ಗಲಗಲಿ ಎಸ್‌ಸಿ ಕಾಲೋನಿಯಲ್ಲಿ ಸ್ವಚ್ಛತೆ ಮರೀಚಿಕೆ ಗ್ರಾಮ ಪಂಚಾಯಿತಿ ವಿರುದ್ಧ ನಿವಾಸಿಗಳ ಆಕ್ರೋಶ ಗಲಗಲಿ: ಬೀಳಗಿ ತಾಲೂಕಿನ ಗಲಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್‌ಸಿ ಕಾಲೋನಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕಾಲೋನಿಯ ವಿವಿಧೆಡೆ ಕಸ, ತ್ಯಾಜ್ಯ ಹಾಗೂ ಕೊಳಚೆ ಸಂಗ್ರಹವಾಗಿದ್ದು, ಇದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸಂಬಂಧಪಟ್ಟ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕಾಲೋನಿಯಲ್ಲಿ ನಿಯಮಿತವಾಗಿ ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಸೇರಿದಂತೆ ಅಗತ್ಯ ನೈರ್ಮಲ್ಯ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಆದರೆ, ಪದೇಪದೇ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಆಡಳಿತವು ಎಸ್‌ಸಿ ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಸಂಗ್ರಹವಾಗಿರುವ ಕಸ-ತ್ಯಾಜ್ಯ ತೆರವುಗೊಳಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ನಿಯಮಿತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗ್ರಾಮ ಪಂಚಾಯಿತಿಗೆ ಅಗತ್ಯ ನಿರ್ದೇಶನ ನೀಡಬೇಕು. ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಕಲ್ಪಿಸುವಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ಜವಾಬ್ದಾರಿ ನಿಗದಿಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಪ್ರವೀಣ್ ಛಲವಾದಿ ಒತ್ತಾಯಿಸಿದ್ದಾರೆ.
ಗಲಗಲಿ ಎಸ್‌ಸಿ ಕಾಲೋನಿಯಲ್ಲಿ ಸ್ವಚ್ಛತೆ ಮರೀಚಿಕೆ ಗ್ರಾಮ ಪಂಚಾಯಿತಿ ವಿರುದ್ಧ ನಿವಾಸಿಗಳ ಆಕ್ರೋಶ ಗಲಗಲಿ: ಬೀಳಗಿ ತಾಲೂಕಿನ ಗಲಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್‌ಸಿ ಕಾಲೋನಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕಾಲೋನಿಯ ವಿವಿಧೆಡೆ ಕಸ, ತ್ಯಾಜ್ಯ ಹಾಗೂ ಕೊಳಚೆ ಸಂಗ್ರಹವಾಗಿದ್ದು, ಇದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸಂಬಂಧಪಟ್ಟ ಸಿಬ್ಬಂದಿಗೆ
ಹಲವು ಬಾರಿ ಮನವಿ ಮಾಡಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕಾಲೋನಿಯಲ್ಲಿ ನಿಯಮಿತವಾಗಿ ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಸೇರಿದಂತೆ ಅಗತ್ಯ ನೈರ್ಮಲ್ಯ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಆದರೆ, ಪದೇಪದೇ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಆಡಳಿತವು ಎಸ್‌ಸಿ ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಸಂಗ್ರಹವಾಗಿರುವ
ಕಸ-ತ್ಯಾಜ್ಯ ತೆರವುಗೊಳಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ನಿಯಮಿತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗ್ರಾಮ ಪಂಚಾಯಿತಿಗೆ ಅಗತ್ಯ ನಿರ್ದೇಶನ ನೀಡಬೇಕು. ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಕಲ್ಪಿಸುವಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ಜವಾಬ್ದಾರಿ ನಿಗದಿಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಪ್ರವೀಣ್ ಛಲವಾದಿ ಒತ್ತಾಯಿಸಿದ್ದಾರೆ.
- ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ1
- ಮುಧೋಳ ನಗರದಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಅಸಂಖ್ಯ ಭಕ್ತಗಣ ಮುಧೋಳ : ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಸಂಖ್ಯ ಭಕ್ತಗಣದ ಮಧ್ಯೆ ಅದ್ದೂರಿಯಾಗಿ ಜರುಗಿತು. ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಜೈ ಭಾರತ ಸರ್ಕಲ್, ಜನತಾ ಪ್ಲಾಟ್ ಸೇರಿದಂತೆ ಹಲವಾರು ಭಾಗದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಂಢರಪುರದ ದಿಂಡೆ ರೂಪಕ, ಮಹಾರಾಷ್ಟ್ರದ ಡೋಲ್ ತಾಷ್, ಡಿಜೆ, ಡಾಲ್ಬಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ಮಹಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೈ ಭಾರತ ವೃತ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರದಿದ್ದರು. ಭಕ್ತಿಭಾವದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.4
- ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿಯಿಂದ ಎಂಪಿಬಿ ವಿರುದ್ಧ ವಾಗ್ದಾಳಿ....।।। ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಬೃಹತ್ ಉದ್ಯಮ ಖಾತೆಯ ಸಚಿವರಾದ ಎಂಬಿ.ಪಾಟೀಲರ ಬಗ್ಗೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ವಾಗ್ದಾಳಿಯ ಮೂಲಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ತಪ್ಪಿಸುವ ಸಂಚು ನಡೆಸಿದ ಆರೋಪ ಮಾಡಿದ್ದಾರೆ, ನಗರದ ಅಂಬೇಡಕರ ವೃತ್ತದಲ್ಲಿ ಸತತ ಹನ್ನೆರಡು ದಿನಗಳಿಂದ ಸರ್ಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಮಾಡುತ್ತ ಆಹೋರಾತ್ರಿ ಧರಣಿ ಕೆ ಆರ್ ಎಸ್ ಕಾರ್ಯಕರ್ತರಿಂದ ನಡೆದಿರುವದಕ್ಕೆ ರವಿಕೃಷ್ಣಾ ರೆಡ್ಡಿ ಬೆಂಬಲ ನೀಡುವ ಮೂಲಕ ಎಂಬಿಪಿ ಯವರ ಜಾತಕ ಜಾಲಾಡಿದ ಪ್ರಸಂಗ ಕಂಡು ಬಂದಿದೆ, ಜಿಲ್ಲೆಯ ಜನತೆಗೆ ಮೋಸ ಮಾಡುವ ಹುನ್ನಾರ ನಡೆಸಿರುವ ಎಂಬಿಪಿ ಸ್ವ ಹಿತಾಸಕ್ತಿಯ ರಾಜಕೀಯ ಮಾಡುವ ಆರೋಪ ಮಾಡುತ್ತ ಛೀಮಾರಿ ಹಾಕಿರುವ ದೃಶ್ಯ ಕಂಡು ಬಂದಿದೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿಯಿಂದ ಎಂಪಿಬಿ ವಿರುದ್ಧ ವಾಗ್ದಾಳಿ....।।। ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಬೃಹತ್ ಉದ್ಯಮ ಖಾತೆಯ ಸಚಿವರಾದ ಎಂಬಿ.ಪಾಟೀಲರ ಬಗ್ಗೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ವಾಗ್ದಾಳಿಯ ಮೂಲಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ತಪ್ಪಿಸುವ ಸಂಚು ನಡೆಸಿದ ಆರೋಪ ಮಾಡಿದ್ದಾರೆ, ನಗರದ ಅಂಬೇಡಕರ ವೃತ್ತದಲ್ಲಿ ಸತತ ಹನ್ನೆರಡು ದಿನಗಳಿಂದ ಸರ್ಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಮಾಡುತ್ತ ಆಹೋರಾತ್ರಿ ಧರಣಿ ಕೆ ಆರ್ ಎಸ್ ಕಾರ್ಯಕರ್ತರಿಂದ ನಡೆದಿರುವದಕ್ಕೆ ರವಿಕೃಷ್ಣಾ ರೆಡ್ಡಿ ಬೆಂಬಲ ನೀಡುವ ಮೂಲಕ ಎಂಬಿಪಿ ಯವರ ಜಾತಕ ಜಾಲಾಡಿದ ಪ್ರಸಂಗ ಕಂಡು ಬಂದಿದೆ, ಜಿಲ್ಲೆಯ ಜನತೆಗೆ ಮೋಸ ಮಾಡುವ ಹುನ್ನಾರ ನಡೆಸಿರುವ ಎಂಬಿಪಿ ಸ್ವ ಹಿತಾಸಕ್ತಿಯ ರಾಜಕೀಯ ಮಾಡುವ ಆರೋಪ ಮಾಡುತ್ತ ಛೀಮಾರಿ ಹಾಕಿರುವ ದೃಶ್ಯ ಕಂಡು ಬಂದಿದೆ1
- ಭಜನಾ ಗಾಯನದಿಂದ ಉತ್ತಮ ಚಿಂತನೆಗಳ ಬೆಳವಣಿಗೆ: ಎಸ್.ಕೆ. ಬೆಳ್ಳುಬ್ಬಿ ಕೊಲ್ಹಾರ: ಆಧುನಿಕ ವೈಜ್ಞಾನಿಕ ಯುಗದಲ್ಲಿಯೂ ತಲೆತಲಾಂತರಗಳಿಂದ ರೂಢಿಸಿಕೊಂಡು ಬಂದಿರುವ ಭಜನಾ ಗೀತೆಗಳ ಹಾಡುಗಾರಿಕೆ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾಗಿರುವ ಹಾಗೂ ಗುಣಾತ್ಮಕ ಚಿಂತನೆಗಳನ್ನು ಬೆಳೆಸುವ ಶ್ರೇಷ್ಠ ಸಾಧನವೇ ಭಜನೆಯ ಮೂಲತತ್ವವಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು. ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ಸಮಿತಿ ಹಾಗೂ ಸಮಸ್ತ ಕಲಾವಿದರ ಬಳಗದ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ಯಂತ ನಡೆದ 54ನೇ ವರ್ಷದ ಹರಿಭಜನೆ ಮುಕ್ತಾಯ ಸಮಾರಂಭ ಹಾಗೂ 19ನೇ ವರ್ಷದ ರಾಜ್ಯಮಟ್ಟದ ಭಜನಾ ತಂಡಗಳ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಜನೆಯ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜತೆಗೆ ಉತ್ತಮ ಚಿಂತನೆ, ಭಕ್ತಿ ಮತ್ತು ಸಂಸ್ಕಾರ ಬೆಳೆಸಿಕೊಳ್ಳಲು ಸಾಧ್ಯ. ಇಂತಹ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ಭಜನಾ ಗಾಯನ ಒಂದು ಗಾಂಧರ್ವ ವಿದ್ಯೆಯಾಗಿದೆ. ಭಜನೆಯು ಆಧ್ಯಾತ್ಮಿಕ ಚಿಂತನೆ ಹಾಗೂ ಸಂಗೀತ ಪರಂಪರೆಯನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೈಲಾಸನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರೆಪ್ಪ ದೇಸಾಯಿ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ, ಸದಸ್ಯರಾದ ಬಾಬು ಭಜಂತ್ರಿ, ಅಪ್ಪಸಿ ಮಟ್ಯಾಳ, ಶ್ರೀಶೈಲ ಅಥಣಿ, ಶಶಿಧರ ದೇಸಾಯಿ, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಕಲ್ಲಪ್ಪ ಸಿ. ಸೊನ್ನದ, ಪುಂಡಲೀಕ ಕಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವರದಿ ಭೀಮಾಶಂಕರ್ ತೆಗ್ಗಿ4
- ರಾಜ್ಯದಂತ ಸರ್ವರ್ ಪ್ರಾಬ್ಲಮ್ ರಾತ್ರಿ 12 ಗಂಟೆಗೆ ರೇಷನ್ ಕಾರ್ಡ್ ಕೆ ವೈ ಸಿ ಮಾಡಲು ಅಧಿಕಾರಿಗಳ ಒತ್ತಡ ಹಾಕುತ್ತಿದ್ದಾರೆ ನ್ಯಾಯಬೆಲೆ ಅಂಗಡಿ ಮಾಲೀಕರು ಅಳಿಲು ತೋಡಿಕೊಂಡಿದ್ದಾರೆ1
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು4
- ED. IT. ಯಾವಾಗ ಬೇಕಾದರೂ ನನ್ನ ಮನೆಗೆ ಬರಬಹುದು ಸಚಿವ ವಿಜಯಾನಂದ ಕಾಶಪ್ಪನವರ ಬಾಗಲಕೋಟೆ: ಕೈ ಶಾಸಕರನ್ನು ಬಿಜೆಪಿಗೆ ಸೆಳೆಯುವ ಹುನ್ನಾರ ವಿಚಾರಕ್ಕೆ ಸಚಿವ ಕಾಶಪ್ಪನವರ ಪ್ರತಿಕ್ರಿಯಿಸಿದರು ಈ ಹಿಂದೆ ಬಿಜೆಪಿ ಕಾಂಗ್ರೆಸ್ನ 55 ಜನರ ಪಟ್ಟಿ ರೆಡಿ ಮಾಡಿತ್ತು ಕಾಂಗ್ರೆಸ್ ಶಾಸಕರ ಆಪರೇಷನ್ ಪಟ್ಟಿಯಲ್ಲಿ ನನ್ನ ಹೆಸರು ಇತ್ತು ಬಿಜೆಪಿ ಪಕ್ಷಕ್ಕೆ ಸೆಳೆಯುವುದು, ಬರೋಲ್ಲ ಅಂದರೆ ಹಿಡಿ ದಾಳಿ ಅಂಜಿಕೆ ಹಾಕುವುದು ಮಾಡಿದ್ದರು. ನಾ ಬಿಜೆಪಿಗರಿಗೆ ಹೇಳಿದ್ದೇನೆ ನನ್ನ ಮೇಲೆ ಇಡಿ ಐಟಿ ದಾಳಿ ಮಾಡಿದರು ಅಂಜಿಕೆ ಇಲ್ಲ ಎಂದು ಸಚಿವ ಕಾಶಪ್ಪನವರ ಬಾಗಲಕೋಟೆಯಲ್ಲಿ ಹೇಳಿದರು.1