ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನಿವೃತ್ತ ಎ.ಎಸ್.ಐ ಕೆ.ಎನ್. ರವೀಂದ್ರನಾಥ್ ಮನವಿ ಕೋಲಾರ,ಏ.04. ಜಿಲ್ಲೆಯ ಪೊಲೀಸ್ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯ ಮಂತ್ರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ನಿವೃತ್ತ ಎ.ಎಸ್.ಐ.ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಪ್ರಸ್ತುತ ಇರುವ ಸಿಬ್ಬಂದಿ ಬಲವು 1991-92 ನೇ ಸಾಲಿನಲ್ಲಿ ಮಂಜೂರಾದ ಹಳೆಯ ಅಂಕಿ-ಅಂಶಗಳ ಆಧಾರದ ಮೇಲೆ ಇದೆ. ಕಳೆದ 35 ವರ್ಷಗಳಲ್ಲಿ ಜನಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದ್ದರೂ ಇಲಾಖೆಯ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿಲ್ಲ. ಇದರಿಂದ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದ್ದು, ಅವರ ಆರೋಗ್ಯ ಮತ್ತು ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಲು ಪ್ರತಿ ಠಾಣೆಗೆ ತಲಾ 25 ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವುದುಅಗತ್ಯವಾಗಿದೆ. ಅಲ್ಲದೆ, ಠಾಣೆಗಳ ವ್ಯಾಪ್ತಿಯು ತುಂಬಾ ದೊಡ್ಡದಾಗಿದ್ದು, ಉದಾಹರಣೆಗೆ ಕೋಲಾರ ಗ್ರಾಮಾಂತರ ಠಾಣೆಯು 228 ಹಳ್ಳಿಗಳನ್ನು ಒಳಗೊಂಡಿದ್ದರೂ ಕೇವಲ 67 ಸಿಬ್ಬಂದಿ ಮಾತ್ರ ಮಂಜೂರಾಗಿದ್ದಾರೆ.ಇದರಿಂದ ಜನರಿಗೆ ಸಕಾಲದಲ್ಲಿ ಸ್ಪಂದಿಸುವುದು ಕಷ್ಟವಾಗುತ್ತಿದ್ದು, ಹೊಸದಾಗಿ ಮಾಲೂರು ಗ್ರಾಮಾಂತರ, ಸುಗಟೂರು ಮತ್ತು ವಡಗೂರು ಬಳಿ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಬೇಕೆಂದು ಕೋರಲಾಗಿದೆ. ಸಿಬ್ಬಂದಿ ನಿರ್ವಹಣೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಹಲವು ಸುಧಾರಣೆಗಳ ಅಗತ್ಯವಿದೆ. ಕೆಳಹಂತದ ಸಿಬ್ಬಂದಿಯ ಕೊರತೆಯನ್ನು ನೀಗಿಸಲು, ಸಿಬ್ಬಂದಿ ನಿವೃತ್ತಿಯಾಗುವ ಒಂದು ವರ್ಷ ಮುಂಚಿತವಾಗಿಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕೋಲಾರ ಜಿಲ್ಲೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದರೂ ಪದೋನ್ನತಿ ಸಿಗದಿರುವುದು ಸಿಬ್ಬಂದಿಯ ಮಾನಸಿಕ ಶೋಭೆಗೆ ಕಾರಣವಾಗಿದ್ದು, ಸಕಾಲಕ್ಕೆ ಬಡ್ತಿ ನೀಡುವ ವ್ಯವಸ್ಥೆಯಾಗಬೇಕಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಪೊಲೀಸರಿಗೆ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಹೊಸ ಕಾನೂನುಗಳ ಬಗ್ಗೆ ತರಬೇತಿ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ದಕ್ಷತೆಯನ್ನು ಹೆಚ್ಚಿಸಲು ಠಾಣೆಗಳಿಗೆ ಸುಸಜ್ಜಿತ ವಾಹನಗಳು, ತಲಾ 10 ಕಂಪ್ಯೂಟರ್‌ಗಳು, 3 ಲ್ಯಾಪ್ ಟ್ಯಾಪ್ ಗಳು ಮತ್ತು ಆಧುನಿಕ ಜೆರಾಕ್ಸ್ ಯಂತ್ರಗಳನ್ನು ಒದಗಿಸಬೇಕು. ಮತ್ತು ಬಂದೋ ಬಸ್ತ್ ಗೆ ಹೋಗುವ ಸಿಬ್ಬಂದಿಗೆ ಉತ್ತಮ ವಸತಿ ಹಾಗೂ ಆಹಾರ ಒದಗಿಸಲು ಪ್ರತಿ ತಾಲ್ಲೂಕಿನಲ್ಲಿ 2೦೦ ಜನರಿಗೆ ಆಗುವಂತೆ ಸುಸಜ್ಜಿತ ಸಮುದಾಯ ಭವನ ನಿರ್ಮಿಸಬೇಕು. ಪೊಲೀಸ್ ಸಮುದಾಯ ಭವನವನ್ನು ಬಾಡಿಗೆಗೆ ಪಡೆದುಕೊಳ್ಳುವ ನಿವೃತ್ತ ಸಿಬ್ಬಂದಿಗೆ ಶೇ.6೦ ರಷ್ಟು ರಿಯಾಯಿತಿಯನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸಿಬ್ಬಂದಿಯ ಕಲ್ಯಾಣ ಮತ್ತು ಆಡಳಿತಾತ್ಮಕ ಬದಲಾವಣೆಗಳೂ ಸಹ ಅನಿವಾರ್ಯವಾಗಿವೆ. 5೦ ವರ್ಷ ಮೇಲ್ಪಟ್ಟವರನ್ನು ಹೊರ ಜಿಲ್ಲೆಯ ಬಂದೋ ಬಸ್ತ್ ಗೆ ನಿಯೋಜಿಸ ಬಾರದು ಮತ್ತು ಗರ್ಭಿಣಿ ಮಹಿಳಾ ಪೊಲೀಸರಿಗೆ ಠಾಣಾ ಕರ್ತವ್ಯ ನೀಡಬೇಕು.ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡುವವರಿಗೆ ಒ.ಟಿ ಭತ್ಯೆ ನೀಡಬೇಕು ಮತ್ತು ಕಡ್ಡಾಯವಾಗಿ ವಾರದ ರಜೆ ನೀಡಬೇಕು. ರಜೆ ನೀಡಲು ಸಾಧ್ಯವಾಗದಿದ್ದರೆ ಆ ದಿನಕ್ಕೆ ಎರಡರಷ್ಟು ವೇತನ ನೀಡಬೇಕು. ವೇತನದ ವಿಷಯದಲ್ಲಿ ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಕಡಿಮೆ ಸಂಬಳವಿದ್ದು, ಪ್ರತ್ಯೇಕ ವೇತನ ಪರಿಷ್ಕರಣಾ ಸಮಿತಿ ನೇಮಿಸಬೇಕೆಂಬ ಬೇಡಿಕೆಯಿದೆ. ಠಾಣೆಗಳಿಗೆ ಬೇಕಾದ ಲೇಖನಿ ಸಾಮಗ್ರಿಗಳನ್ನು ಇಲಾಖೆಯೇ ನೇರವಾಗಿ ಪೂರೈಸಬೇಕು ಮತ್ತು ತನಿಖೆಗಾಗಿ ಹೊರ ರಾಜ್ಯ/ಜಿಲ್ಲೆಗೆ ಹೋಗುವಾಗ ಸಾರಿಗೆ ಸಂಸ್ಥೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ವಾರ್ಷಿಕವಾಗಿ ಎರಡು ಜೊತೆ ಸಮವಸ್ತ್ರ ದೊಂದಿಗೆ ಅಗತ್ಯ ಪರಿಕರಗಳನ್ನು ನೀಡಬೇಕು. ಕೊನೆಯದಾಗಿ, ಪೊಲೀಸ್ ವಸತಿ ಗೃಹಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ನಿವೃತ್ತ ಪೊಲೀಸರಿಗೆ ಮಾರಣಾಂತಿಕ ಕಾಯಿಲೆಗಳಿಗೆ ''ಆರೋಗ್ಯ ಭಾಗ್ಯ'' ಅಡಿಯಲ್ಲಿ ಸುಸಜ್ಜಿತ ಚಿಕಿತ್ಸೆ ಕೊಡಿಸಬೇಕು.ಇಲಾಖೆಯ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಒಬ್ಬ ಶಾಸಕರನ್ನು ನೇಮಿಸ ಬೇಕೆಂದು ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

- Tod ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿ ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತವಾಗಿ ರಸ್ತೆ ಬಳಿ ಉರುಳಿ ಬಿದ್ದಿದ್ದು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಜೆಡಿಎಸ್ ಮುಖಂಡರಾದ ಸಿ.ಎಂ.ಆರ್ ಶ್ರೀನಾಥ್ ಅಣ್ಣನವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಧೈರ್ಯ ತುಂಬಿ ನಂತರ ಅಲ್ಲಿಂದಲೇ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿ ನಂತರ ಕೆ.ಎಸ್.ಆರ್.ಟಿ.ಸಿ ಡಿ.ಸಿ ರವರಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿ ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದರು... true news kolar1
- KOLAR KI.AWAAZ KOUSAR NEWS1
- ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪತನ ರೋಜರ್ನಹಳ್ಳಿ ಗೇಟ್ ಸಮೀಪ ಘಟನೆ – ಸ್ಥಳೀಯರಲ್ಲಿ ಆತಂಕ...1
- ದೊಡ್ಡಬಳ್ಳಾಪುರ ಬಾಡಿಗೆ ಮನೆಯಲ್ಲಿ ವಾಸವಿರುವ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳ್ಳತನ ಗೀತಂ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಘಟನೆ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಲ್ಯಾಪ್ ಟಾಪ್ ಗಳ ಕಳ್ಳತನ ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೊರ ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆ ಲ್ಯಾಪ್ ಟಾಪ್ ಕಳೆದಿರುವುದರಿಂದ ವೃತ್ತಿಪರ ಪ್ರಾಜೆಕ್ಟ್ ತಯಾರಿಸಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಆಂದ್ರಮೂಲದ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಸಂಕಷ್ಟ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ2
- Post by Venu Gopal2
- ಹುಬ್ಬಳ್ಳಿಯಲ್ಲಿ ಜಿಮ್ ಟ್ರೇನರ್ ಸಮೀರ್ ಮುಲ್ಲಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣವು ಚರ್ಚೆಗೆ ಗ್ರಾಸವಾಗಿದೆ. ಹಲವು ಯುವತಿಯರೊಂದಿಗೆ ವಾಟ್ಸಾಪ್ ಚಾಟ್‌ಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸಂತ್ರಸ್ತೆಯೊಬ್ಬಳು ಲೈಂಗಿಕ ದೌರ್ಜನ್ಯ ಹಾಗೂ ನಂತರ ಗರ್ಭಪಾತಕ್ಕೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿರುವ ಹಿನ್ನೆಲೆ ಪ್ರಕರಣ ಮತ್ತಷ್ಟು ಗಂಭೀರಗೊಂಡಿದೆ. ಈ ಆರೋಪಗಳ ಆಧಾರದ ಮೇಲೆ ಪೊಲೀಸರು ಮೊಬೈಲ್ ಡೇಟಾ ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸುತ್ತಿದ್ದಾರೆ. ಪ್ರಕರಣದ ನಿಜಾಸತ್ಯ ತನಿಖೆಯ ನಂತರವೇ ಸ್ಪಷ್ಟವಾಗಬೇಕಿದೆ.1
- ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕರಿಗೆ ಕೆ. ಕೃಷ್ಣಮೂರ್ತಿ ಸವಾಲು ಮಾಗಡಿ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರು ಎಲ್ಲಿಗಾದರೂ ಬರಲಿ, ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರು ಸವಾಲು ಹಾಕಿದ್ದಾರೆ. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಕೃಷ್ಣಮೂರ್ತಿ ಅವರ ಆರೋಪಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ ಅವರನ್ನು ನಾನು ಗೆಲ್ಲಿಸಬೇಕಾದ ವೇಳೆ ನಾನು ಯಾರು ಎಂದು ಗೊತ್ತಿರಲಿಲ್ಲವೇ ಮಜಿ ಶಾಸಕರ ಆರೋಪಗಳಿಗೆ ನಮ್ಮ ಪಕ್ಷದ ಮುಖಂಡರು ಉತ್ತರ ನೀಡಲು ಸಿದ್ದರಿದ್ದೇವೆ, ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಬಾಲಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಆರೋಪಗಳಿಗೆ ದಾಖಲೆ ನೀಡಲಿ: ಮಾಜಿ ಶಾಸಕರು ಮಾಡುತ್ತಿರುವ 600 ಕೋಟಿ ಹಗರಣ ಅಥವಾ ಗೌರಮ್ಮನಕೆರೆಯ ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮಣ್ಣು ಮಾರಾಟ ಮಾಡಿ ಜೀವನ ನಡೆಸುವ ಅಗತ್ಯ ಶಾಸಕರಿಗಿಲ್ಲ ಇಂಥಹ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಅವರ ಬಳಿ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು. ಚರ್ಚೆಗೆ ದಿನಾಂಕ ನಿಗದಿಪಡಿಸಿ: "ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವಂತೂ ಸಿದ್ಧ. ಮಾಜಿ ಶಾಸಕರೇ ಅಥವಾ ಮಾಧ್ಯಮದವರೇ ಒಂದು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ನಾವು ನಮ್ಮ ನಾಯಕರೊಂದಿಗೆ ಬಂದು ಪ್ರತಿಯೊಂದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಕೆ. ಕೃಷ್ಣಮೂರ್ತಿ ಹೇಳಿದರು. ಜನರೇ ತೀರ್ಪು ನೀಡುತ್ತಾರೆ: ನಾವು ಮಾಡಿದ ಕೆಲಸಗಳನ್ನು ನಾವೇ ಹೇಳಿಕೊಳ್ಳುವ ಅಗತ್ಯವಿಲ್ಲ, ಜನರು ಅದನ್ನು ಗಮನಿಸುತ್ತಿದ್ದಾರೆ. ಮಾಜಿ ಶಾಸಕರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಅಗ್ರೋ ಪುರುಷೋತ್ತಮ್, ಶಿವಕುಮಾರು, ಕಲ್ಕೆರೆ ಶಿವಣ್ಣ, ವೆಂಕಟೇಶ್ ಇತರರು ಇದ್ದರು. 1
- ದೇವನಹಳ್ಳಿ ಮದ್ಯ ಪ್ರಾಚ್ಯ ದೇಶಗಳಲ್ಲಿ ಯುದ್ದ ಮುಂದುವರೆದ ಹಿನ್ನೆಲೆ, ಡೊಮೆಸ್ಟಿಕ್ ಸಿಲಿಂಡರ್ ಗ್ಯಾಸ್ ಗೂ ಜನ ಪರದಾಟ, ದೇವನಹಳ್ಳಿ ಪಟ್ಟಣದ ಹೆಚ್.ಪಿ ಗ್ಯಾಸ್ ನಲ್ಲಿ ಅಡುಗೆ ಸಿಲಿಂಡರ್ ಗೆ ಮುಗಿಬಿದ್ದ ಜನ, ಹೆಚ್.ಪಿ ಗ್ಯಾಸ್ ಬುಕ್ ಮಾಡಿ 20 ದಿನಗಳು ಕಳೆದು ಇದೀಗ ಕೆಲವೇ ಕೆಲವು ಸಿಲಿಂಡರ್ ಗಳು ಮಾತ್ರ ಹಂಚಿಕೆ ಕೆಲವೇ ಕೆಲವು ಸಿಲಿಂಡರ್ ಗಳು ಪಡೆಯಲು ಹೆಚ್ .ಪಿ ಗ್ಯಾಸ್ ಕಚೇರಿ ಮುಂದೆ ಕ್ಯೂನಿಂತ ಜನ, ಹೆಚ್. ಪಿ ಗ್ಯಾಸ್ ವಿರುದ್ದ ಜನರ ಆಕ್ರೋಶ, ಕಳೆದ 20 ದಿನಗಳ ಹಿಂದೆ ಬುಕ್ ಮಾಡಿದ್ರು, ಒಟಿಪಿ ಪಡೆದು ಸಿಲಿಂಡರ್ ಕೊಡ್ತಿಲ್ಲ ಅಂತಾ ಆಕ್ರೋಶ, ನಾ ಮುಂದು ತಾ ಮುಂದು ಅಂತಾ ಅಡುಗೆ ಸಿಲಿಂಡರ್ ಗಳು ಪಡೆಯಲು ನೂಕು ನೂಗ್ಗಲು, ಟಾಟಾ ಏಸ್ ಗಾಡಿಯಲ್ಲಿ 50 ಸಿಲಿಂಡರ್ ಗಳು ತುಂಬಿಕೊಂಡುಬಂದಿರೋ ಹೆಚ್.ಪಿ ಸಿಬ್ಬಂದಿ, ನಾನು ಬುಕ್ ಮಾಡಿದ್ದೇನೆ ನಮಗೆ ಕೊಡಿ ನಮಗೆ ಕೊಡಿ ಅಂತಾ ದುಂಬಾಲು ಬಿದ್ದ ಜನ, 20 ದಿನಗಳಿಂದ ಅಡುಗೆ ಸಿಲಿಂಡರ್ ಪೂರೈಕೆ ಹಾಗ್ತಿಲ್ಲ ಅಂತಾ ಗ್ಯಾಸ್ ಕಚೇರಿ ಬಳಿ ಮಹಿಳೆಯರ ಆಕ್ರೋಶ, ಸಚಿವ ಕೆಹೆಚ್ ಮುನಿಯಪ್ಪ ಸ್ವ ಕ್ಷೇತ್ರದಲ್ಲಿ ಅಡುಗೆ ಸಿಲಿಂಡರ್ ಗಳಿಗೂ ಆಹಾಕರ, ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ1