logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುರುವೇಕೆರೆ ತಾಲ್ಲೂಕಿನ ಗೋಣಿತುಮಕೂರು ವಲಯದ ಮಾವಿನಕೆರೆ ಕಾರ್ಯ ಕ್ಷೇತ್ರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಉಮಾ ರವರು ಸ್ವಸಹಾಯ ಪ್ರಗತಿ ಬಂದು ಸಂಘದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಅವರು ತಂಬಾಕು ಸೇವನೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳು ಮತ್ತು ಅದರ ದುಷ್ಪರಿಣಾಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ದುಶ್ಚಟಗಳಿಂದ ಮತ್ತು ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ವಿವರಿಸಿ, ಇವುಗಳಿಂದ ದೂರವಿರುವ ಬಗ್ಗೆ ಸಲಹೆಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ಅವಿನಾಶ್, ಜನಜಾಗೃತಿ ಸದಸ್ಯರಾದ ಕುಮಾರ್ ಮತ್ತು ಸುರೇಶ್, ಸೇವಾಪ್ರತಿನಿಧಿ ಮಂಜುಳ ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

1 hr ago
user_Manohara
Manohara
Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
1 hr ago
c064af12-7c11-4eb6-8abd-58ea118320e9

ತುರುವೇಕೆರೆ ತಾಲ್ಲೂಕಿನ ಗೋಣಿತುಮಕೂರು ವಲಯದ ಮಾವಿನಕೆರೆ ಕಾರ್ಯ ಕ್ಷೇತ್ರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಉಮಾ ರವರು ಸ್ವಸಹಾಯ ಪ್ರಗತಿ ಬಂದು ಸಂಘದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಅವರು ತಂಬಾಕು ಸೇವನೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳು ಮತ್ತು ಅದರ ದುಷ್ಪರಿಣಾಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ದುಶ್ಚಟಗಳಿಂದ ಮತ್ತು ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ವಿವರಿಸಿ, ಇವುಗಳಿಂದ ದೂರವಿರುವ ಬಗ್ಗೆ ಸಲಹೆಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ಅವಿನಾಶ್, ಜನಜಾಗೃತಿ ಸದಸ್ಯರಾದ ಕುಮಾರ್ ಮತ್ತು ಸುರೇಶ್, ಸೇವಾಪ್ರತಿನಿಧಿ ಮಂಜುಳ ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರು ದಶಕಗಳಿಂದ ಕಾಯುತ್ತಿರುವ ಹೇಮಾವತಿ ನೀರಾವರಿ ಯೋಜನೆ ಇನ್ನೂ ಸಂಪೂರ್ಣವಾಗಿ ಸಾಕಾರಗೊಳ್ಳದ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಭೌತಿಕ ಹೋರಾಟಗಳ ಜೊತೆಗೆ, ಈಗ ತಮ್ಮ ಅಳಲನ್ನು ದೈವಿಕ ಶಕ್ತಿಯ ಮೊರೆ ಹೋಗುವ ಮೂಲಕ ತೋಡಿಕೊಳ್ಳುತ್ತಿದ್ದಾರೆ. ಯೋಜನೆ ಮಂಜೂರಾಗಿ ದಶಕಗಳೇ ಕಳೆದಿದ್ದರೂ, ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ನೀರಿನ ಮೂಲಗಳಿಲ್ಲದೆ ಅಂತರ್ಜಲ ಮಟ್ಟ ಭೀಕರವಾಗಿ ಕುಸಿದಿದ್ದು, ಸಾವಿರಾರು ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ದೊಡ್ಡ ಸವಾಲಾಗಿದೆ; ಹೊಲಗಳಲ್ಲಿ ಬೆಳೆ ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇವಲ ಮಳೆಯನ್ನೇ ನಂಬಿ ಕುಳಿತುಕೊಳ್ಳದೆ, ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಒತ್ತಾಯಿಸಿ ರೈತರು ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಈ ಹತಾಶ ಪರಿಸ್ಥಿತಿಯಲ್ಲಿ, ನಂಬಿಕೆಯ ದಾರಿಯನ್ನು ಹಿಡಿದ ರೈತರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ. ರಾಯರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಹೇಮಾವತಿ ನೀರು ತಮ್ಮ ಭಾಗದ ಕೆರೆಗಳಿಗೆ ಬೇಗ ಹರಿಯುವಂತೆ ಹಾಗೂ ರೈತರ ಬದುಕು ಹಸನಾಗುವಂತೆ ಪ್ರಾರ್ಥಿಸಿದ್ದಾರೆ. ಸ್ಥಳೀಯ ರೈತ ಮುಖಂಡರು ನೀಡಿರುವ ಮಾಹಿತಿ ಪ್ರಕಾರ, ಅಧಿಕಾರಿಗಳು ಹೇಮಾವತಿ ಯೋಜನೆಯ ಕೆಲಸವನ್ನು ಬಹುಬೇಗ ಮುಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರೈತರ ಸಮಸ್ಯೆಗಳನ್ನು ಚರ್ಚಿಸಲು ಜೂನ್ 5 ರಂದು ಶಾವಿಗೆ ಹಳ್ಳಿಯಲ್ಲಿ ಸಭೆಯನ್ನು ಕರೆಯಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರೈತರಿಗೆ ಕರೆ ನೀಡಲಾಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ಚಿಕ್ಕನಾಯಕನಹಳ್ಳಿ ತಾಲೂಕಿನ ಜನರ ನೀರಿನ ದಾಹವನ್ನು ತಣಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
    1
    ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರು ದಶಕಗಳಿಂದ ಕಾಯುತ್ತಿರುವ ಹೇಮಾವತಿ ನೀರಾವರಿ ಯೋಜನೆ ಇನ್ನೂ ಸಂಪೂರ್ಣವಾಗಿ ಸಾಕಾರಗೊಳ್ಳದ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಭೌತಿಕ ಹೋರಾಟಗಳ ಜೊತೆಗೆ, ಈಗ ತಮ್ಮ ಅಳಲನ್ನು ದೈವಿಕ ಶಕ್ತಿಯ ಮೊರೆ ಹೋಗುವ ಮೂಲಕ ತೋಡಿಕೊಳ್ಳುತ್ತಿದ್ದಾರೆ.

ಯೋಜನೆ ಮಂಜೂರಾಗಿ ದಶಕಗಳೇ ಕಳೆದಿದ್ದರೂ, ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ನೀರಿನ ಮೂಲಗಳಿಲ್ಲದೆ ಅಂತರ್ಜಲ ಮಟ್ಟ ಭೀಕರವಾಗಿ ಕುಸಿದಿದ್ದು, ಸಾವಿರಾರು ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ದೊಡ್ಡ ಸವಾಲಾಗಿದೆ; ಹೊಲಗಳಲ್ಲಿ ಬೆಳೆ ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇವಲ ಮಳೆಯನ್ನೇ ನಂಬಿ ಕುಳಿತುಕೊಳ್ಳದೆ, ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಒತ್ತಾಯಿಸಿ ರೈತರು ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ.

ಈ ಹತಾಶ ಪರಿಸ್ಥಿತಿಯಲ್ಲಿ, ನಂಬಿಕೆಯ ದಾರಿಯನ್ನು ಹಿಡಿದ ರೈತರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ. ರಾಯರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಹೇಮಾವತಿ ನೀರು ತಮ್ಮ ಭಾಗದ ಕೆರೆಗಳಿಗೆ ಬೇಗ ಹರಿಯುವಂತೆ ಹಾಗೂ ರೈತರ ಬದುಕು ಹಸನಾಗುವಂತೆ ಪ್ರಾರ್ಥಿಸಿದ್ದಾರೆ. ಸ್ಥಳೀಯ ರೈತ ಮುಖಂಡರು ನೀಡಿರುವ ಮಾಹಿತಿ ಪ್ರಕಾರ, ಅಧಿಕಾರಿಗಳು ಹೇಮಾವತಿ ಯೋಜನೆಯ ಕೆಲಸವನ್ನು ಬಹುಬೇಗ ಮುಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರೈತರ ಸಮಸ್ಯೆಗಳನ್ನು ಚರ್ಚಿಸಲು ಜೂನ್ 5 ರಂದು ಶಾವಿಗೆ ಹಳ್ಳಿಯಲ್ಲಿ ಸಭೆಯನ್ನು ಕರೆಯಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರೈತರಿಗೆ ಕರೆ ನೀಡಲಾಗಿದೆ.

ಸರ್ಕಾರ ಮತ್ತು ಜನಪ್ರತಿನಿಧಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ಚಿಕ್ಕನಾಯಕನಹಳ್ಳಿ ತಾಲೂಕಿನ ಜನರ ನೀರಿನ ದಾಹವನ್ನು ತಣಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    47 min ago
  • ಭಾರತದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಒಂದು ವಿಷಯದ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. #Zeenat_Ul_Masjid, ಇದು ಒಂದು #WaqfCommittee ವ್ಯಾಪ್ತಿಯಲ್ಲಿರುವ ಮಸೀದಿಯಾಗಿದ್ದು, ಇಲ್ಲಿ ನಡೆಯುತ್ತಿರುವ ನಿರ್ಮಾಣ ಅಥವಾ ನವೀಕರಣ ಕಾಮಗಾರಿಗೆ ಅಗತ್ಯವಾದ ಅನುಮತಿಗಳನ್ನು ಒದಗಿಸಲಾಗಿದೆಯೇ ಎಂದು ಪ್ರಶ್ನಿಸಲಾಗುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಜನರು ಬಯಸುತ್ತಿದ್ದಾರೆ.
    1
    ಭಾರತದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಒಂದು ವಿಷಯದ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. #Zeenat_Ul_Masjid, ಇದು ಒಂದು #WaqfCommittee ವ್ಯಾಪ್ತಿಯಲ್ಲಿರುವ ಮಸೀದಿಯಾಗಿದ್ದು, ಇಲ್ಲಿ ನಡೆಯುತ್ತಿರುವ ನಿರ್ಮಾಣ ಅಥವಾ ನವೀಕರಣ ಕಾಮಗಾರಿಗೆ ಅಗತ್ಯವಾದ ಅನುಮತಿಗಳನ್ನು ಒದಗಿಸಲಾಗಿದೆಯೇ ಎಂದು ಪ್ರಶ್ನಿಸಲಾಗುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಜನರು ಬಯಸುತ್ತಿದ್ದಾರೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    1 hr ago
  • ಬೆಂಗಳೂರಿನಲ್ಲಿ ಅಬೀಬಾ ಟೆಂಟ್ ಹೌಸ್‌ನಿಂದ ವಿವಿಧ ಬಾಡಿಗೆ ಸೇವೆಗಳು ಲಭ್ಯವಿವೆ. ಹೆಚ್ಚಿನ ಮಾಹಿತಿ ಹಾಗೂ ಸೇವೆಗಳಿಗಾಗಿ, ಆಸಕ್ತರು 9900619376 ಅಥವಾ 7760976887 ಸಂಖ್ಯೆಗಳನ್ನು ಸಂಪರ್ಕಿಸಬಹುದು.
    1
    ಬೆಂಗಳೂರಿನಲ್ಲಿ ಅಬೀಬಾ ಟೆಂಟ್ ಹೌಸ್‌ನಿಂದ ವಿವಿಧ ಬಾಡಿಗೆ ಸೇವೆಗಳು ಲಭ್ಯವಿವೆ. ಹೆಚ್ಚಿನ ಮಾಹಿತಿ ಹಾಗೂ ಸೇವೆಗಳಿಗಾಗಿ, ಆಸಕ್ತರು 9900619376 ಅಥವಾ 7760976887 ಸಂಖ್ಯೆಗಳನ್ನು ಸಂಪರ್ಕಿಸಬಹುದು.
    user_Sahir sarakar
    Sahir sarakar
    Bengaluru South, Bengaluru Urban•
    1 hr ago
  • ಕಟ್ಟಾ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡದ ಗೆಲುವಿಗಾಗಿ ಅನ್ನಮ್ಮ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಗೆ ವಿಜಯವನ್ನು ಬಯಸಿ, ಈ ಅಭಿಮಾನಿಗಳು ಕ್ರಿಕೆಟ್ ಅನ್ನು ನಂಬಿಕೆ, ಭರವಸೆ ಮತ್ತು ಭಕ್ತಿಯ ಮಿಶ್ರಣವನ್ನಾಗಿ ಪರಿವರ್ತಿಸಿರುವುದು ಕಂಡುಬಂದಿದೆ. ಇದು ಆರ್‌ಸಿಬಿ ಫ್ರಾಂಚೈಸಿ ಜೊತೆ ಅಭಿಮಾನಿಗಳು ಎಷ್ಟು ಆಳವಾಗಿ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
    1
    ಕಟ್ಟಾ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡದ ಗೆಲುವಿಗಾಗಿ ಅನ್ನಮ್ಮ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಗೆ ವಿಜಯವನ್ನು ಬಯಸಿ, ಈ ಅಭಿಮಾನಿಗಳು ಕ್ರಿಕೆಟ್ ಅನ್ನು ನಂಬಿಕೆ, ಭರವಸೆ ಮತ್ತು ಭಕ್ತಿಯ ಮಿಶ್ರಣವನ್ನಾಗಿ ಪರಿವರ್ತಿಸಿರುವುದು ಕಂಡುಬಂದಿದೆ. ಇದು ಆರ್‌ಸಿಬಿ ಫ್ರಾಂಚೈಸಿ ಜೊತೆ ಅಭಿಮಾನಿಗಳು ಎಷ್ಟು ಆಳವಾಗಿ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
    user_Manish Bramhastra
    Manish Bramhastra
    Local News Reporter ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ನಂಜನಗೂಡಿನಲ್ಲಿ ಚತುರಾಮ್ ಇವೆಂಟ್ಸ್ & ಕಂ. ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾಗಿರುವ ಮಾವು-ಹಲಸಿನ ಆಹಾರ ಹಾಗೂ ಗೃಹೋಪಯೋಗಿ ವಸ್ತುಗಳ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೇ 29ರಿಂದ 31ರವರೆಗೆ ನಡೆಯುತ್ತಿರುವ ಈ ಮೇಳವು ಸ್ಥಳೀಯ ರೈತರು, ಸ್ವಸಹಾಯ ಸಂಘಗಳು ಹಾಗೂ ಸಣ್ಣ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ವೇದಿಕೆಯನ್ನು ಒದಗಿಸಿದೆ. ಮೇಳದಲ್ಲಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ಬಣ್ಣ, ಗಾತ್ರ ಹಾಗೂ ರುಚಿಯ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ರೈತರು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ, ಹಲಸಿನ ಹಣ್ಣಿನಿಂದ ತಯಾರಿಸಲಾದ ಚಿಪ್ಸ್, ಹಪ್ಪಳ, ಕಡುಬು, ಪಾಯಸ ಸೇರಿದಂತೆ ಹಲವು ಸಾಂಪ್ರದಾಯಿಕ ತಿನಿಸುಗಳು ಹಾಗೂ ಮಾವಿನ ಹಣ್ಣಿನ ಜ್ಯೂಸ್, ಐಸ್‌ಕ್ರೀಂ, ಹೋಳಿಗೆ, ಜ್ಯಾಂನಂತಹ ಮೌಲ್ಯವರ್ಧಿತ ಉತ್ಪನ್ನಗಳು ಮೇಳದ ವಿಶೇಷ ಆಕರ್ಷಣೆಯಾಗಿವೆ. ಆಹಾರ ಉತ್ಪನ್ನಗಳ ಜೊತೆಗೆ, ಅಡುಗೆ ಮನೆಗೆ ಬೇಕಾದ ಉಪಕರಣಗಳು, ಅಲಂಕಾರಿಕ ವಸ್ತುಗಳು, ಕೈಗಾರಿಕಾ ಉತ್ಪನ್ನಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಂದ ತಯಾರಿಸಲಾದ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು, ರೈತರಿಗೆ ನೇರ ಮಾರಾಟದ ಅವಕಾಶ ಕಲ್ಪಿಸುವುದು ಹಾಗೂ ಗ್ರಾಮೀಣ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ನಂಜನಗೂಡಿನಲ್ಲಿ ಇಂತಹ ವಿಶೇಷ ಮೇಳ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ ಮತ್ತು ಆಹಾರ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.
    4
    ನಂಜನಗೂಡಿನಲ್ಲಿ ಚತುರಾಮ್ ಇವೆಂಟ್ಸ್ & ಕಂ. ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾಗಿರುವ ಮಾವು-ಹಲಸಿನ ಆಹಾರ ಹಾಗೂ ಗೃಹೋಪಯೋಗಿ ವಸ್ತುಗಳ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೇ 29ರಿಂದ 31ರವರೆಗೆ ನಡೆಯುತ್ತಿರುವ ಈ ಮೇಳವು ಸ್ಥಳೀಯ ರೈತರು, ಸ್ವಸಹಾಯ ಸಂಘಗಳು ಹಾಗೂ ಸಣ್ಣ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ವೇದಿಕೆಯನ್ನು ಒದಗಿಸಿದೆ.

ಮೇಳದಲ್ಲಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ಬಣ್ಣ, ಗಾತ್ರ ಹಾಗೂ ರುಚಿಯ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ರೈತರು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ, ಹಲಸಿನ ಹಣ್ಣಿನಿಂದ ತಯಾರಿಸಲಾದ ಚಿಪ್ಸ್, ಹಪ್ಪಳ, ಕಡುಬು, ಪಾಯಸ ಸೇರಿದಂತೆ ಹಲವು ಸಾಂಪ್ರದಾಯಿಕ ತಿನಿಸುಗಳು ಹಾಗೂ ಮಾವಿನ ಹಣ್ಣಿನ ಜ್ಯೂಸ್, ಐಸ್‌ಕ್ರೀಂ, ಹೋಳಿಗೆ, ಜ್ಯಾಂನಂತಹ ಮೌಲ್ಯವರ್ಧಿತ ಉತ್ಪನ್ನಗಳು ಮೇಳದ ವಿಶೇಷ ಆಕರ್ಷಣೆಯಾಗಿವೆ. ಆಹಾರ ಉತ್ಪನ್ನಗಳ ಜೊತೆಗೆ, ಅಡುಗೆ ಮನೆಗೆ ಬೇಕಾದ ಉಪಕರಣಗಳು, ಅಲಂಕಾರಿಕ ವಸ್ತುಗಳು, ಕೈಗಾರಿಕಾ ಉತ್ಪನ್ನಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಂದ ತಯಾರಿಸಲಾದ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು, ರೈತರಿಗೆ ನೇರ ಮಾರಾಟದ ಅವಕಾಶ ಕಲ್ಪಿಸುವುದು ಹಾಗೂ ಗ್ರಾಮೀಣ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ನಂಜನಗೂಡಿನಲ್ಲಿ ಇಂತಹ ವಿಶೇಷ ಮೇಳ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ ಮತ್ತು ಆಹಾರ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    21 hrs ago
  • ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಸಮೀಪವಿರುವ ಶ್ರೀ ಗುರು ಗೋ ಸೇವಾ ಪರಿವಾರದಲ್ಲಿ ಭಾನುವಾರ, ಮೇ 31, 2026 ರಂದು ಉಚಿತ ಪಂಚಗವ್ಯ ಪ್ರಾಶನ ಮತ್ತು ಅಗ್ನಿಹೋತ್ರ ಪ್ರತ್ಯಕ್ಷತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಬಂಧುಗಳು ಬೆಳಿಗ್ಗೆ 6:00 ಗಂಟೆಗೆ ಸರಿಯಾಗಿ ಆಗಮಿಸಬೇಕೆಂದು ತಿಳಿಸಲಾಗಿದೆ. ಅಗ್ನಿಹೋತ್ರ ಪ್ರತ್ಯಕ್ಷತೆಯು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಲಿದ್ದು, ಪಂಚಗವ್ಯ ಪ್ರಾಶನವು ಬೆಳಗ್ಗೆ 6:30ಕ್ಕೆ ನೆರವೇರಲಿದೆ. ಶ್ರೀ ಗುರು ಗೋ ಸೇವಾ ಪರಿವಾರ ಗೋ ಮಂದಿರ, ಯಳನಾಡು ಇಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶೇಷ ಸೂಚನೆಯ ಪ್ರಕಾರ, ಅಂದು ಅಧಿಕಮಾಸದ ಹುಣ್ಣಿಮೆ ಇರುವುದರಿಂದ ಗೋಪೂಜೆ ಮತ್ತು ಗೋವುಗಳಿಗೆ ಗೋಗ್ರಾಸವನ್ನು ನೀಡಲು ಕೂಡ ಅವಕಾಶವಿರುತ್ತದೆ. ಈ ಮೂಲಕ ಆಸಕ್ತರು ಈ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
    1
    ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಸಮೀಪವಿರುವ ಶ್ರೀ ಗುರು ಗೋ ಸೇವಾ ಪರಿವಾರದಲ್ಲಿ ಭಾನುವಾರ, ಮೇ 31, 2026 ರಂದು ಉಚಿತ ಪಂಚಗವ್ಯ ಪ್ರಾಶನ ಮತ್ತು ಅಗ್ನಿಹೋತ್ರ ಪ್ರತ್ಯಕ್ಷತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಬಂಧುಗಳು ಬೆಳಿಗ್ಗೆ 6:00 ಗಂಟೆಗೆ ಸರಿಯಾಗಿ ಆಗಮಿಸಬೇಕೆಂದು ತಿಳಿಸಲಾಗಿದೆ. ಅಗ್ನಿಹೋತ್ರ ಪ್ರತ್ಯಕ್ಷತೆಯು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಲಿದ್ದು, ಪಂಚಗವ್ಯ ಪ್ರಾಶನವು ಬೆಳಗ್ಗೆ 6:30ಕ್ಕೆ ನೆರವೇರಲಿದೆ. ಶ್ರೀ ಗುರು ಗೋ ಸೇವಾ ಪರಿವಾರ ಗೋ ಮಂದಿರ, ಯಳನಾಡು ಇಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಸೂಚನೆಯ ಪ್ರಕಾರ, ಅಂದು ಅಧಿಕಮಾಸದ ಹುಣ್ಣಿಮೆ ಇರುವುದರಿಂದ ಗೋಪೂಜೆ ಮತ್ತು ಗೋವುಗಳಿಗೆ ಗೋಗ್ರಾಸವನ್ನು ನೀಡಲು ಕೂಡ ಅವಕಾಶವಿರುತ್ತದೆ. ಈ ಮೂಲಕ ಆಸಕ್ತರು ಈ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    20 hrs ago
  • ಫಿರೋಜಾಬಾದ್‌ನಲ್ಲಿ ಏಕಪಕ್ಷೀಯ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕನೊಬ್ಬನ ಮೇಲೆ ದಾಳಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
    1
    ಫಿರೋಜಾಬಾದ್‌ನಲ್ಲಿ ಏಕಪಕ್ಷೀಯ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕನೊಬ್ಬನ ಮೇಲೆ ದಾಳಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.