಯಲು ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಎಂಟು ಬಗೆಯ ಧಾನ್ಯಗಳಾದ , ಜೋಳ, ರಾಗಿ, ಸಜ್ಜೆ, ಮೆಂತ್ಯೆ, ಸಾಸಿವೆ, ಮೂಲಂಗಿ ಹಾಗೂ ಬಿಟ್ರೋಟ್ ಮುಂತಾದ ಬೀಜಗಳಿಂದ ಮೈಕ್ರೋ ಗ್ರೀನ್‌ಗಳನ್ನು ಬೆಳೆಸುತ್ತಿದ್ದಾರೆ. ಬೀಜ ಬಿತ್ತಿದ ನಂತರ ಕೇವಲ 10ರಿಂದ 15 ದಿನಗಳಲ್ಲಿ ಪೈರು ಸಿದ್ಧವಾಗುವುದು ಈ ಕೃಷಿಯ ವಿಶೇಷತೆ. ಸಾಮಾನ್ಯ ಕೃಷಿಗೆ ಹೋಲಿಸಿದರೆ ಕಡಿಮೆ ಜಾಗ, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ಉತ್ಪಾದನೆ ಪಡೆಯಬಹುದಾಗಿರುವುದರಿಂದ ಮೈಕ್ರೋ ಗ್ರೀನ್‌ ಕೃಷಿ ಯುವಕರನ್ನು ಆಕರ್ಷಿಸುತ್ತಿದೆ. ವಿನಯ್ ಅವರು ಬೆಳೆದ ಮೈಕ್ರೋ ಗ್ರೀನ್‌ಗಳನ್ನು ಮೈಸೂರು ಹಾಗೂ ನಂಜನಗೂಡು ಭಾಗದ ಜಿಮ್‌ಗಳು, ಮನೆಗಳು ಹಾಗೂ ಆರೋಗ್ಯ ಕಾಳಜಿ ಹೊಂದಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮೈಕ್ರೋ ಗ್ರೀನ್‌ಗಳಲ್ಲಿ ಎಲೆಗಳು ಸಂಪೂರ್ಣವಾಗಿ ಬೆಳೆಯುವ ಮುನ್ನವೇ ಕೊಯ್ಲು ಮಾಡುವುದರಿಂದ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಆಹಾರದ ನಾರಿನಾಂಶ ದೊರೆಯುತ್ತವೆ. ನಿಯಮಿತ ಆಹಾರದ ಭಾಗವಾಗಿ ಬಳಸುವುದರಿಂದ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು. ಸಲಾಡ್‌, ಸ್ಯಾಂಡ್‌ವಿಚ್‌, ಸೂಪ್‌ ಹಾಗೂ ವಿವಿಧ ಆಹಾರ ಪದಾರ್ಥಗಳೊಂದಿಗೆ ಇವುಗಳನ್ನು ಸೇವಿಸಬಹುದು. ಕೃಷಿ ಎಂದರೆ ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಲ್ಲ ಎಂಬುದನ್ನು ವಿನಯ್ ಅವರ ಪ್ರಯತ್ನ ತೋರಿಸಿಕೊಟ್ಟಿದೆ. ಎಂಬಿಎ ಪದವಿ ಪಡೆದ ಬಳಿಕ ಉದ್ಯೋಗದ ಬದಲು ಕೃಷಿಯಲ್ಲೇ ಹೊಸ ಅವಕಾಶ ಕಂಡುಕೊಂಡಿರುವ ಅವರು, ಕಡಿಮೆ ಅವಧಿಯ ಬೆಳೆಗಳ ಮೂಲಕ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಮೈಕ್ರೋ ಗ್ರೀನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. +91 96111 89599 ಖರೀದಿ ಮಾಡಲು ಬಯಸುವವರು ಸಂಪರ್ಕ ಮಾಡಬಹುದು
    1
    ಮೈಕ್ರೋ ಗ್ರೀನ್‌ ಬೆಳೆದು ತಿಂಗಳಿಗೆ ₹50 ಸಾವಿರ ಸಂಪಾದನೆ; ವಿನಯ್‌ರ ವಿನೂತನ ಕೃಷಿ ಮಾದರಿ
ಮೈಸೂರು: ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಯುವಕರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಸಾಲಿನಲ್ಲಿ ನಂಜನಗೂಡು ನಗರದ ಎಂಬಿಎ ಪದವೀಧರ ವಿನಯ್ ಅವರು ಮೈಸೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೈಕ್ರೋ ಗ್ರೀನ್‌ ಕೃಷಿಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶಭರಿತ ಬೆಳೆಗಳನ್ನು ಉತ್ಪಾದಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ.
ವಿನಯ್ ಅವರು ಸುಮಾರು ₹8 ಲಕ್ಷ ವೆಚ್ಚದಲ್ಲಿ ಮೈಕ್ರೋ ಗ್ರೀನ್‌ ಬೆಳೆಯಲು ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಎಂಟು ಬಗೆಯ ಧಾನ್ಯಗಳಾದ , ಜೋಳ, ರಾಗಿ, ಸಜ್ಜೆ, ಮೆಂತ್ಯೆ, ಸಾಸಿವೆ, ಮೂಲಂಗಿ ಹಾಗೂ ಬಿಟ್ರೋಟ್ ಮುಂತಾದ ಬೀಜಗಳಿಂದ ಮೈಕ್ರೋ ಗ್ರೀನ್‌ಗಳನ್ನು ಬೆಳೆಸುತ್ತಿದ್ದಾರೆ. ಬೀಜ ಬಿತ್ತಿದ ನಂತರ ಕೇವಲ 10ರಿಂದ 15 ದಿನಗಳಲ್ಲಿ ಪೈರು ಸಿದ್ಧವಾಗುವುದು ಈ ಕೃಷಿಯ ವಿಶೇಷತೆ.
ಸಾಮಾನ್ಯ ಕೃಷಿಗೆ ಹೋಲಿಸಿದರೆ ಕಡಿಮೆ ಜಾಗ, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ಉತ್ಪಾದನೆ ಪಡೆಯಬಹುದಾಗಿರುವುದರಿಂದ ಮೈಕ್ರೋ ಗ್ರೀನ್‌ ಕೃಷಿ ಯುವಕರನ್ನು ಆಕರ್ಷಿಸುತ್ತಿದೆ. ವಿನಯ್ ಅವರು ಬೆಳೆದ ಮೈಕ್ರೋ ಗ್ರೀನ್‌ಗಳನ್ನು ಮೈಸೂರು ಹಾಗೂ ನಂಜನಗೂಡು ಭಾಗದ ಜಿಮ್‌ಗಳು, ಮನೆಗಳು ಹಾಗೂ ಆರೋಗ್ಯ ಕಾಳಜಿ ಹೊಂದಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ಮೈಕ್ರೋ ಗ್ರೀನ್‌ಗಳಲ್ಲಿ ಎಲೆಗಳು ಸಂಪೂರ್ಣವಾಗಿ ಬೆಳೆಯುವ ಮುನ್ನವೇ ಕೊಯ್ಲು ಮಾಡುವುದರಿಂದ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಆಹಾರದ ನಾರಿನಾಂಶ ದೊರೆಯುತ್ತವೆ. ನಿಯಮಿತ ಆಹಾರದ ಭಾಗವಾಗಿ ಬಳಸುವುದರಿಂದ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು. ಸಲಾಡ್‌, ಸ್ಯಾಂಡ್‌ವಿಚ್‌, ಸೂಪ್‌ ಹಾಗೂ ವಿವಿಧ ಆಹಾರ ಪದಾರ್ಥಗಳೊಂದಿಗೆ ಇವುಗಳನ್ನು ಸೇವಿಸಬಹುದು.
ಕೃಷಿ ಎಂದರೆ ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಲ್ಲ ಎಂಬುದನ್ನು ವಿನಯ್ ಅವರ ಪ್ರಯತ್ನ ತೋರಿಸಿಕೊಟ್ಟಿದೆ. ಎಂಬಿಎ ಪದವಿ ಪಡೆದ ಬಳಿಕ ಉದ್ಯೋಗದ ಬದಲು ಕೃಷಿಯಲ್ಲೇ ಹೊಸ ಅವಕಾಶ ಕಂಡುಕೊಂಡಿರುವ ಅವರು, ಕಡಿಮೆ ಅವಧಿಯ ಬೆಳೆಗಳ ಮೂಲಕ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಮೈಕ್ರೋ ಗ್ರೀನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ.
+91 96111 89599 ಖರೀದಿ ಮಾಡಲು ಬಯಸುವವರು ಸಂಪರ್ಕ ಮಾಡಬಹುದು
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Nanjangud, Mysuru•
    18 hrs ago
  • ಕೊಡಗಿನಲ್ಲಿ ಮೋಡ ಬಿತ್ತನೆ ಅವಶ್ಯಕತೆ ಇಲ್ಲ, ಶಾಸಕ ಮಂತರ್ ಗೌಡ ಸ್ಪಷ್ಟನೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ ಮೋಡ ಬಿತ್ತನೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸ್ಪಷ್ಟಪಡಿಸಿದ್ದಾರೆ.
    1
    ಕೊಡಗಿನಲ್ಲಿ ಮೋಡ ಬಿತ್ತನೆ ಅವಶ್ಯಕತೆ ಇಲ್ಲ, ಶಾಸಕ ಮಂತರ್ ಗೌಡ ಸ್ಪಷ್ಟನೆ
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ ಮೋಡ ಬಿತ್ತನೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸ್ಪಷ್ಟಪಡಿಸಿದ್ದಾರೆ.
    user_Kodagu Updates
    Kodagu Updates
    ಮಡಿಕೇರಿ, ಕೊಡಗು, ಕರ್ನಾಟಕ•
    2 hrs ago
  • ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹೆಚ್ಚಾಗಿ ಬರಲು ಮುಂದಾದ ಯುವಕರು:ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ ಮಳವಳ್ಳಿ: ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಯುವಕರು ಹೆಚ್ಚಾಗಿ ಬರಲು ಮುಂದಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ ತಿಳಿಸಿದರು. ಮಳವಳ್ಳಿ ಪಟ್ಟಣದಲ್ಲಿ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷ ದೆಹಲಿ ಹಾಗೂ ಪಂಜಾಬ್ ನಲ್ಲಿ ಉತ್ತಮ ಅಧಿಕಾರ ನಡೆಸಿದ್ದು, ರಾಜ್ಯದ ಜನರು ಇಂತಹ ಅಧಿಕಾರವನ್ನು ಬಯಸುತ್ತಿದ್ದಾರೆ. ರಾಜಕೀಯ ಪಕ್ಷ ಬದಲಾಯಿಸುವ ಬದಲು ಜನರಿಗೆ ಅನುಕೂಲ ಮಾಡಬೇಕಾಗಿದೆ. ಇದಲ್ಲದೆ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹೊಣೆ ನಮ್ಮ ಜನರಿದ್ದಾಗಿದೆ ಎಂದರು. ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಸಂಘಟನೆ ಮಾಡಲು ಹೊರಟಿದೆ. ಎಂದರು. ಈ ವೇಳೆ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀಪ್ ಸಹಾನಿ, ಮಂಡ್ಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಾಸೀಮ್, ರಾಷ್ಟ್ರೀಯ ಸಂವಿಧಾನ ಪರ ವಿಚಾರ ವೇದಿಕೆ ಅಧ್ಯಕ್ಷ ಕೃಷ್ಣಕುಮಾರ ಸೇರಿದಂತೆ ಹಲವರು ಇದ್ದರು.
    1
    ರಾಜ್ಯದಲ್ಲಿ  ಆಮ್ ಆದ್ಮಿ  ಪಕ್ಷಕ್ಕೆ ಹೆಚ್ಚಾಗಿ ಬರಲು ಮುಂದಾದ ಯುವಕರು:ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ
ಮಳವಳ್ಳಿ: ರಾಜ್ಯದಲ್ಲಿ  ಆಮ್ ಆದ್ಮಿ  ಪಕ್ಷಕ್ಕೆ ಯುವಕರು  ಹೆಚ್ಚಾಗಿ  ಬರಲು ಮುಂದಾಗಿದ್ದಾರೆ  ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ  ತಿಳಿಸಿದರು.
ಮಳವಳ್ಳಿ ಪಟ್ಟಣದಲ್ಲಿ  ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷ ದೆಹಲಿ ಹಾಗೂ ಪಂಜಾಬ್  ನಲ್ಲಿ ಉತ್ತಮ ಅಧಿಕಾರ ನಡೆಸಿದ್ದು, ರಾಜ್ಯದ ಜನರು ಇಂತಹ ಅಧಿಕಾರವನ್ನು  ಬಯಸುತ್ತಿದ್ದಾರೆ. ರಾಜಕೀಯ ಪಕ್ಷ  ಬದಲಾಯಿಸುವ ಬದಲು  ಜನರಿಗೆ  ಅನುಕೂಲ ಮಾಡಬೇಕಾಗಿದೆ.
ಇದಲ್ಲದೆ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹೊಣೆ ನಮ್ಮ ಜನರಿದ್ದಾಗಿದೆ  ಎಂದರು.
ಆಮ್ ಆದ್ಮಿ ಪಕ್ಷ  ರಾಜ್ಯದಲ್ಲಿ ಸಂಘಟನೆ ಮಾಡಲು ಹೊರಟಿದೆ.  ಎಂದರು.
ಈ ವೇಳೆ   ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀಪ್ ಸಹಾನಿ, ಮಂಡ್ಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಾಸೀಮ್,  ರಾಷ್ಟ್ರೀಯ ಸಂವಿಧಾನ ಪರ  ವಿಚಾರ ವೇದಿಕೆ ಅಧ್ಯಕ್ಷ ಕೃಷ್ಣಕುಮಾರ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    18 min ago
  • ಅಲುಗಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಸಾರ್ವಜನಿಕರಲ್ಲಿ ಆತಂಕ ಕೋಟಿಗಟ್ಟಲೆ ಯೋಜನೆ ಕಳಪೆ ಸಂಶಯ ಅಲಗಾಡುತ್ತಿದೆ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಜನರಲ್ಲಿ ಆತಂಕ ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 948 ರಸ್ತೆಗೆ ಸತ್ತಿಗಾಲ ಬಳಿ ನಿರ್ಮಿಸಿರುವ ಹೊಸ ಮೇಲ್ ಸೇತುವೆ ಅಲುಗಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಕಳೆದ ವಾರ ಸತಿಗಾಲ ಸೇತುವೆ ಬಳಿ ನಿಂತುಕೊಂಡು ಕಾವೇರಿ ನದಿಯ ನೀರು ಹರಿಯುವಿಕೆ ಹಾಗೂ ಸುತ್ತಮುತ್ತಲ ಸುಂದರ ವಾತಾವರಣವನ್ನು ನೋಡುತ್ತಿದ್ದ ಹಲವಾರು ಜನರು ಸತ್ತಿಗಾಲ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವಾಹನಗಳು ಹೋಗುವಾಗ ಬರುವಾಗ ಅದರಲ್ಲೂ ಅತಿ ಭಾರವಾದ ವಾಹನಗಳು ಸಂಚರಿಸುವಾಗ ಈ ಸೇತುವೆ ಅಲಗಾಡುತ್ತಿರುವ ರೋಮಾಂಚನ ಹಾಗೂ ಭಯದ ವಾತಾವರಣ ಸೃಷ್ಟಿಯಾಯಿತು ಇದು ಇತ್ತೀಚಿಗೆ ನಿರ್ಮಿಸಿರುವ ಸೇತುವೆಯಾಗಿದೆ ಹಳೆಯ ಸೇತುವೆ ಇದಕ್ಕಿಂತ ತುಂಬಾ ಉತ್ತಮ ವಿನ್ನಬಹುದಾಗಿದೆ. ಈ ಕಾಮಗಾರಿಗು ಮುನ್ನ ಹಳೆಯ ಸೇತುವೆಯ ಪುನರ್ ನಿರ್ಮಾಣ ಆಗಿತ್ತು ಅದಕ್ಕೆ ಮೂರು ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿತ್ತು 948 ನಂತರ ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇದಕ್ಕೆ ಹೊಸ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಈ ಸೇತುವೆಯ ಕಾಮಗಾರಿ ಕಳಪೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ ಏಕೆಂದರೆ ವಾಹನಗಳು ಸಂಚರಿಸುವಾಗ ಸೇತುವೆ ಭೂಕಂಪವಾದಾಗ ಯಾವ ರೀತಿ ಅಲುಗಾಡುತ್ತದೆ, ಶಬ್ದ ಅನುಭವ ಆಗುತ್ತದೋ ಆ ರೀತಿಯಲ್ಲಿ ಇಲ್ಲಿ ಶಬ್ದ ಬರುತ್ತದೆ ಇದು ಇದು ಕಳಪೆ ಕಾಮಗಾರಿಯೂ ಅಥವಾ ಆಧುನಿಕ ತಂತ್ರಜ್ಞಾನವು ಎಂಬ ಅನುಮಾನ ಮೂಡಿಸಿದೆ ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದರ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಯಾವುದೇ ಆತಂಕ ಅಡ್ಡಿ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ
    1
    ಅಲುಗಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಸಾರ್ವಜನಿಕರಲ್ಲಿ ಆತಂಕ ಕೋಟಿಗಟ್ಟಲೆ ಯೋಜನೆ ಕಳಪೆ ಸಂಶಯ
ಅಲಗಾಡುತ್ತಿದೆ ರಾಷ್ಟ್ರೀಯ  ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಜನರಲ್ಲಿ ಆತಂಕ
ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 948 ರಸ್ತೆಗೆ ಸತ್ತಿಗಾಲ ಬಳಿ ನಿರ್ಮಿಸಿರುವ ಹೊಸ ಮೇಲ್ ಸೇತುವೆ ಅಲುಗಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತಪಡಿಸಿದೆ.
ಈ ಬಗ್ಗೆ ಕಳೆದ ವಾರ ಸತಿಗಾಲ ಸೇತುವೆ ಬಳಿ ನಿಂತುಕೊಂಡು ಕಾವೇರಿ ನದಿಯ ನೀರು ಹರಿಯುವಿಕೆ ಹಾಗೂ ಸುತ್ತಮುತ್ತಲ ಸುಂದರ ವಾತಾವರಣವನ್ನು ನೋಡುತ್ತಿದ್ದ ಹಲವಾರು ಜನರು ಸತ್ತಿಗಾಲ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವಾಹನಗಳು ಹೋಗುವಾಗ ಬರುವಾಗ ಅದರಲ್ಲೂ ಅತಿ ಭಾರವಾದ ವಾಹನಗಳು ಸಂಚರಿಸುವಾಗ ಈ ಸೇತುವೆ  ಅಲಗಾಡುತ್ತಿರುವ ರೋಮಾಂಚನ ಹಾಗೂ ಭಯದ ವಾತಾವರಣ ಸೃಷ್ಟಿಯಾಯಿತು
ಇದು ಇತ್ತೀಚಿಗೆ ನಿರ್ಮಿಸಿರುವ ಸೇತುವೆಯಾಗಿದೆ ಹಳೆಯ ಸೇತುವೆ ಇದಕ್ಕಿಂತ ತುಂಬಾ ಉತ್ತಮ ವಿನ್ನಬಹುದಾಗಿದೆ.
ಈ ಕಾಮಗಾರಿಗು ಮುನ್ನ ಹಳೆಯ ಸೇತುವೆಯ ಪುನರ್ ನಿರ್ಮಾಣ ಆಗಿತ್ತು ಅದಕ್ಕೆ ಮೂರು ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿತ್ತು 948 ನಂತರ ರಾಷ್ಟ್ರೀಯ ಹೆದ್ದಾರಿ   ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇದಕ್ಕೆ ಹೊಸ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಈ ಸೇತುವೆಯ ಕಾಮಗಾರಿ ಕಳಪೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ ಏಕೆಂದರೆ ವಾಹನಗಳು ಸಂಚರಿಸುವಾಗ ಸೇತುವೆ ಭೂಕಂಪವಾದಾಗ ಯಾವ ರೀತಿ ಅಲುಗಾಡುತ್ತದೆ, ಶಬ್ದ ಅನುಭವ ಆಗುತ್ತದೋ ಆ ರೀತಿಯಲ್ಲಿ ಇಲ್ಲಿ ಶಬ್ದ ಬರುತ್ತದೆ ಇದು ಇದು ಕಳಪೆ ಕಾಮಗಾರಿಯೂ ಅಥವಾ ಆಧುನಿಕ ತಂತ್ರಜ್ಞಾನವು ಎಂಬ ಅನುಮಾನ ಮೂಡಿಸಿದೆ ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದರ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಯಾವುದೇ ಆತಂಕ ಅಡ್ಡಿ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ ವರದಿ: ಹೊಮ್ಮನಂಜುಂಡನಾಯಕ. ಜಿಲ್ಲೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಚಾಮರಾಜನಗರ: ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಕೇಂದ್ರ ನಮಿತಿ ಬೆಂಗಳೂರು ನೇತೃತ್ವದಲ್ಲಿ ಆ. 28 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.8, ಶೃಂಗಾರ್ ಪ್ಯಾಲೇನ್‌ನಲ್ಲಿ ಬೆಳಿಗ್ಗೆ 10:30 ಗಂಟೆಗೆ ಆರಂಭವಾಗುವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಕೊಳ್ಳೇಗಾಲ ಜೇತವನ ವಿಹಾರದ ಭೌದ್ಧ ಬಿಕ್ಕು ಮನೋರಕ್ಷಿತ ಬಂತೇಜಿ ವಹಿಸುವವರು, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವ‌ರ್ ಅಧ್ಯಕ್ಷತೆ ವಹಿಸುವವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಸಚಿವರಾದ ಕೆ.ಚ್‌.ಮುನಿಯಪ್ಪ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ಖರ್ಗೆ, ಶಿವರಾಜ್ ತಂಗಡಗಿ : ಪಿ.ಎಂ.ನರೇಂದ್ರಸ್ವಾಮಿ.ಬಿ. ನಾಗೇಂದ್ರ ರುದ್ರಪ್ಪ ಲಮಾಣಿ, ಕೆ.ಎಸ್‌.ಬಸವಂತಪ್ಪ, ಟಿ.ರಘುಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವವರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 5 ಬಸ್‌ಗಳಲ್ಲಿ ಹೊರಡಲು ವ್ಯವಸ್ಥೆ. ಮಾಡಲಾಗಿದೆ. ಚಾಮರಾಜೇಶ್ವರ ದೇವಸ್ಥಾನ ‌ ಮುಂಭಾಗ, ಹೌಸಿಂಗ್ ಬೋರ್ಡ್ ಹತ್ತಿರ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ನೌಕರರು ಭಾಗವಹಿಸಿ ಯಶಸ್ವಿಕೊಳಿಸಿಕೊಡುವಂತೆ ಮನವಿ ಮಾಡಿದರು. ಮಾಜಿ ಅಧ್ಯಕ್ಷ ಮಂಜುನಾಥಪ್ರನನ್ನ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ನಾನು ಕೂಡ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ಮಾಡಿ ನೌಕರರು, ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ. ಈ ಸಮಾವೇಶಕ್ಕೆ ರಾಜ್ಯಾದ್ಯಂತ ಸುಮಾರು 50 ಸಾವಿರ ಜನರು ಸೇರುತ್ತಾರೆ ನಮ್ಮ ಜಿಲ್ಲೆಯಿಂದ 500 ಮಂದಿ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ ನಮ್ಮ ಮುಖ್ಯ ಬೇಡಿಕೆಗಳಾದ ಎಸ್ ಸಿ, ಎಸ್‌ಟಿಗಳಿಗೆ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲು ಆಗಬೇಕು. ಕಾನೂನು ವಿದ್ಯಾರ್ಥಿಗಳು, ಇಂಜಿನಿಯರ್‌ರಿಂಗ್ ವಿದ್ಯಾರ್ಥಿಗಳು, ಮೆಡಿಕಲ್ ವಿದ್ಯಾರ್ಥಿಗಳಿಗೆ ಒಳ ಮೀಸಲಾತಿಯಿಂದ ತುಂಬಾ ಇಕ್ಕಟ್ಟಾಗಿದ್ದು, ಸರಿಯಾಗಿ ಜಾತಿ ಪ್ರಮಾಣ ಕೊಡುತ್ತಿಲ್ಲ. ಅದಕ್ಕಾಗೆ 1 ಸಾವಿರದಿಂದ 2 ಸಾವಿರ ರೂ .ವೆಚ್ಚವಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು. ಬಗರ್‌ಹುಕುಂ ಸಾಗುವಳಿಯಲ್ಲಿ ವಿಳಂಬವಾಗುತ್ತಿದೆ. ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳಿಗೆ ಮಂಡಿಸಲಾಗುತ್ತದೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಮಹಾಸಭಾದ ಜಿಲ್ಲಾಧ್ಯಕ್ಷ ಉಮೇಶ್‌ಕುದರ್ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ನಿರಂತರವಾಗಿ ಸಮುದಾಯಕ್ಕೆ ಆಗುವ ಎಲ್ಲ ಅನ್ಯಾಯಗಳನ್ನು ತಮ್ಮ ಧ್ವನಿಯ ಮುಖಾಂತರ, ಸಮಾವೇಶಗಳ ಮುಖಾಂತರ ಎಲ್ಲರಿಗೂ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ ಸಂಘಟನೆಗಳ ವತಿಯಿಂದ ಎಲ್ಲ ರೀತಿ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ಹಿರಿಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯಾಧ್ಯಕ್ಷ ಶಿವಕುಮಾರಯ್ಯ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ವಾಸು, ಎಸ್ ಸಿ, ಎಸ್ ಟಿ  ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ನಂಜುಂಡಸ್ವಾಮಿ ಹಾಜರಿದ್ದರು.
    4
    ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ
ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ
ವರದಿ: ಹೊಮ್ಮನಂಜುಂಡನಾಯಕ.
ಜಿಲ್ಲೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ
ಚಾಮರಾಜನಗರ: ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಕೇಂದ್ರ
ನಮಿತಿ ಬೆಂಗಳೂರು ನೇತೃತ್ವದಲ್ಲಿ ಆ. 28 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.8, ಶೃಂಗಾರ್ ಪ್ಯಾಲೇನ್‌ನಲ್ಲಿ ಬೆಳಿಗ್ಗೆ 10:30 ಗಂಟೆಗೆ ಆರಂಭವಾಗುವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಕೊಳ್ಳೇಗಾಲ ಜೇತವನ ವಿಹಾರದ ಭೌದ್ಧ ಬಿಕ್ಕು ಮನೋರಕ್ಷಿತ ಬಂತೇಜಿ ವಹಿಸುವವರು, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವ‌ರ್ ಅಧ್ಯಕ್ಷತೆ ವಹಿಸುವವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಸಚಿವರಾದ ಕೆ.ಚ್‌.ಮುನಿಯಪ್ಪ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ಖರ್ಗೆ, ಶಿವರಾಜ್ ತಂಗಡಗಿ : ಪಿ.ಎಂ.ನರೇಂದ್ರಸ್ವಾಮಿ.ಬಿ. ನಾಗೇಂದ್ರ ರುದ್ರಪ್ಪ ಲಮಾಣಿ, ಕೆ.ಎಸ್‌.ಬಸವಂತಪ್ಪ, ಟಿ.ರಘುಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವವರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 5 ಬಸ್‌ಗಳಲ್ಲಿ ಹೊರಡಲು ವ್ಯವಸ್ಥೆ. ಮಾಡಲಾಗಿದೆ. ಚಾಮರಾಜೇಶ್ವರ ದೇವಸ್ಥಾನ ‌ ಮುಂಭಾಗ, ಹೌಸಿಂಗ್ ಬೋರ್ಡ್ ಹತ್ತಿರ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ನೌಕರರು ಭಾಗವಹಿಸಿ ಯಶಸ್ವಿಕೊಳಿಸಿಕೊಡುವಂತೆ ಮನವಿ ಮಾಡಿದರು. 
ಮಾಜಿ ಅಧ್ಯಕ್ಷ ಮಂಜುನಾಥಪ್ರನನ್ನ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ನಾನು ಕೂಡ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ಮಾಡಿ ನೌಕರರು, ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ. ಈ ಸಮಾವೇಶಕ್ಕೆ ರಾಜ್ಯಾದ್ಯಂತ ಸುಮಾರು 50 ಸಾವಿರ ಜನರು ಸೇರುತ್ತಾರೆ ನಮ್ಮ ಜಿಲ್ಲೆಯಿಂದ 500 ಮಂದಿ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ ನಮ್ಮ ಮುಖ್ಯ ಬೇಡಿಕೆಗಳಾದ ಎಸ್ ಸಿ, ಎಸ್‌ಟಿಗಳಿಗೆ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲು ಆಗಬೇಕು. ಕಾನೂನು ವಿದ್ಯಾರ್ಥಿಗಳು, ಇಂಜಿನಿಯರ್‌ರಿಂಗ್ ವಿದ್ಯಾರ್ಥಿಗಳು, ಮೆಡಿಕಲ್ ವಿದ್ಯಾರ್ಥಿಗಳಿಗೆ ಒಳ ಮೀಸಲಾತಿಯಿಂದ ತುಂಬಾ ಇಕ್ಕಟ್ಟಾಗಿದ್ದು, ಸರಿಯಾಗಿ ಜಾತಿ ಪ್ರಮಾಣ ಕೊಡುತ್ತಿಲ್ಲ. ಅದಕ್ಕಾಗೆ 1 ಸಾವಿರದಿಂದ 2 ಸಾವಿರ ರೂ .ವೆಚ್ಚವಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು. ಬಗರ್‌ಹುಕುಂ ಸಾಗುವಳಿಯಲ್ಲಿ ವಿಳಂಬವಾಗುತ್ತಿದೆ. ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳಿಗೆ ಮಂಡಿಸಲಾಗುತ್ತದೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಮಹಾಸಭಾದ ಜಿಲ್ಲಾಧ್ಯಕ್ಷ ಉಮೇಶ್‌ಕುದರ್ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ನಿರಂತರವಾಗಿ ಸಮುದಾಯಕ್ಕೆ ಆಗುವ ಎಲ್ಲ ಅನ್ಯಾಯಗಳನ್ನು ತಮ್ಮ ಧ್ವನಿಯ ಮುಖಾಂತರ, ಸಮಾವೇಶಗಳ ಮುಖಾಂತರ ಎಲ್ಲರಿಗೂ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ ಸಂಘಟನೆಗಳ ವತಿಯಿಂದ ಎಲ್ಲ ರೀತಿ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ಹಿರಿಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯಾಧ್ಯಕ್ಷ ಶಿವಕುಮಾರಯ್ಯ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ವಾಸು, ಎಸ್ ಸಿ, ಎಸ್ ಟಿ  ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ನಂಜುಂಡಸ್ವಾಮಿ ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    20 hrs ago
  • All About,Crores Means Crores in #WaqfCommittees Accounts statement by #Chairman *ಭಾರತ ನಲ್ಲಿ ವೈರಲ್*
    1
    All About,Crores Means Crores in #WaqfCommittees Accounts statement by #Chairman 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.