logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಡು ಬಡತನದಿಂದ ಮುಖ್ಯಮಂತ್ರಿಗಳ ಪದಕದವರೆಗೆ: ಪೊಲೀಸ್ ಕಾನ್ಸ್‌ಟೇಬಲ್ ಷರೀಫ್ ಎಂ ಸಾಧನೆ ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕಾಟಂದೇವರ ಕೋಟೆ ಗ್ರಾಮದ ಮೂಲದ ಷರೀಫ್ ಎಂ ಅವರು ಕಡು ಬಡತನದಲ್ಲೇ ಹುಟ್ಟಿ, ತಮ್ಮ ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಪೊಲೀಸ್ ಇಲಾಖೆಯಲ್ಲಿ ಗಮನಾರ್ಹ ಸಾಧನೆ ಮಾಡಿ, ಮುಖ್ಯಮಂತ್ರಿಗಳ ಪದಕ – 2025ಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಷರೀಫ್ ಎಂ ಅವರು 01-06-1992 ರಂದು ಇಮಾಮ್ ಸಾಬ್ ಮತ್ತು ಇಮಾಂಬಿ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ ಅವರು ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಾಸವಿದ್ದು ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಂತರ ಕೂಡ್ಲಿಗಿ ತಾಲೂಕಿನ ಸುಲ್ತಾನ್ ಪುರದಲ್ಲಿ ವಾಸವಾಗಿದ್ದ ತಮ್ಮ ಸಹೋದರಿಯ ನೆರವಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು. ಇದರ ಫಲವಾಗಿ 10-03-2014 ರಂದು ಕೆಎಸ್‌ಐಎಸ್‌ಎಫ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು. ಬುನಾದಿ ತರಬೇತಿ ಪೂರ್ಣಗೊಳಿಸಿದ ಬಳಿಕ ಆಂತರಿಕ ಭದ್ರತಾ ವಿಭಾಗದ ತಾಂತ್ರಿಕ ಘಟಕಕ್ಕೆ ನಿಯೋಜಿಸಲ್ಪಟ್ಟರು. 2017ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಆಗಿ ನೇಮಕಗೊಂಡರು. ತಾಂತ್ರಿಕ ಪರಿಣಿತಿಯುಳ್ಳ ಷರೀಫ್ ಎಂ ಅವರು ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಕಾಲ್ ಡಿಟೇಲ್ ರೆಕಾರ್ಡ್‌ಗಳ (ಸಿಡಿಆರ್) ವಿಶ್ಲೇಷಣೆಯಲ್ಲಿ ನಿಪುಣರಾಗಿರುವ ಅವರು, ಅಪರಾಧ ವಿಭಾಗದ ಸವಾಲಿನ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 2017ರಿಂದಲೂ ಕೊಲೆ, ಮಾರಣಾಂತಿಕ ಹಲ್ಲೆ, ದ್ವಿಚಕ್ರ ವಾಹನ ಕಳವು, ಮನೆಗಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಗಳನ್ನು ಕಡಿಮೆ ಅವಧಿಯಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಅಪರಾಧಿಗಳ ಪತ್ತೆಹಚ್ಚುವಿಕೆಯಲ್ಲಿ ಮಾಹಿತಿ ಸಂಗ್ರಹಣೆ ಮತ್ತು ತಾಂತ್ರಿಕ ಸಹಾಯ ಒದಗಿಸುವಲ್ಲಿ ಷರೀಫ್ ಎಂ ಅವರ ಪರಿಶ್ರಮ ಅತ್ಯಂತ ಪ್ರಶಂಸನೀಯವಾಗಿದೆ. ಅವರ ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ವೈಜ್ಞಾನಿಕ ಕೌಶಲ್ಯಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅವರಿಗೆ ಮುಖ್ಯಮಂತ್ರಿಗಳ ಪದಕ – 2025 ನೀಡಿ ಗೌರವಿಸಿದೆ. ಷರೀಫ್ ಎಂ ಅವರ ಈ ಸಾಧನೆ ಯುವಕರಿಗೆ ಪ್ರೇರಣೆಯಾಗಿದ್ದು, ಕಠಿಣ ಪರಿಶ್ರಮ ಮತ್ತು ದೃಢ ಮನಸ್ಸು ಇದ್ದರೆ ಯಾವ ಪರಿಸ್ಥಿತಿಯನ್ನೂ ಜಯಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

8 hrs ago
user_ಗೋಪನಹಳ್ಳಿಶಿವಣ್ಣ
ಗೋಪನಹಳ್ಳಿಶಿವಣ್ಣ
Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
8 hrs ago
65b362b8-8d40-4695-a235-15cc06edae2a

ಕಡು ಬಡತನದಿಂದ ಮುಖ್ಯಮಂತ್ರಿಗಳ ಪದಕದವರೆಗೆ: ಪೊಲೀಸ್ ಕಾನ್ಸ್‌ಟೇಬಲ್ ಷರೀಫ್ ಎಂ ಸಾಧನೆ ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕಾಟಂದೇವರ ಕೋಟೆ ಗ್ರಾಮದ ಮೂಲದ ಷರೀಫ್ ಎಂ ಅವರು ಕಡು ಬಡತನದಲ್ಲೇ ಹುಟ್ಟಿ, ತಮ್ಮ ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಪೊಲೀಸ್ ಇಲಾಖೆಯಲ್ಲಿ ಗಮನಾರ್ಹ ಸಾಧನೆ ಮಾಡಿ, ಮುಖ್ಯಮಂತ್ರಿಗಳ ಪದಕ – 2025ಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಷರೀಫ್ ಎಂ ಅವರು 01-06-1992 ರಂದು ಇಮಾಮ್ ಸಾಬ್ ಮತ್ತು ಇಮಾಂಬಿ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ ಅವರು ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಾಸವಿದ್ದು ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಂತರ ಕೂಡ್ಲಿಗಿ ತಾಲೂಕಿನ ಸುಲ್ತಾನ್ ಪುರದಲ್ಲಿ ವಾಸವಾಗಿದ್ದ ತಮ್ಮ ಸಹೋದರಿಯ ನೆರವಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು. ಇದರ ಫಲವಾಗಿ 10-03-2014 ರಂದು ಕೆಎಸ್‌ಐಎಸ್‌ಎಫ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು. ಬುನಾದಿ ತರಬೇತಿ ಪೂರ್ಣಗೊಳಿಸಿದ ಬಳಿಕ ಆಂತರಿಕ ಭದ್ರತಾ ವಿಭಾಗದ ತಾಂತ್ರಿಕ ಘಟಕಕ್ಕೆ ನಿಯೋಜಿಸಲ್ಪಟ್ಟರು. 2017ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಆಗಿ ನೇಮಕಗೊಂಡರು. ತಾಂತ್ರಿಕ ಪರಿಣಿತಿಯುಳ್ಳ ಷರೀಫ್ ಎಂ ಅವರು ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಕಾಲ್ ಡಿಟೇಲ್ ರೆಕಾರ್ಡ್‌ಗಳ (ಸಿಡಿಆರ್) ವಿಶ್ಲೇಷಣೆಯಲ್ಲಿ ನಿಪುಣರಾಗಿರುವ ಅವರು, ಅಪರಾಧ ವಿಭಾಗದ ಸವಾಲಿನ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 2017ರಿಂದಲೂ ಕೊಲೆ, ಮಾರಣಾಂತಿಕ ಹಲ್ಲೆ, ದ್ವಿಚಕ್ರ ವಾಹನ ಕಳವು, ಮನೆಗಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಗಳನ್ನು ಕಡಿಮೆ ಅವಧಿಯಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಅಪರಾಧಿಗಳ ಪತ್ತೆಹಚ್ಚುವಿಕೆಯಲ್ಲಿ ಮಾಹಿತಿ ಸಂಗ್ರಹಣೆ ಮತ್ತು ತಾಂತ್ರಿಕ ಸಹಾಯ ಒದಗಿಸುವಲ್ಲಿ ಷರೀಫ್ ಎಂ ಅವರ ಪರಿಶ್ರಮ ಅತ್ಯಂತ ಪ್ರಶಂಸನೀಯವಾಗಿದೆ. ಅವರ ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ವೈಜ್ಞಾನಿಕ ಕೌಶಲ್ಯಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅವರಿಗೆ ಮುಖ್ಯಮಂತ್ರಿಗಳ ಪದಕ – 2025 ನೀಡಿ ಗೌರವಿಸಿದೆ. ಷರೀಫ್ ಎಂ ಅವರ ಈ ಸಾಧನೆ ಯುವಕರಿಗೆ ಪ್ರೇರಣೆಯಾಗಿದ್ದು, ಕಠಿಣ ಪರಿಶ್ರಮ ಮತ್ತು ದೃಢ ಮನಸ್ಸು ಇದ್ದರೆ ಯಾವ ಪರಿಸ್ಥಿತಿಯನ್ನೂ ಜಯಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

More news from ಕರ್ನಾಟಕ and nearby areas
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ವದ್ದಿಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ರಾಜ್ಯದ ಮೂಲೆಮೂಲೆಗಳಿಂದಲೂ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ವೈಭವಕ್ಕೆ ಸಾಕ್ಷಿಯಾದರು. ಭಕ್ತರ ಜೈಘೋಷ, ಭಕ್ತಿ ಗೀತೆಗಳು ಮತ್ತು ಸಂಪ್ರದಾಯಬದ್ಧ ವಿಧಿವಿಧಾನಗಳ ನಡುವೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲೆಂದೇ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಿಂದ ವದ್ದಿಕೆರೆಗೆ ಬಂದು ನೆಲೆನಿಂತಿದ್ದಾರೆ ಎಂಬ ನಂಬಿಕೆ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಿಮೆ ಅಪಾರವೆಂದು ಭಕ್ತರು ಹೇಳಿಕೊಳ್ಳುತ್ತಾರೆ. ಈ ತಾಂತ್ರಿಕ ಯುಗದಲ್ಲಿಯೂ ವಿವಿಧ ರೋಗರುಜಿನಗಳಿಗೆ ಪರಿಹಾರ ನೀಡುವ ಭವರೋಗ ವೈದ್ಯರಾಗಿ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಕ್ಷೇತ್ರದ ಎರೆನಾಡ ದೊರೆಯನ್ನು ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ತಮ್ಮ ಮನೋಭಿಲಾಷೆಗಳನ್ನು ನೆರವೇರಿಸಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು.
    1
    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ವದ್ದಿಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು.
ರಾಜ್ಯದ ಮೂಲೆಮೂಲೆಗಳಿಂದಲೂ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ವೈಭವಕ್ಕೆ ಸಾಕ್ಷಿಯಾದರು. ಭಕ್ತರ ಜೈಘೋಷ, ಭಕ್ತಿ ಗೀತೆಗಳು ಮತ್ತು ಸಂಪ್ರದಾಯಬದ್ಧ ವಿಧಿವಿಧಾನಗಳ ನಡುವೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲೆಂದೇ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಿಂದ ವದ್ದಿಕೆರೆಗೆ ಬಂದು ನೆಲೆನಿಂತಿದ್ದಾರೆ ಎಂಬ ನಂಬಿಕೆ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಿಮೆ ಅಪಾರವೆಂದು ಭಕ್ತರು ಹೇಳಿಕೊಳ್ಳುತ್ತಾರೆ. ಈ ತಾಂತ್ರಿಕ ಯುಗದಲ್ಲಿಯೂ ವಿವಿಧ ರೋಗರುಜಿನಗಳಿಗೆ ಪರಿಹಾರ ನೀಡುವ ಭವರೋಗ ವೈದ್ಯರಾಗಿ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಹೀಗಾಗಿ ಈ ಕ್ಷೇತ್ರದ ಎರೆನಾಡ ದೊರೆಯನ್ನು ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ತಮ್ಮ ಮನೋಭಿಲಾಷೆಗಳನ್ನು ನೆರವೇರಿಸಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    7 hrs ago
  • "ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ". ಚಳ್ಳಕೆರೆ:-ನಗರದ ಹೊರವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವ ಪ್ರಾರಂಭದ ಪ್ರಯುಕ್ತ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಗುರುತಾಯಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವದ ಪ್ರಾರಂಭದ ಹಿನ್ನೆಲೆಯಲ್ಲಿ ನರಹರಿ ನಗರದ ಆಶ್ರಮದಲ್ಲಿ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಅನ್ನದಾಸೋಹ ನಡೆಯಲಿದ್ದು ಆಶ್ರಮದ ಭಕ್ತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀನರಹರಿ ಸದ್ಗುರು ಆಶ್ರಮದ ಉಪಾಧ್ಯಕ್ಷರಾದ ಮಾಕಂ ಶ್ರೀನಿವಾಸಲು, ಬೆಂಗಳೂರಿನ ಐ.ಐ.ಎಂ ನ ನಿವೃತ್ತ ಪ್ರೊಫೆಸರ್ ಡಾ.ಬಿ.ಶೇಖರ್, ಪ್ರಗತಿಪರ ಬೇಸಾಯಗಾರರಾದ ಕುಂಕಲ ಕೃಷ್ಣಯ್ಯ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪೂಜ್ಯ ವೈ ಏಕಾಂತ ರಾಮ್,ಡಾ.ವೈ ನರಹರಿ, ಈಶ್ವರಗೆರೆ ರಂಗನಾಥ್, ರಾಜೇಶ್ವರಿ, ಲಾವಣ್ಯ, ಪದ್ಮಶ್ರೀ, ರವಿಶಂಕರ್ , ಯಾದಾಟಿ ಚೇತನ್, ದೇವರಾಜರೆಡ್ಡಿ, ರಾಮಚಂದ್ರಪ್ಪ , ಮಲ್ಲಿಕಾರ್ಜುನಪ್ಪ , ರೇವಣಸಿದ್ದಪ್ಪ , ಯತೀಶ್ ಎಂ ಸಿದ್ಧಾಪುರ, ಸುಹಾಸ್,ವೈಭವ, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಗಂಗಾಧರಶೆಟ್ಟಿ, ನಾಗಲಕ್ಷ್ಮೀ, ಶಾಂತಮ್ಮ , ನಗರಂಗೆರೆ ಮಹೇಶ್ ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.
    1
    "ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ".                              ಚಳ್ಳಕೆರೆ:-ನಗರದ ಹೊರವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವ ಪ್ರಾರಂಭದ ಪ್ರಯುಕ್ತ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.        ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಗುರುತಾಯಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವದ ಪ್ರಾರಂಭದ ಹಿನ್ನೆಲೆಯಲ್ಲಿ ನರಹರಿ ನಗರದ ಆಶ್ರಮದಲ್ಲಿ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಅನ್ನದಾಸೋಹ ನಡೆಯಲಿದ್ದು ಆಶ್ರಮದ ಭಕ್ತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.                     ಮುಖ್ಯ ಅತಿಥಿಗಳಾಗಿ   ಶ್ರೀನರಹರಿ ಸದ್ಗುರು ಆಶ್ರಮದ ಉಪಾಧ್ಯಕ್ಷರಾದ ಮಾಕಂ ಶ್ರೀನಿವಾಸಲು, ಬೆಂಗಳೂರಿನ ಐ.ಐ.ಎಂ ನ   ನಿವೃತ್ತ ಪ್ರೊಫೆಸರ್ ಡಾ.ಬಿ.ಶೇಖರ್, ಪ್ರಗತಿಪರ ಬೇಸಾಯಗಾರರಾದ ಕುಂಕಲ ಕೃಷ್ಣಯ್ಯ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು.                                   ಈ ಸಂದರ್ಭದಲ್ಲಿ ಪೂಜ್ಯ ವೈ ಏಕಾಂತ ರಾಮ್,ಡಾ.ವೈ ನರಹರಿ, ಈಶ್ವರಗೆರೆ ರಂಗನಾಥ್, ರಾಜೇಶ್ವರಿ, ಲಾವಣ್ಯ, ಪದ್ಮಶ್ರೀ, ರವಿಶಂಕರ್ , ಯಾದಾಟಿ ಚೇತನ್, ದೇವರಾಜರೆಡ್ಡಿ, ರಾಮಚಂದ್ರಪ್ಪ , ಮಲ್ಲಿಕಾರ್ಜುನಪ್ಪ , ರೇವಣಸಿದ್ದಪ್ಪ , ಯತೀಶ್ ಎಂ ಸಿದ್ಧಾಪುರ, ಸುಹಾಸ್,ವೈಭವ, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಗಂಗಾಧರಶೆಟ್ಟಿ, ನಾಗಲಕ್ಷ್ಮೀ, ಶಾಂತಮ್ಮ , ನಗರಂಗೆರೆ ಮಹೇಶ್ ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • *“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು *ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ*
    4
    *“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ”
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ.
ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು.
ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು.
*“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು.
ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು.
ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು.
ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು:
ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು
ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ
ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಆಸ್ಪತ್ರೆಯ ಚಿಕಿತ್ಸೆಗೆ ನೆರವು
ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ
ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ
ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ -
ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ.
ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ…
ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ.
ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು”
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ.
ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು.
ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು.
*“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು.
ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು.
ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು.
ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು:
ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು
ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ
ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಆಸ್ಪತ್ರೆಯ ಚಿಕಿತ್ಸೆಗೆ ನೆರವು
*ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ
ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ
ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ -
ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ.
ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ…
ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ.
ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ.
ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ-
ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ.
ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ.
ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ.
ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ:
ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು.
ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ…
ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ.
ಅವರ ಜೀವನ ನಮಗೆ ಹೇಳುವುದು-
ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ.
ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು.
ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ…
ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ…
ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ.
*ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ.
ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ-
ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ.
ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ.
ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ.
ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ:
ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು.
ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ…
ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ.
ಅವರ ಜೀವನ ನಮಗೆ ಹೇಳುವುದು-
ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ.
ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು.
ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ…
ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ…
ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ.
*ನಾಗರಾಜ್ ಕಲ್ಲಹಲ್ಲಿ*
    user_Nagaraja kallhalli
    Nagaraja kallhalli
    Content Creator (YouTuber) ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    3 hrs ago
  • ಕೆಂಭಾವಿ ಬಳಿ ಘೋರ ದುರಂತ: ನೀರು ಪಾಲಾದ ನಾಲ್ವರು ಕಂದಮ್ಮಗಳು #JB_News_Kannada
    1
    ಕೆಂಭಾವಿ ಬಳಿ ಘೋರ ದುರಂತ: ನೀರು ಪಾಲಾದ ನಾಲ್ವರು ಕಂದಮ್ಮಗಳು
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    7 hrs ago
  • ತುಮಕೂರು ಜಿಲ್ಲೆಯ ಕೋರ ಹೋಬಳಿಯ ಮಾವುಕೆರೆಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 30, 2026 ರಂದು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು. ಇದು ಈ ಭಾಗದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು  ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು .
    2
    ತುಮಕೂರು ಜಿಲ್ಲೆಯ ಕೋರ ಹೋಬಳಿಯ ಮಾವುಕೆರೆಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 30, 2026 ರಂದು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು. ಇದು ಈ ಭಾಗದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು  ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು .
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    5 hrs ago
  • ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    3
    ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ.
ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    10 hrs ago
  • ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.
    1
    ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ.
ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. 
ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    6 hrs ago
  • ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವೇಳೆ 12 ವರ್ಷದ ಕೀರ್ತನ ಎಂಬ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ಮಾಹಿತಿಯಂತೆ, ಮೂವರು ಬಾಲಕರು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು, ಈ ವೇಳೆ ಕೀರ್ತನ ನೀರಿನಲ್ಲಿ ಮುಳುಗಿದ್ದಾನೆ. ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ತಿಳಿದು ತಳಕು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    1
    ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವೇಳೆ 12 ವರ್ಷದ ಕೀರ್ತನ ಎಂಬ ಬಾಲಕ ಮುಳುಗಿ ಮೃತಪಟ್ಟಿದ್ದಾನೆ.
ಮಾಹಿತಿಯಂತೆ, ಮೂವರು ಬಾಲಕರು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು, ಈ ವೇಳೆ ಕೀರ್ತನ ನೀರಿನಲ್ಲಿ ಮುಳುಗಿದ್ದಾನೆ. ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದು ತಳಕು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.