Shuru
Apke Nagar Ki App…
ಬಳ್ಳಾರಿ ಪಾದಯಾತ್ರೆಗೆ ನನ್ನ ವೈಯಕ್ತಿಕ ವಿರೋಧ ಇಲ್ಲ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆ ವಿಚಾರವಾಗಿ ಬಿಜೆಪಿ ನಾಯಕರಲ್ಲಿ ಗೊಂದಲ ಇದೆ. ಈ ವಿಚಾರವಾಗಿ ಮಾಜಿ ಸಚಿವ ಬಿ ಶ್ರೀರಾಮಲು ಹೇಳಿಕೆಯನ್ನು ನಾನು ಗಮನಿಸಿದ್ದೇನೆ . ಪಾದಯಾತ್ರೆಗೆ ನನ್ನ ವೈಯಕ್ತಿಕ ವಿರೋಧ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದರು. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಪಾದಯಾತ್ರೆ ಮಾಡಿದಾಗ ಗೊಂದಲ ಸೃಷ್ಟಿಯಾಗಿತ್ತು. ಈಗ ಆ ರೀತಿಯ ಗೊಂದಲಕ್ಕೆ ಅವಕಾಶ ಕೊಡಬಾರದು. ಏನೇ ನಿರ್ಧಾರ ತೆಗೆದುಕೊಂಡರು ಕೇಂದ್ರದ ಗಮನಕ್ಕೆ ತರಬೇಕು ಬಿಜೆಪಿ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಕೇಂದ್ರ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಬೆಳಗಾವಿಯಲ್ಲಿ ವಿಜಯೇಂದ್ರ ಹೇಳಿಕೆ ನೀಡಿದರು.
Aslam Basha
ಬಳ್ಳಾರಿ ಪಾದಯಾತ್ರೆಗೆ ನನ್ನ ವೈಯಕ್ತಿಕ ವಿರೋಧ ಇಲ್ಲ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆ ವಿಚಾರವಾಗಿ ಬಿಜೆಪಿ ನಾಯಕರಲ್ಲಿ ಗೊಂದಲ ಇದೆ. ಈ ವಿಚಾರವಾಗಿ ಮಾಜಿ ಸಚಿವ ಬಿ ಶ್ರೀರಾಮಲು ಹೇಳಿಕೆಯನ್ನು ನಾನು ಗಮನಿಸಿದ್ದೇನೆ . ಪಾದಯಾತ್ರೆಗೆ ನನ್ನ ವೈಯಕ್ತಿಕ ವಿರೋಧ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದರು. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಪಾದಯಾತ್ರೆ ಮಾಡಿದಾಗ ಗೊಂದಲ ಸೃಷ್ಟಿಯಾಗಿತ್ತು. ಈಗ ಆ ರೀತಿಯ ಗೊಂದಲಕ್ಕೆ ಅವಕಾಶ ಕೊಡಬಾರದು. ಏನೇ ನಿರ್ಧಾರ ತೆಗೆದುಕೊಂಡರು ಕೇಂದ್ರದ ಗಮನಕ್ಕೆ ತರಬೇಕು ಬಿಜೆಪಿ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಕೇಂದ್ರ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಬೆಳಗಾವಿಯಲ್ಲಿ ವಿಜಯೇಂದ್ರ ಹೇಳಿಕೆ ನೀಡಿದರು.
More news from ಕರ್ನಾಟಕ and nearby areas
- ಚಿತ್ರದುರ್ಗ: ಅಂತಿಮ ಬಿಎಂಎಸ್ ಮಾಡ್ತಾ ಇದ್ದಂತ ನಿಖಿತಾ, ಕಾಲೇಜಿನಲ್ಲಿ ಹರಡಿದ್ದ ಅನೈತಿಕ ಸಂಬಂಧದ ವಿಚಾರ ಹಾಗೂ ಪ್ರೊಫೇಸರ್ ರಾಜು ಅವರ ಹೆಂಡತಿಯ ಬೈಗುಳದಿಂದ ನೊಂದು ಸಾವನ್ನಪ್ಪಿದ್ದಳು. ಈ ಸಂಬಂಧ ಚಿತ್ತದುರ್ಗದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ. ನಿನ್ನೆ ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಗ್ರಾಮದಲ್ಲಿರುವ ರಾಘವೇಂದ್ರ ಬಿ.ಎ.ಎಂ.ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾದ ನಿಖಿತಾ ಎಂ.ಯು ಇವರು ತಮ್ಮ ಕಾಲೇಜಿನ ಉಪನ್ಯಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರಿಂದ ಇಂಟರ್‌ಶಿಪ್ ಅವಧಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರಕ್ಕೆ ಸಲಹೆ ಸೂಚನೆಗಳನ್ನು ಪಡೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗಿರುವಾಗ್ಗೆ ನಿಖಿತಾಳ ಸಹಪಾಠಿಗಳು ಉಪನ್ಯಾಸಕರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆ ಎಂದು ನಿಖಿತಾಳನ್ನು ಅವಮಾನಿಸಿದ್ದಲ್ಲದೇ ಕಾಲೇಜಿನ ಇತರೆ ಸ್ನೇಹಿತರಿಗೆ ಹಾಗೂ ಬೇರೆಯವರಿಗೆ ಅಪಪ್ರಚಾರ ಮಾಡಿ ಚಾರಿತ್ರಿಕ ವಧೆ ಮಾಡಿರುತ್ತಾರೆ. ಉಪನ್ಯಾಸಕನ ಹೆಂಡತಿಯು ಸಹ ನಿಖಿತಾಳ ಮೇಲೆ ಅನುಮಾನಪಟ್ಟಿರುತ್ತಾರೆ. ಇದರಿಂದ ಮನನೊಂದು ನಿಖಿತಾ ನಿನ್ನೆ ಅಂದ್ರೆ 01.04.2026 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆ ಮಧ್ಯೆ ಅವಧಿಯಲ್ಲಿ ತನ್ನ ರೂಮಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಈ ಬಗ್ಗೆ ಮೃತಳ ತಂದೆಯಾದ ಉಮಾಶಂಕರ್‌ರವರು ತನ್ನ ಮಗಳ ಸಾವಿಗೆ ಸಹಪಾಠಿಗಳು ಮತ್ತು ಉಪನ್ಯಾಸಕನ ಹೆಂಡತಿಯವರೇ ಕಾರಣರಾಗಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದೇವೆ. ಮೃತಳ ಬಳಿ ಡೆತ್‌ನೋಟ್ ದೊರೆತ್ತಿದ್ದು, ಈ ಬಗ್ಗೆ ತನಿಖೆ ಮುಂದುವರೆದಿರುತ್ತದೆ ಎಂದು ಪೊಲೀಸ್ ಅಧೀಕ್ಷಕರು ..1
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನಕ್ಕೆ ನಂದವಾಡಗಿಯ ಡಾ. ಚನ್ನಬಸವ ಶಿವಾಚಾರ್ಯರು ಆಗಮಿಸಿ ಭಕ್ತರಿಗೆ ಆಶೀರ್ವದಿಸಿದರು4
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲದ ಜೋಶಿಗಲ್ಲಿಯನ ಹನುಮಂತ ದೇವಸ್ಥಾನಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿದರ್ಶನವನ್ನು ಪಡೆದುಕೊಂಡರು. ಶಾಸಕರನ್ನು ದೇವಸ್ಥಾನ ಜಿರ್ಣೋದ್ಧಾರ ಸಮಿತಿ ವತಿಯಿಂದ ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಡಾ.ಸುಶೀಲ ಕಾಖಂಡಕಿ, ನಗರಸಭೆ ಮಾಜಿ ಸದಸ್ಯ ಮೌಲೇಶಬಂಡಿವಡ್ಡರ, ಹಾಗೂ ವಾರ್ಡಿನ ಗುರು ಹಿರಿಯರು ಯುವಕರು ಇದ್ದರು.2
- ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಮೀನಗಡದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದ ಅವರು, ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಶಪ್ಪನವರ್, “ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಗೆಲ್ಲಿಸಿ” ಎಂದು ಮನವಿ ಮಾಡಿದರು.1
- ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ಪರ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಶ್ರೀರಾಮುಲು, ಹದಡಿ ಹಾಗೂ ಹೂಸನಾಯಕನಹಳ್ಳಿ ,ಕೈದಾಳ ಗ್ರಾಮದಲ್ಲಿ ಅದ್ದೂರಿ ಪ್ರಚಾರ ಆರಂಭಿಸಿದರು. ಈ ವೇಳೆ ಸ್ಥಳಿಯರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ನವರನ್ನು ಹಾಗೂ ಆರ್ ಅಶೋಕ್ ಶ್ರೀರಾಮುಲು ರವರಿಗೆ ಬೃಹತ್ ಗಾತ್ರದ ಆಪಲ್ ಆರ್ ಹಾಕುವ ಮೂಲಕ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಶುಭವಾಗಲಿ ಎಂದು ಹಾರೈಸಿದರು... ಈ ಸಂದರ್ಭದಲ್ಲಿ ಹರಿಹರದ ಶಾಸಕ ಬಿಪಿ ಹರೀಶ್ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಸಿಮೆಂಟ್ ರವಿಕುಮಾರ್, ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ, ಯಶವಂತ ರಾವ್ ಜಾಧವ್ , ಬಿ, ರಾಜನಹಳ್ಳಿ ಶಿವಕುಮಾರ್, ಬಿಜಿ ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಕೊಳೆನಹಳ್ಳಿ ಸತೀಶ್ ಜಿ.ಬಿ ವಿನಯ್ ಕುಮಾರ್, ಎಸ್, , ಶಿವನಹಳ್ಳಿ ರಮೇಶ್ ,ಸೇರಿದಂತೆ. ಜೆಡಿಎಸ್ ಜಿಲ್ಲಾ ಬಿಜೆಪಿ ನಾಯಕರು ವಾರ್ಡ್ ಸದಸ್ಯರ ಅಧ್ಯಕ್ಷರು. ಬಿಜೆಪಿ ಕಾರ್ಯಕರ್ತರು. ಬಿಜೆಪಿ ಮುಖಂಡರು ಸದಸ್ಯರು ಸ್ಥಳಿಯರು ಇದ್ದರೂ1
- "ಬಳ್ಳಾರಿಯಲ್ಲಿ ಆಟೋ ಡ್ರೈವರ್ ಗಳ ಜೀವನ ಏನಾಗಿದೆ ಗೊತ್ತಾ?" "ನಾವು ಹೇಗೆ ಜೀವನ ಸಾಗಿಸೋದು ಸಾರ್? ಇಷ್ಟು ದರ ವ್ಯತ್ಯಾಸ ಯಾಕೆ?" "ಗಾಂಧಿನಗರದಲ್ಲಿ ಆಟೋ ಗ್ಯಾಸ್ ದರ ₹93.54… MG ರೋಡ್ ನಲ್ಲಿ ₹84.10…" ಬಳ್ಳಾರಿಯಲ್ಲಿ ಒಂದೇ ನಗರದಲ್ಲಿ ಎರಡು ಗ್ಯಾಸ್ ದರ! 😡 ಆಟೋ ಡ್ರೈವರ್ ಗಳ ಬದುಕು ಸಂಕಷ್ಟದಲ್ಲಿದೆ. ಇದಕ್ಕೆ ಯಾರು ಉತ್ತರ ಕೊಡ್ತಾರೆ? "ಇಂಧನ ದರ ಏರಿದ್ರೆ… ಆಟೋ ಭಾಡಿಗೆ ಏರಿಸೋಕೆ ಆಗಲ್ಲ… ಜನ ಬೈತಾರೆ… ಸರ್ಕಾರ ಕೇಳ್ತಾ ಇಲ್ಲ…" "ಈ ವಿಡಿಯೋ share ಮಾಡಿ… ನಮ್ಮ ಧ್ವನಿ ಸರ್ಕಾರದವರೆಗೆ ತಲುಪಿಸೋಣ!"1
- ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ ಎಂದು ವಿರಣ್ಣ ಶೆಟ್ಟರ ಹೇಳಿದರು ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಕನ್ನಡದ ಶ್ರೇಷ್ಠ ವಚನಕಾರ್ತಿ ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಇಂದು ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ಜರಗಿತು. ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ದರ್ಶನ ಪಡೆದರು. ಬ್ರಹ್ಮರಥವನ್ನು ಎಳೆಯುವುದರು ಮೂಲಕ ತಮ್ಮ ಭಕ್ತಿಯನ್ನ ಸಮರ್ಪಸಿದರು..1