ಕೊಳ್ಳೇಗಾಲ,:ಎಫ್‌ಆರ್‌ಎಸ್ ಬಳಕೆಯನ್ನು ವಿರೋಧಿಸಿ ಮತ್ತು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೊಳ್ಳೇಗಾಲದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಪ್ಪು ಬಟ್ಟೆ ಧರಿಸಿ ಕರ್ತವ್ಯ ಹಾಜರಾದರು ಇದ್ದಕ್ಕೂ ಮುನ್ನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಮನವಿ ಸಲ್ಲಿಸಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಮಾತನಾಡಿ ಭಾರತದಲ್ಲಿ ಮಾನವ ಅಭಿವೃದ್ಧಿಗೆ ಪ್ರಮುಖವಾದ ಐಸಿಡಿಎಸ್‌ಯೋಜನೆ ಸರಳಗೊಳಿಸಿ ಫಲಾನುಭವಿಗಳನ್ನು ಹೆಚ್ಚು ಆಕರ್ಷಿಸುವ ಬದಲು, ಸರ್ಕಾರಗಳು ಇದನ್ನು ಸಂಕೀರ್ಣಗೊಳಿಸುತ್ತಿವೆ. ಇದರ ಭಾಗವಾಗಿ ಯಾವುದೇ ಸೌಲಭ್ಯಗಳನ್ನು ನೀಡದೇ 'ಮುಖ ಗುರುತಿನ ತಂತ್ರಾಂಶ' ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಈ ತಂತ್ರಾಂಶದಿಂದ ಕ್ಷೇತ್ರಮಟ್ಟದಲ್ಲಿ ಕಾರ್ಯಕರ್ತೆಯರಿಗೆ ಅನೇಕ ತೊಂದರೆಗಳಾಗುತ್ತಿರುವುದಾಗಿ ಅವರು ದೂರು ನೀಡಿದರು ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಎಫ್‌ಆರ್‌ಎಸ್ ಮೂಲಕ ಸಂಗ್ರಹವಾಗುವ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು. ಈ ಡೇಟಾ ಸೋರಿಕೆಯ ಸಾಧ್ಯತೆ ಮತ್ತು ಸೈಬರ್ ವಂಚನೆಗಳ ಭೀತಿ ಎದುರಾಗಿದಡ ಎಂದು ಹೇಳಿದರು. ಈ ಪ್ರತಿಭಟನೆಯಲ್ಲಿ ಸಿಐಟಿಯು ಕಾರ್ಯದರ್ಶಿ ಶಾಂತಮ್ಮ, ಪದಾಧಿಕಾರಿಗಳು ನಳಿನ, ರಾಣಿ, ಸವಿತಾ, ಸಹನಾಜ್, ಹಂಸ, ಭಾಗ್ಯಲಕ್ಷ್ಮೀ, ಶೋಭ, ಸುಮ ಎಲ್ಲಾ ಸದಸ್ಯರು ಇದ್ದರು.