ಗಜಪಡೆಯ ದಸರಾ ಪಯಣಕ್ಕೆ ಬುಧವಾರ ವೀರನಹೊಸಹಳ್ಳಿಯಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಹುಣಸೂರು: ಮೈಸೂರು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಗಜಪಡೆಯ ದಸರಾ ಪಯಣಕ್ಕೆ ಬುಧವಾರ ವೀರನಹೊಸಹಳ್ಳಿಯಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಈ ವೇಳೆ ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ, ಶಾಸಕ ಅನಿಲ್ ಚಿಕ್ಕಮಾದು. ಶಾಸಕ ರಾದ ಹರೀಶ್ ಗೌಡ, ಡಿ.ರವಿಶಂಕರ್, ಎಂಎಲ್ ಸಿ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಭೋವಿ ನಿಗಮದ ಅಧ್ಯಕ್ಷ ರಾಮಪ್ಪ ಭೋವಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಸಿಇಒ ಯುಕೇಶ್ ಕುಮಾರ್, ಐಜಿಪಿ ಬೋರಲಿಂಗಯ್ಯ, ಎಸ್.ಪಿ .ಮಲ್ಲಿಕಾರ್ಜುನ ಬಾಲದಂಡಿ. ಎಎಸ್ ಪಿ ಮಲ್ಲಿಕ್, ಡಿವೈಎಸ್ ಪಿ ರವಿ ಸೇರಿದಂತೆ ಗಣ್ಯರಿದ್ದರು. ಸಮಾರಂಭದಲ್ಲಿ ಅಭಿಮನ್ಯುವಿನ ಮಾವುತ ಹಾಗೂ ಕವಾಡಿಗಳನ್ನು ಸನ್ಮಾನಿಸಿ ಅರ್ಜನ ಪ್ರಶಸ್ತಿ ನೀಡಿ ಸಚಿವರು ಗೌರವಿಸಿದರು. ಮೊದಲ ಹಂತದಲ್ಲಿ ಶ್ರೀರಾಮ,ಏಕಲವ್ಯ,ಶ್ರಿಕಂಠ,ಮಹೇಂದ್ರ,ಲಕ್ಷ್ಮೀ,ಕಾವೇರಿ,ಪ್ರಶಾಂತ,ಧನಂಜಯ,ಗೋಪಿ ಆನೆಗಳ ಜತೆಯಲ್ಲಿ ಆಭಿಮನ್ಯು ಸಹ ಅರಮನೆಯತ್ತ ಪ್ರಯಾಣ ಬೆಳೆಸಿವೆ 6 ಬಾರಿ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿಭಾಯಿಸಿದ್ದ ಕ್ಯಾಪ್ಟನ್ ಅಭಿಮನ್ಯುವಿಗೆ ಗಜಪಯಣದಲ್ಲಿ ಗೌರವಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿಯ ಗಜಪಯಣ ಕಾರ್ಯಕ್ರಮದಲ್ಲಿ ದಸರಾ ಆನೆಗಳಿಗೆ ಸ್ವಾಗತ ಕಾರ್ಯಕ್ರಮ ನಡೆದರೆ, 60 ವರ್ಷ ದಾಟಿರುವ ಅಭಿಮನ್ಯುವಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಮೈಸೂರು ದಸರಾ ಮಹೋತ್ಸವದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಅಭಿಮನ್ಯು, ದಸರಾ ಮಹೋತ್ಸವದಲ್ಲಿ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ಚಿನ್ನದ ಅಂಬಾರಿ ಹೊರುವ ಪ್ರತಿಷ್ಠಿತ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಕಳೆದ ಆರು ವರ್ಷಗಳಿಂದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ ಅಭಿಮನ್ಯುವಿನ ಗಾಂಭೀರ್ಯ, ಶಾಂತ ಸ್ವಭಾವ, ಶಿಸ್ತು ಹಾಗೂ ನಿಯಂತ್ರಿತ ನಡಿಗೆ ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿದೆ. ಅಭಿಮನ್ಯುವಿನ ವಿಶಿಷ್ಟ ಹಾಗೂ ಅಮೂಲ್ಯ ಸೇವೆಯನ್ನು ಗುರುತಿಸಿ 2026ರ ಗಜಪಯಣ ಕಾರ್ಯಕ್ರಮದಲ್ಲಿ ಅಭಿಮನ್ಯು ಆನೆಗೆ ಔಪಚಾರಿಕ ಗೌರವ ಸಲ್ಲಿಸಿ ಗೌರವಪೂರ್ವಕವಾಗಿ ಬೀಳ್ಕೊಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದೆ. ಗಜಪಯಣಕ್ಕೆ ಚಾಲನೆಗೂ ಮುನ್ನ ನಾಗರಹೊಳೆ ಉದ್ಯಾನದ ಬಳ್ಳೆ ಸಾಕಾನೆ ಶಿಬಿರದಿಂದ ಹೊರಟ ಮಹೇಂದ್ರ ಹಾಗೂ ಲಕ್ಷ್ಮೀ ಆನೆಗಳಿಗೆ ಮಾಸ್ತಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಆರ್ ಎಫ್‌ಒ ಸಿದ್ದರಾಜು, ಡಿಆರ್ ಎಫ್‌ಒ ಚಂದ್ರು ಹಾಗೂ ಸಿಬಂದಿಗಳಿದ್ದರು.

- ಅಭಿಮನ್ಯುವಿಗೆ ಗೌರವದ ಬೀಳ್ಕೊಡುಗೆ: ವೀರನಹೊಸಹಳ್ಳಿಯಲ್ಲಿ ಭಾವುಕ ಕ್ಷಣ ಮೈಸೂರು ದಸರಾ ಜಂಬೂಸವಾರಿಯಲ್ಲಿ ಹಲವು ವರ್ಷಗಳ ಕಾಲ ಅಂಬಾರಿ ಹೊತ್ತು ನಾಡಿನ ಗಮನ ಸೆಳೆದ ದಸರಾ ಆನೆ ಅಭಿಮನ್ಯುವಿಗೆ ವೀರನಹೊಸಹಳ್ಳಿಯಲ್ಲಿ ಗೌರವದ ಬೀಳ್ಕೊಡುಗೆ ನೀಡಲಾಯಿತು. 2026ರ ದಸರಾ ಗಜಪಯಣಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅಭಿಮನ್ಯುವಿನ ದೀರ್ಘಕಾಲದ ಸೇವೆಯನ್ನು ಗಣ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಮರಿಸಿದರು. ದಸರಾ ಆನೆಗಳ ಪಯಣಕ್ಕೆ ಆಗಮಿಸಿದ್ದ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಅಭಿಮನ್ಯುವಿಗೆ ಗೌರವ ಸಲ್ಲಿಸಿದರು. ಈ ವೇಳೆ ಅಭಿಮನ್ಯುವಿನ ಸೇವೆಯನ್ನು ನೆನಪಿಸಿಕೊಂಡು ಭಾವುಕ ವಾತಾವರಣ ನಿರ್ಮಾಣವಾಗಿತ್ತು.1
- ಟಾಕ್ಸಿಕ್ ಯಶಸ್ಸಿಗೆ ರಕ್ತದಾನ; ಯಶ್ ಅಭಿಮಾನಿಗಳ ವಿಭಿನ್ನ ಶುಭಾಶಯ ಮೈಸೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಶುಭಕೋರಿದ್ದಾರೆ. ಸಿನಿಮಾ ಯಶಸ್ಸಿಗಾಗಿ ಕೇವಲ ಸಂಭ್ರಮಾಚರಣೆ ನಡೆಸುವುದಕ್ಕೆ ಸೀಮಿತವಾಗದೆ, ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಗರದ ಸಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಯಶ್ ಅಭಿಮಾನಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ, ಕಟೌಟ್‌ಗಳಿಗೆ ಹಾರ ಹಾಕುವುದು, ಪಟಾಕಿ ಸಿಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ ಮೈಸೂರಿನ ಯಶ್ ಅಭಿಮಾನಿಗಳು ಈ ಬಾರಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯದ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು. ರಕ್ತದಾನದ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ. ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಯಶ್ ಅವರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ‘ಟಾಕ್ಸಿಕ್’ ಚಿತ್ರ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂಬ ಆಶಯದಿಂದ ಈ ಮಾನವೀಯ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಭಿಮಾನ ಎಂದರೆ ಕೇವಲ ಸಂಭ್ರಮಿಸುವುದಲ್ಲ; ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದೂ ಅಭಿಮಾನದ ಒಂದು ರೂಪ ಎಂಬ ಸಂದೇಶವನ್ನು ಶಿಬಿರದ ಮೂಲಕ ಸಾರಲಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ಸಲ್ಲಿಸಿದರು. ಸಿನಿಮಾ ಯಶಸ್ವಿಯಾಗುವುದರ ಜೊತೆಗೆ ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇದರಿಂದ ನಡೆಯಿತು. ಯಶ್ ಅವರ ಚಿತ್ರ ಬಿಡುಗಡೆ ಸಂಭ್ರಮವನ್ನು ಸಾಮಾಜಿಕ ಸೇವೆಯೊಂದಿಗೆ ಬೆಸೆದ ಅಭಿಮಾನಿಗಳ ಈ ನಡೆ ಸಾರ್ವಜನಿಕರ ಗಮನ ಸೆಳೆಯಿತು.1
- ಮಡಿಕೇರಿ ನಗರದ ಮಂಗಳಾದೇವಿ ನಗರ ಮತ್ತು ಕ್ರಸ್ಟಲ್ ಕೋರ್ಟ್ ಹಿಂಬಾಗ ರಸ್ತೆಯಲ್ಲೆ ಹರಿಯುತ್ತಿರುವ ನೀರು ಜಿಲ್ಲೆಯಲ್ಲಿ ಮಾಘ ಮಳೆ ಚುರುಕುಗೊಂಡಿದ್ದು ಎಲ್ಲೆಡೆ ನೀರು ತುಂಬಿ ಹರಿಯುತ್ತಿದೆ. ಮಡಿಕೇರಿ ನಗರದ ಮಂಗಳಾದೇವಿ ನಗರ, ಕ್ರಿಸ್ಟಲ್ ಕೋರ್ಟ್ ಹಿಂಬಾಗದ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದೆ ಮಳೆ ನೀರು ರಸ್ತೆಯ ಮೇಲೆಯೇ ಉಕ್ಕಿ ಹರಿಯುತ್ತಿದೆ. ಇದರಿಂದ ಸಂಚಾರಕ್ಕೆ ತೊಡಕುಂಟಾಗಿದೆ.1
- ಮಾಮರ ಸೌಹಾರ್ದ ಸಹಕಾರ ಸಂಘದ ವತಿಯಿಂದ ಸದಸ್ಯರಿಗೆ ಅಗತ್ಯ ಎಲ್ಲಾ ಮೂಲ ಸೌಲಭ್ಯಗಳ ನೀಡಲಾಗುತ್ತಿದೆ ಮಳವಳ್ಳಿಯಲ್ಲಿ ಉಪಾಧ್ಯಕ್ಷ ಗುರುಮೂರ್ತಿ ಹೇಳಿಕೆ ಮಾಮರ ಸೌಹಾರ್ದ ಸಹಕಾರ ಸಂಘವು ಸದಸ್ಯರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಉಪಾಧ್ಯಕ್ಷ ಗುರುಮೂರ್ತಿ ಸೌಲಭ್ಯಗಳ ಕುರಿತು ಮಾಹಿತಿ1
- ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ರಸ್ತೆತಡೆ ನಡೆಸಿ ಅಕ್ರೋಶ ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ದ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ಅಕ್ರೋಶ ರಾಷ್ಟ್ರೀಯ ಜಲನೀತಿ ಜಾರಿಗೆ ಶ್ರೀನಿವಾಸಗೌಡ ಆಗ್ರಹ ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು ಆರೋಪಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಎಳ್ಳು, ನೀರು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ನಗರದ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸತ್ತು ಹೋಗಿದೆ ಎಂದು ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ನಿರ್ವಹಣಾ ಸಮಿತಿಯ ಒಬ್ಬ ಸದಸ್ಯರು ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಜಲಾಶಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿಲ್ಲ. ಅಧ್ಯಯನ ಮಾಡಿಲ್ಲ. ಕರ್ನಾಟಕದಲ್ಲಿ ಮಳೆ ಆಗಿದೆಯೋ, ಇಲ್ಲವೋ ಪರಿಶೀಲನೆ ಮಾಡಿಲ್ಲ ಅದನ್ನು ಬಿಟ್ಟು ದೆಹಲಿಯಲ್ಲಿ ಕುಳಿತು ನೀರು ಬಿಡಿ, ನೀರು ಬಿಡಿ ಎಂದರೆ ಎಲ್ಲಿಂದ ನೀರು ಬಿಡುವುದು ಎಂದು ಕಿಡಿಕಾರಿದರು. ಕರ್ನಾಟಕದ ಜಲಾಶಯಗಳು ಬತ್ತಿ ಹೋಗುತ್ತಿವೆ. ರಾಜ್ಯದಲ್ಲಿ ಜನತೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ.ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಇದ್ದಾರೆ. ಎರಡು ರಾಜ್ಯಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಿದೆ ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಪು ನೀಡುವುದು ಅತ್ಯಂತ ಖಂಡನೀಯ ವಾದದ್ದು,ತಕ್ಷಣವೇ ಕಾವೇರಿ ನೀರು ನಿರ್ವಹಣಾ ಮಂಡಳಿ ವಜಾಮಾಡಿ ರಾಷ್ಟ್ರೀಯ ಜಲನೀತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನವರು ಕಾವೇರಿ ನೀರಿನ ವಿಚಾರದಲ್ಲಿ ಪದೇಪದೇ ಖ್ಯಾತೆ ತೆಗೆಯುವುದು ಸರಿಯಲ್ಲ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಪುಣಜನೂರು ಗೇಟ್ ಬಂದ್ ಮಾಡಿ ತಮಿಳುನಾಡಿನ ವಾಹನ, ಉತ್ಪನ್ನ, ಸಿನಿಮಾ ಪ್ರದರ್ಶನ ತಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಾ.ಮುರಳಿ, ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿ ರಾಜು, ರಾಚಪ್ಪ, ಜಗದೀಶ್, ತಾಂಡವಮೂರ್ತಿ, ಆಟೋ ಲಿಂಗರಾಜು, ನಂಜುಂಡಸ್ವಾಮಿ, ಮುತ್ತಿಗೆ ಗೋವಿಂದ ರಾಜು, ಇತರರು ಭಾಗವಹಿಸಿದ್ದರು.3
- ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಎಸ್ ದೊಡ್ಡಿ ಬಳಿ ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.2
- All About,A serious question for those party members who are seriously demanding a ministerial berth for their leaders *ಭಾರತ ನಲ್ಲಿ ವೈರಲ್*1
- ಗೋ ಹತ್ಯೆ ವಿರುದ್ಧ ಹೋರಾಟಕ್ಕೆ ಮೈಸೂರಿಗೆ ಪುನೀತ್ ಕೆರೆಹಳ್ಳಿ ಆಗಮನ ಜಿಲ್ಲಾಧಿಕಾರಿ ಕಚೇರಿ ಬಳಿ ಬಂಧನ ಮೈಸೂರಿನಲ್ಲಿ ಗೋ ಹತ್ಯೆ ವಿರೋಧಿಸಿ ಪ್ರತಿಭಟನೆ ನಡೆಸಲು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಆಗಮಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಪುನೀತ್ ಕೆರೆಹಳ್ಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಗೋ ರಫ್ತು ಮತ್ತು ಗೋ ಮಾರಾಟ ತಡೆಯಬೇಕು, ಗೋ ಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಮೈಸೂರಿನ ಉದಯಗಿರಿ ಭಾಗದಲ್ಲಿ ಗೋ ಹತ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದ ಪುನೀತ್ ಕೆರೆಹಳ್ಳಿ, ಗೋ ಹತ್ಯೆ ತಡೆಗೆ ಆದೇಶಗಳಿದ್ದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಈ ನಡುವೆ ಜಿಲ್ಲಾಧಿಕಾರಿ ಕಚೇರಿ ಬಳಿ ಪುನೀತ್ ಕೆರೆಹಳ್ಳಿ ಹಾಗೂ ಅವರ ಜೊತೆಗಿದ್ದ ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಂಧನಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯಾರು ಏನೇ ಮಾಡಿದರೂ ಗೋ ಹತ್ಯೆ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಪುನೀತ್ ಕೆರೆಹಳ್ಳಿ ಹೇಳಿದ್ದಾರೆ.1
- ಮಳವಳ್ಳಿಯಲ್ಲಿ ಮಾಮರ ಸೌಹಾರ್ದ ಸಹಕಾರ ಸಂಘದ ಸ್ಥಾಪನೆ ಕುರಿತು ಅಧ್ಯಕ್ಷ ಎಮ್ ಶಿವಕುಮಾರ್ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮನದಾಳದ ಮಾತು ಮಾಮರ ಸೌಹಾರ್ದ ಸಹಕಾರ ಸಂಘದ ಸ್ಥಾಪನೆಯ ಕುರಿತು ಅಧ್ಯಕ್ಷ ಎಂ ಶಿವಕುಮಾರ್ ಮನದಾಳದ ಮಾತು1