logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಎಸ್ ಐಆರ್: ಜಿಲ್ಲೆಯಲ್ಲಿ ಶೇ.89.36ರಷ್ಟು ನಮೂನೆಗಳ ಡಿಜಿಟೈಸೇಶನ್ ಪೂರ್ಣ- ಡಿಸಿ ಪೂವಿತಾ ಎಸ್ ಹೇಳಿಕೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ವೇಗವಾಗಿ ಸಾಗುತ್ತಿದ್ದು, ಆಗಸ್ಟ್ 8ರವರೆಗೆ ಅಭಿಯಾನ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು. ಗುರುವಾರ ರಾಯಚೂರಿನ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಠರಣೆ ಕಾರ್ಯಕ್ರಮವು ರಾಯಚೂರು ಜಿಲ್ಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ನೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತಿದ್ದಾರೆ ಎಂದರು. ಪ್ರಸ್ತುತ ಜಿಲೆಯಲ್ಲಿ ಒಟ್ಟು ಮತದಾರರು 17,14,559 ಇದ್ದು, ಅದರಲ್ಲಿ 15,84,491 ಡಿಜಿಟೈಸೇಶನ್ ಹಾಗೂ ಎಎಸ್‌ಡಿಡಿ ಅಡಿಯಲ್ಲಿ ಇಎಫ್ ಸಂಗ್ರಹವಾಗಿದ್ದು, ಎನ್ಯೂಮರೇಷನ್ ಫಾರ್ಮ್ಗಳು ಇನ್ನೂ ಸಂಗ್ರಹವಾಗಬೇಕಿದೆ. ಈಗಾಗಲೇ ಸ್ವೀಕರಿಸಿರುವ ಫಾರ್ಮ್ಗಳಲ್ಲಿ 1,30,068 ಎನ್ನೂಮರೇಷನ್ ಫಾರ್ಮ್ಗಳ ಡಿಜಿಟೈಸೇಶನ್ ಕಾರ್ಯ ಬಾಕಿಯಿದೆ. ಈ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು. ಜಿಲ್ಲೆಯಲ್ಲಿ ಅಬ್ಬೆಂಟ್, ಶಿಫ್ಟೆಡ್, ಡೆತ್, ಡುಪ್ಲಿಕೇಶನ್ ಹಾಗೂ ಇತರೆ ವಿಭಾಗದಲ್ಲಿ ಒಟ್ಟು 2,23,737 (13.05%) ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 4,839 ಗೈರು ಹಾಜರಾತಿ ಮತದಾರರು ಇದ್ದಾರೆ. ಇವರು ಉದ್ಯೋಗ ಅಥವಾ ಇತರೆ ಕಾರಣಗಳಿಂದ ಜಿಲ್ಲೆ ಬಿಟ್ಟು ಹೊರಗಡೆ ಹೋಗಿದ್ದರೆ, ಆಗಸ್ಟ್ 8ರೊಳಗೆ ಅಥವಾ ಸಾಧ್ಯವಾದರೆ ಈ ಭಾನುವಾರದೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಬಂದು ಎಣಿಕೆ ನಮೂನೆ ಸಲ್ಲಿಸುವ ಅವಕಾಶವಿದೆ ಎಂದರು. ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ತಾವು ಮತದಾನ ಮಾಡಲು ಬಯಸುವ ಸ್ಥಳದಲ್ಲಿ ಮಾತ್ರ ಹೆಸರು ಉಳಿಸಿಕೊಂಡು, ಉಳಿದ ಕಡೆ ಡುಪ್ಲಿಕೇಶನ್ ಕುರಿತು ಮಾಹಿತಿ ನೀಡಬೇಕು. ಇದರಿಂದ ಮತದಾರರ ಪಟ್ಟಿಯನ್ನು ದೋಷರಹಿತವಾಗಿಸಲು ಸಹಕಾರಿಯಾಗಲಿದೆ. ಮತದಾರರು ಮನೆಗೆ ಬೀಗ ಹಾಕಿರುವುದು, ಉದ್ಯೋಗ, ಶಿಕ್ಷಣ, ವಲಸೆ ಅಥವಾ ಇತರ ಕಾರಣಗಳಿಂದ ತಾತ್ಕಾಲಿಕವಾಗಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಕೆಲವು ಎನ್ನೊಮರೇಷನ್ ಫಾರ್ಮ್ಗಳು ಇನ್ನೂ ಸಂಗ್ರಹವಾಗಿಲ್ಲ. ಇಂತಹ ಮತದಾರರನ್ನು ಗುರುತಿಸಿ ಬಿಎಲ್‌ಒಗಳ ಮೂಲಕ ಮರು ಮನೆ ಭೇಟಿ, ದೂರವಾಣಿ ಸಂಪರ್ಕ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಮತದಾರರ ಸಹಾಯ ಕೇಂದ್ರಗಳ ಮೂಲಕ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದರು. ಅರ್ಜಿ ನಮೂನೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಕೊನೆಯ ದಿನಾಂಕ: 08-08-2026 ಆಗಿದೆ. ಆದ್ದರಿಂದ ಇನ್ನೂ ತಮ್ಮ ಎನ್ನೂಮರೇಷನ್ ಫಾರ್ಮ್ ಸಲ್ಲಿಸದಿರುವ ಎಲ್ಲಾ ಅರ್ಹ ಮತದಾರರು ವಿಳಂಬ ಮಾಡದೆ. ತಮ್ಮ ವ್ಯಾಪ್ತಿಯ ಬಿಎಲ್‌ಒ ಅಥವಾ ಸಮೀಪದ ಮತದಾರರ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು. ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾಧಿಕಾರಿಗಳ ಕಚೇರಿ ಚುನಾವಣೆ ಶಾಖೆಯ ಶಿರಸ್ತೆದಾರ ಋಷಿಕೇಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಇತರರು ಇದ್ದರು.

21 hrs ago
user_ಬಸವರಾಜ ಭೋಗಾವತಿ
ಬಸವರಾಜ ಭೋಗಾವತಿ
Local News Reporter ಮಾನ್ವಿ, ರಾಯಚೂರು, ಕರ್ನಾಟಕ•
21 hrs ago
1f0be1cc-105d-4122-94f8-941b491151fb

ಎಸ್ ಐಆರ್: ಜಿಲ್ಲೆಯಲ್ಲಿ ಶೇ.89.36ರಷ್ಟು ನಮೂನೆಗಳ ಡಿಜಿಟೈಸೇಶನ್ ಪೂರ್ಣ- ಡಿಸಿ ಪೂವಿತಾ ಎಸ್ ಹೇಳಿಕೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ವೇಗವಾಗಿ ಸಾಗುತ್ತಿದ್ದು, ಆಗಸ್ಟ್ 8ರವರೆಗೆ ಅಭಿಯಾನ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು. ಗುರುವಾರ ರಾಯಚೂರಿನ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಠರಣೆ ಕಾರ್ಯಕ್ರಮವು ರಾಯಚೂರು ಜಿಲ್ಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ನೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತಿದ್ದಾರೆ ಎಂದರು. ಪ್ರಸ್ತುತ ಜಿಲೆಯಲ್ಲಿ ಒಟ್ಟು ಮತದಾರರು 17,14,559 ಇದ್ದು, ಅದರಲ್ಲಿ 15,84,491 ಡಿಜಿಟೈಸೇಶನ್ ಹಾಗೂ ಎಎಸ್‌ಡಿಡಿ ಅಡಿಯಲ್ಲಿ ಇಎಫ್ ಸಂಗ್ರಹವಾಗಿದ್ದು, ಎನ್ಯೂಮರೇಷನ್ ಫಾರ್ಮ್ಗಳು ಇನ್ನೂ ಸಂಗ್ರಹವಾಗಬೇಕಿದೆ. ಈಗಾಗಲೇ ಸ್ವೀಕರಿಸಿರುವ ಫಾರ್ಮ್ಗಳಲ್ಲಿ 1,30,068 ಎನ್ನೂಮರೇಷನ್ ಫಾರ್ಮ್ಗಳ ಡಿಜಿಟೈಸೇಶನ್ ಕಾರ್ಯ ಬಾಕಿಯಿದೆ. ಈ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು. ಜಿಲ್ಲೆಯಲ್ಲಿ ಅಬ್ಬೆಂಟ್, ಶಿಫ್ಟೆಡ್, ಡೆತ್, ಡುಪ್ಲಿಕೇಶನ್ ಹಾಗೂ ಇತರೆ ವಿಭಾಗದಲ್ಲಿ ಒಟ್ಟು 2,23,737 (13.05%) ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 4,839 ಗೈರು ಹಾಜರಾತಿ ಮತದಾರರು ಇದ್ದಾರೆ. ಇವರು ಉದ್ಯೋಗ ಅಥವಾ ಇತರೆ ಕಾರಣಗಳಿಂದ ಜಿಲ್ಲೆ ಬಿಟ್ಟು ಹೊರಗಡೆ ಹೋಗಿದ್ದರೆ, ಆಗಸ್ಟ್ 8ರೊಳಗೆ ಅಥವಾ ಸಾಧ್ಯವಾದರೆ ಈ ಭಾನುವಾರದೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಬಂದು ಎಣಿಕೆ ನಮೂನೆ ಸಲ್ಲಿಸುವ ಅವಕಾಶವಿದೆ ಎಂದರು. ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ತಾವು ಮತದಾನ ಮಾಡಲು ಬಯಸುವ ಸ್ಥಳದಲ್ಲಿ ಮಾತ್ರ ಹೆಸರು ಉಳಿಸಿಕೊಂಡು, ಉಳಿದ ಕಡೆ ಡುಪ್ಲಿಕೇಶನ್ ಕುರಿತು ಮಾಹಿತಿ ನೀಡಬೇಕು. ಇದರಿಂದ ಮತದಾರರ ಪಟ್ಟಿಯನ್ನು ದೋಷರಹಿತವಾಗಿಸಲು ಸಹಕಾರಿಯಾಗಲಿದೆ. ಮತದಾರರು ಮನೆಗೆ ಬೀಗ ಹಾಕಿರುವುದು, ಉದ್ಯೋಗ, ಶಿಕ್ಷಣ, ವಲಸೆ ಅಥವಾ ಇತರ ಕಾರಣಗಳಿಂದ ತಾತ್ಕಾಲಿಕವಾಗಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಕೆಲವು ಎನ್ನೊಮರೇಷನ್ ಫಾರ್ಮ್ಗಳು ಇನ್ನೂ ಸಂಗ್ರಹವಾಗಿಲ್ಲ. ಇಂತಹ ಮತದಾರರನ್ನು ಗುರುತಿಸಿ ಬಿಎಲ್‌ಒಗಳ ಮೂಲಕ ಮರು ಮನೆ ಭೇಟಿ, ದೂರವಾಣಿ ಸಂಪರ್ಕ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಮತದಾರರ ಸಹಾಯ ಕೇಂದ್ರಗಳ ಮೂಲಕ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದರು. ಅರ್ಜಿ ನಮೂನೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಕೊನೆಯ ದಿನಾಂಕ: 08-08-2026 ಆಗಿದೆ. ಆದ್ದರಿಂದ ಇನ್ನೂ ತಮ್ಮ ಎನ್ನೂಮರೇಷನ್ ಫಾರ್ಮ್ ಸಲ್ಲಿಸದಿರುವ ಎಲ್ಲಾ ಅರ್ಹ ಮತದಾರರು ವಿಳಂಬ ಮಾಡದೆ. ತಮ್ಮ ವ್ಯಾಪ್ತಿಯ ಬಿಎಲ್‌ಒ ಅಥವಾ ಸಮೀಪದ ಮತದಾರರ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು. ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾಧಿಕಾರಿಗಳ ಕಚೇರಿ ಚುನಾವಣೆ ಶಾಖೆಯ ಶಿರಸ್ತೆದಾರ ಋಷಿಕೇಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಇತರರು ಇದ್ದರು.

More news from ಕರ್ನಾಟಕ and nearby areas
  • ರಾಯಚೂರು ಜಿಲ್ಲಾ ಸಿರುವರ್ ತಾಲೂಕ್ ಲಕ್ಕಮದಿನ್ನಿ ಗ್ರಾಮದ ಸ್ಥಿತಿ ತಿಳಿಸುವುದೇನೆಂದರೆ ಇಲ್ಲಿ ಸಿಸಿ ರಸ್ತೆ ಇಲ್ಲದೆ ಸುಮಾರು 20 ವರ್ಷಗಳು ಕಳೆದರೂ ಇನ್ನೂ ಸಿಸಿ ರಸ್ತೆ ಆಗಿಲ್ಲ ಸುಮಾರು 40 ವರ್ಷಗಳಿಂದ ಇಲ್ಲಿ ವಾಸಿಸುತ್ತೇವೆ ನಾವು ಇಲ್ಲಿ ಹಾವು ಕಪ್ಪೆ ಮೀನು ಸೊಳ್ಳೆ ಎಲ್ಲಾನು ಇಲ್ಲೇ ಸಿಗುತ್ತೆ ನಮ್ಮ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದ್ದೇವೆ ಲಿಖಿತ ಮುಖಾಂತರ ಕೂಡ ಕೊಟ್ಟಿದ್ದೇವೆ ಇಲ್ಲಿಯವರೆಗೂ ಯಾವುದೇ ರಾಜಕಾರಣಿ ಯಾವುದೇ ಅಧಿಕಾರಿ ಕ್ರಮ ತಗೊಂಡಿಲ್ಲ ಹಾಗಾಗಿ ನಾವು ನಮ್ಮ ತಾಲೂಕ ಪಂಚಾಯಿತಿ ಮುಂದೆ ಉಗ್ರವಾದ ಹೋರಾಟವನ್ನು ಮಾಡಿಕೊಳ್ಳಲಿ ಎಂದು ನಿರ್ಣಾಮ ಮಾಡಿದ್ದೇವೆ ಈ ಬಂಡ ರಾಜಕಾರಣಿಗಳಿಗೆ ಬಂಡ ಆಫೀಸರಿಸಿ ಗಳಿಗೆ ಇವರೆಲ್ಲ ವೋಟ್ ಬೇಕಿದ್ದಾಗ ಮಾತ್ರ ನಮ್ಮ ಗ್ರಾಮಗಳಿಗೆ ಬರ್ತಾರೆ ತಾವು ವಿಜೇತರಾದ ಮೇಲೆ ನಮ್ಮನ್ನ ಈ ಸ್ಥಿತಿಗೆ ತರುತ್ತಾರೆ
    1
    ರಾಯಚೂರು ಜಿಲ್ಲಾ ಸಿರುವರ್ ತಾಲೂಕ್ ಲಕ್ಕಮದಿನ್ನಿ ಗ್ರಾಮದ ಸ್ಥಿತಿ 
ತಿಳಿಸುವುದೇನೆಂದರೆ ಇಲ್ಲಿ ಸಿಸಿ ರಸ್ತೆ ಇಲ್ಲದೆ ಸುಮಾರು 20 ವರ್ಷಗಳು ಕಳೆದರೂ ಇನ್ನೂ ಸಿಸಿ ರಸ್ತೆ ಆಗಿಲ್ಲ ಸುಮಾರು 40 ವರ್ಷಗಳಿಂದ ಇಲ್ಲಿ ವಾಸಿಸುತ್ತೇವೆ ನಾವು ಇಲ್ಲಿ ಹಾವು ಕಪ್ಪೆ ಮೀನು ಸೊಳ್ಳೆ ಎಲ್ಲಾನು ಇಲ್ಲೇ ಸಿಗುತ್ತೆ ನಮ್ಮ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದ್ದೇವೆ ಲಿಖಿತ ಮುಖಾಂತರ ಕೂಡ ಕೊಟ್ಟಿದ್ದೇವೆ ಇಲ್ಲಿಯವರೆಗೂ ಯಾವುದೇ ರಾಜಕಾರಣಿ ಯಾವುದೇ ಅಧಿಕಾರಿ ಕ್ರಮ ತಗೊಂಡಿಲ್ಲ ಹಾಗಾಗಿ ನಾವು ನಮ್ಮ ತಾಲೂಕ ಪಂಚಾಯಿತಿ ಮುಂದೆ ಉಗ್ರವಾದ ಹೋರಾಟವನ್ನು ಮಾಡಿಕೊಳ್ಳಲಿ ಎಂದು ನಿರ್ಣಾಮ ಮಾಡಿದ್ದೇವೆ ಈ ಬಂಡ ರಾಜಕಾರಣಿಗಳಿಗೆ ಬಂಡ ಆಫೀಸರಿಸಿ ಗಳಿಗೆ ಇವರೆಲ್ಲ ವೋಟ್ ಬೇಕಿದ್ದಾಗ ಮಾತ್ರ ನಮ್ಮ ಗ್ರಾಮಗಳಿಗೆ ಬರ್ತಾರೆ ತಾವು ವಿಜೇತರಾದ ಮೇಲೆ ನಮ್ಮನ್ನ ಈ ಸ್ಥಿತಿಗೆ ತರುತ್ತಾರೆ
    user_Ramesh Kumar
    Ramesh Kumar
    Farmer ಸಿರ್ವಾರ, ರಾಯಚೂರು, ಕರ್ನಾಟಕ•
    20 hrs ago
  • ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆರೋಪ ರಾಯಚೂರು, ಜು.31: ಹಜರತ್ ಸೈಯದ್ ಶಾ ಶಮ್ಸ್ ಆಲಂ ಹುಸೈನಿ ದರ್ಗಾ ಉರ್ಸ್–2026ಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವಲ್ಲಿ ಜೆಸ್ಕಾಂ ಅಧಿಕಾರಿಗಳು ಇಲಾಖೆಯ ಮೇಲಾಧಿಕಾರಿಗಳ ಲಿಖಿತ ಆದೇಶಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವು ಗಂಭೀರ ಆರೋಪ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಗಾದ ಅಧಿಕೃತ ಮುತ್ತವಲಿಯವರ ಅನುಮತಿ ಪತ್ರ (ಎನ್‌ಒಸಿ) ಪಡೆಯದೆ ಯಾವುದೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮುಖ್ಯ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಧಿಕ್ಕರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ದೂರಿದರು. ಈ ಕುರಿತು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಸಂಬಂಧಪಟ್ಟ ಅಧಿಕಾರಿಗಳ ಪರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉರ್ಸ್ ಸಂದರ್ಭದಲ್ಲಿ ಯಾವುದೇ ಇಲಾಖೆಯ ಅನುಮತಿ ಪಡೆಯದೆ ಜೂಲಾಗಳು ಹಾಗೂ ವ್ಯಾಪಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ಆರಂಭದಲ್ಲಿ ಎಲ್ಲಾ ಅಗತ್ಯ ಅನುಮತಿಗಳು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ ನಂತರ ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಯಾವುದೇ ಅನುಮತಿ ನೀಡಿಲ್ಲ ಹಾಗೂ ಸರ್ಕಾರದ ಖಜಾನೆಗೆ ನಿಗದಿತ ಶುಲ್ಕವೂ ಪಾವತಿಯಾಗಿಲ್ಲ ಎಂಬುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾತ್ರಿ ಅಕ್ರಮ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದರು. ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಅಧಿಕಾರಿಗೆ ಮತ್ತೆ ರಾಯಚೂರಿನಲ್ಲೇ ಪದೋನ್ನತಿಯೊಂದಿಗೆ ನೇಮಕ ನೀಡಿರುವುದು ಸಾರ್ವಜನಿಕರ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಆರೋಪಿಸಿದ ಅವರು, ಇಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಕರಣವನ್ನು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಬೇಕು. ಅನುಮತಿ ಇಲ್ಲದೆ ವ್ಯಾಪಾರ ನಡೆಸಲು ಅವಕಾಶ ನೀಡಿದ ಅಧಿಕಾರಿಗಳ ಪಾತ್ರವನ್ನೂ ತನಿಖೆ ನಡೆಸಿ, ಕರ್ತವ್ಯಲೋಪ ಎಸಗಿದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಸೂದ್ ಅಲಿ, ಮೊಹಮ್ಮದ್ ಅಲೀಂ ಹಾಗೂ ರಘು ನನ್ನೋರೆ ಉಪಸ್ಥಿತರಿದ್ದರು.
    1
    ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆರೋಪ
ರಾಯಚೂರು, ಜು.31: ಹಜರತ್ ಸೈಯದ್ ಶಾ ಶಮ್ಸ್ ಆಲಂ ಹುಸೈನಿ ದರ್ಗಾ ಉರ್ಸ್–2026ಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವಲ್ಲಿ ಜೆಸ್ಕಾಂ ಅಧಿಕಾರಿಗಳು ಇಲಾಖೆಯ ಮೇಲಾಧಿಕಾರಿಗಳ ಲಿಖಿತ ಆದೇಶಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವು ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಗಾದ ಅಧಿಕೃತ ಮುತ್ತವಲಿಯವರ ಅನುಮತಿ ಪತ್ರ (ಎನ್‌ಒಸಿ) ಪಡೆಯದೆ ಯಾವುದೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮುಖ್ಯ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಧಿಕ್ಕರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ದೂರಿದರು.
ಈ ಕುರಿತು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಸಂಬಂಧಪಟ್ಟ ಅಧಿಕಾರಿಗಳ ಪರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉರ್ಸ್ ಸಂದರ್ಭದಲ್ಲಿ ಯಾವುದೇ ಇಲಾಖೆಯ ಅನುಮತಿ ಪಡೆಯದೆ ಜೂಲಾಗಳು ಹಾಗೂ ವ್ಯಾಪಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ಆರಂಭದಲ್ಲಿ ಎಲ್ಲಾ ಅಗತ್ಯ ಅನುಮತಿಗಳು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ ನಂತರ ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಯಾವುದೇ ಅನುಮತಿ ನೀಡಿಲ್ಲ ಹಾಗೂ ಸರ್ಕಾರದ ಖಜಾನೆಗೆ ನಿಗದಿತ ಶುಲ್ಕವೂ ಪಾವತಿಯಾಗಿಲ್ಲ ಎಂಬುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾತ್ರಿ ಅಕ್ರಮ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದರು.
ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಅಧಿಕಾರಿಗೆ ಮತ್ತೆ ರಾಯಚೂರಿನಲ್ಲೇ ಪದೋನ್ನತಿಯೊಂದಿಗೆ ನೇಮಕ ನೀಡಿರುವುದು ಸಾರ್ವಜನಿಕರ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಆರೋಪಿಸಿದ ಅವರು, ಇಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಕರಣವನ್ನು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಬೇಕು. ಅನುಮತಿ ಇಲ್ಲದೆ ವ್ಯಾಪಾರ ನಡೆಸಲು ಅವಕಾಶ ನೀಡಿದ ಅಧಿಕಾರಿಗಳ ಪಾತ್ರವನ್ನೂ ತನಿಖೆ ನಡೆಸಿ, ಕರ್ತವ್ಯಲೋಪ ಎಸಗಿದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಸೂದ್ ಅಲಿ, ಮೊಹಮ್ಮದ್ ಅಲೀಂ ಹಾಗೂ ರಘು ನನ್ನೋರೆ ಉಪಸ್ಥಿತರಿದ್ದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    9 hrs ago
  • ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ! ನದಿ ಪಾತ್ರದ ಜನರಿಗೆ ತುರ್ತು ಎಚ್ಚರಿಕೆ 🌊 ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹದ ಆತಂಕ! ಸುರಪುರ ಪೊಲೀಸರು ನೀಡಿದ ಎಚ್ಚರಿಕೆ ⚠️ ನದಿಗೆ ಇಳಿಯಬೇಡಿ! ಕೃಷ್ಣಾ ನದಿಗೆ ಅಪಾರ ನೀರು ಬಿಡುಗಡೆ 🚨 ಲಿಂಗದಹಳ್ಳಿ-ತಿಂಥಣಿ ಸೇರಿ ಹಲವು ಗ್ರಾಮಗಳಿಗೆ ಅಲರ್ಟ್! ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,20,000 ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ನದಿ ಪಾತ್ರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿದೆ. ಲಿಂಗದಹಳ್ಳಿ, ಬಂಡೊಳ್ಳಿ, ದಾದಲಾಪುರ, ತಿಂಥಣಿ, ದೇವಾಪುರ, ಮುಷ್ಟಹಳ್ಳಿ, ಶೆಳ್ಳಿ, ಅಡ್ಡೊಡಿ, ಹೆಮ್ಮಡಿ, ಕರ್ನಾಳ, ಬೇವಿನಹಾಳ ಹಾಗೂ ಯಮನೂರು ಸೇರಿದಂತೆ ಹಲವು ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ನದಿಯಲ್ಲಿ ಈಜುವುದು, ಸ್ನಾನ ಮಾಡುವುದು, ಮೀನುಗಾರಿಕೆ ನಡೆಸುವುದು ಹಾಗೂ ಸೆಲ್ಫಿ ತೆಗೆಯಲು ನದಿ ದಂಡೆಗೆ ತೆರಳುವುದನ್ನು ತಪ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಇಂತಹ ತಾಜಾ ಹಾಗೂ ನಿಖರ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ. 🏷️ #KrishnaRiver #FloodAlert #KarnatakaNews #Surpur #Yadgir #NarayanpurDam #BasavaSagara #BreakingNews #KannadaNews #FloodWarning #KrishnaFlood #ASNNews24Kannada #Karnataka #ViralNews #LatestNews
    1
    ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ! ನದಿ ಪಾತ್ರದ ಜನರಿಗೆ ತುರ್ತು ಎಚ್ಚರಿಕೆ
🌊 ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹದ ಆತಂಕ! ಸುರಪುರ ಪೊಲೀಸರು ನೀಡಿದ ಎಚ್ಚರಿಕೆ
⚠️ ನದಿಗೆ ಇಳಿಯಬೇಡಿ! ಕೃಷ್ಣಾ ನದಿಗೆ ಅಪಾರ ನೀರು ಬಿಡುಗಡೆ
🚨 ಲಿಂಗದಹಳ್ಳಿ-ತಿಂಥಣಿ ಸೇರಿ ಹಲವು ಗ್ರಾಮಗಳಿಗೆ ಅಲರ್ಟ್! ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆ
ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,20,000 ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ನದಿ ಪಾತ್ರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿದೆ.
ಲಿಂಗದಹಳ್ಳಿ, ಬಂಡೊಳ್ಳಿ, ದಾದಲಾಪುರ, ತಿಂಥಣಿ, ದೇವಾಪುರ, ಮುಷ್ಟಹಳ್ಳಿ, ಶೆಳ್ಳಿ, ಅಡ್ಡೊಡಿ, ಹೆಮ್ಮಡಿ, ಕರ್ನಾಳ, ಬೇವಿನಹಾಳ ಹಾಗೂ ಯಮನೂರು ಸೇರಿದಂತೆ ಹಲವು ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ನದಿಯಲ್ಲಿ ಈಜುವುದು, ಸ್ನಾನ ಮಾಡುವುದು, ಮೀನುಗಾರಿಕೆ ನಡೆಸುವುದು ಹಾಗೂ ಸೆಲ್ಫಿ ತೆಗೆಯಲು ನದಿ ದಂಡೆಗೆ ತೆರಳುವುದನ್ನು ತಪ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಇಂತಹ ತಾಜಾ ಹಾಗೂ ನಿಖರ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ.
🏷️
#KrishnaRiver #FloodAlert #KarnatakaNews #Surpur #Yadgir #NarayanpurDam #BasavaSagara #BreakingNews #KannadaNews #FloodWarning #KrishnaFlood #ASNNews24Kannada #Karnataka #ViralNews #LatestNews
    user_AsnNews24Kannada
    AsnNews24Kannada
    Local News Reporter Shorapur, Yadgir•
    16 hrs ago
  • ಯಾದಗಿರಿ ಜಿಲ್ಲೆಯ ಸರ್ಕಾರಿ ಹಾಸ್ಪಿಟಲ್ ನಲ್ಲಿ ಹೇಳೋರು ಕೇಳೋರು ಯಾರು ಇಲ್ಲ ಯಾದಗಿರಿ ಜಿಲ್ಲಾ ಹಾಸ್ಪಿಟಲ್ ಅಲ್ಲಿ ಯಾರು ಸರಿಯಾಗಿ ಕೆಲಸ ಮಾಡದೇ ಇರುವಂತಹ ಡಾಕ್ಟರ್ಸ್ ಗಳು ಮತ್ತು ನರ್ಸ್ ಗಳು ಸಮಯಕ್ಕೆ ಸರಿಯಾಗಿ ಬರೋದಿಲ್ಲ ಸಮಯಕ್ಕೆ ಸರಿಯಾಗಿ ಇರುವುದೇ ಇಲ್ಲ ಇಂತಹ ಅಧಿಕಾರಿಗಳಿಗೆ ಡಾ. ಮತ್ತು ನರ್ಸ್ಗಳಿಗೆ ಸಸ್ಪೆಂಡ್ ಮಾಡಬೇಕು ಶರಣಗೌಡ ಕಂದುಕುರ್ ಹೇಳಿದರು
    1
    ಯಾದಗಿರಿ ಜಿಲ್ಲೆಯ ಸರ್ಕಾರಿ ಹಾಸ್ಪಿಟಲ್ ನಲ್ಲಿ ಹೇಳೋರು ಕೇಳೋರು ಯಾರು ಇಲ್ಲ
ಯಾದಗಿರಿ ಜಿಲ್ಲಾ ಹಾಸ್ಪಿಟಲ್ ಅಲ್ಲಿ ಯಾರು ಸರಿಯಾಗಿ ಕೆಲಸ ಮಾಡದೇ ಇರುವಂತಹ ಡಾಕ್ಟರ್ಸ್ ಗಳು ಮತ್ತು ನರ್ಸ್ ಗಳು ಸಮಯಕ್ಕೆ ಸರಿಯಾಗಿ ಬರೋದಿಲ್ಲ ಸಮಯಕ್ಕೆ ಸರಿಯಾಗಿ ಇರುವುದೇ ಇಲ್ಲ ಇಂತಹ ಅಧಿಕಾರಿಗಳಿಗೆ ಡಾ. ಮತ್ತು ನರ್ಸ್ಗಳಿಗೆ ಸಸ್ಪೆಂಡ್ ಮಾಡಬೇಕು ಶರಣಗೌಡ ಕಂದುಕುರ್ ಹೇಳಿದರು
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    22 hrs ago
  • ಕಲ್ಯಾಣ ವಾರ್ತೆ - "ನೀರಿನ ಹರಿವು ಹೆಚ್ಚುತ್ತಿರುವದರಿಂದ ನದಿ ತೀರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಮುದ್ನಾಳ ಮನವಿ" 'ಭೀಮಾನದಿ ತೀರಕ್ಕೆ ಉಮೇಶ್ ಮುದ್ನಾಳ ಭೇಟಿ' ಕಲ್ಯಾಣ ವಾರ್ತೆ -ಯಾದಗಿರಿ ಮಹಾರಾಷ್ಟ್ರದಪಶ್ಚೀಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಪರಿಣಾಮ ಭೀಮಾನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು ನದಿ ತೀರಕ್ಕೆ ಶುಕ್ರವಾರ ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ಅವರು ಭೇಟಿ ನೀಡಿದರು. ಭೀಮಾನದಿ ಹಾಗೂ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.ಜಿಲ್ಲಾಡಳಿತ ನದಿ ತೀರದ ಗ್ರಾಮದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.ಮೀನುಗಾರರು,ಸೇರಿ ಯಾರು ನದಿ ತೀರಕ್ಕೆ ತೆರಳಬಾದರೆಂದು ಮುದ್ನಾಳ ಮನವಿ ಮಾಡಿದ್ದಾರೆ.
    1
    ಕಲ್ಯಾಣ ವಾರ್ತೆ -
"ನೀರಿನ ಹರಿವು ಹೆಚ್ಚುತ್ತಿರುವದರಿಂದ ನದಿ ತೀರಕ್ಕೆ ತೆರಳದಂತೆ  ಸಾರ್ವಜನಿಕರಿಗೆ ಮುದ್ನಾಳ ಮನವಿ"
'ಭೀಮಾನದಿ ತೀರಕ್ಕೆ ಉಮೇಶ್ ಮುದ್ನಾಳ ಭೇಟಿ'
ಕಲ್ಯಾಣ ವಾರ್ತೆ -ಯಾದಗಿರಿ
ಮಹಾರಾಷ್ಟ್ರದಪಶ್ಚೀಮ ಘಟ್ಟಗಳ ಪ್ರದೇಶದಲ್ಲಿ  ಭಾರೀ ಪ್ರಮಾಣದ ಮಳೆಯಾಗುತ್ತಿರುವ ಪರಿಣಾಮ ಭೀಮಾನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು ನದಿ ತೀರಕ್ಕೆ ಶುಕ್ರವಾರ  ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ಅವರು  ಭೇಟಿ ನೀಡಿದರು.
ಭೀಮಾನದಿ ಹಾಗೂ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.ಜಿಲ್ಲಾಡಳಿತ ನದಿ ತೀರದ ಗ್ರಾಮದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.ಮೀನುಗಾರರು,ಸೇರಿ ಯಾರು ನದಿ ತೀರಕ್ಕೆ ತೆರಳಬಾದರೆಂದು ಮುದ್ನಾಳ ಮನವಿ ಮಾಡಿದ್ದಾರೆ.
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    10 hrs ago
  • ಯಾದಗಿರಿ || ನಾರಾಯಣಪುರ ಜಲಾಶಯದಿಂದ 24 ಗೆಟ್ ಓಪನ್ ಕೃಷ್ಣಾ ನದಿಗೆ ನೀರು
    1
    ಯಾದಗಿರಿ || ನಾರಾಯಣಪುರ ಜಲಾಶಯದಿಂದ 24 ಗೆಟ್ ಓಪನ್ ಕೃಷ್ಣಾ ನದಿಗೆ ನೀರು
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    18 hrs ago
  • ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ನಂತರ ಪಕ್ಷದ ಮುಖಂಡರ ತಂಡವು ತಾಳಿಕೋಟಿ ಮಾರ್ಗವಾಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮಗಳಿಗೆ ತೆರಳುವ ಸಂದರ್ಭದಲ್ಲಿ ತಾಳಿಕೋಟಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಪಕ್ಷದ ಮುಖಂಡರಾದ ಕಾಶಿನಾಥ್ ಮುರಾಳ, ಎಂ.ಎಸ್.ಸರಶಟ್ಟಿ, ವಾಸುದೇವ ಹೆಬಸೂರ, ಮಾನಸಿಂಗ್ ಕೊಕಟನೂರ, ಶಿವಶಂಕರ ಹಿರೇಮಠ, ಪರಶುರಾಮ ಕಟ್ಟಿಮನಿ, ರಾಘವೇಂದ್ರ ಮಾನೆ ಹಾಗೂ ರೈತರು ಇದ್ದರು.
    1
    ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ  ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ  ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ  ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ  ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. 
ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ  ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ  ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ  ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ  ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ನಂತರ ಪಕ್ಷದ ಮುಖಂಡರ ತಂಡವು  ತಾಳಿಕೋಟಿ ಮಾರ್ಗವಾಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮಗಳಿಗೆ ತೆರಳುವ ಸಂದರ್ಭದಲ್ಲಿ ತಾಳಿಕೋಟಿ  ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ  ಪಕ್ಷದ ಮುಖಂಡರು ಕಾರ್ಯಕರ್ತರು ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಪಕ್ಷದ ಮುಖಂಡರಾದ ಕಾಶಿನಾಥ್ ಮುರಾಳ, ಎಂ.ಎಸ್.ಸರಶಟ್ಟಿ, ವಾಸುದೇವ ಹೆಬಸೂರ, ಮಾನಸಿಂಗ್ ಕೊಕಟನೂರ, ಶಿವಶಂಕರ ಹಿರೇಮಠ, ಪರಶುರಾಮ ಕಟ್ಟಿಮನಿ, ರಾಘವೇಂದ್ರ ಮಾನೆ ಹಾಗೂ ರೈತರು ಇದ್ದರು.
    user_ಸಮೃದ್ಧ ಕರ್ನಾಟಕ ನ್ಯೂಸ್
    ಸಮೃದ್ಧ ಕರ್ನಾಟಕ ನ್ಯೂಸ್
    Voice of people ತಾಳಿಕೋಟಿ, ವಿಜಯಪುರ, ಕರ್ನಾಟಕ•
    11 hrs ago
  • ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ರೈತರು ಪತ್ರಿಕಾ ಭವನದಲ್ಲಿ ಆಗ್ರಹ ರಾಯಚೂರು, ಜು.31: ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಹೋರಾಟಗಾರ ಹಾಗೂ ಸಂಯುಕ್ತ ಕಿಸಾನ್ ಪಾರ್ಟಿ ರಾಜ್ಯಾಧ್ಯಕ್ಷ ಚಾಮರಾಸ ಮಾಲಿಪಾಟೀಲ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರ ಹಿನ್ನಡೆಯಾಗಿವೆ. ಜಿಲ್ಲೆಯಲ್ಲಿ ಶೇ.38ರಷ್ಟು ಮಾತ್ರ ಬಿತ್ತನೆ ನಡೆದಿದ್ದು, ಅದರಲ್ಲಿ ಶೇ.19ರಷ್ಟು ಬೆಳೆ ನಷ್ಟವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬೆಳೆ ಒಣಗುತ್ತಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಕೂಲಿ ಕಾರ್ಮಿಕರು ಸಹ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಹತ್ತಿ ಸೇರಿದಂತೆ ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು, ಜಲಾಶಯಗಳಲ್ಲೂ ನೀರಿನ ಸಂಗ್ರಹಣೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆಯಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಲವು ಬಾರಿ ಹೋರಾಟ ಹಾಗೂ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜೆಸ್ಕಾಂ ಮುಖ್ಯ ಇಂಜಿನಿಯರ್ ರೈತರ ಸಮಸ್ಯೆಗಳ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ರೈತರ ಮನವಿಗಳಿಗೆ ಯಾವುದೇ ಬೆಲೆ ನೀಡದ ಅಧಿಕಾರಿಗಳ ವರ್ತನೆ ಖಂಡನೀಯವಾಗಿದೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಭೂಪಾಲ್‌ನಲ್ಲಿ ಅಲ್ಲಾಪ್ರಭು ಸೇರಿದಂತೆ ಆರು ರೈತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು, ನೀಟ್ ಅಕ್ರಮ ಸೇರಿದಂತೆ ದೇಶದ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರಗಳು ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಗಾಂಧೀಜಿ ನೀಡಿದ್ದ "ಭಾರತ ಬಿಟ್ಟು ತೊಲಗಿ" ಘೋಷಣೆಯ ಮಾದರಿಯಲ್ಲಿ "ಭ್ರಷ್ಟ ಅಧಿಕಾರಿಗಳೇ, ಬಹುರಾಷ್ಟ್ರೀಯ ಕಂಪನಿಗಳೇ, ಭಾರತ ಬಿಟ್ಟು ತೊಲಗಿ" ಎಂಬ ಘೋಷಣೆಯೊಂದಿಗೆ ಆಗಸ್ಟ್ 10ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸಾನ್ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ದಿನ್ನಿ, ಮಲ್ಲಯ್ಯ ಚಂದ್ರಬಂಡ, ಬೂದೆಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ರೈತರು ಪತ್ರಿಕಾ ಭವನದಲ್ಲಿ ಆಗ್ರಹ
ರಾಯಚೂರು, ಜು.31: ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಹೋರಾಟಗಾರ ಹಾಗೂ ಸಂಯುಕ್ತ ಕಿಸಾನ್ ಪಾರ್ಟಿ ರಾಜ್ಯಾಧ್ಯಕ್ಷ ಚಾಮರಾಸ ಮಾಲಿಪಾಟೀಲ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರ ಹಿನ್ನಡೆಯಾಗಿವೆ. ಜಿಲ್ಲೆಯಲ್ಲಿ ಶೇ.38ರಷ್ಟು ಮಾತ್ರ ಬಿತ್ತನೆ ನಡೆದಿದ್ದು, ಅದರಲ್ಲಿ ಶೇ.19ರಷ್ಟು ಬೆಳೆ ನಷ್ಟವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬೆಳೆ ಒಣಗುತ್ತಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಕೂಲಿ ಕಾರ್ಮಿಕರು ಸಹ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಹತ್ತಿ ಸೇರಿದಂತೆ ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು, ಜಲಾಶಯಗಳಲ್ಲೂ ನೀರಿನ ಸಂಗ್ರಹಣೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆಯಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಲವು ಬಾರಿ ಹೋರಾಟ ಹಾಗೂ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜೆಸ್ಕಾಂ ಮುಖ್ಯ ಇಂಜಿನಿಯರ್ ರೈತರ ಸಮಸ್ಯೆಗಳ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ರೈತರ ಮನವಿಗಳಿಗೆ ಯಾವುದೇ ಬೆಲೆ ನೀಡದ ಅಧಿಕಾರಿಗಳ ವರ್ತನೆ ಖಂಡನೀಯವಾಗಿದೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಭೂಪಾಲ್‌ನಲ್ಲಿ ಅಲ್ಲಾಪ್ರಭು ಸೇರಿದಂತೆ ಆರು ರೈತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು, ನೀಟ್ ಅಕ್ರಮ ಸೇರಿದಂತೆ ದೇಶದ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರಗಳು ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗಾಂಧೀಜಿ ನೀಡಿದ್ದ "ಭಾರತ ಬಿಟ್ಟು ತೊಲಗಿ" ಘೋಷಣೆಯ ಮಾದರಿಯಲ್ಲಿ "ಭ್ರಷ್ಟ ಅಧಿಕಾರಿಗಳೇ, ಬಹುರಾಷ್ಟ್ರೀಯ ಕಂಪನಿಗಳೇ, ಭಾರತ ಬಿಟ್ಟು ತೊಲಗಿ" ಎಂಬ ಘೋಷಣೆಯೊಂದಿಗೆ ಆಗಸ್ಟ್ 10ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸಾನ್ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ದಿನ್ನಿ, ಮಲ್ಲಯ್ಯ ಚಂದ್ರಬಂಡ, ಬೂದೆಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.