ಮೂಲ ಮಾಲೀಕರಂತೆ ನಟಿಸಿ ಕೃಷಿ ಜಮೀನು ಎಲ್ಲಾ ಮಾರಾಟ: ಆರೋಪಿತನ ಬಂಧನ ಮೂಲ ಮಾಲೀಕರಂತೆ ನಟಿಸಿ ಮತ್ತೊಬ್ಬರ ಹೆಸರಿನಲ್ಲಿದ್ದ ಕೃಷಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚನೆ ಮಾಡಿದ ಆರೋಪದ ಮೇಲೆ 64 ವರ್ಷದ ವ್ಯಕ್ತಿಯನ್ನು ಬೆಳಗಾವಿ ನಗರದ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆನಂದ ಮೋರೆ (64), ಕಲ್ಲೇಶ್ವರ ಗಲ್ಲಿ, ಸೋನಾರವಾಡಿ, ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ ಎಂದು ಗುರುತಿಸಲಾಗಿದೆ. ಈ ಕುರಿತು ಚಂದ್ರಕಾಂತ ರಾಮಚಂದ್ರ ಬಡಮಂಜಿ (64), ಉದ್ಯಮಬಾಗ, ಬೆಳಗಾವಿ ಅವರು ಮಾರ್ಕೆಟ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಅಪರಾಧ ಸಂಖ್ಯೆ 250/2025ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸ್ ಪ್ರಕಟಣೆಯ ಪ್ರಕಾರ, ಉಚ್ಚಗಾಂವ್ ಹೋಬಳಿಯ ಕೊಂಡಾಳ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೇ ನಂ. 60/*/13ರ ಒಟ್ಟು 1 ಎಕರೆ ಕೃಷಿ ಜಮೀನನ್ನು ಪಿರ್ಯಾದಿದಾರರು ಗಣಪತಿ ಶಂಕರ ಗವಳ ಮತ್ತು ಮಾರುತಿ ದೇವಜ ಗವಳ ಅವರಿಂದ ಖರೀದಿಸಿಕೊಂಡು ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದರು. ಈ ಜಮೀನನ್ನು ಕಬಳಿಸುವ ಉದ್ದೇಶದಿಂದ ಆರೋಪಿತ ಆನಂದ ಮೋರೆ, 16 ಜುಲೈ 2025ರಂದು ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖರೀದಿ ಪತ್ರ ನೋಂದಣಿ ಮಾಡಿ, ಪಿರ್ಯಾದಿದಾರರಿಗೆ ಸೇರಿದ ಕೃಷಿ ಜಮೀನನ್ನು ಬೇರೆಯವರಿಗೆ ಸೇಲ್ ಡೀಡ್ ಮಾಡಿಕೊಟ್ಟು ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನನ್ನು 24 ಆಗಸ್ಟ್ 2026ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಾರ್ಕೆಟ್ ಉಪವಿಭಾಗದ ಎಸಿಪಿ ಸಂತೋಷ ಸತ್ಯನಾಯಕ ಅವರ ಮಾರ್ಗದರ್ಶನದಲ್ಲಿ, ಮಾರ್ಕೆಟ್ ಠಾಣೆಯ ಪಿಐ ಜೆ.ಎಂ. ಕಾಲಮಿರ್ಚಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್‌ಐಗಳಾದ ಮಣಿಕಂಠ ಪೂಜಾರಿ, ಎಚ್.ಎಲ್. ಕೇರೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಆರೋಪಿತನ ಬಂಧನ ಹಾಗೂ ಪ್ರಕರಣದ ತನಿಖಾ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.
ಮೂಲ ಮಾಲೀಕರಂತೆ ನಟಿಸಿ ಕೃಷಿ ಜಮೀನು ಎಲ್ಲಾ ಮಾರಾಟ: ಆರೋಪಿತನ ಬಂಧನ ಮೂಲ ಮಾಲೀಕರಂತೆ ನಟಿಸಿ ಮತ್ತೊಬ್ಬರ ಹೆಸರಿನಲ್ಲಿದ್ದ ಕೃಷಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚನೆ ಮಾಡಿದ ಆರೋಪದ ಮೇಲೆ 64 ವರ್ಷದ ವ್ಯಕ್ತಿಯನ್ನು ಬೆಳಗಾವಿ ನಗರದ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆನಂದ ಮೋರೆ (64), ಕಲ್ಲೇಶ್ವರ ಗಲ್ಲಿ, ಸೋನಾರವಾಡಿ, ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ ಎಂದು ಗುರುತಿಸಲಾಗಿದೆ. ಈ ಕುರಿತು ಚಂದ್ರಕಾಂತ ರಾಮಚಂದ್ರ ಬಡಮಂಜಿ (64), ಉದ್ಯಮಬಾಗ, ಬೆಳಗಾವಿ ಅವರು ಮಾರ್ಕೆಟ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಅಪರಾಧ ಸಂಖ್ಯೆ 250/2025ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸ್ ಪ್ರಕಟಣೆಯ ಪ್ರಕಾರ, ಉಚ್ಚಗಾಂವ್ ಹೋಬಳಿಯ ಕೊಂಡಾಳ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೇ ನಂ. 60/*/13ರ ಒಟ್ಟು 1 ಎಕರೆ ಕೃಷಿ ಜಮೀನನ್ನು ಪಿರ್ಯಾದಿದಾರರು ಗಣಪತಿ ಶಂಕರ ಗವಳ ಮತ್ತು ಮಾರುತಿ ದೇವಜ ಗವಳ ಅವರಿಂದ ಖರೀದಿಸಿಕೊಂಡು ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದರು. ಈ ಜಮೀನನ್ನು ಕಬಳಿಸುವ ಉದ್ದೇಶದಿಂದ ಆರೋಪಿತ ಆನಂದ ಮೋರೆ, 16 ಜುಲೈ 2025ರಂದು ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖರೀದಿ ಪತ್ರ ನೋಂದಣಿ ಮಾಡಿ, ಪಿರ್ಯಾದಿದಾರರಿಗೆ ಸೇರಿದ ಕೃಷಿ ಜಮೀನನ್ನು ಬೇರೆಯವರಿಗೆ ಸೇಲ್ ಡೀಡ್ ಮಾಡಿಕೊಟ್ಟು ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನನ್ನು 24 ಆಗಸ್ಟ್ 2026ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಾರ್ಕೆಟ್ ಉಪವಿಭಾಗದ ಎಸಿಪಿ ಸಂತೋಷ ಸತ್ಯನಾಯಕ ಅವರ ಮಾರ್ಗದರ್ಶನದಲ್ಲಿ, ಮಾರ್ಕೆಟ್ ಠಾಣೆಯ ಪಿಐ ಜೆ.ಎಂ. ಕಾಲಮಿರ್ಚಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್‌ಐಗಳಾದ ಮಣಿಕಂಠ ಪೂಜಾರಿ, ಎಚ್.ಎಲ್. ಕೇರೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಆರೋಪಿತನ ಬಂಧನ ಹಾಗೂ ಪ್ರಕರಣದ ತನಿಖಾ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.
- "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..! ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..! 🙏4
- ಮುಂದಿನ ತಿಂಗಳ ಮೊದಲ ಶನಿವಾರ ಲೋಕಾಪುರದಲ್ಲಿ ಪ್ರಜಾಸೇವಾ ಆಂದೋಲನ ಮುಧೋಳ : ಸರ್ಕಾರದ ಮಟ್ಟದಲ್ಲಿ ನೂತನವಾಗಿ ಕಾರ್ಯರಂಭಗೊಂಡಿರುವ ಪ್ರಜಾಸೇವಾ ಇಲಾಖೆಯಿಂದ ಸೆ.5ರಂದು ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಆರಂಭಗೊಳ್ಳಲಿದೆ ಎಂದು ತಹಶಿಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಶನಿವಾರ ಆಯ್ದ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಮೊದಲ ಹಾಗೂ ಎರಡನೇ ಶನಿವಾರ ಸಚಿವರು ಆಂದೋಲನ ಹಮ್ಮಿಕೊಳ್ಳುವ ಗ್ರಾಮವನ್ನು ಆಯ್ಕೆ ಮಾಡುತ್ತಾರೆ. ಎರಡು ಹಾಗೂ ಮೂರನೇ ಶನಿವಾರ ಶಾಸಕರಯ ಸ್ಥಳ ಆಯ್ಕೆ ಮಾಡಲಿದ್ದಾರೆ ಎಂದರು. ಆಂದೋಲನದ ವೇಳೆ ಸರ್ಕಾರವೇ ಜನರ ಬಳಿ ತೆರಳಿ ಅವರ ಕುಂದುಕೊರತೆ ಆಲಿಸಿ ಪರಿಹಾರ ಕಲ್ಪಿಸಲಿದೆ ಎಂದರು. ಮುಧೋಳ ತಾಲೂಕಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಪ್ರಜಾ ಸೇವಾ ಆಂದೋಲನದ ಸ್ಥಳಗಳನ್ನು ನಿಗಿದಿ ಮಾಡಲಾಗಿದೆ ಎಂದು ತಿಳಿಸಿದ ಅವರು, ಮೊದಲ ಶನಿವಾರ ಲೋಕಾಪುರ, ಎರಡನೇ ಶನುವಾರ ಮುಧೋಳ, ಮೂರನೇ ಶನಿವಾರ ಬೆಳಗಲಿ ಹಾಗೂ ಕೊನೆಯ ಶನಿವಾರ ಮಂಟೂರ ಗ್ರಾಮದಲ್ಲಿ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.1
- ಸಂಸ್ಥಾಪಕ ಅಧ್ಯಕ್ಷರು ಯೋಧರ ಮಡಿಲು ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಮತ್ತು ಜೆಎಂ ಸ್ಪೋರ್ಟ್ಸ್ ಕ್ಲಬ್ ಮುಗಳಕೋಡ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ, ವಿದ್ಯಾರ್ಥಿಗಳ ಬಸ್ ಸೌಲಭ್ಯದ ಕೊರತೆಯಿಂದ ಉಂಟಾಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕಬೇಕು ಎಂಬ ಸದುದ್ದೇಶದಿಂದ ಧ್ವನಿ ಎತ್ತಿ ಹೋರಾಟ ನಡೆಸಲಾಯಿತು ವಿದ್ಯಾರ್ಥಿಗಳ ಹಿತಕ್ಕಾಗಿ ಸ್ಪಂದಿಸಿ ಅಗತ್ಯ ಸಹಕಾರ ನೀಡಿದ KSRTC ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಲಿ ಎಂಬ ಆಶಯದೊಂದಿಗೆ ಕೈಗೊಂಡ ಈ ಸಮಾಜಮುಖಿ ಪ್ರಯತ್ನವು ಜನಸೇವೆಯ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ.” 🙏🚌✊1
- ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 🎙️ ನಿಮ್ಮ ಸಿಂಪಲ್ ಸಿದ್ದು ವಾಹಿನಿ “ನಿಮ್ಮ ನಾಯಕ – ನಿಮ್ಮ ಮುಂದೆ” ವಿಶೇಷ ಸಂದರ್ಶನ ಕಾರ್ಯಕ್ರಮ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 9743340230 shuru news ನಿಮ್ಮ ಸಿಂಪಲ್ ಸಿದ್ದು 97433402301
- ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.1
- *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ಆರಂಭದಲ್ಲೇ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಅಗತ್ಯವಿರುವ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಕೋರಲಾಗಿದೆ. ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅನುಮತಿ ಪಡೆಯಲು ಕೊಂಚ ವಿಳಂಬವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭೂಸ್ವಾಧೀನ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು. ವಿಜಯಪುರ ವಿಮಾನ ನಿಲ್ದಾಣವನ್ನು ಏರ್‌ಬಸ್-320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ₹618.75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗೆ ಅನುದಾನ ಒದಗಿಸಲಾಗುತ್ತಿದೆ. ಕಾಮಗಾರಿಯ ಮೇಲ್ವಿಚಾರಣೆಗೆ ಕೆಎಸ್‌ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು. ಲೋಕೋಪ ಯೋಗಿ ಇಲಾಖೆಯಿಂದಲೇ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರನ್ನಾಗಿ (PMC) ನೇಮಕ ಮಾಡಲಾಗಿದೆ ಎಂದರು. ಪರಿಸರ ಇಲಾಖೆಯ ಅನುಮತಿ ಇಲ್ಲದಿರುವುದು ಹಾಗೂ ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದಾಗಿ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮೂರು ವಾರಗಳ ಹಿಂದೆಯಷ್ಟೇ ತಡೆಯಾಜ್ಞೆ ತೆರವಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.1
- ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ1
- ಗೂಗಲ್,ದೇವದುರ್ಗ ಭಾರತ ದೇಶದ ಗ್ರಾಮಗಳು ಭಾಷೆ Download PDF ವೀಕ್ಷಿಸಿ ಸಂಪಾದಿಸಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಹಳ್ಳಿ. ಈ ಊರು ಕೃಷ್ಣ ನದಿಯ ದಂಡೆಯ ಮೇಲಿದೆ, ಅಲ್ಲಮಪ್ರಭು ಅವರ ಒಂದು ಗುಹಾಂತರ ಗುಡಿಯಿದೆ ಇಲ್ಲಿ. ದೊಡ್ಡ ಕಲ್ಲಿನ ಗವಿ ಇದೆ. 'ಗುಹೆಕಲ್ಲು' ಎಂಬ ಪದ ಕಾಲ ಸರಿದಂತೆ 'ಗೂಗಲ್ಲು'ಆಗಿರಬಹುದೆಂಬುದು ಒಂದು ಅನಿಸಿಕೆ. ಹೊಳೆಯ ನೀರು ಕಲ್ಲುಗಳಿಗೆ ಅಪ್ಪಳಿಸಿದಾಗ ಸಂಗೀತದ ಸದ್ದು ಹೊಮ್ಮುತ್ತದೆ. ರಾಯಚೂರಿನಿಂದ ೫೬ ಕಿಮೀ ದೂರದಲ್ಲಿದೆ. ತಾಲೂಕು ಕೇಂದ್ರ ದಿಂದ ೨೫ ಕಿ.ಮೀ. ಇಲ್ಲಿ ಅಲ್ಲಮಪ್ರಭು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಗೂಗಲ್,ದೇವದುರ್ಗ ಭಾರತ ದೇಶದ ಗ್ರಾಮಗಳು ಭಾಷೆ Download PDF ವೀಕ್ಷಿಸಿ ಸಂಪಾದಿಸಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಹಳ್ಳಿ. ಈ ಊರು ಕೃಷ್ಣ ನದಿಯ ದಂಡೆಯ ಮೇಲಿದೆ, ಅಲ್ಲಮಪ್ರಭು ಅವರ ಒಂದು ಗುಹಾಂತರ ಗುಡಿಯಿದೆ ಇಲ್ಲಿ. ದೊಡ್ಡ ಕಲ್ಲಿನ ಗವಿ ಇದೆ. 'ಗುಹೆಕಲ್ಲು' ಎಂಬ ಪದ ಕಾಲ ಸರಿದಂತೆ 'ಗೂಗಲ್ಲು'ಆಗಿರಬಹುದೆಂಬುದು ಒಂದು ಅನಿಸಿಕೆ. ಹೊಳೆಯ ನೀರು ಕಲ್ಲುಗಳಿಗೆ ಅಪ್ಪಳಿಸಿದಾಗ ಸಂಗೀತದ ಸದ್ದು ಹೊಮ್ಮುತ್ತದೆ. ರಾಯಚೂರಿನಿಂದ ೫೬ ಕಿಮೀ ದೂರದಲ್ಲಿದೆ. ತಾಲೂಕು ಕೇಂದ್ರ ದಿಂದ ೨೫ ಕಿ.ಮೀ. ಇಲ್ಲಿ ಅಲ್ಲಮಪ್ರಭು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.1