Shuru
Apke Nagar Ki App…
*ಸುರಕ್ಷಿತೆ ದೃಷ್ಟಿಯಿಂದ ಇನ್ನು ಮುಂದೆ ಟ್ರಾಕ್ಟರ್ ಗಳಿಗೆ ರೇಡಿಯಂ ಅಳವಡಿಸುವುದು ಕಡ್ಡಾಯ *
ಎಸ್.ಎನ್.ಪ್ರಕಾಶ್
*ಸುರಕ್ಷಿತೆ ದೃಷ್ಟಿಯಿಂದ ಇನ್ನು ಮುಂದೆ ಟ್ರಾಕ್ಟರ್ ಗಳಿಗೆ ರೇಡಿಯಂ ಅಳವಡಿಸುವುದು ಕಡ್ಡಾಯ *
More news from ಕರ್ನಾಟಕ and nearby areas
- *ಕೋಲಾರದ ಜೆ.ಡಿ.ಎಸ್ ಮುಖಂಡರು ಹಾಗೂ ಕಾರ್ಯಕರ್ತರು ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯದಲ್ಲಿ ಭಾಗಿ* ಕೋಲಾರ: ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯಕ್ರಮಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್.ಮುಖಂಡ ಸಿ.ಎಂ.ಆರ್ .ಶ್ರೀನಾಥ್ ರವರ ನೇತೃತ್ವದಲ್ಲಿಸುಮಾರು 150 ಕ್ಕೂ ಹೆಚ್ಚಿನ ವಾಹನಗಳಲ್ಲಿನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಪ್ರಯಾಣ ಬೆಳೆಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ವಕ್ಕಲೇರಿ ರಾಮು, ಬಾಬು ಮೌನಿ, ದೊಡ್ಡವಲ್ಲಬಿ ಲಕ್ಷ್ಮಣಗೌಡರು, ಬಣಕನಹಳ್ಳಿ ನಟರಾಜ್, ಶ್ರೀಮತಿ ಚೌಡೇಶ್ವರಿ ರಾಮು, ವಡಗೂರು ರಾಮು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.4
- ಕೋಲಾರ ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ರವಿ ಅವರು ಅಭಿಪ್ರಾಯಪಟ್ಟರು.ಇಂದು ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸAದ್ರ, ಸುವರ್ಣಗಂಗೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕೋಲಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ವ್ಯಸನಮುಕ್ತ ದಿನಾಚರಣೆ'ಯಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು. ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು,. "ಭಾರತದಲ್ಲಿ ಶೇ. 65ರಷ್ಟು ಯುವ ಜನಸಂಖ್ಯೆ ಇದ್ದು, ಈ ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ಯಾವುದೇ ಒಂದು ವ್ಯಸನವು ಕೇವಲ ವ್ಯಕ್ತಿಯನ್ನು ಮಾತ್ರ ಬಲಿಪಡೆಯುವುದಿಲ್ಲ, ಬದಲಾಗಿ ಇಡೀ ಕುಟುಂಬ ಹಾಗೂ ಸಮಾಜವನ್ನೇ ನಾಶ ಮಾಡುತ್ತದೆ. ಆದ್ದರಿಂದ ಇಂದಿನ ಯುವಕರು ಮಾದಕ ವಸ್ತುಗಳ ದಾಸರಾಗದೆ, ಸಮಾಜವನ್ನು ಮುನ್ನಡೆಸುವ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು," ಎಂದು ಅವರು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಪ್ರಭು ಎನ್. ಬಡಿಗೇರ್ ಅವರು ವಿವಿಧ ಕಾನೂನುಗಳ ಅರಿವನ್ನು ಮೂಡಿಸಿದರು. "ದೇಶದಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಾಯಿಯ ಗರ್ಭದಲ್ಲಿರುವ ಮಗುವಿನ ರಕ್ಷಣೆಯಿಂದ ಹಿಡಿದು (ಭ್ರೂಣಹತ್ಯೆ ನಿಷೇಧ), ಮನುಷ್ಯ ಸತ್ತ ನಂತರದ ಆಸ್ತಿ ಹಂಚಿಕೆಯವರೆಗೂ ಕಾನೂನು ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತದೆ. ಅದರಲ್ಲೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಪೋಕ್ಸೊ (POCSO) ಕಾಯ್ದೆ ಅತ್ಯಂತ ಕಠಿಣವಾಗಿದ್ದು, ಅಪರಾಧ ಸಾಬೀತಾದರೆ 20 ವರ್ಷಗಳವರೆಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಯುವಜನತೆ ಇಂತಹ ಕಾನೂನುಗಳ ಬಗ್ಗೆ ಅರಿವು ಬೆಳೆಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ಬದುಕಬೇಕು," ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್ ಅವರು ಮಾತನಾಡಿ 'ವ್ಯಸನ' ಎಂದರೆ ಚಟ ಅಥವಾ ಗೀಳು ಎಂದರ್ಥ. ಇಂದಿನ ಯುವಜನತೆ ಧೂಮಪಾನ, ಮದ್ಯಪಾನ ಹಾಗೂ ಮಾದಕ ದ್ರವ್ಯಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದರ ದುರದುಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು. ವೈಜ್ಞಾನಿಕವಾಗಿ ಗಮನಿಸಿದರೆ, ನಾವು ಪರೀಕ್ಷೆಯಲ್ಲಿ ಗೆದ್ದಾಗ ಅಥವಾ ಒಳ್ಳೆಯ ಸಿನಿಮಾ ನೋಡಿದಾಗ ನಮ್ಮ ಮೆದುಳಿನ 'ರಿವಾರ್ಡ್ ಸೆಂಟರ್' ಡೋಪಮೈನ್ (Dopamine) ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡಿ ನಮಗೆ ಸಹಜವಾದ ಖುಷಿ ನೀಡುತ್ತದೆ. ಆದರೆ, ಮಾದಕ ವಸ್ತುಗಳನ್ನು ಸೇವಿಸಿದಾಗ ಕೃತಕವಾಗಿ ಇದೇ ಡೋಪಮೈನ್ ಬಿಡುಗಡೆಯಾಗುತ್ತದೆ. ಈ ಕೃತಕ ಖುಷಿಗಾಗಿ ಯುವಜನರು ವ್ಯಸನಕ್ಕೆ ದಾಸರಾಗುತ್ತಾರೆ. ಆರಂಭದಲ್ಲಿ ಒಂದು ಸಿಗರೇಟ್‌ನಿಂದ ಸಿಗುವ ತೃಪ್ತಿ, ಕ್ರಮೇಣ ಮೆದುಳು ಆ ರಾಸಾಯನಿಕಕ್ಕೆ ಒಗ್ಗಿಕೊಳ್ಳುವುದರಿಂದ (ಅಡಾಪ್ಟೇಶನ್) ನಾಲ್ಕು ಸಿಗರೇಟ್ ಸೇದಿದರೂ ಸಿಗುವುದಿಲ್ಲ. ಈ ಹಂತದಲ್ಲಿ ಚಟವನ್ನು ನಿಲ್ಲಿಸಿದರೆ ವಿಪರೀತ ಕೋಪ ಮತ್ತು ಹತಾಶೆಯಂತಹ 'ವಿತ್‌ಡ್ರಾವಲ್' ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಕಾರಣಕ್ಕೂ ಸ್ನೇಹಿತರ ಒತ್ತಡಕ್ಕೆ ಮಣಿದು ಅಥವಾ ಕೇವಲ ಕುತೂಹಲಕ್ಕಾಗಿ ದುಶ್ಚಟಗಳನ್ನು ಪ್ರಾರಂಭಿಸಬಾರದು; ಮೊದಲ ಹೆಜ್ಜೆಯಲ್ಲೇ ಇದನ್ನು ಕಡ್ಡಾಯವಾಗಿ ತಿರಸ್ಕರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಒಂದು ವೇಳೆ ಈಗಾಗಲೇ ವ್ಯಸನಕ್ಕೆ ತುತ್ತಾಗಿದ್ದರೆ, ದೃಢವಾದ ಇಚ್ಛಾಶಕ್ತಿ ಹಾಗೂ ವೈದ್ಯಕೀಯ ನೆರವಿನಿಂದ ಅದರಿಂದ ಸಂಪೂರ್ಣವಾಗಿ ಹೊರಬರಬಹುದು. ಇದಕ್ಕಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೌನ್ಸಿಲಿಂಗ್ ಕೇಂದ್ರಗಳಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿದ್ದು, ಯುವಜನರು ಮುಜುಗರವಿಲ್ಲದೆ ಸಹಾಯ ಪಡೆಯಬೇಕು ಎಂದು ಅವರು ಕರೆ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ಆಗುವ ಭೀಕರ ಪರಿಣಾಮಗಳ ಕುರಿತು ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಚಾರಿಣಿ, "ಮಾದಕ ವಸ್ತುಗಳು ನೇರವಾಗಿ ಮನುಷ್ಯನ ಮೆದುಳಿನ ರಿವಾರ್ಡ್ ಸೆಂಟರ್ ಮೇಲೆ ಪ್ರಭಾವ ಬೀರಿ, ಡೋಪಮೈನ್ ಬಿಡುಗಡೆ ಮಾಡುವ ಮೂಲಕ ವ್ಯಕ್ತಿಯನ್ನು ಸಂಪೂರ್ಣ ವ್ಯಸನಿಯನ್ನಾಗಿಸುತ್ತವೆ. ಇದರ ನಿರಂತರ ಸೇವನೆಯಿಂದ ಯಕೃತ್ತು ಹಾಗೂ ಮೂತ್ರಪಿಂಡಗಳ ವೈಫಲ್ಯ, ಬಂಜೆತನ ಮತ್ತು ರೋಗ ನಿರೋಧಕ ಶಕ್ತಿ ಕುಂದುವAತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ಮಾದಕ ವ್ಯಸನಿಗಳು ಒಂದೇ ಇಂಜೆಕ್ಷನ್ ಹಂಚಿಕೊಳ್ಳುವುದರಿAದ ಎಚ್.ಐ.ವಿ (HIV) ನಂತಹ ಮಾರಕ ರೋಗಗಳು ವೇಗವಾಗಿ ಹರಡುತ್ತವೆ," ಎಂದು ಎಚ್ಚರಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಪ್ರಸ್ತುತ ವಿದ್ಯಾವಂತರ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ಅಕ್ಷರಸ್ಥರಾದ ಮಾತ್ರಕ್ಕೆ ಎಲ್ಲರೂ ಬುದ್ಧಿವಂತರಾಗುವುದಿಲ್ಲ. ಇಂದು ವಿದ್ಯಾವಂತ ಯುವಜನತೆಯೇ ಅತಿ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೊಡ್ಡ ವಿಪರ್ಯಾಸ. ರಾಜ್ಯದಲ್ಲಿನ ಇತ್ತೀಚಿನ ವರದಿಗಳ ಬಹಳಷ್ಟು ಜನರು ಎಚ್.ಐ.ವಿ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಯುವಕರ ಪ್ರಮಾಣವೇ ಹೆಚ್ಚಾಗಿರುವುದು ಸಮಾಜಕ್ಕೆ ಅತ್ಯಂತ ಮಾರಕವಾದ ಸಂಗತಿಯಾಗಿದೆ," ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ.ಎನ್. ಕವನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವರು ಮೌಲ್ಯಮಾಪನ ಹಾಗೂ ನಿರ್ದೇಶಕಿ ಸುವರ್ಣಗಂಗೆ ಕ್ಯಾಂಪಸ್ ಹಾಗೂ ಪ್ರೊ ಕುಮುದ, ವಿತ್ತಾಧಿಕಾರಿ ಬಾಹುಬಲಿ, ಸಿಬ್ಬಂದಿಗಳು, ಎಲ್ಲಾ ಪ್ರಾಧ್ಯಪಕರು ಸೇರಿದಂತೆ ವಿವಿಧ ಇಲಾಖೆಗಳ ಗಣ್ಯರು ಉಪಸ್ಥಿತರಿದ್ದರು.1
- ಸುವರ್ಣಹಳ್ಳಿಯಲ್ಲಿ ಯಶಸ್ವಿ ಕೊಳವೆ ಬಾವಿ ಕೊರೆತ – ಶಾಸಕಿ ರೂಪಕಲಾ ಶಶಿಧರ್‌ಗೆ ಕೃತಜ್ಞತೆ ಸಲ್ಲಿಸಿದ ರೈತ ಮಹಿಳೆ ಕೆ.ಜಿ.ಎಫ್: ತಾಲೂಕಿನ ಕಾಸಂಬಳ್ಳಿ ಹೋಬಳಿಯ ಸುವರ್ಣಹಳ್ಳಿ ಗ್ರಾಮದ ರೈತ ಮಹಿಳೆ ಶ್ರೀಮತಿ ಭಾಗ್ಯಮ್ಮ ಕೋಂ ಮುನಿಸ್ವಾಮಿ ಅವರ ಜಮೀನಿನಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಯಡಿ ಇಂದು ಯಶಸ್ವಿಯಾಗಿ ಕೊಳವೆ ಬಾವಿ ಕೊರೆಯಲಾಯಿತು. ಕೆ.ಜಿ.ಎಫ್ ಶಾಸಕರಾದ ಶ್ರೀಮತಿ ರೂಪಕಲಾ ಶಶಿಧರ್ ಅವರ ವಿಶೇಷ ಪ್ರಯತ್ನ ಹಾಗೂ ಮಂಜೂರಾತಿಯಿಂದ ಈ ಕೊಳವೆ ಬಾವಿ ನಿರ್ಮಾಣಗೊಂಡಿದ್ದು, ಬೋರ್‌ವೆಲ್‌ನಲ್ಲಿ ಉತ್ತಮ ನೀರು ಬಿದ್ದ ಹಿನ್ನೆಲೆಯಲ್ಲಿ ರೈತ ಕುಟುಂಬ ಹಾಗೂ ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಕೊಳವೆ ಬಾವಿ ಮಂಜೂರು ಮಾಡಿಸಿ ತಮ್ಮ ಕೃಷಿ ಜೀವನಕ್ಕೆ ಆಸರೆಯಾದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ರೈತರು ಹಾಗೂ ಸ್ಥಳೀಯರು, ಅವರ ಜನಪರ ಕಾಳಜಿಯನ್ನು ಶ್ಲಾಘಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕೆ.ಎಂ. ಕೃಷ್ಣಮೂರ್ತಿ ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ತಾಲ್ಲೂಕು ಆಡಳಿತದ ವತಿಯಿಂದ"ವ್ಯಸನಮುಕ್ತ ದಿನಾಚರಣೆ"ಯನ್ನು ಸಲುವಾಗಿ ಆಚೆರಿಸಿದರು1
- ಕೆಆರ್ ಪುರದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಬೆಂ,ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ಡಿ ,ಎಸ್ ರಮೇಶ್ ಚಾಲನೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ಡಿ ,ಎಸ್ ರಮೇಶ್ ರಿಂದ ಚಾಲನೆ .ಆಯುಕ್ತ ರಮೇಶ್ ಅವರಿಗೆ ಕೆಆರ್ ಪುರ ಜಂಟಿ ಆಯುಕ್ತೆ ಡಾ . ಸುಧಾ ಸ್ವಪ್ನ ಸಾಥ್ .ಕೆಆರ್ ಪುರದ ಐಟಿಐ ಗೇಟ್ ನಿಂದ ಆರಂಭವಾಗಿರುವ ಅಭಿಯಾನ .ಕೆಆರ್ ಪುರ ಹಾಗೂ ಮಹದೇವಪುರ ವಲಯಗಳಲ್ಲಿ ಏಕಕಾಲ ಚಾಲನೆ ನೀಡಿರುವ ಆಯುಕ್ತ ರಮೇಶ್ .ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನ .ಖಾಸಗೀ ಸ್ವತ್ತುಗಳಲ್ಲಿ ತ್ಯಾಜ್ಯ ತೆರವಿಗೆ ಮಾಲೀಕರಿಗೆ ೧೫ದಿನಗಳ ಗಡುವು.೧೫ ದಿನಗಳ ಬಳಿಕವೂ ತೆರವುವಾಗಿಲ್ಲ ಅಂದ್ರೆ ಮಾಲೀಕರೇ ತೆರಿಗೆ ಜೊತೆಗೆ ತ್ಯಾಜ್ಯ ನಿರ್ವಹಣಾ ವೆಚ್ಚ ಭರಿಸಬೇಕು1
- ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಪ್ರತಿಭಟನೆ ಬೆಂಗಳೂರು:ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.ಶಾಸಕರನ್ನು ಬಂಧಿಸುವಂತೆ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ ಮುಂದೆ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮತ್ತು ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಂದು ಒತ್ತಾಯಿಸಿದ್ದು,ಕಾನೂನು ಕ್ರಮ ತಗೆದುಕೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎನ್ನುವುದಕ್ಕೆ ಸಾಕ್ಷಿ ಕೊಡಲಿ.ಇಲ್ಲದೇ ಹೋದರಲ್ಲಿ ಮಾನ ನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.1
- *ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ,ನಶೆ ಮುಕ್ತ ಕಟ್ಟಿಗೆನಹಳ್ಳಿ ಮಾಡಲು ಶ್ರಮಿಸಿ: ಡಿ.ವೈ.ಎಸ್.ಪಿ. ಮಲ್ಲೇಶ್ ಕರೆ* ಹೊಸಕೋಟೆ :ಮುಸ್ಲಿಂ ಸಮುದಾಯ ಪ್ರವಾದಿ ಮಹಮ್ಮದ್ ಪೈಗಂಬರ್ ಬರೆದಿರುವ ಪವಿತ್ರ ಕುರಾನ್ ಅನುಸರಿಸುತ್ತಿರುವ ನೀವುಗಳು ಯಾವುದೇ ತಪ್ಪುಗಳನ್ನು ಮಾಡಬಾರದು,ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ, ನಶೆ ಮುಕ್ತ ಕಟ್ಟಿಗೆನಹಳ್ಳಿ ಮಾಡಲು ಶ್ರಮಿಸಿ ಎಂದು ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ಡಿ.ವೈ.ಎಸ್.ಪಿ.ಮಲ್ಲೇಶ್ ಕಿವಿಮಾತು ಹೇಳಿದರು. ಹೊಸಕೋಟೆ ತಾಲ್ಲೂಕು ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗೇನಹಳ್ಳಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಜಾಮೀಯಾ ಮಸೀದಿ ಕಮಿಟಿ ಆಯೋಜಿಸಿದ್ದ ನಶೆ ಮುಕ್ತ ಕಟ್ಟಿಗೇನಹಳ್ಳಿ ಗ್ರಾಮ ಮತ್ತು ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ ಮಾದಕ ವಸ್ತುಗಳ ಸೇವನೆಯು ಮನುಷ್ಯನ ದೇಹ, ಮನಸ್ಸು ಮತ್ತು ಸಮಾಜದ ಮೇಲೆ ಅತ್ಯಂತ ಗಂಭೀರವಾದ ಹಾಗೂ ಮಾರಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದರು. ಬಹಳಷ್ಟು ಅಪರಾಧಗಳು ನಶೆ ಬರುವ ಮಾದಕ ವಸ್ತುಗಳ ಸೇವನೆಯಿಂದ ನಡೆಯುತ್ತದೆ.ಇದಕ್ಕೆ ಅವಕಾಶ ನೀಡಬಾರದೆಂದ ಅವರು ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಇರುವ ಕಳಂಕ ದೂರ ಮಾಡಬೇಕು ಹಾಗೂ ಯುವಕರು ಮಾದಕ ವಸ್ತುಗಳಿಂದ ದೂರ ಇರಬೇಕೆಂದ ಅವರು ಗ್ರಾಮದ ಹಿರಿಯರು ಯುವಕರಿಗೆ ಮಾರ್ಗದರ್ಶನ ನೀಡ ಬೇಕೆಂದು ಸಲಹೆ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಸುಂದರ್ ಮಾತನಾಡಿ ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ಆರೋಗ್ಯವನ್ನು ಹಾಳುಮಾಡುವುದಲ್ಲದೆ, ಕುಟುಂಬಗಳನ್ನು ಬೀದಿಗೆ ತಳ್ಳುತ್ತದೆ ಮತ್ತು ಅಪರಾಧ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂದರು. ಮಾದಕವಸ್ತು ಮಾರಾಟ,ಸೇವನೆ ಬಗ್ಗೆ ಯಾವುದೇ ಮಾಹಿತಿ ದೊರೆತರೆ ತಕ್ಷಣ ಪೊಲೀಸಿರಿಗೆ ಮಾಹಿತಿ ಒದಗಿದರೆ ಅಪರಾಧಿಗಳನ್ನು ಹಿಡಿಯಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಸೀದಿ ಕಮಿಟಿಯ ಸಾದರ್ ಅಯಾಸ್ ಉಲ್ಲಾ ಖಾನ್, ಸೈಯದ್ ಶಬೀರ್,ರಿಯಾಜ್ ಖಾನ್,ಅಯಾಜ್ ಖಾನ್,ಮದರಸಾ ಮಖಂಡರಾದ ಎಜಾಜ್ ಶರೀಫ್ ಮುಂತಾದವರು ಇದ್ದರು3
- ಆಟೋ ಸೈಡ್‌ಗೆ ಹೇಳಿದ್ದಕ್ಕೆ ಹಲ್ಲೆ! ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಗೂಂಡಾಗಿರಿ! ಆಟೋ ಸೈಡ್‌ಗೆ ಹೇಳಿದ್ದಕ್ಕೆ ಹಲ್ಲೆ! ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಗೂಂಡಾಗಿರಿ!1