logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಕಾರಿಪುರ ತಾಲೂಕಿನ ಜಾವಗಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಗಾಳಿ ದುರ್ಗಾದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ ಮಾಡಿದ ಸಂಸದ ಬಿ.ವೈ. ರಾಘವೇಂದ್ರ. ಶಿಕಾರಿಪುರ ತಾಲ್ಲೂಕಿನ ಜವಗಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀಗಾಳಿ ದುರ್ಗಾದೇವಿಯ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಪುಣ್ಯ ಕಾರ್ಯಕ್ರಮದಲ್ಲಿ ಸಂಸದರಾದ ಬಿವೈ ರಾಘವೇಂದ್ರ ರವರು ಇಂದು ಪಾಲ್ಗೊಂಡು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಕುಂಭಾಭಿಷೇಕ, ದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಹೋಮ-ಹವನಗಳಲ್ಲಿ ಭಾಗಿಯಾಗಿ ನಾಡಿನ ಸುಖ-ಶಾಂತಿಗಾಗಿ ಪ್ರಾರ್ಥಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ತೊಗರ್ಸಿಯ ಮಲೆಹಿರೇಮಠದ ಶ್ರೀ ಷ|| ಬ್ರ|| ಮಹಾಂತದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚವಣ್ಣಿಗೆಮಠದ ಶ್ರೀ ಷ|| ಬ್ರ|| ಚನ್ನವೀರದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಹಲವು ಪೂಜ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

21 hrs ago
user_Press Narashimha swamy SN
Press Narashimha swamy SN
ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
21 hrs ago
0ffb2134-8d83-4d73-b1a0-221101561291

ಶಿಕಾರಿಪುರ ತಾಲೂಕಿನ ಜಾವಗಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಗಾಳಿ ದುರ್ಗಾದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ ಮಾಡಿದ ಸಂಸದ ಬಿ.ವೈ. ರಾಘವೇಂದ್ರ. ಶಿಕಾರಿಪುರ ತಾಲ್ಲೂಕಿನ ಜವಗಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀಗಾಳಿ ದುರ್ಗಾದೇವಿಯ

188edd4f-82d5-4665-952d-6d6a78c386ac

ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಪುಣ್ಯ ಕಾರ್ಯಕ್ರಮದಲ್ಲಿ ಸಂಸದರಾದ ಬಿವೈ ರಾಘವೇಂದ್ರ ರವರು ಇಂದು ಪಾಲ್ಗೊಂಡು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಕುಂಭಾಭಿಷೇಕ, ದೇವಿ ಮೂರ್ತಿಯ

17f4609f-6802-4d19-8088-5442fbee9ace

ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಹೋಮ-ಹವನಗಳಲ್ಲಿ ಭಾಗಿಯಾಗಿ ನಾಡಿನ ಸುಖ-ಶಾಂತಿಗಾಗಿ ಪ್ರಾರ್ಥಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ತೊಗರ್ಸಿಯ ಮಲೆಹಿರೇಮಠದ

0e27361d-c760-4312-b66e-7cff17a25c58

ಶ್ರೀ ಷ|| ಬ್ರ|| ಮಹಾಂತದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚವಣ್ಣಿಗೆಮಠದ ಶ್ರೀ ಷ|| ಬ್ರ|| ಚನ್ನವೀರದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಹಲವು ಪೂಜ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

More news from ಕರ್ನಾಟಕ and nearby areas
  • Post by Rahul shetty Rahul shetty Rahu
    1
    Post by Rahul shetty Rahul shetty Rahu
    user_Rahul shetty Rahul shetty Rahu
    Rahul shetty Rahul shetty Rahu
    Painter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    5 hrs ago
  • ಶಿವಮೊಗ್ಗ: ಭದ್ರಾವತಿ ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿ ರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉದ್ಘಾಟನೆ ಗೊಳಿಸದೆ ಅವಮಾನಗೊಳಿಸಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಕ್ರೋಶ ವ್ಯಕ್ತಪಡಿಸಿದರು.  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾ ಮಯ್ಯರವರು ಉದ್ಘಾಟಿಸ ಬೇಕೆಂಬುದು ಕ್ಷೇತ್ರದ ನಾಗರೀಕರ ಬೇಡಿಕೆಯಾಗಿತ್ತು. ಸಿದ್ದರಾಮಯ್ಯರವರು ಪಕ್ಕದ ತರೀಕೆರೆ ತಾಲೂಕಿನ ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದರು. ಅಲ್ಲದೆ ಬಾಳೆ ಹೊನ್ನೂರಿನ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದಾರೆ. ಆದರೆ ಈ ಕ್ಷೇತ್ರಕ್ಕೆ ಆಗಮಿ ಸದೆ ಅಂಬೇಡ್ಕರ್‌ರವರಿಗೆ ಅವಮಾನಗೊಳಿಸಿದ್ದಾರೆ. ಕ್ಷೇತ್ರದ ಎಂಪಿಎಂ ಅಭಿವೃದ್ಧಿಪಡಿಸುವು ದಾಗಿ ಭರವಸೆ ನೀಡಿದ್ದ ಸಿದ್ದರಾಮ ಯ್ಯರವರು ಇದುವರೆಗೂ ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯವಹಿಸಿ ರುವುದು ಖಂಡನೀಯ. ಪದೇ ಪದೇ ಕ್ಷೇತ್ರದ ಜನರಿಗೆ ಅವಮಾನ ಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರ ವಿರುದ್ಧ ಪ್ರತಿಭಟನೆ ನಡೆಸುವು ದಾಗಿ ಎಚ್ಚರಿಸಿದರು.  ಅಂಬೇಡ್ಕರ್ ಭವನ ನಿರ್ಮಾಣ ದಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್, ಸಂಸದ ಬಿ.ವೈ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿದ ಹಾಗು ಉದ್ಘಾಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬ ರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅಂಬೇಡ್ಕರ್ ಭವನ ಕ್ಕಾಗಿ ಹೋರಾಟ ನಡೆಸಿದ ನಿಜವಾದ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಈ ಹಿನ್ನಲೆ ಯಲ್ಲಿ ಜೂ.21 ರಂದು ಹೋರಾಟ ಗಾರರಾದ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನೆನಪಿನಲ್ಲಿ ಅಂಬೇಡ್ಕರ್ ಭವನ ದಲ್ಲಿ ಸಮಿತಿಯಿಂದ ನಿಜವಾದ ಹೋರಾಟಗಾರ ರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.  ಕಳೆದ 2 ದಿನಗಳ ಹಿಂದೆ ನಿಧನ ಹೊಂದಿದ ಸಮಿತಿ ಕಾರ್ಯಾಧ್ಯಕ್ಷ ರಾದ ಐ.ಎಲ್ ಅರುಣ್ ಕುಮಾರ್ ಅವರು, ಕಳೆದ 50 ವರ್ಷಗಳಿಂದ ದೀನ ದಲಿತರ ಸೇವೆ ಸಲ್ಲಿಸುತ್ತಾ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನ ತುಂಬಾ ನೋವುಂಟು ಮಾಡಿದ್ದು, ಸಮಿತಿ ಪದಾಧಿಕಾರಿ ಗಳು, ಸದಸ್ಯರು ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ನಗರಸಭೆ ಮಾಜಿ ಸದಸ್ಯೆ ಶೋಭಾ ರವಿಕುಮಾರ್, ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ದಲಿತ ಮುಖಂಡರಾದ ವಿಜಿಯಮ್ಮ ಸೇರಿದಂತೆ ಸಮಿತಿ ಪದಾಧಿ ಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
    1
    ಶಿವಮೊಗ್ಗ: ಭದ್ರಾವತಿ ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿ ರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉದ್ಘಾಟನೆ ಗೊಳಿಸದೆ ಅವಮಾನಗೊಳಿಸಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಕ್ರೋಶ ವ್ಯಕ್ತಪಡಿಸಿದರು. 
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾ ಮಯ್ಯರವರು ಉದ್ಘಾಟಿಸ ಬೇಕೆಂಬುದು ಕ್ಷೇತ್ರದ ನಾಗರೀಕರ ಬೇಡಿಕೆಯಾಗಿತ್ತು. ಸಿದ್ದರಾಮಯ್ಯರವರು ಪಕ್ಕದ ತರೀಕೆರೆ ತಾಲೂಕಿನ ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದರು. ಅಲ್ಲದೆ ಬಾಳೆ ಹೊನ್ನೂರಿನ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದಾರೆ. ಆದರೆ ಈ ಕ್ಷೇತ್ರಕ್ಕೆ ಆಗಮಿ ಸದೆ ಅಂಬೇಡ್ಕರ್‌ರವರಿಗೆ ಅವಮಾನಗೊಳಿಸಿದ್ದಾರೆ. ಕ್ಷೇತ್ರದ ಎಂಪಿಎಂ ಅಭಿವೃದ್ಧಿಪಡಿಸುವು ದಾಗಿ ಭರವಸೆ ನೀಡಿದ್ದ ಸಿದ್ದರಾಮ ಯ್ಯರವರು ಇದುವರೆಗೂ ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯವಹಿಸಿ ರುವುದು ಖಂಡನೀಯ. ಪದೇ ಪದೇ ಕ್ಷೇತ್ರದ ಜನರಿಗೆ ಅವಮಾನ ಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರ ವಿರುದ್ಧ ಪ್ರತಿಭಟನೆ ನಡೆಸುವು ದಾಗಿ ಎಚ್ಚರಿಸಿದರು. 
ಅಂಬೇಡ್ಕರ್ ಭವನ ನಿರ್ಮಾಣ ದಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್, ಸಂಸದ ಬಿ.ವೈ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿದ ಹಾಗು ಉದ್ಘಾಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬ ರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅಂಬೇಡ್ಕರ್ ಭವನ ಕ್ಕಾಗಿ ಹೋರಾಟ ನಡೆಸಿದ ನಿಜವಾದ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಈ ಹಿನ್ನಲೆ ಯಲ್ಲಿ ಜೂ.21 ರಂದು ಹೋರಾಟ ಗಾರರಾದ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನೆನಪಿನಲ್ಲಿ ಅಂಬೇಡ್ಕರ್ ಭವನ ದಲ್ಲಿ ಸಮಿತಿಯಿಂದ ನಿಜವಾದ ಹೋರಾಟಗಾರ ರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. 
ಕಳೆದ 2 ದಿನಗಳ ಹಿಂದೆ ನಿಧನ ಹೊಂದಿದ ಸಮಿತಿ ಕಾರ್ಯಾಧ್ಯಕ್ಷ ರಾದ ಐ.ಎಲ್ ಅರುಣ್ ಕುಮಾರ್ ಅವರು, ಕಳೆದ 50 ವರ್ಷಗಳಿಂದ ದೀನ ದಲಿತರ ಸೇವೆ ಸಲ್ಲಿಸುತ್ತಾ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನ ತುಂಬಾ ನೋವುಂಟು ಮಾಡಿದ್ದು, ಸಮಿತಿ ಪದಾಧಿಕಾರಿ ಗಳು, ಸದಸ್ಯರು ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ನಗರಸಭೆ ಮಾಜಿ ಸದಸ್ಯೆ ಶೋಭಾ ರವಿಕುಮಾರ್, ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ದಲಿತ ಮುಖಂಡರಾದ ವಿಜಿಯಮ್ಮ ಸೇರಿದಂತೆ ಸಮಿತಿ ಪದಾಧಿ ಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    23 hrs ago
  • ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು, ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,
    1
    ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು,
ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು,  ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
  • ಜಗಳೂರು:ಜಗಳೂರು ತಾಲ್ಲೂಕಿನಾಧ್ಯಂತ ಬಿಸಿಲಿನತಾಪಮಾನಹೆಚ್ಚುತ್ತಿದ್ದು ಜನರ ಆತಂಕಕೂಡ ಹೆಚ್ಚುತ್ತಾ ಹೋಗುತ್ತಿದೆ. ಅಬ್ಬಾ..ಅಬ್ಬಾ ಏನು ಬಿಸಿಲು ಮಾರಾಯ... ಒಂದು ಎಲೆಯೂ ಮುಸುಕುತ್ತಿಲ್ಲಾ ಎನ್ನುವ ಮಾತು ಜನರ ಬಾಯಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ ! ಎಂದು ಕಾಣವೋ ಇಂತದೊಂದು ಬಿಸಿಲು ಎನ್ನುತ್ತ ಅವರಿಗೆ ಮನಸ್ಸಿಗೆ ಎಲ್ಲಿ ನೆಮ್ಮದಿ ಅನ್ನಿಸುತ್ತದೊ ಅಲ್ಲಿ ಕುಳಿತು ಉಸ್ಸು ಬುಸ್ಸು ಎನ್ನುತ್ತಾ ಗಾಳಿ ಹೊಡೆದು ಕೊಳ್ಳುತ್ತಾ ಮುಂದೆ ಸಾಗುತ್ತಾರೆ... ಇಂತಾ ಬಿಸಿಲಿನ‌ ಜಳಕ್ಕೆ ಕುಳಿತೊವರು ಉಂಟೆ ಎಂಬಂತೆ ಮೈಹಿಗೆ ತೀಟೆ ಸೊಪ್ಪು ಅಚ್ಚಿಸಿಕೊಂಡವರ ರೀತಿ... ಗಾಳಿಯನ್ನು ಹೊಡೆದು ಕೊಳ್ಳುತ್ತಾ ಕಾಲಕಳೆಯುವ ಪರಿಸ್ಥಿತಿಯಾಗಿದೆ ನಮ್ಮ ಜನರ ಪಾಡು.... ಇನ್ನೂ ಮುಂಗಾರು ಎಂಟ್ರಿಕೊಟ್ರೆ... ತುಸು ಸೆಕೆ ಕಡಿಮೆಯಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.
    2
    ಜಗಳೂರು:ಜಗಳೂರು ತಾಲ್ಲೂಕಿನಾಧ್ಯಂತ ಬಿಸಿಲಿನತಾಪಮಾನಹೆಚ್ಚುತ್ತಿದ್ದು ಜನರ ಆತಂಕಕೂಡ ಹೆಚ್ಚುತ್ತಾ ಹೋಗುತ್ತಿದೆ. ಅಬ್ಬಾ..ಅಬ್ಬಾ ಏನು ಬಿಸಿಲು ಮಾರಾಯ... ಒಂದು ಎಲೆಯೂ ಮುಸುಕುತ್ತಿಲ್ಲಾ ಎನ್ನುವ ಮಾತು ಜನರ ಬಾಯಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ !
ಎಂದು ಕಾಣವೋ ಇಂತದೊಂದು ಬಿಸಿಲು ಎನ್ನುತ್ತ ಅವರಿಗೆ ಮನಸ್ಸಿಗೆ ಎಲ್ಲಿ ನೆಮ್ಮದಿ ಅನ್ನಿಸುತ್ತದೊ ಅಲ್ಲಿ ಕುಳಿತು ಉಸ್ಸು ಬುಸ್ಸು ಎನ್ನುತ್ತಾ ಗಾಳಿ ಹೊಡೆದು ಕೊಳ್ಳುತ್ತಾ ಮುಂದೆ ಸಾಗುತ್ತಾರೆ...
ಇಂತಾ ಬಿಸಿಲಿನ‌ ಜಳಕ್ಕೆ ಕುಳಿತೊವರು ಉಂಟೆ ಎಂಬಂತೆ ಮೈಹಿಗೆ ತೀಟೆ ಸೊಪ್ಪು ಅಚ್ಚಿಸಿಕೊಂಡವರ ರೀತಿ... ಗಾಳಿಯನ್ನು ಹೊಡೆದು ಕೊಳ್ಳುತ್ತಾ ಕಾಲಕಳೆಯುವ ಪರಿಸ್ಥಿತಿಯಾಗಿದೆ ನಮ್ಮ ಜನರ ಪಾಡು....
ಇನ್ನೂ ಮುಂಗಾರು ಎಂಟ್ರಿಕೊಟ್ರೆ... ತುಸು ಸೆಕೆ ಕಡಿಮೆಯಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.
    user_Basavaraja B Press Reporter APB
    Basavaraja B Press Reporter APB
    Newspaper publisher ಜಗಳೂರು, ದಾವಣಗೆರೆ, ಕರ್ನಾಟಕ•
    2 hrs ago
  • nagaraja is good for gowda jpn
    1
    nagaraja is good for gowda jpn
    user_Jpngowda
    Jpngowda
    Farmer ಜಗಳೂರು, ದಾವಣಗೆರೆ, ಕರ್ನಾಟಕ•
    17 hrs ago
  • Post by Nitin 9071795156 press reporte
    1
    Post by Nitin 9071795156 press reporte
    user_Nitin 9071795156 press reporte
    Nitin 9071795156 press reporte
    Press advisory ಕಳಘಟಗಿ, ಧಾರವಾಡ, ಕರ್ನಾಟಕ•
    23 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಬನ್ನಿ ನಮ್ಮನ್ನು ಸಂಪರ್ಕಿಸಿ
    3
    ಬನ್ನಿ ನಮ್ಮನ್ನು ಸಂಪರ್ಕಿಸಿ
    user_Dharma cv
    Dharma cv
    ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.