logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಋತುಮಾನದ ಜ್ವರ (ಇನ್ಲ್ಫೂಯೆಂಜಾ) ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಸಾಮಾನ್ಯವಾಗಿ ಪ್ಲೂ ಎಂದು ಕರೆಯಲಾಗುವ ಋತುಮಾನದ ಜ್ವರ (ಇನ್ಲ್ಫೂಯೆಂಜಾ), ಇನ್ಲ್ಫೂಯೆಂಜಾ ವೈರಸ್ ಗಳಿಂದ ಉಂಟಾಗುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇನ್ಲ್ಫೂಯೆಂಜಾ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಜನವರಿಯಿಂದ ಮಾರ್ಚ್ ಮತ್ತು ಜುಲೈನಿಂದ ಸೆಪ್ಟೆಂಬ‌ರ್ ವರೆಗೆ ಹೆಚ್ಚಾಗುತ್ತದೆ. ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಇನ್ನುಯೆಂಜಾವನ್ನು ಪತ್ತೆಹಚ್ಚಲು, ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಆಗಸ್ಟ್ 24 ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಲ್ಲಾ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆಯನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದರೂ ಅಥವಾ ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯದ ಆರೋಗ್ಯ ವ್ಯವಸ್ಥೆಯು ಸಾಕಷ್ಟು ಮೂಲಸೌಕರ್ಯ ಹಾಗೂ ಅಗತ್ಯ ಔಷಧಿಗಳೊಂದಿಗೆ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ತಿಳಿಸಿದ್ದಾರೆ. *ಪ್ರಸ್ತುತ ಇನ್ಲ್ಫೂಯೆಂಜಾ ಪರಿಸ್ಥಿತಿ:* ಇಂಟಿಗ್ರೇಟೆಡ್ ಹೆಲ್ತ್ ಇನ್ನಾರ್ಮೇಷನ್ ಪ್ಲಾಟ್‌ಫಾರ್ಮ್ (IHIP) ನ ಕಣ್ಣಾವಲು ಮಾಹಿತಿ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಸ್ಟ್ 16 ರವರೆಗೆ ಒಟ್ಟು 3,463 ಶಂಕಿತ ಪ್ರಕರಣಗಳಿದ್ದು, 26 ಪ್ರಯೋಗಾಲಯ ದೃಢೀಕೃತ ಇನ್ನುಯೆಂಜಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಆಗಸ್ಟ್ 17 ರಿಂದ ಆಗಸ್ಟ್ 26 ರವರೆಗೆ ಶಂಕಿತ 201 ILI [INFLUENZA LIKE ILLNESS] ಪ್ರಕರಣಗಳು ಮತ್ತು 43 SARI [SEVERE ACUTE RESPIRATORY INFECTION] ಶಂಕಿತ ಪ್ರಕರಣಗಳು ಕಂಡು ಬಂದಿರುತ್ತವೆ. ಇದರಲ್ಲಿ 03 ILI ಪ್ರಕರಣಗಳ ಪರೀಕ್ಷೆಯಾಗಿದ್ದು, 02 ಪ್ರಕರಣಗಳು ದೃಢಪಟ್ಟಿರುತ್ತವೆ. *ರೋಗ ಪತ್ತೆ ಹಚ್ಚುವಿಕೆ ಮತ್ತು ಕಣ್ಣಾವಲು ವ್ಯವಸ್ಥೆಯ ಬಲವರ್ಧನೆ:* ಜಿಲ್ಲೆಯಲ್ಲಿ ಇನ್ಲ್ಫೂಯೆಂಜಾ ಕಾಯಿಲೆ (ಐ.ಎಲ್.ಟಿ) ಮತ್ತು ತೀವು ಉಸಿರಾಟದ ಸೋಂಕು (SARI) ಗಳ ಪ್ರಕರಣಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕವಾಗಿ NIV (National Institute of Virology) ಗುರುತಿಸಲಾಗಿದ್ದು ಅಗತ್ಯ ಮಾದರಿ ಸಂಗ್ರಹಣೆ, ಪ್ರಯೋಗಾಲಯ ಬಳಕೆಯ ಸಾಮಗ್ರಿಗಳ ಲಭ್ಯತೆ ಹಾಗೂ ಸಕಾಲಿಕ ಪರೀಕ್ಷೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.. *ಆರೋಗ್ಯ ಸಂಸ್ಥೆಗಳ ಸನ್ನದ್ಧತೆ:* ಜಿಲ್ಲಾದ್ಯಂತ 04 ತಾಲ್ಲೂಕು ಆಸ್ಪತ್ರೆಗಳು ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಅಗತ್ಯವಾದ-ಪಿಪಿಇ ಕಿಟ್, ಎನ್-95 ಮಾಸ್ಕ್ ಮತ್ತು ಒಸೆಮಿವಿರ್ ಔಷಧಿಗಳನ್ನು ಸಮರ್ಪಕ ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ILI/SARI ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು, ನಿರ್ಣಯಿಸುವುದು ಹಾಗೂ ಅಗತ್ಯ ಚಿಕಿತ್ಸೆಯನ್ನು ಒದಗಿಸುವ ಕುರಿತು ಆರೋಗ್ಯ ಸಿಬ್ಬಂದಿಗೆ ಅರಿವು ಮತ್ತು ತರಬೇತಿ ನೀಡಲಾಗಿದೆ. *ಸೋಂಕು ತಡೆಗಟ್ಟುವಿಕೆ ಮತ್ತು ಸಾರ್ವಜನಿಕ ಜಾಗೃತಿ:* ಆರೋಗ್ಯ ಇಲಾಖೆಯು ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸಿದ್ದು, ಉಸಿರಾಟದ ನೈರ್ಮಲ್ಯ, ಕೆಮ್ಮುವಾಗ ಅನುಸರಿಸಬೇಕಾದ ಶಿಷ್ಟಾಚಾರ ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಸಾರ್ವಜನಿಕರಿಗೆ ಒತ್ತು ನೀಡಲಾಗುತ್ತಿದೆ. ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಮತ್ತು ರೋಗಲಕ್ಷಣಗಳಿರುವ ಸಂದರ್ಭದಲ್ಲಿ ಅನಗತ್ಯವಾಗಿ ಜನಸಂದಣಿ ಇರುವ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸುವ ಕುರಿತು ಒತ್ತು ನೀಡಲಾಗುತ್ತಿದೆ. *ಸಾರ್ವಜನಿಕರಿಗೆ ಆರೋಗ್ಯ ಸಲಹೆ/ಸಂದೇಶ:* * ಋತುಮಾನದ ಜ್ವರದ ಹರಡುವಿಕೆಯನ್ನು ತಡೆಯಲು ಸಾರ್ವಜನಿಕರು ಈ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು: *ಮಾಡಬೇಕಾದ್ದು:* * ಸೀನುವಾಗ ಮತ್ತು ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. * ಸೋಪು ಮತ್ತು ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು. * ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು. * ರೋಗ ಲಕ್ಷಣಗಳಿರುವ ವ್ಯಕ್ತಿಗಳು ಇತರರಿಂದ ಪ್ರತ್ಯೇಕವಾಗಿರುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. *ಮಾಡಬಾರದ್ದು:* * ಕಣ್ಣು, ಮೂಗು ಮತ್ತು ಬಾಯಿಯನ್ನು ಕೈಗಳಿಂದ ಪದೇಪದೇ ಮುಟ್ಟಬಾರದು. * ಸ್ವಯಂ- ಔಷಧೋಪಚಾರ (Self-Medication) ಮಾಡಬಾರದು. * ರೋಗ ಲಕ್ಷಣಗಳಿರುವ ಸಂದರ್ಭದಲ್ಲಿ ಕೈಕುಲುಕುವುದನ್ನು ತಪ್ಪಿಸಬೇಕು. * ರೋಗ ಲಕ್ಷಣಗಳಿರುವಾಗ ಜನಸಂದಣಿ ಇರುವ ಸ್ಥಳಗಳಿಗೆ ತೆರಳಬಾರದು. * ಬಳಸಿದ ಕರವಸ್ತ್ರ/ನ್ಯಾಪ್ತಿನ್‌ಗಳನ್ನು ಮರುಬಳಕೆ ಮಾಡಬಾರದು. ಇನ್‌ಫುಯೆಂಜಾ ಸಂಬಂಧಿತ ರೋಗಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 hr ago
user_Lavanya
Lavanya
Local News Reporter ಪಾವಗಡ, ತುಮಕೂರು, ಕರ್ನಾಟಕ•
1 hr ago
d672cbab-909f-4be8-a579-c12d1a8a7315

More news from ಕರ್ನಾಟಕ and nearby areas
  • ವಿಜೃಂಭಣೆಯಿಂದ ಗಡಿಭಾಗದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ KODIGENAHALLI ಮಧುಗಿರಿ ತಾಲೂಕಿನ ಗಡಿಭಾಗವಾದ ಕೊಡಿಗೇನಹಳ್ಳಿ ಜಾಮೀಯ ಮಸ್ಜಿದ್ ಸುನ್ನತ್ ಹುಲ್ ಜಮಾತ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
    1
    ವಿಜೃಂಭಣೆಯಿಂದ ಗಡಿಭಾಗದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ KODIGENAHALLI
ಮಧುಗಿರಿ ತಾಲೂಕಿನ ಗಡಿಭಾಗವಾದ ಕೊಡಿಗೇನಹಳ್ಳಿ ಜಾಮೀಯ ಮಸ್ಜಿದ್ ಸುನ್ನತ್ ಹುಲ್ ಜಮಾತ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
    user_Madhugiri news
    Madhugiri news
    Local News Reporter ಮಧುಗಿರಿ, ತುಮಕೂರು, ಕರ್ನಾಟಕ•
    2 hrs ago
  • ಮೊಳಕಾಲ್ಮುರು: ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು ಇಂದು ನಮ್ಮ ಸಮಾಜದ ಒಳತಿಗಾಗಿ ಆರ್ಥಿಕತೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹೊಂದಲು , ನಮ್ಮ ಒಗ್ಗಟ್ಟಿನ ಅನಿವಾರ್ಯತೆ ಇದೆ . ಶ್ರೀ ಜೀಹ್ವೇಶ್ವರ ಜಯಂತಿ ನಮ್ಮ ಧಾರ್ಮಿಕ ನೆಲೆ ಹಾಗೂ ಸಮಾಜದಲ್ಲಿ ಅಭಿವೃದ್ಧಿ ಗತಿ ಬಲಪಡಿಸುವ ಹಬ್ಬ.ವಾಗಿದೆ ಎಂದು ಪಟ್ಟಣದ ಸ್ವಕುಳಸಾಳಿ ಸಮಾಜ, ದುರ್ಗಾದೇವಿ ಮಹಿಳಾ ಮಂಡಳಿ, ಜಿಹ್ವೇಶ್ವರ ಯುವಕ ಸಂಘ ಸ್ವಕುಳಸಾಳಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಳಗಿನ ಈಶ್ವರ ದೇವಸ್ಥಾನ ಮಂಡಳಿ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಜೀಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಕಳಸಾಳಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕ್ವಾಡ್ ತಿಳಿಸಿದರು  ಮಾತೇಯರಿಂದ ಗಂಗಾಪೂಜೆ, ಭಗವಾನ್ ಜೀಹ್ವೇಶ್ವರ ತೊಟ್ಟಿಲು ಪೂಜೆ, ಹಾಗೂ ಆಶೀರ್ವಾದ ಸ್ವೀಕಾರದ ಮೂಲಕ ದೈವಾನುಗ್ರಹ ಜರುಗಿತು ಭಕ್ತರು ಆಗಮಿಸಿ ಸಾಲು ಸರದಿಯಲ್ಲಿ ನಿಂತು ಭಗವಾನ್ ಜೀಹ್ವೇಶ್ವರ ಮತ್ತು ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು ತದನಂತರ ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಜಿಹ್ವೇಶ್ವರ ಜಯಂತಿ ಅಂಗವಾಗಿ ಭಕ್ತಿಪೂರ್ಣ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಚಾಲನೆ ದೊರಕಿತು. ದೇವರ ಪಲ್ಲಕ್ಕಿ, ನಾದಸ್ವರ, ಡೊಳ್ಳುಕುಣಿತ, ಶ್ರದ್ಧಾವಂತ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಲ್ಲೆಡೆ ಭಕ್ತಿಭಾವದ ಮೆರವಣಿಗೆಯಲ್ಲಿ ಯುವಕರ ಉತ್ಸಾಹ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮಾತೇಯರು ಆರತಿ ಮತ್ತು ಕಳಸದೊಂದಿಗೆ ಆಗಮಿಸಿದ್ದು ವಿಶೇಷ ಗಮನಸೆಳೆದವು. ಮೆರವಣಿಗೆಯ ನಂತರ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂರಾರು ಭಕ್ತರಿಗೆ ಭಕ್ತಿಪೂರ್ವಕವಾಗಿ ಭೋಜನ ವಿತರಿಸಲಾಯಿತು. ಅನ್ನದಾಸೋಹದಲ್ಲಿ ಪಾಯಸ ಪಲಾವ್, ಮತ್ತು ಅನ್ನ ಮಜ್ಜಿಗೆ ಸಂಪೂರ್ಣ ಸತ್ಕಾರ ಸಮರ್ಪಕವಾಗಿ ನಡೆಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಕ್ಕಳು ಮಾತೆಯರು ಪುರುಷರು ಸಮಾಜದ ಬಂದು ಬಾಂಧವರು ಭಾಗವಹಿಸಿದ್ದರು
    1
    ಮೊಳಕಾಲ್ಮುರು: ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು
ಇಂದು ನಮ್ಮ ಸಮಾಜದ ಒಳತಿಗಾಗಿ ಆರ್ಥಿಕತೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹೊಂದಲು , ನಮ್ಮ ಒಗ್ಗಟ್ಟಿನ ಅನಿವಾರ್ಯತೆ ಇದೆ . ಶ್ರೀ ಜೀಹ್ವೇಶ್ವರ ಜಯಂತಿ ನಮ್ಮ ಧಾರ್ಮಿಕ ನೆಲೆ ಹಾಗೂ ಸಮಾಜದಲ್ಲಿ  ಅಭಿವೃದ್ಧಿ ಗತಿ ಬಲಪಡಿಸುವ ಹಬ್ಬ.ವಾಗಿದೆ  ಎಂದು ಪಟ್ಟಣದ ಸ್ವಕುಳಸಾಳಿ ಸಮಾಜ, ದುರ್ಗಾದೇವಿ ಮಹಿಳಾ ಮಂಡಳಿ, ಜಿಹ್ವೇಶ್ವರ ಯುವಕ ಸಂಘ ಸ್ವಕುಳಸಾಳಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಳಗಿನ ಈಶ್ವರ ದೇವಸ್ಥಾನ ಮಂಡಳಿ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಜೀಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಕಳಸಾಳಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕ್ವಾಡ್ ತಿಳಿಸಿದರು 
ಮಾತೇಯರಿಂದ ಗಂಗಾಪೂಜೆ, ಭಗವಾನ್ ಜೀಹ್ವೇಶ್ವರ ತೊಟ್ಟಿಲು ಪೂಜೆ, ಹಾಗೂ ಆಶೀರ್ವಾದ ಸ್ವೀಕಾರದ ಮೂಲಕ ದೈವಾನುಗ್ರಹ ಜರುಗಿತು ಭಕ್ತರು ಆಗಮಿಸಿ ಸಾಲು ಸರದಿಯಲ್ಲಿ ನಿಂತು ಭಗವಾನ್ ಜೀಹ್ವೇಶ್ವರ ಮತ್ತು ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು ತದನಂತರ
ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಜಿಹ್ವೇಶ್ವರ ಜಯಂತಿ ಅಂಗವಾಗಿ ಭಕ್ತಿಪೂರ್ಣ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಚಾಲನೆ ದೊರಕಿತು.
ದೇವರ ಪಲ್ಲಕ್ಕಿ, ನಾದಸ್ವರ, ಡೊಳ್ಳುಕುಣಿತ, ಶ್ರದ್ಧಾವಂತ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಲ್ಲೆಡೆ ಭಕ್ತಿಭಾವದ ಮೆರವಣಿಗೆಯಲ್ಲಿ ಯುವಕರ ಉತ್ಸಾಹ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮಾತೇಯರು ಆರತಿ ಮತ್ತು ಕಳಸದೊಂದಿಗೆ ಆಗಮಿಸಿದ್ದು ವಿಶೇಷ ಗಮನಸೆಳೆದವು.
ಮೆರವಣಿಗೆಯ ನಂತರ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂರಾರು ಭಕ್ತರಿಗೆ ಭಕ್ತಿಪೂರ್ವಕವಾಗಿ ಭೋಜನ ವಿತರಿಸಲಾಯಿತು.
ಅನ್ನದಾಸೋಹದಲ್ಲಿ ಪಾಯಸ ಪಲಾವ್, ಮತ್ತು ಅನ್ನ ಮಜ್ಜಿಗೆ ಸಂಪೂರ್ಣ ಸತ್ಕಾರ ಸಮರ್ಪಕವಾಗಿ ನಡೆಯಿತು
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಕ್ಕಳು ಮಾತೆಯರು ಪುರುಷರು ಸಮಾಜದ ಬಂದು ಬಾಂಧವರು ಭಾಗವಹಿಸಿದ್ದರು
    user_Basavaraj
    Basavaraj
    Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    12 hrs ago
  • ಚಿತ್ರದುರ್ಗ ಜಿಲ್ಲೆಯಲ್ಲಿ ಎರಡುವರೆ ಲಕ್ಷ ರೈತರು ಬೆಳೆ ವಿಮೆಯನ್ನು ಪಾವತಿ ಮಾಡಿದ್ದಾರೆ.:ಜಿಲ್ಲಾ ಉಸ್ತುವರಿ ಸಚಿವ ಟಿ ರಘುಮೂರ್ತಿ... ಬೆಳೆ ವಿಮೆ ಪಾವತಿ ಮಾಡುವುದರಲ್ಲಿ ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ 5ನೇ ಸ್ಥಾನದಲ್ಲಿದೆ:. ಜಿಲ್ಲೆಯಲ್ಲಿ ಎರಡುವರೆ ಲಕ್ಷ ರೈತರು ಬೆಳೆ ವಿಮೆಯನ್ನು ಪಾವತಿ ಮಾಡಿದ್ದಾರೆ.:ಜಿಲ್ಲಾ ಉಸ್ತುವರಿ ಸಚಿವ ಟಿ ರಘುಮೂರ್ತಿ...
    1
    ಚಿತ್ರದುರ್ಗ ಜಿಲ್ಲೆಯಲ್ಲಿ ಎರಡುವರೆ ಲಕ್ಷ ರೈತರು ಬೆಳೆ ವಿಮೆಯನ್ನು ಪಾವತಿ ಮಾಡಿದ್ದಾರೆ.:ಜಿಲ್ಲಾ ಉಸ್ತುವರಿ ಸಚಿವ ಟಿ ರಘುಮೂರ್ತಿ...
ಬೆಳೆ ವಿಮೆ ಪಾವತಿ ಮಾಡುವುದರಲ್ಲಿ ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ 5ನೇ ಸ್ಥಾನದಲ್ಲಿದೆ:. ಜಿಲ್ಲೆಯಲ್ಲಿ ಎರಡುವರೆ ಲಕ್ಷ ರೈತರು ಬೆಳೆ ವಿಮೆಯನ್ನು ಪಾವತಿ ಮಾಡಿದ್ದಾರೆ.:ಜಿಲ್ಲಾ ಉಸ್ತುವರಿ ಸಚಿವ ಟಿ ರಘುಮೂರ್ತಿ...
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    22 min ago
  • ಭದ್ರಾ ನೀರು ಹರಿಸದ ರಾಜ್ಯ ಸರ್ಕಾರದ ವಿರುದ್ಧ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲು ಆಗ್ರಹಿಸಿ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇನ್ನೂ ಬಿಜೆಪಿ ಪಕ್ಷ ಹಾಗೂ ಜೆ ಡಿ ಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದ್ದು ಹೊಸದುರ್ಗ ಬಿಜೆಪಿ ಮುಖಂಡರು ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಎಂ ಎಲ್ ಸಿ ಕೆ ಎಸ್ ನವೀನ್ ಅವರು ಸಹ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎಸ್ ಲಿಂಗಮೂರ್ತಿ ಅವರು ಅಹ ಆಗಮಿಸಿ ಬಿಸಿಲನ್ನೂ ಸಹ ಲೆಕ್ಕಿಸದೆ ಪ್ರತಿಭಟನೆ ನೇತೃತ್ವ ವಹಿಸಿದ್ದು ಹುಳಿಯಾರು ರಸ್ತೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ಹೊರ ಹಾಕಿದ್ದು ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಆಗ್ರಹ ಮಾಡಿದರು.‌ ತಕ್ಷಣವೇ ಹೊಸದುರ್ಗ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡಿ ಕುಡಿಯುವ ನೀರಿನ ಯೋಜನೆಯನ್ನ ಶೀಘ್ರ ಜಾರಿಗೊಳಿಸಲು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದರು. ಇದೇ ವೇಳೆ ಎಸ್ ಲಿಂಮೂರ್ತಿ ಅವರು ಮಾತನಾಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರ ಈ ಬರದ ನಾಡು ಹೊಸದುರ್ಗಕ್ಕೆ ನೀರು ಕೊಡುವ ಬರವಸೆ ಇಟ್ಟಿದ್ದು ಬರವಸೆ ಹುಸಿಯಾಗಿದೆ.‌ ಮೂರು ವರ್ಷಗಳು ಕಳೆದರು ಸಹ ಸರ್ಕಾರ ನೀರು ಹರಿಸುವ ಬಗ್ಗೆ ಸುಳ್ಳು ಬರವಸೆಯನ್ನ ಕೊಡುತ್ತಾ ಬಂದಿದೆ. ಈ ತಾಲ್ಲೂಕಿನ ಶಾಸಕರು ಕೂಡ ಬೆಂಬಲ ಕೋರಿದ್ದು ಕೈ ಜೋಡಿಸಿದ್ದೆವು. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮಾನವೀಯತೆಯಿಂದ ಬೆಂಬಲ ಕೊಟ್ಟಿದ್ದೇವೆ. ಕಳೆದ ಆರೆಂಟು ತಿಂಗಳಾದರು ಸಹ ಸ್ಥಳೀಯ ಶಾಸಕರು ನೀರು ಕೊಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನೀರಿಗಾಗಿ ಹೋರಾಟ ಮಾಡುವ ಸಮಯ ಬಂದಿದ್ದು ಈ ಮೂಲಕ ಸರ್ಕಾರದ ಕಣ್ಣನ್ನ ತೆರಯಬೇಕಿದೆ. ನಮ್ಮ ಸರ್ಕಾರದ ಅವದಿಯಲ್ಲಿ ಅರವತ್ತರಷ್ಟು ಹಣ ಮೀಸಲಿಟ್ಟು ಕೆಲಸ ಆಗಿದ್ದು ಈ ಸರ್ಕಾರ ಬಂದ ನಂತರ ಇಪ್ಪತ್ತರಷ್ಟು ಸಹ ಹಣ ಬಿಡುಗಡೆ ಮಾಡಿಲ್ಲ ಎಂದು ಲಿಂಗಮೂರ್ತಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಗಾಲ ಬಂದಿದ್ದರು ಸಹ ಸರ್ಕಾರ ಜವಾಬ್ದಾರಿ ತೋರದೆ ಅನ್ಯಾಯ ಮಾಡಿದೆ. ಕೇವಲ ಮಂತ್ರಿ ಸ್ಥಾನಕ್ಕಾಗಿ ಹೊಡೆದಾಟ ನಡೆಸುತ್ತಿದ್ದು ಬರಗಾಲದಿಂದ ಕಂಗೆಟ್ಟ ಜನರಿಗೆ ನೀರು ಕೊಡುವ ಕೆಲಸ ಮಾಡದೆ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡದೆ ಇದ್ದು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಎಸ್ ಲಿಂಗಮೂರ್ತಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
    1
    ಭದ್ರಾ ನೀರು ಹರಿಸದ ರಾಜ್ಯ ಸರ್ಕಾರದ ವಿರುದ್ಧ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ
ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲು ಆಗ್ರಹಿಸಿ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇನ್ನೂ ಬಿಜೆಪಿ ಪಕ್ಷ ಹಾಗೂ ಜೆ ಡಿ ಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದ್ದು ಹೊಸದುರ್ಗ ಬಿಜೆಪಿ ಮುಖಂಡರು ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ
ಹಮ್ಮಿಕೊಂಡಿದ್ದು ಎಂ ಎಲ್ ಸಿ ಕೆ ಎಸ್ ನವೀನ್ ಅವರು ಸಹ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎಸ್ ಲಿಂಗಮೂರ್ತಿ ಅವರು ಅಹ ಆಗಮಿಸಿ ಬಿಸಿಲನ್ನೂ ಸಹ ಲೆಕ್ಕಿಸದೆ ಪ್ರತಿಭಟನೆ ನೇತೃತ್ವ ವಹಿಸಿದ್ದು ಹುಳಿಯಾರು ರಸ್ತೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ಹೊರ ಹಾಕಿದ್ದು
ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಆಗ್ರಹ ಮಾಡಿದರು.‌
ತಕ್ಷಣವೇ ಹೊಸದುರ್ಗ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡಿ ಕುಡಿಯುವ ನೀರಿನ ಯೋಜನೆಯನ್ನ ಶೀಘ್ರ ಜಾರಿಗೊಳಿಸಲು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದರು. ಇದೇ ವೇಳೆ ಎಸ್ ಲಿಂಮೂರ್ತಿ ಅವರು ಮಾತನಾಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರ ಈ ಬರದ ನಾಡು ಹೊಸದುರ್ಗಕ್ಕೆ ನೀರು ಕೊಡುವ ಬರವಸೆ ಇಟ್ಟಿದ್ದು ಬರವಸೆ ಹುಸಿಯಾಗಿದೆ.‌ ಮೂರು ವರ್ಷಗಳು ಕಳೆದರು ಸಹ ಸರ್ಕಾರ ನೀರು ಹರಿಸುವ ಬಗ್ಗೆ ಸುಳ್ಳು ಬರವಸೆಯನ್ನ ಕೊಡುತ್ತಾ ಬಂದಿದೆ. ಈ ತಾಲ್ಲೂಕಿನ ಶಾಸಕರು ಕೂಡ ಬೆಂಬಲ ಕೋರಿದ್ದು ಕೈ ಜೋಡಿಸಿದ್ದೆವು. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮಾನವೀಯತೆಯಿಂದ ಬೆಂಬಲ ಕೊಟ್ಟಿದ್ದೇವೆ. ಕಳೆದ ಆರೆಂಟು ತಿಂಗಳಾದರು ಸಹ ಸ್ಥಳೀಯ ಶಾಸಕರು ನೀರು ಕೊಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನೀರಿಗಾಗಿ ಹೋರಾಟ ಮಾಡುವ ಸಮಯ ಬಂದಿದ್ದು ಈ ಮೂಲಕ ಸರ್ಕಾರದ ಕಣ್ಣನ್ನ ತೆರಯಬೇಕಿದೆ. ನಮ್ಮ ಸರ್ಕಾರದ ಅವದಿಯಲ್ಲಿ ಅರವತ್ತರಷ್ಟು ಹಣ ಮೀಸಲಿಟ್ಟು ಕೆಲಸ ಆಗಿದ್ದು ಈ ಸರ್ಕಾರ ಬಂದ ನಂತರ ಇಪ್ಪತ್ತರಷ್ಟು ಸಹ ಹಣ ಬಿಡುಗಡೆ ಮಾಡಿಲ್ಲ ಎಂದು ಲಿಂಗಮೂರ್ತಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಗಾಲ ಬಂದಿದ್ದರು ಸಹ ಸರ್ಕಾರ ಜವಾಬ್ದಾರಿ ತೋರದೆ ಅನ್ಯಾಯ ಮಾಡಿದೆ. ಕೇವಲ  ಮಂತ್ರಿ ಸ್ಥಾನಕ್ಕಾಗಿ ಹೊಡೆದಾಟ ನಡೆಸುತ್ತಿದ್ದು ಬರಗಾಲದಿಂದ ಕಂಗೆಟ್ಟ ಜನರಿಗೆ ನೀರು ಕೊಡುವ ಕೆಲಸ ಮಾಡದೆ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡದೆ ಇದ್ದು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಎಸ್ ಲಿಂಗಮೂರ್ತಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಶಿರಾ : ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ದೇವತಾ ಕಾರ್ಯಗಳಿಗೆ ಅತ್ಯಂತ ಉನ್ನತವಾದ ಸ್ಥಾನವಿದೆ. ಅನಾದಿ ಕಾಲದಿಂದಲೂ ಮಾನವನು ತನ್ನ ದೈನಂದಿನ ಜೀವನದ ಭಾಗವಾಗಿ ದೇವರನ್ನು ಆರಾಧಿಸುತ್ತಾ ಬಂದಿದ್ದಾನೆ. ದೇವತಾ ಕಾರ್ಯಗಳು ಎಂದರೆ ಕೇವಲ ಆಚರಣೆಗಳಲ್ಲ, ಅವು ಮಾನವನ ಮನಸ್ಸನ್ನು ಶುದ್ಧೀಕರಿಸುವ ಮತ್ತು ಸಮಾಜವನ್ನು ಒಟ್ಟಾಗಿ ಜೋಡಿಸುವ ಪವಿತ್ರ ವಿಧಿ ವಿಧಾನಗಳಾಗಿವೆ,ಧಾರ್ಮಿಕ ದೇವತಾ ಕಾರ್ಯಗಳು ಮನುಷ್ಯನಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತವೆ. ಇವುಗಳನ್ನು ಕೇವಲ ಮೂಢನಂಬಿಕೆಯಾಗಿ ನೋಡದೆ, ಅವುಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಮಾಜಿಕ ಮಹತ್ವವನ್ನು ಅರಿತು ಆಚರಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸುಖ-ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು. ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕಳವರಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀಜುಂಜಪ್ಪ ಸ್ವಾಮಿ ನೂತನ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಐತಿಹಾಸಿಕ ಪ್ರಸಿದ್ಧ ಶ್ರೀ ಜುಂಜಪ್ಪ ಸ್ವಾಮಿಗೆ ಎಲ್ಲರೂ ಒಗ್ಗೂಡಿ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು, ಕಳವರಹಳ್ಳಿಗೆ ದೊಡ್ಡ ಕಳಸವಿದ್ದಂತೆ. ನಾವು ಎಲ್ಲರೂ ಒಗ್ಗಟ್ಟಾಗಿ ದೇಗುಲ ನಿರ್ಮಾಣ ಮಾಡುವಂತ ಸಂಕಲ್ಪ ಮಾಡಬೇಕು. ರಾಜ್ಯದಲ್ಲಿ ಹಾಗೂ ಸಿರಾ ತಾಲೂಕಿನಲ್ಲಿ ಇನ್ನು ಮುಂದೆ ಯಾದರು ಉತ್ತಮ ಮಳೆಯಾಗಿ ಎಲ್ಲ ರೈತರ ಬದುಕು ಸುಂದರವಾಗಿರಲಿ ಎಂದು ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಶ್ರೀ ಮದ್ದಮ್ಮ ದೇವಿ ದೇವಸ್ಥಾನದ ಪಟ್ಟದ ಪೂಜಾರ್ ದೊಡ್ಡರಾಜಪ್ಪ, ಹುಣಸೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಣಸೆಹಳ್ಳಿ ಶಶಿಧರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಸಂಕಾಪುರ ಚಿದಾನಂದ, ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮುದ್ದು ಕೃಷ್ಣೆಗೌಡ, ಕಾರ್ಯದರ್ಶಿ ನರಸಿಂಹಮೂರ್ತಿ, ಭೂಕಾಂತೇ ಗೌಡ, ಕೃಷ್ಣಪ್ಪ, ಹೊಸೂರು ಮಂಜೇಗೌಡ, ಸಿದ್ದಣ್ಣ, ದೊಡ್ಡಯ್ಯ, ಸಿದ್ದಾಪುರ ಮಂಜುನಾಥ್, ನಾಗೇಂದ್ರ ಗೌಡ, ಭೂತಣ್ಣ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು, 12 ಜನ ಕೈವಾಡಸ್ತರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
    1
    ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. 
ಶಿರಾ : ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ.
ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ದೇವತಾ ಕಾರ್ಯಗಳಿಗೆ ಅತ್ಯಂತ ಉನ್ನತವಾದ ಸ್ಥಾನವಿದೆ. ಅನಾದಿ ಕಾಲದಿಂದಲೂ ಮಾನವನು ತನ್ನ ದೈನಂದಿನ ಜೀವನದ ಭಾಗವಾಗಿ ದೇವರನ್ನು ಆರಾಧಿಸುತ್ತಾ ಬಂದಿದ್ದಾನೆ. ದೇವತಾ ಕಾರ್ಯಗಳು ಎಂದರೆ ಕೇವಲ ಆಚರಣೆಗಳಲ್ಲ, ಅವು ಮಾನವನ ಮನಸ್ಸನ್ನು ಶುದ್ಧೀಕರಿಸುವ ಮತ್ತು ಸಮಾಜವನ್ನು ಒಟ್ಟಾಗಿ ಜೋಡಿಸುವ ಪವಿತ್ರ ವಿಧಿ ವಿಧಾನಗಳಾಗಿವೆ,ಧಾರ್ಮಿಕ ದೇವತಾ ಕಾರ್ಯಗಳು ಮನುಷ್ಯನಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತವೆ. ಇವುಗಳನ್ನು ಕೇವಲ ಮೂಢನಂಬಿಕೆಯಾಗಿ ನೋಡದೆ, ಅವುಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಮಾಜಿಕ ಮಹತ್ವವನ್ನು ಅರಿತು ಆಚರಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸುಖ-ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ ಎಂದು
ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ  ಗೌಡಗೆರೆ ಹೋಬಳಿ ಕಳವರಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀಜುಂಜಪ್ಪ ಸ್ವಾಮಿ ನೂತನ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಐತಿಹಾಸಿಕ ಪ್ರಸಿದ್ಧ ಶ್ರೀ ಜುಂಜಪ್ಪ ಸ್ವಾಮಿಗೆ ಎಲ್ಲರೂ ಒಗ್ಗೂಡಿ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು, ಕಳವರಹಳ್ಳಿಗೆ ದೊಡ್ಡ ಕಳಸವಿದ್ದಂತೆ.   
ನಾವು ಎಲ್ಲರೂ ಒಗ್ಗಟ್ಟಾಗಿ  ದೇಗುಲ ನಿರ್ಮಾಣ ಮಾಡುವಂತ ಸಂಕಲ್ಪ ಮಾಡಬೇಕು.
ರಾಜ್ಯದಲ್ಲಿ ಹಾಗೂ ಸಿರಾ ತಾಲೂಕಿನಲ್ಲಿ ಇನ್ನು ಮುಂದೆ ಯಾದರು ಉತ್ತಮ ಮಳೆಯಾಗಿ ಎಲ್ಲ ರೈತರ ಬದುಕು ಸುಂದರವಾಗಿರಲಿ  ಎಂದು ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. 
ಶ್ರೀ ಮದ್ದಮ್ಮ ದೇವಿ ದೇವಸ್ಥಾನದ ಪಟ್ಟದ ಪೂಜಾರ್ ದೊಡ್ಡರಾಜಪ್ಪ, ಹುಣಸೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಣಸೆಹಳ್ಳಿ ಶಶಿಧರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಸಂಕಾಪುರ ಚಿದಾನಂದ, ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮುದ್ದು ಕೃಷ್ಣೆಗೌಡ, ಕಾರ್ಯದರ್ಶಿ ನರಸಿಂಹಮೂರ್ತಿ, ಭೂಕಾಂತೇ ಗೌಡ, ಕೃಷ್ಣಪ್ಪ, ಹೊಸೂರು ಮಂಜೇಗೌಡ, ಸಿದ್ದಣ್ಣ, ದೊಡ್ಡಯ್ಯ, ಸಿದ್ದಾಪುರ ಮಂಜುನಾಥ್, ನಾಗೇಂದ್ರ ಗೌಡ, ಭೂತಣ್ಣ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು, 12 ಜನ ಕೈವಾಡಸ್ತರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    6 hrs ago
  • ಹುಳಿಯಾರಿನಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಪೊಲೀಸರಿಂದ ಪಥಸಂಚಲನ -------------------- ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಹುಳಿಯಾರ್ನ ಪ್ರಮುಖ ರಸ್ತೆಗಳಲ್ಲಿ ಗುರುವಾರ ಪಥಸಂಚಲನ ನಡೆಸಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸಿದರು. ಎಲ್ಲಾ ಸಮುದಾಯದವರು ಪರಸ್ಪರ ಸೌಹಾರ್ದ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಿಸಬೇಕೆಂದು ಪೊಲೀಸರು ಮನವಿ ಮಾಡಿದರು.
    1
    ಹುಳಿಯಾರಿನಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಪೊಲೀಸರಿಂದ ಪಥಸಂಚಲನ
--------------------
           ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಹುಳಿಯಾರ್ನ ಪ್ರಮುಖ ರಸ್ತೆಗಳಲ್ಲಿ ಗುರುವಾರ  ಪಥಸಂಚಲನ ನಡೆಸಿದರು.
            ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸಿದರು. 
             ಎಲ್ಲಾ ಸಮುದಾಯದವರು ಪರಸ್ಪರ ಸೌಹಾರ್ದ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಿಸಬೇಕೆಂದು ಪೊಲೀಸರು ಮನವಿ ಮಾಡಿದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    1 hr ago
  • ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನಿಗೆ ಧೈರ್ಯ ತುಂಬಿದ ಸಿಎಂ ಬೆಂಗಳೂರು: ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. ಸಂಕಷ್ಟದ ಸಮಯದಲ್ಲಿ ಕನ್ನಡಿಗರ ರಕ್ಷಣೆಗೆನಮ್ಮ ಸರ್ಕಾರವು ಅತ್ಯಂತ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
    1
    ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನಿಗೆ ಧೈರ್ಯ ತುಂಬಿದ ಸಿಎಂ 
ಬೆಂಗಳೂರು: ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. 
ಸಂಕಷ್ಟದ  ಸಮಯದಲ್ಲಿ ಕನ್ನಡಿಗರ ರಕ್ಷಣೆಗೆನಮ್ಮ ಸರ್ಕಾರವು ಅತ್ಯಂತ  ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    5 hrs ago
  • ನೇಪಾಳದಲ್ಲಿ ಭೀಕರ ಪ್ರವಾಹ: ಕ್ಷಣಾರ್ಧದಲ್ಲೇ ಕೊಚ್ಚಿಹೋದ ಮನೆ, ವಾಹನಗಳು
    1
    ನೇಪಾಳದಲ್ಲಿ ಭೀಕರ ಪ್ರವಾಹ: ಕ್ಷಣಾರ್ಧದಲ್ಲೇ ಕೊಚ್ಚಿಹೋದ ಮನೆ, ವಾಹನಗಳು
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.