logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆಲ್ ಇಂಡಿಯಾ ಬಂಜಾರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಲಕ್ಷ್ಮಣ್ ನಾಯ್ಕ್‌ ಆಯ್ಕೆ ಕಡೂರು : ರಾಜ್ಯದ್ಯಾಂತ ಬಂಜಾರ ಸಮಾಜದ ತಾಂಡಗಳ ಸಾಮಾಜಿಕ ಪ್ರಗತಿಗೆ ಒತ್ತುಕೊಡಲು ಆಲ್ ಇಂಡಿಯಾ ಬಂಜಾರ ಸಂಘಟನೆ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯಾಧ್ಯಕ್ಷ ವಿಜಯ್‌ಜಾದವ್ ತಿಳಿಸಿದರು. ಪಟ್ಟಣದ ಎಪಿಎಂಸಿ ಆವರಣದ ಅರಿವಿನ ಮನೆ ಸೌಹಾರ್ದ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲಿನ 3390 ತಾಂಡಗಳಲ್ಲಿ ಸಂಘಟನೆಯು ಗಟ್ಟಿಗೊಳ್ಳುತ್ತಿದೆ. ಬಂಜಾರ ಸಮಾಜವು ಬಹುತೇಕ ತಾಂಡಗಳಲ್ಲಿ ಇಂದಿಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಅಂಬೇಡ್ಕರ್ ಅವರ ಸಂವಿಧಾನದ ಆಶಯದಡಿ ಸಮಾಜದ ಮುಖ್ಯವಾಹಿನಿಗೆ ಬರುವ ಸಂದರ್ಭದಲ್ಲಿ ರಾಜ್ಯ ಸರಕಾರ ಒಳಮೀಸಲಾತಿ ಮಸೂದೆ ತಂದಿರುವುದು ಬಂಜಾರ ಸಮಾಜಕ್ಕೆ ಸಾಕಷ್ಟು ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪುಟ್ಟನಾಯ್ಕ, ಬಾಸುನಾಯ್ಕ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೈಲಾಬಾಯಿ, ಯುವ ಘಟಕದ ರಾಜ್ಯಾಧ್ಯಕ್ಷ ಸುನೀಲ್ ನಾಯ್ಕ್, ರಾಜಾನಾಯ್ಕ್, ಮಂಜುನಾಥ್ ನಾಯ್ಕ, ರಘುನಾಯ್ಕ, ಜಯಂತ್ ಕುಮಾರ್ ಮತ್ತಿತರಿದ್ದರು. ಆಲ್ ಇಂಡಿಯಾ ಬಂಜಾರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಲಕ್ಷ್ಮಣ್ ನಾಯ್ಕ್, ಬಿ.‌ಟಿ. ಗಂಗಾಧರ್ ನಾಯ್ಕ್(ಜಿಲ್ಲಾ ಗೌರವಾಧ್ಯಕ್ಷ), ಹಳೆಹಟ್ಟಿ ಆನಂದ್ ನಾಯ್ಕ್(ಜಿಲ್ಲಾ ಯುವ ಘಟಕ ಅಧ್ಯಕ್ಷ), ಕವಿತಾ ರಾಹುಲ್ ನಾಯ್ಕ್(ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ), ಶ್ರೀನಿವಾಸ್ ನಾಯ್ಕ್(ಕಡೂರು ತಾಲ್ಲೂಕು ಘಟಕದ ಅಧ್ಯಕ್ಷ) ಪದಾಧಿಕಾರಿಗಳಾಗಿ ಆಯ್ಕೆಗೊಂಡರು.

1 hr ago
user_Kadur News
Kadur News
ಪತ್ರಕರ್ತ Kadur, Chikkamagaluru•
1 hr ago
318e964d-e1bf-4153-bd3b-bfe2c47fec97

ಆಲ್ ಇಂಡಿಯಾ ಬಂಜಾರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಲಕ್ಷ್ಮಣ್ ನಾಯ್ಕ್‌ ಆಯ್ಕೆ ಕಡೂರು : ರಾಜ್ಯದ್ಯಾಂತ ಬಂಜಾರ ಸಮಾಜದ ತಾಂಡಗಳ ಸಾಮಾಜಿಕ ಪ್ರಗತಿಗೆ ಒತ್ತುಕೊಡಲು ಆಲ್ ಇಂಡಿಯಾ ಬಂಜಾರ ಸಂಘಟನೆ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯಾಧ್ಯಕ್ಷ ವಿಜಯ್‌ಜಾದವ್ ತಿಳಿಸಿದರು. ಪಟ್ಟಣದ ಎಪಿಎಂಸಿ ಆವರಣದ ಅರಿವಿನ ಮನೆ ಸೌಹಾರ್ದ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,

46cadced-aea4-458d-8c48-429db402f65d

ರಾಜ್ಯದ 31 ಜಿಲ್ಲೆಗಳಲ್ಲಿನ 3390 ತಾಂಡಗಳಲ್ಲಿ ಸಂಘಟನೆಯು ಗಟ್ಟಿಗೊಳ್ಳುತ್ತಿದೆ. ಬಂಜಾರ ಸಮಾಜವು ಬಹುತೇಕ ತಾಂಡಗಳಲ್ಲಿ ಇಂದಿಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಅಂಬೇಡ್ಕರ್ ಅವರ ಸಂವಿಧಾನದ ಆಶಯದಡಿ ಸಮಾಜದ ಮುಖ್ಯವಾಹಿನಿಗೆ ಬರುವ ಸಂದರ್ಭದಲ್ಲಿ ರಾಜ್ಯ ಸರಕಾರ ಒಳಮೀಸಲಾತಿ ಮಸೂದೆ ತಂದಿರುವುದು ಬಂಜಾರ ಸಮಾಜಕ್ಕೆ ಸಾಕಷ್ಟು ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪುಟ್ಟನಾಯ್ಕ, ಬಾಸುನಾಯ್ಕ,

cda5110f-9750-4537-8532-df9d73d10eb6

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೈಲಾಬಾಯಿ, ಯುವ ಘಟಕದ ರಾಜ್ಯಾಧ್ಯಕ್ಷ ಸುನೀಲ್ ನಾಯ್ಕ್, ರಾಜಾನಾಯ್ಕ್, ಮಂಜುನಾಥ್ ನಾಯ್ಕ, ರಘುನಾಯ್ಕ, ಜಯಂತ್ ಕುಮಾರ್ ಮತ್ತಿತರಿದ್ದರು. ಆಲ್ ಇಂಡಿಯಾ ಬಂಜಾರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಲಕ್ಷ್ಮಣ್ ನಾಯ್ಕ್, ಬಿ.‌ಟಿ. ಗಂಗಾಧರ್ ನಾಯ್ಕ್(ಜಿಲ್ಲಾ ಗೌರವಾಧ್ಯಕ್ಷ), ಹಳೆಹಟ್ಟಿ ಆನಂದ್ ನಾಯ್ಕ್(ಜಿಲ್ಲಾ ಯುವ ಘಟಕ ಅಧ್ಯಕ್ಷ), ಕವಿತಾ ರಾಹುಲ್ ನಾಯ್ಕ್(ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ), ಶ್ರೀನಿವಾಸ್ ನಾಯ್ಕ್(ಕಡೂರು ತಾಲ್ಲೂಕು ಘಟಕದ ಅಧ್ಯಕ್ಷ) ಪದಾಧಿಕಾರಿಗಳಾಗಿ ಆಯ್ಕೆಗೊಂಡರು.

More news from ಕರ್ನಾಟಕ and nearby areas
  • ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ರಂಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕ್ಯಾಸ್ಟಲಿನೋ, ಬಿಎಂ ರೋಹಿಣಿ, ಮಾಜಿ‌ ಮೇಯರ್ ಕೆ. ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಸರ್ವಧರ್ಮೀಯರು ಸೇರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
    1
    ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ರಂಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕ್ಯಾಸ್ಟಲಿನೋ, ಬಿಎಂ ರೋಹಿಣಿ, ಮಾಜಿ‌ ಮೇಯರ್ ಕೆ. ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಸರ್ವಧರ್ಮೀಯರು ಸೇರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    31 min ago
  • ಚಳ್ಳಕೆರೆ, ಮಾ.10 : ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಉಪವಾಸ ಕೈಗೊಂಡಿದ್ದ ರೈತನಾಯಕ ತಿಪ್ಪೇಸ್ವಾಮಿ ತೀವ್ರ ಅಸ್ವಸ್ಥರಾಗಲು ಜಿಲ್ಲಾಧಿಕಾರಿ ಅವರೇ ನೇರ ಹೊಣೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ತಾಲ್ಲೂಕಿನ ಗರಣಿ ಕ್ರಾಸ್ ಬಳಿ ಮಂಗಳವಾರ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ರೈತರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಕೂದಲೆಳೆ ಅಂತರದಲ್ಲಿಯೇ ರೈತಸಂಘದ ಕಾರ್ಯಕರ್ತರು ಮಾ.2ರಂದು ಉಪವಾಸ ಆರಂಭಿಸಿ ಐದು ದಿನಗಳ ಕಾಲ ಮುಂದುವರಿಸಿದ್ದರೂ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಮನವೊಲಿಸುವ ಸಣ್ಣ ಪ್ರಯತ್ನವನ್ನೇ ಮಾಡಲಿಲ್ಲ ಎಂದು ದೂರಿದರು. ಪ್ರತಿದಿನ ವಿವಿಧ ಸಂಘಟನೆಗಳು ಆಗಮಿಸಿ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದರು ಸರ್ವಾಧಿಕಾರಿ ರೀತಿ ವರ್ತಿಸಿದ್ದಾರೆ. ಪರಿಣಾಮ ರೈತನಾಯಕ ಉಪವಾಸ ಸತ್ಯಾಗ್ರಹದಿಂದ ಕುಸಿದುಬಿದ್ದು ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತçಚಿಕಿತ್ಸೆಗೆ 15 ಲಕ್ಷ ರೂ. ವೆಚ್ಚವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ತಿಪ್ಪೇಸ್ವಾಮಿ ಅವರ ಆರೋಗ್ಯ ವಿಚಾರಿಸುವ ಮಾನವೀಯತೆಯನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾಡಿಲ್ಲದಿರುವುದು ಹೋರಾಟಗಾರರಿಗೆ ಅಪಮಾನ ಮಾಡುವ ನಡೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಸಾರ್ವಜನಿಕರ ಸಂಕಷ್ಟ, ಹೋರಾಟಗಾರರ ಕೂಗಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಐದು ದಿನಗಳಿಂದ ಉಪವಾಸ ನಿರತರಾಗಿದ್ದ ತಿಪ್ಪೇಸ್ವಾಮಿ ಅವರನ್ನು ಅತ್ಯಂತ ಅಪಮಾನಕರವಾಗಿ ಜಿಲ್ಲಾಧಿಕಾರಿ ನಡೆಸಿಕೊಂಡಿದ್ದಾರೆ. ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸದ ಪರಿಣಾಮ ಉಪವಾಸ ಮುಂದುವರಿಸಿದ್ದೇ ಅನಾರೋಗ್ಯಕ್ಕೆ ಒಳಗಾಗಲು ಮುಖ್ಯ ಕಾರಣ ಎಂದರು. ರೈತನಾಯಕ ಅನಾರೋಗ್ಯಕ್ಕೆ ಒಳಗಾಗಲಿ ಎಂಬ ಉದ್ದೇಶದಿಂದಲೇ ಅವರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿಲ್ಲವೆಂಬ ಸಂಶಯ ಮೂಡುತ್ತದೆ. ಇದೊಂದು ಸರ್ಕಾರಿ ವ್ಯವಸ್ಥೆ ಪರೋಕ್ಷವಾಗಿ ಕೊಲೆ ಯತ್ನ ನಡೆಸಿದೆ ಎಂದು ದೂರಿದರು. ಆಸ್ಪತ್ರೆಗೆ ಸೇರಿ ಐದು ದಿನಗಳಾಗಿದ್ದರೂ ಇಲ್ಲಿಯವರೆಗೂ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಆತ್ಮಸ್ಥೆöÊರ್ಯ ತುಂಬುವ ಕೆಲಸ ಅಧಿಕಾರಿಗಳು ಮಾಡಿಲ್ಲ. ಅಧಿಕಾರಿಗಳ ನಡೆ ಉದ್ಧಟನದಿಂದ ಕೂಡಿದೆ. ಇಂತಹ ಡಿಸಿಯನ್ನು ಯಾವುದೇ ಕಾರಣಕ್ಕೂ ಚಿತ್ರದುರ್ಗದಲ್ಲಿ ಇರಲು ಬಿಡಬಾರದು ಎಂದರು. ಟಿ.ವೆAಕಟೇಶ್ ಜಿಲ್ಲೆಗೆ ಆಗಮಿಸಿ ಎರಡೂವರೆ ವರ್ಷ ಆಗಿದ್ದರೂ ಇಲ್ಲಿಯವರೆಗೂ ಯಾವ ಕಾರಣಕ್ಕೆ ಅವರನ್ನೇ ಮುಂದುವರಿಸಲಾಗುತ್ತಿದೆ ಎಂದು ಪ್ರಶ್ನೀಸಿದ ಬಸವರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಟಿಎಂ ರೀತಿ ಬೆಂಬಲವಾಗಿ ನಿಂತಿದ್ದಾರೆ. ಈ ಕಾರಣಕ್ಕೆ ವೆಂಕಟೇಶ್ ಅವರನ್ನು ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಕೊನೇ ಪಕ್ಷ ಹೋರಾಟಗಾರರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಲಿ. ಜಿಲ್ಲೆಯ ಜನರ ಹಿತಕ್ಕಾಗಿ ಯಾವುದೇ ವ್ಯಕ್ತಿ ಚಳವಳಿ ಕೈಗೊಂಡರೇ ಅವರ ಮನವಿ ಆಲಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, ದೇಶಕ್ಕೆ ಅನ್ನ ಕೊಡುವ ರೈತ ಉಪವಾಸ ಕುಳಿತ ತಕ್ಷಣವೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕಾಗಿತ್ತು. ಆದರೆ, ಅವರು ನಿರ್ಲಕ್ಷö್ಯ ತೋರಿದ್ದರ ಪರಿಣಾಮ ರೈತನಾಯಕ ಕೆ.ಟಿ.ತಿಪ್ಪೇಸ್ವಾಮಿ ಕುಸಿದುಬಿದ್ದು ಆಸ್ಪತ್ರೆ ಸೇರುವಂತಾಗಿದೆ. ಈಗಲಾದರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಮಾನವೀಯತೆ ಪ್ರದರ್ಶಿಸಲಿ ಎಂದು ತಿಳಿಸಿದರು. ತಾಲ್ಲೂಕಾಧ್ಯಕ್ಷ ಮಲ್ಲಸಮುದ್ರ ಗಂಗಾಧರ್, ಮುಖಂಡರಾದ ಸೂರಮ್ಮನಹಳ್ಳಿ ರಾಜಣ್ಣ, ಪ್ರಶಾಂತ್‌ರೆಡ್ಡಿ, ಮಿಠ್ಯಾನಾಯ್ಕ, ಓಬನಾಯ್ಕ್, ಚಂದ್ರಶೇಖರ ನಾಯಕ, ಹೀರೇಹಳ್ಳಿ ತಿಪ್ಪೇಸ್ವಾಮಿ, ಎದ್ದಲು ತಿಪ್ಪೇಸ್ವಾಮಿ, ಪಾಪಯ್ಯ, ಬಸವರಾಜ್, ರಾಜಣ್ಣ ಇತರರಿದ್ದರು. .
    1
    ಚಳ್ಳಕೆರೆ, ಮಾ.10 : ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಉಪವಾಸ ಕೈಗೊಂಡಿದ್ದ ರೈತನಾಯಕ ತಿಪ್ಪೇಸ್ವಾಮಿ ತೀವ್ರ ಅಸ್ವಸ್ಥರಾಗಲು ಜಿಲ್ಲಾಧಿಕಾರಿ ಅವರೇ ನೇರ ಹೊಣೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು.
ತಾಲ್ಲೂಕಿನ ಗರಣಿ ಕ್ರಾಸ್ ಬಳಿ ಮಂಗಳವಾರ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ರೈತರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಕೂದಲೆಳೆ ಅಂತರದಲ್ಲಿಯೇ ರೈತಸಂಘದ ಕಾರ್ಯಕರ್ತರು ಮಾ.2ರಂದು ಉಪವಾಸ ಆರಂಭಿಸಿ ಐದು ದಿನಗಳ ಕಾಲ ಮುಂದುವರಿಸಿದ್ದರೂ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಮನವೊಲಿಸುವ ಸಣ್ಣ ಪ್ರಯತ್ನವನ್ನೇ ಮಾಡಲಿಲ್ಲ ಎಂದು ದೂರಿದರು.
ಪ್ರತಿದಿನ ವಿವಿಧ ಸಂಘಟನೆಗಳು ಆಗಮಿಸಿ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದರು ಸರ್ವಾಧಿಕಾರಿ ರೀತಿ ವರ್ತಿಸಿದ್ದಾರೆ. ಪರಿಣಾಮ ರೈತನಾಯಕ ಉಪವಾಸ ಸತ್ಯಾಗ್ರಹದಿಂದ ಕುಸಿದುಬಿದ್ದು ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತçಚಿಕಿತ್ಸೆಗೆ 15 ಲಕ್ಷ ರೂ. ವೆಚ್ಚವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ತಿಪ್ಪೇಸ್ವಾಮಿ ಅವರ ಆರೋಗ್ಯ ವಿಚಾರಿಸುವ ಮಾನವೀಯತೆಯನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾಡಿಲ್ಲದಿರುವುದು ಹೋರಾಟಗಾರರಿಗೆ ಅಪಮಾನ ಮಾಡುವ ನಡೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಸಾರ್ವಜನಿಕರ ಸಂಕಷ್ಟ, ಹೋರಾಟಗಾರರ ಕೂಗಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಐದು ದಿನಗಳಿಂದ ಉಪವಾಸ ನಿರತರಾಗಿದ್ದ ತಿಪ್ಪೇಸ್ವಾಮಿ ಅವರನ್ನು ಅತ್ಯಂತ ಅಪಮಾನಕರವಾಗಿ ಜಿಲ್ಲಾಧಿಕಾರಿ ನಡೆಸಿಕೊಂಡಿದ್ದಾರೆ. ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸದ ಪರಿಣಾಮ ಉಪವಾಸ ಮುಂದುವರಿಸಿದ್ದೇ ಅನಾರೋಗ್ಯಕ್ಕೆ ಒಳಗಾಗಲು ಮುಖ್ಯ ಕಾರಣ ಎಂದರು.
ರೈತನಾಯಕ ಅನಾರೋಗ್ಯಕ್ಕೆ ಒಳಗಾಗಲಿ ಎಂಬ ಉದ್ದೇಶದಿಂದಲೇ ಅವರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿಲ್ಲವೆಂಬ ಸಂಶಯ ಮೂಡುತ್ತದೆ. ಇದೊಂದು ಸರ್ಕಾರಿ ವ್ಯವಸ್ಥೆ ಪರೋಕ್ಷವಾಗಿ ಕೊಲೆ ಯತ್ನ ನಡೆಸಿದೆ ಎಂದು ದೂರಿದರು.
ಆಸ್ಪತ್ರೆಗೆ ಸೇರಿ ಐದು ದಿನಗಳಾಗಿದ್ದರೂ ಇಲ್ಲಿಯವರೆಗೂ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಆತ್ಮಸ್ಥೆöÊರ್ಯ ತುಂಬುವ ಕೆಲಸ ಅಧಿಕಾರಿಗಳು ಮಾಡಿಲ್ಲ. ಅಧಿಕಾರಿಗಳ ನಡೆ ಉದ್ಧಟನದಿಂದ ಕೂಡಿದೆ. ಇಂತಹ ಡಿಸಿಯನ್ನು ಯಾವುದೇ ಕಾರಣಕ್ಕೂ ಚಿತ್ರದುರ್ಗದಲ್ಲಿ ಇರಲು ಬಿಡಬಾರದು ಎಂದರು.
ಟಿ.ವೆAಕಟೇಶ್ ಜಿಲ್ಲೆಗೆ ಆಗಮಿಸಿ ಎರಡೂವರೆ ವರ್ಷ ಆಗಿದ್ದರೂ ಇಲ್ಲಿಯವರೆಗೂ ಯಾವ ಕಾರಣಕ್ಕೆ ಅವರನ್ನೇ ಮುಂದುವರಿಸಲಾಗುತ್ತಿದೆ ಎಂದು ಪ್ರಶ್ನೀಸಿದ ಬಸವರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಟಿಎಂ ರೀತಿ ಬೆಂಬಲವಾಗಿ ನಿಂತಿದ್ದಾರೆ. ಈ ಕಾರಣಕ್ಕೆ ವೆಂಕಟೇಶ್ ಅವರನ್ನು ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಕೊನೇ ಪಕ್ಷ ಹೋರಾಟಗಾರರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಲಿ. ಜಿಲ್ಲೆಯ ಜನರ ಹಿತಕ್ಕಾಗಿ ಯಾವುದೇ ವ್ಯಕ್ತಿ ಚಳವಳಿ ಕೈಗೊಂಡರೇ ಅವರ ಮನವಿ ಆಲಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, ದೇಶಕ್ಕೆ ಅನ್ನ ಕೊಡುವ ರೈತ ಉಪವಾಸ ಕುಳಿತ ತಕ್ಷಣವೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕಾಗಿತ್ತು. ಆದರೆ, ಅವರು ನಿರ್ಲಕ್ಷö್ಯ ತೋರಿದ್ದರ ಪರಿಣಾಮ ರೈತನಾಯಕ ಕೆ.ಟಿ.ತಿಪ್ಪೇಸ್ವಾಮಿ ಕುಸಿದುಬಿದ್ದು ಆಸ್ಪತ್ರೆ ಸೇರುವಂತಾಗಿದೆ. ಈಗಲಾದರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಮಾನವೀಯತೆ ಪ್ರದರ್ಶಿಸಲಿ ಎಂದು ತಿಳಿಸಿದರು.
ತಾಲ್ಲೂಕಾಧ್ಯಕ್ಷ ಮಲ್ಲಸಮುದ್ರ ಗಂಗಾಧರ್, ಮುಖಂಡರಾದ ಸೂರಮ್ಮನಹಳ್ಳಿ ರಾಜಣ್ಣ, ಪ್ರಶಾಂತ್‌ರೆಡ್ಡಿ, ಮಿಠ್ಯಾನಾಯ್ಕ, ಓಬನಾಯ್ಕ್, ಚಂದ್ರಶೇಖರ ನಾಯಕ, ಹೀರೇಹಳ್ಳಿ ತಿಪ್ಪೇಸ್ವಾಮಿ, ಎದ್ದಲು ತಿಪ್ಪೇಸ್ವಾಮಿ, ಪಾಪಯ್ಯ, ಬಸವರಾಜ್, ರಾಜಣ್ಣ ಇತರರಿದ್ದರು.
.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    22 min ago
  • ಚಿತ್ರದುರ್ಗದ ಜಿಲ್ಲಾ‌ ಆಸ್ಪತ್ರೆ ಬಳಿ ಮೃತ ಮಹಿಳೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಧಾಖಲಾಗಿದ್ದ ಮಹಿಳೆ ಹೆರಿಗೆ ನಂತರ ಮೃತಪಟ್ಟಿದ್ದು ಮಗು ಚಿಕಿತ್ಸೆ ಪಡೆಯುತ್ತಿದ್ದು ಶಿಲ್ಪ ಎಂಬ ಮಹಿಳೆ ಸಾವನ್ನಪ್ಪಿದ್ದು ಮಹಿಳೆ ಸಾವಿಗೆ ವೈದ್ಯರು ಹಾಗೂ ಜಿಲ್ಲಾ ಸರ್ಜನ್ ಅವರೆ ಕಾರಣ ಎಂದು ಆರೋಪಿಸಿದ್ದಾರೆ
    1
    ಚಿತ್ರದುರ್ಗದ ಜಿಲ್ಲಾ‌ ಆಸ್ಪತ್ರೆ ಬಳಿ ಮೃತ ಮಹಿಳೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಧಾಖಲಾಗಿದ್ದ ಮಹಿಳೆ ಹೆರಿಗೆ ನಂತರ ಮೃತಪಟ್ಟಿದ್ದು ಮಗು ಚಿಕಿತ್ಸೆ ಪಡೆಯುತ್ತಿದ್ದು ಶಿಲ್ಪ ಎಂಬ ಮಹಿಳೆ ಸಾವನ್ನಪ್ಪಿದ್ದು ಮಹಿಳೆ ಸಾವಿಗೆ ವೈದ್ಯರು ಹಾಗೂ ಜಿಲ್ಲಾ ಸರ್ಜನ್ ಅವರೆ ಕಾರಣ ಎಂದು ಆರೋಪಿಸಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲೂಕು ವರದಿಗಾರರು ಬೇಕಾಗಿದ್ದಾರೆ ಆಸಕ್ತಿಯುಳ್ಳ ಅಭ್ಯರ್ಥಿ ಸಂಪರ್ಕಿಸಿ
    1
    ಕರ್ನಾಟಕ ರಾಜ್ಯದಾದ್ಯಂತ  ಜಿಲ್ಲಾ ಹಾಗೂ ತಾಲೂಕು ವರದಿಗಾರರು ಬೇಕಾಗಿದ್ದಾರೆ ಆಸಕ್ತಿಯುಳ್ಳ ಅಭ್ಯರ್ಥಿ ಸಂಪರ್ಕಿಸಿ
    user_ರಾಷ್ಟ್ರ ಧ್ವನಿ ಟಿ ವಿ ನ್ಯೂಸ್ ಕನ್
    ರಾಷ್ಟ್ರ ಧ್ವನಿ ಟಿ ವಿ ನ್ಯೂಸ್ ಕನ್
    Graphic designer ತುಮಕೂರು, ತುಮಕೂರು, ಕರ್ನಾಟಕ•
    19 min ago
  • ದಿನಾಂಕ 8/3/2026 ಭಾನುವಾರ ಸಂಜೆ ಸ್ಟಾರ್ ಕಂನ್ಷನ್ ಹಾಲ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಹಾಗೂ ಎಸ್ ಎಸ್ ಎಫ್ ತುಮಕೂರು ಶಾಲೆ ವತಿಯಿಂದಗ್ರಾಂಡ್ ಇಫ್ತಾರ್ ಕೋಟ ಆಯೋಜಿಸಲಾಯಿತು ಇಫ್ತಾರ್ ಕೋಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವೈಕ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನ ಶಫಿ ಸಾದಿ ಅಲ್ ಮರ್ಕಸ್ ಮದೀನ ತುನ್ನೂರ್ ಲಿಲ ಬನಾಥ್ ಅರಬಿಕ್ ಸ್ಕೂಲ್ ಬಗ್ಗೆ ಮಾತನಾಡುತ್ತ ಇದರ ಏಳಿಗೆ ಬಗ್ಗೆ ಪ್ರಶಂಶಿಸಿ ಇದರ ಅಭಿವೃದ್ಧಿಗೆ ಸವನೂರ್ ಕ್ಕ ಗೊಂಡಬೇಕೆಂದರು ತುಮಕೂರಿನಲ್ಲಿ ಅಲ್ ಮರ್ಕಸ್ ಮದೀನಾ ತುನ್ ನೂರ್ ಮೂಲಕ ಶಿಕ್ಷಣ ಕಾಂತಿಯಾಗಿ ಬೇಕು ಎಂದರು
    1
    ದಿನಾಂಕ 8/3/2026 ಭಾನುವಾರ ಸಂಜೆ ಸ್ಟಾರ್ ಕಂನ್ಷನ್ ಹಾಲ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಹಾಗೂ ಎಸ್ ಎಸ್ ಎಫ್ ತುಮಕೂರು ಶಾಲೆ ವತಿಯಿಂದಗ್ರಾಂಡ್ ಇಫ್ತಾರ್ ಕೋಟ ಆಯೋಜಿಸಲಾಯಿತು ಇಫ್ತಾರ್ ಕೋಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವೈಕ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನ ಶಫಿ ಸಾದಿ ಅಲ್ ಮರ್ಕಸ್  ಮದೀನ ತುನ್ನೂರ್  ಲಿಲ ಬನಾಥ್ ಅರಬಿಕ್ ಸ್ಕೂಲ್ ಬಗ್ಗೆ ಮಾತನಾಡುತ್ತ ಇದರ ಏಳಿಗೆ ಬಗ್ಗೆ ಪ್ರಶಂಶಿಸಿ ಇದರ ಅಭಿವೃದ್ಧಿಗೆ  ಸವನೂರ್  ಕ್ಕ ಗೊಂಡಬೇಕೆಂದರು  ತುಮಕೂರಿನಲ್ಲಿ ಅಲ್ ಮರ್ಕಸ್ ಮದೀನಾ ತುನ್ ನೂರ್ ಮೂಲಕ ಶಿಕ್ಷಣ ಕಾಂತಿಯಾಗಿ ಬೇಕು ಎಂದರು
    user_Raqeeb Aamiri tumkur
    Raqeeb Aamiri tumkur
    Local News Reporter ತುಮಕೂರು, ತುಮಕೂರು, ಕರ್ನಾಟಕ•
    24 min ago
  • ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಭಕ್ತರ ಹರಿವು – ಕಾಯಿನ್ ಅಂಟಿಸಿ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥನೆ ಹೌದು ಇದು ಚಳ್ಳಕೆರೆ ತಾಲೂಕಿನ ಮಧ್ಯಾಹ್ನದ ಮಾರಮ್ಮ ಎಂದೇ ಖ್ಯಾತಿ ಪಡೆದ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕಾಗಿ ಮಂಗಳವಾರ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದರು. ತಮ್ಮ ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಯ ಗರ್ಭಗುಡಿಯ ಹಿಂಭಾಗದಲ್ಲಿ ಕಾಯಿನ್ ಅಂಟಿಸುವ ಮೂಲಕ ಅರಕೆ ತೀರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ದೇವಿಯ ಕೃಪೆಯಿಂದ ಮನಸಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಹಲವರು ಈ ವಿಧಿ ಪಾಲಿಸುತ್ತಿದ್ದಾರೆ. ಇದೇ ವೇಳೆ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಮಕ್ಕಳ ಜವಳ, ನಾಮಕರಣ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಬಾಡೂಟ ಮಾಡಿಸುವ ಸಂಪ್ರದಾಯವೂ ನಡೆಯುತ್ತಿತ್ತು. ಬಂಧು-ಬಳಗ ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
    1
    ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಭಕ್ತರ ಹರಿವು – ಕಾಯಿನ್ ಅಂಟಿಸಿ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥನೆ
ಹೌದು ಇದು ಚಳ್ಳಕೆರೆ ತಾಲೂಕಿನ ಮಧ್ಯಾಹ್ನದ ಮಾರಮ್ಮ ಎಂದೇ ಖ್ಯಾತಿ ಪಡೆದ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕಾಗಿ ಮಂಗಳವಾರ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದರು.
ತಮ್ಮ ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಯ ಗರ್ಭಗುಡಿಯ ಹಿಂಭಾಗದಲ್ಲಿ ಕಾಯಿನ್ ಅಂಟಿಸುವ ಮೂಲಕ ಅರಕೆ ತೀರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ದೇವಿಯ ಕೃಪೆಯಿಂದ ಮನಸಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಹಲವರು ಈ ವಿಧಿ ಪಾಲಿಸುತ್ತಿದ್ದಾರೆ.
ಇದೇ ವೇಳೆ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಮಕ್ಕಳ ಜವಳ, ನಾಮಕರಣ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಬಾಡೂಟ ಮಾಡಿಸುವ ಸಂಪ್ರದಾಯವೂ ನಡೆಯುತ್ತಿತ್ತು. ಬಂಧು-ಬಳಗ ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    1 hr ago
  • ಇಸ್ರೇಲ್–ಇರಾನ್ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದ್ದು, ಮೈಸೂರಿನ ಹೋಟೆಲ್ ಉದ್ಯಮಕ್ಕೆ ಆತಂಕ ಉಂಟಾಗಿದೆ. ಈಗಾಗಲೇ ಕಳೆದ ಮೂರು ವಾರಗಳಲ್ಲಿ ಅನಿಲದ ಬೆಲೆ ಏರಿಕೆಯಾಗಿದೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 1500 ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಉದ್ಯಮದ ಮೇಲೆ ಅವಲಂಬಿತರಿದ್ದಾರೆ. ಅನಿಲ ಪೂರೈಕೆ ಸಮಸ್ಯೆ ಮುಂದುವರಿದರೆ ಹಲವಾರು ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು ಎಂದು ಸಂಘ ಮನವಿ ಮಾಡಿದೆ.
    1
    ಇಸ್ರೇಲ್–ಇರಾನ್ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದ್ದು, ಮೈಸೂರಿನ ಹೋಟೆಲ್ ಉದ್ಯಮಕ್ಕೆ ಆತಂಕ ಉಂಟಾಗಿದೆ. ಈಗಾಗಲೇ ಕಳೆದ ಮೂರು ವಾರಗಳಲ್ಲಿ ಅನಿಲದ ಬೆಲೆ ಏರಿಕೆಯಾಗಿದೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸುಮಾರು 1500 ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಉದ್ಯಮದ ಮೇಲೆ ಅವಲಂಬಿತರಿದ್ದಾರೆ. ಅನಿಲ ಪೂರೈಕೆ ಸಮಸ್ಯೆ ಮುಂದುವರಿದರೆ ಹಲವಾರು ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು ಎಂದು ಸಂಘ ಮನವಿ ಮಾಡಿದೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    1 hr ago
  • ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಮೂರು ದಿನಗಳಿಂದ ಇರುವುದಾಗಿ ತಿಳಿದುಬಂದಿದೆ. ಮಾರ್ಚ್ 7 ರಂದು ಸುಬ್ರಹ್ಮಣ್ಯ ಕ್ಕೆ ಆಗಮಿಸಿದ್ದ ಅವರು ಮಾರ್ಚ್ 8 ರಂದು ಸರ್ಪ ಸಂಸ್ಕಾರ ಸೇವೆ ನಡೆಸಿದ್ದಾಗಿ ತಿಳಿದು ಬಂದಿದ್ದು, ಮಾರ್ಚ್ 9 ರಂದು ಆಶ್ಲೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಸುಬ್ರಹ್ಮಣ್ಯದ ಔರಮ್ ವಸತಿ ಗೃಹದಲ್ಲಿ ತಂಗಿದ್ದ ಅವರನ್ನು ದೇವಾಲಯ ಆಡಳಿತ ಕಛೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಗೌರವಿಸಿದರು. ಈ ಸಂದರ್ಭ ಪಿ.ಆರ್.ಒ ಜಯರಾಮ ರಾವ್, ಮನ್ಮಥ ಬಟ್ಟೋಡಿ, ಪೊಲೀಸ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
    1
    ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಮೂರು ದಿನಗಳಿಂದ ಇರುವುದಾಗಿ ತಿಳಿದುಬಂದಿದೆ. ಮಾರ್ಚ್ 7 ರಂದು ಸುಬ್ರಹ್ಮಣ್ಯ ಕ್ಕೆ ಆಗಮಿಸಿದ್ದ ಅವರು ಮಾರ್ಚ್ 8 ರಂದು ಸರ್ಪ ಸಂಸ್ಕಾರ ಸೇವೆ ನಡೆಸಿದ್ದಾಗಿ ತಿಳಿದು ಬಂದಿದ್ದು, ಮಾರ್ಚ್ 9 ರಂದು ಆಶ್ಲೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಸುಬ್ರಹ್ಮಣ್ಯದ ಔರಮ್ ವಸತಿ ಗೃಹದಲ್ಲಿ ತಂಗಿದ್ದ ಅವರನ್ನು ದೇವಾಲಯ ಆಡಳಿತ ಕಛೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಗೌರವಿಸಿದರು. ಈ ಸಂದರ್ಭ ಪಿ.ಆರ್.ಒ ಜಯರಾಮ ರಾವ್, ಮನ್ಮಥ ಬಟ್ಟೋಡಿ, ಪೊಲೀಸ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.