logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮೋಕಾದಲ್ಲಿ ಮಹಿಳಾ ದಿನಾಚರಣೆ: ಕೈಮಗ್ಗ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಮೋಕಾ ಗ್ರಾಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕೈಮಗ್ಗ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದ ಭವನದಲ್ಲಿ ಶ್ರೀ ಮಾತೃ ಮಹಿಳಾ ಮಂಡಳಿ ಹಾಗೂ ಮಹರ್ಷಿ ರೂರಲ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ್ ಹಾಗೂ ಕೊಳ್ಳಿ ವಿಜಯ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಟೆಕ್ಸ್ಟೈಲ್ ಇಲಾಖೆಯ ಉಪ ನಿರ್ದೇಶಕರಾದ ಮಹಾಂತೇಶ್ ಕಂತಿಮಠ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಬಳ್ಳಾರಿ-ವಿಜಯನಗರ ಜಿಲ್ಲಾಧ್ಯಕ್ಷ ಕೆ.ರಾಜಣ್ಣ ಅವರು ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು. ಸರ್ಕಾರ ಮಹಿಳೆಯರಿಗಾಗಿ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಕೈಮಗ್ಗ, ಟೈಲರಿಂಗ್, ಬ್ಯೂಟಿ ಪಾರ್ಲರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತರಬೇತಿ ಪಡೆದು ಸ್ವಂತ ಉದ್ಯಮ ಆರಂಭಿಸುವ ಅವಕಾಶಗಳಿವೆ ಎಂದು ತಿಳಿಸಿದರು. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಲು ಇಚ್ಛಿಸಿದರೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ನೆರವಾಗುತ್ತೇವೆ ಎಂದು ಭರವಸೆ ನೀಡಿದರು. ಕೈಮಗ್ಗ ತರಬೇತಿ ಪಡೆದಿರುವುದು ಮಹಿಳೆಯರಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತದೆ. ಹಳ್ಳಿಯ ಮಟ್ಟದಲ್ಲೇ ಬಟ್ಟೆಗಳನ್ನು ತಯಾರಿಸಿ, ಖರೀದಿ ಹಾಗೂ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವೆಂದು ಹೇಳಿದರು. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಸಂಘದ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ್, ವಿಜಯ್ ಕುಮಾರ್ ಹಾಗೂ ಅವರ ತಂಡದ ಸೇವೆಯನ್ನು ಗಣ್ಯರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯ ಕಾರ್ಯಕ್ರಮಗಳು ಇನ್ನಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಕೊನೆಯಲ್ಲಿ ಮಹಿಳೆಯರಿಗೆ ಕೈಮಗ್ಗ ತರಬೇತಿ ನೀಡಿದಂತ ಶಿಕ್ಷಕರಾದ ಭಾಗ್ಯಲಕ್ಷ್ಮಿ, ಪೂಜಾ ಮತ್ತು ಮುಮ್ತಾಜ್ ಅವರಿಗೆ ಹಾಗೂ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಮಗು ಸ್ತ್ರೀಯ ಪಾಟೀಲ್ ಹಾಗೂ ತನುಶ್ರೀ ಪಾಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನುಸೂಯ, ಮೋಕಾ ಪಂಚಾಯತಿ ಪಿಡಿಒ ಸಿದ್ದಲಿಂಗಪ್ಪ, ಕೆಎಸ್‌ಜೆ ಯೂನಿಯನ್ ಜಿಲ್ಲಾಧ್ಯಕ್ಷ ಎರಗುಡಿ ರಮೇಶ್, ರೈತ ಸೇವಾ ಸಂಘದ ಕೃಷ್ಣಪ್ಪ, ಉಮಾಪತಿ, ಸಮಾಜ ಸೇವಕ ಎರಗುಡಿ ಚಂದ್ರಪ್ಪ, ಕರವೇ ಪದಾಧಿಕಾರಿ ಶ್ರೀಶೈಲ ಉಮಾಮಹೇಶ್ವರ, ರಾಜಕುಮಾರ್, ಮಲ್ಲಿಕಾರ್ಜುನ, ಊರಿನ ಮುಖಂಡರಾದ ರಾಜಣ್ಣ ಸೇರಿದಂತೆ ಮಹಿಳೆಯರು ಗ್ರಾಮಸ್ಥರು ಮತ್ತು ಮುಂತಾದವರು ಉಪಸ್ಥಿತರಿದ್ದರು.

2 hrs ago
user_Aslam Basha
Aslam Basha
Local News Reporter ಬಳ್ಳಾರಿ, ಬಳ್ಳಾರಿ, ಕರ್ನಾಟಕ•
2 hrs ago
b906d7e6-5a7a-4293-9d2f-981809968c55

ಮೋಕಾದಲ್ಲಿ ಮಹಿಳಾ ದಿನಾಚರಣೆ: ಕೈಮಗ್ಗ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಮೋಕಾ ಗ್ರಾಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕೈಮಗ್ಗ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದ ಭವನದಲ್ಲಿ ಶ್ರೀ ಮಾತೃ ಮಹಿಳಾ ಮಂಡಳಿ ಹಾಗೂ ಮಹರ್ಷಿ ರೂರಲ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ್ ಹಾಗೂ ಕೊಳ್ಳಿ ವಿಜಯ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಟೆಕ್ಸ್ಟೈಲ್ ಇಲಾಖೆಯ ಉಪ ನಿರ್ದೇಶಕರಾದ ಮಹಾಂತೇಶ್ ಕಂತಿಮಠ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಬಳ್ಳಾರಿ-ವಿಜಯನಗರ ಜಿಲ್ಲಾಧ್ಯಕ್ಷ ಕೆ.ರಾಜಣ್ಣ ಅವರು ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು. ಸರ್ಕಾರ ಮಹಿಳೆಯರಿಗಾಗಿ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಕೈಮಗ್ಗ, ಟೈಲರಿಂಗ್, ಬ್ಯೂಟಿ ಪಾರ್ಲರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತರಬೇತಿ ಪಡೆದು ಸ್ವಂತ ಉದ್ಯಮ ಆರಂಭಿಸುವ ಅವಕಾಶಗಳಿವೆ ಎಂದು ತಿಳಿಸಿದರು. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಲು ಇಚ್ಛಿಸಿದರೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ನೆರವಾಗುತ್ತೇವೆ ಎಂದು

c453dfa9-5443-4358-9ef5-ded7b3403cf5

ಭರವಸೆ ನೀಡಿದರು. ಕೈಮಗ್ಗ ತರಬೇತಿ ಪಡೆದಿರುವುದು ಮಹಿಳೆಯರಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತದೆ. ಹಳ್ಳಿಯ ಮಟ್ಟದಲ್ಲೇ ಬಟ್ಟೆಗಳನ್ನು ತಯಾರಿಸಿ, ಖರೀದಿ ಹಾಗೂ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವೆಂದು ಹೇಳಿದರು. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಸಂಘದ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ್, ವಿಜಯ್ ಕುಮಾರ್ ಹಾಗೂ ಅವರ ತಂಡದ ಸೇವೆಯನ್ನು ಗಣ್ಯರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯ ಕಾರ್ಯಕ್ರಮಗಳು ಇನ್ನಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಕೊನೆಯಲ್ಲಿ ಮಹಿಳೆಯರಿಗೆ ಕೈಮಗ್ಗ ತರಬೇತಿ ನೀಡಿದಂತ ಶಿಕ್ಷಕರಾದ ಭಾಗ್ಯಲಕ್ಷ್ಮಿ, ಪೂಜಾ ಮತ್ತು ಮುಮ್ತಾಜ್ ಅವರಿಗೆ ಹಾಗೂ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಮಗು ಸ್ತ್ರೀಯ ಪಾಟೀಲ್ ಹಾಗೂ ತನುಶ್ರೀ ಪಾಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನುಸೂಯ, ಮೋಕಾ ಪಂಚಾಯತಿ ಪಿಡಿಒ ಸಿದ್ದಲಿಂಗಪ್ಪ, ಕೆಎಸ್‌ಜೆ ಯೂನಿಯನ್ ಜಿಲ್ಲಾಧ್ಯಕ್ಷ ಎರಗುಡಿ ರಮೇಶ್, ರೈತ ಸೇವಾ ಸಂಘದ ಕೃಷ್ಣಪ್ಪ, ಉಮಾಪತಿ, ಸಮಾಜ ಸೇವಕ ಎರಗುಡಿ ಚಂದ್ರಪ್ಪ, ಕರವೇ ಪದಾಧಿಕಾರಿ ಶ್ರೀಶೈಲ ಉಮಾಮಹೇಶ್ವರ, ರಾಜಕುಮಾರ್, ಮಲ್ಲಿಕಾರ್ಜುನ, ಊರಿನ ಮುಖಂಡರಾದ ರಾಜಣ್ಣ ಸೇರಿದಂತೆ ಮಹಿಳೆಯರು ಗ್ರಾಮಸ್ಥರು ಮತ್ತು ಮುಂತಾದವರು ಉಪಸ್ಥಿತರಿದ್ದರು.

More news from Karnataka and nearby areas
  • ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ದುರಂತ: ವೇಗವಾಗಿ ಬಂದ ಬಸ್ ಹರಿದು 2 ವರ್ಷದ ಮಗು ಸಾವು! #JB_News_Kannada
    1
    ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ದುರಂತ: ವೇಗವಾಗಿ ಬಂದ ಬಸ್ ಹರಿದು 2 ವರ್ಷದ ಮಗು ಸಾವು!
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    19 hrs ago
  • ನರಹರಿ ನಗರದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ದೇವಸ್ಥಾನದಲ್ಲಿ ಮಂಡಲದ ಪೂಜೆ.. ಚಳ್ಳಕೆರೆ ನಗರದ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಬಸವೇಶ್ವರ ಅಜ್ಜಯ ದೇವಸ್ಥಾನದಲ್ಲಿ.. ದೇವಸ್ಥಾನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮವನ್ನ ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪೆಬ್ರವರಿ 11ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಕರಿಬಸವೇಶ್ವರ ಗದ್ದಿಗೆಯಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆಗಳು ಜರಗಿದವು. ಕರಿಬಸವೇಶ್ವರ ದೇವಸ್ಥಾನ ನಿರ್ಮಾಣಗೊಂಡು ಇಲ್ಲಿಗೆ 48ನೇ ದಿನ ಆಗಿರುವುದರಿಂದ ದೇವಸ್ಥಾನದಲ್ಲಿ ಮಂಡಲ ಪೂಜೆ ಅಂಗವಾಗಿ ಬೆಳಗಿನಜಾವ ಮೂರು ಗಂಟೆಯಿಂದಲೇ ನವಗ್ರಹ ಪೋಜೆ ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ, ಪರಮೇಶ್ವರ ವಿಘ್ನೇಶ್ವರ ಪೂಜೆ ,ಹೋಮ ಹವನ ಭಜನೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಗುರು ಕರಿಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಎಲ್ಲಾ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಅನ್ನದಾಸೋಹ ಪಾಲ್ಗೊಂಡರು ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಅರ್ಚಕರು ಹಾಗೂ ಶ್ರೀ ಕರಿಬಸವೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಟಿ. ವೀರಭದ್ರ ಸ್ವಾಮಿ ತಿಳಿಸಿದ್ದಾರೆ....
    1
    ನರಹರಿ ನಗರದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ದೇವಸ್ಥಾನದಲ್ಲಿ ಮಂಡಲದ ಪೂಜೆ..
ಚಳ್ಳಕೆರೆ  ನಗರದ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಬಸವೇಶ್ವರ ಅಜ್ಜಯ ದೇವಸ್ಥಾನದಲ್ಲಿ.. ದೇವಸ್ಥಾನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮವನ್ನ  ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು.
ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪೆಬ್ರವರಿ 11ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಕರಿಬಸವೇಶ್ವರ ಗದ್ದಿಗೆಯಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆಗಳು ಜರಗಿದವು.
ಕರಿಬಸವೇಶ್ವರ ದೇವಸ್ಥಾನ ನಿರ್ಮಾಣಗೊಂಡು ಇಲ್ಲಿಗೆ 48ನೇ ದಿನ ಆಗಿರುವುದರಿಂದ ದೇವಸ್ಥಾನದಲ್ಲಿ ಮಂಡಲ ಪೂಜೆ ಅಂಗವಾಗಿ ಬೆಳಗಿನಜಾವ ಮೂರು ಗಂಟೆಯಿಂದಲೇ ನವಗ್ರಹ ಪೋಜೆ  ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ, ಪರಮೇಶ್ವರ ವಿಘ್ನೇಶ್ವರ ಪೂಜೆ ,ಹೋಮ ಹವನ  ಭಜನೆ  ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ಗುರು ಕರಿಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಎಲ್ಲಾ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಅನ್ನದಾಸೋಹ  ಪಾಲ್ಗೊಂಡರು
ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಅರ್ಚಕರು ಹಾಗೂ ಶ್ರೀ ಕರಿಬಸವೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಟಿ. ವೀರಭದ್ರ ಸ್ವಾಮಿ ತಿಳಿಸಿದ್ದಾರೆ....
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
  • ದೊಡ್ಡ ಉಳ್ಳಾರ್ತಿ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಯಾವುದೋ ಫ್ಯಾಕ್ಟರಿಯ ಕಲುಷಿತ ಕೆಮಿಕಲ್ ಆಯಿಲ್ ತಂದು ಸುರಿದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕಲುಷಿತ ಆಯಿಲ್ ಗೋಮಾಳ ಜಾಗವನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ.
    1
    ದೊಡ್ಡ ಉಳ್ಳಾರ್ತಿ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಯಾವುದೋ ಫ್ಯಾಕ್ಟರಿಯ ಕಲುಷಿತ ಕೆಮಿಕಲ್ ಆಯಿಲ್ ತಂದು ಸುರಿದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕಲುಷಿತ ಆಯಿಲ್ ಗೋಮಾಳ ಜಾಗವನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
  • ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ ಹನುಮಂತ ದೇವಸ್ಥಾನ ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.
    2
    ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ  ಹನುಮಂತ ದೇವಸ್ಥಾನ  ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. 
ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    1 hr ago
  • ರಾಯಚೂರು ಬಳಿಯ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹಣ ಎಣಿಕೆ ಮಾಡಲಾಯಿತು. 21 ದಿನಗಳಲ್ಲಿ 2 ಕೋಟಿ, 48 ಲಕ್ಷ, 28 ಸಾವಿರ ನಗದು ಹಾಗೂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಬಂದಿದೆ. ಇದು ಒಂದೆಡೆ ಕಾಣಿಕೆಯಾದರೇ, 14 ಗ್ರಾಂ ಚಿನ್ನ, 2163 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ಆಡಳಿತ ಮಂಡಳಿ ಬುಧವಾರ 4 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ.
    1
    ರಾಯಚೂರು ಬಳಿಯ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹಣ ಎಣಿಕೆ ಮಾಡಲಾಯಿತು. 21 ದಿನಗಳಲ್ಲಿ 2 ಕೋಟಿ, 48 ಲಕ್ಷ, 28 ಸಾವಿರ ನಗದು ಹಾಗೂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಬಂದಿದೆ. ಇದು ಒಂದೆಡೆ ಕಾಣಿಕೆಯಾದರೇ, 14 ಗ್ರಾಂ ಚಿನ್ನ, 2163 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ಆಡಳಿತ ಮಂಡಳಿ ಬುಧವಾರ 4 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    6 hrs ago
  • ರಂಗೇರಿದ ಬಾಗಲಕೋಟೆ ಉಪಚುನಾವಣೆ… ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು … ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ. “ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”
    1
    ರಂಗೇರಿದ ಬಾಗಲಕೋಟೆ ಉಪಚುನಾವಣೆ…
ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು …
ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ.
“ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”
    user_Siddarth ilkal
    Siddarth ilkal
    Local News Reporter Ilkal, Bagalkote•
    7 hrs ago
  • ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡ ಕಂಬಳಿಹಾಳ ಶ್ರೀ ಮಠದ ಪೂಜ್ಯರಾದ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವದಿಸಿದರು.
    4
    ಇಳಕಲ್ ತಾಲೂಕಿನ  ಚಿಕ್ಕ ಓತಗೇರಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡ ಕಂಬಳಿಹಾಳ    ಶ್ರೀ ಮಠದ ಪೂಜ್ಯರಾದ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವದಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    17 hrs ago
  • ಈಚಘಟ್ಟ ಗ್ರಾಮದ ಜನಗಣತಿ ಕಾರ್ಯಕ್ರಮದಲ್ಲಿ ಶಾಸಕ ಎಂ ಚಂದ್ರಪ್ಪ ಬಾಗಿಯಾಗಿದ್ದಾರೆ. ಹೊಳಲ್ಕೆರೆ ಮತಕ್ಷೇತ್ರದ ಈಚಘಟ್ಟ ಗ್ರಾಮದಲ್ಲಿ, ತಹಶೀಲ್ದಾರ್ ಕಾರ್ಯಾಲಯ ಹೊಳಲ್ಕೆರೆ ವತಿಯಿಂದ ಭಾರತ ಜನಗಣತಿ- 2027ರ ಪ್ರಕ್ರಿಯೆ ಶಾಸಕ ಎಂ ಚಂದ್ರಪ್ಪ ಚಾಲನೆ ನೀಡಿ ಮಾತನಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಜನಗಣತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎಂ ಚಂದ್ರಪ್ಪ ಮನವಿ ಮಾಡಿದ್ದಾರೆ.‌
    1
    ಈಚಘಟ್ಟ ಗ್ರಾಮದ ಜನಗಣತಿ ಕಾರ್ಯಕ್ರಮದಲ್ಲಿ ಶಾಸಕ ಎಂ ಚಂದ್ರಪ್ಪ ಬಾಗಿಯಾಗಿದ್ದಾರೆ. ಹೊಳಲ್ಕೆರೆ ಮತಕ್ಷೇತ್ರದ ಈಚಘಟ್ಟ ಗ್ರಾಮದಲ್ಲಿ, ತಹಶೀಲ್ದಾರ್ ಕಾರ್ಯಾಲಯ ಹೊಳಲ್ಕೆರೆ ವತಿಯಿಂದ ಭಾರತ ಜನಗಣತಿ- 2027ರ  ಪ್ರಕ್ರಿಯೆ ಶಾಸಕ ಎಂ ಚಂದ್ರಪ್ಪ ಚಾಲನೆ ನೀಡಿ ಮಾತನಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಜನಗಣತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎಂ ಚಂದ್ರಪ್ಪ ಮನವಿ ಮಾಡಿದ್ದಾರೆ.‌
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.