logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಒಂದೇ ಒಂದು ಅಂಶವಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಕಿಡಿ *ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರೆ, ದೇಶಕ್ಕೆ ತೊಂದರೆ* *ಬರ ವಿಚಾರದಲ್ಲಿ ರಾಜಕೀಯ ಮಾಡಿದರೆ ಅರ್ಥವಿಲ್ಲ* ಬೆಂಗಳೂರು, ಸೆ. 15: "ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ. ಅವರದ್ದು ಕೇವಲ ರಾಜಕೀಯ ಮನಸ್ಥಿತಿ. ಅವರನ್ನು ಸರಿಪಡಿಸಲು ಆಗುವುದಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕಿಡಿಕಾರಿದರು. ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ವಂದೇ ಮಾತರಂ ವಿಚಾರವಾಗಿ ಬಿಜೆಪಿ ಹೋರಾಟಕ್ಕೆ ಕರೆ ನೀಡಿರುವ ಬಗ್ಗೆ ಕೇಳಿದಾಗ, "ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವ ಪ್ರವೃತ್ತಿ ಬಿಜೆಪಿ ನಾಯಕರದ್ದು. ಒಬ್ಬ ಪೊಲೀಸ್ ಅಧಿಕಾರಿ ಏನು ತಪ್ಪು ಮಾತನಾಡಿದ್ದಾರೆ? ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ. ಅದಕ್ಕೆ ಬಿಜೆಪಿಯವರು ಮಹಾರಾಜರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಪಂಚಾಯಿತಿ ಮಟ್ಟದ ವಿಚಾರಕ್ಕೆ ವಿರೋಧ ಪಕ್ಷದ ನಾಯಕರು ಹೋಗಿದ್ದು, ಅವರು ಈ ಮಟ್ಟಕ್ಕೆ ಇಳಿದಿದ್ದು ಯಾಕೆ ಎಂದು ನನಗೆ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ ಸಂವಿಧಾನಿಕ ಹುದ್ದೆ. ಅವರಿಂದ ಇನ್ನು ಉನ್ನತ ನಡೆ ನಿರೀಕ್ಷೆ ಮಾಡುತ್ತಿದ್ದೇನೆ" ಎಂದು ತಿಳಿಸಿದರು. "ಅವರು ಹೇಳಿದರು ಎಂದು ಪ್ರಹ್ಲಾದ್ ಜೋಶಿಯಿಂದ ಎಲ್ಲರೂ ಟ್ವೀಟ್ ಮಾಡಿದ್ದಾರೆ. ಸಮಾಜದಲ್ಲಿ ಕಾನೂನು ಪಾಲನೆ ಮಾಡಬೇಕಾಗಿರುವುದು ಯಾರು? ಬಿಜೆಪಿಯವರು ಜನರನ್ನ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದು, ಇನ್ನಾದರೂ ಇದನ್ನು ಬಿಡಲಿ. ಭಾರತವನ್ನು ಕರ್ನಾಟಕದ ಮೂಲಕ ಗೌರವ ಸಿಗುತ್ತಿದ್ದು, ಇಲ್ಲಿ ಅಹಿತಕರ ಘಟನೆ ನಡೆದರೆ ತೊಂದರೆ ಆಗುವುದು ಭಾರತಕ್ಕೆ. ಪ್ರಧಾನ ಮಂತ್ರಿಗಳು ದೇಶದ ಬಗ್ಗೆ ಕಾಣುತ್ತಿರುವ ಕನಸಿಗೆ ಇಲ್ಲಿನ ಬಿಜೆಪಿ ನಾಯಕರು ಧಕ್ಕೆ ತರುವಂತೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಮಾಡುವುದನ್ನು ಮಾಡಿ, ಹೋರಾಟ ಮಾಡಿ. ಆದರೆ ಅಶಾಂತಿ ಮೂಡಿಸಿ, ರಾಜ್ಯಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ ಎಂದು ಮನವಿ ಮಾಡುವೆ" ಎಂದು ತಿಳಿಸಿದರು. *ಬರ ವಿಚಾರದಲ್ಲಿ ರಾಜಕೀಯ ಮಾಡಿದರೆ ಅರ್ಥವಿಲ್ಲ* ದಿನೇ ದಿನೆ ಮಳೆ ಕಡಿಮೆಯಾಗುತ್ತಿರುವ ಬಗ್ಗೆ ಕೇಳಿದಾಗ, "ಮಳೆ ಕ್ಷೀಣಿಸುತ್ತಿದೆ. ಶಾಸಕರು ಆತಂಕಪಡುವ ಅಗತ್ಯವಿಲ್ಲ. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಕೆಲವರು ರಾಜಕೀಯಕ್ಕೆ ಈ ಪರಿಸ್ಥಿತಿ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಶೀಲನೆಗೆ ಬಂದಾಗ ವರದಿ ತಪ್ಪಾಗಿರಬಾರದು. ಕೆಲವು ಭಾಗದಲ್ಲಿ ಅಧ್ಯಯನ ಆಗಿದ್ದು, ಉಳಿದ ಕಡೆ ವರದಿ ಸಿದ್ಧವಾಗುತ್ತಿದೆ. ಒಂದು ವಾರ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು, ಆದರೆ ಕೆಲ ಭಾಗದಲ್ಲಿ ಸ್ವಲ್ಪ ಮಳೆ ಆಗಿದ್ದು, ಹೇಳಿಕೊಳುವಂತೆ ಆಗಿಲ್ಲ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಜನರನ್ನು ಮಾನಸಿಕವಾಗಿ ಸಿದ್ಧಪಡಿಸಿ, ಕುಡಿಯುವ ನೀರು ಪೂರೈಕೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ರೈತರ ಜೊತೆ ಚರ್ಚೆ ಮಾಡಿ ಇನ್ನಷ್ಟು ಘೋಷಣೆ ಮಾಡಲಾಗುವುದು" ಎಂದು ಹೇಳಿದರು.

8 hrs ago
user_Lavanya
Lavanya
Local News Reporter ಪಾವಗಡ, ತುಮಕೂರು, ಕರ್ನಾಟಕ•
8 hrs ago
f1be34d4-a9fe-4699-921e-6aae44477982

ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಒಂದೇ ಒಂದು ಅಂಶವಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಕಿಡಿ *ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರೆ, ದೇಶಕ್ಕೆ ತೊಂದರೆ* *ಬರ ವಿಚಾರದಲ್ಲಿ ರಾಜಕೀಯ ಮಾಡಿದರೆ ಅರ್ಥವಿಲ್ಲ* ಬೆಂಗಳೂರು, ಸೆ. 15: "ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ. ಅವರದ್ದು ಕೇವಲ ರಾಜಕೀಯ ಮನಸ್ಥಿತಿ. ಅವರನ್ನು ಸರಿಪಡಿಸಲು ಆಗುವುದಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕಿಡಿಕಾರಿದರು. ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ವಂದೇ ಮಾತರಂ ವಿಚಾರವಾಗಿ ಬಿಜೆಪಿ ಹೋರಾಟಕ್ಕೆ ಕರೆ ನೀಡಿರುವ ಬಗ್ಗೆ ಕೇಳಿದಾಗ, "ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವ ಪ್ರವೃತ್ತಿ ಬಿಜೆಪಿ ನಾಯಕರದ್ದು. ಒಬ್ಬ ಪೊಲೀಸ್ ಅಧಿಕಾರಿ ಏನು ತಪ್ಪು ಮಾತನಾಡಿದ್ದಾರೆ? ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ. ಅದಕ್ಕೆ ಬಿಜೆಪಿಯವರು ಮಹಾರಾಜರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಪಂಚಾಯಿತಿ ಮಟ್ಟದ ವಿಚಾರಕ್ಕೆ ವಿರೋಧ ಪಕ್ಷದ ನಾಯಕರು ಹೋಗಿದ್ದು, ಅವರು ಈ ಮಟ್ಟಕ್ಕೆ ಇಳಿದಿದ್ದು ಯಾಕೆ ಎಂದು ನನಗೆ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ ಸಂವಿಧಾನಿಕ ಹುದ್ದೆ. ಅವರಿಂದ ಇನ್ನು ಉನ್ನತ ನಡೆ ನಿರೀಕ್ಷೆ ಮಾಡುತ್ತಿದ್ದೇನೆ" ಎಂದು ತಿಳಿಸಿದರು. "ಅವರು ಹೇಳಿದರು ಎಂದು ಪ್ರಹ್ಲಾದ್ ಜೋಶಿಯಿಂದ ಎಲ್ಲರೂ ಟ್ವೀಟ್ ಮಾಡಿದ್ದಾರೆ. ಸಮಾಜದಲ್ಲಿ ಕಾನೂನು ಪಾಲನೆ ಮಾಡಬೇಕಾಗಿರುವುದು ಯಾರು? ಬಿಜೆಪಿಯವರು ಜನರನ್ನ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದು, ಇನ್ನಾದರೂ ಇದನ್ನು ಬಿಡಲಿ. ಭಾರತವನ್ನು ಕರ್ನಾಟಕದ ಮೂಲಕ ಗೌರವ ಸಿಗುತ್ತಿದ್ದು, ಇಲ್ಲಿ ಅಹಿತಕರ ಘಟನೆ ನಡೆದರೆ ತೊಂದರೆ ಆಗುವುದು ಭಾರತಕ್ಕೆ. ಪ್ರಧಾನ ಮಂತ್ರಿಗಳು ದೇಶದ ಬಗ್ಗೆ ಕಾಣುತ್ತಿರುವ ಕನಸಿಗೆ ಇಲ್ಲಿನ ಬಿಜೆಪಿ ನಾಯಕರು ಧಕ್ಕೆ ತರುವಂತೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಮಾಡುವುದನ್ನು ಮಾಡಿ, ಹೋರಾಟ ಮಾಡಿ. ಆದರೆ ಅಶಾಂತಿ ಮೂಡಿಸಿ, ರಾಜ್ಯಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ ಎಂದು ಮನವಿ ಮಾಡುವೆ" ಎಂದು ತಿಳಿಸಿದರು. *ಬರ ವಿಚಾರದಲ್ಲಿ ರಾಜಕೀಯ ಮಾಡಿದರೆ ಅರ್ಥವಿಲ್ಲ* ದಿನೇ ದಿನೆ ಮಳೆ ಕಡಿಮೆಯಾಗುತ್ತಿರುವ ಬಗ್ಗೆ ಕೇಳಿದಾಗ, "ಮಳೆ ಕ್ಷೀಣಿಸುತ್ತಿದೆ. ಶಾಸಕರು ಆತಂಕಪಡುವ ಅಗತ್ಯವಿಲ್ಲ. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಕೆಲವರು ರಾಜಕೀಯಕ್ಕೆ ಈ ಪರಿಸ್ಥಿತಿ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಶೀಲನೆಗೆ ಬಂದಾಗ ವರದಿ ತಪ್ಪಾಗಿರಬಾರದು. ಕೆಲವು ಭಾಗದಲ್ಲಿ ಅಧ್ಯಯನ ಆಗಿದ್ದು, ಉಳಿದ ಕಡೆ ವರದಿ ಸಿದ್ಧವಾಗುತ್ತಿದೆ. ಒಂದು ವಾರ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು, ಆದರೆ ಕೆಲ ಭಾಗದಲ್ಲಿ ಸ್ವಲ್ಪ ಮಳೆ ಆಗಿದ್ದು, ಹೇಳಿಕೊಳುವಂತೆ ಆಗಿಲ್ಲ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಜನರನ್ನು ಮಾನಸಿಕವಾಗಿ ಸಿದ್ಧಪಡಿಸಿ, ಕುಡಿಯುವ ನೀರು ಪೂರೈಕೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ರೈತರ ಜೊತೆ ಚರ್ಚೆ ಮಾಡಿ ಇನ್ನಷ್ಟು ಘೋಷಣೆ ಮಾಡಲಾಗುವುದು" ಎಂದು ಹೇಳಿದರು.

More news from ಕರ್ನಾಟಕ and nearby areas
  • ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಾಂಕಗಳಂದು ವಿಸರ್ಜನೆ ಮಾಡಲಿದ್ದು, ಮೆರವಣಿಗೆ ಸಂದರ್ಭದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್, ಪಟಾಕಿ /ಸಿಡಿಮದ್ದುಗಳನ್ನು ಸಿಡಿಸುವುದರಿಂದ, ಮೆರವಣಿಗೆ ಮಾರ್ಗದಲ್ಲಿರುವ ಪ್ರಾರ್ಥನಾ ಸ್ಥಳಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ. ಮಕ್ಕಳಿಗೆ ತೊಂದರೆಯಾಗುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 35. 36ರಡಿಯಲ್ಲಿ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಅಕ್ಟೋಬರ್ 5 ರವರೆಗೆ ಚಿತ್ರದುರ್ಗ ಜಿಲ್ಲೆಯಾದ್ಯಾಂತ ಎಲ್ಲಾ ರೀತಿಯ ಕಲರ್ ಪೇಪರ್ బ్లాస్టింగా. ಪಟಾಕಿ ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ.
    1
    ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ
ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. 
ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಾಂಕಗಳಂದು ವಿಸರ್ಜನೆ ಮಾಡಲಿದ್ದು, ಮೆರವಣಿಗೆ ಸಂದರ್ಭದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್, ಪಟಾಕಿ /ಸಿಡಿಮದ್ದುಗಳನ್ನು ಸಿಡಿಸುವುದರಿಂದ, ಮೆರವಣಿಗೆ ಮಾರ್ಗದಲ್ಲಿರುವ ಪ್ರಾರ್ಥನಾ ಸ್ಥಳಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ. ಮಕ್ಕಳಿಗೆ ತೊಂದರೆಯಾಗುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 35. 36ರಡಿಯಲ್ಲಿ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಅಕ್ಟೋಬರ್ 5 ರವರೆಗೆ ಚಿತ್ರದುರ್ಗ ಜಿಲ್ಲೆಯಾದ್ಯಾಂತ ಎಲ್ಲಾ ರೀತಿಯ ಕಲರ್ ಪೇಪರ್ బ్లాస్టింగా. ಪಟಾಕಿ ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    44 min ago
  • ಲಕ್ಷಾಂತರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ ಎರಡು ರಾಜ್ಯಗಳನ್ನು ಬೆಸುವ ಗೌರಸಮುದ್ರ ಮಾರಮ್ಮ ಜಾತ್ರೆ
    1
    ಲಕ್ಷಾಂತರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ ಎರಡು ರಾಜ್ಯಗಳನ್ನು ಬೆಸುವ ಗೌರಸಮುದ್ರ ಮಾರಮ್ಮ ಜಾತ್ರೆ
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಮಸೀದಿ ಮುಂದೆ ಯಾಕೆ ಪಟಾಕಿ ಹೊಡಿಬೇಕು ಧನಂಜಯ್ ಹೇಳಿಕೆಯನ್ನ ಸಮರ್ಥಮಾಡಿಕೊಂಡ ಶಾಸಕ ಹರೀಶ್ ಗೌಡ ಮಸೀದಿ ಮುಂದೆ ಯಾಕೆ ಪಟಾಕಿ ಹೊಡಿಬೇಕು ಧನಂಜಯ್ ಹೇಳಿಕೆಯನ್ನ ಸಮರ್ಥಮಾಡಿಕೊಂಡ ಶಾಸಕ ಹರೀಶ್ ಗೌಡ
    1
    ಮಸೀದಿ ಮುಂದೆ ಯಾಕೆ ಪಟಾಕಿ ಹೊಡಿಬೇಕು ಧನಂಜಯ್ 
ಹೇಳಿಕೆಯನ್ನ ಸಮರ್ಥಮಾಡಿಕೊಂಡ ಶಾಸಕ ಹರೀಶ್ ಗೌಡ 
ಮಸೀದಿ ಮುಂದೆ ಯಾಕೆ ಪಟಾಕಿ ಹೊಡಿಬೇಕು ಧನಂಜಯ್ 
ಹೇಳಿಕೆಯನ್ನ ಸಮರ್ಥಮಾಡಿಕೊಂಡ ಶಾಸಕ ಹರೀಶ್ ಗೌಡ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    55 min ago
  • ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ . ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ . 44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ 44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ
    1
    ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ
ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ .
ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ .
44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ 
ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ
44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ
    user_Darshan
    Darshan
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .
    1
    ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ

ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ  ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ  ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    13 hrs ago
  • ಪಕ್ಕ ಲವರ್’ ಸಿನಿಮಾ ಶುರು! 🎬 ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ! ಸಿನಿಮಾ ನಿರ್ಮಾಣಕ್ಕಿಂತ ಪ್ರಮೋಷನ್ ಮುಖ್ಯ! ಬಳ್ಳಾರಿಯ ಸ್ಥಳೀಯ ಪ್ರತಿಭೆಗಳನ್ನೇ ಒಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಂಡಿದೆ. 🎬 ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚಿತ್ರದ ನಿರ್ದೇಶಕ ಕೋಳೂರು ಶೇಖರ್ ಹೇಳಿದ್ದಾರೆ. ಚಿತ್ರದ ಶೇ.30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಲಿದೆ. ಚಿತ್ರದ ನಾಯಕ ನಟ ಅವಿನಾಶ್, ‘ಪಕ್ಕ ಲವರ್’ ಸಿನಿಮಾ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಉದ್ಯಮಿ ಹಾಗೂ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಸಿನಿಮಾ ನಿರ್ಮಾಣದಷ್ಟೇ ಪ್ರಮೋಷನ್‌ಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 👉 ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎನ್ನುವ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ. ASN NEWS24 ಕನ್ನಡ – ಸುತ್ತಮುತ್ತ ನಡೆಯುವ ಸುದ್ದಿ ನಿಮ್ಮ ಮುಂದೆ. #PakkaLover #PakkaLoverMovie #KannadaMovie #KannadaCinema #KannadaFilm #Ballari #BallariNews #Bellary #KannadaNews #KannadaFilmIndustry #LocalTalent #LocalArtists #Avinash #KannadaActor #FilmPromotion #Sandalwood #SandalwoodNews #KarnatakaNews #ASNNews24 #ASNNews24Kannada
    1
    ಪಕ್ಕ ಲವರ್’ ಸಿನಿಮಾ ಶುರು! 🎬
ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ!
ಸಿನಿಮಾ ನಿರ್ಮಾಣಕ್ಕಿಂತ ಪ್ರಮೋಷನ್ ಮುಖ್ಯ!
ಬಳ್ಳಾರಿಯ ಸ್ಥಳೀಯ ಪ್ರತಿಭೆಗಳನ್ನೇ ಒಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಂಡಿದೆ. 🎬
ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚಿತ್ರದ ನಿರ್ದೇಶಕ ಕೋಳೂರು ಶೇಖರ್ ಹೇಳಿದ್ದಾರೆ.
ಚಿತ್ರದ ಶೇ.30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಲಿದೆ.
ಚಿತ್ರದ ನಾಯಕ ನಟ ಅವಿನಾಶ್, ‘ಪಕ್ಕ ಲವರ್’ ಸಿನಿಮಾ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಉದ್ಯಮಿ ಹಾಗೂ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಸಿನಿಮಾ ನಿರ್ಮಾಣದಷ್ಟೇ ಪ್ರಮೋಷನ್‌ಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
👉 ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎನ್ನುವ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ.
ASN NEWS24 ಕನ್ನಡ – ಸುತ್ತಮುತ್ತ ನಡೆಯುವ ಸುದ್ದಿ ನಿಮ್ಮ ಮುಂದೆ.
#PakkaLover #PakkaLoverMovie #KannadaMovie #KannadaCinema #KannadaFilm #Ballari #BallariNews #Bellary #KannadaNews #KannadaFilmIndustry #LocalTalent #LocalArtists #Avinash #KannadaActor #FilmPromotion #Sandalwood #SandalwoodNews #KarnatakaNews #ASNNews24 #ASNNews24Kannada
    user_AsnNews24Kannada
    AsnNews24Kannada
    Local News Reporter Ballari, Karnataka•
    15 hrs ago
  • ₹2,000 ಮೇಲ್ಪಟ್ಟ UPI ಪಾವತಿಗೆ ಹೊಸ ಶುಲ್ಕ? ಅಕ್ಟೋಬರ್ 5ರಿಂದ MDR ನಿಯಮ; NPCI ಸ್ಪಷ್ಟನೆ ₹2,000 ಮೇಲ್ಪಟ್ಟ UPI ಪಾವತಿಗೆ ಹೊಸ ಶುಲ್ಕ? ಅಕ್ಟೋಬರ್ 5ರಿಂದ MDR ನಿಯಮ; NPCI ಸ್ಪಷ್ಟನೆ
    1
    ₹2,000 ಮೇಲ್ಪಟ್ಟ UPI ಪಾವತಿಗೆ ಹೊಸ ಶುಲ್ಕ?
ಅಕ್ಟೋಬರ್ 5ರಿಂದ MDR ನಿಯಮ; NPCI ಸ್ಪಷ್ಟನೆ
₹2,000 ಮೇಲ್ಪಟ್ಟ UPI ಪಾವತಿಗೆ ಹೊಸ ಶುಲ್ಕ?
ಅಕ್ಟೋಬರ್ 5ರಿಂದ MDR ನಿಯಮ; NPCI ಸ್ಪಷ್ಟನೆ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಹಲಸೂರು ಕೆರೆ ಕಲ್ಯಾಣಿಯಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ ಬೆಂಗಳೂರು:ಕೇಂದ್ರ ನಗರ ಪಾಲಿಕೆಯ ಹಲಸೂರು ಕೆರೆ ಕಲ್ಯಾಣಿಯಲ್ಲಿ ಆಹಾರ ಖಾತೆ ಸಚಿವರು ಹಾಗು ಶಿವಾಜಿನಗರ ಶಾಸಕರಾದ ರಿಜ್ವಾನ್ ಹರ್ಷದ್ ರವರು ಹಲಸೂರು ಕೆರೆ ಕಲ್ಯಾಣಿಯಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ ಇಂದು ಸಂಜೆ ನೀಡಿದರು. ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ಜಿ ರವರು ಹಾಗು ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ಆರ್ ರವರು ಉಪಸ್ಥಿತರಿದ್ದಾರೆ. ಆಯುಕ್ತರು ಅಪರ ಆಯುಕ್ತರೊಂದಿಗೆ, ಜಂಟಿ ಆಯುಕ್ತರೊಂದಿಗೆ ಹಾಗು ಮುಖ್ಯ ಇಂಜಿನಿಯರ್ ಕಾರ್ಯಪಾಲಕ ಇಂಜಿನಿಯರ್ ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳೊಂದಿಗೆ ನಿರಂತರವಾಗಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯದ ಸಿದ್ಧತೆ ಬಗ್ಗೆ ಅಧಿಕಾರಿಗಳೊಂದಿಗೆ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
    1
    ಹಲಸೂರು ಕೆರೆ ಕಲ್ಯಾಣಿಯಲ್ಲಿ  ದೊಡ್ಡ ಗಣೇಶ ಮೂರ್ತಿಗಳನ್ನು  ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ

ಬೆಂಗಳೂರು:ಕೇಂದ್ರ ನಗರ ಪಾಲಿಕೆಯ ಹಲಸೂರು ಕೆರೆ ಕಲ್ಯಾಣಿಯಲ್ಲಿ  ಆಹಾರ ಖಾತೆ ಸಚಿವರು ಹಾಗು ಶಿವಾಜಿನಗರ ಶಾಸಕರಾದ  ರಿಜ್ವಾನ್ ಹರ್ಷದ್ ರವರು ಹಲಸೂರು ಕೆರೆ ಕಲ್ಯಾಣಿಯಲ್ಲಿ  ದೊಡ್ಡ ಗಣೇಶ ಮೂರ್ತಿಗಳನ್ನು  ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ ಇಂದು ಸಂಜೆ ನೀಡಿದರು. 
ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ಜಿ ರವರು ಹಾಗು ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ಆರ್ ರವರು ಉಪಸ್ಥಿತರಿದ್ದಾರೆ.  
ಆಯುಕ್ತರು ಅಪರ ಆಯುಕ್ತರೊಂದಿಗೆ, ಜಂಟಿ ಆಯುಕ್ತರೊಂದಿಗೆ ಹಾಗು  ಮುಖ್ಯ ಇಂಜಿನಿಯರ್ ಕಾರ್ಯಪಾಲಕ ಇಂಜಿನಿಯರ್ ಪೊಲೀಸ್ ಅಧಿಕಾರಿಗಳು,  ಬೆಸ್ಕಾಂ ಅಧಿಕಾರಿಗಳೊಂದಿಗೆ ನಿರಂತರವಾಗಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯದ ಸಿದ್ಧತೆ ಬಗ್ಗೆ ಅಧಿಕಾರಿಗಳೊಂದಿಗೆ  ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    14 hrs ago
  • ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ. ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.
    1
    ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು 
ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ.
ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.