ಗುರುಮಠಕಲ್ ಪಟ್ಟಣದ ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಈದ್ ಮಿಲಾದ್ ಜುಲುಸ್; ಮೆರವಣಿಗೆಯಲ್ಲಿ ಸಮಾಜದ ಹಿರಿಯರು, ಯುವಕರು ಪಾಲ್ಗೊಂಡರು. ಗುರುಮಠಕಲ್ ನಲ್ಲಿ ಈದ್ ಮಿಲಾದ್ ಮೆರವಣಿಗೆ: ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಜುಲುಸ್ ಗುರುಮಠಕಲ್: ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಜುಲುಸ್ ಅದ್ದೂರಿಯಾಗಿ ನಡೆಯಿತು. ಮಿಲಾದ್ ಕಮಿಟಿ ಹಾಗೂ ಸದರ್ ಪಂಚ್ ನೇತೃತ್ವದಲ್ಲಿ ಮರಾಠವಾಡಿ ಮೊಹಲ್ಲಾದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶ ಸಾರಿತು. ಮದರಸಾ ಬಾಬುಲ್ ಇಲ್ಮ್ ತಹಫೀಜುಲ್ ಖುರಾನ್ ವಿದ್ಯಾರ್ಥಿಗಳು, ಸಮಾಜದ ಹಿರಿಯರು ಹಾಗೂ ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿ ನಾತ್‌ಗಳನ್ನು ಪಠಿಸುವ ಮೂಲಕ ಗಮನ ಸೆಳೆದರು. ವಿವಿಧೆಡೆ ಸಾರ್ವಜನಿಕರಿಗೆ ಜ್ಯೂಸ್, ಶರಬತ್, ಐಸ್‌ಕ್ರೀಂ, ಬಿಸ್ಕತ್ ಹಾಗೂ ಕುಡಿಯುವ ನೀರನ್ನು ವಿತರಿಸಲಾಯಿತು. ಮೆರವಣಿಗೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ದೌಲತ್ ಕುರಿ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮರಾಠವಾಡಿ ಮೊಹಲ್ಲಾದಿಂದ ಆರಂಭವಾದ ಜುಲುಸ್ ಶಹಾಬುದ್ದಿನ್ ಮೊಹಲ್ಲಾ, ಸಿಹಿನೀರಿನ ಬಾವಿ ಮಾರ್ಗ, ಮಲ್ಲಯ್ಯಕಟ್ಟ ಹಾಗೂ ಗಡಿ ಮೊಹಲ್ಲಾ ಮೂಲಕ ಸಂಚರಿಸಿ ದರ್ಗಾ ದಾದಾಪೀರ್ ಬಳಿ ಶಾಂತಿಯುತವಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸದರ್ ಖಾಜಾ ಮೈನೊದ್ದಿನ್, ಪಾಶಾ ಪ್ಯಾರೆ, ಅಬ್ದುಲ್ಲಾ ಮರಫಾಶಿ, ಚಾಂದ್ ಪಾಶಾ, ಫೈಯಾಜ್ ಅಹ್ಮದ್, ಅಕ್ತರ್ ಪ್ಯಾರೆ, ಅಬ್ದುಲ್ ನಬಿ, ಸಾಲೆ ನಹದಿ, ಮುಬಾರಕ್ ಬಿನ್ ಜಮಿಲ್, ಸೈಯದ್ ಮೋಯಿನುದ್ದಿನ್, ಹಬಿಬ್ ಅಹ್ಮದ್, ಸೈಯದ್ ಬಾಬಾ, ಅಬ್ದುಲ್ಲಾ ಸಾರಿ, ಹಾಫಿಜ್ ನವಾಜ್ ಖಾನ್, ಹಬಿಬ್ ಅಬುಬಕ್ಕರ್, ಅಬ್ದುಲ್ ರಹಮಾನ್, ಸಾದಿಕ್ ವಹಿದುದ್ದಿನ್ ಸೇರಿದಂತೆ ಸಮಾಜದ ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಗುರುಮಠಕಲ್ ಪಟ್ಟಣದ ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಈದ್ ಮಿಲಾದ್ ಜುಲುಸ್; ಮೆರವಣಿಗೆಯಲ್ಲಿ ಸಮಾಜದ ಹಿರಿಯರು, ಯುವಕರು ಪಾಲ್ಗೊಂಡರು. ಗುರುಮಠಕಲ್ ನಲ್ಲಿ ಈದ್ ಮಿಲಾದ್ ಮೆರವಣಿಗೆ: ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಜುಲುಸ್ ಗುರುಮಠಕಲ್: ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಜುಲುಸ್ ಅದ್ದೂರಿಯಾಗಿ ನಡೆಯಿತು. ಮಿಲಾದ್ ಕಮಿಟಿ ಹಾಗೂ ಸದರ್
ಪಂಚ್ ನೇತೃತ್ವದಲ್ಲಿ ಮರಾಠವಾಡಿ ಮೊಹಲ್ಲಾದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶ ಸಾರಿತು. ಮದರಸಾ ಬಾಬುಲ್ ಇಲ್ಮ್ ತಹಫೀಜುಲ್ ಖುರಾನ್ ವಿದ್ಯಾರ್ಥಿಗಳು, ಸಮಾಜದ ಹಿರಿಯರು ಹಾಗೂ ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿ ನಾತ್‌ಗಳನ್ನು ಪಠಿಸುವ ಮೂಲಕ ಗಮನ ಸೆಳೆದರು. ವಿವಿಧೆಡೆ ಸಾರ್ವಜನಿಕರಿಗೆ ಜ್ಯೂಸ್, ಶರಬತ್, ಐಸ್‌ಕ್ರೀಂ, ಬಿಸ್ಕತ್ ಹಾಗೂ ಕುಡಿಯುವ ನೀರನ್ನು
ವಿತರಿಸಲಾಯಿತು. ಮೆರವಣಿಗೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ದೌಲತ್ ಕುರಿ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮರಾಠವಾಡಿ ಮೊಹಲ್ಲಾದಿಂದ ಆರಂಭವಾದ ಜುಲುಸ್ ಶಹಾಬುದ್ದಿನ್ ಮೊಹಲ್ಲಾ, ಸಿಹಿನೀರಿನ ಬಾವಿ ಮಾರ್ಗ, ಮಲ್ಲಯ್ಯಕಟ್ಟ ಹಾಗೂ ಗಡಿ ಮೊಹಲ್ಲಾ ಮೂಲಕ ಸಂಚರಿಸಿ ದರ್ಗಾ ದಾದಾಪೀರ್ ಬಳಿ ಶಾಂತಿಯುತವಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸದರ್ ಖಾಜಾ ಮೈನೊದ್ದಿನ್, ಪಾಶಾ ಪ್ಯಾರೆ, ಅಬ್ದುಲ್ಲಾ
ಮರಫಾಶಿ, ಚಾಂದ್ ಪಾಶಾ, ಫೈಯಾಜ್ ಅಹ್ಮದ್, ಅಕ್ತರ್ ಪ್ಯಾರೆ, ಅಬ್ದುಲ್ ನಬಿ, ಸಾಲೆ ನಹದಿ, ಮುಬಾರಕ್ ಬಿನ್ ಜಮಿಲ್, ಸೈಯದ್ ಮೋಯಿನುದ್ದಿನ್, ಹಬಿಬ್ ಅಹ್ಮದ್, ಸೈಯದ್ ಬಾಬಾ, ಅಬ್ದುಲ್ಲಾ ಸಾರಿ, ಹಾಫಿಜ್ ನವಾಜ್ ಖಾನ್, ಹಬಿಬ್ ಅಬುಬಕ್ಕರ್, ಅಬ್ದುಲ್ ರಹಮಾನ್, ಸಾದಿಕ್ ವಹಿದುದ್ದಿನ್ ಸೇರಿದಂತೆ ಸಮಾಜದ ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
- ಲಿಂಗನಬಂಡಿ ಮೌನೇಶ್ವರ ಪೂಜೆಗೆ ಬಾಕುತಿರುವ ವಿಶ್ವಕರ್ಮ ಸಮಾಜದ ಎಲ್ಲರೂ ಒಂದಾಗೋಣ ಬನ್ನಿ ಸನ್ಮಾನ್ಯ ಶ್ರೀ ಕೆಪಿ ನಂಜುಂಡಿ ಇವರ ಕೈ ಕೊಡ್ಸೋಣ ಎಲ್ಲಾ ಮಠ ಅಧ್ಯಕ್ಷರು ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ವಿನಂತಿ1
- ನೇಪಾಳ ಪ್ರವಾಹದಲ್ಲಿ ಬದುಕುಳಿದ ಕಾಳಗಿ ತಾಲೂಕಿನ ಮಲ್ಲಿನಾಥ ಕೊಲಕುಂದಿ ಜೊತೆ ಸಿಎಮ್ ವಿಡಿಯೋ ಕಾಲ್ ಮಾತನಾಡಿ ಧೈರ್ಯ ತುಂಬಿದರು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಕೊಲಕುಂದಿ ಅವರು ನೇಪಾಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಪಾರಾಗಿ ಅದೃಷ್ಟವಶಾತ್ ಬದುಕುಳಿದ ಕನ್ನಡಿಗ ಮಲ್ಲಿನಾಥ ಕೊಲಕುಂದಿ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ.1
- ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗೋನಾಳ ಗ್ರಾಮೀಣವಾಗದ ಮಕ್ಕಳ ಪ್ರತಿಭೆ ಸಾರ್ವಜನಿಕರು ವಿಕಿಸಿ1
- ಪ್ರವಾದಿಯವರ ಆದರ್ಶಗಳ ಅನುಷ್ಠಾನ: ಈದ್ ಮಿಲಾದ್ ಅಂಗವಾಗಿ ಸೇವಾ ಕಾರ್ಯಗಳು ಚಿಂಚೋಳಿ, ಆ.27: ಪ್ರವಾದಿ ಮುಹಮ್ಮದ್ (ಸ.ಅ.ವ.) ಅವರ 1451ನೇ ಈದ್-ಎ-ಮಿಲಾದ್-ಉನ್-ನಬಿ ಪವಿತ್ರ ಹಬ್ಬವನ್ನು ಚಿಂಚೋಳಿಯಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಆಚರಿಸಲಾಯಿತು. ತಾಲೂಕು ಮುಸ್ಲಿಂ ಅಭಿವೃದ್ಧಿ ಕಮಿಟಿ, ಜಮಿಯತ್ ಉಲೇಮಾ ಹಾಗೂ ಸ್ಥಳೀಯ ಮುಸ್ಲಿಂ ಬಾಂಧವರ ಸಹಯೋಗದಲ್ಲಿ ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾದಿಯವರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಮುಸ್ಲಿಂ ಅಭಿವೃದ್ಧಿ ಕಮಿಟಿ ಅಧ್ಯಕ್ಷ ಮಸ್ತಾನ ಅಲಿ ಪಟ್ಟೇದಾರ್, ಪ್ರವಾದಿ ಮುಹಮ್ಮದ್ (ಸ.ಅ.ವ.) ಅವರು ಇಡೀ ಮಾನವಕುಲಕ್ಕೆ ಶಾಂತಿ, ಕರುಣೆ, ಸಹೋದರತೆ ಹಾಗೂ ಸಮಾನತೆಯ ಸಂದೇಶ ಸಾರಿದ ಮಹಾನ್ ವ್ಯಕ್ತಿತ್ವವಾಗಿದ್ದು, ಬಡವರು, ಅನಾಥರು ಮತ್ತು ಸಂಕಷ್ಟದಲ್ಲಿರುವವರ ಸೇವೆಯೇ ನಿಜವಾದ ಧರ್ಮ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಈದ್ ಮಿಲಾದ್ ಹಬ್ಬವು ಕೇವಲ ಸಂಭ್ರಮದ ಆಚರಣೆಯಾಗಿರದೆ, ಪ್ರವಾದಿಯವರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ದಿನವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಂಗವಾಗಿ ಚಿಂಚೋಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಉಪಹಾರಗಳನ್ನು ವಿತರಿಸಿ, ಅವರ ಶೀಘ್ರ ಗುಣಮುಖತೆಗಾಗಿ ಶುಭ ಹಾರೈಕೆ ಸಲ್ಲಿಸಲಾಯಿತು. ರೋಗಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಮುಖಂಡರು ಮಾನವೀಯ ಕಾಳಜಿಯನ್ನು ಮೆರೆದರು.2
- *ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ* ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು. ಮಾನ್ಯರೇ, ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ, ಜಯ ಕರ್ನಾಟಕ ಜನಪರ ವೇದಿಕೆ ತಮ್ಮಲ್ಲಿ ಈ ಮನವಿ ಮೂಲಕ ವಿನಂತಿಸಿಕೊಳ್ಳುವುದೇನೆAದರೆ, ಶಹಾಪುರ ತಾಲೂಕಿನ ಸಗರ.ಬಿ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ಗ್ರಾಹಕರಿಗೆ ಗ್ಯಾಸ್ ಸಿಲೆಂಡರ್ ವಿತರಿಸುವ ಸಂದರ್ಭದಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ. ಕಂಪನಿಯಿAದ ಬಂದ ಗ್ಯಾಸ್ ಸಿಲೆಂಡರ್‌ನಲ್ಲಿರುವ ಸುಮಾರು ೧೫ ಕೆ.ಜಿ. ಗ್ಯಾಸ್‌ನಲ್ಲಿ ಸ್ವಲ್ಪ ಪ್ರಮಾಣವನ್ನು ಖಾಲಿ ಇರುವ ಗ್ಯಾಸ್‌ಗಳಿಗೆ ಡಂಪ್ ಮಾಡಿ ಅಕ್ರಮವಾಗಿ ತೆಗೆದು, ಗ್ರಾಹಕರಿಗೆ ಕಡಿಮೆ ಪ್ರಮಾಣದ ಗ್ಯಾಸ್ ಇರುವ ಸಿಲೆಂಡರ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ಗ್ರಾಹಕರು ಆರ್ಥಿಕವಾಗಿ ವಂಚನೆಗೊಳಗಾಗುತ್ತಿದ್ದಾರೆ. ಇದಲ್ಲದೇ, ಗ್ರಾಹಕರಿಂದ ಮುಂಗಡವಾಗಿ OPT ಪಡೆದುಕೊಂಡು, ಗ್ಯಾಸ್ ಸಿಲೆಂಡರ್ ವಿತರಣೆ ಮಾಡದೇ, ಅದೇ ಸಿಲೆಂಡರ್‌ಗಳನ್ನು ಇತರರಿಗೆ ಅಕ್ರಮವಾಗಿ ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಕ್ರಮದಿಂದ ನೈಜ ಗ್ರಾಹಕರಿಗೆ ಗ್ಯಾಸ್ ಸಿಗದೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಸರ್ಕಾರಿ ರಜೆ ದಿನಗಳಲ್ಲಿಯೂ ಗ್ಯಾಸ್ ಏಜೆನ್ಸಿಯನ್ನು ತೆರೆದು ನಿಯಮಬಾಹಿರವಾಗಿ ವ್ಯವಹಾರ ನಡೆಸಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ. ಆದ್ದರಿಂದ, ಸಗರ ಗ್ರಾಮದ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದ ವಿರುದ್ಧ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಶೀಲನೆ ಮತ್ತು ತನಿಖೆ ನಡೆಸಿ, ಗ್ಯಾಸ್‌ನ ತೂಕ, ವಿತರಣೆ ದಾಖಲೆಗಳು, OTP ದಾಖಲೆಗಳು, ಮಾರಾಟದ ವಿವರಗಳು ಹಾಗೂ ಗ್ರಾಹಕರಿಗೆ ನೀಡಿರುವ ಸಿಲೆಂಡರ್‌ಗಳ ಕುರಿತು ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಂಡು, ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ. ಈ ಸಂದರ್ಭದಲ್ಲಿ ಸೊಪಣ್ಣ ತಾಲೂಕ ಅಧ್ಯಕ್ಷರು, ಜಗದೇವಿ ಹಳಿಸಗರ, ಜಯ ಶಹಾಪುರ, ಜ್ಯೋತಿ ಶಹಾಪುರ, ಪ್ರದೀಪ್ ಅಣಬಿ, ಶರಣು ಖಾನಾಪುರ, ರೆಡ್ಡಿ ಖಾನಾಪುರ, ಅರುಣಾ ಸಾಹುಕಾರ ಖಾನಾಪುರ, ಭೀಮರಾಯ ಬೀದರಾಣಿ, ರಾಮು, ವೆಂಕಟೇಶ ನಾಯಕ ಆಲ್ದಾಳ,4
- ಈದ್-ಎ-ಮಿಲಾದ್-ಉನ್-ನಬಿ ಅಂಗವಾಗಿ ರಾಯಚೂರಿನಲ್ಲಿ ಮಕ್ಕಳ ವೈಭವದ ಪಾದಯಾತ್ರೆ ರಾಯಚೂರು: ಆಗಸ್ಟ್ 26 ಈದ್-ಎ-ಮಿಲಾದ್-ಉನ್-ನಬಿ ಅವರ ಪವಿತ್ರ ಸಂದರ್ಭದಲ್ಲಿ, ರಾಯಚೂರಿನ ಎಲ್‌ಬಿಎಸ್ ನಗರದ ಮಸೀದಿ-ಎ-ನೂರ್ ಕಮಿಟಿ ವತಿಯಿಂದ ಚಿಕ್ಕ ಮಕ್ಕಳ ವೈಭವದ ಹಾಗೂ ಶಿಸ್ತುಬದ್ಧ ಪಾದಯಾತ್ರೆ ಮೆರವಣಿಗೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಮೆರವಣಿಗೆಯಲ್ಲಿ ಮಕ್ಕಳು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಗೌರವದಿಂದ ನಾತ್-ಎ-ಪಾಕ್ ಹಾಗೂ ಸಲಾಮ್ಗಳನ್ನು ಪಠಿಸುವ ಮೂಲಕ ಪ್ರವಾದಿ ಹಜರತ್ ಮುಹಮ್ಮದ್ ಮುಸ್ತಫಾ ಅವರ ಮೇಲಿನ ತಮ್ಮ ಪ್ರೀತಿ ಮತ್ತು ಗೌರವದ ಪವಿತ್ರ ಸಂದೇಶವನ್ನು ಸಾರಿದರು. ಮೆರವಣಿಗೆಯು ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿ, ಉತ್ತಮ ಸಹಕಾರ ನೀಡಿದರು. ಪೊಲೀಸ್ ಇಲಾಖೆಯ ಈ ಅಮೂಲ್ಯ ಸಹಕಾರಕ್ಕಾಗಿ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ. ಈ ಶುಭ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪೋಷಕರು, ಯುವಕರು, ಮಕ್ಕಳು ಹಾಗೂ ಎಲ್‌ಬಿಎಸ್ ನಗರದ ನಿವಾಸಿಗಳಿಗೆ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಈದ್-ಎ-ಮಿಲಾದ್-ಉನ್-ನಬಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಗುತ್ತದೆ. ಮಸೀದಿ-ಎ-ನೂರ್ ಕಮಿಟಿ ಎಲ್‌ಬಿಎಸ್ ನಗರ, ರಾಯಚೂರು2
- ಲೋಕಕಲ್ಯಾಣಕ್ಕಾಗಿ ಸುರಪುರ ತಾಲೂಕಿನ ದೇವಪುರದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನದವರೆಗೆ ಸರ್ವಧರ್ಮ ಪಾದಯಾತ್ರೆ ಸುರಪುರ : ಹೌದು ಸುರಪುರ ತಾಲೂಕಿನ ದೇವಪುರ ಗ್ರಾಮದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಸರ್ವ ಧರ್ಮದ ವತಿಯಿಂದ ಭಕ್ತಿ ಪೂರ್ವಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತು. ಶ್ರೀ ರವಿ ಮುತ್ಯಾ ದೇವಪುರ ಹಾಗೂ ಶ್ರೀ ನಾಗರಾಜ ಮುತ್ಯಾ ದೇವಪುರ ಅವರ ದಿವ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಪಾದಯಾತ್ರೆಯಲ್ಲಿ ವಿವಿಧ ಧರ್ಮಗಳ ಭಕ್ತರು ಪಾಲ್ಗೊಂಡು ಶ್ರೀ ಮೌನೇಶ್ವರ ದೇವರ ಕೃಪೆಗೆ ಪಾತ್ರರಾದರು1
- ಬಿಹಾರ್ ರಾಜ್ಯದಲ್ಲಿ ಪ್ರತಿ ಭಟನೆ ಮಾಡಿದ 6-ವರ್ಷದ ಬಾಲಕನಿಗೆ ಪೊಲೀಸ್ ಅರೆಸ್ಟ್ ಮಾಡಿದ್ದಾರೆ1